ಯುವಪ್ರೇಮಿಗಳಿಗೆ ಮಾರ್ಗದರ್ಶನ ನೀಡಿ

ಕಛೇರಿಯಲ್ಲಿ ಕುಳಿತಿದ್ದಾಗ ಪರಿಚಯವಿರುವ ಯುವಕನೊಬ್ಬ ಬಂದು ಎದುರಿಗೆ ಕುಳಿತ. ಉಭಯ ಕುಶಲೋಪರಿ ನಂತರ ನೀವು ಪತ್ರಿಕೆಯವರು,ನನ್ನ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡಿ ಎಂದು ತಾನು ಸಿಲುಕಿಕೊಂಡಿರುವ ಸಮಸ್ಯೆ ಬಿಚ್ಚಿಟ್ಟ.

ಇವನೊಬ್ಬ ಕೃಷಿ ಕಾರ್ಮಿಕನ ಮಗ. ವಯಸ್ಸು ಈಗಷ್ಟೆ ಹತ್ತೊಂಭತ್ತು ವರ್ಷ. ಪಿ.ಯು.ಸಿ. ಎರಡು ವರ್ಷ ಪೂರೈಸಿ ಕುಟುಂಬ ನಿರ್ವಹಣೆಗೆ ತಂದೆಯೊಡನೆ ಕೈ ಜೋಡಿಸಿದ್ದಾನೆ. ಈತ ಪಿ.ಯು.ಸಿ ಪ್ರಥಮ ವರ್ಷದಲ್ಲಿದ್ದಾಗ ಪಕ್ಕದ ಬೀದಿಯಲ್ಲಿ ನೆಲೆಸಿದ್ದ ಶಾಲಾ ಮುಖ್ಯೋಪಾದ್ಯಾಯರ ಎಸ್.ಎಸ್.ಎಲ್.ಸಿ ಓದುವ ಮಗಳ ಪರಿಚಯವಾಗಿದೆ. ದಿನವೂ ಜೊತೆಯಲ್ಲಿ ಹೋಗಿ ಬರುವಾಗ ಇಬ್ಬರಲ್ಲೂ ಪ್ರೀತಿ ಮೊಳಕೆಯೊಡೆದಿದೆ. ಇಬ್ಬರದೂ ಬಾಲ್ಯಾವಸ್ಥೆಯೇ ಆಗಿದ್ದರೂ ಪ್ರೀತಿ ಗಟ್ಟಿಯಾಗತೊಡಗಿದೆ.

ಒಂದೇ ಜಾತಿ, ಒಂದೇ ಊರು ಮಾಮೂಲಿ ಪ್ರೇಮಕಥೆಯೆಂದುಕೊಂಡರೂ, ಆಕೆಯದು ಎಸ್.ಎಸ್.ಎಲ್.ಸಿ ಪಾಸಾಯಿತು. ಇವನದು ಎರಡನೆ ವರ್ಷ ಪಿಯುಸಿ. ಇಬ್ಬರೂ ಯುವ ಪ್ರೇಮಿಗಳಾದರು. ಕದ್ದು ಮುಚ್ಚಿ ಪ್ರೇಮಪತ್ರ ಬರೆದುಕೊಂಡರು. ಎಲ್ಲವೂ ಗುಟ್ಟು. ಏನೇ ಆದರೂ ಮನೆಯವರಿಗೆ ತಿಳಿಯಕೂಡದು ಎಂಬ ಭಯ. ಪಾಪ ಅವನೋ ಕೂಲಿ, ಇವಳಾದರೋ ಮಾಸ್ತರರ ಮಗಳು. ಇಬ್ಬರದೂ ತಮ್ಮ ಪ್ರೇಮದ ವಿಷಯ ಹೇಳಿಕೊಳ್ಳಲಾರದ ವಯಸ್ಸು. ಹೀಗೆ ಒಂದೂವರೆ ವರ್ಷ ಕಳೆದಿದೆ. ಹುಡುಗಿ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಂತೆಯೇ ಒಳ್ಳೆಯ ಸಂಬಂಧ ಎಂದು ಹೇಳಿಕೊಂಡು ಬಂದ ನೌಕರಿಯಲ್ಲಿರುವ ವರನೊಬ್ಬ ಮಾಸ್ತರರಿಗೆ ಗಂಟು ಬಿದ್ದಾಗ ಹದಿನಾರು-ಹದಿನೇಳರ ಬಾಲೆಯನ್ನು ಕೇಳುವುದೇನಿದೆ. ದಿಡೀರ್ ಮದುವೆಯ ಮಾತುಕತೆ ಮುಗಿದೇ ಹೋಗಿದೆ. ಇಬ್ಬರೂ ಯುವ ಪ್ರೇಮಿಗಳಿಗೆ ಆಘಾತ. ತಮ್ಮಿಬ್ಬರ ಮನಸ್ಸಿನಲ್ಲಿರುವ ರಹಸ್ಯ ಪ್ರೇಮವನ್ನು ಹೇಳಿಕೊಳ್ಳಲಾರದ ಸಂದಿಗ್ಧತೆ. ಮದುವೆ ನಿಶ್ಚಯವಾದ ಮೇಲೂ ಇಬ್ಬರೂ ಜೊತೆಯಾಗಿ ಚರ್ಚಿಸಿದ್ದಾರೆ. ಬಡತನದ ವಿಷಯ ಒತ್ತಟ್ಟಿಗಿರಲಿ, ಪಾಪ ತಮ್ಮ ಪ್ರೇಮ ಪ್ರಲಾಪವನ್ನು ಹೇಳಿಕೊಳ್ಳಲಾರದ ವಯಸ್ಸು ಇಬ್ಬರಿಗೂ ಅಡ್ಡ ನಿಂತಿದೆ. ಯಾವ ನಿಟ್ಟಿನಲ್ಲಿ ಯೋಚಿಸಿದರೂ ಭಯವೆಂಬುದು ಬೃಹದಾಕಾರವಾಗಿದೆ. ಧೈರ್ಯವಾಗಿ ಎದುರಿಸಲಾರದ ವಯಸ್ಸಿನಲ್ಲಿ ಪ್ರೀತಿಯೆಂಬ ಮಾಯೆಯ ಸುಳಿಯಲ್ಲಿ ಸಿಲುಕಿ ತೊಳಲಾಡಿದ್ದಾರೆ. ಸಾಯುವ ಅಥವಾ ಓಡಿಹೋಗುವ ಬಗೆಗೆ ಚರ್ಚಿಸಿದ್ದಾರೆ, ಹುಡುಗಿಯ ನಾಲ್ವರು ತಂಗಿಯರ ಭವಿಷ್ಯ,ಗೌರವಸ್ಥ ಮಾಸ್ತರರ ಮರ್ಯಾದೆ ಬಗ್ಗೆಯೂ ಚಿಂತಿಸಿದ್ದಾರೆ. ಎಳಸು ವಯಸು, ಎಳಸು ಮನಸು ಯಾವುದೇ ತೀರ್ಮಾನಕ್ಕೆ ಬರುವುದರಲ್ಲಿ ವಿಫಲವಾಗಿವೆ.ಮಗಳು ಅಳುವುದನ್ನು ಕಂಡು, ಓದಿಸುವುದನ್ನು ಬಿಟ್ಟು ಮದುವೆ ಮಾಡುತ್ತಿದ್ದಾರೆಂದು ಅಳುತ್ತಿದ್ದಾಳೆ ಎಂದುಕೊಂಡರು ಅಪ್ಪ ಅಮ್ಮ. ಅಪ್ಪ ಅಮ್ಮನೊಂದಿಗೆ ಹೇಳುವ ಧೈರ್ಯವಿಲ್ಲದ ಹುಡುಗಿ ಮೂಲೆ ಸೇರಿದಳು. ತನ್ನನ್ನು ಮುಂದೆ ಓದಿಸದೆ ಕೂಲಿಗಾಕಿಕೊಂಡುದಕ್ಕೆ ಮಂಕಾಗಿದ್ದಾನೆ ಎಂದು ಹುಡುಗನ ಅಪ್ಪ ಭಾವಿಸಿದರು. ಹುಡುಗ ಹುಡುಗಿ ತೀರ್ಮಾನಕ್ಕೆ ಬರುವಷ್ಟರಲ್ಲಿ ಮದುವೆ ನಡೆದೇ ಹೋಯಿತು. ಹುಡುಗಿ ಅಳುತ್ತಲೇ ಗಂಡನ ಮನೆ ಸೇರಿದಳು. ಹುಡುಗ ಒಂದೆರಡು ದಿನ ಊಟ ಬಿಟ್ಟ, ನಿಧಾನಕ್ಕೆ ಪರಿಸ್ಥಿತಿ ಕೈ ಮೀರಿದುದರಿಂದ ಮೌನಿಯಾದ, ಸುಮ್ಮನಾದ.

ಯುವಪ್ರೇಮಿಗಳಿಬ್ಬರೂ ಒಂದಾಗದಿದ್ದರೂ ದುರಂತವೇನೂ ಸಂಭವಿಸಲಿಲ್ಲವಲ್ಲ ಎಂದುಕೊಂಡಿರುವಾಗ ಹುಡುಗಿ ನೀರು ತರುವ ನೆಪದಲ್ಲಿ ಕೊಳಕ್ಕೆ ಹೋಗಿ ಕಾಲು ಜಾರಿದ್ದಾಳೆ. ಸಾವು ಇವಳನ್ನು ಅಪ್ಪಿಕೊಳ್ಳುವ ಮೊದಲೇ ದಾರಿಹೋಕರು ಇವಳನ್ನು ರಕ್ಷಿಸಿದ್ದಾರೆ. ಮದುವೆಯಾಗಿ ಈಗ ತಿಂಗಳಾಗಿದೆ. ಹುಡುಗಿ ಹುಡುಗನನ್ನು ಭೇಟಿಯಾಗಿದ್ದಾಳೆ. ಹುಡುಗನನ್ನು ಬಿಟ್ಟಿರಲಾರದ ಸ್ಥಿತಿ ವಿವರಿಸಿದ್ದಾಳೆ. ಮುಂದಿನ ತಿಂಗಳು ನಡೆಯುವ ಜಾತ್ರೆಯ ದಿನ ಇಬ್ಬರೂ ಓಡಿ ಹೋಗೋಣ. ಕೂಲಿ ಮಾಡಿ ಬದುಕೋಣ. ಒಪ್ಪಿಕೋ.ನೀನು ಒಪ್ಪದಿದ್ದರೆ ನಾನು ನೀರಿಗೆ ಬಿದ್ದು ಸಾಯುವುದು ಖಂಡಿತಾ ಎಂದಿದ್ದಾಳೆ. ಹುಡುಗನಿಗೆ ಈಗ ದಿಕ್ಕೇ ತೋಚದಂತಾಗಿ ನನ್ನಲ್ಲಿ ಸಲಹೆ ಕೇಳಲು ಬಂದಿದ್ದಾನೆ.

ಆತ್ಮೀಯರೆ. ಏನೂ ಹೇಳುವುದೆಂದು ಯೋಚಿಸುತ್ತಿದ್ದೇನೆ. ಪ್ಲೀಸ್ ನಿಮ್ಮೆಲ್ಲರ ಅಭಿಪ್ರಾಯ ತಿಳಿಸಿರಿ. ಮದುವೆಯಾಗಿರುವ ಗಂಡ ಹೆಂಡತಿಯರನ್ನು ಒಂದು ಮಾಡೋಣವೆ? ಅಥವಾ ಯುವ ಪ್ರೇಮಿಗಳನ್ನು ಒಂದುಗೂಡಿಸೋಣವ? ಎರಡೂ ಕುಟುಂಬಗಳ ನಡುವೆ ಚರ್ಚಿಸೋಣವೆ? ಏನು ಮಾಡುವುದೆಂಬ ಪ್ರಶ್ನೆಗೆ ಉತ್ತರಿಸಿ ಮಾರ್ಗದರ್ಶನ ಮಾಡಿ. . .. .
Melukote Vngowda

Advertisements

One response

  1. ಮಾನ್ಯ ಮೇಲುಕೋಟೆ ವಿಎನ್ ಗೌಡರೇ , ಸಾಮಾನ್ಯವಾಗಿ, ಅವರಿಬ್ಬರೂ ಯುವ ಪ್ರೆಮಿಗಳೆನಿಸಿದರೂ ಸಹ, ಪ್ರೇಮಿಸುವ ಮೊದಲು ಮುಂದಾಗುವ ಅನಾನುಕೂಲಗಳ ಬಗ್ಗೆ ಯೋಚಿಸಬೇಕಿತ್ತು. ನಾವಿಬ್ಬರೂ ಒಬ್ಬರಿಗೊಬ್ಬರು ಪ್ರೇಮಿಸಿದರೆ, ಮುಂದೇ ಯಾವ ಸಮಸ್ಯೆಗಳು ಉದ್ಬವವಾಗಬಹುದು ಅವುಗಳನ್ನು ಬಗೆಹರಿಸಲು ನಮ್ಮಿಬ್ಬರಿಂದ ಸಾಧ್ಯವೇ. ಇದಕ್ಕೆ ನಮ್ಮಿಬ್ಬರ ಮನೆಯ ಹಿರಿಯರು ಒಪ್ಪುತ್ತಾರೆಯೇ? ಈಗಾಗಲೇ ಬೇರೊಬ್ಬನ ಜೊತೆ ಅ ಹುಡುಗಿಯ ಮಾದುವೆ ಆಗಿಹೋಗಿದೆ. ಅಕಸ್ಮಾತ್ ಇಬ್ಬರೂ ಓಡಿಹೋದರೆ ನಿಲ್ಲಲು ನೆಲೆ ಇಲ್ಲ ಬದುಕಲು ಸಂಪಾದನೆ ಇಲ್ಲ. ಸಹಾಯ ಮಾಡುವವರು ಯಾರು? ಏನು ಅರಿಯದೆ ಈಗಾಗಲೇ ಮದುವೆಯಾಗಿರುವ ವರನ ಗತಿ ಏನು? ಆದುದರಿಂದ ಹಿರಿಯರಿಗೆ ಗೊತ್ತಿಲ್ಲದೇ ಗುಪ್ತವಾಗಿದ್ದ ಪ್ರೇಮೆ ಹಾಗೆಯೇ ಸತ್ತು ಹೋಗಲಿ ಈಗಾಗಲೇ ಮದುವೆಯಾಗಿರುವ ಗಂಡನೊಂದಿಗೆ ಹುಡುಗಿ ಸುಖವಾಗಿ ಬದುಕಲಿ. ಹಾಗೆಯೇ. ಪ್ರೇಮಿಯು ತನ್ನ ಕಾಲಿನಮೇಲೆ ನಿಂತು ಬೇರೊಂದುಹುದುಗಿಯನ್ನು ಮದುವೆಯಾಗಿ ಸುಖವಾಗಿರಲಿ. ಇಬ್ಬರೂ ತಮ್ಮ ಬದುಕನ್ನು ಹಸನು ಮಾಡಿಕೊಂಡು ಸುಖವಾಗಿ ಬದುಕಲಿ. ಇಲ್ಲ್ಲವಾದರೆ. ಈಗಾಗಲೆ ಒಂದು ಹಟದಲ್ಲಿ ಮುಕ್ತಾಯವಾಗಿರುವ ಸಮಸ್ಯೆ ಮತ್ತೆ ಹಲವಾರು ಸಮಸ್ಯೆಗಳು ಉದ್ಬವವಾಗುತ್ತವೆ ಅಲ್ಲವೇ? ವಂದನೆಗಲೊಡನೆ

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: