ಭೂತಗಳ ನೆನಪಿನಾ ಸರಣಿಯಲ್ಲಿ

ಭೂತಗಳ ನೆನಪಿನಾ ಸರಣಿಯಲ್ಲಿ
ತಗ್ಗಿದೆ ಈಗೇಕೋ ಜೀವನ ಚಕ್ರದ ವೇಗ
ಇಂದೋ, ನಾಳೆಯೋ ನಶಿಸುವ ಭಯದಿ
ಮುಷ್ಠಿಗೆ ಸಿಗದೆ ಜಾರಿಹೋಗುತಿಹ ಮರಳಿನ ತರದಿ
ಕೈಜಾರಿ ಉರುತಿರುವ ದಿನಗಳ

ನೆನೆಯುತ್ತಾ ಜೀವನ ಸಂಜೆಯ ಕಳೆವಾತನಿಗೆ

ತನ್ನೆದೆಯಲಿ ಪ್ರೀತಿಯನಾಶ್ರಯವ ಪಡೆದ
ತನ್ನವರೆನ್ನುವವರ ನೆನಪಿನಂಗಳದಿ ಮರೆಯಾಗಿ
ಹೃದಯ ಬಯಸುವ ಪ್ರೀತಿಗೆ ಹಪಿಹಪಿಸಿ
ಬತ್ತಿ ಕಳೆಗುಂದಿದ ಮೈ ಮನಗಳ,
ನಿರೀಕ್ಷೆಗಳೇ ಇಲ್ಲದೆ, ನೀರಸವಾಗಿಹ ಬದುಕಿನ 
ತೇರನೆಳೆಯುವಾ ವ್ಯರ್ಥ ಪ್ರಯತ್ನದಲಿರುವಾಗ

ಹಣ್ಣೆಲೆಗಳನುದಿರಿಸುತ್ತಾ ನಿಂತ 
ಒಂಟಿ ಮರ ಕಾಡದೇ ಇರದು.
ಒಂದೊಮ್ಮೆ ಅದರ ರೆಂಭೆಗೆ
ಹಗ್ಗದ ಜೋಕಾಲಿ ಹಾಕಿ ಮೈಮರೆತವರೆಷ್ಟೋ
ಈಗದೇ ಮರ ಹಕ್ಕಿಗಳ ಕಲರವವಿಲ್ಲದೇ
ಋತುಗಳ ಹಿಡಿತಕೆ ಸಿಕ್ಕಿ ಶಿತಿಲವಾಗಿದೆ 
ಮೂಕವಾಗಿದೆ ಮನಸು ಬದಲಾಗುವ ಪರಿಸ್ಥಿತಿಗೆ
– ಭಾಗೀರಥಿ ಚಂದ್ರಶೇಖರ್

Advertisements

2 responses

  1. ಮಾನ್ಯ ಭಾಗೀರಥಿ ಚಂದ್ರಶೇಖರ್ ರವರೆ, ಕವನ ಚೆನ್ನಾಗಿದೆ ಹೀಗೆ ಮುಂದುವರಿಯಲಿ ನಿಮ್ಮ ಕವನ ಕೃಷಿ . ವಂದನೆಗಳು.

    1. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: