Category Archives: ಗುರುಪ್ರಸಾದ್ ಆಚಾರ್ಯ

ಕನಿಕರ

ಪ್ರತಿ ಮನೆಯಲೂ
ಬೆಳಕಿಗಾಗಿ ಹಚ್ಚಿಟ್ಟ
ಸಾಲು ಸಾಲು

ಹಣತೆಗಳ ಮಿಣುಕು
ಬೆಳಕ ಕಂಡು,
ಕನಿಕರಗೊಂಡು,
ತನ್ನ ಬೆಳಕಿಂದ
ಜಗವ ಬೆಳಗಲು
ಬಂದೇಬಿಟ್ಟನೇ ನೇಸರ..


—ಕೆ.ಗುರುಪ್ರಸಾದ್

Advertisements

OH MY GOD… ನನ್ನೊಳಗಿನ ಆಸ್ತಿಕನಿಗೆ ಒಂದಷ್ಟು ಗೊಂದಲಗಳು.. ಭಾಗ-2

ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ

ಹಿಂದಿನ ಬಾರಿ ಹೇಳಿದಂತೆ ಕಾಂಜೀಯ ದೇವರ ಮೇಲಿನ ಕೇಸ್ ಅನ್ನು ಜಡ್ಜ್ ಒಪ್ಪಿಕೊಳ್ಳುತ್ತಾರೆ. ಆದರೆ ಭಾರತದಂತಹ ಆಸ್ತಿಕರ ನಾಡಿನಲ್ಲಿ ದೇವರ ಮೇಲೆ ಕೇಸ್ ಹಾಕಿದರೆ ಬದುಕಿಯಾನೆ…? ಅವನ ಮೇಲೆ ರಾಜಕೀಯ ಪ್ರೇರಿತ ಆಕ್ರಮಣವಾಗುತ್ತೆ. ಹಾಗೂ ಹೀಗೂ ತಲೆ ತಪ್ಪಿಸಿ ಓಡುತ್ತಿರುವಾಗ ಆತನ ರಕ್ಷೆಗಾಗಿ ಬರುವವನೇ ಆಧುನಿಕ ಧಿರಿಸಿನ ಭಗವಂತ. ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮ… ಹಾ ಭಗವಂತನೇ ಈತನ ಸಹಾಯಕ್ಕಾಗಿ ಬರುತ್ತಾನೆ.

ಇತ್ತ “Act of God ” ನಿಂದಾಗಿ ಕಷ್ಟಕ್ಕೊಳಗಾದವರೆಲ್ಲಾ ಕಾಂಜೀಯ ಸಹಾಯದಿಂದ ಮಸೀದಿ , ಚರ್ಚುಗಳಿಗೆ ನೋಟೀಸು ಕಳುಹಿಸುತ್ತಾರೆ. ಒಂದು ಹೊತ್ತಿನಲ್ಲಿ ಮೀಡಿಯಾಗಳಿಗೆ ಸುದ್ದಿಯ ವಿಷಯ ಆಗೋದಿಲ್ಲ ಅಂದಿದ್ದ ಕಾಂಜೀ “ಶ್ರೀ ಕೃಷ್ಣನ” ಮಾತು ಕೇಳಿ ಟೀವಿ ಚಾನಲ್ ಒಂದಕ್ಕೆ ಸಂದರ್ಶನ ಕೊಡುತ್ತಾನೆ. ಅಲ್ಲಿ ಆತ ಕೇಳಿದ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರಿಸಿ ಜನರ ಬೆಂಬಲ ಗಳಿಸುತ್ತಾನೆ. ಅಲ್ಲಿನ ಕೆಲವೊಂದು ಗೊಂದಲಗಳು ಹೀಗಿವೆ. ಒಂದು ಪ್ರಶ್ನೆಗೆ ಉತ್ತರಿಸುತ್ತಾ ಕಾಂಜೀ ಹೇಳುತ್ತಾನೆ, ಜನ ನನಗೆ ಸಣ್ಣದಿನಿಂದಲೂ ದೇವರು ನಮ್ಮ ತಂದೆಯ ಹಾಗೆ ಅಂತ ಹೇಳಿಕೊಟ್ಟಿದ್ದಾರೆ. ಹಾಗಾಗಿ ನಾನು ನನ್ನ ತಂದೆಯನ್ನು ನನ್ನ ಹಕ್ಕಿನ ಕುರಿತಾಗಿ ಕೇಳುತ್ತಿದ್ದೇನೆ ಅಂತ ಹೇಳುತ್ತಾನೆ… ವಿಚಿತ್ರ ನೋಡಿ ತನ್ನ ಸುಳ್ಳಿನ ಮೂಲಕ ಉತ್ತಮ ವ್ಯಾಪಾರ ಆಗುತ್ತಿದ್ದಾಗ ಭಗವಂತನಿಲ್ಲ ಅನ್ನುತ್ತಿದ್ದಾಗ ಬಾಲ್ಯದಲ್ಲಿ ದೇವರ ಬಗೆಗೆ ಹೇಳಿಕೊಟ್ಟಿದ್ದು ನೆನಪಾಗುತ್ತಿರಲಿಲ್ಲ, ಹಠಾತ್ ಅಂಗಡಿ ಬಿದ್ದು ನಷ್ಟವಾಗಿದೆ ಅಂದಾಗ ಮಾತ್ರ , ದೇವರು ಅಂದರೆ ನನ್ನ ತಂದೆ ಅನ್ನೋ ಬಾಲ್ಯದ Continue reading →

Oh My God… ನನ್ನೊಳಗಿನ ಆಸ್ತಿಕನಿಗೆ ಒಂದಷ್ಟು ಗೊಂದಲಗಳು

OH MY GOD ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಸಿನಿಮಾವಿದು. ಬಹುತೇಕ ಎಲ್ಲರೂ ನೋಡಿದ್ದಾರೇನೋ… ಬಿಡುಗಡೆಗೆ ಮುನ್ನವೇ ಒಂದಷ್ಟು ಕುತೂಹಲವನ್ನು ಸೃಷ್ಟಿ ಮಾಡಿತ್ತು. ಸಿನಿಮಾ ನೋಡಿ ಬಂದ ಗೆಳೆಯರು ತುಂಬಾನೇ ಚೆನ್ನಾಗಿದೆ ಅಂತ ಅಂದಾಗ ನನ್ನೊಳಗಿನ ಕಾತರ ಅತಿಯಾಗತೊಡಗಿತ್ತು. ಹಾಗೂ ಹೀಗೂ ಸಮಯ ಹೊಂದಿಸಿ ನೋಡೆ ಬಿಟ್ಟೆ… ಹಾ ಚೆನ್ನಾಗೇ ಇದೆ , ಆದರೂ ನಾಸ್ತಿಕರಿಗೂ ಆಸ್ತಿಕರಿಗೂ ಒಂದಷ್ಟು ಗೊಂದಲಗಳನ್ನು ತಂದಿಟ್ಟಿದೆಯೇನೋ ಅನ್ನಿಸಿತು …ಆದರೆ ಪ್ರತಿಯೊಬ್ಬನಲ್ಲೂ ದೇವರ ಬಗೆಗೆ ಸಕಾರಾತ್ಮಕವಾಗಿಯೋ ಅಥವಾ ನಕಾರಾತ್ಮಕವಾಗಿಯೋ ಯೋಚಿಸುವಂತೆ ಮಾಡುವುದಂತೂ ಸತ್ಯ. ಅದರ ಜೊತೆಗೆ ಮಠ ಮಂದಿರಗಳ ಬಗ್ಗೆ, ಸ್ವಾಮೀಜಿಗಳ ಬಗ್ಗೆ ತಾತ್ಸಾರದ ಭಾವನೆ ಮೂಡಿಸುವುದೇನೋ…

ಕಾಂಜೀ ಲಾಲ್ ಜೀ ಮೆಹ್ತಾ ಅನ್ನೋ ಗುಜರಾತಿ ವ್ಯಾಪಾರಿ, ದೇವರ ವಿಗ್ರಹಗಳನ್ನು ಮಾರೋ ವರ್ತಕ ಈ ಚಿತ್ರದ ಮುಖ್ಯ ಕಥಾ ಪಾತ್ರ. ಸಿನಿಮಾ ಆರಂಭಗೊಳ್ಳೋದು ಅವನಲ್ಲಿನ ಒಂದೊಂದೇ ಕೆಟ್ಟ ಗುಣಗಳ ಅನಾವರಣದ ಮೂಲಕ. ಹಣ ಸಂಪಾದನೆಗಾಗಿ ಆತ ಯಾವ ಮಾರ್ಗವನ್ನು ಬಳಸಲು ಹಿಂದೆ ಮುಂದೆ ನೋಡೋಲ್ಲ. ಖಾಲಿ ಬಾಟಲಿಗೆ ಟ್ಯಾಪ್ ನೀರು ತುಂಬಿಸಿ ಗಂಗಾಜಲ ಅಂತ ಮಾರೋದು, ಜನರ ಭಾವನೆಯನ್ನು ತನ್ನ ವ್ಯಾಪಾರವಾಗಿಸೋದು ಅವನಿಗೆ ಕರಗತ. ಪಕ್ಕಾ ನಾಸ್ತಿಕ. ದೇವರ ವಿಗ್ರಹಗಳೆಲ್ಲವೂ ಆತನಿಗೆ ಆದಾಯ ತಂದು ಕೊಡೋ ವಸ್ತುಗಳಷ್ಟೇ… ಆತ ಹೇಳೋದು ಅದನ್ನೆ ಎಲ್ಲಿಯವರೆಗೆ ದೇವರ ಮೇಲಿನ ನಂಬಿಕೆಗಳು ಜನರಲ್ಲಿರುತ್ತೋ ಅಲ್ಲಿವರೆಗೆ ನನ್ನ ವ್ಯಾಪಾರಕ್ಕೆ ಕುಂದು ಕೊರತೆನೇ ಇಲ್ಲ ಅಂತ. ಯಾವುದೋ ಉಚಿತ ಯಾತ್ರೆಯಲ್ಲಿ ಹೋಗಿ ದೇವರ ವಿಗ್ರಹಗಳನ್ನು ಕೊಂಡು ತರುತ್ತಾನೆ, ಗಂಗಾಜಲ ಎಂದು ವೈನ್ ಅನ್ನು ಎಲ್ಲರಿಗೂ ಕುಡಿಸುತ್ತಾನೆ ಮತ್ತು ಮೂರ್ತಿಗಳ ಬಗೆಗೆ ಸುಂದರ ಕಥೆ ಕಟ್ಟಿ ಭಕ್ತರಿಗೆ ಮೋಸ ಮಾಡಿ ಮಾರಾಟ ಮಾಡುವಂತಾದ್ದು ಆತನ ಲಾಭದಾಯಕ ವ್ಯಾಪಾರದ ಒಳಗುಟ್ಟು. ಆತನ ನಾಸ್ತಿಕತೆ ಎಲ್ಲಿಯವರೆಗೆ ಅಂದರೆ ತನ್ನ ಮಗನನ್ನು ಮೊಸರು ಕುಡಿಕೆಯಲ್ಲಿ ಭಾಗವಹಿಸೋದನ್ನು ತಪ್ಪಿಸುವುದಕ್ಕಾಗಿ ಸ್ವಾಮೀಜಿಯೊಬ್ಬರ ಹೆಸರು ಹೇಳಿ, ಭಗವಂತ ಇವತ್ತು ಬೆಣ್ಣೆ ತಿನ್ನುತ್ತಾನೆ….. ಎಲ್ಲರೂ ನಿಮ್ಮ ಮನೆಯ ಮೂರ್ತಿಗೆ ಇಲ್ಲವೆ ಹತ್ತಿರದ ಮೂರ್ತಿಗೆ ನೀವೆ ನಿಮ್ಮ ಕೈಯಾರೆ ತಿನ್ನಿಸಿ ಈ ಚಮತ್ಕಾರ ನಡೆಯೋದು ಬರಿಯ ಒಂದು ಘಂಟೆಯವರೆಗೆ ಮಾತ್ರ … ಅಂತ ಅಪಪ್ರಚಾರ ಮಾಡುತ್ತಾನೆ.( ವಿಚಿತ್ರ ಅಂದರೆ ಅವನ ಮಾತು ಕೇಳುತ್ತಿದ್ದಂತೆ ಜನ ಚೆಲ್ಲಾಪಿಲ್ಲಿ… ಯಾರೋ ಒಬ್ಬ ಅಪರಿಚಿತ ಸಂಘಟಕರ ಕಣ್ಣು ತಪ್ಪಿಸಿ ಸ್ಟೇಜ್ ಗೆ ಗೊತ್ತಾಗದಂತೆ ಹೋಗಿ ಈ ರೀತಿ ಅನೌನ್ಸ್ ಮಾಡೋದಿಕ್ಕೆ ಆಗೋದು ಮತ್ತು ಅದನ್ನು ತಟಕ್ಕನೆ ನಂಬಿ ಓಡೋ ಜನರು ಸಿನಿಮಾದಲ್ಲಿ ಮಾತ್ರ ಸಿಗೋಕೆ ಸಾಧ್ಯ…)ಆತನ ಈ ರೀತಿಯ ನಡೆಯಿಂದ ಅದೇನಾಗುತ್ತೋ ಹಠಾತ್ತಾಗಿ ಅಕಾಶದಲ್ಲಿ ಕಾರ್ಮೋಡಗಳುಒಟ್ಟಾಗಿ ಜೋರಾದ ಮಳೆ ಬಂದು ಈತನ ಅಂಗಡಿ ಬಿದ್ದು ಹೋಗುತ್ತೆ. ವಿಶೇಷ ಅಂದ್ರೆ ಇವನ ಅಂಗಡಿಗಿಂತಲೂ ದುರ್ಬಲ ಅಂಗಡಿಗಳಿದ್ದರೂ ಇವನ ಅಂಗಡಿ ಒಂದು ಮಾತ್ರ ಬಿದ್ದು ಬಿಡುತ್ತೆ. ಈತನಿಗೆ ಬುದ್ಧಿ ಕಲಿಸಲು Continue reading →

ತಮಸೋಮಾ ಜ್ಯೋತಿರ್ಗಮಯ – 4

ನವಗ್ರಹ ಮತ್ತು ದೀಪರಾಧನೆ…

ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುದಾಯಚ
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ

ಈ ಮಂತ್ರವನ್ನು ಪಠಿಸಿ ಬೆಳ್ಳಿ ದೀಪವನ್ನು ಹಚ್ಚುವುದರಿಂದ ನವಗ್ರಹ ಶಾಂತಿಯ ಫಲಪ್ರಾಪ್ತಿಯಾಗುತ್ತದೆ.

ಸೂರ್ಯ :

ಜಪಾ ಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ ||

ಈ ಮಂತ್ರದೊಂದಿಗೆ ಸೂರ್ಯ ದೇವರಿಗೆ ಬೆಳ್ಳಿಯ ನಿರಾಜನ ಬೆಳಗುವುದರಿಂದ ಸೂರ್ಯ ಸಂಪ್ರೀತನಾಗುತ್ತಾನೆ, ಸೂರ್ಯನಿಗೆ ಬೆಳ್ಳಿ ದೀಪ ಬೆಳಗುವುದರಿಂದ ಬಡತನ ನಿವಾರಣೆಯಾಗುತ್ತದೆ, ಆರೋಗ್ಯ ಪ್ರಾಪ್ತಿಯಾಗುತ್ತದೆ, ಶತ್ರು ದಮನವಾಗುತ್ತದೆ. ದೀಪ ಬೆಳಗಿದವನು ತೇಜೋವಂತನಾಗುತ್ತಾನೆ. ಆದಿತ್ಯ ಹೃದಯ ವನ್ನು ಪಠಿಸಿ ಬೆಳ್ಳಿ ದೀಪವನ್ನು ಬೆಳಗಿದರಂತೂ ರಾಜಯೋಗ ದೊರೆತು ಅಧಿಕಾರ ಪ್ರಾಪ್ತವಾಗುತ್ತದೆ.

ಚಂದ್ರ :

ಶ್ರೀಮಾನ್ ಶಶಿಧರಶ್ಚಂದ್ರೋ ತಾರಾಧೀಶೋ ನಿಶಾಕರಃ |
ಸುಧಾನಿಧಿಸ್ಸದಾರಾಧ್ಯಸ್ಸತ್ಪತಿಸ್ಸಾಧು ಪೂಜಿತಃ ||

ಈ ಮಂತ್ರದೊಂದಿಗೆ ಚಂದ್ರನಿಗೆ ಬೆಳ್ಳಿ ದೀಪ ಬೆಳಗುವುದರಿಂದ Continue reading →

ತಮಸೋಮಾ ಜ್ಯೋತಿರ್ಗಮಯ – 3

ಬೆಳ್ಳಿಯ ದೀಪ

ಲೋಹಗಳ ದೀಪಗಳಲ್ಲಿ ಶ್ರೇಷ್ಟವಾದುದು ಬೆಳ್ಳಿಯ ದೀಪವಂತೆ…ಸಾಂಕೇತಿಕವಾಗಿ ಬೆಳ್ಳಿಯು ಚಂದ್ರನ ಕಾರಕ ಲೋಹವಾಗಿದ್ದರು ವೈದಿಕವಾಗಿ ಬೆಳ್ಳಿ ಗುರು ಗ್ರಹದ ಲೋಹ. ಮೊದಲೆಲ್ಲಾ ಶುಭ ಸಮಾರಂಭಗಳಲ್ಲಿ ಬೆಳ್ಳಿಯ ದೀಪ ಕೊಡುವ ಸಂಪ್ರದಾಯ ಇದೇ ಕಾರಣದಿಂದ ಪ್ರಾರಂಭವಾಗಿರಬಹುದು ಅನ್ನೋದು ಲೇಖಕರ ಅಭಿಪ್ರಾಯ…ಲೇಖಕರು ಬೆಳ್ಳಿ ದೀಪದ ಮಹತ್ವವನ್ನು ಈ ರೀತಿ ಪಟ್ಟಿ ಮಾಡಿದ್ದಾರೆ

* ಹಸುವಿನ ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಬಳಸಿ ಬೆಳ್ಳಿಯ ದೀಪವನ್ನು ಯಾರ ಮನೆಯಲ್ಲಿ ಬೆಳಗಲಾಗುತ್ತದೋ , ಆದನ್ನು ಹಚ್ಚಿದವರಿಗೆ ಮಾತ್ರವಲ್ಲದೇ ಆ ಮನೆಯವರಿಗೆ ಅಷ್ಟೈಶ್ವರ್ಯ ಪ್ರಾಪ್ತವಾಗುತ್ತದೆ.

* ಬೆಳ್ಳಿ ದೀಪವನ್ನು ವೇದ ಮಾತೆ ಗಾಯತ್ರಿ ದೇವಿ, ಮಹಿಷಾಸುರ ಮರ್ದಿನಿ, ಶ್ರೀ ಚಾಮುಂಡೇಶ್ವರಿ, ಶ್ರೀ ಚಕ್ರಸ್ಥಿತ ಚಕ್ರೇಶ್ವರಿ, ಶ್ರೀ ಲಲಿತಾ ತ್ರಿಪುರ ಸುಂದರಿ, ರಾಜರಾಜೇಶ್ವರಿ, ಶ್ರೀ ಲಕ್ಷ್ಮೀಸಹಿತ ನಾರಾಯಣ ಸಾಲಿಗ್ರಾಮ, ಬಲಮುರಿ ಶಂಖ, ಬಲಮುರಿ ಗಣಪನ ಎದುರು ಬೆಳಗಿದಲ್ಲಿ ಅವರ ಇಷ್ಟಾರ್ಥಗಳು ಅತಿ ಶೀಘ್ರದಲ್ಲಿ ಈಡೇರುವುದು.

* ತುಪ್ಪವನ್ನು ಬಳಸಿ , ಬಿಳಿ ಎಕ್ಕದ ಗಿಡದ ನಾರಿನಿಂದ ಅಥವಾ ತಾವರೆ ಹೂವಿನ ಕಾಂಡದ ನಾರಿನಿಂದ ಬತ್ತಿಯನ್ನು ಮಾಡಿ ಬೆಳ್ಳಿ ದೀಪವನ್ನು ಶುಕ್ರವಾರದ ಸಂಜೆ ಬೆಳಗಿದಲ್ಲಿ ಅವರ ದಾರಿದ್ರ್ಯ ನಿವಾರಣೆ ಹಾಗೂ ಸಾಲಭಾಧೆ ನಿವಾರಣೆಯಾಗುತ್ತದೆ.

* ಹುಣ್ಣಿಮೆ, ಅಮವಾಸ್ಯೆ ಅಥವಾ ಹಬ್ಬಗಳಂತಹಾ ಶುಭದಿನಗಳಲ್ಲಿ ತುಪ್ಪವನ್ನು ಬಳಸಿ, ಬೆಳ್ಳಿಯ ದೀಪವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹಚ್ಚುವುದರಿಂದ ಇಷ್ಟಾರ್ಥ ಕಾರ್ಯಗಳು ನೆರವೇರುತ್ತದೆ.

* ಬೆಳ್ಳಿಯ ದೀಪವನ್ನು ತುಪ್ಪ ಬಳಸಿ ಬೆಳಗಿಸಿ ಗಣಪತಿ ದೇವರಿಗೆ 21 ದಿನಗಳ ಕಾಲ ನಿರಂತರವಾಗಿ ಹಚ್ಚಿದರೆ ಆರೋಗ್ಯ ವೃದ್ಧಿ, ಉದ್ಯೋಗ ಪ್ರಾಪ್ತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ.

* ಶ್ರೀ ಮಹಾಲಕ್ಷ್ಮೀ ಅಥವಾ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ಒಟ್ಟು 51 ವಾರಗಳವರೆಗೆ ಹಚ್ಚಿದರೆ ಅವಿವಾಹಿತರಿಗೆ ಕಂಕಣಭಾಗ್ಯ, ಹಣಕಾಸಿನಲ್ಲಿ ಅಭಿವೃದ್ಧಿ ಉಂಟಾಗುತ್ತದೆ.

* ಯಾರು ಹಣಕಾಸಿನ ತೊಂದರೆ, ಸಾಲಭಾಧೆಯಿಂದ ಬಳಲುತ್ತಿರುವರೋ ಅವರು ಮಹಾಲಕ್ಷ್ಮಿಯ ಮುಂದೆ ಬೆಳ್ಳಿ ದೀಪದಲ್ಲಿ ಕೊಬ್ಬರಿ ಎಣ್ಣೆ ಹಾಕಿ ಬಿಳಿ ಎಕ್ಕದ ಗಿಡದ ಹತ್ತಿಯಿಂದ ಬತ್ತಿ ತಯಾರಿಸಿ, ನಾಲ್ಕು ಎಳೆಯ ಒಂದು ಬತ್ತಿಯನ್ನು ಮಾಡಿ ಹಚ್ಚುವುದರಿಂದ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.

* ಶ್ರೀ ರಾಘವೇಂದ್ರ ಸ್ವಾಮಿ ಅಥವಾ ಶ್ರೀ ಸಾಯಿಬಾಬಾರ ಮುಂದೆ ಗುರುವಾರಗಳಂದು ಬೆಳ್ಳಿಯ ದೀಪದಲ್ಲಿ ತುಪ್ಪವನ್ನು ಹಾಕಿ ಹಚ್ಚುವುದರಿಂದ ಯಾವುದೇ ರೀತಿಯ ಮಾಟ ಮಂತ್ರಗಳ ಸಮಸ್ಯೆಯಿಂದ ಪಾರಾಗಬಹುದು ಮತ್ತು ಸಂತಾನ ಪ್ರಾಪ್ತಿಗಿದ್ದ ತೊಂದರೆಗಳು ದೂರವಾಗುವುವು.

ಈ ಬೆಳ್ಳಿಯ ದೀಪಕ್ಕೂ ಮನುಷ್ಯನ ಮೇಲೆ ಪ್ರಭಾವ ಬೀರೋ ನವಗ್ರಹಗಳಿಗೂ ಸಂಭಂಧವಿದೆ. ಅವುಗಳ ಬಗ್ಗೆ ಇನ್ನೊಮ್ಮೆ ನೋಡೋಣ…
ಮೇಲೆ ಹೇಳಿದ ಎಲ್ಲಾ ವಿಷಯಗಳು ಪುಸ್ತಕದಲ್ಲಿದ್ದುದನ್ನೆ ನಿಮ್ಮ ಮುಂದಿಟ್ಟದ್ದು… ಹಾಗಾಗಿ ಇದು ನಿಜವಾ …ಅನ್ನೊರ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ … ನಂಬಿಕೆ ಉಳ್ಳವರು ಓದಿದರೆ ಸಾಕು…ಇದರ ಫಲಪ್ರಾಪ್ತಿಗಳೆಲ್ಲವೂ ನಿಮ್ಮ ಶ್ರದ್ಧಾ ಭಕ್ತಿಗಳನ್ನೂ ಕೂಡ ಅವಲಂಬಿಸಿರುತ್ತದೆ ಅನ್ನೋದು ನನ್ನ ಅನಿಸಿಕೆ…

—ಕೆ.ಗುರುಪ್ರಸಾದ್

ಗ್ರಂಥ ಕೃಪೆ: ದೀಪ ಸಂಪುಟ
ಲೇಖಕರು : ಶ್ರೀಕಾಂತ್ ವಿ ಬಲ್ಲಾಳ್

ತಮಸೋಮ ಜ್ಯೋತಿರ್ಗಮಯ – ಭಾಗ 2

ಶ್ಲೋಕಗಳು ಹಿಂದೂ ಧರ್ಮದಲ್ಲಿನ ಒಂದು ಅವಿಭಾಜ್ಯ ಅಂಗ , ಮಾಡುವ ಪ್ರತಿಯೊಂದು ಕಾರ್ಯವನ್ನೂ ಶ್ಲೋಕದ ಮೂಲಕವೇ ಆರಂಭ ಮಾಡುತ್ತೇವೆ . ಅದೇ ರೀತಿ ದೇವರಿಗೆ ದೀಪ ಹಚ್ಚುವಾಗಲೂ ಶ್ಲೋಕ ಹೇಳುವ ಪರಿಪಾಠ ಇದೆ… ಅದು ಈರೀತಿ ಇದೆ…

ಭೋ ದೀಪ ಬ್ರಹ್ಮರೂಪಸ್ತ್ವಂ ಅಂಧಕಾರ ನಿವಾರಕ |
ಇಮಾಂ ಮಯಾಕೃತಾಂ ಪೂಜಾ ಗ್ರಹಾಣತ್ವಂ ಪ್ರವರ್ಧನ ||

ದೀಪಗಳ ಕುರಿತಾಗಿ ಇರುವ ಒಂದೆರಡು ಶ್ಲೋಕಗಳನ್ನ ನೋಡೋಣ…

ದೀಪಜ್ಯೋತಿಃ ಪರಬ್ರಹ್ಮ ದೀಪ ಜ್ಯೊತಿ ಜನಾರ್ಧನಃ |
ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ ||

ಅರ್ಥಾತ್ ಪರಬ್ರಹ್ಮ , ಜನಾರ್ಧನ ಸ್ವರೂಪವಾದ ದೀಪವು ಪಾಪನಾಶಿನಿಯೂ ಆಗಿದೆ… ಧಾರ್ಮಿಕ ರೀತಿಯಲ್ಲಿ ದೀಪಕ್ಕಿರುವ ಮಹತ್ವವನ್ನು ಈ ಶ್ಲೋಕ ಹೇಳುತ್ತದೆ… ಅಂದರೆ ದೀಪದ ಮಹತ್ವವನ್ನು ಅರಿತು ದೀಪ ಬೆಳಗಿದಾಗ ಅದು ಕತ್ತಲನ್ನು ನಾಶ ಮಾಡಿದಂತೆ ನಮ್ಮ ಪಾಪವನ್ನೂ ನಾಶ ಮಾಡುತ್ತದೆ. ಇದೇ ರೀತಿ ಇನ್ನೊಂದು ಶ್ಲೋಕ ದೀಪದಲ್ಲಿ ತ್ರಿಮೂರ್ತಿಗಳು ವಾಸವಾಗಿದ್ದಾರೆ ಅನ್ನುತ್ತದೆ ಅದು ಈ ರೀತಿ ಇದೆ…

ದೀಪ ಮೂಲೇ ಸ್ಥಿತೋ ಬ್ರಹ್ಮಾ ದೀಪ ಮಧ್ಯೇ ಜನಾರ್ಧನಃ |
ದೀಪಾಗ್ರೇ ಶಂಕರಃ ಪ್ರೋಕ್ತಃ ಸಂಧ್ಯಾದೀಪ ನಮೋಸ್ತುತೇ ||

ಇಂತಹಾ ಮಹತ್ವದ ಸ್ಥಾನದಲ್ಲಿರುವ ದೀಪದ ಬಗೆಗೆ ನಮಗಿರೋ ಮಾಹಿತಿ ಎಷ್ಟು ಕಡಿಮೆ ಅನ್ನಿಸುತ್ತೆ ಅಲ್ವಾ…

ದೀಪಗಳನ್ನು ಹಲವಾರು ರೀತಿಯಲ್ಲಿ ವಿಂಗಡಿಸಬಹುದು , ಯಾವ ಲೋಹದಿಂದ ಮಾಡಲ್ಪಟ್ಟಿದೆಯೋ ಅದರ ಅಧಾರದಿಂದ ಅಥವಾ ಯಾವ ದ್ರವ್ಯವನ್ನು ಉಪಯೋಗಿಸಿ ಉರಿಸುತ್ತಾರೋ ಅದರ ಆಧಾರದಿಂದಲೂ ಹಲವು ರೀತಿ ವಿಂಗಡಿಸಬಹುದು..ಲೋಹದ ಅಧಾರದಲ್ಲಿನ ದೀಪಗಳ ಕುರಿತಾಗಿ ವಿಂಗಡನೆ ಮಾಡಿದರೆ ಚಿನ್ನದ ದೀಪವನ್ನು ಕಾಣಬಹುದು ಬೆಳ್ಳಿಯ ದೀಪವನ್ನು ಕಾಣಬಹುದು, ಹಿತ್ತಾಳೆ, ತಾಮ್ರ ಇವುಗಳ ದೀಪವನ್ನೂ ಕಾಣಬಹುದು… ಅಷ್ಟೇ ಏಕೆ ಇತ್ತೀಚೆಗೆ ಸ್ಟೈನ್ ಲೆಸ್ ಸ್ಟೀಲ್ ನ ದೀಪಗಳೂ ಸಿಗುತ್ತವೆ. ಹಾಗಾದರೆ ಯಾವ ದೀಪಕ್ಕೆ ಏನು ಮಹತ್ವ ಇರಬಹುದಪ್ಪಾ ಅನ್ನೋ ಕುತೂಹಲ ಇದ್ರೆ ಮುಂದಿನ ಭಾಗದವರೆಗೂ ಕಾದಿರಿ…

—ಕೆ.ಗುರುಪ್ರಸಾದ್

ಗ್ರಂಥ ಕೃಪೆ : ದೀಪ ಸಂಪುಟ
ಮೂಲ ಲೇಖಕರು : ಶ್ರೀಕಾಂತ್ ವಿ ಬಲ್ಲಾಳ್

ತಮಸೋಮಾ ಜ್ಯೋತಿರ್ಗಮಯ ಭಾಗ-1

ಸೂರ್ಯ ಮುಳುಗಿ ಕತ್ತಲು ಆವರಿಸುವ ಹೊತ್ತಿನಲ್ಲಿ ಮನೆಯ ಒಡತಿ ಅಥವಾ ಮನೆಯ ಹೆಣ್ಣು ಮಗಳು ದೇವರೆದುರು ದೀಪವನ್ನಿಟ್ಟು , ಮೂರು ಬಾರಿ ಶಂಖ ಊದಿ , ತುಳಸಿಯಲ್ಲೊಂದು ದೀಪವನ್ನಿಟ್ಟು ಕನಿಷ್ಟ ಮೂರು ಪ್ರದಕ್ಷಿಣೆಯನ್ನಾದರೂ ಹಾಕಿ ದೇವರ ಮಂಟಪದೆದುರು ಕೂತು ಒಂದೆರಡು ಭಜನೆ ಹೇಳೋದು ಹಿಂದೂ ಧರ್ಮದ ದಿನ ನಿತ್ಯದ ಆಚರಣೆ ಹಾಗಂತ ಸಂಜೆಗೆ ಮಾತ್ರ ದೀಪ ಇಡುತ್ತಾರೆ ಅಂತಲ್ಲ ಬೆಳಗಿನ ಹೊತ್ತಿನಲ್ಲೂ ದೇವರಿಗೆ ದೀಪ ಹಚ್ಚುತ್ತಾರೆ… ಆದರೆ ಈಗ ಅದೆಷ್ಟು ಜನ ಇದರ ಪಾಲನೆ ಮಾಡುತ್ತಾರೋ ಹೇಳೋದು ಕಷ್ಟ ( ನಮ್ಮ ಹಳ್ಳಿ ಕಡೆಯಲ್ಲೆಲ್ಲಾ ಈಗಲೂ ಇದು ಚಾಲ್ತಿಯಲ್ಲಿದೆ ಅನ್ನೋದು ಮನಸ್ಸಿಗೆ ಸಮಾಧಾನ ಕೊಡೋ ವಿಷಯ…) ಯಾವಾಗ ಈ ಕರೆಂಟು ಬಂದು, ಗುಂಡಿ ಒತ್ತಿದೊಡನೇ ಮನೆಯೆಲ್ಲಾ ಪ್ರಕಾಶಮಯವಾಗತೊಡಗಿತೋ, ಯಾವಾಗ ಈ ಮೂರ್ಖರ ಪೆಟ್ಟಿಗೆ ಮನೆ ಮನೆಯೊಳಗೆ ಕಾಲಿರಿಸಿತೋ.. ಆವಾಗಿನಿಂದ ಈ ದೀಪಗಳು ನಂದಿ ಹೋಯಿತು ಅನ್ನಬಹುದೇನೋ…ಅಪರೂಪಕ್ಕೆ ಎಂಬಂತೆ ಈ ದೀಪಗಳು ವಿಶೇಷ ದಿನದಲ್ಲಿನ ಪೂಜಾ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಿದೆ…. ಸಿಟಿಯಲ್ಲಂತೂ ಈ ದೀಪಗಳೂ ಕಾಣಿಸಲಿಕ್ಕೇ ಇಲ್ಲ ಬಿಡಿ… ಪವರ್ ಕಟ್ಟೂ ವಿರಳ, ಇದ್ದರೂ ಎಲ್ಲರ ಮನೆಯಲ್ಲೂ ಇನ್ವರ್ಟರ್ ಇದ್ದೇ ಇದೆ… ಅಂತೂ ಕಷ್ಟಕ್ಕೆ ನೆನಪಿಸಿಕೊಂಡರೆ ವರ್ಷದಲ್ಲಿ ಒಂದು ಸಾರಿ ಅದು ದೀಪಾವಳಿಗೆ(ಕೆಲವೆಡೆ ದೀಪಾವಳಿಗೂ ಕ್ಯಾಂಡಲನ್ನೇ ಉರಿಸುವುದನ್ನು ನೋಡಿದಾಗ ಮನಸ್ಸಿಗೆ ತುಂಬಾನೆ ಬೇಸರವಾಗುತ್ತೆ).. ಯಾಕೆ ಈ ದೀಪ ಹಿಂದೂಗಳಿಗೆ ವಿಶೇಷ ಅನ್ನೋದು ಹೆಚ್ಚಿನವರಿಗೆ ಗೊತ್ತೇ ಇಲ್ಲ … ನನಗೂ ಅಷ್ಟಾಗಿ ಗೊತ್ತಿರಲಿಲ್ಲ… ಇತ್ತೀಚಿಗೆ ರಾಹುಲ್ ಬೋಸ್ ಅವರ ಕುರಿತು ಬರೆಯುವಾಗ ” ದೀಪ ಬೆಳಗಿಸಿ” ಕಾರ್ಯಕ್ರಮದ ಉಧ್ಘಾಟನೆ ಯಾಕೆ ಮಾಡಬೇಕು ? ಎಂದು ಅವರು ಕೇಳಿದ ಪ್ರಶ್ನೆಗೆ ಉತ್ತರ ಹುಡುಕುತ್ತಾ ಪುಸ್ತಕಗಳನ್ನು ತಡಕಾಡಿದಾಗ ನನ್ನ ಕೈಗೆ ಸಿಕ್ಕಿದ್ದು “ಶ್ರೀಕಾಂತ್ ವಿ. ಬಲ್ಲಾಳ್” ಅವರು ಬರೆದಿರೋ “ದೀಪ ಸಂಪುಟ” ಅನ್ನೋ ಪುಸ್ತಕ. ದೀಪಗಳ ಬಗೆಗೆ ಉತ್ತಮ ಮಾಹಿತಿ ಸಂಗ್ರಹಿಸಿ ಕೊಟ್ಟಿರೋ ಈ ಪುಸ್ತಕದಲ್ಲಿ ದೀಪಕ್ಕಿರುವ ಪೌರಾಣಿಕ ಮಹತ್ವವನ್ನು ಕಥೆಯ ರೂಪದಲ್ಲಿ ಈ ರೀತಿ ವಿವರಿಸುತ್ತಾರೆ…

ಶಿವ ಪಾರ್ವತಿಯರ ಮಿಲನಕ್ಕಾಗಿ ಮನ್ಮಥ ಶಿವನ ಮೇಲೇ ಪುಷ್ಪ ಬಾಣ ಪ್ರಯೋಗಿಸಿದಾಗ ಕೋಪಗೊಂಡ ಶಿವ ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ , ಅದರಿಂದ ಬಂದ ಬೆಂಕಿಯ ಜ್ವಾಲೆ ಮನ್ಮಥನನ್ನು ಸುಟ್ಟು ಜಗತ್ತನ್ನೇ ಸುಡುತ್ತಾ ಮುಂದೆ ಹೋಗುತ್ತಿರಲು ದೇವತೆಗಳೆಲ್ಲಾ ಹೆದರಿ ಜಗನ್ಮಾತೆಯನ್ನು ಪ್ರಾರ್ಥಿಸುತ್ತಾರೆ… ಆಗ ದೇವತೆಗಳ ಪ್ರಾರ್ಥನೆಗೆ ಒಲಿದ ಜಗನ್ಮಾತೆ ಶಕ್ತಿ ಎಂಬ ಜ್ವಾಲೆಯನ್ನು ಶಿವನ ಜ್ವಾಲೆಯೊಂದಿಗೆ ಸೇರಿಸಿ ಅದರ ಉಗ್ರತೆಯನ್ನು ಕಡಿಮೆಗೊಳಿಸಿದಾಗ ಅದು ಜ್ಯೋತಿ ರೂಪದಲ್ಲಿ ಉರಿಯಲಾರಂಭಿಸಿತಂತೆ… ಹೀಗೆ ಶಿವಶಕ್ತಿಯರೇ ದೀಪಗಳು ಎಂದು ಶಿವಪುರಾಣ ಹೇಳಿದೆ ಅನ್ನುತ್ತಾರೆ.

ಭಾಗ-2 ರಲ್ಲಿ ಮುಂದುವರೆದಿದೆ
—ಕೆ.ಗುರುಪ್ರಸಾದ್

ಸರಸ

ಇರುಳಲಿ ಬಾನಿಗೆ
ಕಾವಲಿರು ಎಂದು
ತನ್ನೊಡಲ ಬೆಳಕನಿತ್ತು,
ಕೋಟಿ ತಾರೆಗಳ
ಸೈನ್ಯವನೂ ಇತ್ತು,
ಕಡಲಿನಾಳದಲ್ಲಿನ
ಮತ್ಸ್ಯಕನ್ಯೆಯರೊಡನೆ
ಸರಸವಾಡಲು
ಹೋದ ಭಾಸ್ಕರನಿಗೆ,
ಚಂದಿರನ ಅಸಮರ್ಥತೆ 
ಗೊತ್ತಾದದ್ದು ಬಾನಾಡಿಗಳ
ಇಂಚರವೆನುವ ಆರ್ತನಾದ
ಕೇಳತೊಡಗಿದಾಗ,
ಸಿಡುಕಿನ ಕೆಂಪು ಬಣ್ಣ
ಅವನ ಮೊಗವನಲಂಕರಿಸಿತ್ತು
ಸರಸವನು ನಿಲ್ಲಿಸಿ
ಅವರನೆಲ್ಲಾ ತೊರೆದು
ಮೂಡಣದ ಕದವ ತೆಗೆದು
ಮತ್ತೆ ಆಗಸಕೆ ಬಂದಾಗ….

—ಕೆ.ಗುರುಪ್ರಸಾದ್

ಮೈ ಅಜಾದ್ ಹೂಂ ಅಜಾದ್ ಹೀ ರಹೂಂಗಾ….ಕೊನೆಯ ಭಾಗ

ಹಿಂದಿನ ಭಾಗ

ತನ್ನ ನಂಬಿಗಸ್ಥ ಪಡೆಯಲ್ಲಿನ ಸದಸ್ಯರು ಒಬ್ಬೊಬ್ಬರಾಗಿ ದೂರ ಸರಿದಂತೆ ಅಜಾದ್ ಒಬ್ಬಂಟಿಯಾಗತೊಡಗಿದ್ದರು … ಒಂದಷ್ಟು ಜನ ಸೆರೆವಾಸದಲ್ಲಿದ್ದರೆ ಇನ್ನೊಂದಷ್ಟು ಜನ ಭಾರತ ಮಾತೆಯ ಚರಣಗಳಿಗೆ ತಮ್ಮ ಪ್ರಾಣವನ್ನೇ ಅರ್ಪಿಸಿದ್ದರು …ತನ್ನ ಗೆಳೆಯರನ್ನು ಕಳೆದುಕೊಂಡಾಗ ಆಗುತ್ತಿದ್ದ ಬೇಸರ ಅವರನ್ನು ತಮ್ಮ ಗುರಿಯ ಮಾರ್ಗದಿಂದ ಹಿಂದೆ ಸರಿಯುವಂತೆ ಮಾಡಲಿಲ್ಲ .. ಅಜಾದರ ದೇಶಪ್ರೇಮದ ಉತ್ಕಟತೆಯೇ ಹಾಗಿತ್ತು. ಒಂದು ಕಡೆ ಆಂಗ್ಲರ ಪೋಲೀಸ್ ಪಡೆ ಅಜಾದರ ಬಂಧನಕ್ಕೆ ಹಗಲಿರುಳೆನ್ನದೇ ತುಡಿಯುತ್ತಿತ್ತು. ಅಜಾದರ ಬಳಿಯಲ್ಲೋ ನಂಬಿಗಸ್ಥರ ಪಡೆಯೇ ಇಲ್ಲ…. ಇದ್ದವರಲ್ಲಿ ಕೆಲವು ಜನ ಗೋ ಮುಖ ವ್ಯಾಘ್ರಗಳು…

ಆಗಿನ ಕಾಲಕ್ಕೆ ಅಜಾದರನ್ನು ಹಿಡಿದು ಕೊಟ್ಟವರಿಗೆ 30000 ರೂಪಾಯಿಗಳ ಬಹುಮಾನ ಘೋಷಿಸಿತ್ತು ಆಂಗ್ಲ ಸರ್ಕಾರ.. ಆಜಾದರ ಬಂಧನಕ್ಕಾಗಿ ವಿಶೇಷ ಪಡೆಯನ್ನೇ ರಚಿಸಿತ್ತು… ರಾಯ್ ಶಂಭುನಾಥ ಅನ್ನುವ ಗುಪ್ತಚರ ವಿಭಾಗದ ಸಬ್ ಇನ್ಸ್ ಪೆಕ್ಟರ್ ಗೆ ಅಜಾದರ ಬಂಧನದ ವಿಶೇಷ ಜವಾಬ್ದಾರಿ ಕೊಡಲಾಗಿತ್ತು. ಇವನ ಜೊತೆಗೆ ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದವರು ಠೀಕಾರಾಮ್, ಮಹಮ್ಮದ್ ನಾಸಿರ್ ಖಾನ್, ನಾಟ್ ಬಾವರ್, ಠಾಕೂರ್ ವಿಶ್ವೇಶ್ವರ ಸಿಂಹ… ಈ ಗುಪ್ತಚರ ವಿಭಾಗ ಕೆಲಸ ಕಾರ್ಯಗಳಿಗಾಗಿ ” ಸೀಕ್ರೆಟ್ ಸರ್ವೀಸ್ ಮನಿ” ಎಂಬ ಖಾತೆಯಲ್ಲಿ ಅಪಾರ ಹಣವಿರುತ್ತಂತೆ… ಇದರ ಬಳಕೆಯಾಗೋದು ಮಾಫೀ ಸಾಕ್ಷಿಗಳಿಂದ ರಹಸ್ಯ ತಿಳಿದುಕೊಳ್ಳುವ ಸಲುವಾಗಿ… ಈ ಹಣವನ್ನು ಉಪಯೋಗಿಸಿಕೊಂಡು ಇನ್ಸ್ ಪೆಕ್ಟರ್ ಶಂಭನಾಥ್ , ಅಜಾದ್ ಬಂಧನಕ್ಕೆ ಅಡಿಪಾಯ ಹಾಕತೊಡಗಿದ… ಅದಕ್ಕೆ ಬಳಸಿಕೊಂಡದ್ದು ವೀರಭದ್ರ ತಿವಾರಿ ಅನ್ನೋ ಗೋ ಮುಖವ್ಯಾಘ್ರನನ್ನು…ಆತನಿಗೆ ಅಜಾದರ ಬಗೆಗಿನ ಮಾಹಿತಿ ಕೊಡುವುದಕ್ಕಾಗಿಯೇ ತಿಂಗಳಿಗೆ 200 ರೂಪಾಯಿ ಕೊಡಲಾಗುತ್ತಿತ್ತು.

ತನ್ನ ಸುತ್ತ ಮುತ್ತ ಬಂಧನದ ಬಲೆ ಬೀಸತೊಡಗಿದ್ದಾರೆ ಅನ್ನೋದರ ಸುಳಿವು ಸಿಕ್ಕಿದ್ದರೂ ಅದರ ಕುರಿತು ಅಜಾದ್ ಗಮನ ಹರಿಸಲಿಲ್ಲ.. ಎಲ್ಲೋ ಮತ್ತೊಂದು ತಪ್ಪು ಮಾಡತೊಡಗಿದರು ಅನ್ನುವ ಹಾಗಿಲ್ಲ ಯಾಕೆಂದರೆ ಇಂತಹಾ ಪರಿಸ್ಥಿತಿಯಲ್ಲೂ ಅಜಾದ್ ಹೋರಾಟದ Continue reading →

ಮೈ ಅಜಾದ್ ಹೂಂ ಅಜಾದ್ ಹೀ ರಹೂಂಗಾ ಭಾಗ 5

ಭಾಗ-4 ರಿಂದ ಮುಂದುವರೆದಿದೆ

ಕ್ರಾಂತಿಕಾರಿ ಸಂಘಟನೆಯ ನಾಯಕತ್ವ ಅಂದರೆ ಅದು ಸಣ್ಣ ಪದವಿಯಲ್ಲ… ಅದನ್ನು ಸಮರ್ಥವಾಗಿ ನಿಭಾಯಿಸುವ ಮನೋಭಾವ ಬೇಕಾಗುತ್ತದೆ… ಅದಕ್ಕಾಗಿಯೆ ಅಜಾದ್ ಸರ್ವಾನುಮತದಿಂದ ಆಯ್ಕೆಯಾಗಿದ್ದು… ಅದೆಂತಾ ಪರಿಸ್ಥಿತಿಯಲ್ಲೂ ಅಜಾದ್ ಸಂಘಟನೆಯ ಹಿತದೃಷ್ಟಿಯಿಂದಲೇ ಕೆಲಸ ಮಾಡುತ್ತಿದ್ದರು…ಸಂಘಟನೆಯ ಪ್ರಮುಖ ಹೋರಾಟಗಾರ ಭಗತ್ ಸಿಂಗ್ ಬಂಧಿಯಾದ ಮೇಲೆ ಇನ್ನೇನು ಸಂಘಟನೆ ನಿಷ್ಕ್ರಿಯವಾದೀತು ಎಂದು ನೀವು ಅಂದು ಕೊಂಡಲ್ಲಿ ಅದು ತಪ್ಪಾದೀತು… ಈ ಕ್ರಾಂತಿ ರಥಕ್ಕೆ ಕೃಷ್ಣನಂತ ಸಾರಥಿ ಇರೋವಾಗ ಈ ರೀತಿ ಆಗಲು ಸಾಧ್ಯವೇ…ಅಜಾದರಿಗೆ ತನ್ನ ಸಂಘಟನೆಯ ಬಗೆಗೆ ಕಾಳಜಿ ಅದೆಷ್ಟು ಅಂದರೆ , ಭಗತರ ಬಂಧನವಾದ ನಂತರ, ಒಮ್ಮೆ ಭಗತ್ ಸಿಂಗ್ ಸರ್ಕಾರಿ ಸಾಕ್ಷಿಯಾಗಿದ್ದನೆ ಅನ್ನೋ ವದಂತಿಯನ್ನು ಬ್ರಿಟಿಷರು ಹಬ್ಬಿಸಿಬಿಟ್ಟರು…ಮನಸ್ಸಿನಲ್ಲಿ ಭಗತನ ಬಗೆಗೆ ದೃಡವಾದ ನಂಬಿಕೆ ಇದ್ದರೂ ಸಂಘಟನೆಗೆ ಹಾನಿಯಾಗಬಾರದೆಂಬ ಉದ್ದೇಶದಿಂದ ಅಜಾದ್ ತಮ್ಮ ನೆಲೆಗಳನ್ನೆಲ್ಲಾ ಬದಲಿಸಿದಿದ್ದರು. ಅಷ್ಟೇ ಅಲ್ಲ ಸಂಘದ ಮೆದುಳು ಎಂದೇ ಖ್ಯಾತನಾಗಿದ್ದ ಭಗವತಿ ಚರಣ್ ದಾಸ್ ಬಗ್ಗೆ ಆತ ಆಂಗ್ಲರ ಗುಪ್ತಚರ ಎಂಬ ಸುದ್ದಿ ಹರಡಿದಾಗಲೂ ಅಜಾದ್ ಇದೇ ರೀತಿ ನಡೆದುಕೊಂಡು ಸಂಘದ ಒಳಿತನ್ನೇ ಯೋಚಿಸಿದ್ದ… ಹಾಗಂತ ಸತ್ಯ ಗೊತ್ತಾದೊಡನೆ ನಾಯಕನೆಂಬ ಅಹಂಕಾರ ತೋರದೆ ಭಗವತೀ ಚರಣರ ಬಳಿ ಕ್ಷಮೆಯನ್ನು ಕೇಳಿದ್ದ.. ಇದು ಆಜಾದರ ವ್ಯಕ್ತಿತ್ವ… ಹಾಗಾದರೆ ಆಜಾದ್ ಎಲ್ಲಿಯೂ ಎಡವಲಿಲ್ಲವೇ… ಅಷ್ಟೊಂದು ಪರಿಪೂರ್ಣನೇ ಎಂದುಕೊಳ್ಳಬಹುದು…ನಿಮ್ಮ ಮುಂದೆ ಈಗ ಹೇಳಹೊರಟಿರುವುದು ಅಜಾದ್ ಎಡವಿದ ವಿಷಯದ ಬಗ್ಗೆ… ಅಜಾದ್ ಸದಾ ಕ್ರಿಯಾಶೀಲ ವ್ಯಕ್ತಿ… ತನ್ನ ಸಂಘಟನೆಯನ್ನು ಬೆಳೆಸುತ್ತಾ ಹೋಗುತ್ತಿದ್ದ … ಹೊಸ ಹೊಸ ಯುವಕರ ಸೇರ್ಪಡೆ ಮಾಡುತ್ತಿದ್ದ…ಈ ರೀತಿ ಸೇರ್ಪಡೆ ಮಾಡುವ ವ್ಯಕ್ತಿಯ ಬಗ್ಗೆ ಕೂಲಂಕುಷವಾಗಿ ಅರಿತುಕೊಳ್ಳುತ್ತಿದ್ದ ಆಮೇಲೆಯೆ ಅವರಿಗೆ ಒಳಪ್ರವೇಶ…ಹಾಗಿದ್ದು ನನ್ನ ಪ್ರಕಾರ , ಯಶಪಾಲ್ ಹಾಗೂ ವೀರಭದ್ರ ತಿವಾರಿ ಎಂಬಿಬ್ಬರ Continue reading →

ಮೈ ಅಜಾದ್ ಹೂಂ ಅಜಾದ್ ಹೀ ರಹೂಂಗಾ.. ಭಾಗ-4

ಭಾಗ-3 ರಿಂದ ಮುಂದುವರೆದಿದೆ

ಸ್ಯಾಂಡರ್ಸನ ಕೊಲೆಯಾದ ನಂತರ ಕ್ರಾಂತಿಕಾರಿಗಳಿಗೆ ಭಾರತದಲ್ಲಿ ಅಭಿಮಾನಿಗಳು ಜಾಸ್ತಿ ಆದರೂ ಅಂತಾನೆ ಹೇಳಬಹುದು, ಹಾಗೆಯೇ ಆರ್ಥಿಕ ಸಹಾಯವೂ ಸಾಕಷ್ಟು ಸಿಗತೊಡಗಿತು…ಹಾಗಾಗಿ ಆಜಾದ್ ಪಡೆ ಒಂದು ಹೆಜ್ಜೆ ಮುಂದುವರಿದು ಬಾಂಬ್ ಅನ್ನು ಕೂಡ ಗಳಿಸಿಕೊಂಡಿತ್ತು. ಬಾಂಬ್ ತಯಾರಿಕೆಗೆ ಸಹಾಯ ಮಾಡಿದ್ದು ಬಂಗಾಲದ ಅಮರ ಕ್ರಾಂತಿಕಾರಿ ಜತೀನ್ ದಾಸ್…ಅಂಗ್ಲರಿಗಾಗಿ ತಯಾರಾದ ಅಜಾದನ ಕಾರ್ಖಾನೆಯ ಬಾಂಬುಗಳಿಗೆ ಸಿಡಿಯೋದಕ್ಕೆ ಆಂಗ್ಲರೇ ವೇದಿಕೆ ನಿರ್ಮಿಸಿಕೊಟ್ಟರು ಈ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಎರಡು ಮಸೂದೆಯನ್ನು ತರಲು ಯೋಜನೆಯನ್ನು ಹಾಕಿಕೊಂಡಿತು…

ಮೊದಲನೆಯದು “ವ್ಯಾಪಾರ ವಿವಾದ ಮಸೂದೆ( Trades dispute bill) ” ಕಾರ್ಮಿಕರನ್ನು ಬಗ್ಗು ಬಡಿಯಲೆಂದೇ ರೂಪಿಸಿದ್ದು.

ಎರಡನೆಯದ್ದು “ಸಾರ್ವಜನಿಕ ಸಂರಕ್ಷಣಾ ಮಸೂದೆ( Public safety act)” ಇದರಿಂದ ಸರ್ಕಾರ ತನಗಿಷ್ಟ ಬಂದಂತೆ ಯಾರನ್ನೇ ಆದರೂ ಬಂಧಿಸಬಹುದಿತ್ತು. ಸಂಸತ್ತಿನಲ್ಲಿ ಈ ಮಸೂದೆಯನ್ನು ಪ್ರಬಲ ವಿರೋಧದ ನಡುವೆಯು ಅಂಗೀಕರಿಸೋದು ಖಚಿತವಾಗಿತ್ತು.ಕ್ರಾಂತಿಕಾರಿಗಳನ್ನು, ಸ್ವಾತಂತ್ರ್ಯ ಹೋರಾಟಗಾರರನ್ನು ಹದ್ದು ಬಸ್ತಿನಲ್ಲಿಡಲು ಸರ್ಕಾರ ಈ ರೀತಿ ಯೋಜನೆ ಮಾಡಿತ್ತು..ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುವುದರಲ್ಲಿತ್ತು.. ಅದೂ ವಿಭಿನ್ನ ರೀತಿಯಲ್ಲಿ…

ಕ್ರಾಂತಿಕಾರಿಗಳೆಲ್ಲ ಸೇರಿ ಈ ಮಸೂದೆ ಮಂಡನೆ ಆದೊಡನೆ ಸದನದಲ್ಲಿ ಬಾಂಬು ಸ್ಫೋಟಿಸಿ ವಿರೋಧ ವ್ಯಕ್ತಪಡಿಸಬೇಕು ಅಂತ ತೀರ್ಮಾನಿಸಿದರು… ಅಜಾದರ ಬಲವಾದ ವಿರೋಧದ ನಂತರವೂ ಭಗತ್ ಈ ಕೆಲಸವನ್ನು ತಾನೆ ಮಾಡುವುದಾಗಿ ಹಠ ಹಿಡಿದ… ಅತನ ಸಹಾಯಕ್ಕೆ ಸಜ್ಜಾದವನು ಬಟುಕೇಶ್ವರ ದತ್ತ್. ಈ ಮೀಟಿಂಗಿನಲ್ಲಿ ಮೊದಲ ಬಾರಿಗೆ ಅನ್ನುವಂತೆ ಅಜಾದರ ಮಾತಿಗೆ ಹಿನ್ನಡೆಯಾಯಿತು.. ಭಗತ್ ಹೋಗೋದು ಬೇಡ ಅಂದರೂ ಅದೇ ನಿರ್ಣಯವಾಯಿತು… ಬಾಂಬ್ ಎಸೆದು ಅಲ್ಲಿಂದ ತಪ್ಪಿಸಿಕೊಂಡು ಬರಬೇಕು ಅನ್ನೋದು ಅಜಾದರ ವಾದವಾಗಿತ್ತು ಆದರೆ.. ಭಗತ್ ಮತ್ತು ವಿಜಯಕುಮಾರರ ಯೋಜನೆಯೇ ಬೇರೆಯಾಗಿತ್ತು… ಅದು ಬಂಧನಕ್ಕೊಳಗಾಗುವುದು… Continue reading →

ಮೈ ಆಜಾದ್ ಹೂಂ… ಔರ್ ಆಜಾದ್ ಹೀ ರಹೂಂಗಾ…ಭಾಗ-2

ಭಾಗ-1 ರಿಂದ ಮುಂದುವರೆದಿದೆ
ಈ ಹಿಂದೆ ಹೇಳಿದಂತೆ ಆಜಾದ್ ಸಣ್ಣ ಪ್ರಾಯದಲ್ಲೇ ತನ್ನ ದೇಶಪ್ರೇಮದ ಕಂಪನ್ನು ಬೀರತೊಡಗಿದ್ದರು… ಮೊದಲಿಗೆ ಗಾಂಧಿಯ ಹಿಂಬಾಲಕರಾಗಿ ಕಾಂಗ್ರೆಸ್ ನ ಕಾರ್ಯಕರ್ತರಾಗಿದ್ದ ಇವರು , ಕಾಂಗ್ರೆಸ್ ಅನ್ನು ತೊರೆಯಲು ಕಾರಣವಾದದ್ದು ಗಾಂಧೀಜಿಯ ನಿಲುವು … ಚೌರಿ ಚೌರಾ ಎಂಬಲ್ಲಿ ನಡೆದ ಅಹಿತಕರ ಘಟನೆಗೆ, ಸಫಲತೆಯ ಹಾದಿ ಹಿಡಿದ ಅಸಹಕಾರ ಚಳುವಳಿಯನ್ನು ಗಾಂಧೀಜಿ ನಿಲ್ಲಿಸಿಬಿಟ್ಟದ್ದು… ಆಜಾದರಿಗೆ ತುಂಬಾ ನೋವು ತಂದಿತ್ತು… ಇನ್ನೊಂದು ಕಡೆಯಲ್ಲಿ ಜಲಿಯನ್ ವಾಲಾಭಾಗ್ ಘಟನೆ ಅವರೊಳಗಿನ ರೋಶವನ್ನು ಉಕ್ಕಿಸಿತ್ತು…ಮುಖ್ಯವಾಗಿ ಈ ಎರಡು ಘಟನೆಯೇ ಆಜಾದರನ್ನು ಕ್ರಾಂತಿಯ ಲೋಕಕ್ಕೆ ಸ್ವಾಗತಿಸಿದ್ದು…ಕೈ ಹಿಡಿದು ಕರಕೊಂಡು ಹೋದವರು ಮನ್ಮಥನಾಥ ಗುಪ್ತ ಅನ್ನೋ ಅವರ ಒಬ್ಬ ಸಹಪಾಠಿ..ಮುಂದಕ್ಕೆ ನಿಧಾನವಾಗಿ ಅಜಾದರಿಗೆ ಒಬ್ಬೊಬ್ಬರಾಗೇ ಕ್ರಾಂತಿಕಾರಿಗಳ ಪರಿಚಯವಾಗತೊಡಗಿತು…ರಾಜೇಂದ್ರ ಲಾಹಿರಿ, ಶಚೀಂದ್ರ ಬಕ್ಷಿ, ರಬೀಂದ್ರ ಮೋಹನ ಕರ್, ಜೋಗೇಶ್ ಚಂದ್ರ ಚಟರ್ಜಿ, ಗೋವಿಂದ ಚರಣ ಕರ್, ಕುಂದನ್ ಲಾಲ್, ಭಜರಂಗ್ ಬಲಿ ಗುಪ್ತ..ಹೀಗೆ …..ಮುಂದಕ್ಕೆ ಮಹಾನ್ ಕ್ರಾಂತಿಕಾರಿ ಗುರು…ರಾಮ್ ಪ್ರಸಾದ್ ಬಿಸ್ಮಿಲ್…ಮುಂದೆ ಈ ಬಿಸ್ಮಿಲ್ ಅವರೆ ಕ್ರಾಂತಿಕಾರಿಕಾರಿಗಳ ನಾಯಕರಾಗಿ ಕಾಕೋರಿಯಲ್ಲಿ ಸರಕಾರಿ ಖಜಾನೆ ಲೂಟಿ ಮಾಡಿದ್ದು…

ರಾಮ ಪ್ರಸಾದ್ ಬಿಸ್ಮಿಲ್ ಅವರ ಗರಡಿಯಲ್ಲೇ ಚಂದ್ರ ಶೇಖರ ಆಜಾದ್ ಅನ್ನೋ ಕ್ರಾಂತಿಕಾರಿ ದೇಶಭಕ್ತನೊಬ್ಬ ರೂಪುಗೊಂಡದ್ದು…ರಾಮ್ ಪ್ರಸಾದ್ ಬಿಸ್ಮಿಲ್ ಅವರೊಬ್ಬ ಅಪ್ಪಟ ಬ್ರಹ್ಮಾಚಾರಿ ಎಲ್ಲಾ ಮಹಿಳೆಯರನ್ನು ಜಗನ್ಮಾತೆಯಂತೆ ಕಾಣುತ್ತಿದ್ದರು… ಬಹುಶ ಇದೇ Continue reading →

ಮೈ ಆಜಾದ್ ಹೂಂ .. ಆಜಾದ್ ಹೀ ರಹೂಂಗಾ.. ಭಾಗ-3

ಭಾಗ-2 ರಿಂದ ಮುಂದುವರೆದಿದೆ
ಕಾಕೋರಿ ದರೋಡೆ ಆದ ನಂತರ ಬಿಸ್ಮಿಲ್ಲರು ಕಟ್ಟಿದ ಕ್ರಾಂತಿಕಾರಿ ಪಡೆ ಕ್ರಮೇಣ ಕರಗತೊಡಗಿತು. ಒಬ್ಬೊಬ್ಬರಾಗಿ ಸಿಕ್ಕಿ ಹಾಕತೊಡಗಿದರು…ಆದರೆ ಯಾರಿಗೂ ಸಿಕ್ಕಿ ಬೀಳದೆ ಇದ್ದದ್ದು ಅಜಾದ್ ಮಾತ್ರ…ತನ್ನ ಬಹುವಿಧದ ವೇಷ ಮತ್ತು ಚಾಣಾಕ್ಷತನದಿಂದ ಪೋಲ
ೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ… ತಮ್ಮನ್ನು ತಾವು ಬಚ್ಚಿಡುವ ನೆಪದಲ್ಲಿ ತನ್ನ ಮುಖ್ಯ ಕೆಲಸವನ್ನು ಆತ ಎಂದೂ ಮರೆತಿರಲಿಲ್ಲ, ಹೋದ ಹೋದಲ್ಲಿ ತಮ್ಮ ಸಂಘಟನೆಗಾಗಿ ಸದ್ದಿಲ್ಲದೆ ದುಡಿಯುತ್ತಿದ್ದ. ಯುವ ಪಡೆಯನ್ನು ಸಿದ್ಧಗೊಳಿಸುತ್ತಿದ್ದ…ಇಂತಹಾ ಸಮಯದಲ್ಲಿಯೇ ಮತ್ತೊಬ್ಬ ಕ್ರಾಂತಿಯ ಕಿಡಿ, ಪಂಜಾಬಿನ ಗಂಡುಗಲಿಯೊಡನೆ ಅಜಾದರ ಮಿಲನವಾಯಿತು… ರಾಮಾಯಣದಲ್ಲಿ ಶ್ರೀ ರಾಮ ಮತ್ತು ಹನುಮಂತನ ಮಿಲನದ ದೃಶ್ಯ ನನಗೇಕೋ ನೆನಪಾಗುತ್ತಿದೆ ಅಲ್ಲೂ ಒಂದು ಹೆಣ್ಣಿನ ರಕ್ಷೆ ಆಗಬೇಕಿತ್ತು ಇಲ್ಲೂ ಒಬ್ಬ ಹೆಣ್ಣಿನ ರಕ್ಷೆ… ಅದು ತಾಯಿ ಭಾರತಿ…

ಹಾಗೆ ನೋಡಿದರೆ ಈ ಇಬ್ಬರೂ ಬೆಳೆದು ಬಂದ ರೀತಿ ಬೇರೆ ಬೇರೆಯೆ ಆಗಿತ್ತು ಭಗತ್ ತಮ್ಮ ಓದು ಮತ್ತು ವೈಚಾರಿಕ ವಿಷಯದ ಮುಖಾಂತರ ಒಬ್ಬ ಹೋರಾಟಗಾರರಾಗಿ ಮೂಡಿ ಬಂದಿದ್ದರು ಆದರೆ ಅಜಾದ್ ಬರಿಯ ಹೋರಾಟದಿಂದಲೇ ತಮ್ಮನ್ನು ತಾವು ಗುರಿತಿಸಿಕೊಂಡಿದ್ದರು.. ಆದರೂ ಇಬ್ಬರೂ ಒಬ್ಬರೊನ್ನಬ್ಬರು ಬಹು ಬೇಗ ಅರ್ಥೈಸಿಕೊಳ್ಳುತ್ತಿದ್ದರು, ಯಾಕೆಂದರೆ ಇಬ್ಬರ ಪರಮ ಗುರಿ ಒಂದೆ… ಭಾರತ ಮಾತೆಯ ರಕ್ಷಣೆ…

ಇದೇ ಸಮಯದಲ್ಲಿ ಚದುರಿ ಹೋಗಿದ್ದ ಕ್ರಾಂತಿಕಾರಿಗಳೆಲ್ಲರೂ ಒಂದಾಗಿ ಹೋರಡುವ ಕಾರಣಕ್ಕಾಗಿ, Continue reading →

ಆಚರಣೆಯಲ್ಲೂ ಜಾತ್ಯಾತೀತತೆಯ ಹುಚ್ಚು

ಹಾಗೇ ಕುಳಿತು ಹಳೆಯ ಪೇಪರ್ ಗಳನೆಲ್ಲ ಸರಿ ಮಾಡಿ ಅಟ್ಟಕ್ಕೆ ಹಾಕ್ತ ಇದ್ದಾಗ ಒಂದು ವಾರದ ಹಿಂದಿನ ಉದಯವಾಣಿಯಲ್ಲೊಂದು ಲೇಖನದ ಹೆಡ್ಡಿಂಗ್ ನನ್ನ ಗಮನ ಸೆಳೆಯಿತು…” ಹುಸಿ ಜಾತಿವಾದ, ಹಸಿ ಧಾರ್ಮಿಕತೆ ” ಇದು ಟೈಟಲ್ಲು.. ನೋಡಿದರೆ ಅದು ವಿ.ಐ.ಪಿ ಕಾಲಂ… ಲೇಖನ ಬರೆದವರು ” ರಾಹುಲ್ ಬೋಸ್ ” ನಟ, ಸಾಮಾಜಿಕ ಕಾರ್ಯಕರ್ತ ( ಈ ನಟ ಅನ್ನೋದೇನೋ ಗೊತ್ತಾಯ್ತು ಸಾಮಾಜಿಕ ಕಾರ್ಯಕರ್ತ ಹೇಗೋ ಇನ್ನು ಗೊತ್ತಗ್ತಾ ಇಲ್ಲ.. ಅವರ ಸಿನಿಮಾಗಳಂತೆ ಸಂಖ್ಯೆಯಲ್ಲಿ ಇದು ಬಹಳ ಕಡಿಮೆಯೇನೋ…) ಅವರ ಲೇಖನದ ಮುಖ್ಯ ವಸ್ತು ಭಾರತದಲ್ಲಿನ ಕೆಲವು ಆಚರಣೆಗಳು… ತಮ್ಮ ಲೇಖನದಲ್ಲಿ ಅವರು ಇಲ್ಲಿನ ಕೆಲವು ಆಚರಣೆಯ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತಾರೆ.. ಾಅರತಿ ಎತ್ತಿ , ತಿಲಕ ಇಟ್ಟು ಅತಿಥಿಗಳನ್ನು ಸ್ವಾಗತಿಸುವುದು, ದೀಪ ಬೆಳಗಿ ಕಾರ್ಯಕ್ರಮದ ಶುಭಾರಂಭ ಮಾಡುವುದು ತೆಂಗಿನಕಾಯಿ ಒಡೆದು ಮುಹೂರ್ತ ನೆರವೇರಿಸುವುದು… ಕರ್ವಾ ಚೌತ್ ಆಚರಣೆಯನ್ನು ಜಾಹೀರಾತುಗಳಲ್ಲಿ ತೋರಿಸುವುದು… ಈ ತರ ಇದೆಲ್ಲಾ ಹುಸಿ ಜಾತೀಯತೆ ಅಂತೆ… ಭಾರತದಲ್ಲಿ ಜಾತ್ಯಾತೀತತೆ ಇಲ್ಲ ಇವೆಲ್ಲಾ ಹಿಂದೂ ಸಂಪ್ರದಾಯಗಳು ಇವನ್ನೆಲ್ಲಾ ಸರಕಾರಿ ಕಾರ್ಯಕ್ರಮದಲ್ಲಿ ಯಾಕೆ ಮಾಡುತ್ತಾರೆ ಅನ್ನೋದು ಅವರ ಆತಂಕ…ಹಿಂದೂ ಆಚರಣೆಗಳನ್ನೆ ಮುಖ್ಯವಾಗಿ ಬಳಸಿಕೊಳ್ಳುವ ಜಾಹೀರಾತುಗಳಿಂದ ೧೫ ಕೋಟಿ ಜನ ಪ್ರತಿದಿನ ಒಲ್ಲದ ಮನಸ್ಸಿನಿಂದ ಇವನ್ನೆಲ್ಲ ನೋಡುತ್ತಾರಂತೆ…

ಇವರ ಈ ಸಾಲುಗಳನ್ನು ಓದುತ್ತಾ ಹೋದಂತೆ ಮನಸ್ಸಿಗೇನೋ ಹಿಂಸೆ ಆಗತೊಡಗಿತು… ಜಾತ್ಯಾತೀತತೆಯ ಪಾಠ ಹೇಳಿಕೊಡುತ್ತಾ ಭಾರತೀಯತೆಯನ್ನು ಹಾಳುಮಾಡುತ್ತಿದ್ದಾರಲ್ಲ ಎಂದೆನಿಸಿತು… ಭಾರತ ಈಗ ಜಾತ್ಯಾತೀತ ರಾಷ್ಟ್ರ ಒಪ್ಪೋಣ .. ಆದರೆ ಈ ಆಚರಣೆಗಳೆಲ್ಲಾ ಅನಾದಿ ಕಾಲದಿಂದಲೂ ಭಾರತಕ್ಕೊಂದು ತನ್ನದೇ ಆದ ಮಹತ್ವವನ್ನು ಕೊಟ್ಟಿದೆ ಅದೆಷ್ಟೋ ಜನ ವಿದೇಶಿಯರು ಭಾರತಕ್ಕೆ ಬಂದೊಡನೆ ಹಣೆಯ ಮೇಲೆ ಹರಡಿಕೊಂಡಿರುವ Continue reading →

ಬಂಧಮುಕ್ತಿ..

ನೀರ ಹನಿಗಳೆನುವ
ಮುದ್ದಾದ ಮಕ್ಕಳು,
ಬಂಧನದ ಬೇಸರದಿ

ಕುಳಿತುಕೊಂಡಿದ್ದರು
ಕಾರ್ಮೋಡವೆನುವ
ದೊಡ್ದ ಶಾಲೆಯಲಿ;
ಗುಡುಗೆನುವ ಗಂಟೆ
ಬಾರಿಸಿದ ತಕ್ಷಣ
ಸ್ವತಂತ್ರರಾದಂತೆ
ಭುವಿಯೆನುವ
ಮನೆಯೆಡೆಗೆ,
ಓಡೋಡಿ ಬರುತಿಹರು
ಈಗ ಆತುರಾತುರದಲಿ

ಪಯಣ

ಕನಸೆನುವ
ನಾವೆಯನೇರಿ
ಹೊರಟಿದೆ,

ನಿದಿರೆಯಾ
ನದಿಯಲ್ಲಿ
ನನ್ನದೊಂದು
ಪಯಣ;
ಎಚ್ಚರವೆನುವ
ದಡವ ಸೇರುವಾಸೆ,
ಬರುವ ಮುನ್ನ
ಮೂಡಣದಿ
ಸೂರ್ಯ ಕಿರಣ.

ಮೈ ಆಜಾದ್ ಹೂಂ… ಆಜಾದ್ ಹೀ ರಹೂಂಗಾ

ಸ್ವಾತಂತ್ರ್ಯ ಅಂದರೆ ನಮಗೇನು ನೆನಪಾಗುತ್ತೋ ಗೊತ್ತಿಲ್ಲ ಆದರೆ “ಆಜಾದ್” ಅಂದೊಡನೆ ನೆನಪಾಗೋದು ” ಚಂದ್ರಶೇಖರ ಆಜಾದ್” ಸ್ವಾತಂತ್ರ್ಯದ ಕನಸು ಕಂಡ ಈ ಅಪ್ರತಿಮ ವೀರ ತನ್ನ ಹೆಸರಲ್ಲೇ ಸ್ವತಂತ್ರ್ಯವನ್ನು ಜೋಡಿಸಿ ಬಿಟ್ಟ…ತನ್ನ ಹದಿನಾರನೆಯ ವಯಸ್ಸಿನಲ್ಲಿ , ಅಸಹಕಾರ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾಗ ತನ್ನ ನಾಯಕನ ಮೇಲಾದ ಪೋಲೀಸ್ ದೌರ್ಜನ್ಯವನ್ನು ಕಂಡು ಸಹಿಸಲಾಗದೇ… ಆ ಪೋಲಿಸನ ಮೇಲೆ ಕಲ್ಲೆಸೆದು ಅದರ ಪರಿಣಾಮವಾಗಿ ಹನ್ನೆರಡು ಛಡಿ ಏಟಿನ ಶಿಕ್ಷೆಗೆ ಗುರಿಯಾದ….

ಈ ಘಟನೆಯ ಬಗ್ಗೆ ತನಿಖೆ ಆಗುತ್ತಿದ್ದಾಗ ಈ ಹುಡುಗ ಕೋರ್ಟಿಗೆ ನೀಡಿದ ಉತ್ತರವೇ ಇವನ ದೇಶ ಭಕ್ತಿ ಗೆ ಸಾಕ್ಷಿ…

ಮ್ಯಾಜಿಸ್ಟ್ರೇಟ್ : ಹೌದೇನೋ ಆ ಪೋಲೀಸನನ್ನು ಕಲ್ಲಿನಿಂದ ಹೊಡೆದದ್ದು ನಿಜವೇನೋ..

ಬಾಲಕ : ಹೌದು, ಅದು ನಿಜ, ನಾನು ತಪ್ಪು ಮಾಡಿದೆನೆಂದು ಈಗ ನನಗನ್ನಿಸುತ್ತಿದೆ…

ತನ್ನ ತಪ್ಪಿನ ಅರಿವಾಗುತ್ತಿದೆ ಎಂದು ಎಣಿಸುತ್ತಿದ್ದ ಮ್ಯಾಜಿಸ್ಟ್ರೇಟ್ ಗೆ ನಿರಾಸೆ ಕಾದಿತ್ತು…

ಬಾಲಕ: ಕಲ್ಲಿನಿಂದ ಹೊಡೆಯಬಾರದಿತ್ತು… ಲಾಠಿಯಿಂದ ಅವನ ತಲೆ ಒಡೆದು ಹಾಕಬೇಕಿತ್ತು. ನಾವು ಅಹಿಂಸಾ ವಾದಿಗಳೆಂದು ತಿಳಿದೇ ಪೋಲೀಸರು ರಾಕ್ಷಸರಂತೆ ನಡೆದುಕೊಳ್ಲುತ್ತಿದ್ದಾರೆ. ನಮ್ಮ ಧ್ವಜಕ್ಕೆ ಅವಮಾನ ಮಾಡಿ ನಮ್ಮ ಪೂಜ್ಯ ನಾಯಕರನ್ನು ಸಾಯ ಬಡಿದ ಇವನನ್ನು ನನ್ನ ಕೈಯಲ್ಲಿ ಪಿಸ್ತೂಲು ಇದ್ದಿದ್ದರೆ Continue reading →

ಸಾಮ್ಯತೆ…

ಬಿಡದೆ
ಧಾರಾಕಾರವಾಗಿ
ಸುರಿಯುತ್ತಿರುವ
ಮಳೆಯನ್ನು
ಕಂಡಾಗ
ಥಟ್ಟನೆ ನನಗೆ
ನೆನಪಾದದ್ದು
ನನ್ನವಳ
ಬೈಗುಳ.

ಥೂ ಉಗೀರ್ರೀ ಅದನ್ನ ಅನ್ನೋವರೆಗೆ

ಇವತ್ತು ಕನ್ನಡ ನ್ಯೂಸ್ ಚಾನಲ್ ನೋಡೋ ಹಾಗೇ ಇಲ್ಲ ನಿನ್ನೆಯಿಂದ ರೆಸಾರ್ಟ್ ದಾಳಿ ಅನ್ನೋ ಹೊಸ ಚ್ಯೂಯಿಂಗ್ ಗಮ್ ಸಿಕ್ಕಿದೆ ಅದರ ಸಿಹಿರಸ ಮುಗಿಯೋವರೆಗೆ ಜಗೀತಾನೆ ಇರ್ತಾರೆ…(ಈ ನ್ಯೂಸ್ ಚಾನಲ್ ನವರ ವಿಶೇಷತೆ ಏನು ಅಂದ್ರೆ ತಮ್ಮ ಅನುಭವಕ್ಕೆ ಸಿಹಿ ಹೋಗಿದೆ ಅಂತ ಗೊತ್ತಾದ್ರೂ ನೋಡೋರು ಥೂ ಉಗೀರ್ರೀ ಅದನ್ನ ಅನ್ನೋವರೆಗೆ ಜಗೀತಾನೆ ಇರ್ತಾರೆ) ಇನ್ನು ಈ ಘಟನೆಯ ಕುರಿತು …

ಮೊದಲಾಗಿ ಎಲ್ಲಾರೂ ಹೇಳುತ್ತಿರುವುದು… ಹೆಣ್ಣು ಮಕ್ಕಳಿಗೆ ಹೊಡೆಯೋದು ನಮ್ಮ ಸಂಸ್ಕೃತೀ ನಾ… ಹೆಣ್ಣನ್ನು ಪೂಜಿಸೋ ದೇಶ ನಮ್ಮದು ಅಂತ… ಖಂಡಿತಾ ಒಪ್ಪೋಣ ಹೆಣ್ಣನ್ನು ಪೂಜಿಸೋ ದೇಶ ನಮ್ಮದು… ಹಾಗಂತ ಸೀತೆ, ದ್ರೌಪದಿ, ತಾರ ಇಂತಹ ಹೆಣ್ಣನ್ನು ಪೂಜಿಸುತ್ತೇವೆಯೇ ಹೊರತು ಪೂತನಿ, ಶೂರ್ಪನಖಿ ಇಂತವರನ್ನು ಪೂಜಿಸೋಲ್ಲ.. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಕೂಡ ಶೂರ್ಪನಖಿಯನ್ನು ದಂಡಿಸುವುದೇ ಸರಿ ಎಂದ. ಇದರ ಅರ್ಥ ವ್ಯಕ್ತಿಗೆ ಪೂಜೆ ಅಲ್ಲ ಅದು ವ್ಯಕ್ತಿತ್ವಕ್ಕೆ ಪೂಜೆ ಅನ್ನೋದು. ಸಾಮ ದಾನ ಭೇದ ದಂಡ ಇವೆಲ್ಲವನ್ನೂ ಉಪಯೋಗಿಸುವಂತೆ ನಮ್ಮ ಧರ್ಮ ಹೇಳಿಕೊಟ್ಟಿದೆ… ಬಹುಶ ಮಾಧ್ಯಮದವರು ತೋರಿಸದೇ ಇರುವಂತಾ ವಿಷಯ ಆಸುಪಾಸಿನ ಜನರ ಅಭಿಪ್ರಾಯ… ನಾನು ಪೇಪರಿನಲ್ಲಿ ಓದಿದಂತೆ ಹತ್ತಿರದ ಜನ ಪೋಲೀಸರಲ್ಲಿ ಈ ರೇವ್ ಪಾರ್ಟಿಗಳ ಬಗ್ಗೆ ತಿಳಿಸಿದ್ದಾರೆ ಆದರೂ ಸಕಾಲದಲ್ಲಿ ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ… ಪೋಲೀಸರೇ ಕ್ರಮ ಕೈಗೊಂಡಿದ್ದರೆ ಇಂತಾ ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದರೇ…??

ಇಲ್ಲಿ ನಡೆದದ್ದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ… ಆದರೂ ಮಾಧ್ಯಮದವರ ಪ್ರಶ್ನೆ ಹೆಣ್ಣು ಮಕ್ಕಳನ್ನು ಅಸಭ್ಯವಾಗಿ ನಡೆಸಿಕೊಂಡರು ಅಂತಾ ನಾನು ಈ ದೃಶ್ಯಗಳನ್ನು ನೋಡಿದಾಗ ನನಗೆ ಅನ್ನಿಸಿದ್ದು… ಅವರನ್ನ ಮಾಧ್ಯಮಕ್ಕೆ ತೋರಿಸುವಾಗ ಆ ಹುಡುಗಿಯರ ಕೊಸರಾಟದಿಂದಾಗಿ ಅಸಭ್ಯವಾಗಿ ಕಂಡಿದೆ ಅದಕ್ಕೆ ಕಾರಣ ಅವರು ಹಾಕಿಕೊಂಡಿದ್ದ ಬಟ್ಟೆ ಬಹುಶ ಇದೇ ಹೆಣ್ಣು ಮಕ್ಕಳು ಚೂಡಿದಾರ್ ಹಾಕಿದ್ದರೆ ಇದೇ ರೀತಿಯ ಎಳೆದಾಟ ಅಸಭ್ಯವಾಗಿ ಕಾಣುತ್ತಿರಲಿಲ್ಲ…. ವಿಚಿತ್ರ ಎಂದರೆ ಯಾವ ಅನೈತಿಕ ಚಟುವಟಿಕೆಯನ್ನು ಇವರು ಮಾಡುತ್ತಿದ್ದರೋ ಅದು ಯಾರಿಗೂ ಅಸಭ್ಯವಾಗಿ ಕಾಣುತ್ತಿಲ್ಲ ಅಂದರೆ ಕ್ರಿಯೆ ಅಸಹ್ಯಕರವಾಗಿದ್ದರೂ ಅದು ಅಸಭ್ಯವಾಗಿ ಕಾಣದೆ ಪ್ರತಿಕ್ರಿಯೆ ಮಾತ್ರ ಅಸಹ್ಯಕರವಾಗಿ ಕಂಡಿದೆ.

ಇನ್ನು ಇಲ್ಲಿನ ಕ್ರಿಯೆಯ ಬಗ್ಗೆ ಅಂದರೆ ನಾವೇನು ರೇವ್ ಪಾರ್ಟಿ ಅನ್ನುತ್ತಿದ್ದೇವೋ ಅದರ ಕುರಿತು ನಮ್ಮ ಸಂಸ್ಕೃತಿಗೆ ಹೇಳಿಸಿದಂತಾದ್ದು ಅಲ್ಲ ಆದರೆ ಅಲ್ಲಿನವರು ಹೇಳುತ್ತಿರುವುದು ಇದು ಬರ್ತ್ ಡೇ ಪಾರ್ಟಿ ಎಂದು… ಬಹುಶ ಬರ್ತ್ ಡೇ ಪಾರ್ಟಿಗೆ ಬೆಡ್ ರೂಮ್ ಗಳ ಅವಶ್ಯಕತೆ ಏನು ಅನ್ನುವುದು ನನಗಂತೂ ತಿಳಿದಿಲ್ಲ…ಇಂತಹಾ ಬರ್ತ್ ಡೇ ಪಾರ್ಟಿ ನಮಗೆ ಬೇಕಾ…?

ಇನ್ನು ಮಾಧ್ಯಮದವರ ಕುರಿತು ಮೊದಲಾಗಿ ತಮಗೆ ಸುದ್ದಿ ಸಿಕ್ಕ ಕೂಡಲೇ ಪೋಲೀಸರಿಗೆ ತಿಳಿಸದೆ ತಮ್ಮ ಟಿ.ಆರ್.ಪಿ ಯ ಕುರಿತು ಯೋಚಿಸಿ ಪದೇ ಪದೇ ಇದನ್ನೇ ತೋರಿಸುತ್ತಿರುವುದು. ಇಂತಹಾ ವಿಷಯವನ್ನು ಮತ್ತಷ್ಟು ದೊಡ್ಡದು ಮಾಡುತ್ತಿರುವ ಕಾರಣ ಈ ದಾಳಿ ನಡೆಸಿದವರು ಹಿಂದು ಸಂಘಟನೆಗಳು ಅನ್ನುವುದು, ಇನ್ಯಾವುದೋ ಕೋಮಿನವರು ಮಾಡಿದಿದ್ದಲ್ಲಿ ಒಂದು ಬಾರಿ ಬ್ರೇಕಿಂಗ್ ನ್ಯೂಸ್ ಅಂತ ಹಾಕಿ ಸುಮ್ಮನೆ ಇದ್ದು ಬಿಡುತ್ತಿದ್ದರು.

ಇಷ್ಟಾಗಿಯೂ ಹುಡುಗಿಯರ ಮೇಲೆ ಕೈ ಎತ್ತಿದ್ದು ಸರಿಯಲ್ಲ ಅಂತಾನೆ ಹೇಳಬಹುದು ಯಾಕೆಂದರೆ ಪೆಟ್ಟಿಗೆ ಬಗ್ಗೋ ಹುಡುಗ ಹುಡುಗಿಯರಲ್ಲ ಇವರು. ನನಗನ್ನುತ್ತೆ ಇಂತಾವರಿಗೆ ಪೆಟ್ಟು ಕೊಟ್ಟು ತಮ್ಮ ಸಂಘಟನೆಯ ಹೆಸರು ಹಾಳು ಮಾಡಿಕೊಳ್ಳುವುದಕ್ಕಿಂತ ಮಾರ್ಮಿಕ ಪೆಟ್ಟು ಕೊಡಬೇಕಿತ್ತು… ಇಂತಾಹವರನ್ನೆಲ್ಲ ರೆಡ್ ಹ್ಯಾಂಡ್ ಆಗಿ ಹಿಡಿದು ಪೋಲೀಸರು ಮತ್ತು ಮಾಧ್ಯಮದ ಮುಂದೆ ಕೂರಿಸಿ ಪ್ರಶ್ನೆಗಳ ಸುರಿಮಳೆ ಮಾಡಿ ಆದರ ಮುಲಕ ಅವರ ನಿಜ ಬಣ್ಣವನ್ನು ಬಯಲು ಮಾಡಬೇಕಿತ್ತು.ಅಲ್ಲಿ ನಡೆಯುತ್ತಿದ್ದುದು ಏನು ಅನ್ನುವುದನ್ನು ಜಗತ್ತಿಗೆ ಸಾರಿ ಹೇಳಬೇಕಿತ್ತು.ಆವಾಗ ಸಂಘಟನೆಗೂ ಒಳ್ಳೆ ಹೆಸರು ಬರುತ್ತಿತ್ತು.

ಇಲ್ಲಿ ಮತ್ತೂ ಒಂದು ದೊಡ್ಡ ತಪ್ಪು ಪಾಲಕರದ್ದು , ತಮ್ಮ ಮಕ್ಕಳ ಬಗ್ಗೆ ಒಂದಷ್ಟು ಗಮನ ಕೊಡೋದು ಅವರ ಕರ್ತವ್ಯ ಅಲ್ವಾ… ಮಕ್ಕಳಿಗೆ ದುಡಿಯೋ ಮಾರ್ಗವನ್ನಷ್ಟೇ ತೋರಿಸಿ, ನೀವು ದುಡಿದ ಹಣವನ್ನು ಬೇಕಾಬಿಟ್ಟಿ ಅವರಮೇಲೆ ಸುರಿಯಬೇಡಿ…ದುಡಿದು ತಿನ್ನುವಂತೆ ಮಾಡುವುದೇ ನಿಜವಾದ ಪಾಲಕರ ಲಕ್ಷಣ.ಮಕ್ಕಳ ಖರ್ಚು ಹದ್ದು ಮೀರಿದರೆ ಅವರು ಎಡವುತ್ತಿದ್ದಾರೆ ಎಂದು ತಾನೆ ಅರ್ಥ. ಎಲ್ಲರೂ ನಮ್ಮ ಸಂಸ್ಕೃತಿಯ ರಕ್ಷಣೆಗೆ ತೊಡಗಿದರೇ ಇಂತಹಾ ಘಟನೆಗಳು ಖಂಡಿತಾ ನಡೆಯಲಾರವು. ಮುಂದೆ ಇಂತಹಾ ಪಾರ್ಟಿಗಳು ನಡೆಯದೇ ಇರಲಿ ಇಂತಹಾ ದಾಳಿಗಳು ಕೂಡ ನಡೆಯದೇ ಇರಲಿ…
– ಗುರುಪ್ರಸಾದ್ ಆಚಾರ್ಯ

ನಮ್ಮ ಸಂಸ್ಕೃತಿ

ಭಾರತ ಇಡಿಯ ಜಗತ್ತಿಗೆ ಸಂಸ್ಕೃತಿಯನ್ನು ಕೊಟ್ಟ ದೇಶ, ಅದೆಷ್ಟೋ ಹಳೆಯ ಸಂಸ್ಕೃತಿಗಳು ನಾಶವಾಗಿ ಹೋಗಿವೆ, ರೋಮ್ ಆಗಿರಬಹುದು, ಈಜಿಪ್ಟ್ ಆಗಿರಬಹುದು ಎಲ್ಲೂ ಅವರ ಮುಲ ಸಂಸ್ಕೃತಿ ಉಳಿದಿಲ್ಲ . ಭಾರತದ ಮೇಲೆ ಅದೆಷ್ಟೋ ದಾಳಿಗಳು ಆದವು ಆದರೂ ಅವರಿಗೆಲ್ಲಾ ನಮ್ಮ ಸಂಸ್ಕೃತಿಯನ್ನು ನಾಶ ಮಾಡಲು ಆಗಲಿಲ್ಲ … ಯಾಕೆ ನನ್ನ ಪ್ರಕಾರ ಇದು ಸಾಧ್ಯವಾಗಿದ್ದು ಅಂದಿನ ಭಾರತೀಯರು ತಮ್ಮ ಆಚಾರ ವಿಚಾರಗಳಿಗೆ ಕೊಡುತ್ತಿದ್ದ ಗೌರವದಿಂದಾಗಿ…ಕಾಲಕಾಲಕ್ಕೆ ತಕ್ಕಂತೆ ಆಚರಣೆಗಳು… ಹಿರಿಯರು ಮಾಡಿಕೊಂಡು ಬರುತ್ತಿದ್ದ ಸಂಪ್ರದಾಯಗಳ ಅನುಕರಣೆ ಕೆಲವೊಮ್ಮೆ ಅಂಧಾನುಕರಣೆ ಮಾಡುತ್ತಿದ್ದರೂ ಅದರಿಂದ ಲಾಭವನ್ನೇ ಪಡೆಯುತ್ತಿದ್ದರು…ಪ್ರಾಣವನ್ನು ಕೊಡುತ್ತೇವೆ ಆದರೆ ನಮ್ಮತನವನ್ನು ಕಳಕೊಳ್ಳುವುದಿಲ್ಲ ಅನ್ನುವ ಅಚಲ ವಿಶ್ವಾಸ…ಅದರಂತೇ ಮಾಡಿದರೂ ಕೂಡ.. ಇಂತಹಾ ಭಾರತೀಯರಿಂದಾಗಿ ಇಲ್ಲಿಯವರೆಗೆ ನಮ್ಮ ಸಂಸ್ಕೃತಿ ಉಳಿದಿದೆ ಅನ್ನಬಹುದು. ಆದರೆ ಸದ್ಯದ ಭಾರತೀಯರನ್ನು ನೋಡಿದರೆ ನಮ್ಮ ಸಂಸ್ಕೃತಿ ಉಳಿದೀತಾ ಅನ್ನೊ ದೊಡ್ದ ಪ್ರಷ್ನೆ ಕಾಡುತ್ತೆ…ಇಲ್ಲ ಅನ್ನೋ ಉತ್ತರವೇ ಗೋಚರಿಸಿದಂತಾಗುತ್ತದೆ ಯಾಕೆ ಅಂತಾಂದ್ರೆ ಮೊದಲಿನವರು ನಮ್ಮ ಸಂಸ್ಕೃತಿಯ ಅಂಧಾನುಕರಣೆ ಯಾವ ರೀತಿ ಮಾಡುತ್ತಿದ್ದರೋ ಅಂತಾದ್ದೇ ಅಂಧಾನುಕರಣೆ ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡತೊಡಗಿದ್ದಾರೆ, ನಮ್ಮ ಉಡುಗೆ ಇರಲಿ ತೊಡುಗೆ ಇರಲಿ ಅಡುಗೆ ಎಲ್ಲವೂ ವಿದೇಶಿಯರಂತೆ… ಹೀಗೆ ಮುಂದುವರಿದಲ್ಲಿ ನಮ್ಮ ಸಂಸ್ಕೃತಿ ನಾಶವಾಗಲು ಹೆಚ್ಚು ಸಮಯ ಬೇಕಾಗಲಿಕ್ಕಿಲ್ಲ.. ಯಾವ Continue reading →