ಮನದಲ್ಲಿ ಉಳಿದೇಬಿಟ್ಟಳು ಮಂಡೋದರಿ

ಅವಳು ಯಾಕೋ ಈವತ್ತು ನನ್ನ ಬಿಡಲೇ ಇಲ್ಲ ..ನಿನ್ನ ಬಳಿ ಎಲ್ಲ ಹೇಳಲೇ ಬೇಕು ಅಂತ ಹಠ ಹಿಡಿದು ಕುಳಿತೆ ಬಿಟ್ಟಳು…..ನನ್ನ ಮನದ ಒಳಹೊರಗು..ಗುಟ್ಟು,..ಬಯಕೆ,..ನೋವು …ನೀ ಕೇಳಲೇ ಬೇಕು ಎಂಬಂತೆ ಪಟ್ಟು ಹಿಡಿದಳು…ಅಷ್ಟು ಸುಲಭವಲ್ಲ ಮನವ ಬಿಚ್ಚಿಡೋದು ಅಂದ್ರೆ..ಅದೂ ಎಲೆ ಮರೆಯ ಕಾಯಂತೆ ಉಳಿದ ಅವಳ ಮಾತು …ಒಮ್ಮೆ ನೀವೇ ಕೇಳಿ ಬಿಡಿ….

‘ಅರಮನೆಯಂತ ಮನೆ…ಮನಮೆಚ್ಚಿ ಕೈ ಹಿಡಿದ ಪತಿ…ಚಿನ್ನದಂತ ಮಗ ..ಬದುಕು ಸುಂದರವಾಗಿತ್ತು ಕಣೆ….ಎಷ್ಟು ಚೆಂದ ಅಂತೀಯ……ಬರೀ ಪ್ರೀತಿ. ಅದೊಂದು ದಿನ ನನ್ನವನು ಅವಳ ‘ಹೊತ್ತು’ ತಂದ ದಿನ…ಇದೆಂತ ಭಾವನೆ ಎಂದು ಹೇಳುವುದಕ್ಕೆ ಗೊತ್ತಾಗದಂತೆ… ಮನ ಅದುರಿದಂತೆ ಅನಿಸಿದ್ದು ಸುಳ್ಳಲ್ಲ… ನನ್ನಲ್ಲಿ ಹುಟ್ಟಿದ್ದು ಮತ್ಸರವೇ..??ಕ್ರೋಧವೆ..? …ನೋವೆ..?? ಏನೋ ಗೊತ್ತಿಲ್ಲ…ನನಗೆ ಗೊತ್ತು ನಾನು ಅವಳಿಗಿಂತ ಸುಂದರಿ.. ಒಬ್ಬ ಸತಿಯಾಗಿ ನೀಡಬಹುದಾದ ಎಲ್ಲವ ನೀಡಿದ್ದೇನೆ ನಾ ಅವನಿಗೆ … ದೈಹಿಕವಾಗಿ, ಮಾನಸಿಕವಾಗಿ ಅವನ ಅಗತ್ಯಗಳನೆಲ್ಲ ಪೂರೈಸಿದ್ದೇನೆ ..ಮತ್ತೇನು ಅಗತ್ಯ ಕಂಡ ಅವ ಅವಳಲ್ಲಿ… ನೀನೆ ಹೇಳೇ..? ‘ ಅವಳು ಕೇಳಿದ ರೀತಿಗೆ ..ಕಣ್ಣಂಚಿನಲ್ಲಿ ಮೂಡಿದ ಹನಿಗೆ ಉತ್ತರ ಹೊಳೆಯಲಿಲ್ಲ….ನನ್ನ ಕಣ್ಣ ತುದಿಯು ಹನಿತುಂಬಿತೆ??

ಗಮನಿಸುವ ಮೊದಲೇ ಮತ್ತೆ ಹೇಳಿದಳು “ಅಡುಗೆ ಮನೆಯಲ್ಲಿ ಇದ್ದೆ ನಾನು..ಅಲ್ಲಿಗೇ ಬಂದ..’ನಾ ಬಂದ ಒಡನೆ ಬಾಗಿಲ ಬಳಿ ಬರುವ ನೀ ಇಂದೇಕೆ ಬರಲಿಲ್ಲ? ನನ್ನ ದೂರ ಮಾಡುತ್ತಿರುವೆಯ??’ ಅಂದ…’ಇಲ್ಲ ನನ್ನ ದೊರೆ..ಯಾಕೋ ದೇಹ ಮನಸು ಜಡಗಟ್ಟಿದಂತಾಗಿದೆ ‘ ಎಂದೆ..ಮತ್ತದೇ ಪ್ರೇಮ ಸೂಸುವ ದನಿ ..ನೋಟ…”ಏಕೆ ಎಲ್ಲಿಯಾದರೂ ಹೋಗಬೇಕಿದ್ದರೆ ಹೇಳು ಏನಾದ್ರೂ ಬೇಕಿದ್ರೆ ಕೇಳು” ಅಂದ…”ಇದು ಮನದ ನೋವು ಗೆಳೆಯ…ನೀ ಅವಳ ಕರೆ ತಂದಾಗಿನಿಂದ ಏನೋ ತಳಮಳ.. ಮತ್ಸರ ಅನ್ನಲು ನಮ್ಮಿಬ್ಬರಿಗೆ ಹೋಲಿಕೆಯೇ ಇಲ್ಲ…ಅವಳು ಅವಳೇ ನಾನು ನಾನೇ…ಆಕೆ ಒಲಿದು ಬಂದ ಹೆಣ್ಣಲ್ಲ..ಆಕೆ ಪರಸತಿ.. ಅವಳ ಸ್ಥಾನದಲ್ಲಿ ನನ್ನ ಊಹಿಸಿಕೊಂಡು ನೋಡು…ನನ್ನಲ್ಲಿ ಇಲ್ಲದ್ದ ಏನು ಕಂಡೆ ನೀ ಅವಳಲ್ಲಿ…ಅವಳ ಹಿಂದಿರುಗಿಸಿ ಕಳುಹಿಸು…ಹಂಚಿಕೊಳ್ಳಲಾಗದ ಹಂಚಿಕೊಳ್ಳಬಾರದ ನಿನ್ನನ್ನು ಹಂಚಿಕೊಳ್ಳಲು ನನ್ನಿಂದಾಗದು … ನಿನ್ನ ಕಳೆದುಕೊಳ್ಳುವ ನನ್ನ ಭಯ ದೂರ ಮಾಡು…”ಎಂದೆ ..ನನ್ನ ಎಲ್ಲಾ ಮಾತು ಕೇಳಿದ ..ಕೇಳುವವರೆಗೂ ಮೊಗದ ತುಂಬಾ ನೂರು ಭಾವನೆಗಳು ಹರಿದಾಡಿದವು…ಕೊನೆಗೂ ಅವನ ಕಣ್ಣಲ್ಲಿ ಉಳಿದ್ದಿದ್ದು ಬರಿ ಛಲ… ನನ್ನ ಮೇಲೆ ಅದಮ್ಯ ಪ್ರೀತಿ ಅಷ್ಟೇ..’ನೀನು ನನ್ನ ಮೊದಲ ಪ್ರೀತಿ ಗೆಳತಿ…ನಿನ್ನ ಸ್ಥಾನ ನಿನ್ನದೇ … ‘ಅಂದ ನಿಮಿಷಗಳ ಕಾಲ ತಬ್ಬಿ ನಿಂತ ನೆತ್ತಿಗೊಂದು ಹೂ ಮುತ್ತನಿತ್ತ …ಹೊರಟೆ ಬಿಟ್ಟ….ಅದೇ ಕೊನೆ ಕಣೆ….ಮತ್ತೆ ನಾನಾವನ ಕಂಡಿದ್ದು ರಾಮನ ಕೈಲಿ ಹತನಾದ ಮೇಲಷ್ಟೇ… ತನ್ನ ಧರ್ಮಪತ್ನಿ ಸೀತೆಯ ರಾಮ ಕರೆದೊಯ್ಯ್ದ …ನಾನು ಇಲ್ಲೇ ಮತ್ತೊಮೆ ಉಳಿದು ಹೋದೆ ….ನನ್ನದಲ್ಲದ ತಪ್ಪಿಗೆ…ಒಬ್ಬಂಟಿಯಾಗಿ….ಎಲೆ ಮರೆಯ ಕಾಯಂತೆ….ಕಾಣದಂತೆ…ನೀನೆ ಹೇಳು ಗೆಳತಿ ಇದರಲ್ಲಿ ನನ್ನ ತಪ್ಪೇನು ?’ ಅಂದಳು…ಅವಳು ಪರಿಹಾರ ಕೇಳಿದಳೋ ..ಸಾಂತ್ವಾನ ಕೇಳಿದಳೋ,..ದುಖ ಹಂಚಿ ಕೊಂಡಳೋ….ಗೊತ್ತಿಲ್ಲ …ಆದರೆ ಮನದಲ್ಲಿ ಉಳಿದೇಬಿಟ್ಟಳು ಮಂಡೋದರಿ……ಯಾರಿಗೂ ಕಾಣದಂತೆ..ಕೇಳದಂತೆ…
Advertisements

One response

  1. ತುಂಬಾ ತುಂಬಾ ಕಾಡಿಸಿತು ಮಂಡೋದರಿಯ ಪ್ರೆಶ್ನೆ

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: