Oh My God… ನನ್ನೊಳಗಿನ ಆಸ್ತಿಕನಿಗೆ ಒಂದಷ್ಟು ಗೊಂದಲಗಳು

OH MY GOD ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಸಿನಿಮಾವಿದು. ಬಹುತೇಕ ಎಲ್ಲರೂ ನೋಡಿದ್ದಾರೇನೋ… ಬಿಡುಗಡೆಗೆ ಮುನ್ನವೇ ಒಂದಷ್ಟು ಕುತೂಹಲವನ್ನು ಸೃಷ್ಟಿ ಮಾಡಿತ್ತು. ಸಿನಿಮಾ ನೋಡಿ ಬಂದ ಗೆಳೆಯರು ತುಂಬಾನೇ ಚೆನ್ನಾಗಿದೆ ಅಂತ ಅಂದಾಗ ನನ್ನೊಳಗಿನ ಕಾತರ ಅತಿಯಾಗತೊಡಗಿತ್ತು. ಹಾಗೂ ಹೀಗೂ ಸಮಯ ಹೊಂದಿಸಿ ನೋಡೆ ಬಿಟ್ಟೆ… ಹಾ ಚೆನ್ನಾಗೇ ಇದೆ , ಆದರೂ ನಾಸ್ತಿಕರಿಗೂ ಆಸ್ತಿಕರಿಗೂ ಒಂದಷ್ಟು ಗೊಂದಲಗಳನ್ನು ತಂದಿಟ್ಟಿದೆಯೇನೋ ಅನ್ನಿಸಿತು …ಆದರೆ ಪ್ರತಿಯೊಬ್ಬನಲ್ಲೂ ದೇವರ ಬಗೆಗೆ ಸಕಾರಾತ್ಮಕವಾಗಿಯೋ ಅಥವಾ ನಕಾರಾತ್ಮಕವಾಗಿಯೋ ಯೋಚಿಸುವಂತೆ ಮಾಡುವುದಂತೂ ಸತ್ಯ. ಅದರ ಜೊತೆಗೆ ಮಠ ಮಂದಿರಗಳ ಬಗ್ಗೆ, ಸ್ವಾಮೀಜಿಗಳ ಬಗ್ಗೆ ತಾತ್ಸಾರದ ಭಾವನೆ ಮೂಡಿಸುವುದೇನೋ…

ಕಾಂಜೀ ಲಾಲ್ ಜೀ ಮೆಹ್ತಾ ಅನ್ನೋ ಗುಜರಾತಿ ವ್ಯಾಪಾರಿ, ದೇವರ ವಿಗ್ರಹಗಳನ್ನು ಮಾರೋ ವರ್ತಕ ಈ ಚಿತ್ರದ ಮುಖ್ಯ ಕಥಾ ಪಾತ್ರ. ಸಿನಿಮಾ ಆರಂಭಗೊಳ್ಳೋದು ಅವನಲ್ಲಿನ ಒಂದೊಂದೇ ಕೆಟ್ಟ ಗುಣಗಳ ಅನಾವರಣದ ಮೂಲಕ. ಹಣ ಸಂಪಾದನೆಗಾಗಿ ಆತ ಯಾವ ಮಾರ್ಗವನ್ನು ಬಳಸಲು ಹಿಂದೆ ಮುಂದೆ ನೋಡೋಲ್ಲ. ಖಾಲಿ ಬಾಟಲಿಗೆ ಟ್ಯಾಪ್ ನೀರು ತುಂಬಿಸಿ ಗಂಗಾಜಲ ಅಂತ ಮಾರೋದು, ಜನರ ಭಾವನೆಯನ್ನು ತನ್ನ ವ್ಯಾಪಾರವಾಗಿಸೋದು ಅವನಿಗೆ ಕರಗತ. ಪಕ್ಕಾ ನಾಸ್ತಿಕ. ದೇವರ ವಿಗ್ರಹಗಳೆಲ್ಲವೂ ಆತನಿಗೆ ಆದಾಯ ತಂದು ಕೊಡೋ ವಸ್ತುಗಳಷ್ಟೇ… ಆತ ಹೇಳೋದು ಅದನ್ನೆ ಎಲ್ಲಿಯವರೆಗೆ ದೇವರ ಮೇಲಿನ ನಂಬಿಕೆಗಳು ಜನರಲ್ಲಿರುತ್ತೋ ಅಲ್ಲಿವರೆಗೆ ನನ್ನ ವ್ಯಾಪಾರಕ್ಕೆ ಕುಂದು ಕೊರತೆನೇ ಇಲ್ಲ ಅಂತ. ಯಾವುದೋ ಉಚಿತ ಯಾತ್ರೆಯಲ್ಲಿ ಹೋಗಿ ದೇವರ ವಿಗ್ರಹಗಳನ್ನು ಕೊಂಡು ತರುತ್ತಾನೆ, ಗಂಗಾಜಲ ಎಂದು ವೈನ್ ಅನ್ನು ಎಲ್ಲರಿಗೂ ಕುಡಿಸುತ್ತಾನೆ ಮತ್ತು ಮೂರ್ತಿಗಳ ಬಗೆಗೆ ಸುಂದರ ಕಥೆ ಕಟ್ಟಿ ಭಕ್ತರಿಗೆ ಮೋಸ ಮಾಡಿ ಮಾರಾಟ ಮಾಡುವಂತಾದ್ದು ಆತನ ಲಾಭದಾಯಕ ವ್ಯಾಪಾರದ ಒಳಗುಟ್ಟು. ಆತನ ನಾಸ್ತಿಕತೆ ಎಲ್ಲಿಯವರೆಗೆ ಅಂದರೆ ತನ್ನ ಮಗನನ್ನು ಮೊಸರು ಕುಡಿಕೆಯಲ್ಲಿ ಭಾಗವಹಿಸೋದನ್ನು ತಪ್ಪಿಸುವುದಕ್ಕಾಗಿ ಸ್ವಾಮೀಜಿಯೊಬ್ಬರ ಹೆಸರು ಹೇಳಿ, ಭಗವಂತ ಇವತ್ತು ಬೆಣ್ಣೆ ತಿನ್ನುತ್ತಾನೆ….. ಎಲ್ಲರೂ ನಿಮ್ಮ ಮನೆಯ ಮೂರ್ತಿಗೆ ಇಲ್ಲವೆ ಹತ್ತಿರದ ಮೂರ್ತಿಗೆ ನೀವೆ ನಿಮ್ಮ ಕೈಯಾರೆ ತಿನ್ನಿಸಿ ಈ ಚಮತ್ಕಾರ ನಡೆಯೋದು ಬರಿಯ ಒಂದು ಘಂಟೆಯವರೆಗೆ ಮಾತ್ರ … ಅಂತ ಅಪಪ್ರಚಾರ ಮಾಡುತ್ತಾನೆ.( ವಿಚಿತ್ರ ಅಂದರೆ ಅವನ ಮಾತು ಕೇಳುತ್ತಿದ್ದಂತೆ ಜನ ಚೆಲ್ಲಾಪಿಲ್ಲಿ… ಯಾರೋ ಒಬ್ಬ ಅಪರಿಚಿತ ಸಂಘಟಕರ ಕಣ್ಣು ತಪ್ಪಿಸಿ ಸ್ಟೇಜ್ ಗೆ ಗೊತ್ತಾಗದಂತೆ ಹೋಗಿ ಈ ರೀತಿ ಅನೌನ್ಸ್ ಮಾಡೋದಿಕ್ಕೆ ಆಗೋದು ಮತ್ತು ಅದನ್ನು ತಟಕ್ಕನೆ ನಂಬಿ ಓಡೋ ಜನರು ಸಿನಿಮಾದಲ್ಲಿ ಮಾತ್ರ ಸಿಗೋಕೆ ಸಾಧ್ಯ…)ಆತನ ಈ ರೀತಿಯ ನಡೆಯಿಂದ ಅದೇನಾಗುತ್ತೋ ಹಠಾತ್ತಾಗಿ ಅಕಾಶದಲ್ಲಿ ಕಾರ್ಮೋಡಗಳುಒಟ್ಟಾಗಿ ಜೋರಾದ ಮಳೆ ಬಂದು ಈತನ ಅಂಗಡಿ ಬಿದ್ದು ಹೋಗುತ್ತೆ. ವಿಶೇಷ ಅಂದ್ರೆ ಇವನ ಅಂಗಡಿಗಿಂತಲೂ ದುರ್ಬಲ ಅಂಗಡಿಗಳಿದ್ದರೂ ಇವನ ಅಂಗಡಿ ಒಂದು ಮಾತ್ರ ಬಿದ್ದು ಬಿಡುತ್ತೆ. ಈತನಿಗೆ ಬುದ್ಧಿ ಕಲಿಸಲು ದೇವರೆ ಹೀಗೆ ಮಾಡಿದ್ದಾನೆ ಅನ್ನೋ ಥರ ಕಾಣಿಸುತ್ತೆ. ಹೆಂಡತಿ ಮಕ್ಕಳಿಗೆ ಮತ್ತು ಹತ್ತಿರದ ಸಂಭಂಧಿಗಳಿಗೆ ಗಾಬರಿಯಾದರೂ ಆತ ನಿಶ್ಚಿಂತ… ಕಾರಣ …. ಆತ ಮಾಡಿಸಿರೋ ಇನ್ಶೂರೆನ್ಸ್ ಪಾಲಿಸಿ. ಆದ್ರೆ ಆತನಿಗೆ ಅಘಾತವಾಗೋದು “Act of God” ಅನ್ನೋ ಕಂಡೀಷನ್ ಅನ್ನು ಮುಂದಿಟ್ಟು ಇನ್ಶೂರೆನ್ಸ್ ಕಂಪನಿ ಈತನ ಅರ್ಜಿಯನ್ನು ವಜಾ ಮಾಡಿದಾಗಲೇ (ಇಲ್ಲಿ ನಿರ್ದೇಶಕರು ಜನಸಾಮಾನ್ಯರು ಮಾಡೋ ತಪ್ಪನ್ನು ಚೆನ್ನಾಗಿ ತೋರಿಸಿದ್ದಾರೆ. ನಿಯಮಗಳನ್ನು ಓದದೇ ಸಹಿ ಹಾಕೋದು)…ಇತ್ತ ಆತನ ಭೂಮಿಯಲ್ಲಿ ಮೂರ್ತಿಗಳೆಲ್ಲ ಒಡೆದು ಹೋದ ಕಾರಣ ಆ ಭೂಮಿಯನ್ನು ಕೊಳ್ಳಲೂ ಯಾರೂ ಮುಂದೆ ಬರೋದಿಲ್ಲ… ಹೀಗೆ ಕಷ್ಟಗಳ ಮೇಲೆ ಕಷ್ಟಗಳು ಬಂದಾಗ ಆತನಿಗೆ ಹೊಸ ಯೋಚನೆ ಬರುತ್ತದೆ ಅದೇ…. “ದೇವರ ಮೇಲೆ ಕೇಸ್”…

ಕೇಸ್ ಹಾಕೋಕೆ ಯಾವುದೇ ವಕೀಲ ಒಪ್ಪದಿದ್ದಾಗ ಇವನಿಗೆ ಸಿಗೋದು “ಹನೀಫ್ ಖುರೇಷಿ” ಅನ್ನೊ ಅಂಗವಿಕಲ ಲಾಯರ್. ಆತ ಕಾಂಜೀ ಗೆ , ನೀನೆ ವಕಾಲತ್ತು ಮಾಡಬಹುದು ಅಂತ ಹೇಳಿ ಲೀಗಲ್ ನೋಟೀಸು ತಯಾರು ಮಾಡಿ ಕೊಡುತ್ತಾನೆ. ನೋಟೀಸು ಕೊಡೋದಾದ್ರೂ ಎಲ್ಲಿಗೆ … ಮಠ ಮಂದಿರಗಳಿಗೆ. ಬಹುಶಃ ಇಲ್ಲಿಂದ ನಿರ್ದೇಶಕರು ತಾವು ಹೇಳಬಯಸಿರೋ ವಿಷಯಗಳ ಆರಂಭವಾಗುತ್ತದೆ. ಚಿತ್ರದ ಆರಂಭದಲ್ಲಿ ಯಾವುದೇ ಧರ್ಮದ ಬಗೆಗೆ ಅವಹೇಳನ ಮಾಡೋ ಉದ್ದೇಶವಿಲ್ಲ ಅಂತ ಹೇಳಿಕೊಂಡರೂ ಹಿಂದೂ ಧರ್ಮವೇ ಅತಿಯಾಗಿ ಅಪಮಾನಕ್ಕೀಡಾಗಿರೋದು ಸ್ಪಷ್ಟವಾಗಿ ಕಾಣುತ್ತೆ. ಸದ್ಯಕ್ಕೆ ಆ ವಿಷಯವನ್ನು ಬದಿಗಿಡೋಣ.

ಚಿತ್ರದಲ್ಲಿ ಮುಂದೆ ಕಾಣಿಸೋದು ಒಂದಷ್ಟು ಜನ ಕಪಟ ಸನ್ಯಾಸಿಗಳು (ಸಾಮಾನ್ಯವಾಗಿ ಕಪಟ ಸನ್ಯಾಸಿಗಳು ಕೂಡ ಜನರನ್ನು ಆಕರ್ಷಿಸುವಂತೆಯೇ ವರ್ತಿಸುತ್ತಾರೆ, ಆದರೆ ಇಲ್ಲಿನ ಅವರ ವರ್ತನೆ ಸ್ವಲ್ಪ ವಿಪರೀತವಾಗಿ ತೋರಿಸಿದಂತೆ ನನಗನಿಸಿತು)… ಧರ್ಮದ ಹೆಸರಿನಲ್ಲಿ ಆಸ್ತಿಕರ ಹಣ ವಸೂಲಿ ಮಾಡುವಂತಾ ವ್ಯಕ್ತಿಗಳು. ಇವರೆಲ್ಲರೂ ಕಾಂಜೀ ಗೆ ಪ್ರತ್ಯುತ್ತರ ನೀಡೋಕೆ ಕೋರ್ಟಿಗೆ ಹಾಜರಾಗುತ್ತಾರೆ. ಕೋರ್ಟಿನಲ್ಲಿ ಎದುರು ಪಾರ್ಟಿ ಲಾಯರ್ ಈ ಕೇಸಿಗೆ ಅಸ್ತಿತ್ವವೇ ಇಲ್ಲ , ನಿಯಮ ನಿಬಂಧನೆ ನೋಡದೇ ಪಾಲಿಸಿಗೆ ಸಹಿ ಹಾಕಿದ್ದಾನೆ ಎಂದಾಗ ಕಾಂಜೀ ಮೊದಲು ಹೇಳೋದೇ ನನಗೂ ಕೇಸ್ ಹಾಕೋ ಮನಸ್ಸಿಲ್ಲ ನನಗೆ ಬೇಕಾಗಿರೋದು ಹಣ ಮಾತ್ರ ಕೊಟ್ಟು ಬಿಡಿ ಅನ್ನುತ್ತಾನೆ. ಸ್ವಾಮೀಜಿಗಳು ಯಾಕೆ ಕೊಡಬೇಕು ಅನ್ನೋ ವಾದಕ್ಕೆ ಕಾಂಜೀ ಯ ಉತ್ತರ, ಇನ್ಶೂರೆನ್ಸ್ ಕಂಪನಿಯವರು ಹೇಳಿದ್ದಾರೆ ನನಗಾದ ನಷ್ಟ ಭಗವಂತ ಮಾಡಿದ್ದು ಹಾಗಾಗಿ ಭಗವಂತನಲ್ಲಿ ನನ್ನ ಹಣ ಕೇಳೋದು ನನ್ನ ಹಕ್ಕು ಅಂತ. ( ಇಲ್ಲಿ ನನಗಾಗೋ ಗೊಂದಲ ಅದುವರೆಗೂ ದೇವರಿಲ್ಲ ಅನ್ನುತ್ತಿದ್ದವ, ದೇವರಿಂದ ನಷ್ಟವಾಗಿದೆ ಅಂತ ಯಾರೋ ಹೇಳಿದಾಗ ಹಠಾತ್ತಾಗಿ ದೇವರಿದ್ದಾನೆ ಅಂತ ನಂಬೋದು ಯಾಕೆ?) ಮುಂದೆ ಎದುರುಗಡೆ ಲಾಯರ್ ಮಂದಿರಗಳೇಕೆ ಹಣ ಕೊಡಬೇಕು ಇನ್ಶೂರೆನ್ಸ್ ಕಂಪೆನಿಗಳಿಗೆ ಪ್ರೀಮಿಯಮ್ ಕಟ್ಟುತ್ತೀರಾ ಮಂದಿರಗಳಲ್ಲೇನು ನೀವು ಹಣ ಕಟ್ಟುತ್ತೀರಾ ಅನ್ನುತ್ತಾರೆ. ಪಕ್ಕನೆ ಕಾಂಜೀ ದೇವಾಲಯಗಳಲ್ಲಿ ಮಾಡಿದ ಸೇವೆಗಳ ರಶೀದಿ ತೋರಿಸಿ ನಾನು ಹಣ ಕಟ್ಟಿದ್ದೇನೆ ಅನ್ನುತ್ತಾನೆ.( ಮತ್ತೊಂದು ಜಿಜ್ಞಾಸೆ ಹಣ ಕಟ್ಟಿದೊಡನೆ ಒಳ್ಳೆ ಫಲವನ್ನು ಬಯಸೋ ವ್ಯಕ್ತಿಗೆ ಕೆಟ್ಟದ್ದು ಮಾಡಿದಾಗ ಅದರ ಶಿಕ್ಷೆಯನ್ನು ಸ್ವೀಕರಿಸೋದಕ್ಕೂ ತಯಾರಾಗಿರಬೇಕಲ್ವಾ…ತಾನು ಮೋಸದಿಂದ ಗಂಗಾಜಲ ಮಾರಿದ್ದು, ಕಮ್ಮಿ ಬೆಲೆಗೆ ಮಾರಬೇಕಾಗಿದ್ದ ಮೂರ್ತಿಯನ್ನು ಸುಳ್ಳು ಹೇಳಿ ಜಾಸ್ತಿ ಬೆಲೆಗೆ ಮಾರಿದ್ದು ಇವುಗಳಿಗೆಲ್ಲ ಶಿಕ್ಷೆ ಅನುಭವಿಸಲು ಯಾಕೆ ತಯಾರಿಲ್ಲ?) ಇನ್ನೂ ಮುಂದುವರಿದು ದೇವಾಲಯವನ್ನು ಅಂಗಡಿಗಳೆನ್ನುವುದು, ಹಾಕಿದ ಕಾಣಿಕೆಯನ್ನು ಇನ್ವೆಸ್ಟ್ಮೆಂಟ್ ಅನ್ನೋದು, ಸ್ವಾಮೀಜಿಗಳನ್ನು ಸೇಲ್ಸ್-ಮೆನ್ ಅನ್ನೋದು ಹೀಗೆ ಕಾಂಜೀಯ ವಾದಸರಣಿ ಮುಂದುವರಿಯುತ್ತದೆ.( ಇಲ್ಲಿ ನಗು ತರಿಸುವಂತಾದ್ದು ಅಂದರೆ ಕಾಂಜೀಯ ವ್ಯಕ್ತಿತ್ವದಲ್ಲಿ ಆಗೋ ಬದಲಾವಣೆ, ಕೆಟ್ಟತನವೆಲ್ಲಾ ಮಾಯವಾಗಿ ಒಳ್ಳೆಯತನ ಅರಳಲಾರಂಭಿಸುತ್ತದೆ.

ಆತನ ಮಾತುಗಳು ನೋಡಿ… ಮಂದಿರದವರು ಹೇಳುತ್ತಾರೆ ಶ್ರದ್ಧೆಯಿಂದ ದಾನ ಮಾಡಿ , ದೇವರು ನಿಮ್ಮ ಕೈ ಬಿಡೋದಿಲ್ಲ… ಇನ್ಶೂರೆನ್ಸ್ ಕಂಪನಿಯವರು ಹೇಳುತ್ತಾರೆ ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಕಟ್ಟಿ, ನಾವು ನಿಮ್ಮ ಬಿಟ್ಟು ಹಾಕೋದಿಲ್ಲ. ನಾನು ಎರಡನ್ನೂ ಮಾಡಿದ್ದೇನೆ, ಆದರೆ ಈಗ ಇಬ್ಬರೂ ನನ್ನ ಪರವಾಗಿಲ್ಲ. ನನ್ನ ಹೆಂಡತಿ ಮಕ್ಕಳು ಬೀದಿಗೆ ಬರುತ್ತಾರೆ… ಎಂಥಾ ವಿಚಿತ್ರ ಅಲ್ವಾ ಮಂದಿರಗಳು ಹೇಳಿದ್ದು ಶ್ರದ್ಧೆಯಿಂದ “ದಾನ” ಮಾಡಿ ಎಂದು ಇನ್ವೆಸ್ಟ್ಮೆಂಟ್ ಅಲ್ಲವಲ್ಲ.ಆತನೇ ಹೇಳುವ ಪ್ರಕಾರ ಆತ ಮಾಡಿದ್ದು ಇನ್ವೆಸ್ಟ್ಮೆಂಟ್ ಅದೂ ಶ್ರದ್ಧೆಯಿಂದಲ್ಲ ಹೆಂಡತಿ ಹೇಳಿದ್ದಕ್ಕಾಗಿ…)ಈತನ ಭಾವನಾತ್ಮಕ ವಾದಕ್ಕೆ ಜಡ್ಜ್ ಕೇಸು ನಡೆಯಲಿ ಅನ್ನುತ್ತಾರೆ ಕಾರಣ ಮದ್ಯಮ ವರ್ಗದವನಾದ ಕಾಂಜೀಗೆ ಹಲವು ಲಕ್ಷ ರುಪಾಯಿ ಅನ್ನೋದು ದೊಡ್ದ ಮೊತ್ತ ಹಾಗಾಗಿ ಈ ಕೇಸು ನಡೆಯಬೇಕು ಅನ್ನುತ್ತಾರೆ.ಅಲ್ಲಿಂದ ಶುರುವಾಗುತ್ತೆ ಗೊಂದಲಮಯ ತರ್ಕಗಳು. ಮತ್ತು ಆತನ ಸಹಾಯಕ್ಕಾಗಿ ಆಗೋ ಹೊಸ ಪಾತ್ರವೊಂದರ ಎಂಟ್ರಿ….ಏನೆಲ್ಲ ತರ್ಕಗಳಿವೆ?… ಯಾವ ಹೊಸ ಪಾತ್ರದ ಎಂಟ್ರಿಯಾಗುತ್ತೆ??? ಕೇಸು ಏನಾಗುತ್ತೆ ?????

ಮುಂದಿನ ಭಾಗ

—ಕೆ.ಗುರುಪ್ರಸಾದ್ ಆಚಾರ್ಯ

Advertisements

2 responses

  1. ಮಾನ್ಯರೇ, ಚಿತ್ರಾ ಹೇಗಿದೆಯೋ ಏನೋ,ನಾನು ನೋಡಿಲ್ಲ.ನಿಮ್ಮ ಲೇಖನ ಹೇಳುವ ಹೇಳುವ ಶೈಲಿ, ಆಸಕ್ತಿ ಮೂಡಿಸುತ್ತದೆ.ಒಳ್ಳೆಯ ವಿಮರ್ಶೆ. ನಿಮ್ಮ ಲೇಖನದಿಂದ ನಮ್ಮ ಮನಸ್ಸಿನಲ್ಲಿಯೂ ತರ್ಕ ಮೂಡುತ್ತದೆ.ಅಂತಿಮವಾಗಿ ಕತಾ ನಾಯಕ ಹೇಳುವುದು ಸರಿ ಎಂಬ ತೀರ್ಮಾನಕ್ಕೂ ಬರಬೇಕಾಗುತ್ತದೆ.ಅಲ್ಲವೇ?

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: