Category Archives: ಇತರೆ ಬ್ಲಾಗುಗಳಲ್ಲಿ

ಪಾರ್ಕಿನ್ಸನ್ಸ್ ಎಂಬ ಹೆಮ್ಮಾರಿಗೆ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ

ವೈಜ್ಞಾನಿಕವಾಗಿ ಗಣಕಯಂತ್ರಗಳಂತಹ ಅದ್ಭುತಗಳನ್ನು ಸೃಜಿಸಿದ ಮನುಷ್ಯ ತನ್ನ ಕೆಲಸಕಾರ್ಯಗಳಿಗಾಗಿ ಸ್ವನಿಯಂತ್ರಿತ ಯಂತ್ರೋಪಕರಣಗಳನ್ನೂ ಸೃಷ್ಟಿಸಿದ, ಓಡಾಟಕ್ಕಾಗಿ ಭೂ-ಜಲ-ವಾಯುಸಾರಿಗೆ ವಾಹನಗಳನ್ನೂ ತಯಾರಿಸಿಕೊಂಡ. ವೈರಿಗಳನ್ನು ಬಗ್ಗುಬಡಿಯಲು ಪರಮಾಣು ಸಂತುಲಿತ ನಿರೋಧಕಗಳನ್ನೂ ವಿನಾಶಕಗಳನ್ನೂ ಮೇಲಾಗಿ ಸೊಳ್ಳೆಯ ಆಕಾರದ ರೋಬೋಟಿಕ್ ಬೇಹುಗಾರಿಕಾ ಯಂತ್ರಗಳನ್ನೂ ಹುಟ್ಟಿಸಿದ. ಆದರೆ ಮಾನವನಿಗೇ ಬಂದೆರಗುವ ಕೆಲವು ಕಾಯಿಲೆಗಳಿಗೆ ವೈದ್ಯರಾಸಾಯನಿಕದಲ್ಲಿ ಪರಿಹಾರ ಕಾಣುವಲ್ಲಿ ಇನ್ನೂ ಯಶಸ್ಸು ಪಡೆದಿಲ್ಲ! ಜೀವರಾಸಾಯನಿಕಗಳಲ್ಲಿ ಕೌತುಕಮಯ ಸಂಗತಿಗಳು ಜೀನ್ಸ್ ರೂಪದಲ್ಲಿ ಅಡಗಿರುತ್ತವೆ ಎಂಬುದನ್ನೂ ಗ್ರಹಿಸಿದ ವಿಜ್ಞಾನಿಗಳಿಗೆ ಯಾವ ಜೀನ್ಸ್ ಎಲ್ಲಿ ಹೇಗೆ ಅನುವಂಶೀಯವಾಗಿ ವರ್ಗಾವಣೆಗೊಳ್ಳುತ್ತದೆ ಎಂಬುದನ್ನು ಕಾಣಲು ಇನ್ನೂ ಸಾಧ್ಯವಾಗಿಲ್ಲ. ವಂಶದಲ್ಲೇ ಇಲ್ಲದ ಅಪರೂಪದ ಕಾಯಿಲೆಗಳು ಅನಿರೀಕ್ಷಿತವಾಗಿ ಅಮರಿಕೊಂಡು ವ್ಯಕ್ತಿಯ ಜೀವನವನ್ನೇ ಹಾಳುಗೆಡವಿ ನಂತರ ಆತನ ವಂಶದಲ್ಲಿ ಅನುವಂಶೀಯವಾಗಿ ಉಳಿದುಬಿಡುವ ಘಟನೆಗಳೂ ಕಾಣಸಿಗುತ್ತವೆ; ಕಾರಣಗಳು ಮಾತ್ರ ನಿಖರವಾಗಿ ತಿಳಿದುಬರುವುದಿಲ್ಲ. ಗಾದೆಯೊಂದು ಹೀಗಿದೆ: ’ಯಾವಹುತ್ತದಲ್ಲಿ ಯಾವ ಹಾವಿರುತ್ತದೋ ಬಲ್ಲವರಾರು?’ ನಿಜ, ಅದು ಯಾರಿಗೂ ಮೊದಲೇ ಗೊತ್ತಾಗುವ ವಿಷಯವಲ್ಲ. ಅದೇ ಗಾದೆ ಹೀಗೂ ಬಳಕೆಯಾಗಬಹುದು: ಕಾಯಿಲೆಯೇ ಇಲ್ಲದ ಹುಡುಗಿ/ಹುಡುಗ ಎಂದು ಒಪ್ಪಿ ಮದುವೆಯಾದ ಕೆಲವೇ ವರ್ಷಗಳಲ್ಲಿ ಯಾವುದೋ ಕಾಯಿಲೆ ಕಾಣಿಸಿಕೊಳ್ಳಬಹುದು, ಜೀವಹರಣಗೈಯ್ಯಲೂ ಬಹುದು. ರೋಗಗ್ರಸ್ತ ಎಂದು ತಿರಸ್ಕರಿಸಲ್ಪಟ್ಟ ವ್ಯಕ್ತಿಗೆ ಬದುಕುಕೊಟ್ಟ ನಂತರ ರೋಗನಿವಾರಣೆಯಾಗಿ ದೀರ್ಘಕಾಲ ಬದುಕಲೂ ಬಹುದು! ಒಟ್ಟಾರೆ ಮಾನವ ಬದುಕಿನಲ್ಲಿ ಪ್ರತಿಯೊಂದೂ ನಮ್ಮ ನಿಯಂತ್ರಣದಲ್ಲೇ ಇದೆ ಎಂದುಕೊಳ್ಳುವುದು ತಪ್ಪು ಎಂಬುದಕ್ಕೆ ಆಧುನಿಕ ಸಮಾಜದಲ್ಲಿ ನಾವು ಕಾಣುತ್ತಿರುವ ಪಾರ್ಕಿನ್ಸನ್ಸ್ ಕಾಯಿಲೆ ಸಾಕ್ಷಿಯಾಗಿ ನಿಲ್ಲುತ್ತದೆ. ಮುಂದೆ ಓದಲು ವಿ.ಆರ್.ಭಟ್ ರವರ ಬ್ಲಾಗ್ ಗೆ ಬೇಟಿ ಕೊಡಿ

Advertisements

ಯುಪಿಎ ಮಾಡಿದ್ದೇನು ಗೊತ್ತೇ

ಹೊಸ ಹೊಸ ಅಸ್ತ್ರಗಳನ್ನು ಪ್ರಯೋಗಿಸುತ್ತಿರುವ ಸಾನಿಯಾ ಗಾಂಧಿಯವರ ‘ಉಪ’ ಸರಕಾರವು, ಇದೀಗ ಮಾಡೆಲ್‌ಗಳನ್ನು ಛೂಬಿಟ್ಟಿದೆ ಎಂದು ಗೊತ್ತಾಗಿದೆ. ಮಾಡೆಲ್ಲುಗಳು ಹೆಚ್ಚಾಗಿ ಮೈಮೇಲೆ ಅರಿವೆಯೂ ಪರಿವೆಯೂ ಇಲ್ಲದೆ, ಜನರನ್ನು ಅದರಲ್ಲೂ ಯುವ ಜನಾಂಗವನ್ನು ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಅರಿತುಕೊಂಡಿರುವ ಸರಕಾರವು, ಅವರನ್ನೇ ಕಣಕ್ಕಿಳಿಸಿದರೆ ಹೇಗೆ ಎಂದೆಲ್ಲಾ ಯೋಚಿಸಿ ನಿರ್ಧಾರಕ್ಕೆ ಬಂದಿರುವುದಾಗಿ, ಅಣ್ಣಾ ಹಜಾರೆಯವರನ್ನು “ಕಾಲಿನಿಂದ ತಲೆಯವರೆಗೆ ಭ್ರಷ್ಟ” ಎಂದು ಕರೆದು, ಈಗ ಮೂಲೆಗೆ ಝಾಡಿಸಲ್ಪಟ್ಟಿರುವ ಎಂತಿವಾರಿ, ಬೊಗಳೂರು ರದ್ದಿಗಾರರಿಗೆ ತಿಳಿಸಿದ್ದಾರೆ. ಮುಂದೆ ಓದಿ ಲೇಖಕರ ಬ್ಲಾಗಿನಲ್ಲಿ

ಬೆಟ್ಟದಾ ಬುಡದಲ್ಲಿ ಹುಟ್ಟಿರುವ ವೃಕ್ಷಕ್ಕೆ…

ಸೋಮಾಲಿಯಾದ ಕಳ್ಳರು ಸೆರೆಹಿಡಿದು ಆತನನ್ನೂ ಆತನ ಜೊತೆಗಾರರನ್ನೂ ಹಡಗಿನಲ್ಲೇ ಬಂಧಿಸಿದ್ದರು. ಅನ್ನ-ನೀರು ಸರಿಯಾಗಿ ಇಲ್ಲದೇ ಮೂರುಹಗಲು ಮೂರು ರಾತ್ರಿ ಕಳೆದುಹೋಗಿತ್ತು. ಶರೀರ ನಿತ್ರಾಣವಾಗಿತ್ತು. ಸಿರಿವಂತ ವ್ಯಾಪಾರಿಯ ಉದ್ಯೋಗಿಯಾಗಿ ಯಾಕಾದರೂ ಸೇರಿಕೊಂಡೆನೋ ಎನ್ನಿಸಿಬಿಟ್ಟಿತ್ತು. ಆತ ಮಲಗೇ ಇದ್ದ. ಜೊತೆಗಾರರನ್ನೂ ಅದೇ ಹಡಗಿನಲ್ಲಿ ಎಲ್ಲೆಲ್ಲೋ ಬಂಧಿಸಲಾಗಿತ್ತು. ನಾಳೆ ಬೆಳಗಾದರೆ ತಮ್ಮೆಲ್ಲರನ್ನೂ ಕೊಲ್ಲುವುದಾಗಿ ಹೇಳಿದ್ದನ್ನು ಆತ ಕೇಳಿದ್ದ. ಭಾರತ ಸರಕಾರದ ಸಂಬಂಧಪಟ್ಟ ಅಧಿಕಾರಿಗಳಿಗೆ ತಮ್ಮನ್ನು ಕಳ್ಳರು ಹೈಜಾಕ್ ಮಾಡಿ ಬಂಧಿಸಿದ ವರದಿ ತಲ್ಪಿದೆಯೋ …. ಮುಂದೆ ಓದಿ  http://nimmodanevrbhat.blogspot.in/2012/03/blog-post_21.html 
My Photoವಿ.ಆರ್.ಭಟ್

ನೇಯ್ದು ತೆಗೆದದ್ದು..

ನೇಯ್ದು ತೆಗೆದದ್ದು...

via ನೇಯ್ದು ತೆಗೆದದ್ದು...

ಮುಳುಗದಿರು ಕರುವೇ!

ಮುಳುಗದಿರು ಕರುವೇ!.

via ಮುಳುಗದಿರು ಕರುವೇ!.

ಅರಿಯದೇ ಅರ್ಚಿಸಿದರೂ ಮರೆಯದೇ ಮರ್ಯಾದೆಕೊಡುವ ಮುಗ್ಧನಿವ ಮಹಾದೇವ !

ಶಿವನ ಕುರಿತು ಸಾವಿರ ಸಾವಿರ ಕಥೆಗಳು ನಮಗೆ ದೊರೆಯುತ್ತಲೇ ಇರುತ್ತವೆ. ಈ ಲೋಕದ ಸೃಷ್ಟಿ, ಸ್ಥಿತಿ, ಲಯ[ನಾಶ] ಈ ಮೂರೂ ಕಾರ್ಯಗಳು ಏಕಮೂಲದ ಶಕ್ತಿಯಿಂದ ನಡೆದರೂ ಶಿವನನ್ನು ಲಯಕರ್ತನೆಂದು ದೂರಿ ಆತನನ್ನು ದೂರವೇ ಇಡುವ ಮಂದಿಯೂ ಇದ್ದಾರೆ; ಅದು ಹೊಸದೇನೂ ಅಲ್ಲ. ಪಾಲಿಗೆ ಬಂದ ಕೆಲಸವನ್ನು ಅನಿವಾರ್ಯವಾಗಿ ಪಾಲಿಸುವ ಶಿವ ಮಾರ್ಕಾಂಡೇಯನ ಭಕ್ತಿಗೆ ಒಲಿದು ಮೃತ್ಯುಂಜಯನೂ ಆಗಿದ್ದಾನೆ, ಕಣ್ಣ[ಪ್ಪ]ನ ಕಣ್ಣಿಗೆ ತನ್ನನ್ನೇ ಮಾರಿಕೊಂಡಿದ್ದಾನೆ! ಶಿವನನ್ನು ತಪಿಸಿ…..
via ಅರಿಯದೇ ಅರ್ಚಿಸಿದರೂ ಮರೆಯದೇ ಮರ್ಯಾದೆಕೊಡುವ ಮುಗ್ಧನಿವ ಮಹಾದೇವ !.