ಮೈ ಆಜಾದ್ ಹೂಂ .. ಆಜಾದ್ ಹೀ ರಹೂಂಗಾ.. ಭಾಗ-3

ಭಾಗ-2 ರಿಂದ ಮುಂದುವರೆದಿದೆ
ಕಾಕೋರಿ ದರೋಡೆ ಆದ ನಂತರ ಬಿಸ್ಮಿಲ್ಲರು ಕಟ್ಟಿದ ಕ್ರಾಂತಿಕಾರಿ ಪಡೆ ಕ್ರಮೇಣ ಕರಗತೊಡಗಿತು. ಒಬ್ಬೊಬ್ಬರಾಗಿ ಸಿಕ್ಕಿ ಹಾಕತೊಡಗಿದರು…ಆದರೆ ಯಾರಿಗೂ ಸಿಕ್ಕಿ ಬೀಳದೆ ಇದ್ದದ್ದು ಅಜಾದ್ ಮಾತ್ರ…ತನ್ನ ಬಹುವಿಧದ ವೇಷ ಮತ್ತು ಚಾಣಾಕ್ಷತನದಿಂದ ಪೋಲ
ೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ… ತಮ್ಮನ್ನು ತಾವು ಬಚ್ಚಿಡುವ ನೆಪದಲ್ಲಿ ತನ್ನ ಮುಖ್ಯ ಕೆಲಸವನ್ನು ಆತ ಎಂದೂ ಮರೆತಿರಲಿಲ್ಲ, ಹೋದ ಹೋದಲ್ಲಿ ತಮ್ಮ ಸಂಘಟನೆಗಾಗಿ ಸದ್ದಿಲ್ಲದೆ ದುಡಿಯುತ್ತಿದ್ದ. ಯುವ ಪಡೆಯನ್ನು ಸಿದ್ಧಗೊಳಿಸುತ್ತಿದ್ದ…ಇಂತಹಾ ಸಮಯದಲ್ಲಿಯೇ ಮತ್ತೊಬ್ಬ ಕ್ರಾಂತಿಯ ಕಿಡಿ, ಪಂಜಾಬಿನ ಗಂಡುಗಲಿಯೊಡನೆ ಅಜಾದರ ಮಿಲನವಾಯಿತು… ರಾಮಾಯಣದಲ್ಲಿ ಶ್ರೀ ರಾಮ ಮತ್ತು ಹನುಮಂತನ ಮಿಲನದ ದೃಶ್ಯ ನನಗೇಕೋ ನೆನಪಾಗುತ್ತಿದೆ ಅಲ್ಲೂ ಒಂದು ಹೆಣ್ಣಿನ ರಕ್ಷೆ ಆಗಬೇಕಿತ್ತು ಇಲ್ಲೂ ಒಬ್ಬ ಹೆಣ್ಣಿನ ರಕ್ಷೆ… ಅದು ತಾಯಿ ಭಾರತಿ…

ಹಾಗೆ ನೋಡಿದರೆ ಈ ಇಬ್ಬರೂ ಬೆಳೆದು ಬಂದ ರೀತಿ ಬೇರೆ ಬೇರೆಯೆ ಆಗಿತ್ತು ಭಗತ್ ತಮ್ಮ ಓದು ಮತ್ತು ವೈಚಾರಿಕ ವಿಷಯದ ಮುಖಾಂತರ ಒಬ್ಬ ಹೋರಾಟಗಾರರಾಗಿ ಮೂಡಿ ಬಂದಿದ್ದರು ಆದರೆ ಅಜಾದ್ ಬರಿಯ ಹೋರಾಟದಿಂದಲೇ ತಮ್ಮನ್ನು ತಾವು ಗುರಿತಿಸಿಕೊಂಡಿದ್ದರು.. ಆದರೂ ಇಬ್ಬರೂ ಒಬ್ಬರೊನ್ನಬ್ಬರು ಬಹು ಬೇಗ ಅರ್ಥೈಸಿಕೊಳ್ಳುತ್ತಿದ್ದರು, ಯಾಕೆಂದರೆ ಇಬ್ಬರ ಪರಮ ಗುರಿ ಒಂದೆ… ಭಾರತ ಮಾತೆಯ ರಕ್ಷಣೆ…

ಇದೇ ಸಮಯದಲ್ಲಿ ಚದುರಿ ಹೋಗಿದ್ದ ಕ್ರಾಂತಿಕಾರಿಗಳೆಲ್ಲರೂ ಒಂದಾಗಿ ಹೋರಡುವ ಕಾರಣಕ್ಕಾಗಿ, ಹೊಸ ಸಂಘಟನೆ ರೂಪುಗೊಂಡಿತು … ಅದುವೇ ” ಹಿಂದೂಸ್ಥಾನ್ ಸೋಷಲಿಸ್ಟ್ ರಿಪಬ್ಲಿಕನ್ ಆರ್ಮಿ ” ಮತ್ತು ಈ ಗುಂಪಿನ ಪ್ರಧಾನ ದಂಡನಾಯಕನಾಗಿ ಎಲ್ಲರ ಒಕ್ಕೊರಲಿನಿಂದ ಆಯ್ಕೆ ಆದದ್ದು …. ಚಂದ್ರ ಶೇಖರ ಆಜಾದ್…

ಇದೇ ಸಂಧರ್ಭದಲ್ಲಿ ಬ್ರಿಟಿಷ್ ಸರ್ಕಾರ ಭಾರತದ ಸ್ಥಿತಿಗತಿಗಳನ್ನು ಪರಿಶೀಲಿಸಿ ಅದರ ನಂತರ ಕೆಲವು ತೀರ್ಮಾನ ಕೈಗೊಳ್ಳುವ ಬಗ್ಗೆ ಭಾರತದ ನಾಯಕರುಗಳಿಗೆ ತಿಳಿಸಿತು . ಇದು ಆ ಧೂರ್ತ ಸರ್ಕಾರದ ಮತ್ತೊಂದು ವಂಚನೆಯಾಗಿತ್ತು ಕಾರಣ ಈ ಪರಿಶೀಲನೆಗೆ ಬರೋ ಸಮಿತಿಯಲ್ಲಿ ಯಾವೊಬ್ಬ ಭಾರತೀಯ ನಾಯಕನೂ ಇರಲಿಲ್ಲ… ಆ ಸಮಿತಿ ಮುಖ್ಯಸ್ಥನಾಗಿ ಬಂದ್ದದ್ದು “ಸರ್ ಜಾನ್ ಸೈಮನ್ನ್”..ಆಂಗ್ಲರ ಈ ಕಪಟತನ ಭಾರತೀಯರನ್ನು ರೊಚ್ಚಿಗೆಬ್ಬಿಸಿತು..ಸೈಮನ್ನ್ ಭಾರತಕ್ಕೆ ಕಾಲಿಡುತ್ತಿದ್ದಂತೆಯೇ ಚಳುವಳಿಗಳು ಪ್ರಾರಂಭವಾದವು …ಎಲ್ಲೆಡೆಯೂ ಒಂದೇ ಧ್ವನಿ “ಸೈಮನ್ ಗೋ ಬ್ಯಾಕ್” ಇಂತಹದ್ದೇ ಒಂದು ಚಳುವಳಿಗೆ ಲಾಲಾಜೀ( ಲಾಲಾ ಲಜಪತ್ ರಾಯ್) ಮುಂದಾಳತ್ವ ವಹಿಸುವ ಸಲುವಾಗಿ ಬಂದಿದ್ದರು.ತಮ್ಮ ಇಳಿ ವಯಸ್ಸಿನಲ್ಲೂ ಹೋರಾಟದ ಕಿಚ್ಚನ್ನು ಪ್ರದರ್ಶಿಸಿದ್ದರು… ಆದರೆ ಅವರ ಪ್ರಾಯಕ್ಕೂ ಬೆಲೆಕೊಡದ ಸ್ಕಾಟ್ ಎಂಬ ಆಂಗ್ಲ ಅಧಿಕಾರಿ ಲಾಠಿ ಚಾರ್ಜ್ ಗೆ ಆದೇಶ ಕೊಟ್ಟೇ ಬಿಟ್ಟ… ಜೆ.ಪಿ. ಸ್ಯಾಂಡರ್ಸ್ ಎಂಬ ಮತ್ತೊಬ್ಬ ಉನ್ಮತ್ತ ಅಧಿಕಾರಿ ಲಾಲಾಜಿ ಮೇಲೆ ಪ್ರಹಾರ ಮಾಡಿಯೇ ಬಿಟ್ಟ… ಆತನ ಮಾರಣಾಂತಿಕ ಪೆಟ್ಟಿಗೆ ಲಾಲಾಜಿ ಎದೆಗೊಟ್ಟು ವೀರ ಮರಣವನ್ನು ಹೊಂದಿ ಅಮರರಾದರು… ಅವರ ಸಾವು ಎಲ್ಲ ಭಾರತೀಯರ ಕಣ್ಣಲ್ಲಿ ಕಣ್ಣೀರು ತರಿಸಿತ್ತು , ಆದರೆ ಕ್ರಾಂತಿಕಾರಿಗಳಲ್ಲಿ ….ರೋಷದ ಅಲೆಯನ್ನೇ ಎಬ್ಬಿಸಿತ್ತು ಅವರೆಲ್ಲರಲ್ಲೂ ಈಗ ಸೇಡಿನ ಜ್ವಾಲಾಮುಖಿ ಸ್ಪೋಟಿಸಿತ್ತು…

ಅಜಾದರ ನಾಯಕತ್ವದಡಿ ದೊಡ್ದ ಯೋಜನೆಯೊಂದು ರೂಪುಗೊಂಡಿತು…ಡಿಸೆಂಬರ್ ೧೭ ಈ ಯೋಜನೆ ಕಾರ್ಯರೂಪಕ್ಕೆ ಬರುವುದರಲ್ಲಿತ್ತು…ಸಂಜೆ ಸ್ಕಾಟ್ ಠಾಣೆಯಿಂದ ಹೊರ ಬರುವಾಗ ಆತನನ್ನು ಗುಂಡಿಟ್ಟು ಕೊಲ್ಲಬೇಕು ಅನ್ನೋದು ಪ್ಲಾನ್ ಮಾಡಿದ್ದ ಯೋಜನೆಯಂತೆಯೇ ಎಲ್ಲರೂ ಸಮಯಕ್ಕೆ ಸರಿಯಾಗಿ ತಮ್ಮ ತಮ್ಮ ಸ್ಥಳದಲ್ಲಿ ಹೊಂಚು ಹಾಕಿ ಕಾದಿದ್ದರು… ಸ್ಕಾಟ್ ತನ್ನ ಮೋಟಾರ್ ಸೈಕಲನ್ನು ಇಟ್ಟಿರುವ ಸ್ಥಳಕ್ಕೆ ಬಂದಾಗ ಗುಂಡಿಟ್ಟು ಕೊಲ್ಲಲು ಆತುರರಾಗಿದ್ದರು ರಾಜ್ ಗುರು ಮತ್ತು ಭಗತ್ ಸಿಂಗ್…… ಉಳಿದಂತೆ ಸುಖದೇವ್, ವಿಜಯಕುಮಾರ್, ಭಗವಾನ್ ದಾಸ್ ಇವೆರೆಲ್ಲರೂ ಸಹಾಯಕರು… ಇವೆರೆಲ್ಲರ ರಕ್ಷಣೆಯ ಜವಾಬ್ದಾರಿ ಅಜಾದನದು… ಆದರೆ ಅಷ್ಟರಲ್ಲಿ ಒಂದು ಬದಲಾವಣೆ ಆಗಿತ್ತು ನಿಜವಾದ ಬಲಿ ಸ್ಕಾಟ್ ನ ಬದಲಿಗೆ ಸಾಂಡರ್ಸ್ ಬಂದಿದ್ದ…ಆದರೆ ಅವನೇನೂ ಕಮ್ಮಿಯಲ್ಲ ತಾನೆ… ಆತ ಮೋಟಾರ್ ಸೈಕಲ್ಲಿನ ಮೇಲೆ ಕುಳಿತು ಹೊರಡುವಷ್ಟರಲ್ಲೇ ರಾಜ್ ಗುರು ಎದ್ದು ಬಂದು ಆತನ ಬಲಿ ತೆಗೆದುಕೊಂಡಿದ್ದ ಮತ್ತೆ ಭಗತ್ ಬಂದು ತನ್ನ ಕೈಯಲ್ಲಿದ್ದ ಬಂದೂಕಿನ ದಾಹವನ್ನು ತೀರಿಸಿದ. ಲಾಲಾಜಿಯ ಕೊಲೆಯ ಸೇಡು ತೀರಿಸಿದ್ದರು ಭಾರತದ ಯುವ ಕ್ರಾಂತಿಯ ಕುಡಿಗಳು…ಪೋಲೀಸ್ ಠಾಣೆಯ ಎದುರೆ ಆಂಗ್ಲ ಅಧಿಕಾರಿಯ ಕೊಲೆ ಮಾಡಿ ಎಲ್ಲರೂ ತಪ್ಪಿಸಿಕೊಂಡಿದ್ದರು.. ಕಾರಣ ಅಜಾದನ ಸುರಕ್ಷೆ… ತನ್ನ ಸಂಗಡಿಗರ ರಕ್ಷಣೆಯ ಸಲುವಾಗಿ ಚನ್ನನ್ ಸಿಂಗ್ ಅನ್ನೋ ಹೆಡ್ ಕಾನ್ಸ್ ಸ್ಟೇಬಲ್ ನನ್ನು ಅಜಾದ್ ಬಲಿ ತೆಗೆದುಕೊಂಡಿದ್ದ…ಎಲ್ಲರೂ ಸುಸೂತ್ರವಾಗಿ ಮರೆಯಾಗಿದ್ದರು…ಆ ಮೂಲಕ ಆಂಗ್ಲರ ಎದೆಯೊಳಗೆ ಭಯ ಮತ್ತು ನಡುಕದ ಬೀಜವನ್ನ ಬಿತ್ತಿದ್ದರು…
ಅಜಾದರ ಯೋಜನೆಗಳೇ ಹಾಗೆ…    -ಕೊನೆಯ ಭಾಗ 
-ಗುರುಪ್ರಸಾದ್ ಆಚಾರ್ಯ

ಗ್ರಂಥ ಕೃಪೆ: ಅಜೇಯ
ಗ್ರಂಥದ ಲೇಖಕರು : ಬಾಬು ಕೃಷ್ಣ ಮೂರ್ತಿ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: