ಲಿ೦ಗೈಕ್ಯಾನ೦ದ ಸ್ವಾಮಿಗಳ ಆಶ್ರಮ, ಕಿರಿಕ್ ಕಿಸ್ನಮೂರ್ತಿ

ಶ್ರೀ. ಶ್ರೀ. ಶ್ರೀ, ಲಿ೦ಗೈಕ್ಯಾನ೦ದ ಸ್ವಾಮಿಗಳ ಆಶ್ರಮ…. ತ೦ಬಿಟ್ಟಹಳ್ಳಿ

ಕಿರೀಕ್ ಕಿಸ್ನಮೂರ್ತಿ ಒಳಬ೦ದು ನಮಸ್ಕರಿಸಿ ಕುಳಿತುಕೊಳ್ಳುತ್ತಾನೆ.

ಲಿ೦ಗೈಕ್ಯಾನ೦ದ ಸ್ವಾಮಿಗಳು: ಏನಯ್ಯ ಕಿಸ್ನಮೂರ್ತಿ ಅದ್ಯಾರೊ ಪೇಸ್ಬುಕ್ಕಿನ ಲೇಖಕರು ಬತ್ತಾರೆ ಸ೦ದರ್ಸನ ಮಾಡೊಕೆ ಅ೦ದಿದ್ದೆ.

ಕಿರಿಕ್ ಕಿಸ್ನಮೂರ್ತಿ: ಹೂ ಬುದ್ದಿ , ಬ೦ದವ್ರೆ ಅವ್ರ ಹೆಸರು ನಟರಾಜ್ ಸೀಗಿಕೊಟೆ ಅ೦ತ ಸಾನೆ ಪೇಮಸ್ಸು, ಪೇಸ್ಬುಕ್ಕಾಗೆ, “ಎಲೆ ಮರೆ ಕಾಯಿಗಳೊ೦ದಿಗೆ ಮಾತುಕತೆ” ಅ೦ತ ಬರಿತಾರೆ.

ಲಿ೦ಗೈಕ್ಯಾನ೦ದ ಸ್ವಾಮಿಗಳು: ಏನು, ತರಕಾರಿ ಬಗ್ಗೆ ಬರಿತಾರ ?

ಕಿರಿಕ್ ಕಿಸ್ನಮೂರ್ತಿ: ಏ ಅಲ್ಕಣೇಳಿ, ಚಿಕ್ಕ, ಚಿಕ್ಕ ಕವಿಗಳ ಬಗ್ಗೆ ಬರಿತಾರೆ. ನಾನು ಹೇಳಿವ್ನಿ. ನಮ್ಮ ಸ್ವಾಮಿಗೊಳು ಕೊಡ ಎಲೆ ಮರೆ ಕಾಯಿ, ಕವಿಗಳು, ಅವ್ರದ್ದೊವೆ ಒ೦ದು ಮಾತುಕತೆ ಮಾಡ್ಬಿಡಿ ಅ೦ತ. ಮೊದ್ಲು ಆಗಾಕ್ಕಿಲ್ಲ ಟೆಮಿಲ್ಲಾ ಅ೦ದ್ರು. ಹೆ೦ಗೊ ಮಾಡಿ ಕರ್ಕೊ೦ಬದಿವ್ನಿ ನಟರಾಜಣ್ಣ ಈತನಕ 50 ಮಾತುಕತೆ ಬರ್ದಹಾಕವ್ರೆ ಪೇಸ್ಬುಕ್ಕಾಗೆ . ನಿಮ್ದು 2000 ನೆ ಮಾತುಕತೆ ಲಿ೦ಗೈಕ್ಯಾನ೦ದ

ಸ್ವಾಮಿಗಳು: ಅಲ್ಲ ಕಣಲೆ ನ೦ದು 2000 ನೆ ಮಾತುಕತೆ ಅ೦ತಿಯಾ ಇವಗಿನ್ನೂ 50 ಬರೆದವ್ರೆ ಅ೦ತಿಯ.ಇನ್ನೊ ಆಪಾಟಿ ಕವಿಗಳು ಅವ್ರಾ. ನನ್ ಸ೦ದರ್ಸನ ಬರೊಕೆ ಅಪಾಟಿ ಕಾಯ್ಬೇಕಾ

ಕಿರಿಕ್ ಕಿಸ್ನಮೂರ್ತಿ ;ಔದು ಬುದ್ದಿ, ಸಾನೆ ಜನ ಬರಿತಾರೆ ಕವನಗಳನ್ನು, ಕಥೆಗಳನ್ನು, ನಟರಾಜ್ ಸಾ ಕೂಡ ಏಟು ಅ೦ತ ಮಾತುಕತೆ ಮಾಡಾರು, ಅದ್ಕೆ ನಿಮ್ದು 2000ನೆದು

ಲಿ೦ಗೈಕ್ಯಾನ೦ದ ಸ್ವಾಮಿಗಳು: ಅ೦ಗೆ ಆಗ್ಲಿ ಕರಿ ಅವ್ರನ್ನ.
ಶ್ರೀಯುತ, ನಟರಾಜ್ ಸೀಗಿಕೊಟೆ ಒಳಬರುತ್ತಾರೆ. ಕಿರೀಕ್ ಕಿಸ್ನಮೂರ್ತಿಯನ್ನೊಮ್ಮೆ ದುರುಗುಟ್ಟಿ ನೋಡಿ ಸ್ವಾಮಿಗಳಿಗೆ ಕೈಮುಗಿದು ಕುಳಿತುಕೊಳ್ಳುತ್ತಾರೆ.

ಕಿರೀಕ್ ಕಿಸ್ನಮೂರ್ತಿ: ಸ್ವಾಮಿಗೊಳೆ ಇವ್ರೆ ನಟರಾಜಣ್ಣ.

ಶ್ರೀ ನಟರಾಜ್ ಸೀಗಿಕೊಟೆ : ನಮಸ್ಕಾರ ಸ್ವಾಮಿಗಳೆ, ಹೇಳಿ, ನಿಮ್ಮ ಸಾಹಿತ್ಯ ಕೃಷಿಯ ಬಗ್ಗೆ.

ಲಿ೦ಗೈಕ್ಯಾನ೦ದ ಸ್ವಾಮಿಗಳು : ನಾಕೆಕ್ರೆ ಜಮೀನು ಆಸ್ರಮಕ್ಕೆ ಕೊಟ್ಟವ್ರೆ ಕಣಪ್ಪ ಹಳ್ಳಿಯೊರು, ಅದ್ರಾಗೆ ರಾಗಿ ಬೆಳ್ಕೂತಿವಿ ಆಸ್ರಮಕ್ಕೆ ಬರೊರ್ಗೆ ಮುದ್ದೆ ಮಾಡಾಕ್ತೀವಿ.

ಶ್ರೀ ನಟರಾಜ್ ಸೀಗಿಕೊಟೆ : ಸ್ವಾಮಿಗಳೆ ನಾನು ಕೇಳಿದ್ದು ಆ ಕೃಷಿ ಅಲ್ಲಾ ನಿಮ್ಮ ಕವಿತೆಗಳ ಬಗ್ಗೆ..

ಲಿ೦ಗೈಕ್ಯಾನ೦ದ ಸ್ವಾಮಿಗಳು :ಓ ಅದಾ, ಅ೦ಗನ್ನಿ, ನಾನು ಸಾನೆ ಕವಿತೆಗಳನ್ನ ಬರೆದು ಪೇಸ್ಬುಕ್ ನಾಗೆ ಹಾಕಿವ್ನಿ. “ಸಿವನ ಪಾದ” ಅನ್ನೊ ಹೆಸ್ರಲ್ಲಿ ಬರಿತಿನಿ. ಓದಿಲ್ವರ್ರಾ.

ಶ್ರೀ ನಟರಾಜ್ ಸೀಗಿಕೊಟೆ : ಸರಿ, ಒ೦ದು ಕೆಲ್ಸ ಮಾಡಿ , ನೀವು ಬರೆದಿರೊ ಎಲ್ಲಾ ಕವಿತೆಗಳನ್ನು ನನಗೆ ಕೊಡಿ, ನಾನು ಅದರಲ್ಲಿ ಕೆಲವನ್ನು ನನ್ನ ಲೇಖನದಲ್ಲಿ ಉಲ್ಲೇಕಿಸಿ ನಿಮ್ಮ ಬಗ್ಗೆ ಬರೆಯುತ್ತೇನೆ.ಈ ಕಿರೀಕ್ ಕಿಸ್ನಮೂರ್ತಿ ನಿಮ್ಮ ಬಗ್ಗೆ ತು೦ಬಾ ಹೇಳಿದ್ದಾರೆ.

ಲಿ೦ಗೈಕ್ಯಾನ೦ದ ಸ್ವಾಮಿಗಳು : ಅ೦ಗೆ ಆಗ್ಲಿ. ಲೇ ಕಿಸ್ನಮೂರ್ತಿ ನಾನು ಬರೆದಿರೊ ಕವಿತೆಗಳನ್ನೆಲ್ಲ ಈವಪ್ಪನಿಗೆ ಕೊಡ್ಲಾ..

ಕಿರೀಕ್ ಕಿಸ್ನಮೂರ್ತಿ: ಅ೦ಗೆ ಆಗ್ಲೀ ಸ್ವಾಮಿಗೊಳೆ. ಸ್ವಾಮಿಗಳೆ ಇವಾಗ ಒ೦ದು ಕವಿತೆ ಅ೦ಗನ್ನಿ ನಟರಾಜಣ್ಣ ಕೇಳ್ಳಿ ..ಮತ್ತೆ

ಲಿ೦ಗೈಕ್ಯಾನ೦ದ ಸ್ವಾಮಿಗಳು :
ಆವನಾವನವನು, ಅಧಮನು
ನನ್ನ ಶ್ರೀಮ೦ತನ೦ದವನು
ನನ್ನ ಸಿವನೇ ಭಡವನು,
ಇರುವುದು ಮಸಾಣ,
ಮೈಗೆ ಬೂದಿ,
ಉಟ್ಟಿರುವುದಾನೆ ಚರುಮ
ಈ ಸಿವನ ಪಾದದ ದೂಳು ನಾನು
ಭಡವರಲ್ಲಿ ಭಡವ- ಸಿವಪಾದ

ಲಿ೦ಗೈಕ್ಯಾನ೦ದ ಸ್ವಾಮಿಗಳು :
ಇನ್ನೊ೦ದು ಹೇಳಿಬಿಡ್ತಿನಿ.., ಸಿವನೆ, ಸಿವನೆ
ಎಲ್ಲೇಲ್ಲಿ ಮಡಗಿದ್ದಿಯಪ್ಪಾ ನಿನ್ನ ಪಾದ
ನಿನಿಟ್ಟರಲ್ಲವೇ ಊಟ
ಇಲ್ಲಾವಾದರೆ ಮಸಾಣಕ್ಕೆ ಓಟ

ಶ್ರೀ ನಟರಾಜ್ ಸೀಗಿಕೊಟೆ : ಹೊ, ಭ್ರಹ್ಮಾ೦ಡವಾಗಿದೆ , ನನ್ನ ಜೀವಮಾನದಲ್ಲಿ ಇ೦ತಾ ಕವಿತೆಗಳನ್ನ ಓದಿಲ್ಲ. ತು೦ಬಾ ಚೆನ್ನಾಗಿದೆ. ಈ ಕಿರೀಕ್ ಕಿಸ್ನಮೂರ್ತಿ ನನ್ನ ಪ್ರಾಣ ಹೀ೦ಡಿ ಇಲ್ಲಿಗೆ ಕರ್ಕೊ೦ಬದಿದ್ದಕ್ಕೆ ಸಾರ್ಥಕವಾಯ್ತು. ಸರಿ ಈ ನಿಮ್ಮ ಶಿಷ್ಯ ಕಿರೀಕ್ ಕಿಸ್ನಮೂರ್ತಿನೊ ಬರಿತಾರ೦ತೆ ಕವನಗಳನ್ನು.

ಲಿ೦ಗೈಕ್ಯಾನ೦ದ ಸ್ವಾಮಿಗಳು : ಬರಿತಾನ೦ತೆ ಕಣಪ್ಪ, ನನ್ನಷ್ಟೇನು ಚೆ೦ದಾಗಿ ಬರ್ಯಾಕಿಲ್ಲ ಬುಡಿ.

ಶ್ರೀ ನಟರಾಜ್ ಸೀಗಿಕೊಟೆ : ಸರಿ ಸ್ವಾಮಿಗಳೆ ನಾನು ಬರ್ತಿನಿ,

ಲಿ೦ಗೈಕ್ಯಾನ೦ದ ಸ್ವಾಮಿಗಳು :ಸಿವ ಒಳ್ಳೇದು ಮಾಡ್ಲಿ, ಊಟ ಮಾಡ್ಕೂ೦ಡೂಗಿ, ಬದ್ನೆ ಕಾಯಿ ಸಾರು ಮಾಡವ್ರೆ. ಕಿಸ್ನ ಮೂರ್ತಿ
ಇನ್ಯಾರನ್ನೊ ಕರ್ಕೊ೦ಬ೦ದಿದ್ದಾನೆ ಅ೦ದ್ಲು ಸಾ೦ತಮ್ಮ
ಇಬ್ಬರು ಯುವತಿಯರು ಒಳಬರುತ್ತಾರೆ, ಬಗ್ಗಿ ಸ್ವಾಮಿಗಳ ಪಾದ ಮುಟ್ಟಿ ನಮಸ್ಕರಿಸುತ್ತಾರೆ.

ಲಿ೦ಗೈಕ್ಯಾನ೦ದ ಸ್ವಾಮಿಗಳು : ಯಾರ್ಲ ಇವ್ರು.

ಕಿರೀಕ್ ಕಿಸ್ನಮೂರ್ತಿ : ಬುದ್ದಿ ಇವಮ್ಮ ಅಕಿಲಾ೦ಡೆಸ್ವರಿ, ಆವಮ್ಮ ಜಗದೀಸ್ವರಿ, ನಿತ್ಯಾನ೦ದನ ಆಸ್ರಮದಲ್ಲಿದ್ರು , ಅವ್ನು ತೆಮಿಳು ನಾಡಿಗೆ ಓಡೊಗ್ ಬುಟ್ಟವನೆ , ಇವ್ರಿಗೆ ಇರೊಕ್ಕೆ ಜಾಗ ಇಲ್ಲ ಸ್ವಲ್ಪ ದಿನ ನೀವೆ ಮಡಿಕ್ಕೊಳಿ ಬುದ್ದಿ.

ಲಿ೦ಗೈಕ್ಯಾನ೦ದ ಸ್ವಾಮಿಗಳು : ಮಡಿಕ್ಕೊಳಿ ಅನ್ ಬ್ಯಾಡ ಕಣ್ಲಾ. ಇಟ್ಕೊಳಿ ಅನ್ನು ಸಾಕು, ಅ೦ಗೆ ಅಗ್ಲಿ ಅವ್ನು ಬ೦ದ್ ಮ್ಯಾಲೆ ಅಲ್ಲೆ ಬಿಟ್ಬಿಡು ಇವ್ರನ್ನಾ,

ಕಿರೀಕ್ ಕಿಸ್ನಮೂರ್ತಿ : ಅ೦ಗೆ ಆಗ್ಲಿ ಬುದ್ದಿ, ನೀವು ಒಳಿಕ್ಕೊಗಿ ಪೂ೦ಬ್ಳೆಗಳೆ,ಆ೦ಡವ ಕಾಪಾಡ್ತಾನೆ, ಸ್ವಾಮಿಗೊಳ ಸೇವೆ ಚೆ೦ದಾಕಿ ಮಾಡಿ. ತೆರಿಯಮಾ,ಪೊ೦ಗೊ ಉಳ್ಳೆ. ನಡಿರಿ ನಟರಾಜಣ್ಣ ಊ೦ಡ್ಕೊ೦ಡೊಗನ.

ಬಾಲ೦ಗೊಚಿ:: ಶ್ರಿಯುತ ನಟರಾಜ್ ಸೀಗಿಕೊಟೆ ಅವರು ಸ್ವಾಮಿಗಳ ಮತ್ತು ಅವರ ಶಿಷ್ಯ ಕಿರೀಕ್ ಕಿಸ್ನಮೂರ್ತಿಯ ಕವನಗಳನ್ನು ಓದಿ ಜ್ವರ ಬ೦ದು ಮಲಗಿದ್ದಾರೆ೦ದು ಸುದ್ದಿ. ಮತ್ತು ಅವರ 2000ನೆ “ಎಲೆ ಮರೆ ಕಾಯಿಗಳೊ೦ದಿಗೆ ಮಾತುಕತೆ” ,ಬಹುತೇಕ ಪ್ರಕಟವಾಗುವುದು ಅನುಮಾನವಾಗಿದೆ (ಓದುಗರ ಒತ್ತಾಯದ ಮೇರೆಗೆ)

ಇದು ಕೇವಲ ಹಾಸ್ಯಕ್ಕೆ೦ದು ಬರೆದಿದ್ದು. ಶ್ರೀ. ನಟರಾಜ್ ಸೀಗಿಕೊಟೆ ಅವರ ಕ್ಷಮೆ ಕೊರುತ್ತಾ…..

-ಕೃಷ್ಣಮೂರ್ತಿ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: