ಭಾಗ್ಯದ ಲಕ್ಷ್ಮೀ ಬಾರಮ್ಮ !

ಭಾಗ್ಯದ ಲಕ್ಷ್ಮೀ ಬಾರಮ್ಮ !
ನಮ್ಮಮ್ಮ ನೀ ಸೌ !
ಭಾಗ್ಯದ ಲಕ್ಷ್ಮೀ ಬಾರಮ್ಮ !!ಪ!!

ಗೆಜ್ಜೆ ಕಾಲ್ಗಳ ಧ್ವನಿಯ

ಮಾಡುತ ! ಹೆಜ್ಜೆಯ ಮೇಲೆ 
ಹೆಜ್ಜೆಯನಿಕ್ಕುತ ! ಸಜ್ಜನ
ಸಾಧು ಪೂಜೆಯ ವೇಳೆಗೆ !
ಮಜ್ಜಿಗೆಯೊಳಗಿನ ಬೆಣ್ಣೆಯಂತೆ !!1!!

ಕನಕವೃಷ್ಠಿಯ ಕರೆಯುತ
ಬಾರೆ ! ಮನಕೆ ಮಾನವ
ಸಿದ್ಧಿಯ ತೋರೆ !! ದಿನಕರ
ಕೋಟಿತೇಜದಿ ಹೊಳೆವ !
ಜನಕರಾಯನ ಕುಮಾರಿ
ಬೇಗ !!2!!

ಅತ್ತಿತ್ತಗಲದೆ ಭಕ್ತರ
ಮನೆಯಲಿ ! ನಿತ್ಯ ಮಹೋತ್ಸವ ! ನಿತ್ಯ
ಸುಮಂಗಳ !! ಸತ್ಯವ
ತೋರುವ ಸಾಧುಸಜ್ಜನರ !
ಚಿತ್ತದಿ ಹೊಳೆವ ಪುತ್ಥಳಿ
ಬೊಂಬೆ !!3!!

ಸಂಖ್ಯೆಯಿಲ್ಲದ ಭಾಗ್ಯವ
ಕೊಟ್ಟು ! ಕಂಕಣ ಕೈಯ
ತಿರುವುತ ಬಾರೆ !!
ಕುಂಕುಮಾಂಕಿತೆ ಪಂಕಜಲೋಚನೆ
ವೆಂಕಟರಮಣನ ಬಿಂಕದ
ರಾಣಿ !!4!!

ಸಕ್ಕರೆ ತುಪ್ಪದ ಕಾಲುವೆ !
ಹರಿಸಿ ಶುಕ್ರವಾರದ ಪೂಜೆಯ
ವೇಳೆಗೆ ! ಅಕ್ಕರೆವುಳ್ಳ ಅಳಗಿರಿ
ರಂಗನ ! ಚೊಕ್ಕ
ಪುರಂದರವಿಠಲನ ರಾಣಿ !!5!!

ಭಾಗ್ಯದ ಲಕ್ಷ್ಮೀ ಬಾರಮ್ಮ !
ನಮ್ಮಮ್ಮ ನೀ ಸೌ !
ಭಾಗ್ಯದ ಲಕ್ಷ್ಮೀ ಬಾರಮ್ಮ !!ಪ!!
-ಪುರಂದರ ದಾಸರು
ಸಂಗ್ರಹ: ಬಸವರಾಜ ಪಾಟೀಲ್ ನೊಳಂಬ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: