ಕರೆದರಿಲ್ಲಿ ಬರದೆ ಇರುವನೆ

ಸರಿಯಾಗಿ ೨೯ ವರ್ಷಗಳ ಹಿಂದೆ(೧೯೮೩) ನಾನು ಬರೆದ ಮೊದಲ ಭಕ್ತಿಗೀತೆ ಇದು.
ನನಗಾಗ ವಯಸ್ಸು ೧೩.ಓದುತ್ತಿದ್ದುದು ೭ನೆಯ ತರಗತಿ…..
**************************************************

ಕರೆದರಿಲ್ಲಿ ಬರದೆ ಇರುವನೆ ಉರಗಾಭಾರಣ /

ಕರುಣನೇತ್ರ ತೆರೆಯದಿರುವನೆ ಪಾರ್ವತಿರಮಣ /
ಹರಿವ ಚಿತ್ತ ನಿಲಿಸಿ ನಿತ್ಯ ಅವನ ಭಜಿಸಿ ಪಾಡುತಿರಲು /
ಧರೆಯ ಮಿಥ್ಯ ದಹಿಸಿದವನ ನಾಮಸ್ಮರಣೆ ಮಾಡುತಿರಲು // ಪ //ಕಡಲು ಮಥಿಸುವಾಗ ದೊರೆತ ಕಾರ್ಕೋಟಕ ವಿಷವನುಂಡು /
ಒಡನೆ ಸುಧೆಯ ಸುರರಿಗಂದು ಹಂಚಿದ ಹರನ /
ಗುಡಿಯೊಳಗಿನ ಮೂರ್ತಿ ನೆಚ್ಚಿ ಕಡುತಪಗೈದವರ ಮೆಚ್ಚಿ /
ಜಡಕಾಯದ ಭ್ರಾಂತಿ ಕಳೆದ ನಡುನೇತ್ರನ //೧//

ಲೋಕಕಂಟಕಧಮರನ್ನು ಚಾಕಚಕ್ಯತೆಯ ತೋರಿ /
ಏಕಚಣದಿ ಮದ ಮರ್ಧಿಸಿದ ಲೋಕಪಾಲನ /
ಸಕಳ ಜೀವಕುಸಿರು ನೀಡಿ ಭಕುತರಾತ್ಮದೊಳಗೆ ಕೂಡಿ /
ಚಕಿತಲೀಲೆ ತೋರಿ ಜನುಮ ಮುಕುತಿಗೊಳಿಪನ //೨//

ಧರಣಿ ಮೇಲೆ ಪಾಪಕೂಪ ತುಂಬಿ ತುಳುಕಿ ಹರಿಯುವಾಗ /
ಶರಣ ಸಂತರನ್ನು ಸೃಜಿಸಿ ಪೊರೆದ ದೇವನ /
ಕರಣ ಕಾಯ ಶುದ್ಧದಿಂದ ಶರಣು ಬಂದ ಭಕುತವೃಂದ /
ಸ್ಮರಣೆಗೊಲಿದು ಅನವರತ ಪೊರೆವ ಈಶನ //೩//
– ಗುರುನಾಥ ಬೋರಗಿ

Advertisements

One response

  1. maanyare, nimma kavanagalannu Oduttiddare. neevu huttu kavigalaagirabahudu. summaru 13 vayassinalle ee reetiya kavana srustisittiddeeri endare. neevu uttama kavigalaaguttiremba baravase ide. avakaasha sigabEkaste. neevu obba hamsa lekha agabahudu. devaru nimage uttama maarga torisi. kannada chitra rangadalli viraajisuvantaagali Ashisuttene. vandanegalodane.

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: