ಚಾಣಕ್ಯನ ನೀತಿಸೂತ್ರಗಳು

 • ತನಗೆ ಹಾನಿಯಾಗುವ ಸಂದರ್ಭದಲ್ಲಿ ಸಂಧಿಯ್ನು ಮಾಡಿಕೊಳ್ಳಬೇಕು
 • ತನ್ನ ದೇಶದಿಂದ ಒಂದು ದೇಶದ ಅನಂತರವಿರುವ ದೇಶದ ರಾಜನು ಮಿತ್ರನೆನಿಸುವನು
 • ತನ್ನ ದೇಶದ ಪಕ್ಕದ ರಾಜನು ಶತೃವೆನಿಸುವನು
 • ಬಲಿಷ್ಟನಾದವನು ದುರ್ಬಲನೊಡನೆ ಯುದ್ಧ ಮಾಡಬೇಕು
 • ತನಗಿಂತ ಹೆಚ್ಚಿನವನೊಡನಾಗಲೀ ಸರಿಸಮನೊಡನಾಗಲೀ ಯುದ್ಧ ಮಾಡಬಾರದು
 • ಒಂದೆಡೆ ಸಂಧಾನ ನಡೆಸುತ್ತಲಾದರೂ ಶತೃಗಳ ಪ್ರಯತ್ನವನ್ನು ನಿರೀಕ್ಷಿಸುತ್ತಿರಬೇಕು
 • ಹಸಿದ ಸಿಂಹವು ಹುಲ್ಲು ತಿನ್ನುವುದಿಲ್ಲ
 • ಸಹನೆ ಇಲ್ಲದ ನಾಯಕನು ಹೆಂಡಿರು ಮಕ್ಕಳಿಂದಲೂ ತ್ಯಜಿಸಲ್ಪಡುವನು
 • ಸತ್ಯವಿದ್ದರೂ ನಂಬಲಾರದುದನ್ನು ಹೇಳಬಾರದು
 • ಒಂದು ದೋಷವು ಅನೇಕ ಗುಣಗಳನ್ನೂ ನುಂಗುವುದು
 • ಮರ್ಯಾದೆ ಮೀರಿದವನನ್ನೆಂದೂ ನಂಬಬಾರದು
 • ಧರ್ಮಾರ್ಥಗಳ ವಿರುದ್ಧ ವರ್ತಿಸುವವನು ಅನರ್ಥವನ್ನು ಹೊಂದುತ್ತಾನೆ
 • ಸರಳ ಸ್ವಭಾವದ ಮನುಷ್ಯನು ದುರ್ಲಭ
 • ಶತೃವನ್ನು ಅವನ ಮರ್ಮದಲ್ಲಿ ಹೊಡೆಯಬೇಕು
 • ಮೂಢರು ಕೊಟ್ಟೇತೀರಬೇಕಾದುದನ್ನೂ ಅತಿ ಕಷ್ಟದಿಂದ ಕೊಡುವರು
 • ಆಶಾಪರನಾದ ಕಾರ್ಯದಕ್ಷನನ್ನೂ ಮೋಸಗೊಳಿಸುವುದು ಸುಲಭ
 • ದುಷ್ಟನಿಗೆ ಅವಮಾನದ ಭಯವಿಲ್ಲ
 • ಬುದ್ಧಿವಂತನಿಗೆ ಜೀವನದ ಭಯವಿಲ್ಲ
 • ಇಂದ್ರಿಯಗಳನ್ನು ನಿಗ್ರಹಿಸಿದವರಿಗೆ ವಿಷಯಗಳ ಭಯವಿಲ್ಲ
 • ಕೃತಕೃತ್ಯರಿಗೆ ಮರಣಭಯವಿಲ್ಲ
 • ದುಡ್ಡಿದ್ದವನು ಕುರೂಪಿಯಾಗಿದ್ದರೂ ಸುರೂಪನೆನಿಸುವನು
 • ಹಾವಿಗೆ ಹಾಲು ಕುಡಿಸುವುದು ವಿಷವನ್ನು ಬೆಳೆಸುವುದೇ ಹೊರತು ಅಮೃತವಾಗಲಾರದು
 • ಶತೃವನ್ನು ಸಭೆಯಲ್ಲಿ ನಿಂದಿಸಬಾರದು
 • ಶತೃವಿನ ದುಃಖವು ಕೇಳುವುದಕ್ಕೆ ಇಂಪು
 • ತನ್ನಲ್ಲಿ ದೋಷಗಳಿರುವವನು ಇತರರ ಮೇಲೆ ಸಂಶಯಪಡುವನು

-ಮಂಜುನಾಥ ರೆಡ್ಡಿ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: