Category Archives: ಕವನಗಳು

ಹಂಗಿನ ದೀಪವ ಹುಡುಕುತಾ

ಕತ್ತಲೆಯಲ್ಲಿ ಮಂಕು ಬೆಳಕು
ನೋವಿನಲ್ಲೂ ಸಣ್ಣ ನಗು
ಅನ್ನದಲ್ಲಿ ಸಣ್ಣ ಕಲ್ಲು

ಸಾರಿಗೆ ಒಂದಂಶ ಉಪ್ಪು ಜಾಸ್ತಿ
ಎಲ್ಲವೂ ಸಾಮಾನ್ಯ..
ತೆಗೆಯಲೇಬೇಕು,
ಸಾವರಿಸಿಕೊಂಡು ಸೇವಿಸಲೇಬೇಕು
ದೀಪ ಯಾವುದಾದರೇನು?
ಎಣ್ಣೆ ಯಾವ ಬೀಜದಾದರೇನು?
ಬೆಳಕು ಸಾಕಲ್ಲವೇ?
ಸಣ್ಣ ಬೆಳಕು ಸಾಕಲ್ಲವೇ!
ನಿಮಗೆ ನಮ್ಮ ಕೈ
ನಮ್ಮ ಕೈ ನಿಮಗೆ
ಪಿಡಿದು ಸಾಗಲು…
ಸಾಗುವ
ದೂರ ಬಹುದೂರ…
ಇನ್ನೊಂದು ದೀಪವ ಹುಡುಕುತಾ…

-ಫಕೀರ

Shridhar Banvasi

Advertisements

ಕನಿಕರ

ಪ್ರತಿ ಮನೆಯಲೂ
ಬೆಳಕಿಗಾಗಿ ಹಚ್ಚಿಟ್ಟ
ಸಾಲು ಸಾಲು

ಹಣತೆಗಳ ಮಿಣುಕು
ಬೆಳಕ ಕಂಡು,
ಕನಿಕರಗೊಂಡು,
ತನ್ನ ಬೆಳಕಿಂದ
ಜಗವ ಬೆಳಗಲು
ಬಂದೇಬಿಟ್ಟನೇ ನೇಸರ..


—ಕೆ.ಗುರುಪ್ರಸಾದ್

ನೆನಪುಗಳ ಸಂತೆ

ಮನದ ಮೈದಾನದಲ್ಲಿದೆ ನೆನಪುಗಳ ಸಂತೆ…
ಅದರಲೆಲ್ಲೋ ಕಳೆದು ಹೋಗಿರುವೆ ನಾನು…,
ಎಂಬುದೇ ನನಗೊಂದು ದೊಡ್ಡ ಚಿಂತೆ…
ಹುಡುಕಿ ಕೊಡು ಬಾರೋ ಗೆಳೆಯಾ…
ನನ್ನ ಮೇಲೆ ಉಪಕಾರವ ಮಾಡಿದಂತೆ…!

****************************

ಪ್ರೀತಿ ಚಿಗುರಿದರೆ ಸಿಹಿ ಜೇನಿನಂತೆ…
ಆ ಮೇಲೆ ಎಲ್ಲವೂ ಪ್ರೆಮಮಯವಂತೆ…
ಮಾತನಾಡಿದರೆ ನಗುವಿನ ಸಹಿಯಂತೆ…
ಎದುರಾದಾಗ ಸಂತಸದ ಹೊನಲಂತೆ…
ದೂರಾದರೆ ಕಣ್ಣೀರ ಪಾಲಂತೆ…!

****************************

ನನ್ನಲಿ ಕನಸು ಎಂಬ ಅಲೆಯೊಂದು
ಮುಗಿಲೆತ್ತರಕೆ ಏರಿ ಮುಂಬರುತ್ತಿದೆ ಹಾಗೆ…!
ಇದು ಕನಸೋ ಇಲ್ಲಾ ನನಸೋ ನಾ ತಿಳಿಯಲಿ ಹೇಗೆ…?
ಇದರ ಎದುರು ನಿಂದು ಸತ್ಯವ ಇಣುಕಿ ನೋಡಲಿ ಹೇಗೆ…?

****************************

ಕಂಗಳು ಕದಲದಂತಿದೆ…
ತುಟಿಯು ನುಡಿಯದಂತಿದೆ…
ಈ ಹೃದಯವು ಮಾತ್ರ
ನೋವಿನಲ್ಲಿ ಚಡಪಡಿಸುತ್ತಿದೆ…
ಮತ್ತೆ ನಿನ್ನ ನೋಡಲು…
ನಿನ್ನ ಮಾತು ಕೇಳಲು…!!

ನಾನು ಮತ್ತು ನನ್ನವಳ ನಡುವೆ…

ಏನೇ ಹೇಳು ನೀನು.. ಏನೋ ಆಗಿದ್ದೆ ನಾನು!
ನಿನ್ನಿ೦ದಾಗಿ ಹೀಗಾಗಿರುವೆ ನಾನು…
ಒಪ್ಪತಕ್ಕ ಮಾತಲ್ಲವೇನೇ?

ಇಲ್ಲಾರೀ..ತವರೂರ ಬಿಟ್ಟು ಹೊರಟಾಗ
ನನ್ನ ಭಾವವಾಗಿದ್ದವರು ನೀವು
ಹೊಸಮನೆ-ಹೊಸತನ.. ಎಲ್ಲೆಲ್ಲೂ ಭಯ೦ಕರ ಮೌನ!
ನನ್ನೊಳಗಿನ ಮೌನಕ್ಕೆ ಮಾತಾದವರು ನೀವು..
ಬೇಸರದ ಛಾಯೆಯ ನೀಗಿಸಿದವರು ನೀವು..
ಆಗಾಗ ತಲೆಯನ್ನಪ್ಪುವ ಹಿತವಾದ ಕರಸ್ಪರ್ಶ
ಅರೆಕ್ಷಣ ಎಲ್ಲವನ್ನೂ ಮರೆಸುವ ಕಣ್ಣೋಟ
ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕಿತ್ತು ರೀ?ಹೂ೦ ಹೂ೦.. ಇಲ್ಲಾ ಕಣೇ.. ದಿನ ಜ೦ಜಡಗಳ ನಡುವಿನ ನೆಮ್ಮದಿ ನೀನು!
ಎ೦ದಿನ೦ತೆ ಬದುಕ ಕಳೆಯದ೦ತೆ ತಡೆದವಳು ನೀನು!
ಹೊಸ ಗುರಿ.. ಹೊಸ ಆಕಾ೦ಕ್ಷೆ ಬಿತ್ತಿದವಳು ನೀನು?
ನನ್ನೆರಡು ಮುದ್ದಾದ ಕ೦ದಮ್ಮಗಳ ಮಹಾತಾಯಿ ನೀನು.

ನನ್ನಲ್ಲಿ ಹೊಸತನ್ನು ಬಿತ್ತಲು ಬಿಟ್ಟವರು ನೀವು..
ನನ್ನ ಭಾವದ ಭಾವವಾದವರು ನೀವು!
ಹಸಿದೊಡಲ ದಾಹಕ್ಕೆ ತಣ್ಣೀರ ಧಾರೆಯಾದವರು ನೀವಲ್ಲವೇ!

ರಾಘವೇಂದ್ರ ನಾವಡ

ನಿನಗಾಗಿ ಕಾಯುತಾ

ನಾ ಕಂಡ ೫೬ ನೇ ಕನ್ನಡ ರಾಜ್ಯೋತ್ಸವ

ಕನಸು ಕಂಡೆನೆಂಬ ಭಾವ
ಸುಡುಬಿಸಿಯ ಮರುಳುಗಾಡಲ್ಲಿ
ನೀರು ಉಕ್ಕಿ ಉಕ್ಕಿ ಬಂದಂತೆ
ಕಂಗಳಲ್ಲಿ ಮಿಂಚು ಮೂಡಿದಂತೆ
೫೬ ಸಾಹಿತಿಗಳ ಸಂಗಮ
೫೬ ಪುಸ್ತಕಗಳ ಲೋಕಾರ್ಪಣೆ ಕ್ಷಣ
ಚರಿತ್ರೆ ದಾಖಮಾಡಿತು ಸ್ವಪ್ನ ಬುಕ್ ಹೌಸ್
ಯಾವ ಕಡೆ ನೋಡಿದರೂ
ದೊಡ್ಡ-ದೊಡ್ಡ ಸಾಹಿಗಳ ಗುಂಪು
ನೀವೆ ನಮ್ಮ ಆತ್ಮ ಶಕ್ತಿ
ನೀವೆ ನಮ್ಮ ಜೀವ ಮುಕ್ತಿ
ನೀವಿದ್ದರೆ ಸಂತಸ, ನೀವಿದ್ದರೆ ಸೊಗಸು
ಏನಿದ್ದರೇನು, ಮುಕ್ತಿ ಬೇಡ, ಸಿರಿಯು ಬೇಡ
ನೀವೆ ಸಾಕೆಂಬ ಭಾವ ಮನಕೆ
ನಿಮ್ಮೆಲ್ಲರ ಮುಗುಳು ನಗೆಯೆ
ಕಿರೀಟ ನಮ್ಮ ಕನ್ನಡ ಭಾಷೆಗೆ
ದೊರದಲ್ಲೆ ನಿಮ್ಮ ಕಂಡು, ಓಡಿ ನಿಮ್ಮ ಬಳಿ ಬಂದು
ಅಭಿನಂದನೆ ಹೇಳಿನಿಂದ
ನನ್ನೆದೆಯ ಮನಕೆ ಖುಷಿಯನಿತ್ತಿರಿ…

-ಸುಜಾತ ವಿಶ್ವನಾಥ್.

ಲಜ್ಜೆ

ಚಂದಿರನ ಕಂಡೊಡನೆ
ಉಕ್ಕಿ ಮೇಲೇರುವ ಈ
ಸಮುದ್ರಕ್ಕೆ ಲಜ್ಜೆಯೇ ಇಲ್ಲವೆ

ತಾರೆಗಳ ಕಂಡೊಡನೆ
ನಗುತ ಮುಗಿಲಲಿ
ತೇಲುವ ಚಂದಿರಗೆ
ಲಜ್ಜೆಯೇ ಇಲ್ಲವೆಸೂರ್ಯ ದರ್ಶನ ಕಾದು
ಮೈ ಮರೆತು ನಗುಬೀರೊ
ಹೂಗಳಿಗೆ ಲಜ್ಜೆಯೇ ಇಲ್ಲವೆ

ಕರೆಯದಿದ್ದರೂ ಬಂದು
ಹೂಗಳ ಮೈಸವರಿ
ಗಂಧವ ಹೊತ್ತೊಯ್ಯೋ
ಗಾಳಿಗೆ ಲಜ್ಜೆಯೇ ಇಲ್ಲವೆ

-ಮಮತಾ ಕೀಲಾರ್

ಜನನ ಜೀವನ ಮರಣ

ಜನನ
ಗಂಡು-ಹೆಣ್ಣಿನ
ಸಮಾಗಮ
ಹೊಸ ಜೀವದ
ಉಗಮ!

ಜೀವನ
ನಿರೀಕ್ಷೆ..
ವಾಸ್ತವಗಳ
ನಡುವಿನ
ಹೊ೦ದಾಣಿಕೆ!

ಮರಣ
ಬದುಕಿನ ಅಂತ್ಯ
ದುಡಿದು ದಣಿದ ದೇಹಕ್ಕೆ
ಶಾಶ್ವತ ವಿಶ್ರಾಂತಿ !

ಜನನ
ಮರಣದ
ನಡುವೆ ಬದುಕಿಗಾಗಿ
ಮನುಜನ
ವ್ಯರ್ಥ ಕಾಲಹರಣ!
-ಭಾಗೀರಥಿ ಚಂದ್ರಶೇಖರ್

ಸರಸ

ಇರುಳಲಿ ಬಾನಿಗೆ
ಕಾವಲಿರು ಎಂದು
ತನ್ನೊಡಲ ಬೆಳಕನಿತ್ತು,
ಕೋಟಿ ತಾರೆಗಳ
ಸೈನ್ಯವನೂ ಇತ್ತು,
ಕಡಲಿನಾಳದಲ್ಲಿನ
ಮತ್ಸ್ಯಕನ್ಯೆಯರೊಡನೆ
ಸರಸವಾಡಲು
ಹೋದ ಭಾಸ್ಕರನಿಗೆ,
ಚಂದಿರನ ಅಸಮರ್ಥತೆ 
ಗೊತ್ತಾದದ್ದು ಬಾನಾಡಿಗಳ
ಇಂಚರವೆನುವ ಆರ್ತನಾದ
ಕೇಳತೊಡಗಿದಾಗ,
ಸಿಡುಕಿನ ಕೆಂಪು ಬಣ್ಣ
ಅವನ ಮೊಗವನಲಂಕರಿಸಿತ್ತು
ಸರಸವನು ನಿಲ್ಲಿಸಿ
ಅವರನೆಲ್ಲಾ ತೊರೆದು
ಮೂಡಣದ ಕದವ ತೆಗೆದು
ಮತ್ತೆ ಆಗಸಕೆ ಬಂದಾಗ….

—ಕೆ.ಗುರುಪ್ರಸಾದ್

ಭಜಕರು ಭಕುತಿಯಿಂದ ಕರೆದಾಗ

ಭಜಕರು ಭಕುತಿಯಿಂದ ಕರೆದಾಗ
ಓಡೋಡಿ ಬರುವ ಮುದ್ದು ಕೃಷ್ಣನೀತ..
ಭಕ್ತವತ್ಸಲ ಯಶೋದೆ ಕಂದ
ನವನೀತ ಪ್ರೀತನೀತ..

ಕಾರಾಗ್ರಹದಿ ಜನಸಿ
ದೂರ್ತ ಮಾವನ ಕೊಂದವನೀತ..
ಮಣ್ಣನು ತಿಂದು ತಾಯಿಗೆ
ಬ್ರಹ್ಮಾಂಡವ ತೋರಿದಾತ..
ರೋಷದಿ ಗೋವರ್ಧನ ಗಿರಿಯ
ಎತ್ತಿ ಹಿಡಿದ ಗೋಪಾಲಕನೀತ..
ಬೇಡಿಬಂದ ದೀನರಿಗೆ
ಆಶ್ರಯದಾತ.. Continue reading →

ಕವಿಯಾಗಬೇಕೆಂದಿರುವೆ

ಮನದಲ್ಲಿ ಮೂಡುವ ಪದಗಳೊಂದಿಗೆ ಗುದ್ದಾಡಿ,
ತ್ರಾಸನ್ನನ್ನುಭವಿ ಸಿ ಪ್ರಾಸವ ಬಳಸಿ,
ಮನಸ್ಸಿಗೆ ನೆಮ್ಮದಿ ನೀಡುವ ಕವನ ರಚಿಸಿ,
ನಿಮ್ಮೆಲ್ಲರ ಹಾರೈಕೆಯ ಬಯಸಿ,
ನಾನೀಗ ಕವಿಯಾಗಬೇಕೆಂದಿರು ವೆ…

ತಲೆಯೊಳಗಿನ ಜಂಜಾಟವ ಮರೆತು,
ಕಲ್ಪನಾಲೋಕದಿ ಕನಸಿನೊಂದಿಗೆ ಬೆರೆತು,
ತಮ್ಮೆಲ್ಲರ ಬುದ್ಧಿವಾದದಿಂದ ಒಂದಿಷ್ಟು ಕಲಿತು,
ಬಿಳಿಹಾಳೆಯೊಂದಿಗೆ ಲೇಖನಿಯ ಹಿಡಿದು,
ನಾನೀಗ ಕವಿಯಾಗಬೇಕೆಂದಿರು ವೆ…

ಈ ಬಡಪಾಯಿ ಹೃದಯವನ್ನು ಘಾಸಿಗೊಳಿಸಿದರು ಕೆಲವರು.
ನನ್ನನ್ನು ಸಮಾಧಾನಿಸಿ ಸಂತೈಸಿದವರು ಕೆಲವರು.
ನಾನು ಬರೆಯುವುದನ್ನೇ ನಿಲ್ಲಿಸಬೇಕೆಂದಿದ್ದರು ಒಂದಿಬ್ಬರು.
ಆದರೆ ನನ್ನ ತಪ್ಪನ್ನು ತಿದ್ದಿ ಸಲಹಿದವರು ಕೆಲ ಕವಿಮಿತ್ರರು.
ಇದೇ ಹಟಕ್ಕಾಗಿ ನಾನೀಗ ಕವಿಯಾಗಬೇಕೆಂದಿರು ವೆ…

ನಾನೊಬ್ಬ ಸಾಧಾರಣ ಜಂಗಮವಾಣಿಯಲ್ಲಿ ಬರೆಯುವ ಬಾಲಕ.
ನನ್ನ ಮನಸ್ಸೇ ಈ ಬರವಣಿಗೆಗೆ ಮುದ್ದಿನ ಮಾಲಿಕ.
ನಿಮ್ಮೆಲ್ಲರ ಪ್ರೋತ್ಸಾಹದಲಿ ನಾ ಕಂಡೆ ಭೂಲೋಕದಲ್ಲೇ ನಾಕ.
ಕೆಲವೊಮ್ಮೆ ನಿಮ್ಮ ಮೊನಚಾದ ವಾಗ್ಬಾಣದಿಂದ ಮುಟ್ಟಿಸುತ್ತೀರಿ ಬಿಸಿಯಾದ ಶಾಖ.
ನಿಮ್ಮ ಈ ಪ್ರಭಾವದಿಂದಲೇ ನಾನೀಗ ಕವಿಯಾಗಬೇಕೆಂದಿರು ವೆ…
-ಪ್ರದೀಪ್ ಹೆಗಡೆ

ಅಂದು-ಇಂದು

ಅಂದು ನೀನಿದ್ದೆ ಬಳ್ಳಿಯೂ ನಾಚುವಂತೆ 
ಇಂದೇಕೆ ಆದೆ ಕುಂಬಳ ಕಾಯಿಯಂತೆ 
ಅಂದಾಗಿದ್ದೆ ನೀ ಏಳು ತೂಕದ ಮಲ್ಲಿಗೆ
ಇಂದು ಕೈ ಹಿಡಿದು ಹೇಳಬೇಕು 

ಏಳು..ತೂಕವೆ ಮೆಲ್ಲಗೆ 
ಅಂದು ನಿನ್ನ ಕಂಠ ಕೇಳಿ ಕರ್ಣ ಪಾವನ 
ಇಂದೇಕೋ ಅನಿಸುತಿದೆ ಗಾರ್ಧಬ ಗಾಯನ 
ಅಂದೆನಿಸಿತ್ತು ಬದುಕು ಸುಂದರ ಕವನ 
ಇಂದು ನಾನಾಗಿರುವೆ ಜಂಜಾಟದಲಿ ಹೈರಾಣ
(ಸ್ನೇಹಿತರೆ ಇದು ಬರಿ ಹೆಂಗಸರಿಗಷ್ಟೆ ಅನ್ವಯವಾಗಲ್ಲ ಗಂಡಸರಿಗೂ ಅನ್ವಯವಾಗುತ್ತದೆ)
-ಮಮತಾ ಕೀಲಾರ್

ಕರೆದರಿಲ್ಲಿ ಬರದೆ ಇರುವನೆ

ಸರಿಯಾಗಿ ೨೯ ವರ್ಷಗಳ ಹಿಂದೆ(೧೯೮೩) ನಾನು ಬರೆದ ಮೊದಲ ಭಕ್ತಿಗೀತೆ ಇದು.
ನನಗಾಗ ವಯಸ್ಸು ೧೩.ಓದುತ್ತಿದ್ದುದು ೭ನೆಯ ತರಗತಿ…..
**************************************************

ಕರೆದರಿಲ್ಲಿ ಬರದೆ ಇರುವನೆ ಉರಗಾಭಾರಣ /

ಕರುಣನೇತ್ರ ತೆರೆಯದಿರುವನೆ ಪಾರ್ವತಿರಮಣ /
ಹರಿವ ಚಿತ್ತ ನಿಲಿಸಿ ನಿತ್ಯ ಅವನ ಭಜಿಸಿ ಪಾಡುತಿರಲು /
ಧರೆಯ ಮಿಥ್ಯ ದಹಿಸಿದವನ ನಾಮಸ್ಮರಣೆ ಮಾಡುತಿರಲು // ಪ //ಕಡಲು ಮಥಿಸುವಾಗ ದೊರೆತ ಕಾರ್ಕೋಟಕ ವಿಷವನುಂಡು /
ಒಡನೆ ಸುಧೆಯ ಸುರರಿಗಂದು ಹಂಚಿದ ಹರನ /
ಗುಡಿಯೊಳಗಿನ ಮೂರ್ತಿ ನೆಚ್ಚಿ ಕಡುತಪಗೈದವರ ಮೆಚ್ಚಿ /
ಜಡಕಾಯದ ಭ್ರಾಂತಿ ಕಳೆದ ನಡುನೇತ್ರನ //೧//

ಲೋಕಕಂಟಕಧಮರನ್ನು ಚಾಕಚಕ್ಯತೆಯ ತೋರಿ /
ಏಕಚಣದಿ ಮದ ಮರ್ಧಿಸಿದ ಲೋಕಪಾಲನ /
ಸಕಳ ಜೀವಕುಸಿರು ನೀಡಿ ಭಕುತರಾತ್ಮದೊಳಗೆ ಕೂಡಿ Continue reading →

ಸಾವು – ಸುಮನ್ ರಾಮೋಜಿಯವರ ಆತ್ಮಕ್ಕೆ ಶಾಂತಿ ಕೋರಿ

ಸುಮನ್ ರಾಮೋಜಿಯವರ ಆತ್ಮಕ್ಕೆ ಶಾಂತಿ ಸಿಗಲಿಲೆಂದು ಕೋರಿ

ಆಸೆಗಳು ನಮ್ಮ ಮುಂದೆ ಮುಂದೆ
ನಾವು ಅದರ ಹಿಂದೆ ಹಿಂದೆ
ಸಾವು ನಮ್ಮ ಬೆನ್ನ ಹಿಂದೆ
ಸಾವೇ ಹೀಗೆ
ನೀನೇಕೆ ಇಷ್ಟು ಕ್ರೋರಿ
ಸದ್ದೆ ಮಾಡದೆ ಅಪ್ಪಳಿಸಿ
ಕರದ್ಯೋಯುವೆ ಈ ಲೊಕದಿಂದ
ಮರಳಿಬಾರದ ಲೋಕಕ್ಕೆ

ಮೌನವಾಗಿದೆ ಕಡಲು

ಮೌನವಾಗಿದೆ ಕಡಲು
ಕಲ್ಲೆಸೆಯಬೇಡ /
ಧ್ಯಾನ ಕುಳಿತಿದೆ ಮನಸು
ಒಳ ಸುಳಿಯಬೇಡ //

ಮಾದ ಹೃದಯದ ಗಾಯ
ಮತ್ತೆ ಕೆದರುವುದೇಕೆ /
ನೆನಪಿನುಪ್ಪಿನ ಹರಳು
ಸುರಿದು ನೋಯಿಸಲೇಕೆ //ಹದ ತಪ್ಪಿದೆದೆ ನೆಲವ
ಅಗೆದು ಊಳುವುದೇಕೆ /
ಬೇರ ಕಳಚಿದ ಸಸಿಗೆ
ನೀರ ಸಿಂಚನವೇಕೆ //

ಎಟುಕದಾಗಸದೆಡೆಗೆ
ಕೈಯ ಚಾಚುವುದೇಕೆ /
ಒಲಿದ ಒಲುಮೆಯನೊದೆದು
ವ್ಯರ್ಥ ಮರುಗುವುದೇಕೆ //
ಗುರುನಾಥ ಬೋರಗಿ

ಕೊನೆಯ ಮಾತು

ಎಷ್ಟು ಸಮಯವಾಯಿತು
ವಸಂತಗಳು ಕಳೆದುಹೋದವು

ಬಿರು ಬೇಸಿಗೆ, ಚಳಿಯೂ
ಕಾಡಿಸಿ ಹಿಯ್ಯಾಳಿಸಿ ಕರಗಿದವು
ಮತ್ತೊಂದು ಮಳೆ ಬಂದರೂ
ಅವನ್ಯಾಕೆ ಬರಲಿಲ್ಲ ಇನ್ನೂನೆನಪುಗಳ ಒಗ್ಗೂಡಿಸಿ
ಕಣ್ ಮುಚ್ಚಿ ಕುಳಿತಾಗ
“ನಾನಿರುವೆ ನಿನ್ನ ಜೊತೆ”
ಎಂದಷ್ಟೆ ನುಡಿಯುವನು
ಹೇಗೆ ನಂಬಲಿ ಹೇಳಿ ಅವನ
ಈ ಅಪೂರ್ಣವಾದ ಮಾತನ್ನು?ಅವನ ನಿರೀಕ್ಷೆಯಲ್ಲಿ
ಮನಸ್ಸು Continue reading →

ಅಕ್ಕಿ ಆರಿಸುವಾಗ ~ ಮೈಸೂರು ಮಲ್ಲಿಗೆ

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು ॥ಪ॥
ತಗ್ಗಿರುವ ಕೊರಳಿನ ಸುತ್ತ
ಕರಿಮಣಿ ಒಂದೇ ಸಿಂಗಾರ
ಕಾಣದ ಹೆರಳು ಬೆರಳಿನ ಬಾರಕ್ಕೆ
ತುಂಬಿರುವ ಕನ್ನೆಯಲಿ ಹದಿನಾರು ವರುಷದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ ಹುಚ್ಚು ಹೊಳೆ ॥1॥
ಮುಂಗಾರಿನಿರುಳು ಬಂಗಾರವಿಲ್ಲದ ಬೆರಳು॥ಪ॥
ಕಲ್ಲ ಹರಳನ್ನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನುವ ಬಳೆಯ ಸದ್ದು
ಅತ್ತ ಯಾರೋ ಹೋದ ಇತ್ತ ಯಾರೋ ಬಂದ ಕಡೆಗೆಲ್ಲ
ಕಣ್ಣು ಬಿದ್ದು ಬಂಗಾರ ವಿಲ್ಲದ ಬೆರಳು ॥2॥
ಮನೆಗೆಲಸ ಬೆಟ್ಟದಷ್ಟಿರಲು
ಸುಮ್ಮನೆ ತಂದೆ ಇಹಳು ಬೆಸರಿಯಕಿರಿ
ಮುತ್ತು ನುಚ್ಚಿನಲಿ ಮುಚ್ಚಿಡಲು ಹುಡುಕತ್ತಿವೆ ಆ ಹತ್ತೂ ಬೆರಳು ॥3॥
-ಸಾಹಿತ್ಯ ~ ಕೆ ಎಸ್ ನರಸಿಂಹಸ್ವಾಮಿ
-ಸಂಗ್ರಹ: ಜೀತೇಂದ್ರ ಪಾಟೀಲ್

ಹೊಸ ವ್ಯಾಕರಣ

‘ನಿದ್ರೆ’ಗೆ ವಿರುದ್ಧ ಪದ,
‘ಅವನಿದ್ರೆ’ ಅಂದರಂದು;
ರಾಯರು.

ಸಮಾನ ಪದದ ಶೋಧವೇಕೆ,
ನಾ’ನಿದ್ರೆ’? ಎಂದರಂತೆ;
ಗೌಡರು.
*******
ಅವನು,ನೆಮ್ಮದಿಯಿಂದಿದ್ದಾನೆ;
ವರ್ತಮಾನಕಾಲ.
ಮದುವೆಯಾಗಿ,ಹೆಂಡತಿ ಬಂದಳು;
ಭೂತ ಕಾಲ.
*******
ವರದಕ್ಷಿಣೆಯ ಹಣ,ಆಗಮ
ವಾಕ್ ಸ್ವಾತಂತ್ರ್ಯ,ಲೋಪ.
ಹೆಂಡತಿಯಾಜ್ಞೆ,ಆದೇಶ
*******
ಹುಣಸೆ ಬೀಜ
ಆಮ್ಲ ಜನಕ /
ಮೇಘರಾಜ
ಜಲ ಜನಕ /

‘ಹನಿ’ಸಿಕೆಗಳು

ಅವರು ಕೊಲೆ ಮಾಡಿದ 
ಸಂಖ್ಯೆ;ನೂರು.
ಇವರು ಕರೆ ಮಾಡಿದ 

ಸಂಖ್ಯೆ;ನೂರು.
*******
ಉಪ್ಪಿನುಗಮಕೆ ಬೇಕು 
ನೀಲತೊಯದುದಕ 
ಯಾವ ಉದಕವಾದರೂ ಸರಿ,
ಉಪ್ಪು ಸಾಯುವುದಕ 
******
ಎಷ್ಟು ಸೊಗಸಾಗಿ 
ಬರೆಯುತ್ತಾರಲ್ಲ,
ಕನ್ನಡ ಕವಿ;ನಿಸಾರ್.
ಅವರ ಕಾವ್ಯದ ಶಕ್ತಿ 
ನಮ್ಮ ಬರಹಕೆ ಇಲ್ಲ 
ನಮ್ಮದೋ..ಬರೀ ನಿಸ್ಸಾರ 
*******
ತಾತ,ಅಪ್ಪ,ಮಗ 
ಈ ಮೂವರಿಗೂ ವಿದ್ಯೆ 
ತಲೆಗೆ ಹತ್ತಲಿಲ್ಲ.
ಸಾಗಿ ಬಂದಿವೆ ಹೀಗೇ..
ಮೂರು ತಲೆಮಾರು.
ಇಂಥ ತಲೆಗಳನಿಟ್ಟುಕೊಂಡು 
ಏನು ಮಾಡುವುದು?
ಮೂರೂ..ತಲೆ ಮಾರು.

ಒಂದಿಷ್ಟು ಬಿಡಿಗವಿತೆಗಳು

ಹೀರಿದ ಸತ್ವ,ಏರಿದ ಎತ್ತರ
ಎಷ್ಟಾದರೇನಂತೆ /

ಮರೆಯದಿರು ನೆಲದ ನಂಟು
ಆಲದ ಬಿಳಲಿನಂತೆ /
******
ಅವರಿವರ ತೋರಿಸಿ,
ಅಣಕವಾಡುವ ಬುದ್ಧಿ;
ಪಾರದರ್ಶಕ ಗಾಜಿಗೆ /
ನಿನ್ನನೇ ತೋರಿಸಿ,
ತಿದ್ದಿ,ತೀಡುವ ಸಿದ್ಧಿ;
ಪಾದರಸದ ಸಲ್ಫೇಟಿಗೆ /
*******
ಅಷ್ಟೆತ್ತರ ಆಗಸಕ್ಕೆ
ಏಣಿ ಇಟ್ಟ ಮನುಜ,
ಆಯ ತಪ್ಪದಂತೆ ಹತ್ತಿ
ಇಳಿದು ಬಂದ ಗಟ್ಟಿಗ /
ಇಷ್ಟಗಲ ನೆಲವ ಮೆಟ್ಟಿ
ನಡೆಯುವಾಗ ಸಹಜ
ಜೋಲಿ ತಪ್ಪಿ ಎಡವಿ ಬಿದ್ದ
ಇದೇನಿಂಥ ಸೋಜಿಗ ?