ಹಿ ಈಸ್ ಕ್ರೈಸ್ಟ್ ಎಂದು ಕೂಗಿಕೊಳ್ಳುತ್ತಾಳೆ

ನೆನ್ನೆ ಮಂಗಳೂರಿನಲ್ಲಿ ನಮ್ಮ ಸುಸಂಸ್ಕೃತ ಕರ್ನಾಟಕಕ್ಕೆ ಮಸಿ ಬಳಿಯುವ ಕಾರ್ಯ ನಡೆಯಿತು., ನಿಜಕ್ಕೂ ಮನಸ್ಸು ವ್ಯಥೆಯಲ್ಲಿ ಮುಳುಗಿತ್ತು., ಹೆಣ್ಣನ್ನು ಮಾತೆಯೆಂದು ಪೂಜಿಸುವ ರಾಷ್ಟ್ರದಲ್ಲಿ ಹೆಣ್ಣನ್ನು ಅಮಾನವೀಯವಾಗಿ ನಡೆಸಿಕೊಂಡದ್ದು ನಿಜಕ್ಕೂ ವಿಷಾದನೀಯ ಸಂಗತಿ., ಹಿಂದೂ ಜಾಗರಣ ವೇದಿಕೆ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡು ಹೆಣ್ಣು ಮಕ್ಕಳನ್ನು ಮನಬಂದಂತೆ ಥಳಿಸಿದ್ದು ಎಷ್ಟು ಸರಿ ಎಂದು ಮನಸ್ಸು ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತಿದೆ..!! ಹೆಣ್ಣು ಎಂದು ಕರೆದೊಡನೆ ಜೊತೆಯಲ್ಲೇ ಮಗಳು ಎಂಬ ಪದ ಸ್ವಯಂ ತಾನು ಬರುತ್ತದೆ., ಧರ್ಮವೆಂದರೆ ಅದೇ..!! ಧರ್ಮದ ಹಣೆಪಟ್ಟಿಯೊಂದಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಹುಟ್ಟಿದ ಹಬ್ಬದ ಸಂಭ್ರಮದಲ್ಲಿದ್ದವರಿಗೆ., ಒಮ್ಮೆ ನರಕ ದರ್ಶನ ಮಾಡಿಸಿದ್ದರು., ಅಲ್ಲಿ ನಮ್ಮ ಪೋಲೀಸರು ಪರೀಕ್ಷಿಸಿದಾಗ ಸಿಕ್ಕಿದ್ದು., ಮಾಂಸಾಹಾರ ಊಟ., ಕೆಲವು ಬಿಯರ್ ಬಾಟಲ್., ಇದನ್ನು ಒಂದು ರೇವ್ ಪಾರ್ಟಿ ಎಂದು ಸುಲಭವಾಗಿ ಕರೆಯಲಾಗದು ಎಂದು ಪೋಲೀಸರೇ ದೂರಿದ್ದಾರೆ ಎಂದರೆ ಇದು ಸ್ವಾರ್ಥಸಾಧನೆಗೆ ನಡೆದ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ..!! ಇದನ್ನು ಸಹ್ಯರೆಲ್ಲರೂ ಖಂಡಿಸಬೇಕು., ಮಿಕ್ಕಿದ್ದು ಅವರವರ ಮನಸ್ಥಿತಿಗೆ ಬಿಟ್ಟ ವಿಚಾರ..!! ನಾವೆಲ್ಲ ಈ ಅಸಹ್ಯ ಘಟನೆಯನ್ನು ಖಂಡಿಸೋಣ ಗೆಳೆಯರೆ..!! ಈ ಸಂದರ್ಭದಲ್ಲಿ ನಿಮ್ಮೊಡನೆ ಹಿಂಧೂ ಧರ್ಮ ಏನೆಂದು ನಿಚ್ಚಳವಾಗಿ ವ್ಯಾಖ್ಯಾನಿಸಿದ ವಿವೇಕಾನಂದರ ಬದುಕಿನಲ್ಲಿ ಜರುಗಿದ ಒಂದು ಘಟನೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ..!!

ಚಿಕಾಗೋದಲ್ಲಿ ನಡೆಯಬೇಕಿದ್ದ ಮಹಾ ಸಮ್ಮೇಳನಕ್ಕೆ ಭಾಗವಹಿಸಲು ತೆರಳುತ್ತಿದ್ದಾಗ., ದಾರಿ ತಪ್ಪಿ ಕೆಂಪು ದೀಪದ ದಾರಿಗೆ ಹೋಗಿಬಿಡುತ್ತಾರೆ., ಆಗ ಅಲ್ಲಿನ ಯುವತಿಯರು ಈ ಕಟ್ಟುಮಸ್ತಾದ ಯುವಕನನ್ನು ತಮ್ಮೆಡೆಗೆ ಸೆಳೆಯಲು ವಿವಿಧ ಭಂಗಿಯಲ್ಲಿ ಕರೆಯಲತ್ತಿದರು., ಆಗ ವಿವೇಕಾನಂದರು ಒಂದು ಹೆಣ್ಣು ಮಗುವಿನೆದುರಿಗೆ ಹೋಗಿ ಮಂಡಿಯೂರಿ.,  “ಅಮ್ಮಾ., ನಮ್ಮೆಲ್ಲರಿಗೆ ಜನ್ಮ ಕೊಟ್ಟವಳು ನೀನು., ನಿನ್ನ ಮಕ್ಕಳನ್ನೇ ನೀನು ಹಾದರಕ್ಕೆಳೆಯುತ್ತೀಯ.??” ಎಂದು ಪ್ರಶ್ನಿಸಿದರು..,

ಆಗ ಆ ಹುಡುಗಿ., ಮುಖ ಮುಚ್ಚಿಕೊಂಡು.,
“ಹಿ ಈಸ್ ಕ್ರೈಸ್ಟ್” ಎಂದು ಕೂಗಿಕೊಳ್ಳುತ್ತಾಳೆ..
ಇಂಥಹ ರಾಷ್ಟ್ರದಲ್ಲಿ ಜನಿಸಿದ ನಾವು ಅವರು ಹಾಕಿಕೊಟ್ಟ ಹಾದಿಯಲ್ಲೇ ನಡೆಯಬೇಕು., ಅದನ್ನು ಬಿಟ್ಟು ಹೆಣ್ಣು ಮಕ್ಕಳನ್ನು ಥಳಿಸುವುದು ಎಷ್ಟು ಸರಿ..?? ನಮ್ಮ ರಾಜ್ಯ., ನಮ್ಮ ಮಂಗಳೂರು ಮತ್ತೊಂದು ಗೌವಾಟ್ಟಿ ಆಗದಿರಲೆಂಬುದು ನನ್ನ ಕಳಕಳಿ..!!
-ಪ್ರಮೋದ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: