ತಮಸೋಮಾ ಜ್ಯೋತಿರ್ಗಮಯ ಭಾಗ-1

ಸೂರ್ಯ ಮುಳುಗಿ ಕತ್ತಲು ಆವರಿಸುವ ಹೊತ್ತಿನಲ್ಲಿ ಮನೆಯ ಒಡತಿ ಅಥವಾ ಮನೆಯ ಹೆಣ್ಣು ಮಗಳು ದೇವರೆದುರು ದೀಪವನ್ನಿಟ್ಟು , ಮೂರು ಬಾರಿ ಶಂಖ ಊದಿ , ತುಳಸಿಯಲ್ಲೊಂದು ದೀಪವನ್ನಿಟ್ಟು ಕನಿಷ್ಟ ಮೂರು ಪ್ರದಕ್ಷಿಣೆಯನ್ನಾದರೂ ಹಾಕಿ ದೇವರ ಮಂಟಪದೆದುರು ಕೂತು ಒಂದೆರಡು ಭಜನೆ ಹೇಳೋದು ಹಿಂದೂ ಧರ್ಮದ ದಿನ ನಿತ್ಯದ ಆಚರಣೆ ಹಾಗಂತ ಸಂಜೆಗೆ ಮಾತ್ರ ದೀಪ ಇಡುತ್ತಾರೆ ಅಂತಲ್ಲ ಬೆಳಗಿನ ಹೊತ್ತಿನಲ್ಲೂ ದೇವರಿಗೆ ದೀಪ ಹಚ್ಚುತ್ತಾರೆ… ಆದರೆ ಈಗ ಅದೆಷ್ಟು ಜನ ಇದರ ಪಾಲನೆ ಮಾಡುತ್ತಾರೋ ಹೇಳೋದು ಕಷ್ಟ ( ನಮ್ಮ ಹಳ್ಳಿ ಕಡೆಯಲ್ಲೆಲ್ಲಾ ಈಗಲೂ ಇದು ಚಾಲ್ತಿಯಲ್ಲಿದೆ ಅನ್ನೋದು ಮನಸ್ಸಿಗೆ ಸಮಾಧಾನ ಕೊಡೋ ವಿಷಯ…) ಯಾವಾಗ ಈ ಕರೆಂಟು ಬಂದು, ಗುಂಡಿ ಒತ್ತಿದೊಡನೇ ಮನೆಯೆಲ್ಲಾ ಪ್ರಕಾಶಮಯವಾಗತೊಡಗಿತೋ, ಯಾವಾಗ ಈ ಮೂರ್ಖರ ಪೆಟ್ಟಿಗೆ ಮನೆ ಮನೆಯೊಳಗೆ ಕಾಲಿರಿಸಿತೋ.. ಆವಾಗಿನಿಂದ ಈ ದೀಪಗಳು ನಂದಿ ಹೋಯಿತು ಅನ್ನಬಹುದೇನೋ…ಅಪರೂಪಕ್ಕೆ ಎಂಬಂತೆ ಈ ದೀಪಗಳು ವಿಶೇಷ ದಿನದಲ್ಲಿನ ಪೂಜಾ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಿದೆ…. ಸಿಟಿಯಲ್ಲಂತೂ ಈ ದೀಪಗಳೂ ಕಾಣಿಸಲಿಕ್ಕೇ ಇಲ್ಲ ಬಿಡಿ… ಪವರ್ ಕಟ್ಟೂ ವಿರಳ, ಇದ್ದರೂ ಎಲ್ಲರ ಮನೆಯಲ್ಲೂ ಇನ್ವರ್ಟರ್ ಇದ್ದೇ ಇದೆ… ಅಂತೂ ಕಷ್ಟಕ್ಕೆ ನೆನಪಿಸಿಕೊಂಡರೆ ವರ್ಷದಲ್ಲಿ ಒಂದು ಸಾರಿ ಅದು ದೀಪಾವಳಿಗೆ(ಕೆಲವೆಡೆ ದೀಪಾವಳಿಗೂ ಕ್ಯಾಂಡಲನ್ನೇ ಉರಿಸುವುದನ್ನು ನೋಡಿದಾಗ ಮನಸ್ಸಿಗೆ ತುಂಬಾನೆ ಬೇಸರವಾಗುತ್ತೆ).. ಯಾಕೆ ಈ ದೀಪ ಹಿಂದೂಗಳಿಗೆ ವಿಶೇಷ ಅನ್ನೋದು ಹೆಚ್ಚಿನವರಿಗೆ ಗೊತ್ತೇ ಇಲ್ಲ … ನನಗೂ ಅಷ್ಟಾಗಿ ಗೊತ್ತಿರಲಿಲ್ಲ… ಇತ್ತೀಚಿಗೆ ರಾಹುಲ್ ಬೋಸ್ ಅವರ ಕುರಿತು ಬರೆಯುವಾಗ ” ದೀಪ ಬೆಳಗಿಸಿ” ಕಾರ್ಯಕ್ರಮದ ಉಧ್ಘಾಟನೆ ಯಾಕೆ ಮಾಡಬೇಕು ? ಎಂದು ಅವರು ಕೇಳಿದ ಪ್ರಶ್ನೆಗೆ ಉತ್ತರ ಹುಡುಕುತ್ತಾ ಪುಸ್ತಕಗಳನ್ನು ತಡಕಾಡಿದಾಗ ನನ್ನ ಕೈಗೆ ಸಿಕ್ಕಿದ್ದು “ಶ್ರೀಕಾಂತ್ ವಿ. ಬಲ್ಲಾಳ್” ಅವರು ಬರೆದಿರೋ “ದೀಪ ಸಂಪುಟ” ಅನ್ನೋ ಪುಸ್ತಕ. ದೀಪಗಳ ಬಗೆಗೆ ಉತ್ತಮ ಮಾಹಿತಿ ಸಂಗ್ರಹಿಸಿ ಕೊಟ್ಟಿರೋ ಈ ಪುಸ್ತಕದಲ್ಲಿ ದೀಪಕ್ಕಿರುವ ಪೌರಾಣಿಕ ಮಹತ್ವವನ್ನು ಕಥೆಯ ರೂಪದಲ್ಲಿ ಈ ರೀತಿ ವಿವರಿಸುತ್ತಾರೆ…

ಶಿವ ಪಾರ್ವತಿಯರ ಮಿಲನಕ್ಕಾಗಿ ಮನ್ಮಥ ಶಿವನ ಮೇಲೇ ಪುಷ್ಪ ಬಾಣ ಪ್ರಯೋಗಿಸಿದಾಗ ಕೋಪಗೊಂಡ ಶಿವ ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ , ಅದರಿಂದ ಬಂದ ಬೆಂಕಿಯ ಜ್ವಾಲೆ ಮನ್ಮಥನನ್ನು ಸುಟ್ಟು ಜಗತ್ತನ್ನೇ ಸುಡುತ್ತಾ ಮುಂದೆ ಹೋಗುತ್ತಿರಲು ದೇವತೆಗಳೆಲ್ಲಾ ಹೆದರಿ ಜಗನ್ಮಾತೆಯನ್ನು ಪ್ರಾರ್ಥಿಸುತ್ತಾರೆ… ಆಗ ದೇವತೆಗಳ ಪ್ರಾರ್ಥನೆಗೆ ಒಲಿದ ಜಗನ್ಮಾತೆ ಶಕ್ತಿ ಎಂಬ ಜ್ವಾಲೆಯನ್ನು ಶಿವನ ಜ್ವಾಲೆಯೊಂದಿಗೆ ಸೇರಿಸಿ ಅದರ ಉಗ್ರತೆಯನ್ನು ಕಡಿಮೆಗೊಳಿಸಿದಾಗ ಅದು ಜ್ಯೋತಿ ರೂಪದಲ್ಲಿ ಉರಿಯಲಾರಂಭಿಸಿತಂತೆ… ಹೀಗೆ ಶಿವಶಕ್ತಿಯರೇ ದೀಪಗಳು ಎಂದು ಶಿವಪುರಾಣ ಹೇಳಿದೆ ಅನ್ನುತ್ತಾರೆ.

ಭಾಗ-2 ರಲ್ಲಿ ಮುಂದುವರೆದಿದೆ
—ಕೆ.ಗುರುಪ್ರಸಾದ್

Advertisements

One response

  1. ಮಾನ್ಯ ಗುರುಪ್ರಸಾದ್ ರವರೆ, ಪ್ರಸ್ತುತ ಲೇಖನಗಳು ಸೂಕ್ತ. ಬಹುತೇಕ ಈಗಿನ ಮಹಿಳಾ ಪೀಳಿಗೆ ಈ ಸಂಪ್ರದಾಯವನ್ನು ಬಿಟ್ಟುಬಿಟ್ಟಿದ್ದಾರೆ.ನೀವು ತಿಳಿಸಿರುವಂತೆ ಎಲ್ಲವೂ ವಿದ್ಯುತ್ ಮಯವಾಗಿರುವುದರಿಂದ ಮನೆಯಲ್ಲಿ ದೀಪಹಚ್ಚುವ ಸಂಪ್ರದಾಯ ಮಾಯವಾಗಿದೆ. ಮನೆಯಲ್ಲಿಯೇ, ಏಕೆ ದೇವಸ್ಥಾನಗಳಲ್ಲಿಯೂ ವಿದ್ಯುತ್ ದೀಪಗಳೇ ಕಾಣುತ್ತವೆ. ಒಳ್ಳೆಯ ಲೇಖನ ಇಂತಹ ಲೇಖನಗಳು ಹೆಚ್ಚಲಿ.

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: