ದೆವ್ವದ ಮನೆಯಲ್ಲಿ ದುಡ್ಡು

ಅಲ್ಲೊಂದು ಮನೆ… ಸುತ್ತಲೂ ಗಾಡವಾದ ಕತ್ತಲು .. ಯಾವುದೋ ನಾಯಿ ಕೂಗುತ್ತಲೇ ಇದೆ.. ಆದರೆ ಅದೇನೋ ಆ ದಿನ ಹುಚ್ಚು ಧೈರ್ಯ ಮಾಡಿ , ಆ ಮನೆಯ ಕಿಟಕಿಯಲ್ಲಿ ಕಾಣುತ್ತಿದ್ದ ಬೆಳಕಿನತ್ತ ಗಮನ ಹೆಚ್ಚುತ್ತಾ ಇದೆ.. ಕುತೂಹಲಕ್ಕೊಮೆ ಅಲ್ಲೇನಿದೆ ಎಂದು ನೋಡಬೇಕೆಂಬ ಬಯಕೆ.. ಆದರೆ ಊರ ಜನರು ಹೇಳುವ ಕಥೆ ಅದು ದೆವ್ವದ ಮನೆ… ಅಲ್ಲಿ ಯಾರೂ ಹೋಗುವಂತಿಲ್ಲ.. ನನಗೇನೋ ಅದೆಲ್ಲಿಂದ ಆಸಕ್ತಿ ಹೆಚ್ಚಿತ್ತೋ ಏನೋ ನನಗರಿವಿಲ್ಲದಂತೆಯೇ ನನ್ನ ಹೆಜ್ಜೆ ಆ ಮನೆಯ ದಿಕ್ಕಿನತ್ತ , ಕಿಟಕಿಯ ಬಳಿಗೆ ಸಾಗುತ್ತಿತ್ತು .. ಮೆಲ್ಲನೆ ಹೆಜ್ಜೆ ಇಟ್ಟಂತೆಲ್ಲಾ ಗೆಜ್ಜೆ ಸದ್ದು .. ಆದರೆ ಅದು ನನ್ನದಲ್ಲವಲ್ಲ … ನಾನು ಗೆಜ್ಜೆ ಕಟ್ಟಿಲ್ಲ.. ಅದ್ಯಾರು ಎಂಬ ಭಯವು ಆಗಷ್ಟೇ ಮತ್ತಷ್ಟು ಹೆಚ್ಚಿತ್ತು .. ಮನಸ್ಸು ಮಾತ್ರ ಕಿಟಕಿಯ ಬೆಳಕಿನೆಡೆಗೆ ನನ್ನನ್ನು ನೂಕಿದಂತೆ ಅನ್ನಿಸಿದಾಗ , ಮತ್ತಷ್ಟು ಹೃದಯ ಬಡಿದ ಜೋರಾಯಿತಾದರೂ , ನನ್ನ ಕಾಲುಗಳು ಮಾತನ್ನೇ ಕೇಳುತ್ತಿಲ್ಲ .. ಹೆಜ್ಜೆ ಮೇಲೊಂದು ಹೆಜ್ಜೆ ಇಡುತ್ತಾ ಆ ಕಿಟಕಿಯ ಬಳಿ ಹೋದೆ.. ಅಲ್ಲಿ ನನಗೊಂದು ಆಶ್ಚರ್ಯ .. ಆ ಬೆಳಕಿಗೆ ಕಾರಣ ಒಂದು ಪುಟ್ಟ ದೀಪ .. ಸುತ್ತಲೂ ಕಗ್ಗತ್ತಲು ಆದರೆ ಈ ದೀಪದಲ್ಲಿ ಶಕ್ತಿ ಅಡಗಿದೆಯೋ ನಾನರಿಯೆ .. ಆದರೆ ತುಂಬಾ ತುಂಬಾ ಬೆಳಕು .. ಕಿಟಕಿಯೊಳಗೆ ಮೆಲ್ಲನೇ ಇಣುಕಿ ನೋಡಿದೆ .. ಹಿ ಹಿ ಹಿ ಹಿ ಸಣ್ಣ ಕಿರುನಗೆ .. ಆ ಕೋಣೆಯ ಮೂಲೆಯಿಂದ ಬರುತ್ತಿತ್ತು .. ಅದು ಮನಸ್ಸಿಗೆ ಬಹಳ ಖುಷಿ ಎನ್ನಿಸಿತು .. ತಕ್ಷಣ ಅಲ್ಲೇನಿದೆ ಎಂದು ಒಮ್ಮೆ ನೋಡಿದರೆ , ಹದಿಹರೆಯದ ಒಂದು ಸುಂದರ ಯುವತಿಯ ಮುಖ.. ಆ ಮುಖದಿಂದಲೇ ನಗುವಿನ ಸದ್ದು ಮತ್ತು ಆ ಮುಖದಲ್ಲಿ ಒಂದು ರೀತಿಯ ಅಯಸ್ಕಾಂತ ಆಕರ್ಷಣೆ ಇನ್ನೂ ಹತ್ತಿರಕ್ಕೆ ಹೋಗುವಂತೆ , ಆಗ ಮೆಲ್ಲನೇ ಒಂದು ಸುಮಧುರ ಹಾಡಿನಂತೆ ಬಾ ನೀನು ಬೇಗನೇ… ಇನ್ನು ಹತ್ತಿರ.. ಹೆದರಿ ಹೆದರಿ ಹೋಗಬೇಡ ದೂರ.. … ನನಗಂತೂ ಅಲ್ಲಿ ಭಯದಲ್ಲೂ ಒಂದು ರೀತಿಯ ಶೃಂಗಾರ ಭಾವನೆ .. ಕಿಟಕಿಯ ಹತ್ತಿರದಲ್ಲಿ ನಿಂತು ನೋಡುತ್ತಿದ್ದ ನನ್ನನ್ನು , ಆ ಮುಖವು ನೋಡಿ .. ಮತ್ತಷ್ಟು ಸಂಸತಿದ ನನ್ನ ಬಳಿ ಬರಲು ಮುಂದಾಯಿತು .. ಇನ್ನೇನು ಆ ಮುಖದ ಚಲನೆ ನಾನಿದ್ದ ಕಿಟಕಿಯತ್ತ ಸಂಪೂರ್ಣ ತಿರುತ್ತಿದ್ದಂತೆಯೇ , ನನಗಂತೂ ಒಮ್ಮೆಲೇ ನಡುಕ ಹುಟ್ಟಿತು .. ಶ್ರೀ ಗಣೇಶ … ಅಯ್ಯೋ ದೇವ ಶಿವನೇ ಕಾಪಾಡೋ ಎಂದು ಮನದಲ್ಲೇ ಜಪಿಸಲು ಆರಂಭಿಸಿದ್ದೆ .. ಆ ಮುಖ ತಿರುಗಿದ್ದು ನಾನ್ಯಾವುದೋ ದೆವ್ವವು ಮುಖವನ್ನು ಗಿರಗಿರನೆ ತಿರುಗಿಸಿದೆಯೇ ಎಂಬ ಭ್ರಮೆಯಲ್ಲಿ ತಟಸ್ಥನಾಗಿ ನಿಂತುಬಿಟ್ಟೆ.. ಸ್ವಲ್ಪವೇ ಕ್ಷಣಗಳಲ್ಲಿ ಆ ಮುಖವು ಮುಂದೆ ಬಂದಂತೆ ಅನ್ನಿಸಿದಾಗ , ಕಿಟಕಿ ಬಿಟ್ಟು ಅಲ್ಲಿಂದ ಓಡಲು ಸಜ್ಜಾಗಿದ್ದೆ.. ಆದರೆ ಆ ಮುಖದ ಸೌಂದರ್ಯ ನನ್ನ ಕೈಕಾಲುಗಳ ಚಲನೆಯನ್ನೇ ಹಿಡಿದಿಟ್ಟುಕೊಂಡಿರುವಂತೆ , ನಾ ಕಿಟಕಿ ಬಿಡಲೇ ಇಲ್ಲ.. ಆದರೆ … ಆ ಮುಖವು ಹತ್ತಿರ ಬರುತ್ತಿದಂತೆ ಸದ್ದು ಕೂಡ ಜೋರಾಯಿತು .. ಅದುವೇ ಆಗೊಮ್ಮೆ ನಾನಲ್ಲಿ ಕೇಳಿದ ಒಂದು ಸುಮಧುರ ಹಾಡಿನಂತೆ ಬಾ ನೀನು ಬೇಗನೇ… ಇನ್ನು ಹತ್ತಿರ.. ಹೆದರಿ ಹೆದರಿ ಹೋಗಬೇಡ ದೂರ.. ಜೊತೆಯಲ್ಲಿ ಹಿ ಹಿ ಹಿ ಹಿ ಸಣ್ಣ ಕಿರುನಗೆ . ಆ ಮುಖ ಹತ್ತಿರ ಬಂತಲ್ಲಾ ಹೋ ಅಯ್ಯೋ ಹೋಗು ದೂರಾ , ಹೇ ಬರಬೇಡ ಅಂತಾ ಕಿರುಚುತ್ತಾ ನಾನು ಆ ಕಿಟಕಿ ಬಿಟ್ಟು ಓಡಲು ತಿರುಗುವಷ್ಟರಲ್ಲೇ …… ಎಎಯಿಈ….. ಯಾರೋ ನೀನು ಓಡಬೇಡ ನಿಲ್ಲು .. ನನ್ನೊಬ್ಬಳನ್ನೇ ಬಿಟ್ಟು ಹೋಗಬೇಡ .. ಆ ಸದ್ದು ನನ್ನ ಜೀವವೇ ಹಾರಿದಂತೆ , ನನ್ನಲ್ಲಿ ವಿಚಿತ್ರ ಅನುಭವಗಳ ಅಲೆಗಳ ಭಾರಿ ಜೋರು ಹೊಡೆತ ಮನದೊಳಗೆ .. ಆದರೂ ಆ ಮುಖದಲ್ಲಿನ ಆಕರ್ಷಣೆ ನಾನಲ್ಲಿ ಮೌನವಾಗಿರುವಂತೆ ಮಾಡಿತು .. ಆ ಮುಖದಿಂದ ಬಂದ ಮುಂದಿನ ಮಾತುಗಳ ಕೇಳಿದ ಕ್ಷಣವೇ … ಹಾರಿಹೋದಂತೆ ಅನ್ನಿಸಿದ ಜೀವ ಮರಳಿ ಬಂದು , ಆ ಬದುಕಿತು ಬಡಜೀವ .. ಇನ್ನು ಜೀವಕ್ಕೇನು ಭಯವಿಲ್ಲ ಎಂದು ನಾನು ನನ್ನ ಮನಸ್ಸು … ಆಗಷ್ಟೇ ಆ ಮುಖವು ಹೇಳಿದ್ದು ನನ್ನೊಬ್ಬಳನ್ನೇ ಬಿಟ್ಟು ಹೋಗಬೇಡ .. ದಯವಿಟ್ಟು ಸಹಾಯ ಮಾಡು , ನನ್ನನ್ನು ಇಲ್ಲಿಂದ ಕಾಪಾಡು .. ಕಾಪಾಡು … ದಯವಿಟ್ಟು ಸಹಾಯ ಮಾಡು .. ನನ್ನ ಜೀವ ಉಳಿಸು ಎಂದು … ಕಷ್ಟದಲ್ಲಿ ಇದ್ದರೂ ಸಹ ಮಾತುಗಳು ಬಲು ಜೋರಾಗಿ ಇದ್ದರೂ ಸಹ ಅವಳ ದನಿಯಲ್ಲಿ ಸುಮಧುರ ಗೀತೆಯೊಂದನ್ನು ಕೇಳಿದಂತೆ , ಕೇಳುತ್ತಾ ಕೇಳುತ್ತಾ ನಾನಲ್ಲೇ ಮೈಮರೆತು ನಿಂತುಬಿಟ್ಟೆ.. ಸಾಕಿನ್ನು ನಾನು ಸಾಯುವುದಿಲ್ಲ .. ಈ ದೆವ್ವ ನನಗೇನು ಮಾಡುವುದಿಲ್ಲ ಎಂಬಂತೆ ನನ್ನಲ್ಲಿ ನಾನೇ ಖುಷಿ ಪಟ್ಟೆ.. ಇನ್ನು ಹತ್ತಿರ ಆ ಮುಖ ಮೆಲ್ಲನೇ ಬರುತ್ತಿರುವಾಗ ಮತ್ತಷ್ಟು ಕಾತರ , ಕೊತೂಹಲ ಆ ಮುಖದ ಸೌಂದರ್ಯದ ಜೊತೆ ಅವಳ ಸಂಪೂರ್ಣ ಸೌಂದರ್ಯ ದರ್ಶನ ಕ್ಷಣ ಮಾತ್ರದಲ್ಲೇ ಅವಳೊಂದು ಅಪ್ಸರೆ , ದೇವತೆಯ ಅವತಾರವೆಂಬಂತೆ ಮಹದಾನಂದ .. ಅತ್ಯಂತ ಖುಷಿಯ ಶೃಂಗಾರ ಕ್ಷಣಗಳು ….. ಆದರೆ ಹತ್ತಿರಕ್ಕೆ ಬಂದ ಅವಳು ಅದೇಕೋ ಹಿ ಹಿ ಹಿ ಹಿ ಹಿ ಹಿ ಎಂದು ಒಂದೇ ಸಮನೇ ನನ್ನತ್ತ ನೋಡಿ ನಗುತ್ತಾ ಹೋ ಹೋ ಹೇ ಹೇ..

(ಮುಂದುವರೆಯುವುದು…)
|| ಪ್ರಶಾಂತ್ ಖಟಾವಕರ್ ||

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: