ಕರ್ನಾಟಕದಲ್ಲಿ ವಿದ್ಯುತ್ತಿನ ಮೂಲ ನೆಲೆ ಶಿವನ ಸಮುದ್ರ

ಏಷ್ಯಾದಲ್ಲೇ ಪ್ರಥಮವಾಗಿ ವಿದ್ಯುತ್ ಉತ್ಪಾದಿಸಿದ ಶಿವನಸಮುದ್ರ

“ಕರ್ನಾಟಕದಲ್ಲಿ ವಿದ್ಯುತ್ತಿನ ಮೂಲ ನೆಲೆ ಶಿವನ ಸಮುದ್ರ. ಕೋಲಾರ ಚಿನ್ನದ ಗಣಿ, ಭದ್ರಾವತಿ ಕಬ್ಬಿಣದ ಕಾರ್ಖಾನೆಗೆ ವಿದ್ಯುತ್ ಒದಗಿಸುವ ಸಲುವಾಗಿ ಶಿಂಷಾ ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಷನ್ ದಿವಾನ್ ಶೇಷಾದ್ರಿ ಅಯ್ಯರ್ ಅವರ ಕಾಲದ ಲ್ಲಿ ಆಗಸ್ಟ್ 6, 1904ರಲ್ಲಿ ವಿದ್ಯುಕ್ತವಾಗಿ ಆರಂಭವಾಯಿತು.

ಶಿವನಸಮುದ್ರದಲ್ಲಿ ಏಷ್ಯಾದಲ್ಲೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆಯಾದದ್ದು ಮತ್ತು ಈ ಕುರಿತ ಯೋಜನೆ ಶೇಷಾದ್ರಿ ಅಯ್ಯರ್ ಅವರ ದಿವಾನಗಿರಿಯಲ್ಲಿ 1900ರ ವರ್ಷದಲ್ಲಿ ಕಾರ್ಯರೂಪಕ್ಕೆ ಬಂದದ್ದೂ ಚರಿತ್ರೆಯಲ್ಲಿ ಸ್ಪಷ್ಟವಾಗಿದೆ. ಇಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿರುವುದನ್ನು ಬ್ರಿಟಿಷರು ನಂಬಲಿಲ್ಲ. ಇದೆಲ್ಲ ಬರೀ ಬುರುಡೆ ಎಂದು ಹೇಳಿದರು. ಶಿಂಷಾ ಪವರ್ ಸ್ಟೇಷನ್ನಿನಿಂದ ವಿದ್ಯುತ್ತು ನೇರವಾಗಿ ಕನಕಪುರದ ಕಾನಕಾನಹಳ್ಳಿ ಎಲೆಕ್ಟ್ರಿಕ್ ಗ್ರಿಡ್ ಗೆ ಬಂದು ನಂತರ ಬೆಂಗಳೂರು ನಗರಕ್ಕೆ ವಿದ್ಯುತ್ ಸರಬರಾಜು ಆಗುತ್ತಿತ್ತು. ಆನಂದರಾವ್ ಸರ್ಕಲ್ಲಿನಲ್ಲಿ ವಿದ್ಯುತ್ತಿನ ಮುಖ್ಯ ಕಚೇರಿ ಇತ್ತು. ಪ್ರತಿದಿನ ರಾತ್ರಿ 9ಕ್ಕೆ ಸರಿಯಾಗಿಒಂದು ಸೆಕೆಂಡ್ ಕಾಲ ಇಡೀ ಬೆಂಗಳೂರನ್ನು ಕತ್ತಲು ಮಾಡುತ್ತಿದ್ದರು.”ಶಿವನ ಸಮುದ್ರದಿಂದ 1902ರ ವರ್ಷದಲ್ಲೇ ಕೋಲಾರ ಚಿನ್ನದ ಗಣಿಗೆ, 1905ರ ವರ್ಷದಲ್ಲಿ ಬೆಂಗಳೂರು ನಗರಕ್ಕೆ ಮತ್ತು 1906ರಲ್ಲಿ ಮೈಸೂರು ನಗರಕ್ಕೆ ವಿದ್ಯುತ್ ಹರಿದು ಬಂದದ್ದು ವಿಶೇಷವಾದುದಾಗಿದೆ.

ಈ ಭಾಗದಲ್ಲಿ ಗಣಿಗಾರಿಕೆಯಿಂದ ಪ್ರಾಕೃತಿಕ ಸೌಂಧರ್ಯಕ್ಕೆ ಅಪಾಯ ಒದಗುತ್ತಿದ್ದ ಸಂದರ್ಭದಲ್ಲಿ 2006ರ ವರ್ಷದಲ್ಲಿ ಹೈಕೋರ್ಟ್ ನ್ಯಾಯಪೀಠ ಅಂತಹ ಚಟುವಟಿಕೆಗಳಿಗೆ ತಡೆ ಹಾಕಿದ್ದುದು ಸ್ತುತ್ಯಾರ್ಹವಾಗಿದೆ.

ಏಷ್ಯಾದಲ್ಲೇ ಪ್ರಥಮವಾಗಿ ವಿದ್ಯುತ್ ಪಡೆದ ಅಂದಿನ ನಮ್ಮ ಭವ್ಯ ನಾಡು, ಇನ್ನೂ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಇಂದೂ ಕೂಡಾ ವಿದ್ಯುತ್ ಖೋತಾಗಳಿಗೆ ತುತ್ತಾಗುತ್ತಿರುವುದು, ಅಂದಿನ ರಾಜರ ಕಾಲದಲ್ಲಿದ್ದ ಪ್ರಗತಿ ಪರ ಕಾಳಜಿಗಳಿಗೂ, ಇಂದಿನ ರಾಜಕಾರಣಿಗಳ ಸಮಾಜಾಭಿವೃದ್ಧಿಗೆ ವಿಮುಖವಾದ ಗಣಿಗಾರಿಕೆ ಪರವಾಗಿನ ದುಷ್ಟ ನೀತಿಗಳಿಗೂ ಇರುವ ವೆತ್ಯಾಸವನ್ನು ನಿಚ್ಚಳವಾಗಿ ಪ್ರತಿಬಿಂಬಿಸುತ್ತಿವೆ.
ಕೃಪೆ: Namma Kannada Nadu
ಸಂಗ್ರಹ: ರವಿಕುಮಾರ್ ಆರಾಧ್ಯ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: