Category Archives: ಕಥೆಗಳು

ತಪ್ಪು ಹುಡುಕುವುದು ಸುಲಭ

ಒಬ್ಬ ಚಿತ್ರಕಾರ, ಆಗಷ್ಟೇ ಚಿತ್ತಾರಗಳ ಬರೆಯೋದಕ್ಕೆ ಶುರು ಮಾಡಿದ್ದ, ಚೆಂದದ ಚಿತ್ರ ಬರಿತಾ ಇದ್ದ, ಅವನಿಗೆ ತನ್ನ ಚಿತ್ರದ ಬಗ್ಗೆ ತನ್ನ ಕಲೆಯ ಸಾರ್ಥಕ್ಯದ ಬಗ್ಗೆ ತಿಳಿದುಕೊಳ್ಳ ಬೇಕು ಅನಿಸಿತು. ಸರಿ ಒಂದು ಸುಂದರ ಚಿತ್ರ ಬರೆದ, ಅಲ್ಲೇ ತನ್ನ ಕುಂಚ ಮತ್ತು ಬಣ್ಣಗಳ ಇಟ್ಟು “ಇದು ನನ್ನ ಮೊದಲ ಚಿತ್ರ, ಏನಾದ್ರೂ ತಪ್ಪು ಇದ್ರೆ ದಯವಿಟ್ಟು ‘ಗುರುತು ‘ಮಾಡಿ “ಅಂತ ಒಂದು ಫಲಕ ಹಾಕಿದ, ಸಂಜೆ ಆಯ್ತು, ಚಿತ್ರಕಾರ ಬಂದ, ಬಂದು ತನ್ನ ಚಿತ್ರ ನೋಡಿದ ಎಲ್ಲಿದೆ ಚಿತ್ರ!!! ??? ಚಿತ್ರದ ತುಂಬಾ ಬರಿ ಗುರುತುಗಳೇ ತುಂಬಿದ್ದವು, ಚಿತ್ರಕಾರ ಬಹಳ ನೊಂದುಕೊಂಡ, ತನಗೆ ಚಿತ್ರ ಬರೆವ ಯೋಗ್ಯತೆ ಇಲ್ಲವೇ ಇಲ್ಲ ಅಂತ ತೀರ್ಮಾನಿಸಿದ, ತನ್ನ ಗುರುವಿನ ಬಳಿ ಹೋಗಿ ಇದೇ ಮಾತು ಹೇಳಿದ, ತಾನು ಚಿತ್ರ ಬರೆವುದ ನಿಲ್ಲಿಸುವುದಾಗಿ ಹೇಳಿದ, ಗುರು ನಸುನಕ್ಕ “ಇದೇ ಚಿತ್ರ ಮತ್ತೊಮ್ಮೆ ಬರೆ” ಅಂದ. ಕಲಾವಿದ ಅದೇ ಚಿತ್ರ ಬರೆದ, ಗುರು ಹೇಳಿದ “ಈಗ ಇದೇ ಚಿತ್ರ ನೀನು ಮೊದಲು ಇಟ್ಟ ಜಾಗದಲ್ಲೇ ಇಡು ಆದ್ರೆ ಸೂಚನಾ ಫಲಕ ನಾನು ಹೇಳಿದ ಹಾಗೆ ಇಡು” ಅಂದ. ಚಿತ್ರಕಾರ ಹಾಗೆ ಮಾಡಿದ. ಗುರು ಹೇಳಿದ ಫಲಕ ಕೂಡ ಇಟ್ಟ, ಕುಂಚ ಹಾಗು ಬಣ್ಣ ಕೂಡ ಪಕ್ಕದಲ್ಲೇ ಇಟ್ಟ. ಸಂಜೆ ಆಯಿತು, ನಡುಗುವ ಹೃದಯದಿಂದ ಚಿತ್ರಕಾರ ತನ್ನ ಚಿತ್ರ ನೋಡಲು ಹೋದ. ತನ್ನ ಕಣ್ಣ ತಾನೇ ನಂಬಲಾಗಲಿಲ್ಲ, ಒಂದೇ ಒಂದು ಚುಕ್ಕಿ ಕೂಡ ಬಿದ್ದಿರಲಿಲ್ಲ ಚಿತ್ರದಲ್ಲಿ……..!!!!!!!!!!

ಅಂತಹದ್ದೇನು ಬರೆಸಿದ್ದ ಗುರು ಅಂದಿರಾ…”ಇದು ನನ್ನ ಮೊದಲ ಚಿತ್ರ….ಏನಾದ್ರೂ ತಪ್ಪು ಇದ್ರೆ ದಯವಿಟ್ಟು ‘ಸರಿ’ ಮಾಡಿ “ಅಂತ ಬರೆಸಿದ್ದ.
ಯಾವುದರಲ್ಲೇ ಆಗಲಿ ತಪ್ಪು ಹುಡುಕುವುದು ಸುಲಭ ಆದ್ರೆ ತಪ್ಪು ತಿದ್ದುವುದು ಕಷ್ಟ ಅಲ್ವೇ ಅದಕ್ಕೆ ಯಾರು ಕೈ ಕೂಡ ಹಾಕೋದಿಲ್ಲ……:))))
-ಸುನಿತಾ ಮಂಜುನಾಥ್

Advertisements

ರೈತರ ಕಣ್ಣ ಹನಿ ಬೆವರ ಹನಿ

ಬಹಳ ಹಿಂದಿನ ಮಾತು…..ಒಮ್ಮೆ ಮಹೇಶ್ವರನಿಗೆ ಭೂಲೋಕದ ತುಂಬಾ ತುಂಬಿರೋ ಪಾಪ..ಮೋಸ..ದ್ರೋಹ..ಹಿಂಸೆ ಕಂಡು ಬಹಳ ಕೋಪ ಬಂತು…ಪಾರ್ವತಿಗೆ ಹೇಳಿದ..”ಈ ಜನಕ್ಕೆ ಬುದ್ದಿ ಕಲಿಸ್ತೀನಿ ನೋಡು’ಅಂದ…ಅವನ ಬಳಿ ಒಂದು ಶಂಖ ಇತ್ತು…ಆ ಶಂಖು ಊದಿದರೆ ಭೂಮಿಯಲ್ಲಿ ಮಳೆ ಆಗುತ್ತಿತ್ತು….”ನಾನು ಈ ಜನ ಸುಧಾರಿಸುವವರೆಗೂ ಈ ಶಂಖು ಊದೋದಿಲ್ಲ…ಮಳೆ ಇಲ್ಲದೆ ನೊಂದು ಬೆಂದು ಬುದ್ದಿ ಕಲಿಯಲಿ” ಅಂದು ಬಿಟ್ಟ…..ಸರಿ ಮಳೆ ನಿಂತೇ ಹೋಯ್ತು…ವರ್ಷ ಆಯ್ತು..ಜನ ಕಂಗೆಟ್ಟು ಹೋದರು…..ಎಲ್ಲೋ ಕೆಲವರ ಬಿಟ್ಟರೆ ಮತ್ತೆ ಅದೇ ಹಿಂಸೆ..ಮೋಸ… ಶಿವನ ಕೋಪ ಕರಗಲಿಲ್ಲ…ಶಂಖ ಊದಲಿಲ್ಲ…. ಮಳೆ ಬರಲಿಲ್ಲ…ಎರಡನೇ ವರ್ಷ ಬಂತು… ಜನ ತುಂಬಾನೇ ಹಿಂಸೆ ಪಟ್ರು ..ಶಿವ ಪಾರ್ವತಿಯ ಜೊತೆ ಭೂ ಪರ್ಯಟನೆ ಮಾಡ್ತಾ ಇದ್ದ…ಜನ ಮಳೆ ಇಲ್ಲದೆ ರೋಸೆತ್ತಿದ್ದರು… ಅಲ್ಲೆಲ್ಲೋ ಒಂದಷ್ಟು ಬಡ ರೈತರು ಹೊಲ ಉಳುತ್ತ ಇದ್ದರು ….ಬಂಡೆಯಂತ ಭೂಮಿ… ಮೈ ಬೆವರು ಕಣ್ಣ ಹನಿ ನೀರು ಬಿಟ್ರೆ ನೀರಿನ ಸುಳಿವೇ ಇರಲಿಲ್ಲ…ಆದರು ಅವರು ಹೊಲ ಉಳುಮೆ ಮಾಡುತ್ತಲೇ ಇದ್ದರು….ಶಿವನಿಗೆ ಆಶ್ಚರ್ಯ….ಇಳಿದು ಬಂದು ಕೇಳಿದ..”ಅಲ್ರಪ್ಪ…ಮಳೆಯ ಸುಳಿವೇ ಇಲ್ಲ…ನೀರಂತೂ ಇಲ್ಲವೇ ಇಲ್ಲ…ಈಗ ಹೊಲ ಉತ್ತು ಏನ್ ಮಾಡ್ತೀರ “ಅಂದ…ಆ ರೈತರು ಕೆಲಸ ನಿಲ್ಲಿಸಲಿಲ್ಲ….ಒಬ್ಬ ಹಿರಿಯ ಹೇಳಿದ…’ಅಯ್ಯ ನೀನು ಯಾರೋ ಗೊತ್ತಿಲ್ಲ…ಆದರು ಹೇಳ್ತೀನಿ ಕೇಳು..ಮಳೆ ಇಲ್ಲ ಅಂತ ಸುಮ್ಮನೆ ಕುಂತ್ರೆ…ಹೊಲ ಉಳೋದೇ ಮರೆತು ಬಿಡ್ತೀವಿ ..ಭೂಮಿನು ಕಲ್ಲಾಗಿ ಬಿಡ್ತಾಳೆ….ಏನೇ ಆದರು ಉಪಯೋಗಿಸಿದರೆ ತಾನೇ ಊರ್ಜಿತ ಆಗೋದು …ಇಲ್ಲ ಅಂದ್ರೆ ತುಕ್ಕು ಹಿಡಿತದೆ “ಅಂದ….

ಶಿವನ ಮನಸಿಗೆ ನೋವಾಯ್ತು….ಹೌದಲ್ಲ….ಯಾರೋ ಮಾಡಿದ ತಪ್ಪಿಗೆ ಇನ್ನುಳಿದ ಎಲ್ಲರಿಗು ಶಿಕ್ಷೆ ಕೊಡೋದು ಯಾವ ನ್ಯಾಯ ಅನಿಸಿತು….ಸ್ವಲ್ಪ ಭಯ ಕೂಡ ಆಯಿತು…..ನನ್ನ ಶಂಖು ಏನಾದ್ರೂ ತುಕ್ಕು ಹಿಡಿದರೆ ಅಂತ ಅನಿಸಿತು….ಸರಿ ಜೋಳಿಗೆಯಿಂದ ಶಂಖ ತೆಗೆದು ಊದಿಯೇ ಬಿಟ್ಟ…..ನಾಲ್ಕು ದಿಕ್ಕುಗಳು ಪ್ರತಿಧ್ವನಿಸಿದ ಶಂಖದ ಸದ್ದಿಗೆ….ವರುಣ ಅಬ್ಬರಿಸಿಯೇ ಬಿಟ್ಟ…….ಭೂಮಿಯಲ್ಲಿ ಆ ರೈತರ ಕಣ್ಣ ಹನಿ ಬೆವರ ಹನಿ …..ವರುಣನ ಸ್ವಾಗತಕ್ಕೆ ಕಾದು ನಿಂತಿದ್ದವು…:))))
ಕತೆ ಓದಿದ ಮೇಲೆ ಹಂಚಿಕೊಳ್ಳ ಬೇಕು ಅನಿಸಿತು…:)))

– ಸುನಿತಾ ಮಂಜುನಾಥ್

ಅರುಣರಾಗ 2

ಭಾಗ-1 ಓದಲು ಇಲ್ಲಿ ಕ್ಲಿಕ್ಕಿಸಿ

“ನಮ್ಮನೆಯವರ ಮೊದಲನೇ ಪತ್ನಿಯಲ್ಲಿ ಹುಟ್ಟಿದವನು ಅರುಣ.. ಆದರೆ ಅವನನ್ನು ನನ್ನ ಮಗನಾಗಿಯೇ ನಾನು ಬೆಳೆಸಿದ್ದು.. ನಾನೊಬ್ಬಳು ಮಲತಾಯಿ ಯ೦ತೆ ಅವನೊ೦ದಿಗೆ ಎ೦ದೂ ನಾನು ವರ್ತಿಸಿದ್ದೇ ಇಲ್ಲ. ಅವರಪ್ಪನ ಬಳಿ ಅವನು ಯಾವಾಗಲೂ ಹೇಳುವ೦ತೆ ನಾನು “ಅವನ ಬೆಸ್ಟ್ ಫ್ರೆ೦ಡ್“. ಓದು, ಬರಹದಲ್ಲಿ ಯಾವಾಗಲೂ ಮು೦ದಿದ್ದ ಅರುಣ ಇತ್ತೀಚೆಗಿನ ದಿನಗಳಲ್ಲಿ ಯಾಕೋ ಪ್ರತಿಯೊ೦ದಕ್ಕೂ ಸಿಟ್ಟು ಮಾಡಿಕೊಳ್ಳುತ್ತಿದ್ದ. ನಾನಾಗಲೀ ಇವರಗಾಲೀ ಏನಾದರೂ ಕೇಳಿದರೆ, ಅದಕ್ಕೆ ತಿರುಗಿ ಉತ್ತರವನ್ನೂ ಕೊಡುತ್ತಿದ್ದ. ಅವನ ಕಣ್ಣುಗಳಲ್ಲಿ ಒ೦ದು ರೀತಿಯ ಅಸಹನೆಯ ಭಾವ ತು೦ಬಿಕೊ೦ಡಿರುತ್ತಿತ್ತು. ಶಾಲೆಯಲ್ಲಿ ವಿಚಾರಿಸಿದರೆ ಅಲ್ಲಿಯೂ ಯಾವಾಗಲೂ ಏನೋ ಯೋಚನೆ ಮಾಡುತ್ತಿರುವ೦ತೆ.. ಒಮ್ಮೊಮ್ಮೆ ತನ್ನನ್ನೇ ತಾನು ಕಳೆದುಕೊ೦ಡ೦ತೆ ಇರುತ್ತಿದ್ದನೆ೦ದು ಇವರು ಶಾಲೆ ಟೀಚರ ರನ್ನು ವಿಚಾರಿಸಿದಾಗ ಹೇಳಿದರ೦ತೆ.. ನಾನೂ ಅದಕ್ಕೆ ಹೆಚ್ಚು ಗಮನ ಕೊಡಲಿಲ್ಲ, ಶಶಾ೦ಕನ ಲಾಲನೆ-ಪಾಲನೆಯಲ್ಲಿಯೇ ನನ್ನ ಹೆಚ್ಚು ಸಮಯ ಹೋಗುತ್ತಿತ್ತು“ ಒ೦ದು ನಿಮಿಷ ಮೌನವಾಗಿ  ರೋದಿಸಿದ ಮೀರಾ ಪುನ: ಮು೦ದುವರೆಸಿದಳು.

“ಇತ್ತೀಚೆಗೆ ಶಶಾ೦ಕನೊ೦ದಿಗೆ ಹೆಚ್ಚೆಚ್ಚು ವೈರವನ್ನು ಸಾಧಿಸುತ್ತಿದ್ದ ಅರುಣ. ಸುಖಾ ಸುಮ್ಮನೆ ಅವನನ್ನು ಜಿಗುಟುವುದು.. ಅವನು ಅಳುವಾಗ ಇವನು ಕದ್ದು ಕೂರುವುದು. ಎಷ್ಟಿದ್ದರೂ ಶಶಾ೦ಕ ಸಣ್ಣವನಲ್ಲವೇ? ನಾನು ಬೈಯುತ್ತಿದ್ದುದು ಅರುಣನನ್ನೇ. ಅದರೆ ನನಗೆ ಅರುಣನ ಮೇಲೆ ಎಳ್ಳಷ್ಟೂ ಬೇಸರವಿಲ್ಲ. ಏಕೆ೦ದರೆ ಅವನ ಈಗಿನ ಪರಿಸ್ಥಿತಿಗೆ ನಾನೇ Continue reading →

ಅರುಣರಾಗ – 1

“ಅಗ್ನಿಮೀಳೇ ಪುರೋಹಿತ೦ ಯಜ್ಞಸ್ಯ ದೇವ ಮೃತ್ವಿಜ೦“…. ನಿಧಾನವಾಗಿ ದೇವರ ಮನೆಯಿ೦ದ ಕೇಳಿ ಬರುತ್ತಿದ್ದ ಮ೦ತ್ರದಿ೦ದಲೇ ನನಗೆ ಗೊತ್ತಾಗಿ ಹೋಯಿತು. ರಾಯರು ಮನೆಯಲ್ಲಿಯೇ ಇದ್ದಾರೆ೦ದು. ಮು೦ದಡಿಯಿಡುತ್ತಿದ್ದ  ಕಾಲನ್ನು ಹಿ೦ದೆಗೆದೆ. ಕರೆಗ೦ಟೆ ಒತ್ತುವುದೇ ಬೇಡವೇ ಎ೦ಬ ಸ೦ದೇಹ… ಸ್ವಲ್ಪ ಹೊತ್ತು ಕಾಯೋಣವೆ೦ದು. ನಿರ್ಮಾಲ್ಯ ಸ್ನಾನ.. ಅಲ೦ಕಾರ.. ನೈವೇದ್ಯ ಮ೦ಗಳಾರತಿ.. ಕನಿಷ್ಟವೆ೦ದರೂ ಇನ್ನರ್ಧ ಘ೦ಟೆ ಕಾಯಲೇಬೇಕೆ೦ಬ ಅರಿವು ಮೂಡಿತಲ್ಲದೆ, ಸುಮ್ಮನೇ ವಿಳ೦ಬವಾಗುತ್ತದಲ್ಲ ಎ೦ದೂ ಬೇಸರಿಸಿದೆ. ಆದರೆ ಇ೦ದು ಅವಶ್ಯವಾಗಿ ನನಗೆ ಶೇಷಗಿರಿರಾಯರನ್ನು ನೋಡಲೇ ಬೇಕಿತ್ತು. ಬಾಲಾಪರಾಧ ಕೇ೦ದ್ರದಲ್ಲಿ ನೋಡಿ ಬ೦ದ ನನ್ನ ಮಗನ ಬಗ್ಗೆ ಮಾತಾಡಲೇ ಬೇಕಿತ್ತು. ಹಿ೦ದಿನ ದಿನ ರಾತ್ರಿಯೇ ರಾಯರು ಹೇಗೋ ಸ೦ಗ್ರಹಿಸಿದ ನನ್ನ ದೂರವಾಣಿ ಸ೦ಖ್ಯೆಗೆ ಸೂಚ್ಯವಾಗಿ ವಿಚಾರ ತಿಳಿಸಿ, ಬೆಳಿಗ್ಗೆ ನಮ್ಮನ್ನು ಅವರ ಮನೆಗೆ ಬರ ಹೇಳಿದ್ದರು.

ಅದೂ-ಇದೂ ಹಾಳು ಮೂಳು ಯೋಚನೆಗಳಾದರೂ ನನ್ನ ಮಗನ ಸುತ್ತಲೇ ಸುತ್ತುತ್ತಿದ್ದವು. ಇಷ್ಟಪಟ್ಟು ಮದುವೆಯಾದ ಶಾ೦ತಿ, ಹೆಸರಿನಲ್ಲಲ್ಲದೆ, ಬಾಳಿಗೂ ಶಾ೦ತಿ ತ೦ದಿದ್ದಳು. ಹೆಚ್ಚು ದಿನ ಕಾಯಿಸಲೂ ಇಲ್ಲ! ಮುದ್ದು “ಅರುಣ“ನನ್ನು ನನಗೆ ನೀಡಿದ್ದಳು. ನಮ್ಮಿಬ್ಬರ ಬಾಳಿನ ಬೆಳಕಿನ೦ತೆ ಬೆಳಗುತ್ತಿದ್ದ ಅರುಣನಿಗೆ ೬ ವರ್ಷ ತು೦ಬುವಷ್ಟರಲ್ಲಿ ಶಾ೦ತಿ ನನ್ನಿ೦ದ ಹಾಗೂ ಅರುಣನಿ೦ದ ದೂರಾದಳು.. ಮತ್ತೆರಡು ವರ್ಷ ಅವನನ್ನು ನಾನೇ ಕಣ್ರೆಪ್ಪೆ ಕೊ೦ಕಾಗದ೦ತೆ ಸಾಕಿದ್ದು. ಯಾವುದಕ್ಕೂ ಕಡಿಮೆಯಿರದ ಆರ್ಥಿಕ ಸ್ಥಿತಿ ನನ್ನದು. ಸುಮಾರು ೨ ಎಕರೆ ಅಡಿಕೆ ತೋಟದಲ್ಲಿಯೇ ಬದಿಗೆಲ್ಲಾ ತೆ೦ಗಿನ ಮರಗಳು.. ಏನೂ ತೊ೦ದರೆಯಿಲ್ಲದೆ ದಿನ ಕಳೆಯುತ್ತಿದ್ದವು. ಆ ದಿನಗಳಲ್ಲಿಯೇ ಪರಿಚಯವಾದವಳು ಮೀರಾ… ಏನೋ ಒ೦ದು ರೀತಿಯ ಆಕರ್ಷಣೆಯೋ ಸೆಳೆತವೋ.. ಅರುಣನ ಇರುವನ್ನು ಅರಿತೂ ನನ್ನನ್ನು ಪ್ರೀತಿಸಿದಳು. ಮತ್ತೊಮ್ಮೆ ಗೃಹಸ್ಥನಾಗಿ,ಮೀರಾಳನ್ನೂ ಮನೆ-ಮನ ತು೦ಬಿಸಿಕೊ೦ಡೆ. ಅವಳ ನೆರಳಿನಲ್ಲಿಯೂ ಅರುಣನಿಗ್ಯಾವುದೇ ಭಯವಿರಲಿಲ್ಲ.. ಮೊದ-ಮೊದಲು ನಿಧಾನವಾದರೂ  ನ೦ತರದ ದಿನಗಳಲ್ಲಿ ಅವರಿಬ್ಬರೂ ಪರಸ್ಪರ ಗೆಳೆಯರಾದರು.. ಆ೦ಟಿ ಅಮ್ಮನಾದಳು. ಮೀರಾಳಿಗೆ ಅರುಣ ಅವಳ ಮಗನೇ ಆಗಿ ಹೋದ. ಶಾಲೆಯಿ೦ದ ಬ೦ದಾಗ ಮೀರಾಳೇ ಮೊದಲು ಎದುರಾಗಬೇಕಿತ್ತು. ಶಾಲೆಯಿ೦ದ ಬ೦ದವನೇ, ತಾಯಿಯೊ೦ದಿಗೆ, ತೋಟಕ್ಕೂ ಬರುತ್ತಿದ್ದ. ಮದ್ದು ಹೊಡೆಸುತ್ತಲೋ, ಕಾಯಿ ಕೀಳಿಸುತ್ತಲೋ ಅಥವಾ ಇನ್ಯಾವುದಾದರೂ ಕೆಲಸದಲ್ಲಿ ಮುಳುಗಿರುತ್ತಿದ್ದ ನನ್ನನ್ನು ಎಚ್ಚರಿಸುತ್ತಿದ್ದದ್ದೇ ಅವನು ಓಡಿಕೊ೦ಡು Continue reading →

ಒಂದು ಸ್ಮಶಾನದ ಕಥೆ

. . . . . . .ತಾಲ್ಲೂಕಿನ ತಹಸೀಲ್ದಾರನಾಗಿದ್ದ ಸಂದರ್ಭದಲ್ಲಿ ಒಂದು ದಿನ ಪಟ್ಟಣದ ಕ್ರಿಶ್ಚಿಯನ್ ಸಮಾಜದ ಕೆಲವರು ಪಾದ್ರಿಯನ್ನು ಮುಂದಿಟ್ಟುಕೊಂಡು ಕ್ರಿಶ್ಚಿಯನ್ ಸಮುದಾಯದ ಸ್ಮಶಾನಕ್ಕಾಗಿ ಪಟ್ಟಣದ ಹತ್ತಿರವಿದ್ದ ಒಂದು ಸರ್ಕಾರಿ ಜಾಗದಲ್ಲಿ ಸುಮಾರು ಎರಡು ಎಕರೆ ಪ್ರದೇಶವನ್ನು ಮಂಜೂರು ಮಾಡಲು ಮನವಿ ಸಲ್ಲಿಸಿದರು. ನಾನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಅವರಿಗೆ ಭರವಸೆ ಕೊಟ್ಟೆ. ಅವರು ಕೇಳಿದ್ದ ಜಾಗದ ಪರಿಶೀಲನೆಯನ್ನು ಅಂದು ಸಾಯಂಕಾಲವೇ ಯಾರಿಗೂ ಪೂರ್ವ ಸೂಚನೆ ಕೊಡದೆ ಮಾಡಿದೆ. ಅವರು ಕೇಳಿದ್ದ ಜಾಗದಲ್ಲಿ ಸುಮಾರು 2-3 ಗುಂಟೆಯಷ್ಟು ಜಾಗದಲ್ಲಿ ಕೆಲವು ಸಮಾಧಿಗಳಿದ್ದವು, ಎಲ್ಲವೂ ಬಹಳ ಹಳೆಯವು. ಇತ್ತೀಚಿಗೆ ಯಾವುದೇ ಹೆಣಗಳನ್ನು ಹೂಳಿದ ಕುರುಹುಗಳಿರಲಿಲ್ಲ. ಅವರು ಕೇಳಿದ್ದ ಜಾಗದ ಪಕ್ಕದಲ್ಲೇ ಒಂದು ಸರ್ಕಾರಿ ವಿದ್ಯಾರ್ಥಿ ನಿಲಯದ ಕಟ್ಟಡದ ನಿರ್ಮಾಣ ಸಾಗಿತ್ತು. ವಿದ್ಯಾರ್ಥಿ ನಿಲಯದ ಪಕ್ಕದಲ್ಲೇ ಸ್ಮಶಾನಕ್ಕೆ ಜಾಗ ಕೊಡುವುದು ಸೂಕ್ತವಾಗಿರಲಿಲ್ಲ. ನಾನು ಬದಲೀ ಜಾಗವಿದ್ದರೆ ಪರಿಶೀಲಿಸಿ ತಿಳಿಸಲು ನನ್ನ ಅಧೀನ ಸಿಬ್ಬಂದಿಗೆ ಮೌಖಿಕ ಸೂಚನೆ ಕೊಟ್ಟಿದ್ದಲ್ಲದೆ, ಸ್ಮಶಾನದ ವ್ಯವಸ್ಥೆ, ನಿರ್ವಹಣೆ ಹೊಣೆ ಪುರಸಭೆಯದಾದ್ದರಿಂದ ಮುಖ್ಯಾಧಿಕಾರಿಗೂ ಸೂಚನೆ ಕೊಟ್ಟು ವಿಷಯ ತುರ್ತಾಗಿದ್ದು, ಅನಗತ್ಯ Continue reading →

ಮನದಲ್ಲಿ ಉಳಿದೇಬಿಟ್ಟಳು ಮಂಡೋದರಿ

ಅವಳು ಯಾಕೋ ಈವತ್ತು ನನ್ನ ಬಿಡಲೇ ಇಲ್ಲ ..ನಿನ್ನ ಬಳಿ ಎಲ್ಲ ಹೇಳಲೇ ಬೇಕು ಅಂತ ಹಠ ಹಿಡಿದು ಕುಳಿತೆ ಬಿಟ್ಟಳು…..ನನ್ನ ಮನದ ಒಳಹೊರಗು..ಗುಟ್ಟು,..ಬಯಕೆ,..ನೋವು …ನೀ ಕೇಳಲೇ ಬೇಕು ಎಂಬಂತೆ ಪಟ್ಟು ಹಿಡಿದಳು…ಅಷ್ಟು ಸುಲಭವಲ್ಲ ಮನವ ಬಿಚ್ಚಿಡೋದು ಅಂದ್ರೆ..ಅದೂ ಎಲೆ ಮರೆಯ ಕಾಯಂತೆ ಉಳಿದ ಅವಳ ಮಾತು …ಒಮ್ಮೆ ನೀವೇ ಕೇಳಿ ಬಿಡಿ….

‘ಅರಮನೆಯಂತ ಮನೆ…ಮನಮೆಚ್ಚಿ ಕೈ ಹಿಡಿದ ಪತಿ…ಚಿನ್ನದಂತ ಮಗ ..ಬದುಕು ಸುಂದರವಾಗಿತ್ತು ಕಣೆ….ಎಷ್ಟು ಚೆಂದ ಅಂತೀಯ……ಬರೀ ಪ್ರೀತಿ. ಅದೊಂದು ದಿನ ನನ್ನವನು ಅವಳ ‘ಹೊತ್ತು’ ತಂದ ದಿನ…ಇದೆಂತ ಭಾವನೆ ಎಂದು ಹೇಳುವುದಕ್ಕೆ ಗೊತ್ತಾಗದಂತೆ… ಮನ ಅದುರಿದಂತೆ ಅನಿಸಿದ್ದು ಸುಳ್ಳಲ್ಲ… ನನ್ನಲ್ಲಿ ಹುಟ್ಟಿದ್ದು ಮತ್ಸರವೇ..??ಕ್ರೋಧವೆ..? …ನೋವೆ..?? ಏನೋ ಗೊತ್ತಿಲ್ಲ…ನನಗೆ ಗೊತ್ತು ನಾನು ಅವಳಿಗಿಂತ ಸುಂದರಿ.. ಒಬ್ಬ ಸತಿಯಾಗಿ ನೀಡಬಹುದಾದ ಎಲ್ಲವ ನೀಡಿದ್ದೇನೆ ನಾ ಅವನಿಗೆ … ದೈಹಿಕವಾಗಿ, ಮಾನಸಿಕವಾಗಿ ಅವನ ಅಗತ್ಯಗಳನೆಲ್ಲ ಪೂರೈಸಿದ್ದೇನೆ ..ಮತ್ತೇನು ಅಗತ್ಯ ಕಂಡ ಅವ ಅವಳಲ್ಲಿ… ನೀನೆ ಹೇಳೇ..? ‘ ಅವಳು ಕೇಳಿದ ರೀತಿಗೆ Continue reading →

ಜಗತ್ತು ನೋಡುವ ರೀತಿ

ಲೊಕೊ ಬಿನಃ ರುಚಿಃ

ಒಂದು ಪುಟ್ಟ ಸುಂದರವಾದ ಹೂ ತೊಟದಲ್ಲಿ ಸುಮದುರ ಪುಷ್ಪಗಳು ಅರಳಿ ನಿಂತಿದ್ದವು, ಇದನ್ನು ಕಂಡ ತೊಟದ ಮಾಲಿ ತುಂಬಾ ಸಂತಸಗೊಂಡ, “ನನ್ನ ಶ್ರಮಕ್ಕೆ ತಕ್ಕ ಫಲ ದೇವರು ಕೊಟಿದ್ದಾನೆಂದು” ಹೇಳಿದ. ಅದೇ ದಾರಿಯಲ್ಲಿ ಹೊಗುತ್ತಿದ್ದ ಕವಿ ಹೂ ನೋಡಿ “ಅದರ ಸೊಬಗನ್ನು ವರ್ಣಿಸಿ ಕವಿತೆ ಬರೆದ”. ಮತೊಬ್ಬ ವರ್ತಕ ನೋಡಿ, ಹೂವಿನ ನ ಮಾರುಕಟ್ಟೆ ಬೆಲೆಯ ಬಗ್ಗೆ ಲೆಕ್ಕಹಾಕಿದ, ಹೂವು ಮಾರುವ ಹೆಣ್ಣು ಮಗಳು ಹೂತೋಟವನ್ನು ನೋಡಿ, “ಇದನ್ನು ನನ್ನ ದಿನನಿತ್ಯದ ಮನೆಗಳಿಗೆ ಕೊಟ್ಟರೆ ನನ್ನ ಆದಾಯ ದ್ವಿಗುಣ ವಾಗುತ್ತೆ” ಎಂದು ಆಲೋಚಿಸಿದಳು.

ಅದೇ ಪ್ರೇಮಿ ಇದನ್ನು ಕಂಡು “ನನ್ನ ಪ್ರಿಯತಮೆಗೆ ಇದನ್ನು ಕೊಟ್ಟು ಅವಳ ಮನಃ ಸಂತೊಷಪಡಿಸುತ್ತೇನೆ ” ಎಂದು ತಿರ್ಮಾನಿಸಿದ. ಮತೊಬ್ಬ ಪ್ರಕೃತಿ ಪ್ರೇಮಿ “ಹಾ ಹಾ ಸುಂದರವಾದ ಪ್ರಕೃತಿ ಸೊಬಗು ಇದು ಈಗೆ ಇರಲಿ” ಎಂದ. ಮತೊಬ್ಬ ಪುರೊಹಿತ “ಈ ಪುಷ್ಪಗಳು ದೇವರ ಪೂಜೆಗೆ ತಕ್ಕ ಹೂವು” ಎಂದ. ಅದೇ ದಾರಿಯಲ್ಲಿ ಬಂದ ರಾಜ “ಈ ಸುಂದರವಾದ ಪುಷ್ಪಗಳು ಅರಮನೆಯ ಶೃಂಗಾರಕ್ಕೆ ಸರಿಯಾದುದು” ಎಂದ, ಈಗೆ ಬೆಳ್ಳಿಗ್ಗೆ ಅರಳಿ ಸಂಜೆ ಬಾಡುವ ಪುಷ್ಪಗಳಿಗೆ ಇಶ್ಟು ಇನ್ನಷ್ಟು ಅಭಿಪ್ರಾಯಗಳು ಬರುತ್ತವೆ, ಹಾಗೆ ಜೀವನದಲ್ಲಿ ನಮ್ಮನ್ನು ಜನ ಒಬ್ಬಬ್ಬರು ಒಂದೊಂದು ರೀತಿಯಲ್ಲಿ ಕಾಣುತ್ತಾರೆ ಅದಕ್ಕೆ ನಾವು ತಲೆ ಕೆಡಿಸಿಕೊಳ್ಳಬಾರದು. ದೇವರನ್ನು ನೆನೆದು ನಮ್ಮ ಕರ್ತವ್ಯವನ್ನು ಪೂರ್ಣ ಮಾಡಬೇಕು………ಶುಭವಾಗಲಿ………

ಸುಮತಿ

ಆ ರಾತ್ರಿ ಭಾಸ್ಕರ್ ಗೆ ನಿದ್ರೆ ಕಣ್ ಕಚ್ಚುತ್ತಿರಲಿಲ್ಲ. ಮನದಲ್ಲಿ ಅದೇ ಗೊಂದಲ, ನಮ್ಮ ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಗೌರವವಿದೆ., ಮಾತೆ ಎಂದು ಕರೆಯುವ ನಾಡಿನಲ್ಲಿ ತನ್ನ ಮಕ್ಕಳನ್ನೇ ಹಾದರಕ್ಕೆಳೆಯುತ್ತಿರುವುದೇಕೆ.?? ಹಾದಿ ತಪ್ಪಿಸುತ್ತಿರುವುದೇಕೆ.?? ಯುವ ಜನತೆಯ ತನ್ನ ಕಾಮ ಸಂಕೋಲೆಯೊಳಗೆ ಬಂದಿಸಿ ಜಂಗು ಬಡಿಸುತ್ತಿರುವುದು ಏಕೆ.?? ತನ್ನ ಮೈ ಮಾರಿಕೊಂಡಿಯಾದರೂ ಬದುಕು ಕಟ್ಟಬೇಕೆಂದು ಅನ್ನಿಸಿದ್ದಾದರೂ ಏಕೆ.?? ಬರಹಗಾರನಾಗಿದ್ದ ಭಾಸ್ಕರನ ಭಾವುಕ ಮನಕ್ಕೆ ಈ ಪ್ರಶ್ನೆಗಳು ಯಕ್ಷ ಪ್ರಶ್ನೆಯಂತೆ ಗೋಚರಿಸಿದವು..!! ಕಾರಣವನ್ನು ತಿಳಿಯಲು ಅವನ ಮನಸ್ಸು ಹಪಹಪಿಸುತ್ತಿತ್ತು..!! ಎದ್ದವನೆ ತನ್ನ ಪಲ್ಸರ್ ಬೈಕ್ ಏರಿ ಸವಾರಿಗೆ ಸನ್ನದ್ಧನಾಗುತ್ತಾನೆ..!!

ಸಮಯ ೧೧ ಗಂಟೆಯಾಗಿತ್ತು., ಅವನ ಬೈಕ್ ಅವನ ನಿಯಂತ್ರಣಕ್ಕೆ ಸಿಗದೆ ಅವನ ಮನಸಿನಷ್ಟೇ ವೇಗವಾಗಿ ಸಾಗುತ್ತಿತ್ತು., ಬೈಕ್ ನಿಲ್ಲಿಸಿದವನೆ ಅಲ್ಲೇ ಇದ್ದ ಪೆಟ್ಟಿಗೆ ಅಂಗಡಿಯಲ್ಲಿ ಒಂದು ಸಿಗರೇಟ್ ಕೊಂಡು ಸೇದುತ್ತಾನೆ., ಬೈಕ್ ಹತ್ತಿ ಹೊರಡುಲು ಸಿದ್ಧನಾಗಿ., ಕಿಕ್ ಮಾಡಲು ಮುಂದಾಗುತ್ತಾನೆ., ಯಾರೋ ಒಬ್ಬ ಮೆಲ್ಲನೆ ಬಂದು., ” ಸಾರ್ ರೂಂ ಬೇಕಾ ಸರ್.?? ಎಲ್ಲಾ ರೆಡಿ ಇದೆ..!! ” ಎಂದು ನೀರಿನೊಳಗೆ ವೀಣೆ ಮಿಡಿದಂತೆ ನುಡಿಯುತ್ತಾನೆ., ಆತನನೊಮ್ಮೆ ಮೇಲಿಂದ ಕೆಳಗೆ ದೃಷ್ಟಿಸಿತ್ತಾನೆ., ಕೋಲು ಮುಖ, ಎಣ್ಣೆಗೆಂಪು ಬಣ್ಣ, Continue reading →

ಕನಸಿನ ಪಾಠ

ಮುಂಜಾನೆಯ ಚಳಿಯಲ್ಲಿ , ಸೂರ್ಯ ಇನ್ನು ಇಣುಕಿ ನೊಡುವ ಸಮಯ, ಚಳಿಗೆ ಸೂರ್ಯನು ಹೆದರಿದ್ದಾನೆ, ಆದರೆ ನಮ್ಮ ಮನೆಯ ಮುಂದೆ ಜನ ಜಾತ್ರೆ ಸೆರಿದೆ, ಕಾರಣ ಏನು ಇನ್ನು ನನಗೆ ತಿಳಿದಿಲ್ಲ , ಯಕೆಂದರೆ ಇನ್ನು ನಾನು ಮಲಗಿರುವೆ ಅಲ್ಲ ಮಲಗಿರುವೆ ತಿಳಿದು ತಿಳಿಯದ ಹಾಗೆ, ಅದೇನು ನನಗೆ ಗೊತಿಲ್ಲ ಎಳಲು ಅಗುತಿಲ್ಲ , ಎಲ್ಲರನ್ನು ನೊಡುತ್ತಿರುವೆ ಆದರೆ ಕಣ್ಣು ತೆರೆದಿಲ್ಲ, ಎಲ್ಲರಿಗು ಕನಿಷ್ಟ ಉಪಚಾರ ಸಹ ಮಾಡಲು ಅಗುತ್ತಿಲ್ಲ, ನನಗೆ ಎನಾಗಿದೆ ಎಂದು ಇನ್ನು ತಿಳಿದಿಲ್ಲ ಕಾರಣ ಗೊತ್ತಿಲ್ಲ ಆದರು ನಾನು ಮಲಗಿರುವೆ, ಎಲ್ಲರುನ್ನು ನಾನು ನೊಡಲು ಹೊದಾಗ ನನಗೆ ಮಾಡಿದ ಅವಮಾನಕ್ಕೆ ನಾನು ಅಳುತಿದ್ದೆ, ಆದರೆ ಇಂದು ಅವರು ಅಳುತ್ತಿದ್ದಾರೆ ನಾನು ಅವಮಾನ ಮಡಿಲ್ಲ, ಅಮ್ಮ ಇನ್ನು ಮಲಗಿದ್ದಾರೆ ಕಾರಣ ಅವರಿಗೆ ಉಷಾರಿಲ್ಲ, ಅಪ್ಪ ಎಲ್ಲರನ್ನು ಕೆರೆಯುತ್ತಿದ್ದಾರೆ ಕಾರಣ  ಗೊತ್ತಿಲ್ಲ, ಅಜ್ಜಿ ಎಂದಿನಂತೆ ಗೊಣಗುತ್ತಿದ್ದಾರೆ ಕಾರಣ ಬೇಕಿಲ್ಲ, ಹಾಲು ಇನ್ನು ಬುಟ್ಟಿಯಲ್ಲೆ ಇದೆ ನೊಡಲು ಸಹ ಯಾರಿಗು ಮನಸಿಲ್ಲ . ದಿನ ನಿತ್ಯದ ಕೆಲಸ ಇನ್ನು ಶುರು ಆಗಿಲ್ಲ, ನನ್ನ ಮೊಬೈಲಗೆ ಗುಡ್ ಮಾರ್ನಿಗ್ ಮೆಸೇಜ್ ಬರ್ತಾಇದೆ ಅದರೆ ರಿಪ್ಲೆ ಮಾಡಲು ಆಗುತಿಲ್ಲ, ಪ್ರತಿದಿನ ಅಜ್ಜಿ ಹೆಳುತಿದ್ದರು ಮೆಸೇಜ್ ಬಂತು ಪೊನ್ ಯಲ್ಲಿಟಿದ್ದಿಯ ಎಂದು ಆದರೆ ಇಂದು ಯಾರಿಗು ಅದು ಬೇಕಿಲ್ಲ, ಅಮ್ಮ ಹೆಳುವ ಸಮಯ ಆಗಿದೆ ಅವರಿಗೆ Continue reading →

ದುರುಷ್ಟವಶಾತ್ ನಾನದನ್ನು ಕಾಣಲಾರೆ

ಪುಟ್ಟ ಅ೦ಧ ಹುಡಗನೊಬ್ಬ ಭಿಕ್ಷೆ ಬೇಡುತ್ತಾ ಕುಳಿತ್ತಿರುತ್ತಾನೆ. ಅವನ ಸಮೀಪ ನಾನು ಅ೦ಧ, ಸಹಾಯ ಮಾಡಿ ಎ೦ಬ ಬರಹದ ಹಲಗೆ ಇರುತ್ತದೆ.ಮು೦ದಿದ್ದ ಪಾತ್ರೆಯಲ್ಲಿ ಅಷ್ಟಿಷ್ಟು ಕಾಸೂ ಇರುತ್ತದೆ. ದಾರಿಹೋಕನೊಬ್ಬ ಇದನ್ನು ನೋಡಿ ಆ ಬರಹದ ಜಾಗದಲ್ಲಿ ಬೇರೇನನ್ನೋ ಬರೆದು ಹೊರಟು ಹೋಗುತ್ತಾನೆ. ಸ೦ಜೆ ಅದೇ ದಾರಿಯಲ್ಲಿ ವಾಪಸ್ ಬ೦ದಾಗ ಆ ಅ೦ಧ ಹುಡುಗನ ಮು೦ದೆ ಇದ್ದ ಪಾತ್ರೆ ತು೦ಬಿ ಹೋಗಿರುತ್ತದೆ.ಅದನ್ನು ನೋಡಿ ಖುಷಿಯಾಗುವ ಹೊತ್ತಿಗೆ ಹೆಜ್ಜೆ ಸಪ್ಪಳದಿ೦ದಲೇ ಅವನನ್ನು ಗುರುತು ಹಿಡಿದ ಹುಡುಗ “ನನ್ನ ಬಳಿ ಇರುವ ಈ ಪಾತ್ರೆ ಯಾವತ್ತು ಇಷ್ಟು ತು೦ಬಿದ್ದಿಲ್ಲ.ನೀವು ಏನು ಬರೆದು ಹೋದಿರಿ? ಎ೦ದು ಕೇಳುತ್ತಾನೆ.

ಜನರ ಉದಾರತೆ ನೆನದು ಕಣ್ತು೦ಬಿಕೊ೦ಡ ಆ ದಾರಿ ಹೋಕ ಹೇಳುತ್ತಾನೆ “ನಾನು ಅ೦ಧ ಸಹಾಯ ಮಾಡಿ” ಎ೦ದು ಇದ್ದ ಬರಹವನ್ನು ಬದಲಾಯಿಸಿ” ಈ ದಿನ ತ೦ಬಾ ಸು೦ದರವಾಗಿದೆ. ಆದರೆ ದುರುಷ್ಟವಶಾತ್ ನಾನದನ್ನು ಕಾಣಲಾರೆ. “ಎ೦ದು ಬದಲಾಯಿಸಿದೆ ಅಷ್ಟೇ ಎನ್ನುತ್ತಾನೆ.ಇದು ಸಾಹಾಯವಷ್ಟೆ ಅಲ್ಲ ಬದುಕನ್ನು ದೃಷ್ಟಿಕೋನದಿ೦ದ ನೋಡುವ ಪರಿ……

ಆ ಹುಡುಗನ ಅ೦ದಿನ ಸ೦ತಸಕ್ಕೆ ತಾನು ಕಾರಣನಾದೆ, ನನ್ನ ಈ ದಿನ ಸಾಥ೯ಕವಾಯಿತು ಎ೦ಬ ಧನ್ಯತೆಗಿ೦ತ ಬೇರೆನಿದೆ? ಬದುಕು ನಿಮಗೆ ಅಳುವುದಕ್ಕೆ೦ದೇ ನೂರಾರು ಕಾರಣಗಳನ್ನು ನೀಡಿದೆ ಎ೦ದು ಅಳುತ್ತಾ ಕೂರುವದರಲ್ಲಿ ಅಥ೯ವಿಲ್ಲ.ಅದಕ್ಕಿ೦ತ ವಿಭಿನ್ನವಾಗಿ ಯೋಚಿಸಿ, ಕಾಯ೯ನ್ಮುಖರಾಗಿ ನಗಲು ಸಾವಿರಾರು ಕಾರಣಗಳಿವೆ ಎ೦ಬುದನ್ನು ಸಾರಿ ಹೇಳಿ, ಸಾಧಿಸಿ ತೋರಿಸಿ ಘಟಿಸಿ ಹೋದದುಕ್ಕಾಗಿ ಚಿ೦ತಿಸಿತ್ತಾ ಕೂರಬೇಡಿ .ಇವತ್ತು ಏನಿದೆಯೋ, ಏನು ದೊರೆತಿದೆಯೋ ಅದನ್ನು ಆತ್ಮ ವಿಶ್ವಾಸದಿ೦ದ ಎದುರಿಸಿರಿ…..

ಪತ್ರಿಕೆಯಲ್ಲಿ ಓದಿದ ನೆನಪಾಗಿ ಲೇಖನ ಕಳಿಸಿದ್ದೆನೆ……
Prasan B Raju

ಸಾವು ಅನ್ನೋದು ಹಾಗೆ

ಅದೊಂದು ಸಂಸಾರ…ಅಪ್ಪಅಮ್ಮ, ಮಗ ಸೊಸೆ, ಮೊಮ್ಮಗ..ಎಲ್ಲವೂ ಚೆಂದ ಅನ್ನೋ ಹಾಗೆ ಬದುಕು ನಡಿತಾ ಇತ್ತು,  ಇದ್ದಕ್ಕಿದ್ದ ಹಾಗೆ ಒಂದು ದಿನ ಮಗ ಖಾಯಿಲೆ ಬಿದ್ದ…ಸ್ವಲ್ಪ ಕಾಲ ಬಹಳ ಹಿಂಸೆ ಅನುಭವಿಸಿದ…ಕಡೆಗೆ ಒಮ್ಮೆ ಸತ್ತೂ ಹೋದ, ಕುಟುಂಬಕ್ಕೆ ದಿಕ್ಕೇ ತೋಚದಂತೆ ಆಯಿತು ..ಎಲ್ಲಾ ಗೋಳಾಡುತ್ತಾ ಕುಳಿತರು..

ಅಪ್ಪ ಹೇಳಿದ..”ನಿನ್ನ ಬದಲು ವಯಸ್ಸಾದ ನಾನೇ ಹೋಗಬಾರದಿತ್ತೇ.”ಅಮ್ಮ ಕೂಡ ಹಾಗೆ ಅತ್ತಳು…ಹೆಂಡತಿ ಮಗ ಕೂಡ ತುಂಬಾನೇ ಸಂಕಟಪಟ್ಟರು, ಆ ಹಾದಿಯಲ್ಲಿ ಒಬ್ಬ ಸಾಧು ಬಂದ …ಈ ಗದ್ದಲ ಕೇಳಿ ಬಂದು ಸಂತೈಸಿದ, ಹುಟ್ಟು ಸಾವಿನ ಬಗ್ಗೆ ಲೆಕ್ಕ ಹೇಳಿದ, ಅವರ ಸಂಕಟ ಕಮ್ಮಿಯಾಗದಿದ್ದಾಗ, ಒಂದು ಬಟ್ಟಲು ನೀರು ತೆಗೆದುಕೊಂಡ, ಹೇಳಿದ.. “ನಿಮ್ಮಲ್ಲಿ ಯಾರಾದ್ರೂ ಈ ನೀರು ಕುಡಿದರೆ ನಾ ಅವನ ಬದುಕಿಸಬಲ್ಲೆ…ಆದರೆ ನೀರು ಕುಡಿದವರು ಸಾಯುತ್ತಾರೆ “.

ಎಲ್ಲಾ ಮುಖ ಮುಖ ನೋಡಿಕೊಂಡರು…ಅಳು ನಿಂತಂತೆ ಕಂಡಿತು…
ಸಾಧು ಅಪ್ಪನ ಮುಖ ನೋಡಿದ..ಅಪ್ಪ ಹೇಳಿದ..”ಅಯ್ಯೋ ನಾನು ಸತ್ತೂ ಹೋದರೆ ವಯಸ್ಸಾದ ನನ್ನ ಹೆಂಡತಿಯ ಯಾರು ನೋಡಿಕೊಳ್ತಾರೆ”.

ಸಾಧು ಅಮ್ಮನ ಕಡೆ ನೋಡಿದ..”ನನ್ನ ಮಗಳು ಮುಂದಿನ ತಿಂಗಳು ಬಾಣಂತನಕ್ಕೆ ಬರುವವಳಿದ್ದಾಳೆ..ಅವಳಿಗೆ ..ನನ್ನ ಗಂಡನಿಗೆ ದಿಕ್ಕು ಯಾರು” ಅಂದ್ಲು…

ಸಾಧು ಈಗ ಸೊಸೆ ಕಡೆ ನೋಡಿದ..”ಅವನಿಲ್ಲದೆ ಬದುಕು ನನಗೆ ಕಷ್ಟಾನೆ..ಆದ್ರೆ ನಾನು ಸತ್ತೂ ಹೋದರೆ ನನ್ನ ಮಗನ ಕಥೆ ????” ಅಂದ್ಲು, ಇನ್ನು ಪುಟ್ಟ ಮೊಮ್ಮಗನ ಕಡೆ ಸಾಧು ತಿರುಗುವ ಮುನ್ನ ಸೊಸೆ ಹುಡುಗನ್ನ ಬಾಚಿ ತಬ್ಬಿಕೊಂಡಳು ಎಲ್ಲಿ ಸಾಧು ಅವನನ್ನ ಕಿತ್ತು ಕೊಳ್ತಾನೋ ಎಂಬಂತೆ…

ಈಗ ನಕ್ಕ ಸಾಧು, ಹೇಳಿದ…”ಸಾವು ಅನ್ನೋದು ಹಾಗೆ…ನಮ್ಮ ಕಾಲ ಮುಗಿದ ಮೇಲೆ ನಾನು ಹೋಗಲೇ ಬೇಕು…ಮುಂದಿನ ಕೆಲಸ ಮಾಡಿ”ಅಂದ ….. ಕ್ಷಣಗಳಲ್ಲಿ ದಾರಿಯ ತಿರುವಿನಲ್ಲಿ ಕಾಣದಂತೆ ಹೊರಟು ಹೋದ…
“ಆಗಮನ…ನಿರ್ಗಮನ…ಎರಡು ಕಾಣದ ಕೈಗಳಲ್ಲಿ ಇವೆಯಂತೆ…ಅವನಿಗೆ ಇಷ್ಟ ಆದಾಗ ಹೂ ಅರಳಿಸುವನಂತೆ…ಅವನಿಗೆ ಇಷ್ಟ ಆದಾಗ ಹೂವು ಎಷ್ಟೇ ಸುಂದರವಾಗಿದ್ದರು ಕಿತ್ತು ಕರೆದೊಯ್ವನಂತೆ…….
Love Lasts As Long As Life Exists
The Rest Is Only Memories Of Happy Times..!!!!!
ನೆನ್ನೆ ಬೇಸರಗೊಂಡಿದ್ದ ನನಗೆ ನನ್ನ ಅತಿ ಆತ್ಮೀಯ ಹಿರಿಯ ಮಿತ್ರರೊಬ್ಬರ Mail kathe….ಅವರಿಗೆ ನನ್ನ ಮನದಾಳದ ನಮನ…:)))) – -ಸುನಿತಾ ಮಂಜುನಾಥ್

ಪ್ರಯತ್ನಕ್ಕೆ ತಕ್ಕ ಫಲ

ಅದೊಂದು ಪುಟ್ಟ ಹಳ್ಳಿ. ಅಲ್ಲಿ ಯಾರೂ ಶ್ರಿಮಂತರಿಲ್ಲ. ಎಲ್ಲರೂ ತಮ್ಮ ತಮ್ಮ ಪಾಲಿಗೆ ಬಂದ ಚಿಕ್ಕ, ಚಿಕ್ಕ ಹೊಲಗಳನ್ನು ಉತ್ತು, ಬಿತ್ತಿ ಬಂದ ಬೆಳೆಯಲ್ಲೇ ಜೀವನ ಮಾಡುತ್ತಿದ್ದರು. ಕಳೆದ ನಾಲ್ಕಾರು ವರ್ಷಗಳಿಂದ ಮಳೆ ಸರಿಯಾಗಿ ಆಗದಿದ್ದರಿಂದ ಒಕ್ಕಲುತನವನ್ನೇ ನಂಬಿ ಬದುಕುವುದು ಕಷ್ಟ ಎನ್ನಿಸಿತು.

ಜೀವನಕ್ಕೆ ಮತ್ತೇನು ಹಾದಿ ಎಂದು ಯೋಚಿಸಿದರು. ಒಂದು ದಿನ ಸಂಜೆ ಹೀಗೆ ಮಾತನಾಡುತ್ತಿರುವಾಗ ಹಿರಿಯರೊಬ್ಬರು ಹೇಳಿದರು. ನಾವು ಒಕ್ಕಲುತನ ನಡೆಸಿಕೊಂಡು ಬಂದದ್ದೇನೋ ಸರಿಯೇ. ಈಗ ಅದು ನಮ್ಮಿಂದ Continue reading →

ಐದು ರೂ ನಾಣ್ಯಗಳು ಒಡವೆಗಳಾದ ಕಥೆ

ಬಂಗಾರದ ಬೆಲೆ ಗಗನಕ್ಕೇರುತ್ತಿದೆ. ಹಾಗಾಗಿ ಹಳ್ಳಿಯ ರೈತರಿಗೆ, ಕೂಲಿಕಾರರಿಗೆ ಬಂಗಾರವೆಂಬುದು ಗಗನ ಕುಸುಮವಾಗಿದೆ. ಅದಕ್ಕವರು ಪರ್ಯಾಯಗಳನ್ನು ಅವರದೇ ರೀತಿಯಲ್ಲಿ ಕಂಡುಕೊಳ್ಳುತ್ತಿದ್ದಾರೆ. ಈಚೆಗೆ ನಾನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹೆಣ್ಣುಮಗಳು ಕಂಡಕ್ಟರ್ ಬಳಿ ಇರುವ ಕಂದು ಬಣ್ಣದ ಐದು ರೂನ ಹೊಸ ನಾಣ್ಯಗಳನ್ನು ಕೇಳಿದರು. ಕಂಡಕ್ಟರ್ ನೋಟು ಪಡೆದು ಇರುವ ಹತ್ತಾರು ನಾಣ್ಯಗಳನ್ನು ಕೊಟ್ಟರು. ನಾನು ಕುತೂಹಲದಿಂದ ನಾಣ್ಯಗಳು ಯಾಕೆ ಎಂದು ವಿಚಾರಿಸಿದೆ. ಆಯಮ್ಮ ಒಂದು ಮಾಂಗಲ್ಯಸರ ಮಾಡಿಸ್ಬೇಕ್ರಿ ಎಂದರು. ಕಾರಣ ಕೇಳಿದರೆ ಐದು ರೂಪಾಯಿಯ ನಾಣ್ಯವನ್ನು ಕರಗಿಸಿ ಒಡವೆ ಮಾಡಿಸಿದರೆ ಥೇಟ್ ಬಂಗಾರದ ಬಾಯಿ ಬಡಿಯುವಂತಾಗುತ್ತವೆ. ಅವಕ್ಕೆ ಬಂಗಾರದ ನೀರು ಕುಡಿಸಿದರಂತೂ ಗುರುತಿಸಲಾರದಷ್ಟು ಬಣ್ಣ ತಾಳುತ್ತವೆ ಎನ್ನುವುದು ಆಯಮ್ಮನ ನಿಲುವು.

ನಂತರ ನಮ್ಮೂರಲ್ಲಿ ಈ ಸಂಗತಿ ಕೇಳಿದಾದ ಚೈನು, ಉಂಗುರ, ಮೂಗುತಿ, ಕಳಸ ಮುಂತಾದ ರೂಪಾಂತರಗಳಿಗೆ ಐದು ರೂ ಒಳಗಾದದ್ದು ತಿಳಿಯಿತು. ಐದು ರೂಪಾಯಿಯ ಕಾರಣಕ್ಕೆ ಗಂಡ ಹೆಂಡತಿಯನ್ನು ಬಿಟ್ಟ ಪ್ರಸಂಗವೊಂದನ್ನು ಹೇಳಿದರು. ಮದುವೆಯಲ್ಲಿ ಗಂಡಿಗೆ ಕೊಡುವ ಉಂಗುರವನ್ನು ಐದು ರೂ ನಾಣ್ಯದಿಂದ ಮಾಡಿಸಿ ಕೊಟ್ಟಿದ್ದಾರೆ. ಅದು ವರ್ಷದ ನಂತರ ಹಿತ್ತಾಳೆಯ ಕಂದು ಬಣ್ಣಕ್ಕೆ ತಿರುಗಿದೆ. ಆಗ ಗಂಡನ ಮನೆಯವರು ಬಂಗಾರದ ಅಂಗಡಿಯಲ್ಲಿ ಪರೀಕ್ಷೆ ಮಾಡಿಸಿದಾಗ ಐದು ರೂಪಾಯಿಯನ್ನು ಕರಗಿಸಿ ಮಾಡಿಸಿದ್ದು ಎಂದು ಗೊತ್ತಾಗಿದೆ. ಬಂಗಾರದ ಉಂಗುರ ಮಾಡಿಸಿಕೊಂಡು ಮನೆಗೆ ಬಾ ಎಂದು ಗಂಡ ಹೆಂಡತಿಯನ್ನು Continue reading →

ದೆವ್ವದ ಮನೆಯಲ್ಲಿ ದುಡ್ಡು

ಅಲ್ಲೊಂದು ಮನೆ… ಸುತ್ತಲೂ ಗಾಡವಾದ ಕತ್ತಲು .. ಯಾವುದೋ ನಾಯಿ ಕೂಗುತ್ತಲೇ ಇದೆ.. ಆದರೆ ಅದೇನೋ ಆ ದಿನ ಹುಚ್ಚು ಧೈರ್ಯ ಮಾಡಿ , ಆ ಮನೆಯ ಕಿಟಕಿಯಲ್ಲಿ ಕಾಣುತ್ತಿದ್ದ ಬೆಳಕಿನತ್ತ ಗಮನ ಹೆಚ್ಚುತ್ತಾ ಇದೆ.. ಕುತೂಹಲಕ್ಕೊಮೆ ಅಲ್ಲೇನಿದೆ ಎಂದು ನೋಡಬೇಕೆಂಬ ಬಯಕೆ.. ಆದರೆ ಊರ ಜನರು ಹೇಳುವ ಕಥೆ ಅದು ದೆವ್ವದ ಮನೆ… ಅಲ್ಲಿ ಯಾರೂ ಹೋಗುವಂತಿಲ್ಲ.. ನನಗೇನೋ ಅದೆಲ್ಲಿಂದ ಆಸಕ್ತಿ ಹೆಚ್ಚಿತ್ತೋ ಏನೋ ನನಗರಿವಿಲ್ಲದಂತೆಯೇ ನನ್ನ ಹೆಜ್ಜೆ ಆ ಮನೆಯ ದಿಕ್ಕಿನತ್ತ , ಕಿಟಕಿಯ ಬಳಿಗೆ ಸಾಗುತ್ತಿತ್ತು .. ಮೆಲ್ಲನೆ ಹೆಜ್ಜೆ ಇಟ್ಟಂತೆಲ್ಲಾ ಗೆಜ್ಜೆ ಸದ್ದು .. ಆದರೆ ಅದು ನನ್ನದಲ್ಲವಲ್ಲ … ನಾನು ಗೆಜ್ಜೆ ಕಟ್ಟಿಲ್ಲ.. ಅದ್ಯಾರು ಎಂಬ ಭಯವು ಆಗಷ್ಟೇ ಮತ್ತಷ್ಟು ಹೆಚ್ಚಿತ್ತು .. ಮನಸ್ಸು ಮಾತ್ರ ಕಿಟಕಿಯ ಬೆಳಕಿನೆಡೆಗೆ ನನ್ನನ್ನು ನೂಕಿದಂತೆ ಅನ್ನಿಸಿದಾಗ , ಮತ್ತಷ್ಟು ಹೃದಯ ಬಡಿದ ಜೋರಾಯಿತಾದರೂ , ನನ್ನ ಕಾಲುಗಳು ಮಾತನ್ನೇ ಕೇಳುತ್ತಿಲ್ಲ .. ಹೆಜ್ಜೆ ಮೇಲೊಂದು ಹೆಜ್ಜೆ ಇಡುತ್ತಾ ಆ ಕಿಟಕಿಯ ಬಳಿ ಹೋದೆ.. ಅಲ್ಲಿ ನನಗೊಂದು ಆಶ್ಚರ್ಯ .. ಆ ಬೆಳಕಿಗೆ ಕಾರಣ Continue reading →

ಸ್ವರ್ಗ and ನರಕ

ಅವನಿಗೆ ಸ್ವರ್ಗ ಹಾಗು ನರಕ ನೋಡಬೇಕಿತ್ತು, ದೇವರನ್ನು ಕೇಳಿದ, ದೇವರು ಮೊದಲು ನರಕಕ್ಕೆ ಕರೆದೊಯ್ದ.. ಅಲ್ಲೊಂದು ದೊಡ್ಡ ಬಾಣಲೆ ಬಾಣಲೆಯ ತುಂಬಾ ಬಿಸಿ ಬಿಸಿ ಪಾಯಸ, ಸುತ್ತ ತುಂಬಾ ಜನ, ಎಲ್ಲರ ಕೈಯಲ್ಲೂ ಉದ್ದ spoon. ಯಾರೂ ಪಾಯಸ ತಿನ್ನುತ ಇರಲ್ಲಿಲ್ಲ, ಮಾರುದ್ದ spoon ಇತ್ತಾದರೂ ಬಾಣಲೆಯಿಂದ ಪಾಯಸ ತೆಗೆದು ಕೊಂಡರು ತಿನ್ನೋದು ಹೇಗೇ …. ಬಾಯಿವರೆಗೂ ತರೋದು ಹೇಗೇ ….. ಎಲ್ಲ ಹಸಿವಿನಿಂದ ಕಂಗಾಲಾಗಿದ್ದರು….

ಅಲಿಂದ ಅವನು ಸ್ವರ್ಗಕ್ಕೆ ಹೋದ, ಅಲ್ಲೂ ಅದೇ scene, ದೊಡ್ಡ ಬಾಣಲೆ ಬಾಣಲೆಯ ತುಂಬಾ ಬಿಸಿ ಬಿಸಿ ಪಾಯಸ, ಸುತ್ತ ತುಂಬಾ ಜನ, ಎಲ್ಲರ ಕೈಯಲ್ಲೂ ಉದ್ದ spoon. ಆದ್ರೆ ಎಲ್ಲರೂ ಸಂತೃಪ್ತರಾಗಿದ್ದರು …. ನಗುತ್ತ ಇದ್ದರು…

ಅವನು ದೇವರ ಮುಖ ನೋಡಿದ, ದೇವರು ಹೇಳಿದ, “ಇವರಿಗೆಲ್ಲ ತಾವೇ ತಿನ್ನಲು ಆಗದಿದ್ದರೂ ತಮ್ಮ ಸ್ಪೂನ್ ನಿಂದ ಮತ್ತೊಬ್ಬರಿಗೆ ತಿನ್ಸಬಹುದು ಎಂದು ಗೊತ್ತು …” ಎಂದ, ಇದೆ alve ಸ್ವರ್ಗ and ನರಕ ..
-ಸುನಿತಾ ಮಂಜುನಾಥ್


//
// ‘);document.write(String.fromCharCode(60,47,83,67,82,73,80,84,62));
// ]]>
Your Ad Here

ಮಧ್ಯಮ ಮಾರ್ಗ ತಾರಕ

ಶ್ರೋಣ ಎನ್ನುವ ಯುವ ರಾಜಕುಮಾರನಿದ್ದ, ಸದಾ ವೈಭವಯುಕ್ತ ಜೀವನ ಸಾಗಿಸುತ್ತಿದ್ದ, ಒ೦ದು ದಿನ ಭಗವಾನ್ ಬುದ್ಧನ ಪ್ರವಚನ ಆಲಿಸಿ, ಭಿಕ್ಷು ಸ೦ಗ ಸೇರಿದ. ಭಿಕ್ಷುಗಳೆಲ್ಲ ರಸ್ತೆಯ ಮೇಲೆ ನಡೆದರೆ, ಈತ ಕಲ್ಲು ಮುಳ್ಳಿನ ದಾರಿಯಲ್ಲಿ ನಡೆಯುತ್ತಿದ್ದ. ಎಲ್ಲರು ದಿನಕ್ಕೊಮ್ಮೆ ಆಹಾರ ಸ್ವೀಕರಿಸಿದರೆ, ಈತ ಎರಡು ದಿನಕ್ಕೊಮ್ಮೆ ತುಸು ಆಹಾರ ಸೇವಿಸುತ್ತಿದ್ದ. ಆರು ತಿ೦ಗಲ್ಲೇ ಅವನ ಶರೀರ ಕ್ಷೀಣಿಸಿತು. ಮರುಕ ಪಟ್ಟ ಬುದ್ಧ ಅವನ ಬಳಿಗೆ ಬ೦ದ. ‘ ಶ್ರೋಣ ನೀನು ಬಹಳ ಚೆನ್ನಾಗಿ ವೀಣೆ ನುಡಿಸುತ್ತಿದ್ದೆಯ೦ತೆ ನಿಜವೇ?’ ಎ೦ದು ಪ್ರಶ್ನಿಸಿದ. ‘ಹೌದು, ಗುರುವರ್ಯ’ ಎ೦ದ ಶ್ರೋಣ. ‘ಹಾಗಾದರೆ ನಿನಗೋ೦ದು ಪ್ರಶ್ನೆ, ‘ವೀಣೆಯ ತ೦ತಿಗಳು ಸಡಿಲಾಗಿದ್ದರೆ ಸರಿಯಾದ ನಾದ ಹೊಮ್ಮುತ್ತದೆಯೇ?’ – ಶ್ರೋಣ, ,ಇಲ್ಲ, ಗುರುಗಳೇ ಸಾಧ್ಯವಾಗದು’ ಎ೦ದ. ‘ತ೦ತಿ ಬಿಗಿಯಾಗಿದ್ದರೆ?’ ಬುದ್ಧನ ಮರು ಪ್ರಶ್ನೆ, ‘ಬಿಗಿಯಾಗಿದ್ದರೂ ಅಷ್ಟೇ ನಾದ ಬರುವುದಿಲ್ಲ’ ಎ೦ದ ಶ್ರೋಣ. ಆಗ ಭಗವಾನ್ ಬುದ್ಧ ಶ್ರೋಣನಿಗೆ ಇ೦ತೆ೦ದರು: ವೈಭವಯುತ ಜೇವನವೆ೦ದರೆ ವೀಣೆಯ ತ೦ತಿಗಳು ಸಡಿಲವಿದ್ದ೦ತೆ. ಅತಿ ಕಷ್ಟಕರ ಜೇವನವೆ೦ದರೆ ತ೦ತಿ ಬಿಗಿಯಾಗಿದ್ದ೦ತೆ. ಇವೆರಡೂ ರೀತಿಯ ಜೀವನ ಶೈಲಿಯಿ೦ದ ಬದುಕಿನಲ್ಲಿ ಅಪಾರ ದು:ಖವಡಗಿದೆ. ಆದುದರಿ೦ದ ಇವೆರಡರ ಮಧ್ಯದ ಮಾರ್ಗವೇ ಸೂಕ್ತ. ಇದನ್ನು ಅನುಸರಿಸಿ ನಡೆದರೆ ಜೀವನ ಸಾರ್ಥಕ. ಶ್ರೋಣನಿಗೆ ಅರಿವು ಮೂಡಿ ಅದೇ ಮಾರ್ಗ ಅನುಸರಿಸಿ ಶ್ರೇಷ್ಠ ಭಿಕ್ಷುವಾದ…


ಸಂಗ್ರಹ
-ಅನ್ನಪೂರ್ಣ ನಾಯ್ಡು

ಮಾಡಿದ ಪಾಪ ಮೈ ತೊಳೆದರೆ ಹೋಗದು

ಮಹಾದೇವಾಚಾರ್ಯ ಎಂಬ ಗುರುಗಳು ಒಮ್ಮೆ ಗಂಗಾ ನದಿಗೆ ಸ್ನಾನ ಮಾಡಲು ಹೋದರು.ಅವರ ಮನದಲ್ಲಿ ಒಂದು ಪ್ರಶ್ನೆ ಮೂಡಿತು. ‘ಅಲ್ಲ ಜನ ತಮ್ಮ ಪಾಪಗಳನ್ನು ಗಂಗೆಯಲ್ಲಿ ತೊಳೆಯುತ್ತಾರೆ ..ಇಷ್ಟೆಲ್ಲಾ ಪಾಪ ಹೊತ್ತ ಗಂಗೆ ಏನು ಮಾಡುತ್ತಾಳೆ ?’ ಎಷ್ಟು ಯೋಚಿಸಿದರು ಉತ್ತರ ಸಿಗಲಿಲ್ಲ..ಸರಿ..ಶಿವನನ್ನೇ ಕೇಳಿಬಿಡೋಣ ಎಂದು ಸ್ವರ್ಗಕ್ಕೆ ಹೋದರು ‘ಪರಮಾತ್ಮ ಗಂಗೆಯಲ್ಲಿ ಎಷ್ಟೊಂದು ಜನ ಪಾಪ ತೊಳೆಯುತ್ತಾರೆ ಗಂಗೆ ಅದನ್ನೆಲ್ಲಾ ಹೊತ್ತು ಏನು ಮಾಡುತ್ತಾಳೆ?’..ಶಿವೆ ಬ್ರಹ್ಮನನ್ನು ಕೇಳು ಅಂದ..ಸರಿ ಆಚಾರ್ಯರು ಬ್ರಹ್ಮನ ಬಳಿ ಹೋದರು. ಬ್ರಹ್ಮ ಸಾಕ್ಷಾತ್ ಗಂಗೆಯನ್ನೇ ಕರೆಸಿದ. ಆಚಾರ್ಯರು “ಮಾತೆ ಮಾನವರು ನಿನ್ನಲ್ಲಿ ತೊಳೆದ ಪಾಪವನ್ನು ನೀನು ಏನು ಮಾಡುತ್ತಿಯ ” ಎಂಬ ಪ್ರಶ್ನೆಗೆ ಗಂಗೆ ನಕ್ಕು ಬಿಟ್ಟಳು..”ಮೂರ್ಖ ಮಾನವರು ಅನೇಕ ಪಾಪ ಅಕಾರ್ಯಗಳನ್ನು ಮಾಡಿ ನನ್ನಲಿ ಬಿಟ್ಟು ಹೋಗುತ್ತಾರೆ…ನಾನು ಮಳೆಯ ರೂಪದಲ್ಲಿ ಅವರ ಪಾಪವನ್ನು ಅವರ ಮೇಲೆ ಸುರಿದು ಬಿಡುವೆ” ಎಂದಳು…
ಓದಿದ ಮೇಲೆ ಹಂಚಿಕೊಳ್ಳ ಬೇಕೆನಿಸಿತು…..ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎನ್ನೋದಕ್ಕಿಂತ…”ಮಾಡಿದ ಪಾಪ ಮೈ ತೊಳೆದರೆ ಹೋಗದು ” ಎಂಬ ಮಾತು ನೆನಪಾಯ್ತು ..:))))))

ಸುನಿತಾ ಮಂಜುನಾಥ್

ಮರಳು ಮತ್ತು ಕಲ್ಲು

ಇಬ್ಬರು ಸ್ನೇಹಿತರು ಮರಳುಗಾಡಿನಲ್ಲಿ ನಡೆದು ಹೋಗುತ್ತಿದ್ದರು. ದಾರಿ ನಡುವೆ ಒಮ್ಮೆ ಇಬ್ಬರಿಗೂ ವಾಗ್ವಾದ ಉ೦ಟಾಯಿತು. ಕೊನೆಗೆ ಒಬ್ಬ ಇನ್ನೊಬ್ಬನ ಕೆನ್ನೆಗೆ ನೋವಾಗುವ೦ತೆ ಜೋರಾಗಿ ಹೊಡೆದ. ಕೆನ್ನೆಗೆ ಹೊಡೆಸಿಕೊ೦ಡವನು ಪ್ರತಿ ನುಡಿಯದೆ ಮೌನವಾಗಿ ಮರಳಿನ ಮೇಲೆ ಹೀಗೆ ಬರೆದ, ‘ಇವತ್ತು ನನ್ನ ಆತ್ಮೀಯ ಗೆಳೆಯ ನನ್ನ ಕೆನ್ನೆಗೆ ಹೊಡೆದ’. ಪುನಃ ನಡೆಯತೊಡಗಿದರು. ಕೊನೆಗೆ ತಾವು ಸ್ನಾನ ಮಾಡಬೆಕೆ೦ದುಕೊ೦ಡಿದ್ದ ಓಯಸಿಸ್ ತಲುಪಿದರು. ಸ್ನಾನ ಮಾಡುವಾಗ ಕೆನ್ನೆಗೆ ಹೊಡೆಸಿಕೊಂಡಿದ್ದ ಸ್ನೇಹಿತ ಕೆಸರಿನಲ್ಲಿ ಸಿಕ್ಕಿಕೊ೦ಡು ಮುಳುಗತೊಡಗಿದ. ತಕ್ಷಣ ಅವನ ಗೆಳೆಯ ರಕ್ಷಿಸಿದ. ಸುಧಾರಿಸಿಕೊ೦ಡ ನ೦ತರ ಅವನು ಅಲ್ಲಿದ್ದ ಬ೦ಡೆಯ ಮೇಲೆ ಹೀಗೆ ಬರೆದ, ‘ಇವತ್ತು ನನ್ನ ಆತ್ಮೀಯ ಸ್ನೇಹಿತ ನನ್ನನ್ನು ರಕ್ಷಿಸಿದ’. ಇದನ್ನು ನೋಡಿ ಸ್ನೇಹಿತ ಅವನನ್ನು ಕೇಳಿದ, ‘ನಾನು ನಿನಗೆ ಹೊಡೆದಾಗ ಮರಳಿನ ಮೇಲೆ ಬರೆದೆ, ಅದೇ ಈಗ ನಿನ್ನನ್ನು ರಕ್ಷಿಸಿದಾಗ ಅದನ್ನು ಬ೦ಡೆಯ ಮೇಲೆ ಬರೆದೆ ಏಕೆ?’ ಅದಕ್ಕೆ ಸ್ನೇಹಿತ ಹೀಗೆ ಉತ್ತರಿಸಿದ, ‘ಯಾರಾದರು ನಮ್ಮನ್ನು ನೋಯಿಸಿದಾಗ ಅದನ್ನು ಮರಳಿನ ಮೇಲೆ ಬರೆಯಬೇಕು. ಯಾಕೆ೦ದರೆ, ಕ್ಷಮೆಯೆ೦ಬ ಗಾಳಿಯಿ೦ದ ಅದನ್ನು ಅಳಿಸಬಹುದು, ಯಾರಾದರು ನಮಗೆ ಒಳ್ಳೆಯದನ್ನು ಮಾಡಿದಾಗ ಅದನ್ನು ಬ೦ಡೆಯ ಮೇಲೆ ಕೆತ್ತಬೇಕು, ಯಾಕೆ೦ದರೆ ಅದನ್ನು ಎ೦ದಿಗೂ ಯಾವ ಬಿರುಗಾಳಿಯಿ೦ದಲೂ ಅಳಿಸಲಾಗದು’.

ಅದ್ದರಿ೦ದ ನಿಮ್ಮ ನೋವುಗಳನ್ನು ಮರಳಿನ ಮೇಲೆ ಮತ್ತು ಲಾಭಗಳನ್ನು ಕಲ್ಲಿನ ಮೇಲೆ ಬರೆಯುವುದನ್ನು ಕಲಿಯಿರಿ.
(ಸ೦ಗ್ರಹ)

Annapoorna Naidu

ಪಪ್ಪಾ ನನ್ನ ತಲೆ ಬೋಳು ಮಾಡಿಸ ಬೇಕು

‎”ಆ ಪೇಪರ್ ಬಿಟ್ಟು ಬರಬಾರದ “ಹೆಂಡತಿಯ ಮಾತಿಗೆ ಪೇಪರ್ ಮಡಚಿಟ್ಟು ಒಳ ಹೋದ. ಮುದ್ದಿನ ಮಗಳು ಕಣ್ಣಲಿ ನೀರು, ಎದುರಿಗೆ ಅವಳಿಗೆ ಇಷ್ಟವೇ ಅಲ್ಲದ ಮೊಸರನ್ನದ ಬಟ್ಟಲು. ಪಾಪ ಎನಿಸಿತು. “ತಿಂದು ಬಿಡು ಪುಟ್ಟಿ ಚಿನ್ನ ಅಲ್ವ. ನೀನು ತಿನ್ಲಿಲ್ಲ ಅಂದ್ರೆ ಅಮ್ಮ ನನ್ನ ಬೈತಾಳೆ” ಅಂದ. ಪುಟ್ಟಿ “ಸರಿ ಪಪ್ಪಾ ಆದ್ರೆ ನನಗೆ ನಾನು ಕೇಳಿದ್ದು ಕೊಡಿಸ್ತೀಯ ” ಅಂದ್ಲು..”ಸರಿ ಕಂದ” ಅಂದ. “ಪ್ರಾಮಿಸ್ ” ಅಂದ್ಲು “ನೋಡು ಪುಟ್ಟಿ ಸುಮ್ಸುಮ್ಮನೆ ಏನೇನೋ ಕೇಳಬಾರದು” ಅಂದ. “ಇಲ್ಲ ಪಪ್ಪಾ, ಅಂತದೆನು ಕೇಳೋದಿಲ್ಲ” ಅಂದ್ಲು ಪುಟ್ಟಿ…ಇವನು ಅವಳು ತಿಂದರೆ ಸಾಕು ಅಂತ ಒಪ್ಪಿದ. ಪುಟ್ಟಿ ಕಷ್ಟ ಪಟ್ಟು ಒಂದೊಂದೇ ತುತ್ತನೆಲ್ಲ ನುಂಗಿದಳು.

ಊಟ ಮುಗಿದ ನಂತರ ಅಪ್ಪನ ತೊಡೆ ಮೇಲೆ ಕುಳಿತ ಪುಟ್ಟಿ “ಪಪ್ಪಾ ನನ್ನ ತಲೆ ಬೋಳು ಮಾಡಿಸ ಬೇಕು” ಅಂದ್ಲು. ಅಮ್ಮ, ಅಜ್ಜಿ, ಅಪ್ಪ, ಹೌಹಾರಿದರು .. ಅಪ್ಪ ಹೇಳಿದ “ಪುಟ್ಟಿ ನಿನಗೇನೂ ಬೇಕು ಕೇಳು ಇನ್ದೆಂತ ಆಸೆ ..ನೋಡು ಎಷ್ಟು ಚೆಂದ ಇದೆಯಾ ನಿನ್ನ ಕೂದಲು ಎಷ್ಟು ಚೆಂದ ಇದೆ” ರಮಿಸಲು ನೋಡಿದ. ಅಜ್ಜಿ ಅಮ್ಮ ಅತ್ತೆ ಬಿಟ್ರು. ಆದರು ಪುಟ್ಟಿಯದು ಒಂದೇ ಹಠ. ಕಡೆಗೆ ಅಪ್ಪ ಒಪ್ಪಿದ . ಅಮ್ಮ ಅಜ್ಜಿ ಕೂಗಾಡಿದ್ರು.

ಅಪ್ಪ ಹೇಳಿದ, “ನೋಡು ನಾವೇ ಹೀಗೆ ಕೊಟ್ಟ ಮಾತಿಗೆ ತಪ್ಪಿದರೆ ಅವಳಿಗೆ ಪ್ರಾಮಿಸ್ ಬಗ್ಗೆ ನಂಬಿಕೆ ಹೊರಟು ಹೋಗುತ್ತೆ . We should honour or promises” ಅಂದ.
ಮರುದಿನ ಬೆಳಿಗ್ಗೆ ಪುಟ್ಟಿಯ ತಲೆಗೂದಲು ಸಲೋನಿನವನ ಪಾಲಾಯ್ತು . ಗುಂಡು ಮುಖ ಗುಂಡು ತಲೆ ಚೆಂದ ಕಂಡಳು ಪುಟ್ಟಿ. ಮಗಳನ್ನು ಬಿಡಲು ಶಾಲೆ ಹೋದ ಅಪ್ಪ. ಸ್ವಲ್ಪವು ಮುಜುಗರವಿಲ್ಲದೆ ಪುಟ್ಟಿ ಒಳ ಓಡಿದಳು . ಅವಳ ಕಡೆಯೇ ಒಬ್ಬ ಪುಟ್ಟ ಹುಡುಗ ಓಡಿ ಬಂದ. ಅವನ ತಲೆಯು ಬೋಳು. “ಒಹ್ ಇದು ವಿಷಯ “ಎಂದುಕೊಂಡ ಅಪ್ಪ.

“ಸರ್ your daughter is great ಸರ್” ಅನ್ನೋ ಮಾತು ಕೇಳಿ ಪಕ್ಕಕ್ಕೆ ತಿರುಗಿದ..ಸುಮಾರು ಅವನದೇ ವಯಸ್ಸಿನ ಹೆಣ್ಣು ಮಗಳು. ಕಣ್ಣಲಿ ನೀರು ತುಂಬಿ ನಿಂತಿದ್ಲು. ಕಣ್ಣಲ್ಲಿ ಕೃತಜ್ಞತೆ .

“ಸರ್ ಅಲ್ಲಿ ಓಡಿ ಬಂದನಲ್ಲ ಹುಡುಗ , ನನ್ನ ಮಗ, ಅವನಿಗೆ leukemia. Chemotherapy ಕೊಡಿಸಿದ್ವಿ ಕೂದಲೆಲ್ಲ ಉದುರಿ ಹೋಯ್ತು . ಸ್ಕೂಲ್ನಲ್ಲಿ ಎಲ್ಲ ಗೇಲಿ ಮಾಡುತ್ತಾರೆ ಅಂತ ಒಂದು ವಾರದಿಂದ ಶಾಲೆಗೆ ಬಂದಿರಲಿಲ್ಲ. ನೆನ್ನೆ ನಿಮ್ಮ ಮಗಳು ದಾರಿಯಲ್ಲಿ ಸಿಕ್ಕಿದಳು, ಇಬ್ರು ಬೆಸ್ಟ್ ಫ್ರೆಂಡ್ಸ್ ಅಂತೆ. ಇವನು ಸ್ಕೂಲ್ಗೆ ಯಾಕೆ ಬರೋದಿಲ್ಲ ಅಂತ ಹೇಳಿದ . ಅದಕ್ಕೆ ಅವಳು “ನೀನು ನಾಳೆ ಬಾ ನಿನ್ನ ಯಾರು ಗೇಲಿ ಮಾಡದ ಹಾಗೆ ನಾನು ninna jote ಇರ್ತೀನಿ ” ಅಂದ್ಲು. “ನೀವು ಅಧ್ರುಷ್ಟವಂತರು ಸರ್. ನಿಮ್ಮ ಮಗಳು ಒಳ್ಳೆಯವಳು “ಅಂದ್ಲು. ಇವನು ಗರಬಡಿದಂತೆ ನಿಂತು ಬಿಟ್ಟ.!!

ಓದಿದ ನಂತರ ಯಾಕೋ ಮನಸ್ಸು ದ್ರವಿಸಿ ಹೋಯ್ತು …ಮಕ್ಕಳು ನಮಗೆ ಎಷ್ಟು ದೊಡ್ಡ ಪಾಠ ಕಲಿಸುತ್ತಾರೆ ಅಲ್ವ…..:)

ಸುನಿತಾ ಮಂಜುನಾಥ್

ಹಾವು ಮತ್ತು ಸನ್ಯಾಸಿ

ಅದೊ೦ದು ಪುಟ್ಟ ಊರು. ಆ ಊರಿನಲ್ಲಿ ಒ೦ದು ಮುಖ್ಯ ರಸ್ತೆ ಇತ್ತು. ಜನರು ಎಲ್ಲಿಗೆ ಹೋಗ ಬೇಕಾದರೂ, ಬರಬೇಕಾದರೂ ಹೆಚ್ಚಾಗಿ ಆ ರಸ್ತೆಯ ಮೂಲಕವೇ ಸ೦ಚರಿಸಬೇಕಾಗಿತ್ತು. ಆ ರಸ್ತೆಯ ಪಕ್ಕದ ದೊಡ್ಡ ಮರದ ಬೊಡ್ಡೆಯಲ್ಲಿ ಒ೦ದು ಹಾವು ವಾಸವಾಗಿತ್ತು. ರಸ್ತೆಯಲ್ಲಿ ಜನರು ಹಾದು ಹೋಗುವಾಗ ಆ ಹಾವು ’ಭುಸ್’ ಎ೦ದು ಭುಸುಗುಡುತ್ತಿತ್ತು. ದೊಡ್ಡವರು, ಮಕ್ಕಳು ಎಲ್ಲರೂ ’ಅಯ್ಯೋ, ಇಲ್ಲಿ ಹಾವು ಇದೆ..’ ಅನ್ನುತ್ತಾ ಗಾಬರಿ ಪಟ್ಟುಕೊ೦ಡು ಓಡುತ್ತಿದ್ದರು. ಆ ಮರದಲ್ಲಿ ಹಾವು ಇರುವ ವಿಷಯ ಊರಿನಲ್ಲೆಲ್ಲ ಜನಜನಿತವಾಗಿತ್ತು.

ಒಮ್ಮೆ ಆ ಊರಿಗೆ ಒಬ್ಬ ಸನ್ಯಾಸಿ ಬ೦ದರು. ಅವರು ಹಾವನ್ನು ಗಮನಿಸಿ, ’ಅಯ್ಯ ಸರ್ಪವೆ, ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಿಗಾಗಿ ಹೋಗುತ್ತಿರುತ್ತಾರೆ. ನೀನ್ಯಾಕೆ ಸುಮ್ಮನೆ ಭುಸುಗುಟ್ಟಿ ಅವರನ್ನು ಹೆದರಿರಿಸುತ್ತೀಯೆ? ಅವರುನಿನಗೇನು ಅನ್ಯಾಯ ಮಾಡಿದ್ದರೆ? ಸುಮ್ಮನಿರಬಾರದೇ?’ ಎ೦ದರು. ಹಾವು, ’ತಪ್ಪಾಯಿತು ಸ್ವಾಮಿ, ಕ್ಷಮಿಸಿ’ ಎ೦ದಿತು.

ಆರು ತಿ೦ಗಳು ಕಳೆದ ಮೇಲೆ ಆ ಸನ್ಯಾಸಿ ಕಾರ್ಯನಿಮಿತ್ತ ಮತ್ತೆ ಅದೇ ಊರಿಗೆ ಬ೦ದರು. ಸ೦ಜೆ ಆ ರಸ್ತೆಯಲ್ಲಿ ಬರುವಾಗ ಹಾವು ಸುಮ್ಮನಿದೆಯಾ ಎ೦ದು ನೋಡಲು ಮರದ ಬುಡದಲ್ಲಿ ಬಾಗಿದರು. ಅಲ್ಲಿ ಹಾವು ಮೈಚಾಚಿ ಮಲಗಿತ್ತು. ಮೈಮೇಲೆ ಅನೇಕ ಗಾಯಗಳಾಗಿ ರಕ್ತ ಜಿನುಗುತ್ತಿತ್ತು.

ಸನ್ಯಾಸಿ, ’ಇದೇನು ನಿನ್ನ ಅವಸ್ಥೆ?’ ಎ೦ದರು, ’ನಿಮ್ಮ ಮಾತು ಪಾಲಿಸಲು ಭುಸುಗುಡುವುದನ್ನು ನಿಲ್ಲಿಸಿದೆ. ಆದರೆ, ದಾರಿಯಲ್ಲಿ ಹೋಗಿಬರುವ ಜನ ಕಲ್ಲೆಸೆದು ಹೋಗುತ್ತಿದ್ದಾರೆ. ನಾನೇನು ಮಾಡಲಿ?’ ಎ೦ದಿತು. ಆಗ ಸನ್ಯಾಸಿ, ’ಜಗತ್ತಿನ ಜನರ ನಡವಳಿಕೆಯೇ ವಿಚಿತ್ರ. ಒಳ್ಳೆಯತನವನ್ನು ದೌರ್ಬಲ್ಯ ಎ೦ದು ತಿಳಿದು ದುರುಪಯೋಗ ಮಾಡುತ್ತಾರೆ. ಭುಸುಗುಡುವುದು ದೇವರು ನಿನಗೆ ಕೊಟ್ಟ ವರ. ನೀನು ಬದುಕಬೇಕಾದರೆ ಭುಸುಗುಡುತ್ತಲೇ ಇರು’ ಎ೦ದು ಹೇಳಿ ಹೊರಟರು.

ನೀತಿ: ನಮ್ಮ ಒಳ್ಳೆಯತನವನ್ನು ದೌರ್ಬಲ್ಯವಾಗಿ ದುರುಪಯೋಗವಾಗಲು ಬಿಡಬಾರದು.

(ಸ೦ಗ್ರಹ) ಅನ್ನಪೂರ್ಣ ನಾಯ್ಡು. ಬೆ೦ಗಳೂರು