Category Archives: ಚಿತ್ರಗೀತೆ

ಭಾಗ್ಯದ ಲಕ್ಷ್ಮೀ ಬಾರಮ್ಮ !

ಭಾಗ್ಯದ ಲಕ್ಷ್ಮೀ ಬಾರಮ್ಮ !
ನಮ್ಮಮ್ಮ ನೀ ಸೌ !
ಭಾಗ್ಯದ ಲಕ್ಷ್ಮೀ ಬಾರಮ್ಮ !!ಪ!!

ಗೆಜ್ಜೆ ಕಾಲ್ಗಳ ಧ್ವನಿಯ

ಮಾಡುತ ! ಹೆಜ್ಜೆಯ ಮೇಲೆ  Continue reading →
Advertisements

ರಣಧೀರ – ನಾವಿಂದು ಹಾಡೋ ಹಾಡಿಗೆ

ನಾವಿಂದು ಹಾಡೋ ಹಾಡಿಗೆ ಕೊನೆ ಇಲ್ಲ
ಕೊನೆ ಇಲ್ಲ ಈ ಸ್ನೇಹಕೆ ಹಾಡಿ ಎಲ್ಲ
ಹಾಡಿ ಎಲ್ಲ ಎಲ್ಲ ಮನಸಿಟ್ಟು ಕೇಳಿರಿ
ಕೇಳಿರಿ ಈ ಗುಟ್ಟು ಕೊನೆಯಿಂದ ಹಾಡಿರಿ
ಹಾಡಿರಿ ಹಾಡಲ್ಲಿ ಒಂದು ಲವ್ ಸ್ಟೋರಿ

ಸ್ಟೋರಿಗೆ ಈಗ ನಾಯಕಿ ಯಾರೊ ಮರಿ
ಯಾರೊ ಮರಿ ಇಗೊ ಈ ಹೆಣ್ಣೆ ನಾಯಕಿ
ನಾಯಕಿಯೆ ನಿನಗೆ ಯಾರಮ್ಮ ನಾಯಕ Continue reading →

ಕುಲದಲ್ಲಿ ಕೀಳ್ಯಾವುದೋ – ವೀಡಿಯೋ

ಸತ್ಯ ಹರಿಶ್ಚಂದ್ರ (1965) – ಕುಲದಲ್ಲಿ ಕೀಳ್ಯಾವುದೋ
ಚಿತ್ರಗೀತೆ | ಸತ್ಯ ಹರಿಶ್ಚಂದ್ರ | ಹುಣಸೂರು ಕೃಷ್ಣಮೂರ್ತಿ | ೧೯೬೫
ಸಂಗೀತ: ಘಂಟಸಾಲ
ಗಾಯನ: ಘಂಟಸಾಲ

ಕುಲದಲ್ಲಿ

ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ
ಹಹಹಹಾ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹೇ.. ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ತಿಲಕ ಇಟ್ಟರೆ ಸ್ವರಗವು ಸಿಗದು
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ತಿಲಕ ಇಟ್ಟರೆ ಸ್ವರಗವು ಸಿಗದು
ವಿಭೂತಿ ಬಳಿದರೆ ಕೈಲಾಸ ಬರದು
ವಿಭೂತಿ ಬಳಿದರೆ ಕೈಲಾಸ ಬರದು
ಇಟ್ಟ ಗಂಧಾ ಬೂದಿ ನಾಮ
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಇಟ್ಟ ಗಂಧಾ ಬೂದಿ ನಾಮ
ಕತ್ತ ಕತ್ತಲು ನಿರನಾಮಾ..

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹ್ಯ..
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ಸೈವರಿಗೆಲ್ಲಾ ಸಿವದೊಡ್ಡೋನು
ಹೆ ಹೆ ಹೆಹೆ ಹೆ ಹೆ ಹೆಹೆ
ವೈಷ್ಣವರಿಗೆ ಹರಿ ಸರ್ವೋತ್ತಮನು
ಹೊ ಹೊ ಹೊಹೊ ಹೊ ಹೊ ಹೊಹೊ
ಸೈವರಿಗೆಲ್ಲಾ ಸಿವದೊಡ್ಡೋನು
ವೈಷ್ಣವರಿಗೆ ಹರಿ ಸರ್ವೋತ್ತಮನು
ಉತ್ತಮ ಮಧ್ಯಮ ಅಧಮರೆಲ್ಲರು
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಉತ್ತಮ ಮಧ್ಯಮ ಅಧಮರೆಲ್ಲರು
ಸತ್ತಮೇಲೆ ಸಮರಾಗ್ತಾರು..

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹಹ್ಯಾ..
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು
ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು
ಏಯ್..
ಮಸಣದಲ್ಲಿ ಈ ವೀರಬಾಹುವ
ಮಸಣದಲ್ಲಿ ಈ ವೀರಬಾಹುವ
ಕೈಯ ಮೇಲ್ಗಡೆ ಬೂದಿಯಾಗ್ತರು

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹಹಹಹಹಹಾ
ಹೊಯ್
ಕೀಳ್ಯಾವ್ದು ಮೇಲ್ಯಾವುದೋ..
ಹೊಯ್
ಕೀಳ್ಯಾವ್ದು ಮೇಲ್ಯಾವುದೋ..
ಸಂಗ್ರಹ: ಕುಮಾರ್ ರಾವ್

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ, ನಮ್ಮ ಜನ್ಮದಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ, ನಮ್ಮ ಜನ್ಮದಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

ನಮ್ಮ ತಪ್ಪನೆನಿತ ತಾಳ್ವೆ, ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ, ನಿನ್ನ ಮರೆಯಲೆಂದೆವು
ತನು ಕನ್ನಡ, ಮನ ಕನ್ನಡ ನುಡಿ ಕನ್ನಡವೆಮ್ಮವು
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ, ನಮ್ಮ ಜನ್ಮದಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

ತನ್ನ ಮರೆಯ ಕಂಪನರಿಯ ಗಗನ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡಕುವ
ಕನ್ನಡ ಕಸ್ತೂರಿಯನ್ನ ಹೊಸತುಸಿರೆಂತೀರದೆನ್ನ
ಸುರಭಿಯಲ್ಲಿ ನೀನದನ್ನ ನವಶಕ್ತಿಯನ್ನೆಬ್ಬಿಸು, ನವಶಕ್ತಿಯನ್ನೆಬ್ಬಿಸು, ನವಶಕ್ತಿಯನ್ನೆಬ್ಬಿಸು
ಹೊಸ ಸುಗಂಧ, ರಸಗೆಯಿಂದ ಜಗದಿ ಹೆಸರ ಹಬ್ಬಿಸು
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ, ನಮ್ಮ ಜನ್ಮದಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
-ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ-
ಸಾಹಿತ್ಯ : ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ 
ಕುಲವಧು (1963) ಚಲನಚಿತ್ರದಲ್ಲಿ ಈ ಸಾಹಿತ್ಯವನ್ನೂ ಅಳವಡಿಸಲಾಗಿದೆ
ಸಂಗ್ರಹ : ಕುಮಾರ್ ರಾವ್

ಅಣ್ಣಾಬಾಂಡ್

ಅಣ್ಣಾಬಾಂಡ್ ಸಿನಿಮಾದ ” ಏನೆಂದು ಹೆಸರಿಡಲೀ ” ಹಾಡಿಗೇ ನನ್ನದೊಂದು ಪ್ರಯತ್ನ

ಈ ನನ್ನ ಇಡೀದಿನಕೇ ನೀನಾದೆ ದಿನಚರಿಯು
ಹೂವಂಥ ಈ ಪ್ರೀತಿಗೇ ನೀ ನೀಡು ಸಮ್ಮತಿಯು
ನಿನ್ನ ಹೃದಯದ ಆಕಾಂಕ್ಷಿ ನಾನಲ್ಲವೇ
ಈ ಸಂಗತಿ ನಿಂಗೂನು ಗೊತ್ತಲ್ಲವೇ [ ಈ ನನ್ನ ]

ಕಣ್ಣನ್ನೂ ಕನಸ್ಸನ್ನು ನೀ ಬಿಟ್ಟು ಹೋಗದಿರೂ
ಕಣ್ಣೋಟ ಸರಿದಾಗ ಹೊಡೆದೆನ್ನಾ ಸುಮ್ಮನಿರು
ಅಂದೇ ಬರೆದೇ ನಿನ್ನ ಕುರಿತೇ ನೂರೆಂಟು ಓಲೆಗಳೇ
ನಿಂಗೇ ತಲುಪೋ ಮುನ್ನ ಬಂದು ನಾನೇ ಇಲ್ಲವೇ
ಒಟ್ಟಾಗಿಯೇ ಕನಸ್ಸನ್ನು ಕೂಡೋಣವೇ
ಜೊತೆಯಾಗಿಯೇ ಸಂತೋಷ ಸಾಕೋಣವೇ [ ಈ ನನ್ನ ]

ನೀ ದೂರ ನಿಂತಾಗ ಈ ಮನವು ಸಹಿಸೋಲ್ಲ
ಬಳಿ ಬಂದು ಕುಂತಾಗ ತೊದಲಾಯ್ತು ಮಾತೆಲ್ಲಾ
ಅರ್ಧರಾತ್ರಿ ಮರದ ಕೆಳಗೆ ಮಾತಾಡುವ ಬಾರೇ
ಎಲ್ಲಾ ರಾತ್ರಿ ನಮ್ಮನು ಕಂಡು ನಗುತಿಹ ತಾರೇ
ಈ ಸೋಜಿಗ ನಿನ್ನಿಂದ ಆರಂಭವೇ
ಎಂದೆಂದಿಗೂ ಈ ಪ್ರೀತಿ ಸಾಯೋಲ್ಲವೇ [ ಈ ನನ್ನ ]

ಇಂತಿ ನಿಮ್ಮ ಪ್ರೀತಿಯ ಪಯಣಿಗ

…ರಾಘು…

ರೆಕ್ಕೆ ಇದ್ದರೆ ಸಾಕೆ – ಚಿನ್ನಾರಿ ಮುತ್ತ

ರೆಕ್ಕೆ ಇದ್ದರೆ ಸಾಕೇ?
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ ||ರೆಕ್ಕೆ ಇದ್ದರೆ ಸಾಕೇ?||

ಕಾಲೊಂದಿದ್ದರೆ ಸಾಕೇ?
ಚಿಗರಿಗೆ ಬೇಕು ಕಾನು
ಗಾಳಿಯ ಮೇಲೆ ತಾನು
ಜಿಗಿದು ಓಡೋಕೆ ||ರೆಕ್ಕೆ ಇದ್ದರೆ ಸಾಕೇ?||

ಹೂವೊಂದಿದ್ದರೆ ಸಾಕೇ?
ಬ್ಯಾಡವೇ ಗಾಳಿ
ನೀವೇ ಹೇಳಿ
ಕಂಪು ಬೀರೋಕೆ ||ರೆಕ್ಕೆ ಇದ್ದರೆ ಸಾಕೇ?||

ಮುಖವೊಂದಿದ್ದರೆ ಸಾಕೇ?
ದುಂಬಿಯ ತಾವ
ಬ್ಯಾಡವೇ ಹೂವ
ಜೇನ ಹೀರೋಕೆ ||ರೆಕ್ಕೆ ಇದ್ದರೆ ಸಾಕೇ?||

ನೀರೊಂದಿದ್ದರೆ ಸಾಕೇ?
ಬ್ಯಾಡವೇ ಹಳ್ಳ
ಬಲ್ಲವ ಬಲ್ಲ
ತೊರೆಯು ಹರಿಯೋಕೆ

ಮೋಡ ಇದ್ದರೆ ಸಾಕೇ?
ಬ್ಯಾಡವೇ ಭೂಮಿ
ಹೇಳಿ ಸ್ವಾಮಿ
ಮಳೆಯು ಸುರಿಯೋಕೆ ||ರೆಕ್ಕೆ ಇದ್ದರೆ ಸಾಕೇ?||

ಕಣ್ಣೊಂದಿದ್ದರೆ ಸಾಕೇ?
ಬ್ಯಾಡವೇ ಮಂದಿ
ಕಣ್ಣಿನ ಮುಂದೆ
ನಿಮಗೆ ಕಾಣೋಕೆ

ಕೊರಳೊಂದಿದ್ದರೆ ಸಾಕೇ?
ಬ್ಯಾಡವೇ ಹಾಡು
ಎಲ್ಲರ ಜೋಡಿ
ಕೂಡಿ ಹಾಡೋಕೆ

ರೆಕ್ಕೆ ಇದ್ದರೆ ಸಾಕೇ?
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ

ಪರಮಾತ್ಮ 2011 – ಕತ್ಲಲ್ಲಿ ಕರಡೀಗೆ

ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತು ಹೋಗ್ಬಾರ್ದು ರೀ…
ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ ಯಾವತ್ತು ಇರ್ಬಾರ್ದು ರೀ…

ಹೊಸ ಹುಡುಗಿ ಕೈ ಅಲ್ಲಿ ಕೆಂಪಾದ ಗೋರಂಟಿ
ಹಳೆ ಹುಡುಗಿ ಕೆಮ್ಮಿದರೆ ಪ್ರಳಯಾನೆ ಗ್ಯಾರೆಂಟಿ..
ಒಬ್ಬಳನ್ನೇ ಲವ್ ಮಾಡಿ ಚೆನ್ನಾಗಿರಿ
ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ..

ಹುಡುಗೀರ ಮನಸಲ್ಲಿ ಏನೇನಿದೆ
ತಿಳ್ಕೊಲ್ಲೋ ತಾಕತ್ತು ನಮಗೆಲ್ಲಿದೆ
ಪ್ರಾಬ್ಲೆಮ್ಮು ಇರದ ಫೀಮೇಲು ಇಲ್ಲ…

ಸಿಕ್ಸರ್ರು ಹೊಡಿ ಬಹುದು ಬ್ಯಾಟ್ ಇಲ್ಲದೆ
ಪ್ರೀತ್ಸೋಕೆ ಆಗೋಲ್ಲ ಡೌಟ್ ಇಲ್ಲದೆ
ಅನುಮಾನ ಇರದ ಅನುರಾಗ ಇಲ್ಲ…

ಮಾಡ್ರನ್ನು ಪ್ರೇಮಕ್ಕೆ ಮೈಲೇಜು ಕಮ್ಮಿ
ಸೆಲ್ ಪೋನು ಬಂದಮೇಲೆ ಹಿಂಗಾಯ್ತು ಸ್ವಾಮಿ
ಲವ್ ಅಲ್ಲಿ ಕಣ್ಣೀರು compulsory
ಯಾವ್ದಕ್ಕೂ ಕಿರ್ಚೀಫು ಇಟ್ಕೊಂಡಿರಿ..

ಯಾರಾನ ಕೈ ಕೊಟ್ಟರೆ ಪಾರ್ಟಿ ಕೊಡಿ
ನೆನಪನ್ನ ಸೋಪಾಕಿ ತೊಳ್ಕೊಂಡು ಬಿಡಿ
ಕಣ್ಣೀಗೆ ಸೋಪು ಹೋಗ್ಬಾರ್ದು ಕಣ್ರೀ..

ಟೈಮ್ ಇದ್ರೆ ಒಂದ್ಚೂರು ದುಖಾಪಡಿ
ಮೆಸ್ಸೇಜು ಬರಬಹುದು ಕಾಯ್ತಾ ಇರಿ
ಹೃದಯಕ್ಕೆ ಗ್ಯಾಪು ಕೊಡಬಾರದು ಕಣ್ರೀ…

ಬೆನ್ನಲ್ಲಿ ಹುಣ್ ಅಂತೆ ಆ ಫಸ್ಟ್ ಲವ್ವು
ಯಾಮಾರಿ ಅಂಗಾತ ಮಲ್ಕೊಂಡ್ರೆ ನೋವು
ಎಲ್ಲಾನು ಮರೆಯೋಕೆ ಹೋಗ್ಬಾರ್ದು ರೀ
ಕೆರೆಯೋಕೆ ಹುಣ್ ಒಂದು ಇರಬೇಕು ರೀ….

ಜಾನೀ ಮೇರಾ ನಾಮ್ – ಸರ್ಟು ಪ್ಯಾಂಟಿನಲ್ಲಿ ಒಂದೆರಡು ಬಟನ್ನಿಲ್ಲಾ

ಯೋಗರಾಜ್ ಭಟ್ 2011

ಸರ್ಟು ಪ್ಯಾಂಟಿನಲ್ಲಿ ಒಂದೆರಡು ಬಟನ್ನಿಲ್ಲಾ
ಕಾಲರ್ರು ಮಾತ್ರ ಮೇಲೆ ನಮ್ದು
ಜ್ವರ ಬಂದ ಹಾರ್ಟು ನಂದು ಒಂದೊಳ್ಳೆ ಕಂಬ್ಳಿ ಇಲ್ಲಾ
ಲೇಡಿಸು ಸಿಕ್ಕ್ರೆ ಸರಿ ಹೋಗ್ಬೋದು
ಗುಲಾಬಿ ಪ್ಲವರ್ರು , ತಲೆ ಕೈಲಿ ಹಿಡ್ಕೊ ಬ್ರದರ್ರು
ನಮ್ಮಲ್ಲಿ ಹುಡುಗಿರು ತುಂಬಾನೇ ಹುಸಾರು
ಹಾರ್ಟು ತೆಗೆದು ಕೈಗೆ ಇಟ್ಟ್ರು ಬೀಳೋದಿಲ್ಲಾ
ಜಾನೀ ಮೇರಾ ನಾಮ್ ಪ್ರೀತೀ ಮೇರಾ ಕಾಮ್ (೨)
ಸರ್ಟು …………… ಹೋಗ್ಬೋದು

ಫ್ರೆಂಡ್ಸೆಲ್ಲಾ ಹೇಳ್ರಪ್ಪಾ ನಾನು ಇದೆ ಥರಾ , ಲವ್ವು ನಂಬ್ಕೊಂಡು ಯಾರ್ನೊ ಕಾಯ್ಕೊಂಡು ಹೃದಯಾ ಕೆರ್ಕೋಬೇಕಾ
ನನ್ನಂತಾ ಬ್ಯಾಚುಲರ್ ಹಿಂಗೆ ಪದೇ ಪದೇ, ಎಜು ಇಟ್ಕೊಂಡು ಗ್ಯಾಪು ಕೊಟ್ಕೊಂಡು ಹೊಗೆಯಾ ಹಾಕ್ಕೊಬೇಕಾ
ಈವರೆಗೆ ಡ್ಯಾನ್ಸು ಮಾಡಿರುವೆ ಬ್ಯಾಂಡೇ ಇಲ್ಲಾ ಅದು ಮಗನ ಹಾಗೆ ಬದುಕಿರುವೆ ಹೆಣ್ಣೇ ಇಲ್ಲಾ
ಜಾನಿ ಡಾರ್ಲಿಂಗ್ ಡೈಲೀ ಮಾರ್ನಿಂಗ್ ಯಾಕೆ ನೀನು ಫೇರ್ ಎಂಡ್ ಲವ್ಲಿ ಹಚ್ಚೋದಿಲ್ಲಾ
ಜಾನೀ ಮೇರಾ ನಾಮ್ ಪ್ರೀತೀ ಮೇರಾ ಕಾಮ್ (೨) ||೧||

ಹೆಣ್ಮಕ್ಳು ಕೇಳ್ಬೇಕು ನಾನು ಕುರಿ ಥರಾ , ಮ್ಯಾರೇಜ್ ಆಗ್ಬಿಟ್ರೇ ಚಿಲ್ರ್ ನ್ ಮಾಡ್ಬುಟ್ಟು ಸ್ಕೂಲು ಸೇರಿಸ್ತೀನಿ
ನಿಮ್ಮಾಣೇ ನಾನೆಂದು ಖಾಲಿ ಬಿಡೋದಿಲ್ಲಾ ನಿಮ್ಮಾ ಹೊಟ್ಟೆನಾ ವೈಟು ರೊಟ್ಟಿನಾ ಹೆಂಗೋ ಗಿಟ್ಟಿಸ್ತೀನಿ
ಅಮ್ಮಾ ಇಂಥಾ ಒಳ್ಳೆ ಹಸ್ಬೆಂಡು ಸಿಕ್ಕೋದಿಲ್ಲಾ ಇದು ತುಂಬಾ ಒಳ್ಳೆ ಆಫರ್ರು ಕ್ಲೋಜಾಗಲ್ಲಾ
ಜಾನಿ ಡಾರ್ಲಿಂಗ್ ಡೈಲೀ ಈವನಿಂಗ್ ಹೆಂಡ್ತಿ ಮುಕ ನೋಡೋದಷ್ಟು ಈಸಿ ಅಲ್ಲಾ
ಜಾನೀ ಮೇರಾ ನಾಮ್ ಪ್ರೀತೀ ಮೇರಾ ಕಾಮ್ (೨) ||೨||

ಅಂಜದ ಗಂಡು (1988) – ಏಕೆ ಹೀಗಾಯ್ತೋ

ಗಂಡು:
ಏಕೆ ಹೀಗಾಯ್ತೋ ನಾನು ಕಾಣೆನು
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ

ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ

ಏಕೆ ಹೀಗಾಯ್ತೋ ನಾನು ಕಾಣೆನು
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ

ಆ ನೋಟದಲೀ ಅದು ಏನಿದೆಯೋ..
ತುಟಿ ಅಂಚಿನಲೀ ಸವಿ ಜೇನಿದೆಯೋ…

ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ

ನೀ ನಗುವಾಗ…ಜರತಾರಿ ಹೊಸ ಸೀರೆ ಉಟ್ಟು ಬಳುಕಾಡಿ ಬಂದೆ…
ನೀ ಮುಡಿದಾಗ…ಮೊಳದುದ್ದ ಜಡೆ ತುಂಬ ಮಲ್ಲೆ ಮುಡಿದೆನ್ನ ಸೆಳೆದೆ…

ಉಸಿರಾಟ ಮರೆತು ಹೋಯಿತು
ಬೇರೇನು ಕಾಣದಾಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು

ಹೆಣ್ಣು:
ಏಕೆ ಹಿಗಾಯ್ತೋ ನಾನು ಕಾಣೆನು
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ

ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ

ಈ ಹೊಸದಾದ… ಆನಂದ ತಂದಂತ ಮತ್ತಿನ ಮುತ್ತನ್ನ ತಂದೆ
ಆ ನೆನಪಲ್ಲೆ… ಹೊಸದಾದ ಅನುರಾಗ ನನ್ನ ಎದೆಯಲ್ಲಿ ತಂದೆ

ಈ ನಾಡಿ ನಿಂತು ಹೋಯಿತು
ನಾ ಯಾರೋ ಮರೆತು ಹೋಯಿತು
ನಿನ್ನಲಿ ನನ್ನ ಈ ಜೀವ ಸೇರಿತು

ಗಂಡು:
ಏಕೆ ಹಿಗಾಯ್ತೋ ನಾನು ಕಾಣೆನು
ಹೆಣ್ಣು:
ಪ್ರೀತಿ ಮನದಲ್ಲೀ ಹೇಗೆ ಮೂಡಿತೋ
ಗಂಡು:
ಆ ನೋಟದಲಿ ಅದು ಏನಿದೆಯೋ..
ಹೆಣ್ಣು:
ತುಟಿ ಅಂಚಿನಲಿ ಸವಿ ಜೇನಿದೆಯೋ…
ಗಂಡು:
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಹೆಣ್ಣು:
ಜೇನು ಹೀರಿದ ದುಂಬಿಯ ಸೇರಿದೆ ನನ್ನ ಈ ಮನ

ಅಂಜದ ಗಂಡು (1988) – ಏನ್ ಹುಡ್ಗೀರೊ ಇದ್ ಯಾಕಿಂಗಾಡ್ತೀರೊ

ಮಂಜುನಾಥ್: ಏನ್ ಹುಡ್ಗೀರೊ ಇದ್ ಯಾಕಿಂಗಾಡ್ತೀರೊ
ಲವ್ವು ಲವ್ವು ಲವ್ವು ಅಂತ ಕಣ್ಣೀರಿಡ್ತೀರೊ …೨

ವಾಣಿ: ಕಣ್ಣೀರಲ್ಲಾ..ಆ ಕಣ್ಣೀರಲ್ಲಾ
ಪನ್ನೀರ ಮಳೆಯೊ ನನ್ನ ಪ್ರಿಯನಿಗೆ ನೆನಪಿನಾಭಿಷೇಕ

ಎಸ್.ಪಿ.ಬಿ: ಕೇಳೆ ಗೆಳತಿ ಈ ನಿನ್ನ ನೆನಪೇ
ನನ್ನ ಬದುಕಿಗೆ ಆಸರೆ ಕೊನೆ ತನಕ

ಮನ್ಜುನಾಥ್: ಏನ್ ಹುಡ್ಗೀರೊ ಇದ್ ಯಾಕಿಂಗಾಡ್ತೀರೊ
ಲವ್ವು ಲವ್ವು ಲವ್ವು ಅಂತ ಕಣ್ಣೀರ್ ಇಡ್ತೀರೊ

ಲವ್ವು ಅಂದ್ರೆ ನವ್ವು
ಕಷ್ಟ ನಷ್ಟ ಇದ್ದರೇ
ಯಾಕೆ ಬೇಕಿ ವನವಾಸಾ

ವಾಣಿ: ತಿಳಿದೊ ತಿಳಿಯದೇನೊ
ಇದರ ಬಲೆಗೆ ಬಿದ್ದರೆ
ತಪ್ಪದು ವಿರಹದ ಸೆರೆವಾಸ
ಸಾವಿಗಾಗಿ ನಾನು ಅಂಜಲಾರೆ
ಅಳುಕಲಾರೆ ಈ ಜೀವ ಹಿಂಡೊ
ವಿರಹವನ್ನು ಸಹಿಸಲಾರೆ
ತಾಳಲಾರೆ ನಾನು ತಾಳಲಾರೆ

ಎಸ್.ಪಿ.ಬಿ: ನಿನ್ನ ಕಣ್ಣಿನಾಳದಲ್ಲಿ ಬಿಂಬವಾಗಿ ನಾನು ನಿಲ್ಲುವೆ
ಕಣ್ಣ ರೆಪ್ಪೆ ಮುಚ್ಚಿ ನನ್ನ ಪ್ರೀತಿ ಮಾಡು ವಿರಹ ಗೆಲ್ಲುವೆ

ಮಂಜುನಾಥ್: ಏನ್ ಹುಡ್ಗೀರೊ ಇದ್ ಯಾಕಿಂಗಾಡ್ತೀರೊ
ಲವ್ವು ಲವ್ವು ಲವ್ವು ಅಂತ ಊಟಾ ಬಿಡ್ತೀರೊ …೨

ವಾಣಿ: ಹಸಿವಿನ ಚಿಂತೇ..ಯೇ
ಹಸಿವಿನ ಚಿಂತೇ ಪ್ರೀತಿಗೆ ಬರದೊ
ನನ್ನ ದೊರೆಗಿದು ಪೂಜೆಯ ನೈವೇದ್ಯ

ಎಸ್.ಪಿ.ಬಿ: ಕೇಳೆ ಗೆಳತಿ ಬಾಯಾರಲಿಲ್ಲ
ನಿನ್ನ ನೆನಪಲಿ ಹಸಿವಿನ ಅರಿವಿಲ್ಲಾ

ಮಂಜುನಾಥ್: ತಿಂಡಿ ತೀರ್ಥ ಬಿಟ್ಟು
ಲವ್ವು ಮಾಡೊ ಕೆಲಸಕೆ
ಏನು ಲಾಭವಿದೆ ಮಹಾ ತಾಯಿ

ವಾಣಿ: ಒಂದೆ ನೀತಿ ಒಂದೆ ಜಾತಿ ಅನ್ನೊ ಮಂತ್ರಕೆ
ಪ್ರೀತಿ ಒಂದೆ ವಿಜಯದ ಸ್ಥಾಯಿ
ಭೂಮಿ ಮೇಲೆ ಇನ್ನು ಗಾಳಿ ಇದೆ ನೀರು ಇದೆ
ಆ ಬೆಂಕಿ ಕೂಡ ಪ್ರೀತಿಯಿಂದ ಸುಮ್ಮನಿದೆ
ಕೆರಳದಿದೆ ಪ್ರಳಯವಾಗದಿದೆ

ಎಸ್.ಪಿ.ಬಿ: ನನ್ನ ತೋಳಿನಲ್ಲಿ ನೀನು ಇದ್ದ ಮೇಲೆ ಭೂಮಿ ಬಿರಿಯಲಿ
ಒಂದು ಹೊತ್ತು ನಿನ್ನ ಮುತ್ತು ಸಿಕ್ಕ ಮೇಲೆ ಪ್ರಳಯವಾಗಲಿ

ಮಂಜುನಾಥ್: ಏನ್ ಹುಡ್ಗೀರೊ ಇದ್ ಯಾಕಿಂಗಾಡ್ತೀರೊ
ಲವ್ವು ಲವ್ವು ಲವ್ವು ಅಂತ ಕಣ್ಣೀರ್ ಇಡ್ತೀರೊ …೨

ವಾಣಿ: ಕಣ್ಣೀರಲ್ಲಾ…ಆ ಕಣ್ಣೀರಲ್ಲಾ
ಪನ್ನೀರ ಮಳೆಯೊ ನನ್ನ ಪ್ರಿಯನಿಗೆ ನೆನಪಿನಾಭಿಷೇಕ

ಎಸ್.ಪಿ.ಬಿ: ಕೇಳೆ ಗೆಳತಿ ಈ ನಿನ್ನ ನೆನಪೆ
ನನ್ನ ಬದುಕಿಗೆ ಆಸರೆ ಕೊನೆ ತನಕ