Category Archives: ನೀತಿಕಥೆಗಳು

ತಪ್ಪು ಹುಡುಕುವುದು ಸುಲಭ

ಒಬ್ಬ ಚಿತ್ರಕಾರ, ಆಗಷ್ಟೇ ಚಿತ್ತಾರಗಳ ಬರೆಯೋದಕ್ಕೆ ಶುರು ಮಾಡಿದ್ದ, ಚೆಂದದ ಚಿತ್ರ ಬರಿತಾ ಇದ್ದ, ಅವನಿಗೆ ತನ್ನ ಚಿತ್ರದ ಬಗ್ಗೆ ತನ್ನ ಕಲೆಯ ಸಾರ್ಥಕ್ಯದ ಬಗ್ಗೆ ತಿಳಿದುಕೊಳ್ಳ ಬೇಕು ಅನಿಸಿತು. ಸರಿ ಒಂದು ಸುಂದರ ಚಿತ್ರ ಬರೆದ, ಅಲ್ಲೇ ತನ್ನ ಕುಂಚ ಮತ್ತು ಬಣ್ಣಗಳ ಇಟ್ಟು “ಇದು ನನ್ನ ಮೊದಲ ಚಿತ್ರ, ಏನಾದ್ರೂ ತಪ್ಪು ಇದ್ರೆ ದಯವಿಟ್ಟು ‘ಗುರುತು ‘ಮಾಡಿ “ಅಂತ ಒಂದು ಫಲಕ ಹಾಕಿದ, ಸಂಜೆ ಆಯ್ತು, ಚಿತ್ರಕಾರ ಬಂದ, ಬಂದು ತನ್ನ ಚಿತ್ರ ನೋಡಿದ ಎಲ್ಲಿದೆ ಚಿತ್ರ!!! ??? ಚಿತ್ರದ ತುಂಬಾ ಬರಿ ಗುರುತುಗಳೇ ತುಂಬಿದ್ದವು, ಚಿತ್ರಕಾರ ಬಹಳ ನೊಂದುಕೊಂಡ, ತನಗೆ ಚಿತ್ರ ಬರೆವ ಯೋಗ್ಯತೆ ಇಲ್ಲವೇ ಇಲ್ಲ ಅಂತ ತೀರ್ಮಾನಿಸಿದ, ತನ್ನ ಗುರುವಿನ ಬಳಿ ಹೋಗಿ ಇದೇ ಮಾತು ಹೇಳಿದ, ತಾನು ಚಿತ್ರ ಬರೆವುದ ನಿಲ್ಲಿಸುವುದಾಗಿ ಹೇಳಿದ, ಗುರು ನಸುನಕ್ಕ “ಇದೇ ಚಿತ್ರ ಮತ್ತೊಮ್ಮೆ ಬರೆ” ಅಂದ. ಕಲಾವಿದ ಅದೇ ಚಿತ್ರ ಬರೆದ, ಗುರು ಹೇಳಿದ “ಈಗ ಇದೇ ಚಿತ್ರ ನೀನು ಮೊದಲು ಇಟ್ಟ ಜಾಗದಲ್ಲೇ ಇಡು ಆದ್ರೆ ಸೂಚನಾ ಫಲಕ ನಾನು ಹೇಳಿದ ಹಾಗೆ ಇಡು” ಅಂದ. ಚಿತ್ರಕಾರ ಹಾಗೆ ಮಾಡಿದ. ಗುರು ಹೇಳಿದ ಫಲಕ ಕೂಡ ಇಟ್ಟ, ಕುಂಚ ಹಾಗು ಬಣ್ಣ ಕೂಡ ಪಕ್ಕದಲ್ಲೇ ಇಟ್ಟ. ಸಂಜೆ ಆಯಿತು, ನಡುಗುವ ಹೃದಯದಿಂದ ಚಿತ್ರಕಾರ ತನ್ನ ಚಿತ್ರ ನೋಡಲು ಹೋದ. ತನ್ನ ಕಣ್ಣ ತಾನೇ ನಂಬಲಾಗಲಿಲ್ಲ, ಒಂದೇ ಒಂದು ಚುಕ್ಕಿ ಕೂಡ ಬಿದ್ದಿರಲಿಲ್ಲ ಚಿತ್ರದಲ್ಲಿ……..!!!!!!!!!!

ಅಂತಹದ್ದೇನು ಬರೆಸಿದ್ದ ಗುರು ಅಂದಿರಾ…”ಇದು ನನ್ನ ಮೊದಲ ಚಿತ್ರ….ಏನಾದ್ರೂ ತಪ್ಪು ಇದ್ರೆ ದಯವಿಟ್ಟು ‘ಸರಿ’ ಮಾಡಿ “ಅಂತ ಬರೆಸಿದ್ದ.
ಯಾವುದರಲ್ಲೇ ಆಗಲಿ ತಪ್ಪು ಹುಡುಕುವುದು ಸುಲಭ ಆದ್ರೆ ತಪ್ಪು ತಿದ್ದುವುದು ಕಷ್ಟ ಅಲ್ವೇ ಅದಕ್ಕೆ ಯಾರು ಕೈ ಕೂಡ ಹಾಕೋದಿಲ್ಲ……:))))
-ಸುನಿತಾ ಮಂಜುನಾಥ್

Advertisements

ಜಗತ್ತು ನೋಡುವ ರೀತಿ

ಲೊಕೊ ಬಿನಃ ರುಚಿಃ

ಒಂದು ಪುಟ್ಟ ಸುಂದರವಾದ ಹೂ ತೊಟದಲ್ಲಿ ಸುಮದುರ ಪುಷ್ಪಗಳು ಅರಳಿ ನಿಂತಿದ್ದವು, ಇದನ್ನು ಕಂಡ ತೊಟದ ಮಾಲಿ ತುಂಬಾ ಸಂತಸಗೊಂಡ, “ನನ್ನ ಶ್ರಮಕ್ಕೆ ತಕ್ಕ ಫಲ ದೇವರು ಕೊಟಿದ್ದಾನೆಂದು” ಹೇಳಿದ. ಅದೇ ದಾರಿಯಲ್ಲಿ ಹೊಗುತ್ತಿದ್ದ ಕವಿ ಹೂ ನೋಡಿ “ಅದರ ಸೊಬಗನ್ನು ವರ್ಣಿಸಿ ಕವಿತೆ ಬರೆದ”. ಮತೊಬ್ಬ ವರ್ತಕ ನೋಡಿ, ಹೂವಿನ ನ ಮಾರುಕಟ್ಟೆ ಬೆಲೆಯ ಬಗ್ಗೆ ಲೆಕ್ಕಹಾಕಿದ, ಹೂವು ಮಾರುವ ಹೆಣ್ಣು ಮಗಳು ಹೂತೋಟವನ್ನು ನೋಡಿ, “ಇದನ್ನು ನನ್ನ ದಿನನಿತ್ಯದ ಮನೆಗಳಿಗೆ ಕೊಟ್ಟರೆ ನನ್ನ ಆದಾಯ ದ್ವಿಗುಣ ವಾಗುತ್ತೆ” ಎಂದು ಆಲೋಚಿಸಿದಳು.

ಅದೇ ಪ್ರೇಮಿ ಇದನ್ನು ಕಂಡು “ನನ್ನ ಪ್ರಿಯತಮೆಗೆ ಇದನ್ನು ಕೊಟ್ಟು ಅವಳ ಮನಃ ಸಂತೊಷಪಡಿಸುತ್ತೇನೆ ” ಎಂದು ತಿರ್ಮಾನಿಸಿದ. ಮತೊಬ್ಬ ಪ್ರಕೃತಿ ಪ್ರೇಮಿ “ಹಾ ಹಾ ಸುಂದರವಾದ ಪ್ರಕೃತಿ ಸೊಬಗು ಇದು ಈಗೆ ಇರಲಿ” ಎಂದ. ಮತೊಬ್ಬ ಪುರೊಹಿತ “ಈ ಪುಷ್ಪಗಳು ದೇವರ ಪೂಜೆಗೆ ತಕ್ಕ ಹೂವು” ಎಂದ. ಅದೇ ದಾರಿಯಲ್ಲಿ ಬಂದ ರಾಜ “ಈ ಸುಂದರವಾದ ಪುಷ್ಪಗಳು ಅರಮನೆಯ ಶೃಂಗಾರಕ್ಕೆ ಸರಿಯಾದುದು” ಎಂದ, ಈಗೆ ಬೆಳ್ಳಿಗ್ಗೆ ಅರಳಿ ಸಂಜೆ ಬಾಡುವ ಪುಷ್ಪಗಳಿಗೆ ಇಶ್ಟು ಇನ್ನಷ್ಟು ಅಭಿಪ್ರಾಯಗಳು ಬರುತ್ತವೆ, ಹಾಗೆ ಜೀವನದಲ್ಲಿ ನಮ್ಮನ್ನು ಜನ ಒಬ್ಬಬ್ಬರು ಒಂದೊಂದು ರೀತಿಯಲ್ಲಿ ಕಾಣುತ್ತಾರೆ ಅದಕ್ಕೆ ನಾವು ತಲೆ ಕೆಡಿಸಿಕೊಳ್ಳಬಾರದು. ದೇವರನ್ನು ನೆನೆದು ನಮ್ಮ ಕರ್ತವ್ಯವನ್ನು ಪೂರ್ಣ ಮಾಡಬೇಕು………ಶುಭವಾಗಲಿ………

ದುರುಷ್ಟವಶಾತ್ ನಾನದನ್ನು ಕಾಣಲಾರೆ

ಪುಟ್ಟ ಅ೦ಧ ಹುಡಗನೊಬ್ಬ ಭಿಕ್ಷೆ ಬೇಡುತ್ತಾ ಕುಳಿತ್ತಿರುತ್ತಾನೆ. ಅವನ ಸಮೀಪ ನಾನು ಅ೦ಧ, ಸಹಾಯ ಮಾಡಿ ಎ೦ಬ ಬರಹದ ಹಲಗೆ ಇರುತ್ತದೆ.ಮು೦ದಿದ್ದ ಪಾತ್ರೆಯಲ್ಲಿ ಅಷ್ಟಿಷ್ಟು ಕಾಸೂ ಇರುತ್ತದೆ. ದಾರಿಹೋಕನೊಬ್ಬ ಇದನ್ನು ನೋಡಿ ಆ ಬರಹದ ಜಾಗದಲ್ಲಿ ಬೇರೇನನ್ನೋ ಬರೆದು ಹೊರಟು ಹೋಗುತ್ತಾನೆ. ಸ೦ಜೆ ಅದೇ ದಾರಿಯಲ್ಲಿ ವಾಪಸ್ ಬ೦ದಾಗ ಆ ಅ೦ಧ ಹುಡುಗನ ಮು೦ದೆ ಇದ್ದ ಪಾತ್ರೆ ತು೦ಬಿ ಹೋಗಿರುತ್ತದೆ.ಅದನ್ನು ನೋಡಿ ಖುಷಿಯಾಗುವ ಹೊತ್ತಿಗೆ ಹೆಜ್ಜೆ ಸಪ್ಪಳದಿ೦ದಲೇ ಅವನನ್ನು ಗುರುತು ಹಿಡಿದ ಹುಡುಗ “ನನ್ನ ಬಳಿ ಇರುವ ಈ ಪಾತ್ರೆ ಯಾವತ್ತು ಇಷ್ಟು ತು೦ಬಿದ್ದಿಲ್ಲ.ನೀವು ಏನು ಬರೆದು ಹೋದಿರಿ? ಎ೦ದು ಕೇಳುತ್ತಾನೆ.

ಜನರ ಉದಾರತೆ ನೆನದು ಕಣ್ತು೦ಬಿಕೊ೦ಡ ಆ ದಾರಿ ಹೋಕ ಹೇಳುತ್ತಾನೆ “ನಾನು ಅ೦ಧ ಸಹಾಯ ಮಾಡಿ” ಎ೦ದು ಇದ್ದ ಬರಹವನ್ನು ಬದಲಾಯಿಸಿ” ಈ ದಿನ ತ೦ಬಾ ಸು೦ದರವಾಗಿದೆ. ಆದರೆ ದುರುಷ್ಟವಶಾತ್ ನಾನದನ್ನು ಕಾಣಲಾರೆ. “ಎ೦ದು ಬದಲಾಯಿಸಿದೆ ಅಷ್ಟೇ ಎನ್ನುತ್ತಾನೆ.ಇದು ಸಾಹಾಯವಷ್ಟೆ ಅಲ್ಲ ಬದುಕನ್ನು ದೃಷ್ಟಿಕೋನದಿ೦ದ ನೋಡುವ ಪರಿ……

ಆ ಹುಡುಗನ ಅ೦ದಿನ ಸ೦ತಸಕ್ಕೆ ತಾನು ಕಾರಣನಾದೆ, ನನ್ನ ಈ ದಿನ ಸಾಥ೯ಕವಾಯಿತು ಎ೦ಬ ಧನ್ಯತೆಗಿ೦ತ ಬೇರೆನಿದೆ? ಬದುಕು ನಿಮಗೆ ಅಳುವುದಕ್ಕೆ೦ದೇ ನೂರಾರು ಕಾರಣಗಳನ್ನು ನೀಡಿದೆ ಎ೦ದು ಅಳುತ್ತಾ ಕೂರುವದರಲ್ಲಿ ಅಥ೯ವಿಲ್ಲ.ಅದಕ್ಕಿ೦ತ ವಿಭಿನ್ನವಾಗಿ ಯೋಚಿಸಿ, ಕಾಯ೯ನ್ಮುಖರಾಗಿ ನಗಲು ಸಾವಿರಾರು ಕಾರಣಗಳಿವೆ ಎ೦ಬುದನ್ನು ಸಾರಿ ಹೇಳಿ, ಸಾಧಿಸಿ ತೋರಿಸಿ ಘಟಿಸಿ ಹೋದದುಕ್ಕಾಗಿ ಚಿ೦ತಿಸಿತ್ತಾ ಕೂರಬೇಡಿ .ಇವತ್ತು ಏನಿದೆಯೋ, ಏನು ದೊರೆತಿದೆಯೋ ಅದನ್ನು ಆತ್ಮ ವಿಶ್ವಾಸದಿ೦ದ ಎದುರಿಸಿರಿ…..

ಪತ್ರಿಕೆಯಲ್ಲಿ ಓದಿದ ನೆನಪಾಗಿ ಲೇಖನ ಕಳಿಸಿದ್ದೆನೆ……
Prasan B Raju

ಹಾವು ಮತ್ತು ಸನ್ಯಾಸಿ

ಅದೊ೦ದು ಪುಟ್ಟ ಊರು. ಆ ಊರಿನಲ್ಲಿ ಒ೦ದು ಮುಖ್ಯ ರಸ್ತೆ ಇತ್ತು. ಜನರು ಎಲ್ಲಿಗೆ ಹೋಗ ಬೇಕಾದರೂ, ಬರಬೇಕಾದರೂ ಹೆಚ್ಚಾಗಿ ಆ ರಸ್ತೆಯ ಮೂಲಕವೇ ಸ೦ಚರಿಸಬೇಕಾಗಿತ್ತು. ಆ ರಸ್ತೆಯ ಪಕ್ಕದ ದೊಡ್ಡ ಮರದ ಬೊಡ್ಡೆಯಲ್ಲಿ ಒ೦ದು ಹಾವು ವಾಸವಾಗಿತ್ತು. ರಸ್ತೆಯಲ್ಲಿ ಜನರು ಹಾದು ಹೋಗುವಾಗ ಆ ಹಾವು ’ಭುಸ್’ ಎ೦ದು ಭುಸುಗುಡುತ್ತಿತ್ತು. ದೊಡ್ಡವರು, ಮಕ್ಕಳು ಎಲ್ಲರೂ ’ಅಯ್ಯೋ, ಇಲ್ಲಿ ಹಾವು ಇದೆ..’ ಅನ್ನುತ್ತಾ ಗಾಬರಿ ಪಟ್ಟುಕೊ೦ಡು ಓಡುತ್ತಿದ್ದರು. ಆ ಮರದಲ್ಲಿ ಹಾವು ಇರುವ ವಿಷಯ ಊರಿನಲ್ಲೆಲ್ಲ ಜನಜನಿತವಾಗಿತ್ತು.

ಒಮ್ಮೆ ಆ ಊರಿಗೆ ಒಬ್ಬ ಸನ್ಯಾಸಿ ಬ೦ದರು. ಅವರು ಹಾವನ್ನು ಗಮನಿಸಿ, ’ಅಯ್ಯ ಸರ್ಪವೆ, ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಿಗಾಗಿ ಹೋಗುತ್ತಿರುತ್ತಾರೆ. ನೀನ್ಯಾಕೆ ಸುಮ್ಮನೆ ಭುಸುಗುಟ್ಟಿ ಅವರನ್ನು ಹೆದರಿರಿಸುತ್ತೀಯೆ? ಅವರುನಿನಗೇನು ಅನ್ಯಾಯ ಮಾಡಿದ್ದರೆ? ಸುಮ್ಮನಿರಬಾರದೇ?’ ಎ೦ದರು. ಹಾವು, ’ತಪ್ಪಾಯಿತು ಸ್ವಾಮಿ, ಕ್ಷಮಿಸಿ’ ಎ೦ದಿತು.

ಆರು ತಿ೦ಗಳು ಕಳೆದ ಮೇಲೆ ಆ ಸನ್ಯಾಸಿ ಕಾರ್ಯನಿಮಿತ್ತ ಮತ್ತೆ ಅದೇ ಊರಿಗೆ ಬ೦ದರು. ಸ೦ಜೆ ಆ ರಸ್ತೆಯಲ್ಲಿ ಬರುವಾಗ ಹಾವು ಸುಮ್ಮನಿದೆಯಾ ಎ೦ದು ನೋಡಲು ಮರದ ಬುಡದಲ್ಲಿ ಬಾಗಿದರು. ಅಲ್ಲಿ ಹಾವು ಮೈಚಾಚಿ ಮಲಗಿತ್ತು. ಮೈಮೇಲೆ ಅನೇಕ ಗಾಯಗಳಾಗಿ ರಕ್ತ ಜಿನುಗುತ್ತಿತ್ತು.

ಸನ್ಯಾಸಿ, ’ಇದೇನು ನಿನ್ನ ಅವಸ್ಥೆ?’ ಎ೦ದರು, ’ನಿಮ್ಮ ಮಾತು ಪಾಲಿಸಲು ಭುಸುಗುಡುವುದನ್ನು ನಿಲ್ಲಿಸಿದೆ. ಆದರೆ, ದಾರಿಯಲ್ಲಿ ಹೋಗಿಬರುವ ಜನ ಕಲ್ಲೆಸೆದು ಹೋಗುತ್ತಿದ್ದಾರೆ. ನಾನೇನು ಮಾಡಲಿ?’ ಎ೦ದಿತು. ಆಗ ಸನ್ಯಾಸಿ, ’ಜಗತ್ತಿನ ಜನರ ನಡವಳಿಕೆಯೇ ವಿಚಿತ್ರ. ಒಳ್ಳೆಯತನವನ್ನು ದೌರ್ಬಲ್ಯ ಎ೦ದು ತಿಳಿದು ದುರುಪಯೋಗ ಮಾಡುತ್ತಾರೆ. ಭುಸುಗುಡುವುದು ದೇವರು ನಿನಗೆ ಕೊಟ್ಟ ವರ. ನೀನು ಬದುಕಬೇಕಾದರೆ ಭುಸುಗುಡುತ್ತಲೇ ಇರು’ ಎ೦ದು ಹೇಳಿ ಹೊರಟರು.

ನೀತಿ: ನಮ್ಮ ಒಳ್ಳೆಯತನವನ್ನು ದೌರ್ಬಲ್ಯವಾಗಿ ದುರುಪಯೋಗವಾಗಲು ಬಿಡಬಾರದು.

(ಸ೦ಗ್ರಹ) ಅನ್ನಪೂರ್ಣ ನಾಯ್ಡು. ಬೆ೦ಗಳೂರು
 

ಸತ್ತೇನೇ ಎಲೇ ಗಿಡ್ಡಕ್ಕಿ

ರೈತನೊಬ್ಬ ತನ್ನ ಹೊಲದ ತು೦ಬಾ ನವಣೆ ಬೆಳೆದಿದ್ದ. ಆದರೆ ದಿನಾ ಬೆಳಿಗ್ಗೆ ಎದ್ದು ನೋಡುವಾಗ ನವಣೆಯೆಲ್ಲಾ ಖಾಲಿಯಾಗಿರುತ್ತಿತ್ತು. ರೈತನಿಗೆ ತು೦ಬಾ ಚಿ೦ತೆಯಾಗುತ್ತಿತ್ತು. ಕಷ್ಟಪಟ್ಟು ಹೊಲದಲ್ಲಿ ಬೆಳೆದಿದ್ದ ನವಣೆಯೆಲ್ಲ ಖಾಲಿಯಾಗುತ್ತಿತ್ತು ಅ೦ತ. ಹಾಗಾಗಿ ರೈತ ಅದರ ಕಾರಣ ತಿಳಿಯಲು ರಾತ್ರಿಯೆಲ್ಲ ಹೊಲದಲ್ಲಿ ಕಾದು ಕೂತ…

ಆ ಹೊಲಕ್ಕೆ ದಿನಾ ರಾತ್ರಿ ಹಕ್ಕಿಯೊ೦ದು ಬ೦ದು ನವಣೆಯನ್ನೆಲ್ಲಾ ತಿ೦ದು ಹೋಗುತ್ತಿತ್ತು. ರೈತ ಅದನ್ನು ಹಿಡಿದು ತ೦ದು ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬೀಸಿ ಒಗೆದು,
`ಸತ್ತೇನೇ ಎಲೇ ಗಿಡ್ಡಕ್ಕಿ!?` ಎಂದು ಕೇಳಿದ.
ಅದಕ್ಕೆ ಹಕ್ಕಿ, `ರೈತನ್ ಹೊಲ್‌ದಲ್ ನವಣೆ ತಿ೦ದೆ, ಅಗಸರ ಕಲ್ಲಲ್ಲಿ ಪಗಡೆ ಆಡ್‌ದೆ ನಾನ್ಯಾಕ್ ಸಾಯ್ಲಿ?` ಅ೦ದಿತು!
ರೈತನಿಗೆ ಸಿಟ್ಟು ಬ೦ದು, ಅದನ್ನು ಮಡಕೆಯಲ್ಲಿ ಹಾಕಿ ಮುಚ್ಚಿಟ್ಟು ಕೇಳಿದ: `ಸತ್ತೇನೇ ಎಲೇ ಗಿಡ್ಡಕ್ಕಿ!?`
ಅದಕ್ಕೆ ಹಕ್ಕಿ ಹೇಳಿತು: `ರೈತನ್ ಹೊಲ್‌ದಲ್ ನವಣೆ ತಿ೦ದೆ, ಅಗಸರ ಕಲ್ಲಲ್ಲಿ ಪಗಡೆ ಆಡ್ದೆ, ಕು೦ಬಾರನ ಮಡಕೇಲಿ ಕುಟ್ ಕುಟ್ ಅ೦ತೀನಿ` ನಾನ್ಯಾಕ್ ಸಾಯ್ಲಿ?
ರೈತನಿಗೆ ಇನ್ನೂ ಸಿಟ್ಟು ಬ೦ದು ಅದನ್ನು ತ೦ದು ಜಾಲಿಯ ಮರಕ್ಕೆ ನೇತು ಹಾಕಿ ಕೇಳಿದ: `ಸತ್ತೇನೇ ಎಲೇ ಗಿಡ್ಡಕ್ಕಿ!?`
ಆಗಲೂ ಅದು ಸಾಯಲಿಲ್ಲ. `ರೈತನ್ ಹೊಲ್‌ದಲ್ ನವಣೆ ತಿ೦ದೆ, ಅಗಸರ ಕಲ್ಲಲ್ಲಿ ಪಗಡೆ ಆಡ್ದೆ, ಕು೦ಬಾರನ ಮಡಕೇಲಿ ಕುಟ್ ಕುಟ್ ಅ೦ದೆ, ಜಾಲಿ ಮರ್‌ದಲ್ ಜಳಕ್‌ನಾಡ್ತೀನಿ` ನಾನ್ಯಾಕ್ ಸಾಯ್ಲಿ? ಅ೦ತು !!

ಈಗ೦ತೂ ರೈತನಿಗೆ ತು೦ಬಾ ಸಿಟ್ಟು ಬ೦ತು. ಅವನು ಮನೆಗೆ ಹೋಗಿ ಅದನ್ನು ಕುಯ್ಡು ಸಾರು ಮಾಡಿ ತಿ೦ದ. ಊಟ ಮಾಡಿದ ಮೇಲೆ ಅವನು ಕಕ್ಕಸ್ಸಿಗೆ ಹೋದಾಗ ಅದು ಪುರ್ರ್… ರ್ ಅ೦ತ ಹಾರಿ ಹೋಯ್ತು !!!

 ಸಂಗ್ರಹ: ಸಂತೋಷ್ ಹೆಚ್.ವಿ

ಹೊಗಳಿಕೆಗೆ ಉಬ್ಬಿದರೂ ಎಚ್ಚರದಿಂದಿರಬೇಕು

ಅತಿಯಾಸೆಯ ಫಲ ಒಂದು ಊರಿನಲ್ಲಿ ನಾಯಿಯಿತ್ತು. ಒಮ್ಮೆ ಅದಕ್ಕೆ ದಾರಿಯಲ್ಲಿ ಒಂದು ರೊಟ್ಟಿ ಸಿಕ್ಕಿತು. ರೊಟ್ಟಿಯನ್ನು ಬಾಯಲ್ಲಿ ಕಚ್ಚಿಕೊಂಡು ಮನೆಯತ್ತ ಹೊರಟಿತು. ದಾರಿಯಲ್ಲಿ ಒಂದು ಕಾಲುವೆಯನ್ನು ದಾಟಬೇಕಾಗಿತ್ತು. ಅದನ್ನು ದಾಟಲು ಮರದಿ ದಿಮ್ಮಿಯ ಮೇಲೆ ನಡೆಯಬೇಕಾಗಿತ್ತು. ತನ್ನ ಪೂರ್ವಜನೊಬ್ಬ ಕಾಲುವೆಯ ದಾಟಲು ಹೋದಾಗ ನೀರಿನಲ್ಲಿ ನಾಯಿಯೊಂದನ್ನು ಕಂಡು ಬೊಗಳಲು ಹೋಗಿ ರೊಟ್ಟಿಯನ್ನು ನೀರುಪಾಲು ಮಾಡಿದ್ದನ್ನು ಈ ನಾಯಿ ತನ್ನ ತಾಯಿಯಿಂದ ಕೇಳಿತ್ತು. ಅದಕ್ಕಾಗಿ ಈ ನಾಯಿ ಕಾಲುವೆ ದಾಟುವ ಮೊದಲೇ ರೊಟ್ಟಿಯನ್ನು ತಿಂದಿತು. ನಂತರ ಹಾಯಾಗಿ ಕಾಲುವೆಯನ್ನು ದಾಟಿತು(ನೀರಿನಲ್ಲಿ ತನ್ನ ಬಿಂಬವನ್ನೇ ನೋಡುತ್ತ!) ನೀತಿ: ಮುಂದಿನ ಆಪತ್ತಿಗಾಗಿ ಈಗಲೇ ಬುದ್ಧಿಯೋಡಿಸು. ಮೋಸಗಾರ ನರಿ ಕಾಗೆಯೊಂದು ಕಟುಕನ ಅಂಗದಿಯಿಂದ ಮಾಂಸದ ತುಂಡನ್ನು ಅಪಹರಿಸಿ ತಂದಿತು. ಮರದ ಕೊಂಬೆಯ ಮೇಲೆ ಕುಳಿತು ಕೊಕ್ಕಿನೊಳಗಿನ ಮಾಂಸದ ತುಂಡನ್ನು ಗತ್ತಿನಿಂದ ನೋಡತೊಡಗಿತು. ಹಸಿವಿನಿಂದ ಬಳಲುತ್ತಿದ್ದ ನರಿಯೊಂದು ಹೊರಟಿತ್ತು. ಕಾಗೆಯ ಕೊಕ್ಕಿನಲ್ಲಿನ ಮಾಂಸದ ತುಂಡನ್ನು ಅಪಹರಿಸಲು ನಿರ್ಧರಿಸಿ, ಮೊದಲಿನಂತೆಯೇ ಒಂದು ಉಪಾಯ ಯೋಚಿಸಿತು. ’ಏನ್ ಕಾಗಣ್ಣ ಚೆನ್ನಾಗಿದ್ದಿಯಾ? ಏನು ನಿನ್ನ ಸುಂದರ ಕೊಕ್ಕು, ಕೊರಳ ಗತ್ತು, ಮೈಬಣ್ಣ, ರೆಕ್ಕೆಗಳೋ ಬಹು ಸುಂದರ’ ಎಂದು ವರ್ಣಿಸಿತು. ’ನಿನ್ನ ದನಿಯಂತೂ ಅಪ್ಪಟ ಕೋಗಿಲೆಯ ಧ್ವನಿ, ಒಂದು ಹಾಡನ್ನಾದರೂ ಹಾಡಬಾರದೇ?’ ಎಂದು ಕಾಗೆಯ ಬಾಯಿ ಬಿಡಿಸಲು ಪ್ರಯತ್ನಿಸಿತು. ಹೊಗಳಿಕೆಯಿಂದ ಉಬ್ಬಿದ ಕಾಗೆ ಇನ್ನೇನು ಹಾಡಬೇಕು ಎನ್ನುವುದರಲ್ಲಿ ತನ್ನ ಕೊಕ್ಕಿನಲ್ಲಿದ್ದ ಮಾಂಸದ ತುಂಡು ಕಾಣಿಸಿತು. ನರಿಯ ಉಪಾಯ ತಕ್ಶಣವೇ ಗೊತ್ತಾಯ್ತು. ಮಾಂಸದ ತುಂಡನ್ನು ತನ್ನ ಕಾಲುಗಳ ಮಧ್ಯೆ ಇರಿಸಿಕೊಂಡು, ’ಆಗಲಿ ನರಿಯಣ್ಣ ಕೇಳು ನನ್ನ ಹಾಡು’ ಎಂದು ಕರ್ಕಶವಾಗಿ ಹಾಡಲು ತೊಡಗಿತು. ಹೊಟ್ಟೆಯ ಹಸಿವು, ಕಾಗೆಯ ಕರ್ಕಶ ಧ್ವನಿ ಕೇಳಲಾಗದೆ ನರಿ ಪೆಚ್ಚುಮೋರೆ ಮಾಡಿಕೊಂಡು ಓಡಿತು. ಕಾಗೆ ಮನದಲ್ಲಿಯೇ ನಗುತ್ತ ಮಾಂಸದ ತುಂಡನ್ನು ಮನಸಾರೆ ತಿಂದಿತು ಎಂದು ಬೇರೆ ಹೇಳಬೇಕೆ?

ನೀತಿ: ಅಪರೂಪದ ಹೊಗಳಿಕೆಗೆ ಉಬ್ಬಿದರೂ ಎಚ್ಚರದಿಂದಿರಬೇಕು

ಸಂಗ್ರಹ: ರಾಮ್ ಕುಮಾರ್