ಹಿಂದೂ ಧರ್ಮ

ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ[೧]. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, “ಶಾಶ್ವತ ಧರ್ಮ” ಎಂಬ ಅರ್ಥಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ.[೨] ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ “ಪ್ರಕಾರಗಳು”, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ಯೋಗಿಕ ಸಂಪ್ರದಾಯಗಳು ಮತ್ತು ಕರ್ಮದ ಕಲ್ಪನೆಯನ್ನು ಆಧರಿಸಿದ “ದೈನಿಕ ಸದಾಚಾರ”ದ ವಿಶಾಲವಾದ ವೈವಿಧ್ಯ ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನೂ ಹಿಂದೂ ಧರ್ಮವು ಒಳಗೊಳ್ಳುತ್ತದೆ.

ಅದರ ಮೂಲಗಳಲ್ಲಿ ಕಬ್ಬಿಣ ಯುಗದ ಭಾರತದ ಐತಿಹಾಸಿಕ ವೈದಿಕ ಧರ್ಮವಿದೆ, ಮತ್ತು ಹಲವುವೇಳೆ ಹಿಂದೂ ಧರ್ಮವು “ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಧರ್ಮ”[೩] ಅಥವಾ “ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಪ್ರಮುಖ ಸಂಪ್ರದಾಯ” ಎಂದು ಹೇಳಲಾಗುತ್ತದೆ.[೪][೫][೬][೭]. ಹಿಂದೂ ಧರ್ಮವು ವಿವಿಧ ಸಂಪ್ರದಾಯಗಳಿಂದ ರಚಿತವಾಗಿದೆ ಮತ್ತು ಒಬ್ಬ ಏಕಾಂಗಿ ಸಂಸ್ಥಾಪಕನನ್ನು ಹೊಂದಿಲ್ಲ.[೮] ಹಿಂದೂ ಧರ್ಮವು ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳ ನಂತರ ವಿಶ್ವದ ಮೂರನೇ ಅತಿ ದೊಡ್ಡ ಧರ್ಮವಾಗಿದೆ ಮತ್ತು ಭಾರತದಲ್ಲಿ ಸುಮಾರು ೮೩ ಕೋಟಿ ಅನುಯಾಯಿಗಳು ಹಾಗೂ ಒಟ್ಟಾರೆ ಸುಮಾರು ೧೦೦ ಕೋಟಿ ಅನುಯಾಯಿಗಳನ್ನು ಹೊಂದಿದೆ.[೯] ದೊಡ್ಡ ಪ್ರಮಾಣದ ಹಿಂದೂ ಜನಸಂಖ್ಯೆಯಿರುವ ಇತರ ರಾಷ್ಟ್ರಗಳನ್ನು ದಕ್ಷಿಣ ಏಷ್ಯಾದಾದ್ಯಂತ ಕಾಣಬಹುದು. ಭಾರತ, ನೇಪಾಳ ಹಾಗೂ ಶ್ರೀಲಂಕಾದ ಕೆಲವು ಭಾಗಗಳಲ್ಲಿ ಈ ಧರ್ಮದ ಬಹುಪಾಲು ಅನುಯಾಯಿಗಳು ನೆಲೆಸಿದ್ದಾರೆ. ಅದಲ್ಲದೇ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಇಂದು ಹಿಂದೂ ಧರ್ಮದ ಅನುಯಾಯಿಗಳನ್ನು ಕಾಣಬಹುದು.

ಹಿಂದೂ ಧರ್ಮಗ್ರಂಥಗಳ ಅಗಾಧ ಮಂಡಲವನ್ನು ಶ್ರುತಿ (ಕೇಳಿದ್ದು) ಮತ್ತು ಸ್ಮೃತಿ (ಸ್ಮರಣೆಯಲ್ಲಿಟ್ಟಿದ್ದು) ಗ್ರಂಥಗಳು ಎಂದು ವಿಭಜಿಸಲಾಗುತ್ತದೆ. ಈ ಧರ್ಮಗ್ರಂಥಗಳು ಧರ್ಮಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ಪುರಾಣಗಳನ್ನು ಚರ್ಚಿಸುತ್ತವೆ ಮತ್ತು ಧರ್ಮದ ಆಚರಣೆಯ ಬಗ್ಗೆ ಮಾಹಿತಿ ಒದಗಿಸುತ್ತವೆ. ಈ ಗ್ರಂಥಗಳ ಪೈಕಿ, ವೇದಗಳು ಮತ್ತು ಉಪನಿಷತ್ತುಗಳು ಅಧಿಕಾರ, ಮಹತ್ವ ಮತ್ತು ಪ್ರಾಚೀನತೆಯಲ್ಲಿ ಪ್ರಮುಖವಾದವುಗಳು. ಇತರ ಪ್ರಮುಖವಾದ ಧರ್ಮಗ್ರಂಥಗಳು, ಪುರಾಣಗಳು ಮತ್ತು ಮಹಾಕಾವ್ಯಗಳಾದ ಮಹಾಭಾರತ ಹಾಗೂ ರಾಮಾಯಣಗಳನ್ನು ಒಳಗೊಳ್ಳುತ್ತವೆ. ಕೃಷ್ಣನಿಂದ ನುಡಿಯಲಾದ ಮಹಾಭಾರತದ ಒಂದು ಪ್ರಕರಣ ಗ್ರಂಥವಾದ ಭಗವದ್ಗೀತೆಯನ್ನು ಕೆಲವೊಮ್ಮೆ ವೇದಗಳ ಆಧ್ಯಾತ್ಮಿಕ ಉಪದೇಶಗಳ ಸಾರಾಂಶವೆಂದು ಕರೆಯಲಾಗುತ್ತದೆ.[೧೦]

ಶಬ್ದ ವ್ಯುತ್ಪತ್ತಿ

ಹಿಂದೂ ಶಬ್ದವು ಪರ್ಶಿಯಾದ ಭಾಷೆಯಲ್ಲಿ ಸಿಂಧೂ ನದಿಯ ಹೆಸರು, ವೈದಿಕ ಸಂಸ್ಕೃತದ ಸಿಂಧು (ಅಂದರೆ ಸಿಂಧೂ ನದಿ) ಶಬ್ದಕ್ಕೆ ಸಮಾನವಾದ ಪರ್ಶಿಯಾದ ಭಾಷೆಯ ಶಬ್ದವಾದ ಹಿಂದೂ (ಹಂಡೂ) ಎಂಬಲ್ಲಿ ಮೊದಲು ಕಂಡಿತು.[೧೧] ಋಗ್ವೇದವು ಭಾರತೀಯ-ಆರ್ಯರ ನಾಡನ್ನು ಸಪ್ತ ಸಿಂಧು (ವಾಯವ್ಯ ದಕ್ಷಿಣ ಏಷ್ಯಾದಲ್ಲಿನ ಏಳು ನದಿಗಳಿರುವ ನಾಡು, ಸಿಂಧೂ ನದಿಯು ಅವುಗಳಲ್ಲಿ ಒಂದು) ಎಂದು ಉಲ್ಲೇಖಿಸುತ್ತದೆ. ಇದು ಪಾರ್ಸಿ ಮತದ ಪವಿತ್ರಗ್ರಂಥವಾದ ಅವೆಸ್ಟಾದ (ವೆನ್‌ಡಿಡಾಡ್ ಅಥವಾ ವಿಡೇವ್‌ಡಾಡ್ ೧.೧೮) ಹಪ್ಟ ಹಂಡೂ ಪದಕ್ಕೆ ಅನುರೂಪವಾಗಿದೆ. ಈ ಪದವನ್ನು ಭಾರತೀಯ ಉಪಖಂಡದಲ್ಲಿ “ಸಿಂಧೂ” ಅಥವಾ ಅದರ ಆಚೆಗೆ ವಾಸಿಸುವವರಿಗೆ ಬಳಸಲಾಗಿತ್ತು.[೧೨] ಅರಬ್ಬೀ ಭಾಷೆಯಲ್ಲಿ, ಅಲ್-ಹಿಂದ್ ಪದವು ‘ಆಧುನಿಕ ಭಾರತದ ಜನರ ನಾಡನ್ನೂ’ ನಿರ್ದೇಶಿಸುತ್ತದೆ.[೧೩]

ಪರ್ಶಿಯಾದ ಭಾಷೆಯ (ಮಧ್ಯಕಾಲೀನ ಪರ್ಶಿಯಾದ ಭಾಷೆ ಹಿಂದೂಕ್, ಹೊಸ ಪರ್ಶಿಯಾದ ಭಾಷೆ ಹಿಂದೂ) ಪದವಾದ ಇದು ದೆಹಲಿ ಸಲ್ತನತ್‌ನೊಂದಿಗೆ ಭಾರತವನ್ನು ಪ್ರವೇಶಿಸಿತು ಮತ್ತು ಕನಿಷ್ಠ ಕ್ರಿ.ಶ. ೧೩೨೩ರಿಂದ ದಕ್ಷಿಣ ಭಾರತೀಯ ಹಾಗೂ ಕಾಶ್ಮೀರದ ಪಠ್ಯಗಳಲ್ಲಿ,[೧೪] ಮತ್ತು ಹೆಚ್ಚಾಗಿ ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಕಾಣಿಸುತ್ತದೆ. ೧೮ನೆಯ ಶತಮಾನದ ಕೊನೆಯಿಂದ ಈ ಪದವನ್ನು ಉಪಖಂಡದ ಬಹುತೇಕ ಧಾರ್ಮಿಕ, ಆಧ್ಯಾತ್ಮಿಕ, ಹಾಗೂ ತಾತ್ವಿಕ ಸಂಪ್ರದಾಯಗಳಿಗೆ, ಸಾಮಾನ್ಯವಾಗಿ ಸಿಖ್ ಧರ್ಮ, ಜೈನ ಧರ್ಮ, ಬೌದ್ಧ ಧರ್ಮಗಳನ್ನು ಪ್ರತ್ಯೇಕವೆಂದು ಸೇರಿಸದೆ, ಒಂದು ಸರ್ವಾನ್ವಯ ಪದವಾಗಿ ಬಳಸಲಾಗಿದೆ.

ಹಿಂದೂ ಧರ್ಮ ಎಂಬ ಪದವು ಭಾರತಕ್ಕೆ ಸ್ಥಳೀಯವಾದ ಧಾರ್ಮಿಕ, ತಾತ್ವಿಕ ಹಾಗೂ ಸಾಂಸ್ಕೃತಿಕ ಸಂಪ್ರದಾಯಗಳನ್ನು ಸೂಚಿಸಲು ಇಂಗ್ಲಂಡ್‌ನ ಜನರಿಂದ ಪರಿಚಯಿಸಲ್ಪಟ್ಟಿತು.[೧೫]

ಮುಂಚಿನ ಐರೋಪ್ಯ ಪ್ರವಾಸಿಗಳು ಮತ್ತು ಕ್ರೈಸ್ತ ಧರ್ಮಪ್ರಚಾರಕರು ಹಿಂದೂ ಸಮಾಜ ಹಾಗೂ ಧರ್ಮದ ಮೇಲೆ ಬ್ರಾಹ್ಮಣ ವರ್ಣದ ಪ್ರಾಬಲ್ಯದ ಕಾರಣ ಹಿಂದೂ ಧರ್ಮವನ್ನು ನಿರ್ದೇಶಿಸಲು “ಬ್ರಾಹ್ಮಣ ಧರ್ಮ” ಎಂಬ ಶಬ್ದವನ್ನು ಸೃಷ್ಟಿಸಿದರು. ಹಿಂದೂಗಳು ತಮ್ಮ ಧರ್ಮವನ್ನು, ಶಾಶ್ವತ ನಿಯಮಗಳನ್ನು ಆಧರಿಸಿರುವ ಕಾರಣ ಸನಾತನ ಧರ್ಮ ಎಂದು, ಅಥವಾ ವೇದಗಳ ಉಪದೇಶಗಳನ್ನು ಆಧರಿಸಿರುವ ಕಾರಣ ವೈದಿಕ ಧರ್ಮವೆಂದು ಕರೆಯಲು ಇಷ್ಟಪಡುತ್ತಾರೆ. ಹಿಂದೂಗಳ ನಾಡು ಅವರಿಗೆ ಸಾಂಪ್ರದಾಯಿಕವಾಗಿ ಭಾರತ ಅಥವಾ ಭಾರತದ ಒಬ್ಬ ಪ್ರಾಚೀನ ರಾಜನಾದ ಭರತನ ಹೆಸರಿನಿಂದ ವ್ಯುತ್ಪನ್ನವಾದ ಭರತವರ್ಷವೆಂದು ಪರಿಚಿತವಾಗಿದೆ.[೧೬]
ಪ್ರಕಾರಗಳು
ನಮಗೆ ಪರಿಚಿತವಾಗಿರುವ ಹಿಂದೂ ಧರ್ಮವನ್ನು ಹಲವಾರು ಪ್ರಮುಖ ಪಥಗಳಾಗಿ ವಿಭಜಿಸಬಹುದು. ಆರು ದರ್ಶನಗಳಲ್ಲಿ ಐತಿಹಾಸಿಕ ವಿಭಜನೆಯ ಪೈಕಿ, ಕೇವಲ ಎರಡು ಪಂಥಗಳು, ವೇದಾಂತ ಮತ್ತು ಯೋಗ ಅಸ್ತಿತ್ವದಲ್ಲಿವೆ. ವೈಷ್ಣವ ಪಂಥ, ಶೈವ ಪಂಥ, ಸ್ಮಾರ್ತ ಪಂಥ ಹಾಗೂ ಶಕ್ತಿ ಪಂಥ ಈಗಿರುವ ಹಿಂದೂ ಧರ್ಮದ ಪ್ರಮುಖ ವಿಭಾಗಗಳು[೧೭].

ಸಮಕಾಲೀನ ಹಿಂದೂ ಧರ್ಮವು ಪ್ರಧಾನವಾಗಿ ಏಕದೇವತಾವಾದಿಯಾಗಿದೆ, ಆದರೆ ಹಿಂದೂ ಸಂಪ್ರದಾಯವು ಸರ್ವ ದೇವತಾವಾದಿ, ಸರ್ವಬ್ರಹ್ಮವಾದಿ, ಬಹುದೇವತಾವಾದಿ, ಮತ್ತು ನಿರೀಶ್ವರವಾದಿ ಎಂದೂ ವಿವರಿಸಬಲ್ಲ ಅಂಶಗಳನ್ನು ಒಳಗೊಂಡಿದೆ. ಇತರ ಗಮನಾರ್ಹ ವೈಶಿಷ್ಟ್ಯಗಳು, ಪುನರ್ಜನ್ಮ ಹಾಗೂ ಕರ್ಮಗಳಲ್ಲಿ ನಂಬಿಕೆ, ಮತ್ತು ವೈಯಕ್ತಿಕ ಕರ್ತವ್ಯವಾದ ಧರ್ಮದಲ್ಲಿನ ನಂಬಿಕೆಯನ್ನು ಸಹ ಒಳಗೊಳ್ಳುತ್ತವೆ.

ಹೆಚ್ಚಾಗಿ ಒಂದು ಸಂಕೀರ್ಣ ವಿಷಯದಲ್ಲಿನ ವಿವಿಧ ದೃಷ್ಟಿಗಳಿಗೆ ಸ್ಥಳಮಾಡಿಕೊಡುವ ಪ್ರಯತ್ನವಾಗಿ, ಮೆಕ್‌ಡ್ಯಾನಿಯಲ್ (೨೦೦೭) ಹಿಂದೂ ಧರ್ಮದ ಆರು ಜಾತಿವಾಚಕ “ಪ್ರಕಾರಗಳನ್ನು” ಗುರುತಿಸುತ್ತಾರೆ:[೧೮]

ಕೋಮುವಾರು ಮಟ್ಟದಲ್ಲಿ ಸ್ಥಳೀಯ ಸಂಪ್ರದಾಯಗಳು ಹಾಗೂ ಸ್ಥಳೀಯ ದೇವತೆಗಳ ಪಂಥವನ್ನು ಆಧರಿಸಿದ ಮತ್ತು ಪ್ರಾಗೈತಿಹಾಸಿಕ ಅವಧಿಗೆ ಅಥವಾ ಲಿಖಿತ ವೇದಗಳಿಗಿಂತ ಮುಂಚಿನ ಕಾಲಕ್ಕೆ ವ್ಯಾಪಿಸುವ, ಜಾನಪದ ಹಿಂದೂ ಧರ್ಮ.
ಸಾಂಪ್ರದಾಯಿಕ ಬ್ರಾಹ್ಮಣರಿಂದ (ಉದಾಹರಣೆಗೆ ಶ್ರೌತರು) ಇಂದೂ ಆಚರಿಸಲ್ಪಡುತ್ತಿರುವ ವೈದಿಕ ಹಿಂದೂ ಧರ್ಮ.
ಉಪನಿಷತ್ತುಗಳ ತಾತ್ತ್ವಿಕ ವಿಧಾನವನ್ನು ಆಧರಿಸಿದ ವೇದಾಂತಿಕ ಹಿಂದೂ ಧರ್ಮ, ಉದಾಹರಣೆಗೆ ಅದ್ವೈತ (ಸ್ಮಾರ್ತ ಪಂಥ).
ಯೋಗಿಕ ಹಿಂದೂ ಧರ್ಮ, ವಿಶೇಷವಾಗಿ ಪತಂಜಲಿಯ ಯೋಗ ಸೂತ್ರಗಳನ್ನು ಆಧರಿಸಿದ್ದು.
ಕರ್ಮದ ಕಲ್ಪನೆ, ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಗಳನ್ನು ಆಧರಿಸಿದ “ಧಾರ್ಮಿಕ” ಹಿಂದೂ ಧರ್ಮ ಅಥವಾ “ದೈನಂದಿನ ಸದಾಚಾರ”.
ಭಕ್ತಿ, ವಿಶೇಷವಾಗಿ ವೈಷ್ಣವ ಸಂಪ್ರದಾಯದಲ್ಲಿರುವಂತೆ.

ಪದದ ಅರ್ಥವಿವರಣೆಗಳು

ಹಿಂದೂ ಧರ್ಮವು “ಒಂದು ಧರ್ಮಶ್ರದ್ಧೆ ಅಥವಾ ಒಂದು ಮತದ ಘೋಷಣೆಯಲ್ಲಿ ಸಂಕೇತೀಕರಿಸಲಾದ ನಂಬಿಕೆಯ ಏಕೀಕೃತ ವ್ಯವಸ್ಥೆ”ಯನ್ನು ಹೊಂದಿಲ್ಲ,[೧೯] ಬದಲಿಗೆ ವೈದಿಕ ಸಂಪ್ರದಾಯಗಳಲ್ಲಿ ಉತ್ಪತ್ತಿಯಾದ ಮತ್ತು ಅವುಗಳ ಮೇಲೆ ಆಧಾರಿತವಾದ ಧಾರ್ಮಿಕ ಸಂಗತಿಗಳ ಬಹುತ್ವವನ್ನು ಒಳಗೊಂಡಿರುವ ಒಂದು ಸರ್ವಾನ್ವಯ ಪದವಾಗಿದೆ.[

ಉತ್ಪತ್ತಿಯಲ್ಲಿ ಹಿಂದೂ ಪದವು ದೆಹಲಿ ಸಲ್ತನತ್‌ನ ಕಾಲದಿಂದ ಬಳಕೆಯಲ್ಲಿರುವ, ಭಾರತಕ್ಕೆ ಸ್ಥಳೀಯವಾದ ಯಾವುದೇ ಇಸ್ಲಾಂಯೇತರ ಸಂಪ್ರದಾಯವನ್ನು ನಿರ್ದೇಶಿಸುವ ಒಂದು ಪರ್ಶಿಯಾದ ಶಬ್ದವಾಗಿದೆ. ಹಿಂದೂ ಶಬ್ದವನ್ನು ೧೭ನೇ ಶತಮಾನದಿಂದ ಆಂಗ್ಲ ಭಾಷೆಯಲ್ಲಿ “ಭಾರತೀಯ ವಿಧರ್ಮಿ” ಎಂಬ ಅರ್ಥದಲ್ಲಿ ಬಳಸಲಾಗುತ್ತದೆ,[೨೪] ಆದರೆ ವಿಶ್ವ ಧರ್ಮಗಳ ಪೈಕಿ ಒಂದೆಂದು ಅರ್ಹತೆಪಡೆದು ಒಂದು ಗುರುತಿಸಬಲ್ಲ ಧಾರ್ಮಿಕ ಸಂಪ್ರದಾಯವಾಗಿ ಹಿಂದೂ ಧರ್ಮದ ಕಲ್ಪನೆ ೧೯ನೇ ಶತಮಾನದ ಅವಧಿಯಲ್ಲಿ ಮಾತ್ರ ಕಾಣಿಸಿಕೊಂಡಿತು.

ನಂಬಿಕೆಗಳಲ್ಲಿನ ಭಿನ್ನತೆಗಳಿಗೆ ವಿಸ್ತಾರವಾದ ಸಹಿಷ್ಣುತೆಯ ವೈಶಿಷ್ಟ್ಯ, ಮತ್ತು ಹಿಂದೂ ಧರ್ಮದ ನಿರಂಕುಶ ಅಕೃತ್ರಿಮತೆಯು ಸಾಂಪ್ರದಾಯಿಕ ಪಾಶ್ಚಾತ್ಯ ಕಲ್ಪನೆಗಳ ಪ್ರಕಾರ ಅದನ್ನು ಒಂದು ಧರ್ಮವೆಂದು ಸೂತ್ರಿಸುವುದನ್ನು ಕಠಿಣವಾಗಿಸುತ್ತದೆ.[೨೫] ಅದರ ಬಹುಸಂಖ್ಯಾತ ಅನುಯಾಯಿಗಳಿಗೆ ಹಿಂದೂ ಧರ್ಮವು ಒಂದು ಸಂಪೂರ್ಣವಾಗಿ ವ್ಯವಹಾರ್ಯ ಪರಿಕಲ್ಪನೆಯಾಗಿದ್ದರೂ, ಪದದ ಒಂದು ವ್ಯಾಖ್ಯಾನಕ್ಕೆ ಬರುವಲ್ಲಿ ಹಲವರು ಸಮಸ್ಯೆಯನ್ನು ವ್ಯಕ್ತಪಡಿಸುತ್ತಾರೆ, ಮುಖ್ಯವಾಗಿ ಅದರೊಳಗೆ ಸೇರಿದ ಅಥವಾ ಅದು ಒಳಗೊಂಡಿರುವ ಸಂಪ್ರದಾಯಗಳು ಮತ್ತು ವಿಚಾರಗಳ ವಿಶಾಲವಾದ ವ್ಯಾಪ್ತಿಕ್ಷೇತ್ರದ ಕಾರಣದಿಂದ.[೧೯] ಕೆಲವೊಮ್ಮೆ ಒಂದು ಧರ್ಮವೆಂದು ನಿರ್ದೇಶಿಸಲಾದರೂ, ಹಿಂದೂ ಧರ್ಮವನ್ನು ಹಲವುವೇಳೆ ಒಂದು ಧಾರ್ಮಿಕ ಸಂಪ್ರದಾಯವೆಂದು ವ್ಯಾಖ್ಯಾನಿಸಲಾಗುತ್ತದೆ.[೧] ಆದ್ದರಿಂದ ಅದು ವಿಶ್ವದ ಧರ್ಮಗಳ ಪೈಕಿ ಅತ್ಯಂತ ಹಳೆಯದು ಮತ್ತು ಅತ್ಯಂತ ವೈವಿಧ್ಯವುಳ್ಳದ್ದೆಂದು ವಿವರಿಸಲಾಗುತ್ತದೆ.[೪][೨೬][೨೭][೨೮] ಬಹುತೇಕ ಹಿಂದೂ ಪಂಥಗಳು ಧಾರ್ಮಿಕ ಅಥವಾ ಧರ್ಮ ಸಾಹಿತ್ಯದ ಒಂದು ಮಂಡಲವಾದ ವೇದಗಳನ್ನು ಪವಿತ್ರವೆಂದು ಭಾವಿಸುತ್ತವೆ, ಆದರೆ ಇದಕ್ಕೆ ಅಪವಾದಗಳಿವೆ. ನಿರ್ದಿಷ್ಟ ಧಾರ್ಮಿಕ ಸಂಸ್ಕಾರಗಳು ಮೋಕ್ಷಕ್ಕಾಗಿ ಆವಶ್ಯಕವೆಂದು ಕೆಲವು ಹಿಂದೂ ಧಾರ್ಮಿಕ ಸಂಪ್ರದಾಯಗಳು ಪರಿಗಣಿಸುತ್ತವೆ, ಆದರೆ ಈ ವಿಷಯದ ಸಂಬಂಧವಾಗಿ ವಿವಿಧ ಅಭಿಪ್ರಾಯಗಳು ಅಸ್ತಿತ್ವದಲ್ಲಿವೆ. ಕೆಲವು ಹಿಂದೂ ತತ್ತ್ವಶಾಸ್ತ್ರಗಳು ಬ್ರಹ್ಮಾಂಡದ ಸೃಷ್ಟಿ, ಪೋಷಣೆ, ಮತ್ತು ವಿನಾಶದ ಒಂದು ಆಸ್ತಿಕವಾದಿ ಸತ್ವವಿದ್ಯೆಯನ್ನು ಆಧಾರವಾಗಿ ಇಟ್ಟುಕೊಳ್ಳುತ್ತವೆ, ಆದಾಗ್ಗಿಯೂ ಕೆಲವು ಹಿಂದೂಗಳು ನಾಸ್ತಿಕರಾಗಿದ್ದಾರೆ. ಕೆಲವೊಮ್ಮೆ ಹಿಂದೂ ಧರ್ಮವನ್ನು ಕರ್ಮದ ನಿಯಮದಿಂದ ನಿರ್ಧರಿಸಲಾದ ಮರುಜನ್ಮದ (ಸಂಸಾರ) ನಂಬಿಕೆಯಿಂದ, ಮತ್ತು ಮೋಕ್ಷವು ಪುನರಾವರ್ತಿಸುವ ಜನನ ಮತ್ತು ಮರಣಗಳ ಈ ಆವರ್ತದಿಂದ ಬಿಡುಗಡೆಯೆಂಬ ಕಲ್ಪನೆಯಿಂದ ನಿರೂಪಿಸಲಾಗುತ್ತದೆ. ಆದರೆ, ಬೌದ್ಧಧರ್ಮ ಮತ್ತು ಜೈನ ಧರ್ಮಗಳಂತಹ ಪ್ರದೇಶದ ಇತರ ಧರ್ಮಗಳು ಸಹ, ಹಿಂದೂ ಧರ್ಮದ ವ್ಯಾಪ್ತಿಯಲ್ಲಿರದ, ಕರ್ಮದಲ್ಲಿ ವಿಶ್ವಾಸವಿಡುತ್ತವೆ.[೧೯] ಹಾಗಾಗಿ, ಹಿಂದೂ ಧರ್ಮವನ್ನು ಅಸ್ತಿತ್ವದಲ್ಲಿರುವ ಎಲ್ಲ ಐತಿಹಾಸಿಕ ವಿಶ್ವಧರ್ಮಗಳ ಪೈಕಿ ಅತ್ಯಂತ ಸಂಕೀರ್ಣವಾದ ಧರ್ಮವೆಂದು ಕಾಣಲಾಗುತ್ತದೆ.[೨೯] ಅದರ ಸಂಕೀರ್ಣತೆಯ ಹೊರತಾಗಿಯೂ, ಹಿಂದೂ ಧರ್ಮವು ಕೇವಲ ಅಂಕೀಯವಾಗಿ ವಿಶಾಲವಾದ ಧರ್ಮವಷ್ಟೇ ಅಲ್ಲ, ಜೊತೆಗೆ ಪ್ರಾಗಿತಿಹಾಸದಲ್ಲಿ ಚಾಚಿರುವ ಬೇರುಗಳುಳ್ಳ, ಅಸ್ತಿತ್ವದಲ್ಲಿರುವ ಭೂಮಿಯ ಮೇಲಿನ ಅತ್ಯಂತ ಹಳೆಯ ಪ್ರಮುಖ ಸಂಪ್ರದಾಯವೂ ಆಗಿದೆ.[೩೦]

ಒಬ್ಬ ಪ್ರಖ್ಯಾತ ಧರ್ಮಶಾಸ್ತ್ರಜ್ಞರೂ ಆಗಿದ್ದ ಭಾರತದ ಮೊದಲನೆಯ ಉಪ ರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್‌ರಿಂದ ಕೊಡಲ್ಪಟ್ಟ ಹಿಂದೂ ಧರ್ಮದ ಒಂದು ವ್ಯಾಖ್ಯಾನವು ಹಿಂದೂ ಧರ್ಮವು “ಕೇವಲ ಒಂದು ಧರ್ಮ”ವಷ್ಟೇ ಅಲ್ಲ, ಜೊತೆಗೆ ತನ್ನೊಳಗೇ ಕಾರಣ ಮತ್ತು ಅಂತರ್ದೃಷ್ಟಿಗಳ ಸಂಯೋಜನೆಗೆ ಸಂಬಂಧಿಸಿದೆ ಎಂದು ಹೇಳುತ್ತದೆ. ಹಿಂದೂ ಧರ್ಮವನ್ನು ವ್ಯಾಖ್ಯಾನಿಸಲಾಗುವುದಿಲ್ಲ, ಆದರೆ ಅದನ್ನು ಕೇವಲ ಅನುಭವಿಸುಬಹುದು ಎಂದು ರಾಧಾಕೃಷ್ಣನ್ ವಿಶದವಾಗಿ ಹೇಳುತ್ತಾರೆ.[೩೧] ಹಾಗೆಯೇ, ಹಿಂದೂ ಧರ್ಮವನ್ನು ಒಂದು ಸುಸ್ಪಷ್ಟ ಮತ್ತು ಕಟ್ಟುನಿಟ್ಟಿನ ಘಟಕದ ಬದಲಾಗಿ “ಅಸ್ಪಷ್ಟವಾದ ತುದಿಗಳುಳ್ಳ” ಒಂದು ವರ್ಗವಾಗಿ ನೋಡಬಹುದೆಂದು ಕೆಲವು ಪಂಡಿತರು ಸೂಚಿಸುತ್ತಾರೆ. ಧಾರ್ಮಿಕ ಅಭಿವ್ಯಕ್ತಿಗಳ ಕೆಲವು ಪ್ರಕಾರಗಳು ಹಿಂದೂ ಧರ್ಮದ ತಿರುಳಾಗಿವೆ, ಮತ್ತು ಬೇರೆಯವು ಅಷ್ಟು ಪ್ರಮುಖವಾಗಿಲ್ಲ ಆದರೂ ವರ್ಗದೊಳಗೆ ಉಳಿದಿವೆ. ಇದನ್ನು ಆಧರಿಸಿ, ಫ಼ೆರೋ-ಲೂಟ್ಸಿ ಹಿಂದೂ ಧರ್ಮದ ವ್ಯಾಖ್ಯಾನಕ್ಕೆ ಒಂದು ‘ಮಾತೃಕಾ ಸಿದ್ಧಾಂತ ವಿಧಾನ’ವನ್ನು (ಪ್ರೋಟಟೈಪ್ ಥೀಯರಿ ಅಪ್ರೋಚ್) ಅಭಿವೃದ್ಧಿಗೊಳಿಸಿದ್ದಾರೆ.[೩೨]

ವಾಸ್ತವಿಕವಾಗಿ ‘ಹಿಂದೂ ಧರ್ಮ’ ಪದ ಏನು ಅರ್ಥಸೂಚಿಸುತ್ತದೆ ಎಂಬ ಒಂಟಿ ವ್ಯಾಖ್ಯಾನವುಳ್ಳ ಸಮಸ್ಯೆಗಳನ್ನು ಹಲವುವೇಳೆ ಹಿಂದೂ ಧರ್ಮವು ಒಂದು ಪ್ರತ್ಯೇಕ ಅಥವಾ ಸಾಮಾನ್ಯ ಐತಿಹಾಸಿಕ ಸಂಸ್ಥಾಪಕನನ್ನು ಹೊಂದಿಲ್ಲ ಎಂಬ ವಾಸ್ತವಾಂಶಕ್ಕೆ ಆರೋಪಿಸಲಾಗುತ್ತದೆ. ಹಿಂದೂ ಧರ್ಮ, ಅಥವಾ ಕೆಲವರು ಹೇಳುವಂತೆ ‘ಹಿಂದೂ ಧರ್ಮಗಳು’ ಮೋಕ್ಷದ ಒಂದು ಏಕಾಂಗಿ ವ್ಯವಸ್ಥೆಯನ್ನು ಹೊಂದಿಲ್ಲ ಮತ್ತು ಪ್ರತಿ ವರ್ಗ ಅಥವಾ ಪಂಥದ ಪ್ರಕಾರ ವಿಭಿನ್ನ ಗುರಿಗಳನ್ನು ಹೊಂದಿದೆ. ವೈದಿಕ ಧರ್ಮದ ಪ್ರಕಾರಗಳನ್ನು ಹಿಂದೂ ಧರ್ಮದ ಒಂದು ವಿಕಲ್ಪವಾಗಿ ಕಾಣದೆ ಅದರ ಅತ್ಯಂತ ಮುಂಚಿನ ಪ್ರಕಾರವಾಗಿ ಕಾಣಲಾಗುತ್ತದೆ, ಮತ್ತು ಬಹಳಷ್ಟು ಪಾಶ್ಚಾತ್ಯ ವಿದ್ವತ್ ಬರಹಗಳಲ್ಲಿ ವೈದಿಕ ಧರ್ಮ, ಬ್ರಾಹ್ಮಣ ಧರ್ಮ, ಮತ್ತು ಹಿಂದೂ ಧರ್ಮಗಳ ನಡುವಣ ಕಾಣುವ ವಿಭಜನಕ್ಕೆ ಅಲ್ಪ ಸಮರ್ಥನೆಯಿದೆ.[೭][೩೩]

“ಧರ್ಮ”ಕ್ಕೆ ಒಂದು ಸಮಾನಾರ್ಥಕ ಪದವಾಗಿ “ಮತ” ಪದದ ನಿತ್ಯಗಟ್ಟಳೆಯ ಬಳಕೆಯ ಕಾರಣ ಹಿಂದೂ ಧರ್ಮದ ಒಂದು ವ್ಯಾಖ್ಯಾನ ಮತ್ತೂ ಜಟಿಲವಾಗಿದೆ.[೧೯] ಕೆಲವು ವಿದ್ವಾಂಸರು[೩೪] ಮತ್ತು ಹಲವಾರು ಆಚರಣಕರ್ತರು ಹಿಂದೂ ಧರ್ಮವನ್ನು ಒಂದು ಸ್ಥಳೀಯ ವ್ಯಾಖ್ಯಾನವಾದ ಶಾಶ್ವತ ಸೂತ್ರ”, ಅಥವಾ “ಶಾಶ್ವತ ಕ್ರಮ”ವೆಂಬ ಅರ್ಥಸೂಚಿಸುವ ಒಂದು ಸಂಸ್ಕೃತ ಪದಗುಚ್ಛವಾದ ಸನಾತನ ಧರ್ಮ ಎಂಬ ಪದವನ್ನು ಬಳಸಿ ನಿರ್ದೇಶಿಸುತ್ತಾರೆ.[೨][೩೫]
ನಂಬಿಕೆಗಳು
ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಚಿತ್ರಿಸುವ ಹೊಯ್ಸಳೇಶ್ವರ ದೇವಸ್ಥಾನದಲ್ಲಿನ ದೇವಸ್ಥಾನ ಶಿಲ್ಪ.

ಹಿಂದೂ ಧರ್ಮವು ಆಂಗಿಕವಾಗಿ ಅರಳಿದ ಮತ್ತು ಗಮನಾರ್ಹ ಜನಾಂಗೀಯ ಹಾಗೂ ಸಾಂಸ್ಕೃತಿಕ ವೈವಿಧ್ಯದಿಂದ ಗುರುತಿಸಬಹುದಾದ ಒಂದು ವಿಶಾಲವಾದ ಪ್ರದೇಶದಲ್ಲಿ ಹರಡಿದ ಒಂದು ಧಾರ್ಮಿಕ ಮುಖ್ಯವಾಹಿನಿಯನ್ನು ನಿರ್ದೇಶಿಸುತ್ತದೆ. ಈ ಮುಖ್ಯವಾಹಿನಿಯು ಒಳಗಿನ ನಾವೀನ್ಯದಿಂದ, ಮತ್ತು ಹಿಂದೂ ಪದರದಲ್ಲಿ ಬಾಹ್ಯ ಸಂಪ್ರದಾಯಗಳು ಅಥವಾ ಪಂಥಗಳ ಸಮ್ಮಿಲನದಿಂದ ಅರಳಿತು. ಪರಿಣಾಮವಾಗಿ, ಅಸಂಖ್ಯಾತ ಸಣ್ಣ, ಸರಳ ಪಂಥಗಳಿಂದ ಶುರುವಾಗಿ ಇಡೀ ಉಪಖಂಡದಾದ್ಯಂತ ಹರಡಿರುವ ಲಕ್ಷಾಂತರ ಅನುಯಾಯಿಗಳಿರುವ ಪ್ರಮುಖ ಧಾರ್ಮಿಕ ಚಳವಳಿಗಳವರೆಗೆ ವ್ಯಾಪಿಸುವ ಧಾರ್ಮಿಕ ಸಂಪ್ರದಾಯಗಳ ಅಗಾಧವಾದ ವೈವಿಧ್ಯ ಉಂಟಾಗಿದೆ. ಪರಿಣಾಮವಾಗಿ, ಬೌದ್ಧಧರ್ಮ ಅಥವಾ ಜೈನ ಧರ್ಮದಿಂದ ಪ್ರತ್ಯೇಕವಾದ ಒಂದು ಸ್ವತಂತ್ರ ಧರ್ಮವಾಗಿ ಹಿಂದೂ ಧರ್ಮದ ಗುರುತಿಸುವಿಕೆಯು ಅದು ಸ್ವತಂತ್ರವಾಗಿದೆ ಎಂಬ ಅದರ ಅನುಯಾಯಿಗಳ ದೃಢೀಕರಣದ ಮೇಲೆ ಅವಲಂಬಿಸಿದೆ.[೩೬]

ಹಿಂದೂ ನಂಬಿಕೆಗಳಲ್ಲಿನ ಗಮನ ಸೆಳೆಯುವ ಸಂಗತಿಗಳು, ಧರ್ಮ (ನೀತಿ ತತ್ವಗಳು/ಕರ್ತವ್ಯಗಳು), ಸಂಸಾರ (ಜನನ, ಬದುಕು, ಮರಣ ಮತ್ತು ಹೊಸಹುಟ್ಟಿನ ಮುಂದುವರಿಯುವ ಆವರ್ತ), ಕರ್ಮ (ಕ್ರಿಯೆ ಮತ್ತು ಅನಂತರದ ಪ್ರತಿಕ್ರಿಯೆ), ಮೋಕ್ಷ (ಸಂಸಾರದಿಂದ ಬಂಧವಿಮುಕ್ತಿ), ಮತ್ತು ವಿವಿಧ ಯೋಗಗಳನ್ನು (ಪಥಗಳು ಅಥವಾ ಆಚರಣೆಗಳು) ಒಳಗೊಂಡಿವೆ (ಆದರೆ ಇಷ್ಟಕ್ಕೇ ಸೀಮಿತವಲ್ಲ).[೩೭]
ದೇವರ ಪರಿಕಲ್ಪನೆ

ಹಿಂದೂ ಧರ್ಮವು ಏಕದೇವತಾವಾದ, ಬಹುದೇವತಾವಾದ,[೩೮] ಸರ್ವ ದೇವತಾವಾದ, ಸರ್ವಬ್ರಹ್ಮವಾದ, ಅದ್ವೈತವಾದ, ಮತ್ತು ನಿರೀಶ್ವರವಾದಗಳಿಗೆ ವ್ಯಾಪಿಸುವ ನಂಬಿಕೆಗಳುಳ್ಳ ಕಲ್ಪನೆಯ ಒಂದು ತರಹೇವಾರಿ ಮಂಡಲವಾಗಿದೆ, ಮತ್ತು ಅದರ ದೇವರ ಪರಿಕಲ್ಪನೆಯು ಸಂಕೀರ್ಣವಾಗಿದೆ ಮತ್ತು ಪ್ರತಿಯೊಂದು ನಿರ್ದಿಷ್ಟ ಸಂಪ್ರದಾಯ ಹಾಗೂ ಜೀವನಕ್ರಮದ ಮೇಲೆ ಅವಲಂಬಿಸಿದೆ. ಅದು ಕೆಲವೊಮ್ಮೆ ಏಕದೇವೋಪಾಸಕವೆಂದು (ಅಂದರೆ, ಒಬ್ಬ ಪ್ರತ್ಯೇಕ ದೇವರಿಗೆ ಧರ್ಮನಿಷ್ಠೆಯನ್ನು ಒಳಗೊಂಡಿರುವ ಆದರೆ ಬೇರೆ ದೇವತೆಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುವ) ನಿರ್ದೇಶಿಸಲ್ಪಡುತ್ತದೆ, ಆದರೆ ಅಂತಹ ಯಾವುದೇ ಪದವು ಅತಿಸಾಮಾನ್ಯೀಕರಣವಾಗಿದೆ.Cite error: Invalid <ref> tag; invalid names, e.g. too many

ಪ್ರತಿಯೊಬ್ಬ ಮನುಷ್ಯನ ನಿಜವಾದ “ತಾನು” ಆಗಿರುವ ಆತ್ಮ ಅಥವಾ ಚೇತನವು ಚಿರಂತನವಾದದ್ದೆಂದು ಬಹುತೇಕ ಹಿಂದೂಗಳು ನಂಬುತ್ತಾರೆ.[೩೯] ಹಿಂದೂ ಧರ್ಮದ (ಅದ್ವೈತದಂತಹ ಪಂಥ) ಅದ್ವೈತವಾದಿ/ಸರ್ವಬ್ರಹ್ಮವಾದಿ ಧರ್ಮಶಾಸ್ತ್ರಗಳ ಪ್ರಕಾರ, ಈ ಆತ್ಮವು ಮೂಲಭೂತವಾಗಿ ಪರಮಪ್ರಧಾನ ಚೇತನವಾದ ಬ್ರಹ್ಮದಿಂದ ಬೇರೆಯಲ್ಲ. ಆದ್ದರಿಂದ, ಈ ಪಂಥಗಳನ್ನು ಅದ್ವೈತವಾದಿಯೆಂದು ಕರೆಯಲಾಗುತ್ತದೆ.[೪೦] ಅದ್ವೈತ ಪಂಥದ ಪ್ರಕಾರ, ಒಬ್ಬರ ಆತ್ಮವು ಪರಮಪ್ರಧಾನ ಚೇತನವಾದ ಬ್ರಹ್ಮಕ್ಕೆ ಸರ್ವಾಂಗಸಮವಾಗಿದೆಯೆಂದು ಅರಿತುಕೊಳ್ಳುವುದು ಜೀವನದ ಗುರಿಯಾಗಿದೆ.[೪೧] ಆತ್ಮವು ಒಬ್ಬರ ಸ್ವಂತ ವ್ಯಕ್ತಿತ್ವದ ಅಂತರಾಳದ ತಿರುಳೆಂದು ಯಾರು ಸಂಪೂರ್ಣವಾಗಿ ಅರಿಯುತ್ತಾರೋ ಅವರು ಬ್ರಹ್ಮದೊಂದಿಗೆ ಒಂದು ಅನನ್ಯತೆಯನ್ನು ಅರಿಯುತ್ತಾರೆ ಮತ್ತು ಅದರಿಂದಾಗಿ ಮೋಕ್ಷವನ್ನು (ಬಂಧವಿಮುಕ್ತಿ ಅಥವಾ ಸ್ವಾತಂತ್ರ್ಯ) ತಲಪುತ್ತಾರೆಂದು ಉಪನಿಷತ್ತುಗಳು ಹೇಳುತ್ತವೆ.[೩೯][೪೨]

ದ್ವೈತವಾದಿ ಪಂಥಗಳು (ದ್ವೈತ ಮತ್ತು ಭಕ್ತಿ ನೋಡಿ) ಬ್ರಹ್ಮವು ವ್ಯಕ್ತಿತ್ವವನ್ನು ಹೊಂದಿರುವ ಒಬ್ಬ ಪರಮಶಕ್ತ ವ್ಯಕ್ತಿಯೆಂದು ಭಾವಿಸುತ್ತವೆ, ಮತ್ತು ಹಾಗಾಗಿ ಅವು, ಪಂಥವನ್ನು ಅವಲಂಬಿಸಿ, ಅವನನ್ನು ಅಥವಾ ಅವಳನ್ನು ವಿಷ್ಣು, ಬ್ರಹ್ಮ, ಶಿವ, ಅಥವಾ ಶಕ್ತಿಯ ರೂಪದಲ್ಲಿ ಆರಾಧಿಸುತ್ತವೆ. ಆತ್ಮವು ದೇವರನ್ನು ಅವಲಂಬಿಸಿದೆ, ಮತ್ತು ಮೋಕ್ಷವು ದೇವರ ಪ್ರತಿ ಪ್ರೀತಿ ಮತ್ತು ದೇವರ ಅನುಗ್ರಹವನ್ನು ಅವಲಂಬಿಸಿದೆ.[೪೩] ದೇವರನ್ನು (ಅನಂತ ಮೂಲತತ್ವವೆಂದು ನೋಡುವ ಬದಲು) ಪರಮಶಕ್ತ ಸಶರೀರ ವ್ಯಕ್ತಿಯಾಗಿ ನೋಡಲಾದಾಗ, ದೇವರನ್ನು ಈಶ್ವರ (“ಪ್ರಭು”[೪೪]), ಭಗವಂತ (“ಮಂಗಳಕರನಾದವನು”[೪೪]) ಅಥವಾ ಪರಮೇಶ್ವರನೆಂದು (“ಪರಮಶಕ್ತ ಪ್ರಭು”[೪೪]) ಕರೆಯಲಾಗುತ್ತದೆ.[೪೦] ಆದರೆ ಈಶ್ವರ ಪದದ ಅರ್ಥವಿವರಣೆಗಳು, ಮೀಮಾಂಸಕರಿಂದ ಈಶ್ವರನಲ್ಲಿ ನಂಬಿಕೆಯಿಲ್ಲದಿರುವುದರಿಂದ ಅದ್ವೈತದಲ್ಲಿರುವಂತೆ ಬ್ರಹ್ಮ ಮತ್ತು ಈಶ್ವರ ಒಂದೇ ಎಂದು ಗುರುತಿಸಿಕೊಳ್ಳುವುದರವರೆಗೆ ವ್ಯಾಪಿಸಿ, ಬದಲಾಗುತ್ತವೆ.[೪೦] ವೈಷ್ಣವ ಪಂಥದ ಬಹಳಷ್ಟು ಸಂಪ್ರದಾಯಗಳಲ್ಲಿ ಅವನು ವಿಷ್ಣುವಾಗಿದ್ದಾನೆ, ಮತ್ತು ವೈಷ್ಣವ ಪವಿತ್ರಗ್ರಂಥಗಳ ಪಠ್ಯಗಳಲ್ಲಿ ಈ ಜೀವಿಯನ್ನು, ಕೆಲವೊಮ್ಮೆ ಸ್ವಯಂ ಭಗವಾನ್ ಎಂದು ಉಲ್ಲೇಖಿಸಲಾದ, ಕೃಷ್ಣನೆಂದು ಗುರುತಿಸಲಾಗುತ್ತದೆ. ನಿರೀಶ್ವರವಾದಿ ಓಲಿಕೆಗಳನ್ನು ಹೊಂದಿರುವ ಸಾಂಖ್ಯದಂತಹ ಪಂಥಗಳೂ ಇವೆ.ದರ್ಶನಶಾಸ್ತ್ರ ಗಳು ಮುಖ್ಯವಾಗಿವೆ.[೪೫]
ದೇವತೆಗಳು ಮತ್ತು ಅವತಾರಗಳು

ವಿಷ್ಣುವಿನ ಎಂಟನೆಯ ಅವತಾರನಾದ ಕೃಷ್ಣ (ಎಡಕ್ಕೆ) ಅಥವಾ ಸ್ವಯಂ ಭಗವಾನ್, ತನ್ನ ಗೆಳತಿ ರಾಧೆಯೊಂದಿಗೆ, ಹಲವಾರು ಸಂಪ್ರದಾಯಗಳಾದ್ಯಂತ ರಾಧಾ ಕೃಷ್ಣರೆಂದು ಆರಾಧಿಸಲ್ಪಡುತ್ತಾರೆ – ೧೭೦೦ರ ದಶಕದಿಂದ ಸಾಂಪ್ರದಾಯಿಕ ವರ್ಣಚಿತ್ರ.

ಹಿಂದೂ ಧರ್ಮಗ್ರಂಥಗಳು ದೇವ (ಅಥವಾ ಸ್ತ್ರೀ ರೂಪದಲ್ಲಿ ದೇವಿ) (“ತೇಜಸ್ವಿಯಾಗಿರುವವರು”) ಎಂದು ಕರೆಯಲಾದ ಅಲೌಕಿಕ ಅಸ್ತಿತ್ವಗಳನ್ನು ಉಲ್ಲೇಖಿಸುತ್ತವೆ. [೪೬][೪೭] ದೇವತೆಗಳು ಹಿಂದೂ ಸಂಸ್ಕೃತಿಯ ಒಂದು ಅಖಂಡ ಭಾಗವಾಗಿದ್ದಾರೆ ಮತ್ತು ಕಲೆ, ವಾಸ್ತುಶಿಲ್ಪ, ಮತ್ತು ಮೂರ್ತಿಗಳ ಮೂಲಕ ಚಿತ್ರಿಸಲ್ಪಟ್ಟಿದ್ದಾರೆ, ಮತ್ತು ಅವರ ಬಗ್ಗೆ ಪೌರಾಣಿಕ ಕಥೆಗಳನ್ನು ಧರ್ಮಗ್ರಂಥಗಳಲ್ಲಿ ನಿರೂಪಿಸಲಾಗಿದೆ, ವಿಶೇಷವಾಗಿ ಭಾರತೀಯ ಮಹಾಕಾವ್ಯ ಮತ್ತು ಪುರಾಣಗಳಲ್ಲಿ. ಆದರೆ, ಹಲವುವೇಳೆ ಅವರನ್ನು, ಪರಮಶಕ್ತ ಸಶರೀರ ದೇವರಾದ ಈಶ್ವರನಿಂದ ಭಿನ್ನವಾಗಿ ನೋಡಲಾಗಿದೆ, ಮತ್ತು ಹಲವಾರು ಹಿಂದೂಗಳು ಒಂದು ನಿರ್ದಿಷ್ಟ ರೂಪದಲ್ಲಿ ಈಶ್ವರನನ್ನು ತಮ್ಮ ಇಷ್ಟ ದೇವತೆಯಾಗಿ ಆರಾಧಿಸುತ್ತಾರೆ.[೪೮][೪೯] ಆಯ್ಕೆಯು ವೈಯಕ್ತಿಕ ಒಲವು,[೪೬] ಮತ್ತು ಪ್ರಾದೇಶಿಕ ಹಾಗೂ ಮನೆತನದ ಸಂಪ್ರದಾಯಗಳ ವಿಷಯವಾಗಿದೆ.[೪೬]

ಹಿಂದೂ ಮಹಾಕಾವ್ಯಗಳು ಮತ್ತು ಪುರಾಣಗಳು ಸಮಾಜದಲ್ಲಿ ಧರ್ಮವನ್ನು ಪುನಃ ಸ್ಥಾಪಿಸಲು ಹಾಗೂ ಮಾನವರಿಗೆ ಮೋಕ್ಷಕ್ಕೆ ದಾರಿ ತೋರಿಸಲು ದೈಹಿಕ ರೂಪದಲ್ಲಿ ಭೂಮಿಗೆ ದೇವರ ಅವರೋಹಣದ ಹಲವಾರು ಉಪಾಖ್ಯಾನಗಳನ್ನು ನಿರೂಪಿಸುತ್ತವೆ. ಅಂತಹ ಒಂದು ಮೂರ್ತರೂಪಕ್ಕೆ ಅವತಾರವೆಂದು ಕರೆಯಲಾಗುತ್ತದೆ. ಅತ್ಯಂತ ಪ್ರಸಿದ್ಧ ಅವತಾರಗಳು ವಿಷ್ಣುವಿನವು ಮತ್ತು ರಾಮ (ರಾಮಾಯಣದ ನಾಯಕ) ಹಾಗೂ ಕೃಷ್ಣರನ್ನು (ಮಹಾಭಾರತ ಮಹಾಕಾವ್ಯದಲ್ಲಿ ಒಬ್ಬ ಪ್ರಮುಖ ವ್ಯಕ್ತಿ) ಒಳಗೊಳ್ಳುತ್ತವೆ.
ಕರ್ಮ ಮತ್ತು ಸಂಸಾರ
ಕರ್ಮ ಎಂದರೆ ಅಕ್ಷರಶಃ ಕ್ರಿಯೆ, ಕೆಲಸ, ಅಥವಾ ಕಾರ್ಯ,[೫೦] ಮತ್ತು ಇದನ್ನು “ಕಾರಣ ಮತ್ತು ಫಲದ ನೈತಿಕ ನಿಯಮ”ವೆಂದು ವಿವರಿಸಬಹುದು.[೫೧] ಉಪನಿಷತ್ತುಗಳ ಪ್ರಕಾರ, ಜೀವಾತ್ಮನೆಂದು ಕರೆಯಲ್ಪಡುವ ಒಬ್ಬ ವ್ಯಕ್ತಿಯು ಶಾರೀರಿಕ ಅಥವಾ ಮಾನಸಿಕ ಕ್ರಿಯೆಗಳಿಂದ ಸಂಸ್ಕಾರಗಳನ್ನು ವಿಕಸಿಸಿಕೊಳ್ಳುತ್ತಾನೆ. ಭೌತಿಕ ಶರೀರಕ್ಕಿಂತ ಹೆಚ್ಚು ಗೂಢ ಆದರೆ ಅತ್ಮಕ್ಕಿಂತ ಕಡಿಮೆ ಗೂಢ ಶರೀರವಾದ ಲಿಂಗಶರೀರವು ಭಾವನೆಗಳನ್ನು ಉಳಿಸಿಕೊಂಡು ಮುಂದಿನ ಜನ್ಮಕ್ಕೆ ಅವುಗಳನ್ನು ಹೊತ್ತೊಯ್ಯುತ್ತದೆ, ಮತ್ತು ವ್ಯಕ್ತಿಗಾಗಿ ಒಂದು ಅದ್ವಿತೀಯ ಪಥವನ್ನು ಸ್ಥಾಪಿಸುತ್ತದೆ. [೫೨] ಈ ಪ್ರಕಾರವಾಗಿ, ಒಂದು ವಿಶ್ವವ್ಯಾಪಿ, ನಿಷ್ಪಕ್ಷಪಾತ, ಮತ್ತು ಎಂದಿಗೂ ವಿಫಲಗೊಳ್ಳದ ಕರ್ಮದ ಪರಿಕಲ್ಪನೆಯು ಸಹಜವಾಗಿ ಪುನರವತಾರ ಮತ್ತು ಒಬ್ಬರ ವ್ಯಕ್ತಿತ್ವ, ಲಕ್ಷಣಗಳು, ಹಾಗೂ ಕುಟುಂಬವನ್ನು ವಿವರಿಸುತ್ತದೆ. ಕರ್ಮವು ಇಚ್ಛಾ ಸ್ವಾತಂತ್ರ್ಯ ಮತ್ತು ದೈವದ ಕಲ್ಪನೆಗಳನ್ನು ಒಟ್ಟಾಗಿ ಬಂಧಿಸುತ್ತದೆ.

ಕ್ರಿಯೆ, ಪ್ರತಿಕ್ರಿಯೆ, ಜನನ, ಮರಣ ಹಾಗೂ ಪುನರ್ಜನ್ಮದ ಈ ಚಕ್ರವು ಸಂಸಾರವೆಂದು ಕರೆಯಲಾಗುವ ಒಂದು ನಿರಂತತೆಯಾಗಿದೆ. ಪುನರವತಾರ ಮತ್ತು ಕರ್ಮದ ಕಲ್ಪನೆಯು ಹಿಂದೂ ಚಿಂತನೆಯಲ್ಲಿ ಒಂದು ಪ್ರಭಾವಿ ಆಧಾರವಾಕ್ಯವಾಗಿದೆ.

ಹಿಂದೂ ಧರ್ಮ
ಒಬ್ಬ ವ್ಯಕ್ತಿಯು ಹಳೆಯ ಮತ್ತು ಹರಿದ ಬಟ್ಟೆಗಳನ್ನು ತ್ಯಜಿಸಿ ಹೊಸ ಬಟ್ಟೆಗಳನ್ನು ಹೇಗೆ ಧರಿಸುತ್ತಾನೆಯೋ, ಹಾಗೆ ಒಂದು ಸಶರೀರ ಆತ್ಮವು ಹಳೆಯ ಶರೀರಗಳನ್ನು ತೊರೆದು ಹೊಸ ಭೌತಿಕ ಶರೀರಗಳನ್ನು ಪ್ರವೇಶಿಸುತ್ತದೆ. (ಭ.ಗೀ. ೨:೨೨)[೫೩]

ಹಿಂದೂ ಧರ್ಮ

ಎಂದು ಭಗವದ್ಗೀತೆಯು ಹೇಳುತ್ತದೆ.

ಸಂಸಾರವು ಕ್ಷಣಿಕ ಸಂತೋಷಗಳನ್ನು ಒದಗಿಸುತ್ತದೆ, ಮತ್ತು ಹಾಗಾಗಿ ಒಂದು ನಾಶವಾಗುವ ಶರೀರದ ಸಂತೋಷಗಳನ್ನು ಭೋಗಿಸಲು ಪುನರ್ಜನ್ಮವನ್ನು ಬಯಸುವಂತೆ ಜನರನ್ನು ಪ್ರೇರಿಸುತ್ತದೆ. ಆದರೆ, ಮೋಕ್ಷದ ಮೂಲಕ ಸಂಸಾರದ ಪ್ರಪಂಚದಿಂದ ಬಿಡುಗಡೆ ಹೊಂದುವುದು ಶಾಶ್ವತ ಸುಖ ಮತ್ತು ನೆಮ್ಮದಿಯನ್ನು ನಿಶ್ಚಿತಗೊಳಿಸುತ್ತದೆಂದು ನಂಬಲಾಗಿದೆ.[೫೪][೫೫] ಹಲವಾರು ಮರುಜನ್ಮಗಳ ಬಳಿಕ, ಒಂದು ಆತ್ಮವು ಅಂತಿಮವಾಗಿ ಬ್ರಹ್ಮಾಂಡದ ಚೇತನದೊಂದಿಗೆ (ಬ್ರಹ್ಮ/ಪರಮಾತ್ಮ) ಏಕತೆಯನ್ನು ಅರಸುತ್ತದೆಂದು ಭಾವಿಸಲಾಗಿದೆ.

ಮೋಕ್ಷ, ನಿರ್ವಾಣ ಅಥವಾ ಸಮಾಧಿಯೆಂದು ನಿರ್ದೇಶಿಸಲಾದ ಜೀವನದ ಅಂತಿಮ ಗುರಿಯನ್ನು ಹಲವು ವಿಭಿನ್ನ ರೀತಿಗಳಲ್ಲಿ ಅರ್ಥಮಾಡಿಕೊಳ್ಳಲಾಗುತ್ತದೆ: ದೇವರೊಂದಿಗೆ ಒಬ್ಬರ ಸಂಯೋಜನೆಯ ಸಾಕ್ಷಾತ್ಕಾರ; ದೇವರೊಂದಿಗೆ ಒಬ್ಬರ ಚಿರಂತನವಾದ ಸಂಬಂಧದ ಸಾಕ್ಷಾತ್ಕಾರ; ಎಲ್ಲ ಅಸ್ತಿತ್ವದ ಐಕಮತ್ಯದ ಸಾಕ್ಷಾತ್ಕಾರ; ಸಂಪೂರ್ಣ ನಿಸ್ವಾರ್ಥತೆ ಮತ್ತು ಆತ್ಮಜ್ಞಾನ; ಪರಿಪೂರ್ಣ ಮಾನಸಿಕ ಶಾಂತಿಯ ಸಿದ್ಧಿ; ಮತ್ತು ಪ್ರಾಪಂಚಿಕ ಕಾಮನೆಗಳಿಂದ ನಿರ್ಲಿಪ್ತತೆ. ಅಂತಹ ಸಾಕ್ಷಾತ್ಕಾರವು ಒಬ್ಬರನ್ನು ಸಂಸಾರದಿಂದ ವಿಮುಕ್ತಗೊಳಿಸುತ್ತದೆ ಮತ್ತು ಪುನರ್ಜನ್ಮದ ಆವೃತ್ತವನ್ನು ಕೊನೆಗೊಳಿಸುತ್ತದೆ. [೫೬][೫೭]

ಮೋಕ್ಷದ ಕರಾರುವಾಕ್ಕಾದ ಪರಿಕಲ್ಪನೆಯು ವಿವಿಧ ಹಿಂದೂ ತತ್ವ ಸಿದ್ಧಾಂತಗಳ ನಡುವೆ ಭಿನ್ನವಾಗಿದೆ. ಉದಾಹರಣೆಗೆ, ಮೋಕ್ಷಪ್ರಾಪ್ತಿಯ ನಂತರ ಆತ್ಮವು ತನ್ನನ್ನು ಒಬ್ಬ ವ್ಯಕ್ತಿಯೊಂದಿಗೆ ಗುರುತಿಸದೆ ಎಲ್ಲ ವಿಷಯಗಳಲ್ಲೂ ಬ್ರಹ್ಮದೊಂದಿಗೆ ಸಮಾನವೆಂದು ಗುರುತಿಸುತ್ತದೆಂದು ಅದ್ವೈತ ವೇದಾಂತವು ಅಭಿಪ್ರಾಯಪಡುತ್ತದೆ. ದ್ವೈತ ಪಂಥದ ಅನುಯಾಯಿಗಳು ತಮ್ಮನ್ನು ಬ್ರಹ್ಮದ ಭಾಗವೆಂದು ಗುರುತಿಸಿಕೊಳ್ಳುತ್ತಾರೆ, ಮತ್ತು ಮೋಕ್ಷಪ್ರಾಪ್ತಿಯ ನಂತರ ತಾವು ಆಯ್ದುಕೊಂಡ ರೂಪದ ಈಶ್ವರನ ಸಂಗಡ ಚಿರಕಾಲವನ್ನು ಸ್ವರ್ಗದಲ್ಲಿ ಕಳೆಯುವರೆಂದು ನಿರೀಕ್ಷಿಸುತ್ತಾರೆ, [೫೮] ಹಾಗಾಗಿ, ದ್ವೈತ ಪಂಥದ ಅನುಯಾಯಿಗಳು “ಸಕ್ಕರೆಯನ್ನು ಸವಿಯಲು” ಅಪೇಕ್ಷಿಸಿದರೆ ಅದ್ವೈತ ಪಂಥದ ಅನುಯಾಯಿಗಳು “ಸಕ್ಕರೆಯಾಗಲು” ಅಪೇಕ್ಷಿಸುತ್ತಾರೆಂದು ಹೇಳಲಾಗುತ್ತದೆ.[೫೯]
ಮನುಷ್ಯ ಜನ್ಮದ ಉದ್ದೇಶಗಳು

ಸಂಪ್ರದಾಯಬದ್ಧ ಹಿಂದೂ ಚಿಂತನೆಯು ಪುರುಷಾರ್ಥಗಳೆಂದು ಪರಿಚಿತವಾದ ಮುಂದೆ ಹೇಳಲಾದ ಮನುಷ್ಯ ಜನ್ಮದ ಉದ್ದೇಶಗಳನ್ನು ಒಪ್ಪಿಕೊಳ್ಳುತ್ತದೆ: ಧರ್ಮ “ಧರ್ಮಿಷ್ಠತೆ, ನೀತಿಶಾಸ್ತ್ರ;” ಅರ್ಥ “ಜೀವನಾಧಾರ, ಸಂಪತ್ತು;” ಕಾಮ “ಇಂದ್ರಿಯಾಪೇಕ್ಷೆಗಳು;” ಮೋಕ್ಷ “(ಸಂಸಾರದಿಂದ) ಬಂಧವಿಮುಕ್ತಿ, ಬಿಡುಗಡೆ”.[೬೦][೬೧]
ಯೋಗ
ಯೋಗಿಕ ಧ್ಯಾನದಲ್ಲಿರುವ ಶಿವನ ಒಂದು ಮೂರ್ತಿ.

ಯಾವುದೇ ವಿಧಾನದಲ್ಲಿ ಒಬ್ಬ ಹಿಂದೂವು ಜೀವನದ ಗುರಿಯನ್ನು ಗೊತ್ತುಪಡಿಸಿದರೂ, ಆ ಗುರಿಯನ್ನು ತಲುಪಲು ಋಷಿಗಳು ಹೇಳಿಕೊಟ್ಟ ಹಲವಾರು ವಿಧಾನಗಳಿವೆ (ಯೋಗಗಳು). ಯೋಗಕ್ಕೆ ಮುಡುಪಾಗಿಡಲಾದ ಪಠ್ಯಗಳು, ಭಗವದ್ಗೀತೆ, ಯೋಗ ಸೂತ್ರಗಳು, ಹಠ ಯೋಗ ಪ್ರದೀಪಿಕಾ, ಮತ್ತು ಅವುಗಳ ತಾತ್ವಿಕ ಹಾಗೂ ಐತಿಹಾಸಿಕ ಆಧಾರವಾಗಿ ಉಪನಿಷತ್ತುಗಳನ್ನು ಒಳಗೊಂಡಿವೆ. ಜೀವನದ ಆಧ್ಯಾತ್ಮಿಕ ಗುರಿಯನ್ನು (ಮೋಕ್ಷ, ಸಮಾಧಿ ಅಥವಾ ನಿರ್ವಾಣ) ಸಾಧಿಸಲು ಒಬ್ಬರು ಅನುಸರಿಸಬಹುದಾದ ದಾರಿಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:

ಭಕ್ತಿಯೋಗ (ಪ್ರೀತಿ ಮತ್ತು ಭಕ್ತಿಯ ಮಾರ್ಗ)
ಕರ್ಮಯೋಗ (ನ್ಯಾಯವಾದ ಕ್ರಿಯೆಯ ಮಾರ್ಗ)
ರಾಜಯೋಗ (ಧ್ಯಾನದ ಮಾರ್ಗ)
ಜ್ಞಾನಯೋಗ (ವಿವೇಕದ ಮಾರ್ಗ)[೬೨]

ತನ್ನ ಒಲವು ಮತ್ತು ವಿವೇಚನೆಯ ಪ್ರಕಾರ ಒಬ್ಬ ವ್ಯಕ್ತಿಯು ಬೇರೆಯವುಗಳ ಬದಲು ಒಂದು ಅಥವಾ ಕೆಲವು ಯೋಗಗಳನ್ನು ಆರಿಸಿಕೊಳ್ಳಬಹುದು. ಈಗ ವಿಶ್ವವು ಕಲಿಯುಗದಲ್ಲಿರುವುದರಿಂದ (ಯುಗ ಆವರ್ತದ ಭಾಗವಾದ ನಾಲ್ಕು ಯುಗಗಳ ಪೈಕಿ ಒಂದು) ತಮ್ಮ ನಂಬಿಕೆಯನ್ನು ಆಧರಿಸಿ, ಬಹುತೇಕ ಜನರಿಗೆ ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಸಾಧಿಸಲು ಭಕ್ತಿಯು ಏಕೈಕ ವ್ಯಾವಹಾರಿಕವಾದ ಮಾರ್ಗವೆಂದು ಕೆಲವು ಭಕ್ತಿ ಪಂಥಗಳು ಬೋಧಿಸುತ್ತವೆ.[೬೩] ಒಂದು ಯೋಗದ ಆಚರಣೆಯು ಬೇರೆಯವುಗಳನ್ನು ವರ್ಜಿಸುವುದಿಲ್ಲ. ವಿವಿಧ ಯೋಗಗಳು ಇತರ ಯೋಗಗಳಲ್ಲಿ ಸಹಜವಾಗಿ ಬೆರೆಯುತ್ತವೆ ಮತ್ತು ಇತರ ಯೋಗಗಳಿಗೆ ನೆರವಾಗುತ್ತವೆಂದು ಹಲವು ಪಂಥಗಳು ನಂಬುತ್ತವೆ. ಉದಾಹರಣೆಗೆ, ಜ್ಞಾನಯೋಗದ ಆಚರಣೆಯು ಸ್ವಾಭಾವಿಕವಾಗಿ ಪರಿಶುದ್ಧ ಪ್ರೇಮದೆಡೆಗೆ (ಭಕ್ತಿಯೋಗದ ಗುರಿ) ಕರೆದೊಯ್ಯುತ್ತದೆಂದು, ಮತ್ತು ವಿಪರ್ಯಯವಾಗಿ ಭಕ್ತಿಯೋಗದ ಆಚರಣೆ ಜ್ಞಾನಯೋಗದೆಡೆಗೆ ಕರೆದೊಯ್ಯುತ್ತದೆಂದು ಭಾವಿಸಲಾಗಿದೆ.[೬೪] (ರಾಜಯೋಗದಲ್ಲಿರುವಂತೆ) ಗಹನವಾದ ಧ್ಯಾನವನ್ನು ಅಭ್ಯಾಸ ಮಾಡುವ ಯಾರಾದರೂ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಯೋಗಗಳ ಪ್ರಮುಖವಾದ ಮೂಲತತ್ವಗಳನ್ನು ಮೈದಾಳಿಸಿಕೊಂಡಿರಲೇಬೇಕು.[೬೨][೬೫]
ಆಚರಣೆಗಳು

ಚತುರ್ಥಿ ಹಬ್ಬದ ಅವಧಿಯಲ್ಲಿ ಗಣೇಶನ ವಿಸರ್ಜನೆಯ (ನಿಮರ್ಜನೆ) ಆಚರಣೆ

ಹಿಂದೂ ಆಚರಣೆಗಳು ಸಾಮಾನ್ಯವಾಗಿ ದೇವರ ಅರಿವನ್ನು ಅರಸುವ ಮತ್ತು ಕೆಲವೊಮ್ಮೆ ದೇವತೆಗಳಿಂದ ಆಶೀರ್ವಾದಗಳನ್ನು ಬೇಡುವುದನ್ನು ಸಹ ಒಳಗೊಂಡಿರುತ್ತವೆ. ಹಾಗಾಗಿ, ಹಿಂದೂ ಧರ್ಮವು ದಿನನಿತ್ಯದ ಜೀವನದ ನಡುವೆಯೂ ಒಬ್ಬರಿಗೆ ದೈವತ್ವದ ಬಗ್ಗೆ ಚಿಂತಿಸಲು ನೆರವಾಗುವ ಉದ್ದೇಶದಿಂದ ಅನೇಕ ಆಚರಣೆಗಳನ್ನು ವೃದ್ಧಿಪಡಿಸಿದೆ. ಹಿಂದೂಗಳು, ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ, ಪೂಜೆಯಲ್ಲಿ (ಆರಾಧನೆ ಅಥವಾ ಗೌರವ)[೪೪] ಭಾಗವಹಿಸಬಹುದು. ಮನೆಯಲ್ಲಿ, ಹಿಂದೂಗಳು ಹಲವುವೇಳೆ ತಮ್ಮ ಇಷ್ಟದೇವತೆಗಳಿಗೆ ಸಮರ್ಪಿತವಾದ ಮೂರ್ತಿಗಳಿರುವ ಒಂದು ದೇವರಮನೆಯನ್ನು ನಿರ್ಮಿಸುತ್ತಾರೆ. ದೇವಸ್ಥಾನಗಳು ಸಾಮಾನ್ಯವಾಗಿ ಒಬ್ಬ ಮುಖ್ಯ ದೇವತೆಗೆ, ಜೊತೆಗೆ ಸಂಬಂಧಿತ ಅಪ್ರಧಾನ ದೇವತೆಗಳಿಗೆ, ಸಮರ್ಪಿತವಾಗಿರುತ್ತವೆಯಾದರೂ ಕೆಲವು ದೇವಸ್ಥಾನಗಳು ಅನೇಕ ದೇವತೆಗಳನ್ನು ಹೊಂದಿರುತ್ತವೆ. ದೇವಸ್ಥಾನಗಳಿಗೆ ಭೇಟಿ ನೀಡುವುದು ಅನಿವಾರ್ಯವಲ್ಲ,[೬೬] ಮತ್ತು ಹಲವರು ಧಾರ್ಮಿಕ ಹಬ್ಬಗಳ ಅವಧಿಯಲ್ಲಿ ಮಾತ್ರ ದೇವಸ್ಥಾನಗಳಿಗೆ ಭೇಟಿಕೊಡುತ್ತಾರೆ. ಹಿಂದೂಗಳು ತಮ್ಮ ಪೂಜೆಯನ್ನು ಮೂರ್ತಿಗಳ ಮೂಲಕ ಮಾಡುತ್ತಾರೆ. ಮೂರ್ತಿಯು ಆರಾಧಕ ಮತ್ತು ದೇವರ ನಡುವೆ ಒಂದು ಪ್ರತ್ಯಕ್ಷ ಸಂಪರ್ಕವಾಗಿ ಕೆಲಸಮಾಡುತ್ತದೆ.[೬೭] ದೇವರು ಸರ್ವಾಂತರ್ಯಾಮಿಯಾಗಿರುವುದರಿಂದ ಮೂರ್ತಿಯನ್ನು ಹಲವುವೇಳೆ ದೇವರ ಅಭಿವ್ಯಕ್ತಿಯೆಂದು ಪರಿಗಣಿಸಲಾಗುತ್ತದೆ. ಮೂರ್ತಿಯನ್ನು ಬರಿಯ ಕಲ್ಲು ಅಥವಾ ಕಟ್ಟಿಗೆಯಾಗಿ ಭಾವಿಸದೇ ದೈವತ್ವದ ಪ್ರಕಟವಾದ ರೂಪವಾಗಿ ಭಾವಿಸಬೇಕೆಂದು ಪದ್ಮ ಪುರಾಣವು ಹೇಳುತ್ತದೆ.[೬೮] ಆರ್ಯ ಸಮಾಜದಂತಹ ಕೆಲವು ಹಿಂದೂ ಪಂಥಗಳು ಮೂರ್ತಿಗಳ ಮೂಲಕ ದೇವರನ್ನು ಪೂಜಿಸುವುದನ್ನು ನಂಬುವುದಿಲ್ಲ.

ಹಿಂದೂ ಧರ್ಮವು ಕಲೆ, ವಾಸ್ತುಶಾಸ್ತ್ರ, ಸಾಹಿತ್ಯ ಮತ್ತು ಪೂಜೆಯಲ್ಲಿ ಧಾರ್ಮಿಕವನ್ನು ಚಿತ್ರಿಸಲು ಸಂಕೇತ ಸಮೂಹ ಮತ್ತು ವಿಗ್ರಹ ನಿರ್ಮಾಣಶಾಸ್ತ್ರದ ವಿಕಸಿತ ವ್ಯವಸ್ಥೆಯನ್ನು ಹೊಂದಿದೆ. ಈ ಸಂಕೇತಗಳು ತಮ್ಮ ಅಂತರಾರ್ಥವನ್ನು ಧರ್ಮಗ್ರಂಥಗಳು, ಪುರಾಣ ಸಂಗ್ರಹಗಳು, ಅಥವಾ ಸಾಂಸ್ಕೃತಿಕ ಸಂಪ್ರದಾಯಗಳಿಂದ ಪಡೆಯುತ್ತವೆ. (ಪರಬ್ರಹ್ಮವನ್ನು ನಿರೂಪಿಸುವ) ಓಂ ವರ್ಣ ಮತ್ತು (ಶುಭವನ್ನು ಸಂಕೇತೀಕರಿಸುವ) ಸ್ವಸ್ತಿಕ ಚಿಹ್ನೆಗಳು ಹಿಂದೂ ಧರ್ಮವನ್ನೇ ಪ್ರತಿನಿಧಿಸುವಷ್ಟು ದೊಡ್ಡದಾಗಿ ಬೆಳೆದಿವೆ, ಮತ್ತು ತಿಲಕದಂತಹ ಇತರ ಚಿಹ್ನೆಗಳು ಮತದ ಒಬ್ಬ ಅನುಯಾಯಿಯನ್ನು ಗುರುತಿಸುತ್ತವೆ. ಹಿಂದೂ ಧರ್ಮವು, ಕಮಲ, ಚಕ್ರ ಮತ್ತು ವೀಣೆಯನ್ನು ಒಳಗೊಂಡಂತೆ, ಹಲವು ಸಂಕೇತಗಳನ್ನು ನಿರ್ದಿಷ್ಟ ದೇವತೆಗಳೊಂದಿಗೆ ಸಂಬಂಧಿಸುತ್ತದೆ.

ಮಂತ್ರಗಳು ಅವುಗಳ ಅರ್ಥ, ಶಬ್ದ ಮತ್ತು ಪಠನ ಶೈಲಿಯ ಮೂಲಕ ಒಬ್ಬ ಭಕ್ತನಿಗೆ ಮನಸ್ಸನ್ನು ದೇವರ ಚಿಂತನೆಗಳ ಮೇಲೆ ಕೇಂದ್ರೀಕರಿಸಲು ಅಥವಾ ದೇವತೆಗಳ ಪ್ರತಿ ತನ್ನ ಭಕ್ತಿಯನ್ನು ವ್ಯಕ್ತಪಡಿಸಲು ನೆರವಾಗುವ ವಿಜ್ಞಾಪನೆಗಳು, ಸ್ತುತಿಗಳು ಮತ್ತು ಪ್ರಾರ್ಥನೆಗಳು. ಅನೇಕ ಭಕ್ತರು ಮುಂಜಾನೆಯ ಶುಧ್ಧಿಸ್ನಾನವನ್ನು ಗಾಯತ್ರಿ ಮಂತ್ರ ಅಥವಾ ಮಹಾಮೃತ್ಯುಂಜಯ ಮಂತ್ರಗಳನ್ನು ಪಠಿಸುತ್ತ ಒಂದು ಪವಿತ್ರವಾದ ನದಿಯ ದಡದಲ್ಲಿ ಮಾಡುತ್ತಾರೆ. ಮಹಾಭಾರತ ಮಹಾಕಾವ್ಯವು (ಅನೇಕ ಹಿಂದೂಗಳು ಈಗ ನಡೆಯುತ್ತಿರುವ ಯುಗವೆಂದು ನಂಬುವ) ಕಲಿಯುಗದಲ್ಲಿ ಜಪವನ್ನು (ವಿಧಿವತ್ತಾದ ಪಠನ) ಅತಿ ಮುಖ್ಯವಾದ ಕರ್ತವ್ಯವೆಂದು ಕೊಂಡಾಡುತ್ತದೆ. ಅನೇಕರು ಜಪವನ್ನು ತಮ್ಮ ಪ್ರಮುಖ ಆಧ್ಯಾತ್ಮಿಕ ಆಚರಣೆಯಾಗಿ ಅಳವಡಿಸಿಕೊಳ್ಳುತ್ತಾರೆ.
ಧಾರ್ಮಿಕ ಸಂಸ್ಕಾರಗಳು
ಒಂದು ಹಿಂದೂ ವಿವಾಹ ಸಮಾರಂಭದಲ್ಲಿ ಸಾಂಪ್ರದಾಯಿಕ ದೀಪಗಳು ಮತ್ತು ಇತರ ಪ್ರಾರ್ಥನಾ ವಸ್ತುಗಳು.

ಹಿಂದೂಗಳು ಬಹುಸಂಖ್ಯೆಯಲ್ಲಿ ದೈನಂದಿನ ಆಧಾರದ ಮೇಲೆ ಧಾರ್ಮಿಕ ಸಂಸ್ಕಾರಗಳಲ್ಲಿ ಭಾಗವಹಿಸುತ್ತಾರೆ.[೬೯] ಬಹುತೇಕ ಹಿಂದೂಗಳು ಮನೆಯಲ್ಲಿ ಧಾರ್ಮಿಕ ಸಂಸ್ಕಾರಗಳನ್ನು ಆಚರಿಸುತ್ತಾರೆ[೭೦], ಆದರೆ ಸಂಸ್ಕಾರಗಳ ಆಚರಣೆಯು ಪ್ರದೇಶಗಳು, ಹಳ್ಳಿಗಳು, ಮತ್ತು ವ್ಯಕ್ತಿಗಳ ನಡುವೆ ಬಹಳವಾಗಿ ಬದಲಾಗುತ್ತವೆ. ಶ್ರದ್ಧಾವಂತ ಹಿಂದೂಗಳು ಪ್ರಾತಃಕಾಲದಲ್ಲಿ ಸ್ನಾನದ ನಂತರ ಪೂಜೆ, (ಸಾಮಾನ್ಯವಾಗಿ ಒಂದು ಕೌಟುಂಬಿಕ ದೇವಸ್ಥಾನದಲ್ಲಿ ಮತ್ತು ವಿಶಿಷ್ಟವಾಗಿ ಒಂದು ದೀಪವನ್ನು ಬೆಳಗುವುದು ಮತ್ತು ದೇವತೆಗಳ ಮೂರ್ತಿಗಳಿಗೆ ನೈವೇದ್ಯಾರ್ಪಣೆಯನ್ನು ಒಳಗೊಳ್ಳುತ್ತದೆ) ಧಾರ್ಮಿಕ ಸಾಹಿತ್ಯದ ಪಠನ, ಭಜನೆ, ಧ್ಯಾನ, ಮಂತ್ರಗಳ ಪಠನ, ಧರ್ಮಗ್ರಂಥಗಳ ವಾಚನ ಇತ್ಯಾದಿ ದಿನನಿತ್ಯದ ಕೆಲಸಗಳನ್ನು ನೆರವೇರಿಸುತ್ತಾರೆ[೭೦]. ಪಾವಿತ್ರ್ಯ ಮತ್ತು ಮಾಲಿನ್ಯದ ನಡುವಣ ವಿಭಜನವು ಧಾರ್ಮಿಕ ಸಂಸ್ಕಾರದಲ್ಲಿನ ಒಂದು ಗಮನಾರ್ಹ ವೈಶಿಷ್ಟ್ಯವಾಗಿದೆ. ಧಾರ್ಮಿಕ ಸಂಸ್ಕಾರ ವಿಧಾನಗಳ ಮೊದಲು ಅಥವಾ ಅವುಗಳ ಅವಧಿಯಲ್ಲಿ ಪರಿಹರಿಸಿಕೊಳ್ಳಲೇಬೇಕಾದ ಅಥವಾ ಹೊರಗುಮಾಡಬೇಕಾದ ಆಚರಿಸುವವನ ಸ್ವಲ್ಪ ಪ್ರಮಾಣದ ಅಪವತ್ರಿತತೆ ಅಥವಾ ಮಲಿನತೆಯನ್ನು ಧಾರ್ಮಿಕ ವಿಧಿಗಳು ಭಾವಿಸಿಕೊಳ್ಳುತ್ತವೆ. ಹಾಗಾಗಿ ಶುದ್ಧೀಕರಣವು, ಸಾಮಾನ್ಯವಾಗಿ ನೀರಿನಿಂದ, ಬಹುತೇಕ ಧಾರ್ಮಿಕ ಕಾರ್ಯಗಳ ಒಂದು ವಿಶಿಷ್ಟ ಲಕ್ಷಣವಾಗಿದೆ.[೭೦] ಇತರ ವೈಶಿಷ್ಟ್ಯಗಳು, ಕಾಲ ಕಳೆದಂತೆ ಶೇಖರಣೆಯಾಗಿ ಮುಂದಿನ ಜಗತ್ತಿನಲ್ಲಿ ಕಷ್ಟಗಳನ್ನು ಕಡಿಮೆಮಾಡುವ, ದಾನದ ನೆರವೇರಿಕೆ ಅಥವಾ ಸುಕರ್ಮಗಳ ಮೂಲಕ ಪಡೆದ ಸಮರ್ಪಣೆಯ ಫಲದಾಯಕತೆಯಲ್ಲಿನ ನಂಬಿಕೆ ಮತ್ತು ಪುಣ್ಯದ ಪರಿಕಲ್ಪನೆಯನ್ನು ಒಳಗೊಂಡಿವೆ.[೭೦] ಅಗ್ನಿ ಆಹುತಿಯ ವೈದಿಕ ವಿಧಿಗಳು (ಯಜ್ಞ) ಈಗ ಕೇವಲ ಸಾಂದರ್ಭಿಕ ವಾಡಿಕೆಗಳಾಗಿವೆಯಾದರೂ ಸಿದ್ಧಾಂತದಲ್ಲಿ ಬಹಳ ಪವಿತ್ರವೆಂದು ಭಾವಿಸಲಾಗಿದೆ. ಆದರೆ ಹಿಂದೂ ವಿವಾಹ ಮತ್ತು ಶವ ಸಂಸ್ಕಾರ ಸಮಾರಂಭಗಳಲ್ಲಿ ಯಜ್ಞ ಮತ್ತು ವೈದಿಕ ಮಂತ್ರಗಳ ಪಠನ ಈಗಲೂ ರೂಢಿಯಲ್ಲಿವೆ.[೭೧] ಕ್ರಿಯಾವಿಧಿಗಳು, ಉಪಚಾರಗಳು ಕಾಲದೊಂದಿಗೆ ಬದಲಾಗುತ್ತವೆ. ಉದಾಹರಣೆಗೆ, ಕಳೆದ ಕೆಲವು ನೂರು ವರ್ಷಗಳಲ್ಲಿ, ಆಗಮ ಶಾಸ್ತ್ರದಿಂದ ವಿಧಿಸಲ್ಪಟ್ಟ ರೂಢಿಯಲ್ಲಿದ್ದ ಷೋಡಶೋಪಚಾರಗಳ ವರ್ಗದಲ್ಲಿನ ಧಾರ್ಮಿಕ ನಾಟ್ಯ ಮತ್ತು ಸಂಗೀತ ನಿವೇದನೆಗಳಂತಹ ಕ್ರಿಯಾವಿಧಿಗಳನ್ನು ಅನ್ನ ಮತ್ತು ಸಿಹಿ ಭಕ್ಷ್ಯಗಳ ನಿವೇದನೆಗಳಿಂದ ಬದಲಾಯಿಸಲಾಯಿತು.

ಜನನ, ವಿವಾಹ, ಮತ್ತು ಮರಣದಂತಹ ಸಂದರ್ಭಗಳು ಹಲವುವೇಳೆ ವಿಸ್ತಾರವಾದ ವರ್ಗಗಳ ಧಾರ್ಮಿಕ ಸಂಪ್ರದಾಯಗಳನ್ನು ಒಳಗೊಳ್ಳುತ್ತವೆ. ಹಿಂದೂ ಧರ್ಮದಲ್ಲಿ, ಜೀವನ ಚಕ್ರದ ಸಂಸ್ಕಾರಗಳು, ಅನ್ನಪ್ರಾಶನ (ಶಿಶುವಿಗೆ ನೀಡುವ ಮೊದಲ ಗಟ್ಟಿ ಆಹಾರದ ಸಂದರ್ಭ), ಉಪನಯನ (ಮೇಲು ಜಾತಿಯ ಮಕ್ಕಳು ಶಾಸ್ತ್ರೋಕ್ತ ವಿದ್ಯಾಭ್ಯಾಸದಲ್ಲಿ ತಮ್ಮ ಉಪಕ್ರಮದ ಸಂದರ್ಭದಲ್ಲಿ ಒಳಗೊಳ್ಳುವ “ಪವಿತ್ರವಾದ ದಾರದ ಸಮಾರಂಭ”) ಮತ್ತು ಶ್ರಾದ್ಧ (ಮೃತರ ಹೆಸರಿನಲ್ಲಿ ಜನರಿಗೆ ಔತಣನೀಡಿ ಸತ್ಕರಿಸುವ ಕ್ರಿಯಾವಿಧಿ) ಒಳಗೊಳ್ಳುತ್ತವೆ.[೭೨][೭೩] ಭಾರತದಲ್ಲಿನ ಬಹುತೇಕ ಜನರಿಗೆ, ಯುವ ದಂಪತಿಗಳ ಮದುವೆ ತೀರ್ಮಾನ ಮತ್ತು ಮದುವೆಯ ಕರಾರುವಾಕ್ಕಾದ ದಿನಾಂಕ ಹಾಗೂ ಕಾಲಗಳು ಜ್ಯೋತಿಷಿಗಳ ಸಮಾಲೋಚನೆಯಲ್ಲಿ ತಂದೆತಾಯಂದಿರಿಂದ ನಿರ್ಧರಿಸಲ್ಪಡುವ ವಿಷಯಗಳಾಗಿವೆ.[೭೨] ಮರಣಾನಂತರ, ಸಂನ್ಯಾಸಿಗಳು, ಹಿಜಿಡ, ಮತ್ತು ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೊರತು ಬೇರೆಲ್ಲರಿಗೂ ದಹನಸಂಸ್ಕಾರವು ಅನಿವಾರ್ಯವೆಂದು ಪರಿಗಣಿಸಲಾಗುತ್ತದೆ.[೭೪] ದಹನಸಂಸ್ಕಾರವನ್ನು ವಿಶಿಷ್ಟವಾಗಿ ಬಟ್ಟೆಯಿಂದ ಶವವನ್ನು ಸುತ್ತಿ ಅದನ್ನು ಚಿತೆಯ ಮೇಲೆ ಸುಟ್ಟು ನೆರವೇರಿಸಲಾಗುತ್ತದೆ.
ತೀರ್ಥಯಾತ್ರೆ ಮತ್ತು ಹಬ್ಬಗಳು

ಬೆಳಕಿನ ಹಬ್ಬವಾದ ದೀಪಾವಳಿಯು ಹಿಂದೂ ಧರ್ಮದ ಒಂದು ಮುಖ್ಯ ಹಬ್ಬವಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಹಲವುವೇಳೆ ಬೆಳಗಿಸಲಾದ ಸಾಂಪ್ರದಾಯಿಕ ಹಣತೆಗಳನ್ನು ಇಲ್ಲಿ ತೋರಿಸಲಾಗಿದೆ

ತೀರ್ಥಯಾತ್ರೆಯು ಹಿಂದೂ ಧರ್ಮದಲ್ಲಿ ಕಡ್ಡಾಯವಲ್ಲವಾದರೂ ಬಹಳ ಜನ ಅನುಯಾಯಿಗಳು ಅವನ್ನು ಕೈಗೊಳ್ಳುತ್ತಾರೆ.[೭೫] ಹಿಂದೂಗಳು ಅಲಹಾಬಾದ್, ಹರಿದ್ವಾರ, ವಾರಾಣಸಿ, ಮತ್ತು ವೃಂದಾವನವನ್ನು ಒಳಗೊಂಡಂತೆ ಭಾರತದ ಹಲವಾರು ಧಾರ್ಮಿಕ ನಗರಗಳನ್ನು ಗೌರವಿಸುತ್ತಾರೆ. ಪ್ರಸಿದ್ಧವಾದ ದೇವಾಲಯ ನಗರಗಳು, ಒಂದು ಪ್ರಮುಖ ವೈಷ್ಣವ ಜಗನ್ನಾಥ ದೇವಸ್ಥಾನ ಮತ್ತು ರಥಯಾತ್ರೆ ಉತ್ಸವದ ತಾಣವಾದ ಪುರಿ; ತಿರುಮಲ ವೆಂಕಟೇಶ್ವರ ದೇವಾಲಯದ ನೆಲೆಯಾದ ತಿರುಪತಿ; ಮತ್ತು ವೈಷ್ಣೋ ದೇವಿ ದೇವಸ್ಥಾನದ ತವರಾದ ಕಟ್ರಾವನ್ನು ಒಳಗೊಳ್ಳುತ್ತವೆ. ನಾಲ್ಕು ಪವಿತ್ರ ಸ್ಥಳಗಳಾದ ಪುರಿ, ರಾಮೇಶ್ವರ, ದ್ವಾರಕೆ, ಮತ್ತು ಬದರಿನಾಥ (ಅಥವಾ ಪರ್ಯಾಯವಾಗಿ ಹಿಮಾಲಯ ಪಟ್ಟಣಗಳಾದ ಬದರಿನಾಥ, ಕೇದಾರನಾಥ, ಗಂಗೋತ್ರಿ, ಮತ್ತು ಯಮುನೋತ್ರಿ) ಚಾರ್ ಧಾಮ್ (ನಾಲ್ಕು ನಿವಾಸಗಳು) ತೀರ್ಥಯಾತ್ರಾ ಸಂಚಾರವೆಂದು ಕರೆಸಿಕೊಳ್ಳುತ್ತದೆ. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳವು ಹಿಂದೂ ತೀರ್ಥಯಾತ್ರೆಗಳ ಪೈಕಿ ಅತ್ಯಂತ ಪವಿತ್ರವಾದದ್ದು; ಇದರ ನೆಲೆಯು ಅಲಹಾಬಾದ್, ಹರಿದ್ವಾರ, ನಾಸಿಕ್ ಮತ್ತು ಉಜ್ಜೈನ್‌ಗಳ ಮಧ್ಯೆ ಆವರ್ತವಾಗುತ್ತದೆ. ಶಕ್ತಿಯನ್ನು ಪೂಜಿಸಲಾಗುವ ಶಕ್ತಿ ಪೀಠಗಳು ಮತ್ತೊಂದು ಪ್ರಮುಖವಾದ ತೀರ್ಥಯಾತ್ರೆಗಳ ವರ್ಗವಾಗಿದೆ, ಮತ್ತು ಇವುಗಳಲ್ಲಿ ಕಾಲಿಘಾಟ್ ಹಾಗೂ ಕಾಮಾಖ್ಯ ಎರಡು ಪ್ರಧಾನ ಪೀಠಗಳು.
– ಗಣೇಶ ಗೋಪಾಲ ಮೊಗವೀರಾ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: