ಭಾರತದರ್ಶನ -3

 

ಭಾರತವೆಂದರೆ,
ವಿದೇಶದಲ್ಲಿ ಧರ್ಮದ ಅಮೃತಧಾರೆ ಹರಿಸಿದ ಸ್ವಾಮಿ ವಿವೇಕಾನಂದ ತಾಯ್ನಾಡಿನಲ್ಲಿ ಇಳಿಯುತ್ತಿದ್ದಂತೆ ಮಣ್ಣಿನಲ್ಲಿ ಹೊರಳಾಡುತ್ತಾ ಆನಂದದ ತುತ್ತ ತುದಿಗೇರಿದರು. ಸ್ವರ್ಣಲಂಕೆಯ ವೈಭವದಿಂದ ವಿಚಲಿತಗೊಂಡ ಅನುಜ ಲಕ್ಷ್ಮಣನನ್ನು ಕಂಡ ಪ್ರಭು ಶ್ರೀರಾಮ “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದು ಕೊಂಡಾಡಿದ.

ನಾನೇ ಭಾರತ ಎಂದರು ರಮಣ ಮಹರ್ಷಿಗಳು. ಎನ್ನ ಪಾದಗಳೇ ಕನ್ಯಾಕುಮಾರಿ, ಹೃದಯವೇ ಇಂದ್ರಪ್ರಸ್ಥ(ದಿಲ್ಲಿ), ಶಿರವೇ ಕಾಶ್ಮೀರ, ಅಂಗಾಂಗಗಳು ಉಳಿದ ರಾಜ್ಯಗಳು, ಎಂದು ಅಡಿಯಿಂದ ಮುಡಿಯವರೆಗೆ ತಾಯಿ ಭಾರತಿಯನ್ನು ಆವಾಹನೆ ಮಾಡಿಬಿಟ್ಟರವರು.(ಅಣ್ಣ ಚಕ್ರವರ್ತಿ ಸೂಲಿಬೆಲೆ ಹೇಳುತ್ತಿರುತ್ತಾರೆ…ದಿಲ್ಲಿ ಎಂದರೆ ದಿಲ್ ಕಣ್ರೀ. ಅಲ್ಲಿ ಅಟ್ಯಾಕ್ ಆದರೆ ಹಾರ್ಟ್ ಅಟ್ಯಾಕ್ ಆದಂತೆ. ಮಂಡಿನೋವು ಅಂತ ಯಾರಾದರೂ ಅಂದರೆ ಕರ್ನಾಟಕಕ್ಕೇನೋ ಗ್ರಹಚಾರ ಕಾದಿದೆ ಅಂತ.)(ನಾವು ಕಾಶ್ಮೀರದರ್ಧ ಕಳೆದುಕೊಂಡಿದ್ದೇವೆ.ಅದಕ್ಕೆ ನಮ್ಮ ಬುಧ್ಧಿ ಬರಿದಾಗಿದೆ. ನಮ್ಮ ದೇಶಧ ಬಗ್ಗೆ ಏನೂ ಗೊತ್ತಿಲ್ಲ.)

“ಅಮ್ಮಾ ನಿನ್ನ ಸೇವೆಯೆಂದರೆ ಪ್ರಭು ಶ್ರೀರಾಮನ ಸೇವೆ. ನಿನ್ನಂತಹ ದೊಡ್ಡ ತಾಯಿಗೆ ನನ್ನಂತಹ ದಡ್ಡ ಮಗ ರಕ್ತವನ್ನಲ್ಲದೆ ಬೇರೇನನ್ನು ಕೊಡಲು ಸಾಧ್ಯ” ಎಂದು ರುಧಿರ ತರ್ಪಣ ಮಾಡಿದ ಧಿಂಗ್ರಾ. “ಅಮ್ಮ ನಿನಗಾಗಿ ನನ್ನ ಬರವಣಿಗೆಯನ್ನು ಮೀಸಲಿರಿಸಿದೆ. ನನ್ನ ಕಾವ್ಯಕ್ಕೆ ನೀನೆ ಪ್ರೇರಣೆಯಾದೆ. ನಿನ್ನ ಸೇವೆಯೆಂದರೆ ಅದು ದೇವದೇವತೆಗಳನ್ನು ಪ್ರಸನ್ನಗೊಳಿಸುವ ಕಾರ್ಯ.” ಎಂದು ತನ್ನ ಕಾವ್ಯರಸಧಾರೆಯಿಂದ ತಾಯಿಯ ಅಭಿಷೇಕ ಮಾಡಿ ಕ್ರಾಂತಿಯಜ್ಞದ ನೇತಾರನಾಗಿ ತನ್ನನ್ನೂ ತನ್ನೆಲ್ಲ ಬಂಧು ಬಳಗವನ್ನು ಕ್ರಾಂತಿ ಯಜ್ಞಕ್ಕೆ ತಳ್ಳಿದರು ವೀರ ಸಾವರ್ಕರ್. ಅವರ ಮಾತು ಕೇಳಿ “ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ।
ಪಿತೃಭೂಪುಣ್ಯಭೂಶ್ಚೈವ ಸವೈ ಹಿಂದೂ ರಿತಿಸ್ಮೃತಃ”- ಯಾವನು ಸಿಂಧುವಿಂದ ಸುತ್ತುವರಿದ ಭವ್ಯ ಭಾರತವನ್ನು ತನ್ನ ಕರ್ಮಭೂಮಿ ಯಾ ಪಿತೃ ಯಾ ಮಾತೃಭೂಮಿಯಾಗಿ ಪರಿಗಣಿಸುತ್ತಾನೋ ಆತ ಎಲ್ಲೇ ಇರಲಿ ಆತ ಹಿಂದೂ!
-ಮುಂದುವರಿಯುವುದು
-ರಾಜೇಶ್ ರಾವ್

 

 

 

 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: