ಕಟ್ಟಿಕೊಂಡವರು ಕೊನೆಯ ತನಕ ಇಟ್ಟುಕೊಂಡವರು ಇರೋ ತನಕ

ಕಟ್ಟಿಕೊಂಡವರು ಕೊನೆಯ ತನಕ ಇಟ್ಟುಕೊಂಡವರು ಇರೋ ತನಕ

” ಈ ನಾಣ್ಣುಡಿಯ್ನು ಕೇಳಿದ್ದೇವೆ. ಬಹುತೇಕವಾಗಿ ಇದು ಜನಜೀವನದಲ್ಲಿ ಸರಿ ಹೊಂದುವಂತೆಯೇ ಆಗಿದೆಯಾದರೂ ಯಾವುದೇ ಒಂದು ಕ್ಷಣ ಮನಸ್ಸನ್ನು ಚಂಚಲ ಮಾಡಿಕೊಳ್ಳುವ ಪರಿಣಾ ಅತ್ತ ಮೊದಲೂ ಇಲ್ಲದೇ, ಇತ್ತ ಎರಡನೆಯದ್ದೂ ಇಲ್ಲದೇ ಜೀವನದುದ್ದಕ್ಕೂ ಪರಿತಪಿಸಬೇಕಾದ ದುಸ್ಥಿತಿಯನ್ನು ಕೆಲವರು ತಮ್ಮದಾಗಿಸಿಕೊಳ್ಳುತ್ತಿರುವುದು ಖೇದದ ಸಂಗತಿಯೇ ಸರಿ.

ನೆರೆಯ ತಾಲ್ಲೂಕಿನ ವಿವಾಹಿತ ಮಹಿಳೆಯೊಬ್ಬಳು ಚಿಂತಾಮಣಿ ತಾಲ್ಲೂಕಿನ ಯುವಕನೊಬ್ಬನ ಪ್ರೇಮಪಾಶಕ್ಕೆ ಬಿದ್ದು, ಗಂಡ-ಮಕ್ಕಳು-ಸಂಸಾರವನ್ನು ತೊರೆದು, ಆ ಯುವಕನ ಹಿಂದೆ ಓಡಿಬಂದಿದ್ದಳಾದರೂ, ಅವರ ಆ ಹುಚ್ಚು ಪ್ರೇಮ ಶಾಶ್ವತವಾಗಿ ಉಳಿದುಕೊಳ್ಳಲಿಲ್ಲ, ಕೇವಲ 2-3 ವರ್ಷಗಳಿಗಷ್ಟೇ ಮೀಸಲುಗೊಂಡು, ಯುವಕ ಕೈಗೊಂದು ಮಗುವನ್ನೂ ಕೊಟ್ಟು, ಬರಿಕೈಯಿಂದ ಮನೆಯಿಂದ ಹೊರದಬ್ಬಿದ ಪರಿಣಾಮ ಆಕೆ ಅತ್ತ ತಂದೆ-ತಾಯಿ-ಸಹೋದರರ ಮನೆಗೂ ಹೋಗಲಾರದೆ, ಇನ್ನೊಂದೆಡೆ ಮೊದಲನೇ ಗಂಡನ ಮನೆಗೂ ಹೋಗಲಾರದೇ, ಇತ್ತ ಪ್ರೇಮಿಯ ಮನೆಯಲ್ಲೂ ಇರಲಾಗದೇ, ಕೈಯಲ್ಲಿ ದುಡ್ಡೂ ಇರಲಾರದೇ ಹಾದಿ ಬಿದಿಗಳಲ್ಲಿಯೇ ಅದಾಗ ತಾನೆ ಜನ್ಮ ನೀಡಿದ ಮಗುವಿನೊಂದಿಗೆ ದಿನದೂಡಿದ ದೃಶ್ಯ ಕಂಡ ಕೆಲವರು ಮರುಕ ಪಟ್ಟಿದ್ದರು.

ತಂದೆ-ತಾಯಿ ಹಾಗೂ ಮೊದಲನೇ ಗಂಡ ಸಾಕಷ್ಟು ಸ್ಥಿತಿವಂತರಾಗಿದ್ದರು ಪ್ರೇಮದ ನೆಪವೊಡ್ಡಿ ಗಂಡನ ಮನೆಯಿಂದ ಕಾಲ್ಕಿತ್ತಿದ್ದ ಗೃಹಿಣಿಯು ಕೊನೆಗೆ ತಿನ್ನಲು ಊಟವಿಲ್ಲದೇ, ವಾಸವಿರಲು ಮನೆಯಿಲ್ಲದೇ, ಎಲ್ಲಾರೂ ಇದ್ದೂ ಏನೂ ಇಲ್ಲದಂತೆಅನಾಥಳಂತೆ ಹಾದಿಬೀದಿಳಲ್ಲಿ ಜೀವನ ದೂಡುತ್ತಾ, ಕೊರೆಯುವ ಚಳಿಯಲ್ಲಿ ಭುವಿಗೆ ಹೊಸದಾಗಿದ್ದ ಹಸಗೂಸಿನೊಂದಿಗೆ ಜೀವನ ಸಾಗಿಸಿದ್ದು, ಕಂಡ-ಕಂಡವರಲ್ಲಿ ತನಗೆ ನ್ಯಾಯ ದೊರಕಿಸಿಕೊಡಿ, ವಾಸವಿರಲು ಮನೆಯೊಂದನ್ನಾದರೂ ಪ್ರೇಮಿಯಿಂದ ಕಲ್ಪಿಸಿಕೊಡಿಯೆಂದು ಮೊರೆಯಿಟ್ಟಿದ್ದು ನಿಜಕ್ಕೂ ಎಂತಹವರಲ್ಲಿಯೂ ಮರುಕ ಹುಟ್ಟಿಸದೇ ಇರದು.

ಕಡುಬಡತನದ ಬೇಗೆಯಿದ್ದರೂ ಕಟ್ಟಿಕೊಂಡ ಗಂಡನೊಂದಿಗೆ ಯಾವುದೇ ಜಗಳವಿಲ್ಲದೇ ಆಗರ್ಭ ಶ್ರೀಮಂತರಂತೆ ಜೀವನದೂಡುವ ಹೆಣ್ಣು ಮಕ್ಕಳಿಗೇನೂ ಕೊರತೆಯಿಲ್ಲ, ಆದರೆ ಇದರ ನಡುವೆ ಕೆಲವರು ಏನೇನೋ ಆಸೆ ಕಟ್ಟಿಕೊಂಡು, ಹುಚ್ಚಿಕಲ್ಪನೆಗಳನ್ನೇ ಜೀವನವನ್ನಾಗಿಸಿಕೊಳ್ಳಲು ಹೊರಡುವ ಯುವತಿ-ಯುವಕರಾಗಬಹುದು, ಮುಂದಿನಸಮಸ್ತ ಆಗು ಹೋಗುಗಳನ್ನು ಒಮ್ಮೆ ಊಹಿಸಿಕೊಂಡೇ ಮುನ್ನಡೆದಾಗ ಮಾತ್ರ ಬಾಳು ಬಂಗಾರವಾಗುತ್ತದೆ, ಬೃಂದಾವನವಾಗುತ್ತದೆ, ಇಲ್ಲದೇ ಹೋದಲ್ಲಿ 1-2 ಕ್ಷಣದಲ್ಲಿನ ಕಲ್ಪನೆಯಿಂದ ಎಂತಹ ದುಸ್ಥಿತಿಗೆ ತಲುಪಬೇಕಾದೀತಲ್ಲವೇ….?
ಕೃಪೆ: ಕೋಲಾರ ವಾಣಿ
-ಮಂಜುನಾಥ ರೆಡ್ಡಿ

Advertisements

One response

  1. ಮಾನ್ಯರೇ, ಇದು ಒಂದು ಸಾಮಾಜಿಕ ಪಿಡುಗು. ಕ್ಷಣಿಕ ಸುಖಕ್ಕಾಗಿ, ಮುಂದಾಲೋಚನೆ ಇಲ್ಲದೆ, ಇದ್ದುದ್ದೆಲ್ಲವನ್ನು ಬಿಟ್ಟು. ಅಶ್ರಯದಾತರನ್ನು ಬಿಟ್ಟು. ಹೋಗುತ್ತಾರೆ. ನಂಬಿದವನು ಕೈ ಕೊಟ್ಟಾಗ ಅವರ ಪಾಡು ಯಾರಿಗೂ ಬೇಡ ಎನಿಸುತ್ತದೆ . ಯಾವರೆಲ್ಲಾದ್ರೂ ಹಾಳಾಗಿ ಹೋಗಲಿ, ಏನು ಅರಿಯದ, ಇವರಿಗೆ ಹುಟ್ಟಿದ ಮಕ್ಕಳ ಜೀವನ ದೇವರಿಗೆ ಮುಟ್ಟುತ್ತದೆ ಅದರಲ್ಲು ಒಬ್ಬಳು ಹೆಂಡತಿ ಇದ್ದಾಗ ಮತ್ತೊಬ್ಬಳನ್ನು ಮದುವೆಯಾಗುವುದು ಅಕ್ಷಮ್ಯ ಅಪರಾಧ. ಸರಕಾರಗಳು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ. ಕ್ರೂ ರ ಶಿಕ್ಷೆಯ ಕಾನೂನು ಜಾರಿಗೆ ತರಬೇಕು. ಮೊದಲ ಹೆಂಡತಿ ಮಕ್ಕಳು ದುಡಿದು ಸಂಪಾದಿಸಿದ್ದನ್ನು ಎರಡನೇ ಹೆಂಡತಿಯಾಗಿ ಬರುವವಳು ಹದ್ದಿನಂತೆ ಹಾರಿಸಿಕೊಂಡು ಹೋಗುತ್ತಾಳೆ. ಇದು ಆನ್ಯಾಯ ಅಲ್ಲವೇ?

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: