ತಾಳಿ ಕಟ್ಟಲು ಮಾತ್ರ ಬೇಕು, ಹೊಡೆಯಲು ಬೇಡವೇ? ಬೀಚಿ ಹಾಸ್ಯ -2

ಹೆಂಡಂದಿರನ್ನು ಏಕೆ ಹೊಡೆಯುತ್ತೇವೆ… ಯಾರಾದರೂ ತಪ್ಪು ಮಾಡಿದರೇ ಹೊಡೆಯುತ್ತಾರೆ, ನಿಷ್ಕಾರಣವಾಗಿ ಕೈ ಹಿಡಿದವಳ ಮೇಲೆ ಯಾರೂ ಕೈ ಮಾಡುವುದಿಲ್ಲ. ಅಹುದು, ಎಲ್ಲರೂ ಸಕಾರಣವಾಗಿಯೇ ಹೊಡೆಯುವುದು.

ಎಲೆಯಲ್ಲಿ ಎಡಗಡೆ ಹಾಕಬೇಕಿದ್ದ ಉಪ್ಪನ್ನು ಬಲಗಡೆ ಹಾಕುವುದು ಏನು ಸಾಮಾನ್ಯ ಅಪರಾಧವೇ? ಸಾರನ್ನು ಬಡಿಸುವಾಗಿ ಅದು ಹರಿದು ಪಲ್ಲೆಯಲ್ಲಿ ಸೇರಿದರೆ ಕ್ಷಮಿಸಲು ಸಾಧ್ಯವೇ? ಕಾಫಿ ತಡವಾದಾಗ ಹೊಡೆಯದೆ ಇರಲು ಬರುತ್ತದೆಯೇ? ಮೊದಲು ಮೊಸರು ನೀಡಿ ಆ ಮೇಲೆ ಹಾಲು ನೀಡುವ ಬದಲು ಮೊದಲೇ ಹಾಲು ನೀಡಿಬಿಟ್ಟರೆ ಕೆನ್ನೆಗೆ ತೀಡಿ ಕೊಡದಿದ್ದರೆ ಹೇಗೆ? ಅಜಾಗರೂಕತೆಯಿಂದ ದೀಪದ ಗ್ಲಾಸನ್ನಾಗಲಿ, ತೊಳೆಯುವಾಗ ಗಾಜಿನ ಸಾಮಾನುಗಳನ್ನಾಗಲಿ ಒಡೆದಾಗಲೂ ಅವರಿಗೆ ಏಟುಗಳು ಬೀಳಬೇಡವೇ? ಸತಿದೇವನು ಹೊಡೆದದ್ದನ್ನು ಅವರಿವರ ಮುಂದೆ ತಾಯಿ, ಅಕ್ಕ-ತಂಗಿಯರ ಮುಂದೆಯೇ ಆಗಲಿ ಹೇಳಿಕೊಂಡರೆ ಪುನಃ ಹೊಡೆಯಬೇಕೋ ಬೇಡವೋ? ಹೊಡೆಯುವಾಗಿ ಕೂಗಿ ಚೀರಿ ಅತ್ತು ಗಲಾಟೆ ಮಾಡಿದರೆ ಏಕೆ ಹೆಚ್ಚು ಹೊಡೆಯಬಾರದು? ಹೊಡೆದಾಗಲೂ ಅಳದೆ ಸುಮ್ಮನಿದ್ದರೆ ಕೊನೆಗೆ ಅಳುವವರೆಗಾದರೂ ಹೊಡೆಯದಿದ್ದರೆ ಹೇಗೆ? ಹೇಳಲು ಬಾರದೆ ಹೊಟ್ಟೆನೋವಿನಿಂದಲೋ ಕಿವಿ ಶೂಲೆಯಿಂದಲೋ ಕಿರಿಚಿಕೊಳ್ಳುವ ಮೂರು ತಿಂಗಳ ಮಗುವನ್ನು ಸಮಾಧಾನಮಾಡಲು ಬಾರದ ಹೆಂಡತಿಯನ್ನು ಎಷ್ಟು ಬಾರಿ ಹೊಡೆದರೂ ಕಡಿಮೆಯೇ. ಕೈಯಲ್ಲಿ ಕಾಸು ಇಲ್ಲದಾಗ ಮನೆಯಲ್ಲಿ ಅಕ್ಕಿ ಇಲ್ಲ ಎಂಬ ಹೆಂಡತಿಯನ್ನು ಹೊಡೆಯದೆ ಗತ್ಯಂತರವಿದೆಯೇ? ಬಜಾರದಲ್ಲಿ ಬೆಲ್ಲ ದೊರೆಯದಿದ್ದರೆ, ಆಫೀಸಿನಲ್ಲಿ ಆಟ ಸಾಗದಿದ್ದರೆ, ಮಲಗಿದಾಗ ತಿಗಣಿ ಕಡೆದರೆ, ಮಗನು ಶಾಲೆಯಲ್ಲಿ ನಪಾಸಾದರೆ, ಮಳೆಯಾಗಿ ರಸ್ತೆಯಲ್ಲಿ ಕೆಸರಾದರೆ, ಸಾಲ ಕೊಟ್ಟವವರು ಕಾಟ ಕೊಟ್ಟರೆ, ತನ್ನ ಲೇಖನವನ್ನು ಸಂಪಾದಕರು ಸ್ವೀಕರಿಸಿ ಹಣ ಕಳಿಸದಿದ್ದರೆ, ಗಂಡನೆಂಬ ಸಾಧು ಪ್ರಾಣಿಯು ತನ್ನ ಹೆಂಡತಿಯನ್ನಲ್ಲದೆ ಬೇರಾರನ್ನು ಹೊಡೆಯಲು ಸಾಧ್ಯ? ಯಾರೂ ನಿಷ್ಕಾರಣವಾಗಿ ಹೊಡೆಯುವುದಿಲ್ಲ. ತಾನು ಅವಳ ಗಂಡನೆಂಬುದೇ ಮೊದಲ ಕಾರಣ! ಹೊಡೆಯುವ ಗಂಡನನ್ನು ಅನ್ಯಾಯವಾಗಿ ದೂರುವ ಹೆಂಡಂದಿರು ಒಂದು ವೇಳೆ ತಾವೇ ಗಂಡಂದಿರಾಗಿದ್ದರೆ ಬಿಡುತ್ತಿದ್ದರೇ?

ಗಂಡ ಹೆಂಡತಿಯನ್ನು ಸ್ವಂತ ಬುದ್ದಿಯಿಂದ ಹೊಡೆಯುವಷ್ಟು ಜಾಣರಲ್ಲವಂತೆ, ಹೆಂಡತಿಯ ತಾಯಿಯ ಮೇಲಿನ ಮಾತೃಭಕ್ತಿಯಿಂದಲೋ, ಶ್ರೀರಾಮನಂತೆ ಪಿತೃಪರಿಪಾಲನೆಗಾಗಿಯೋ ಹೊಡೆಯುತ್ತಾರೆ. ಇಬ್ಬರು ಹೆಂಡತಿಯರಿದ್ದರಂತೂ ಅವಳ ಚಾಡಿ ಕೇಳಿ ಇವಳನ್ನು, ಇವಳ ಚಾಡಿ ಕೇಳಿ ಅವಳನ್ನು, ಎರಡೂ ಇಲ್ಲದಿದ್ದರೆ ಮಕ್ಕಳ ಚಾಡಿ ಕೇಳಿ ಇಬ್ಬರು ಹೆಂಡಿರನ್ನೂ ಹೆಚ್ಚು ಕಮ್ಮಿ ಅನ್ನದೇ ನಿಷ್ಪಕ್ಷಪಾತವಾಗಿ ಹೊಡೆಯುತ್ತಾನೆ. ಇಲ್ಲವೆಂದರೆ ಸುತ್ತಮುತ್ತಲಿನ ಜನರಾದರೂ ಚಾಡಿ ಹೇಳಿ ಹೊಡೆಸುತ್ತಾರೆ.
-ಸಂಗ್ರಹ : ಮಂಜುನಾಥರೆಡ್ಡಿ

Advertisements

2 responses

  1. ಮಾನ್ಯರೇ, ಮಾನ್ಯ ಬಿ.ಚಿ ಯವರು ಆಗ ಬರೆದರು. ಆಗಿನ ಹೆಂದದಿಯರು ಸಹ ಹೊಡೆಯದಿದ್ದರೆ ಅವನೊಬ್ಬ ಗಂಡನ ಎನ್ನುತ್ತಿದ್ದರು. ಅದೊಂದು ಪ್ರತಿಸ್ತೆಯ ವಿಷಯವಾಗಿತ್ತು. ಈಗ ಐ.ಪಿ.ಸಿ.೪೯೮-ಎ ಕಾನೂನು ಬಂದಿರುವುದರಿಂದ, ಏನು ಮಾಡಲು ಸಾದ್ಯವಿಲ್ಲ. ಗಂಡನಂಟು ಹೊಡೆಯುವಂತಿಲ್ಲ. ಹೆಂಡತಿ ಹೊಡೆದರೂ ಹೇಳಿಕೊಳ್ಳುವಂತಿಲ್ಲ. ಪ್ರತಿಷ್ಟೆಯ ಪ್ರಸ್ನೆ ಅಲ್ಲವೇ?

  2. ಹೌದು ಈ ಸೆಕ್ಷನ್ನುಗಳು ಪರೋಕ್ಷವಾಗಿ ಗಂಡಂದಿರನ್ನು ತಿರುಗಿ ಹೊಡಯೋಕೆ ಪ್ರೇರೇಪಿಸುವಂತಿದೆಯಲ್ಲವೇ

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: