ಸಾವು ಅನ್ನೋದು ಹಾಗೆ

ಅದೊಂದು ಸಂಸಾರ…ಅಪ್ಪಅಮ್ಮ, ಮಗ ಸೊಸೆ, ಮೊಮ್ಮಗ..ಎಲ್ಲವೂ ಚೆಂದ ಅನ್ನೋ ಹಾಗೆ ಬದುಕು ನಡಿತಾ ಇತ್ತು,  ಇದ್ದಕ್ಕಿದ್ದ ಹಾಗೆ ಒಂದು ದಿನ ಮಗ ಖಾಯಿಲೆ ಬಿದ್ದ…ಸ್ವಲ್ಪ ಕಾಲ ಬಹಳ ಹಿಂಸೆ ಅನುಭವಿಸಿದ…ಕಡೆಗೆ ಒಮ್ಮೆ ಸತ್ತೂ ಹೋದ, ಕುಟುಂಬಕ್ಕೆ ದಿಕ್ಕೇ ತೋಚದಂತೆ ಆಯಿತು ..ಎಲ್ಲಾ ಗೋಳಾಡುತ್ತಾ ಕುಳಿತರು..

ಅಪ್ಪ ಹೇಳಿದ..”ನಿನ್ನ ಬದಲು ವಯಸ್ಸಾದ ನಾನೇ ಹೋಗಬಾರದಿತ್ತೇ.”ಅಮ್ಮ ಕೂಡ ಹಾಗೆ ಅತ್ತಳು…ಹೆಂಡತಿ ಮಗ ಕೂಡ ತುಂಬಾನೇ ಸಂಕಟಪಟ್ಟರು, ಆ ಹಾದಿಯಲ್ಲಿ ಒಬ್ಬ ಸಾಧು ಬಂದ …ಈ ಗದ್ದಲ ಕೇಳಿ ಬಂದು ಸಂತೈಸಿದ, ಹುಟ್ಟು ಸಾವಿನ ಬಗ್ಗೆ ಲೆಕ್ಕ ಹೇಳಿದ, ಅವರ ಸಂಕಟ ಕಮ್ಮಿಯಾಗದಿದ್ದಾಗ, ಒಂದು ಬಟ್ಟಲು ನೀರು ತೆಗೆದುಕೊಂಡ, ಹೇಳಿದ.. “ನಿಮ್ಮಲ್ಲಿ ಯಾರಾದ್ರೂ ಈ ನೀರು ಕುಡಿದರೆ ನಾ ಅವನ ಬದುಕಿಸಬಲ್ಲೆ…ಆದರೆ ನೀರು ಕುಡಿದವರು ಸಾಯುತ್ತಾರೆ “.

ಎಲ್ಲಾ ಮುಖ ಮುಖ ನೋಡಿಕೊಂಡರು…ಅಳು ನಿಂತಂತೆ ಕಂಡಿತು…
ಸಾಧು ಅಪ್ಪನ ಮುಖ ನೋಡಿದ..ಅಪ್ಪ ಹೇಳಿದ..”ಅಯ್ಯೋ ನಾನು ಸತ್ತೂ ಹೋದರೆ ವಯಸ್ಸಾದ ನನ್ನ ಹೆಂಡತಿಯ ಯಾರು ನೋಡಿಕೊಳ್ತಾರೆ”.

ಸಾಧು ಅಮ್ಮನ ಕಡೆ ನೋಡಿದ..”ನನ್ನ ಮಗಳು ಮುಂದಿನ ತಿಂಗಳು ಬಾಣಂತನಕ್ಕೆ ಬರುವವಳಿದ್ದಾಳೆ..ಅವಳಿಗೆ ..ನನ್ನ ಗಂಡನಿಗೆ ದಿಕ್ಕು ಯಾರು” ಅಂದ್ಲು…

ಸಾಧು ಈಗ ಸೊಸೆ ಕಡೆ ನೋಡಿದ..”ಅವನಿಲ್ಲದೆ ಬದುಕು ನನಗೆ ಕಷ್ಟಾನೆ..ಆದ್ರೆ ನಾನು ಸತ್ತೂ ಹೋದರೆ ನನ್ನ ಮಗನ ಕಥೆ ????” ಅಂದ್ಲು, ಇನ್ನು ಪುಟ್ಟ ಮೊಮ್ಮಗನ ಕಡೆ ಸಾಧು ತಿರುಗುವ ಮುನ್ನ ಸೊಸೆ ಹುಡುಗನ್ನ ಬಾಚಿ ತಬ್ಬಿಕೊಂಡಳು ಎಲ್ಲಿ ಸಾಧು ಅವನನ್ನ ಕಿತ್ತು ಕೊಳ್ತಾನೋ ಎಂಬಂತೆ…

ಈಗ ನಕ್ಕ ಸಾಧು, ಹೇಳಿದ…”ಸಾವು ಅನ್ನೋದು ಹಾಗೆ…ನಮ್ಮ ಕಾಲ ಮುಗಿದ ಮೇಲೆ ನಾನು ಹೋಗಲೇ ಬೇಕು…ಮುಂದಿನ ಕೆಲಸ ಮಾಡಿ”ಅಂದ ….. ಕ್ಷಣಗಳಲ್ಲಿ ದಾರಿಯ ತಿರುವಿನಲ್ಲಿ ಕಾಣದಂತೆ ಹೊರಟು ಹೋದ…
“ಆಗಮನ…ನಿರ್ಗಮನ…ಎರಡು ಕಾಣದ ಕೈಗಳಲ್ಲಿ ಇವೆಯಂತೆ…ಅವನಿಗೆ ಇಷ್ಟ ಆದಾಗ ಹೂ ಅರಳಿಸುವನಂತೆ…ಅವನಿಗೆ ಇಷ್ಟ ಆದಾಗ ಹೂವು ಎಷ್ಟೇ ಸುಂದರವಾಗಿದ್ದರು ಕಿತ್ತು ಕರೆದೊಯ್ವನಂತೆ…….
Love Lasts As Long As Life Exists
The Rest Is Only Memories Of Happy Times..!!!!!
ನೆನ್ನೆ ಬೇಸರಗೊಂಡಿದ್ದ ನನಗೆ ನನ್ನ ಅತಿ ಆತ್ಮೀಯ ಹಿರಿಯ ಮಿತ್ರರೊಬ್ಬರ Mail kathe….ಅವರಿಗೆ ನನ್ನ ಮನದಾಳದ ನಮನ…:)))) – -ಸುನಿತಾ ಮಂಜುನಾಥ್

Advertisements

4 responses

  1. ಶ್ರೀಮತಿ ಸುನೀತಾ ಮಂಜುನಾಥ್ ರವರೇ , ಕಥೆ ಚೆನ್ನಾಗಿದೆ. ಆದರೆ ಇಲ್ಲಿ ಎಲ್ಲರೂ ಸ್ವಾರ್ಥಿಗಳಾಗಿ ಕಾಣುತ್ತಿದ್ದಾರೆ. ಮಕ್ಕಳಮೇಲೆ ಪ್ರೀತಿಯಿಂದ ತ್ಯಾಗ ಮಾಡುವವರು ಅ ಕುಟುಂಬದಲ್ಲಿ ಕಾಣುವುದಿಲ್ಲ ಮಗ ಸತ್ತಾಗ ನಾಟಕೀಯವಾಗಿ ಅಳುತ್ತಾರೆ ಎಂದಾಯಿತು. ಒಟ್ಟಿನಲ್ಲಿ ” ಯಾರಿಗೆ ಯಾರು ಇಲ್ಲ ” ಇಲ್ಲಿ ತಿಳಿದುಬರುತ್ತದೆ ಅಲ್ಲವೇ?

    1. ನಂಜುಂಡ ರಾಜು ಅವರೇ……….ಯಾರಿಗೆ ಯಾರು ಇಲ್ಲ ಅನ್ನೋದು ೧೦೦% ಸರಿ ಅಲ್ಲ ಅನ್ನೋದು ನನ್ನ ಅನಿಸಿಕೆ….ಒಂದು ಲಿಮಿಟ್ ದಾಟಿದ ಮೇಲೆ ಮನುಷ್ಯ ಸ್ವಾರ್ಥಿ ಆಗ್ತಾ ಹೋಗ್ತಾನೆ…. ಬದುಕು ಬೇಡ ಅಂತ ಆತ್ಮಹತ್ಯೆ ಮಾಡಿಕೊಳ್ಳು ಮನುಷ್ಯ …ಗಲ್ಲು ಶಿಕ್ಷೆಗೆ ಗುರಿಯಾದ ಕೈದಿ…ಮರಣದ ಬಾಗಿಲಲ್ಲಿ ಇರುವ ವ್ಯಕ್ತಿಗೆ ಕೂಡ ಬದುಕಬೇಕೆಂಬ ಕಿಡಿ ಹುಟ್ಟುತ್ತದೆ ಅಂತೆ..ಹಾಗೆ ಇದು ಕೂಡ…

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: