ಬಂಧಮುಕ್ತಿ..

ನೀರ ಹನಿಗಳೆನುವ
ಮುದ್ದಾದ ಮಕ್ಕಳು,
ಬಂಧನದ ಬೇಸರದಿ

ಕುಳಿತುಕೊಂಡಿದ್ದರು
ಕಾರ್ಮೋಡವೆನುವ
ದೊಡ್ದ ಶಾಲೆಯಲಿ;
ಗುಡುಗೆನುವ ಗಂಟೆ
ಬಾರಿಸಿದ ತಕ್ಷಣ
ಸ್ವತಂತ್ರರಾದಂತೆ
ಭುವಿಯೆನುವ
ಮನೆಯೆಡೆಗೆ,
ಓಡೋಡಿ ಬರುತಿಹರು
ಈಗ ಆತುರಾತುರದಲಿ

2 responses

  1. ಮಾನ್ಯರೇ ಒಳ್ಳೆಯ ಕಲ್ಪನೆ ಚೆನ್ನಾಗಿದೆ ವಂದನೆಗಳು.

ನಿಮ್ಮ ಅನಿಸಿಕೆ