Category Archives: ಚಿತ್ರ ನೋಡಿ ಕವನ ಬರೆಯಿರಿ

ಚಿತ್ರ ನೋಡಿ ಕವನ ಬರೆಯಿರಿ – 19


ಇದು ಬಾಲ್ಯದ ನೆಚ್ಚಿನ ಆಟ
ಸುಂದರ ಸೂರ್ಯಾಸ್ತದ ನೋಟ
ಬಾಲಕನ ಹುಡುಗಾಟ
ಛಾಯಾಗ್ರಾಹಕನ ಕೈಚಳಕ

ಕತ್ತಲು ಬೆಳಕಿನ
ಕಣ್ಣಾಮುಚ್ಚಾಲೆ
ಕವನ ಬರೆಯಲು
ಸ್ಪೂರ್ತಿಯ ಸೆಲೆ
-ಶಿಶಿರ್ ಹೆಗಡೆ

*****************
ದಿನವು ಹುಟ್ಟಿ ಬಂದು
ಬದುಕಿನೊಂದು
ಕದಿವ
ಕಳ್ಳ ಸೂರ್ಯ
ಇಂದು ಸಿಕ್ಕಿ ಬಿಟ್ಟ
ಬಿಟ್ಟರವನ ಮತ್ತೆ ಸಿಕ್ಕ
ಎಂದು
ಅವನ
ಪುಟ್ಟ ಕಟ್ಟಿಬಿಟ್ಟ
-ಸುನಿತಾ ಮಂಜುನಾಥ್

*******************
ಬಾಲ್ಯವು ಸವಿದ ಸುಂದರ ನೆನಪು
ಮುಗ್ಧತೆ ಮನಸು ಹೆಣೆದ ಕನಸು
ಬಾನಾಡಿಗಳು ಮಲಗೋ ಸಮಯ
ರವಿಯು ಕಾನನದ ತಪ್ಪಲಲಿ ಬೆರೆತಿಹನು
ಮುದ್ದು ಮಗುವು ಸೆರೆಹಿಡಿದಿರಲು ದಿನಕರನ
ಕಸಿಯ ಬಯಸಿತು ಮಗದೊಂದು ಕಂದ
ಮರವು ತಟಸ್ಥಗೊಂಡಿತು
ಮುದ್ದು ಜೀವದ , ಹಟದ ಮಾತು ಕೇಳಿ
ಓಡುತಿದೆ ಜೀವನ ಆ ಚಕ್ರದಂತೆ
-ಮಾಲಿನಿ ಭಟ್

**********************
ಸ೦ಜೆಯ ಸೂರ್ಯ ಮುಳುಗುವ ಹೊತ್ತು,
ಕತ್ತಲು ಕವಿಯುತಿದೆ ಎಲ್ಲೆಲ್ಲು,
ಹೆಜ್ಜೆ ಹಾಕುತ್ತಿರುವೆ ನಿಮ್ಮೆಡೆಗೆ ಗೆಳೆಯರೆ,
ಸಾಗುತಿರಲಿ ಈ ಹಾದಿ ಹೀಗೆ, ನಿಮ್ಮ ಪ್ರೀತಿಯ ಸ್ನೆಹವ ಹೊತ್ತು!!!!!
-ಅನ್ನಪೂರ್ಣ ನಾಯ್ಡು

**********************
ನಾ ಹೇಳಿಲ್ಲವೇ ನಾನೆಷ್ಟು ಬಲಶಾಲಿ ಎಂಬುದನ್ನ
ಹಿಡಿದಿರುವೆ ಚಕ್ರದಲಿ ಸೂರ್ಯನನ್ನ
ತಪ್ಪಿಸಿಕೊಳ್ಳುವಾಗ ಗಾಯದ ರಕ್ತ ತುಂಬಿತಾಕಾಶವನ್ನ
ನಾವಿನ್ನು ಹೋಗೋಣ, ಅಣ್ಣಾ ಬಿಟ್ಟುಬಿಡು ಪಾಪ ಅವನನ್ನ
ತಡವಾದರೆ ಬಂದಾಳು ಕತ್ತಲೆಯ ಗುಮ್ಮ
ಜೊತೆಯಲ್ಲೇ ಕೋಲು ಹಿಡಿದು ಬಂದಾಳು ನಮ್ಮಮ್ಮ
-ಮಮತಾ ಕೀಲಾರ್

***********************
ಹಗಲೆಲ್ಲಾ ಉರಿದು
ತ೦ಪಾದ ಮೇಲೆ ಬಿದ್ದಿಯಾ ನನ್ನ ಬುಟ್ಟಿಗೆ,
ನಾಳೆ ಬೆಳಗ್ಗೆ ಹ್ಯಾಗಪ್ಪ ನಿನ್ನ ತ೦ಗೊ೦ಡೊಗಿ
ಪೂರ್ವಕ್ಕೆ ನೇತು ಹಾಕೊದು
– ಕೃಷ್ಣಮೂರ್ತಿ

*********************
ಬಾಲ್ಯವೇ ನೀನೆಷ್ಟು ಬೇಗ ಸೂರ್ಯಾಸ್ತದಂತೆ ಸರಿದು ಹೋದೆ
ನಿನ್ನ ನಾನರಿಯುವ ಮುನ್ನ
ಆಡುವಿಕೆಯ ಹುಡುಗಾಟ ಮುಗಿಯುವ ಮುನ್ನ
ಟೈರಿನಾಟದ ಸಂಗಾತಿಯೊಂದಿಗೆ
ಮರಗಿಡಗಳಲಿ ಕೋತಿಯಾಟದಲಿ
ಜೂಟಾಟಗಳ ಒಡಾಟಗಳ ರಸ್ತೆಯಲಿ
ಸೂರ್ಯೋದಯದಿಂದ ಶುರುವಾಗುತ್ತಿದ್ದ ಆಟೋಟಗಳ ಸಂಭ್ರಮದಲ್ಲಿ
ಸೂರ್ಯಾಸ್ತವಾದುದೇ ತಿಳಿಯದೇ ಕಳಿಯಿತೇ ಭಾಲ್ಯ!
ಮತ್ತೆಂದೂ ಸಿಗದಂತೆ ದೂರವಾದೆಯಾ ಓ ಬಾಲ್ಯವೇ
ಭಾಗ್ಯವಂತರಿಗೆ ಮಾತ್ರ ಬಂಗಾರದ ಭಾಲ್ಯವಂತೆ
ಹಾಗಾದರೆ ನಾನು ಯಾರು ? ನಿರ್ಭಾಗ್ಯನೇ ?
-ಹಿಪ್ಪರಗಿ ಸಿದ್ದರಾಮ್

*******************
http://www.facebook.com/photo.php?fbid=1975766690222&set=o.195906690495079&type=3&theater

Advertisements

ಚಿತ್ರ ನೋಡಿ ಕವನ ಬರೆಯಿರಿ – 18


ಅಯ್ಯೋ!ಎಂತಹ ಕಾಲ ಬಂತು ಕೇಳ್ರಿ
ಕೋರ್ಟ್ ಆವರಣದಲ್ಲೇ ವಕೀಲರ ಪುಂಡಾಟ ನೋಡ್ರಿ
ರಕ್ಷಕನೇ ಬಕ್ಷಕನಾಗ್ಬಿಟ್ನನಲ್ರಿ
ಇನ್ನು ಸತ್ಯನ ಉಳಿಸೋದಾದ್ರೂ ಹೇಗ್ರಿ
ಇದಕೆ ಕಾಖಿ ಬಟ್ಟೇನವ್ರೂ ಶಾಮೀಲಿದ್ದಾರ್ರಿ
ಬೇಲಿನೆ ಎದ್ದು ಹೊಲ ಮೆಯೋಕ್ ಹತ್ತೈತ್ರಿ
ಮುಂದೆ ನ್ಯಾಯ ಕೇಳ್ಕೊಂಡ್ ಹೋದೊರ್ ಗತಿ ಏನ್ರಿ
ಆ ತಿರುಪತಿ ವೆಂಕಟನೆ ಭೂಮಿಗಿಳಿದು ಬರಬೇಕ್ರಿ
-ಮಮತಾ ಕೀಲಾರ್

********************
ಅಯ್ಯೋ.. ನೋಡಿ ಈ ಜನ..
ಇವರೇ ನಮ್ಮ ಸಜ್ಜನ…!!
ನ್ಯಾಯವಾದಿಗಳೋ..ಮಾಧ್ಯಮದವರೋ…
ವಿವೇಕಿಗಳೋ..ಅವಿವೇಕಿಗಳೋ..
ಮಾತೇ ಇವರ ವೃತ್ತಿ-ದಾಳ!
ಸಿಕ್ಕಿಕೊಂಡಾಯ್ತಿವರ ಬಂಡವಾಳ
ಅವರು ಹೇಳಿದ್ದೇ.. ಕಾನೂನು..!
ಇವರು ತೋರಿಸಿದ್ದೇ..ಮಾಧ್ಯಮ.!
ಇವರ ನಡುವೆ ಬಡಪಾಯಿ
ಸಾಮಾನ್ಯನ ಪರದಾಟ
ಕಣ್ಣು ಕಟ್ಟಿ ಕುಳಿತಿದೆ ನ್ಯಾಯ
ಕಾಕಿ.ಖಾದಿ.ಕಾವಿಯೊಡನೆ..
ಈ ಸಜ್ಜನರ ದುರ್ವ್ಯವಸ್ಥೆಯಲ್ಲಿ….!
-ಭಾಗೀರಥಿ ಚಂದ್ರ ಶೇಖರ್
********************
ವಕೀಲರೆ ನೀವು ಮನುಷ್ಯರನ್ನು ಕಂಡಿಲ್ವಾ!!
ಮನುಷ್ಯತ್ವವನ್ನು ಯಾರೂ ಹೇಳಿಕೊಟ್ಟಿಲ್ವಾ!!
ಮೀಡಿಯಾದವರೂ ನಿಮ್ಮಂತೆ ಮನುಜರಲ್ವಾ!!
ಹೇಳಿ ಸ್ವಾಮಿ… ನೀವು ಮಾಡಿದ್ದು ತಪ್ಪಲ್ವಾ???
-ಶಿಶಿರ್ ಹೆಗಡೆ

********************
http://www.facebook.com/photo.php?fbid=1944208861296&set=o.195906690495079&type=3&theater

ಚಿತ್ರ ನೋಡಿ ಕವನ ಬರೆಯಿರಿ – 17

ಹೆತ್ತವಳ ಮುಖ ನೋಡದೆ
ಮರುಗಿದೆ ಪುಟ್ಟ ಜೀವ
ಬಡತನದ ಭಾದೆ ತಾಳಲಾರದೆ
ಸುತ್ತುಹೊರಿದಿದೆ ಹಸಿವಿನ ಭಾವ
ಕರುಣೆ ಇಲ್ಲದ ಜಗತ್ತು
ತುತ್ತಿಲ್ಲದೆ ಒದಗಿದೆ ಆಪತ್ತು
ನಾಯಿಗೆ ಹಾಕಿದ ಅನ್ನವ
ನಾ ಉಣ್ಣತಿರಲು,
ಓಡಿಸಿದರು ಹಲವರು….
ಓ ದೇವರೆ ಕರುಣಿಸು ಹಸಿವಿಲ್ಲದ ಹೊಟ್ಟೆಯ……
ಕನಿಕರ ಬಾರದ ನೀ ಆದೆ ರಾಕ್ಶಸನ ತರ
ನಿನ್ನ ಜನುಮಕ್ಕೆ ನನ್ನ ಮನಸ್ಸಿನಿಂದ ಧಿಕ್ಕಾರ
Ravi Sakleshpur
+++++++++++++++++++++++++++++++++++++++

ಕಸಿದು ತಿನ್ನುವ ತಾಕತ್ತು ನನಗಿಲ್ಲ
ಆದರೂ ಹೊಟ್ಟೆ ಹಸಿದಿದೆಯಲ್ಲ
ಉಳ್ಳವರು ತಿಂದುಳಿದುದನು ಚೆಲ್ಲಿದರೇ ಹೊರತು
ನನ್ನೊಳಗಿನ ಹಸಿವಿನ ಕುರಿತು ವಿಚಾರಿಸಲಿಲ್ಲ
ನನ್ನ ಬಳಿ ಕರೆದು ತಿನ್ನಲೇನೂ ಕೊಡಲಿಲ್ಲ
ಆದರೂ ಅವರ ಬಗೆಗೆ ಮುನಿಸಿಕೊಳ್ಳುವುದಿಲ್ಲ
ಚೆಲ್ಲಿರುವ ಆಹಾರವಾದರೇನಂತೆ ನನ್ನ ಹಸಿವ ನೀಗಿಸುವುದಲ್ಲ
ಮಿಗಿಲಾಗಿ ಈ ತುತ್ತು ಭೂತಾಯಿಯ ಬಟ್ಟಲಿನಲ್ಲಿಹುದಲ್ಲ

—ಕೆ.ಗುರುಪ್ರಸಾದ್
Guruprasad Acharya
+++++++++++++++++++++++++++++++++++++++

ಬಹುಮಹಡಿ ಕಟ್ಟಡದ ಹವಾನಿಯಂತ್ರಿತ ಕೊಠಡಿಯಲ್ಲಿ ಮೃಷ್ಟಾನ ಬೋಜನವ ತಿಂದು ತೇಗುವವರು,
ಜನ್ಮದಿನದ ಷೋಕಿಗೆ ಕೋಟಿಕೋಟಿ ಚೆಲ್ಲಾಡುವವರು,
ಉಳ್ಳವರು,ಹೊಟ್ಟೆ ತುಂಬಿದವರು,ತೇಗಿ ತೂಕಡಿಸುವವರು ಒಮ್ಮೆ ಇತ್ತ ನೋಡಲಿ,
ಸಹಾಯಹಸ್ತ ಚಾಚಲಿ,ಹಸಿವ ಒಡಲ ತಣಿಸಲಿ
Nandish Bankenahalli
+++++++++++++++++++++++++++++++++++++++

ಹೊಟ್ಟೆ ತುಂಬಾ ಹಸಿಯುತ್ತಿದೆಯಲ್ಲ
ವ್ಹಾ ಇಷ್ಟಾದರೂ ಸಿಕ್ಕಿತಲ್ಲ
ಯಾರೋ ಹೊಟ್ಟೆ ತುಂಬಿದವರು ಚಲ್ಲಿದರೆನಂತೆ
ನನಗೆ ಇದು ಮೃಷ್ಟಾನ್ನ ಭೋಜನದಂತೆ
ಸರಿಯಾಗಿ ತಿಂದು ಎಷ್ಟು ದಿನವಾಯ್ತೋ
ಎಷ್ಟು ಜನಗಳ ಬೇಡಿಯಾಯ್ತೋ
ಯಾರು ಕೊಡಲಿಲ್ಲ ಒಂದು ತುತ್ತು ಅನ್ನ
ಕೇಳಿಸಿಕೊಳ್ಳಲಿಲ್ಲ ಒಬ್ಬನೂ ನನ್ನ ಹಸಿವಿನ ಆಕ್ರಂದನ
ಇಂದೇ ನನಗೆ ಶುಭದಿನ
ಹಾರೈಸುವೆ ಅನ್ನ ಚಲ್ಲಿದವನ
Mamatha Keelar
+++++++++++++++++++++++++++++++++++++++

ಬರೆದವರು ಯಾರು… ??
*****************************

ಚಿತ್ರ ನೋಡಿ ನೋಡಿ ಕವಿತೆ
ಬರೆಯಲು ಮಾಡಿದರೆ ಚಿಂತೆ
ಪದೇ ಪದೇ ಅದೇ ನೆನಪಾಗುತ್ತೆ
ಹಳೆಯ ಕನ್ನಡ ಚಲನಚಿತ್ರಗಳ ಕಥೆ

ಅದೊಂದು ಚಿತ್ರ ವಿಚಿತ್ರ ಜಿಮ್ಮಿಗಲ್ಲು
ಹಾಡಿದವರು ಡಾ.ವಿಷ್ಣುವರ್ಧನ್ ನೆನಪುಗಳು
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ಚಿತ್ರಗೀತೆಯ ನೆನಪಿನ ಚಿತ್ರಣ ಕಲ್ಪನೆಯ ಕವನ

ಅನ್ನವೆಂದೊಡನೆ ಅಮ್ಮನ ನೆನಪು ಸಹಜ
ಅದಕ್ಕಿಲ್ಲಿ ಹುಲಿಯ ನೆನಪಾಗುದು ಸಹ ನಿಜ
ಕಲಿಯುಗ ಭೀಮ ಚಿತ್ರದ ಟೈಗರ್ ಪ್ರಭಾಕರ್
ಚಿತ್ರದ ಹಾಡಿನ ನೆನಪು ಸಹ ಈ ಚಿತ್ರಕ್ಕೆ ಸೂಪರ್

ತುತ್ತು ಅನ್ನಕ್ಕಾಗಿ ಕಷ್ಟ ಪಟ್ಟ ಚಿನ್ನಾರಿ ಮುತ್ತ
ಪೇಟೆ ಸೇರಿ ಎಲ್ಲಾ ಮರೆತ ಮನದಲ್ಲಿ ಚಿಂತಿಸುತ
ಎಷ್ಟೊಂದ್ ಜನ, ಇಲ್ಲಿ ಯಾರು ನನ್ನೊರು ಅನ್ನುತ
ಪಾದುಕೆಗಳ ಕದಿಯುತ ಓಡುತ, ಪದಕ ಗೆಲ್ಲುತ

ಸಕಲ ಸ್ನೇಹಿತರಿಗೆ ದಾರಿದೀಪ , ಆದನು ಅಪರೂಪ
ತುತ್ತು ಅನ್ನಕ್ಕಾಗಿ ತಾತನ ಮಕ್ಕಳೆಲ್ಲರೂ ಅಲ್ಲಿ ಕಳ್ಳರು
ಆದರವರು ಓಡಿ ಓಡಿ ಕೊನೆಯಲ್ಲಿ ಎಲ್ಲರ ಮನ ಗೆದ್ದರು
ಈ ಚಿತ್ರಕ್ಕೆ ಚಲನಚಿತ್ರಗಳ ನೆನಪಿನ ಮುಗಿಯದ ಕವನ .. 🙂

ಬರೆದವರು ಯಾರು… ??
|| ಪ್ರಶಾಂತ್ ಖಟಾವಕರ್ ||
Prashanth P Khatavakar
+++++++++++++++++++++++++++++++++++++++

ನೀನು ಎಸೆಯುವ ತುತ್ತು……..
ನನ್ನ ಹೊಟ್ಟೆಗೆ ಮುತ್ತು….
ಸಿಗದೇ ಹೋದರೆ ತುತ್ತು ಈ ಹೊತ್ತು…
ನನ್ನ ಜೀವಕ್ಕೆ ಕುತ್ತು…
ತಿಳಿಯದೆ ಹೋದರೆ ಅನ್ನದ ಬೆಲೆ…
ಮಾನವತೆಗೆ ಆಪತ್ತು………
ನಿನಗೆ ಇದು ಬರಿ ಅನ್ನ
ನನಗೆ ಇದು ಕೈಗೆಟುಕದ ಚಿನ್ನ….
Sunitha Manjunath
+++++++++++++++++++++++++++++++++++++++

ಅವ್ವ-ಅಪ್ಪ ಎನ್ನಲು ಯಾರಿಲ್ಲ
ಬಂಧು-ಬಳಗ ಅನ್ನಲು ಕಸುವಿಲ್ಲ
ತುತ್ತು ಕೂಳಿಗೆ ಬರವಿಲ್ಲ
ನನಗಂತೂ ತಿನ್ನಲು ಬಾಯಿಲ್ಲ
ತಿಪ್ಪೆಗೆಸೆಯಲು ಲಾಯಕ್ಕು ನಾನು ತಿನ್ನುತ್ತಿರೋ ಈ ಅನ್ನ
ಆದರೂ ನಾನೆಸೆಯಲಾರೆ ,
ನನ್ನ ಹೆತ್ತವರು ನನ್ನೆಸೆದಂತೆ…ಇದನ್ನು.!!!

ಮಾನಮುಚ್ಚಲು ಚೆಡ್ಡಿಯಿಲ್ಲ-
ಸ್ನಾನ-ಶುಚಿ-ರುಚಿ ಎಂಬುದು ನನಗರಿವಿಲ್ಲ
ಯಾಕೆ ಬೇಕು?
ಅದು ನನಗೆ ನನ್ನವರೆನ್ನೋರು
ಇಲ್ಲದ ಮ್ಯಾಲೆ!!
ಆ ಚಿಂತೆ ನನಗಿಲ್ಲ…ಯಾಕೆಂದರೆ
ಈ ಸಮಾಜದವರಿದ್ದಾರಲ್ಲ??..
ಅವರಿದ್ದ ಮ್ಯಾಲೆ
ಇನ್ಯಾವುದೂ ಬೇಕಿಲ್ಲ….

ಕಾಗೆ ಒಂದಗುಳ ಕಂಡರೆ ಕರೆವುದು
ತನ್ನ ಕುಲಬಾಂಧವರನು ಹಂಚುಣ್ಣಲು..
ನಾಯಿಯಂತಹುದು ಪೋಷಿಸುವುದು
ತನ್ನ ಮರಿಮೊಮ್ಮಕ್ಕಳನು..
ನನ್ನ ಹೆತ್ತವರಿಗಿರಲಿಲ್ಲವೇಕಯ್ಯ??
ಇಷ್ಟಾದರೂ ಮಮತೆ??
ಇರಲಿ ಬಿಡು …
ಇದ್ದಾಗ
ಅವರಿಗವರದೇ ಚಿಂತೆ
ಬೇಕಿಲ್ಲವಾಗುವುದು ಮಕ್ಕಳ ಪಾಲನೆ ಎಂಬ ಕಂತೆ
ಛೆ! ಇದೊಂಥರಾ ಒಂದು ಚಿಂತೆಯಿಲ್ಲದ ಸಂತೆ…

–ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ.
Haniyuru ChandreGowda Channapatna
+++++++++++++++++++++++++++++++++++++++

http://www.facebook.com/photo.php?fbid=1932509488819&set=o.195906690495079&type=1&theater

ಚಿತ್ರ ನೋಡಿ ಕವನ ಬರೆಯಿರಿ – 16

ಕಲ್ಲಿನ ನಡುವೆಯೂ
ಮೂಡಿದೆ ಹೆಣ್ಣಿನ ಛಾಪು…!

ಓ ಪ್ರಕೃತಿಯೇ
ಏನೋ ನಿನ್ನ ಮಾಯೆ..!

ಈ ಕಲ್ಲಿನಂತಲ್ಲ ಅವಳ ಮನಸ್ಸು..
ಕ್ಷಮೆಗೆ ಮತ್ತೊಂದು ಹೆಸರೇ ಹೆಣ್ಣು..!
 Bhagirathi Chandrashekar
+++++++++++++++++++++++++++++++++++++++

ವಿವಿಧ ಕಲ್ಲುಗಳ ಜೋಡಣೆಯಿಂದ ಮೂಡಿದೆ ಹೆಣ್ಣಿನ ಆಕೃತಿಯು
ಎಂಥಹ ಸೋಜಿಗವಿದು ಪ್ರುಕೃತಿಯ ಕೊಡುಗೆಯು
ಒಂದು ಕಲ್ಲಿನಂತೆ ಇನ್ನೊಂದಿಲ್ಲ ಮನುಷ್ಯನ ಬೆರಳಿನಂತೆ
ಕಲಾವಿದನ ಕೈ ಸೇರಿದರೆ ಅರಳುವದು ಹೆಣ್ಣಿನ ಮನಸ್ಸಿನಂತೆ
Mamatha Keelar
+++++++++++++++++++++++++++++++++++++++

ಕಲ್ಲರಳಿ ಹೆಣ್ಣಾಗಿ….
ಕವಿ ಮನಕೆ ಬೆಳಕಾಗಿ…
ಕವನಕ್ಕೆ ಭಾವವಾಗಿ …
ಬಳುಕಿ ನಿಂತ ಶಿಲೆಯೇ….
ಕಲ್ಲಲ್ಲ ನೀ ಕಲೆಯ ಬಲೆಯೆ
Sunitha Manjunath
+++++++++++++++++++++++++++++++++++++++

ಹೇಳುವರು ನಿನ್ನದು ಕಲ್ಲೆದೆಯೆಂದು
ತೆಗಳಿದರು ಕಲ್ಲು ಮನ ನಿನದೆಂದು
ಆದರೆ ಅವರಿಗೇನು ಗೊತ್ತು
ದ್ವೇಷ ಅಸೂಯೆಯ ಗಾಳಿ ಮಳೆಯಿಂದಾಗಿ
ಇಡೀ ದೇಹವೇ ಕಲ್ಲಾಗಿದೆಯೆಂದು

ಪ್ರೀತಿಯ ಗಾಳಿ ಬೀಸಲಿ
ಸ್ನೇಹದ ಮಳೆ ಸುರಿಯಲಿ
ಹೊಸ ಚಿಗುರು ಹೊಸ ಕನಸು ಹುಟ್ಟಲಿ
ಕಲ್ಲರಳಿ ಹೂವಾಗಲಿ
Manjunath Reddy
+++++++++++++++++++++++++++++++++++++++

ನೀ ನಡೆಸಿದ ಹೋರಾಟಕ್ಕೆ ದಕ್ಕಿದ ಫಲವಿದೇನಾ ಗೆಳತಿ…?
ಆಳಿಗೊಂದು ಕಲ್ಲೆಸೆದು ಕಡೆಗಣಿಸಿದರಾ ನಿನ್ನ ಹೆಬ್ಬಂಡೆಯಂತಹ ಶಕ್ತಿ…..?
ಮಾತಾಡದೆ..ಮಾತುಗಳು ಕೇಳಲಾಗದೆ ಕಲ್ಲಾಯಿತೆ ಆ ಸೌಮ್ಯ ಹೃದಯ..?

ನೀ ಕುಗ್ಗದಿರು…ಓ ನನ್ನ ಗೆಳತಿ…
ಜೊತೆಗೂಡಿ ಬರೆಯೋಣ ನಮ್ಮದೊಂದು ನೀತಿ..!!
ನಿನ್ನ ಪ್ರತಿ ಹೆಜ್ಜೆಗೂ ಜೊತೆಯಾಗಿ ತರುವೆ ನನ್ನ ಪ್ರೀತಿ….ಮೌನ ಬಿಡು ಓ ಗೆಳತಿ
Aishwarya S Murthy
+++++++++++++++++++++++++++++++++++++++

http://www.facebook.com/photo.php?fbid=1921266727757&set=o.195906690495079&type=1&theater

ಚಿತ್ರ ನೋಡಿ ಕವನ ಬರೆಯಿರಿ – 15

ಜೀವನ ಒಂದು ಹಾವು ಏಣಿ ಆಟ
ಇದರ ಓಳಾರ್ಥ ಬಲ್ಲವರಿಲ್ಲ ಇದು ನಿಕಟ
ಗೆಲ್ಲಲು ಶತ ಪ್ರಯತ್ನ ಪಡುವರು ಸಾವಿರ
ಸೋಲಿನ ಭಾದೆಯಲ್ಲಿ ಮುಳುಗಿದರು ಇದೇ ಬೇಸರ
ಜೀವನ ಅಘೋರ ಯಾರು ಬಲ್ಲರು
ಗೆದ್ದ ಮನಸ್ಸುಗಳೇ ಇಲ್ಲಿ ಜಗ ಜಟ್ಟಿ ಮಲ್ಲರು

ಹುಟ್ಟು ಸಾವು ನಿಶ್ಚಿತ ಇದುವೆ ಜಗದ ನಿಲುವು
ಜೀವನದಲ್ಲಿ ನೀ ಸಾಧಿಸು ಸಿಗುವುದು ಎಲ್ಲರ ಒಲುವು
ಹತ್ತು ನೀ ಯಶಸ್ಸನ್ನು ಸಾಧಿಸು ನೀ ಎಲ್ಲವನ್ನು
ನಿನ್ನ ಬದುಕಾಗುವುದು ಸುಂದರ, ಗೆಲ್ಲುವೆ ಜಗವನ್ನು
Ravi Sakleshpur

***************************************

ಬದುಕಿನ ಸಂತೆಯಲಿ
ಹಾವು ಏಣಿಯಾಟದಲಿ….
ಕಷ್ಟ ಕೋಟಲೆಗಳ ಸರಿಸೃಪಗಳ ಜೊತೆ
ಸಾಧನೆಯ ಮೆಟ್ಟಿಲುಗಳಿರಳು…
ಅಂಜಿಕೆಯೇಕೆ ಮನವೇ…
ಸಂತೆಯ ಕಂತೆ ಒಗೆಯುವ ಮೊದಲು…
ಎದ್ದು ನಿಲ್ಲು
ಗೆದ್ದು ನಿಲ್ಲು.
Sunitha Manjunath

***************************************

ಕ್ಷಣವೂ ಎದುರಿಸಬೇಕು ಬದುಕಬೇಕೆಂದರೆ ಹಾವು-ಏಣಿಯಾಟವ
ಕ್ಷಣಕಾಲ ಮೈಮರೆತರೆ ಆಗುವುದು ಬದುಕು ಫಿನಿಷ್

ಬಣ್ಣದ ಹಾವುಗಳು ಕಚ್ಚಿ ಕೆಡವಲು ಹವಣಿಸುತ್ತಿರುವವು
ಸಣ್ಣ ಏಣಿಗಳ ಸಹಾಯಕ್ಕೆ ಮನಗಳು ಯೋಚಿಸುತ್ತಿರುವವು

ಹೊಂಚು ಹಾಕುತ್ತಿವೆ ; ಹೊಸ ಕಷ್ಟ-ಕೋಟಲೆಗಳು
ಹಿಂಜರಿಕೆಯಿಲ್ಲ ; ನವನವೀನ ಪ್ರಯೋಗಗಳ ತಯಾರಿಕೆಗಳು

ಯಾವ ಏಣಿ, ಯಾವ ಮನೆ, ಯಾವ ಅಂಕಿ ನನಗೆ ಹಿತ
ಯೋಚನೆ, ಯೋಜನೆ, ತಂತ್ರ, ಪ್ರತಿತಂತ್ರಗಳ ಪ್ರಯೋಗ ಸನ್ನಿಹಿತ

ಬದುಕು ಸಂತೆಯಂತೆ ! ಆರಂಭವಾಗಿದ್ದು ಅಂತ್ಯವಾಗಲೇಬೇಕಂತೆ
ಗುರಿ ಮುಟ್ಟುವ ತನಕ ಅಂತ್ಯದ ಆಲೋಚನೆ ಬೇಡವಂತೆ

ಬದುಕಿನ ಒಳಾರ್ಥವ ತಿಳಿದವರಿಲ್ಲವಂತೆ
ಬದುಕೆಂದರೆ ಹೀಗೇ ಅರ್ಥೈಸಿಕೊಳ್ಳಲು ಹೋದರೆ ಕೈಗೆ ಸಿಗುವುದೇ ಇಲ್ಲ

ಬಣ್ಣದ ಕನಸುಗಳ…ಕಮಾನುಗಳ…ಗಿರಮಿಟ್ಟು
ಜೀವನವೆಂದರೆ ಪಂಚರಂಗಿ ಆಟೋಟಗಳ ಕಟ್ಟು

ಹಿಂಜರಿಕೆ ಬೇಡ ; ಮುನ್ನುಗ್ಗುವುದೊಂದೇ ದ್ಯೇಯ
ಏಳು-ಬೀಳಿನ ಆಟದಲ್ಲಿ ಗೆಲ್ಲುವುದೊಂದೆ ಗುರಿ

ಎದ್ದಾಗ ಎದೆಸಟಿಸಬೇಡ ; ಬಿದ್ದಾಗ ಬೆದರಬೇಡ
ಸೋಲು-ಗೆಲುವು ಸಮರಸವೆಂದು ಸುಮ್ಮನಿರಬೇಡ

ಪ್ರಯತ್ನಿಸುವುದು ಆರೋಗ್ಯಕರ ಜೀವನ ವಿಧಾನ
ಅತೀಆತ್ಮವಿಶ್ವಾಸದಿಂದ ಆಗದಿರು ನಿಧಾನ !
Hipparagi Siddaram

***************************************

ಬದುಕೇ ಒಂದು ಆಟದ ಮೈದಾನ..
ನಾವೆಲ್ಲ ಆಡುತ್ತಲೇ ಇರುವೆವು
ಅವನಾಕಿದ ದಾಳಕ್ಕೆ…!

ನಾವಂದು ಕೊಂಡದ್ದೇ
ಒಂದಾದರೆ…
ಅವನಾಟವೇ ಬೇರೆ….!

ಯಾವುದೋ ಹುಮ್ಮಸ್ಸಿನಲಿ
ಗುರಿ ತಲುಪುವಾತುರದಲಿ..
ಏರು-ಪೇರುಗಳೊಡನೆ ಸೆಣೆಸುತ್ತಲೇ ಇರುವೆವು..!

ಅಂದು ಮಕ್ಕಳಾಗಿ ಆಡಿದೆವು
ಹಾವು-ಏಣಿಯಾಟ..
ಇಂದು ಆಡುತ್ತಲೇ ಇದ್ದೇವೆ..ಅದೇ ಆಟ..!

ಅಂದು ಗುರಿ ಮುಟ್ಟಲು ದಾಳ ನಮಕೈಲಿತ್ತು..
ಆದರಿಂದು ದಾಳ ಅವ ಹಿಡಿದ
ಸೂತ್ರಧಾರ ಅವನು.. ಬರೀ ಪ್ರಯತ್ನ ಮಾತ್ರ ನಮ್ಮದು
Bhagirathi Chandrashekar

***************************************

ಜೀವನ ಒಂದು ಆಟದ ಮೈದಾನ
ಅದರಲ್ಲಿ ನಾವು ತೃಣಕ್ಕೆ ಸಮಾನ
ನಮ್ಮ ಪಯಣ ವಿಧಿ ಲಿಖಿತ
ನಮ್ಮನ್ನು ಆಡಿಸುತ್ತಾನೆ ಮೇಲಿರುವಾತ

ಆಟದಲ್ಲಿ ಸೋಲು-ಗೆಲುವು ಸಾಮಾನ್ಯ
ಜೀವನದಲ್ಲಿ ಇದ್ದರೆ ಏರಿಳಿತಗಳ ಸಾಂಗತ್ಯ
ಯಶಸ್ಸು ದೊರಕುತ್ತದೆ..ಇದು ಸತ್ಯ
ಒಳದಾರಿಯಲ್ಲಿ ಸಿಕ್ಕ ಯಶಸ್ಸು ಬರೀ ಮಿತ್ಯ
Shishir Hegde

***************************************

ಬದುಕೊಂದು ಹಾವು ಏಣಿ ಆಟದಂತೆ
ದಾಳ ಮಾತ್ರ ನಮ್ಮ ಕೈಯಲ್ಲಿ ಇಲ್ಲವಂತೆ
ಮೇಲೇರಿದವ ಕೆಳಗೆ,ಕೆಳಗಿದ್ದವೆ ಮೇಲೆ
ಹೋಗಲೇಬೇಕು ಅವ ದಾಳ ಎಸೆದಂತೆ
ಕಷ್ಟಗಳೆಂಬ ಹಾವಿಗಂಜಿ ಓಡದೆ
ಸುಖವೆಂಬ ಏಣಿ ಏರಿದಾಗ ಉಬ್ಬದೆ
ಸಮಚಿತ್ತದಲ್ಲಿ ನಡೆದಾಗ ಗೆಲುವೆಂಬುದು ನಮ್ಮದೇ
Mamatha Keelar

***************************************

http://www.facebook.com/groups/kannadavesatya/249046251847789/?notif_t=like

ಚಿತ್ರ ನೋಡಿ ಕವನ ಬರೆಯಿರಿ – 14

ನನ್ನ ಮನೆಯಲ್ಲೀಗ
ಬಂದು ಬಿಟ್ಟಿದೆ
ಕಣ್ಣೀರಿನ ಪ್ರವಾಹ
ಕಾರಣ…
ನೆಚ್ಚಿನ ಧಾರಾವಾಹಿಯಲಿ
ಸಾವಿಗೀಡಾದ ನಾಯಕಿಯ
ಬಗ್ಗೆ ನನ್ನವಳಿಗಿರೋ ವ್ಯಾಮೋಹ

Guruprasad Acharya
==================================
ಮನೆಯೊಳು ನುಗ್ಗಿ ನೀರು
ಮನದೊಳು ಚಿಂತೆ ನೂರು
ಹವಾಮಾನ ಸುದ್ದಿ ಜೋರು
ವಾತಾವರಣ ಏರು ಪೆರು .. !!

ಪರಿಹಾರ ಕೊಡುವುದು ಯಾರು
ಅರ್ಧ ಪಾಲು ಬಯಸುವವರು
ಹಿಂದಕ್ಕೊಮ್ಮೆ ಮುಂದಕ್ಕೊಮ್ಮೆ
ತೂಗುಯ್ಯಾಲೆ ಈ ಜೀವನ

Prashanth P Khatavakar
==================================
ಆಕಾಶವು ಬೀಳಲಿ ಮೇಲೆ…
ಭೂಮಿಯೆ ಬಾಯ್ ಬಿಡಲೇ ಇಲ್ಲೇ.
ನಾವೆಂದು ಏಳೆವು ಇಲ್ಲಿಂದ..!

ನದಿ-ಹೊಳೆಯೇ ಹರಿಯಲಿ ಇಲ್ಲಿ..
ಬೆಂಕಿಯೆ ಹತ್ತುರಿಯಲಿ ಇಂದಿಲ್ಲಿ.
ನಮಗೇನು ಕಾಣಿಸದು…!

ಎಂಥ ಸೆಳೆತ ಈ ಟಿ.ವಿ.ಯದು
ನಮಗೋ.. ನಿಮಗೋ.. ಅವರಿಗೋ.!
ಇದು ವಿಡಂಬನೆಯೋ..ವಿಪರ್ಯಾಸವೋ ಆ ದೇವನೆ ಬಲ್ಲ

Bhagirathi Chandrashekar
==================================
ಎಲ್ಲರ ಮನೆಯಲ್ಲೂ T.V.ಯೊಂದು ಕುಳಿತಿದೆ ಠೀವಿಯಲಿ
ಹಿಂದೆ ಸಿರಿವಂತರ ಕಿರೀಟಕ್ಕೆ ಗರಿಯಾಗಿತ್ತು..
ಈಗ ಎಲ್ಲರ ಮನೆಯ ಊಟದ ಉಪ್ಪಿನಕಾಯಿಯಾಗಿದೆ.

ಕೆಲವರ ಮಾಹಿತಿ ಸಂಗ್ರಹಣೆಯ ಕೇಂದ್ರಬಿಂದುವಾದರೆ..
ಮತ್ತೆ ಕೆಲವರಿಗೆ ಒಡನಾಡಿ..ಸಂಗಾತಿ.
ಮನೆ ಹತ್ತಿ ಉರಿದರೂ..ಕಳ್ಳಕೊಳ್ಳೆಹೊಡೆದರೂ
ಮೂರ್ಖಪೆಟ್ಟಿಗೆಯ ಮುಂದೆ ಕುಳಿತವರೆಷ್ಟೋ ಮೂರ್ಖಮಂದಿ

ಪ್ರಪಂಚದೆಲ್ಲಾ ಆಗು-ಹೋಗುಗಳ ಕ್ಷಣಮಾತ್ರದಿ ಭಿತ್ತರಿಸುವ
ಈ ಮಾಂತ್ರಿಕ ತಾಂತ್ರಿಕತೆಯ ಉತ್ತುಂಗವಲ್ಲವೇ..?
ಇನ್ನೊಬ್ಬರ ಭಾವನೆಗಳ ಬಂಡವಾಳಮಾಡಿಕೊಂಡವರ
ಪಾತ್ರದಲೇ ತಮ್ಮನ್ನಿರಿಸಿ ಅತ್ತಾಗ ಅತ್ತು, ನಕ್ಕಾಗ ನಕ್ಕು ಲೀನವಾದವರೆಷ್ಟೋ..?

ಇತಿ-ಮಿತಿಗಳ ಮತಿ ಮುಷ್ಠಿಯೊಳಿದ್ದರೆ
ಹವ್ಯಾಸ ಚಟವಾಗದಿದ್ದರೆ..ಅಮೃತ-ಅಮೃತವೇ..ವಿಷ-ವಿಷವೇ..
ಮಿತಿ ಮೀರಿದರೆ..ಅಮೃತವೂ-ವಿಷವೇ…!

Bhagirathi Chandrashekar
==================================
ನೀರನ್ನ ತಲ್ಲಿದರಾಯ್ತು ಹೊರಗೆ ನಂತರ
ಟಿವಿಯಂತೂ ಬೇಕೇಬೇಕು ನಿರಂತರ
ನೀರಿಗೇನು ಎಲ್ಲೂ ಹೋಗಲ್ಲ
ದಾರವಾಹಿಯಾದರೆ ಮತ್ತೆ ಸಿಗೊಲ್ಲ
ಮೊಣಕಾಲವರೆಗೆ ನೀರಾದರೇನಂತೆ
ನೋಡಿಕೊಳ್ಳಬೇಕು ಟಿವಿಗೆ ನೀರು ತಾಕದಂತೆ

Mamatha Keelar
==================================
ಹೆಂಡತಿ ಮಕ್ಕಳು ಕಣ್ ಬಿಟ್ಟು ,

ನೋಡುತಿರುವರು ಮೂರ್ಖರ ಪೆತ್ತಿಗೆಯನು ದಿಕ್ಕೆಟ್ಟು ,

ಹಿಡಿದು ಕೊಂದು ಕೈಯಲಿ ಒಂದು ಬೋರ್ಡ್ “ಡಿಸ್ಟರ್ಬ್ ಮಾಡ್ಬೇಡಿ ದಯವಿಟ್ಟು ”…

ಸಹಿಸಲಾರದೆ ಯಜಮಾನನು ಕಂಗೆಟ್ಟು ,

ಅತ್ತ ಕಡೆ ನಿಂತ್ ಕೊಂಡಿದ್ದಾರೆ ತಲೆ ಕೆಟ್ಟು ,

ಇತ್ತ ಕಡೆ ಮನೆ ಮಂದಿಯೆಲ್ಲ ನೋಡುತ ಧಾರಾವಾಹಿಯ ಒಂದು ಸಂನಿವೆಶವನು ಮೂಗಿನ ಮೇಲೆ ಬೆರಳಿಟ್ಟು ,

ಚಪ್ಪಿರುಸುತಿರುವರು – ಇರಬಾರದಿತ್ತೆ ತಿನ್ನೋಕೆ ಚಕ್ಲಿ ನಿಪ್ಪಟ್ಟು …

ಮೆಲ್ಲನೆ ಅಲ್ಲಿದ್ದ ಮಗನು ಕೇಳಿದ “ಅಮ್ಮ ಬೇಕೆನಗೆ ಉಪ್ಪಿಟ್ಟು ”,

ಪಕ್ಕದಲ್ಲೇ ಇದ್ದ ಮಗಳು ಕೇಳಿದಳು “ಅಮ್ಮ ನನಗೆ ತಂಬಿಟ್ಟು ”,

ಅದೆಲ್ಲಿತ್ತೋ ಕೋಪ – ಒಳಗೆ ಬಂದ ಯಜಮಾನನು TV ಯನ್ನು off ಮಾಡಿ ಸುಮ್ಮನಿರಿಸಿದನು ಎಲ್ಲರನು ನಾಲ್ಕು ನಾಲ್ಕು ಕೊಟ್ಟು ,

ಅಯ್ಯೋ ಕರ್ಮ – ಧಾರಾವಾಹಿಯ ಕೊನೆಯ ಸನ್ನಿವೇಶವು ಮಿಸ್ ಆಇಥಲ್ಲ ಅಂತ ಬೈ ಕೊಂಡ್ರು ತಲೆ ಮೇಲೆ ಕೈ ಇಟ್ಟು. . .

Ajay Pyro
==================================
ನೀರಿಗಾಗಿ ಪರದಾಡಿದ ಜೀವಕೋಟಿಗಾಗಿ
ಪುರಾಣದ ಭಗೀರಥ ಗಂಗಾ_ಜಲದಿಂದ ಪಾವನಗೊಳಿಸಿದ…
ಪುರಾತನರು ಕೆರೆ-ಕಟ್ಟೆ-ಭಾವಿ-ಕಾಲುವೆಗಳಿಂದ ಜಲಧಾರೆ ಹರಿಸಿದರು…
ಆಧುನಿಕರು ಭೂತಾಯಿ ಮಡಿಲಿಗೆ ರಂದ್ರ ಕೊರೆದು ಜಲಧಾರೆ ಹರಿಸಿದರು…

ಆಧುನಿಕರ ಆಟಾಟೋಪಗಳಿಗೆ ಬೆಚ್ಚಿದ ಭೂತಾಯಿ ಋತುಮಾನಗಳ ಗೊಂದಲಕ್ಕೀಡಾದಳು!
ಆಧುನಿಕರ ಸಣ್ಣತನದಿಂದ ಭೂತಾಯ ಮಡಿಲು ಬರಿದಾಯಿತು
ಆಧುನಿಕರ ಮುಂದಾಲೋಚನೆಯಿಲ್ಲದ ಯುಕ್ತಿಗೆ ಕಡಲು ಕೊರೆಯಿತು ; ಮೀತಿಮೀರಿತು
ಆಧುನಿಕರು ಎಚ್ಚರಗೊಂಡಿಲ್ಲ ಕಾಲಬಳಿಯೇ ಜಲಧಾರೆ ಉಕ್ಕಿದರೂ ; ಜೀವ ಮುಕ್ಕುತ್ತಿದ್ದರೂ

ಆಧುನಿಕ ಸೋಗಿನಲ್ಲಿ ಮೈಮರೆತಿದೆ ಮನುಜ ಕುಲಗಳು
ಆಧುನಿಕ ಮೋಜುಗಳಾಗುತ್ತಿವೆ ಸಂಜೆಯ ಸಾವಿನ ಮೇಜವಾನಿಗಳು
ಆಧುನಿಕ ಸವಲತ್ತುಗಳು ವಿಷದ ನಂಜಿನ ತಯಾರಿಕೆಗಳು
ಆಧುನಿಕ ಅಧ್ವಾನಗಳ ಮಧ್ಯೆ ಲಾಭಬಡುಕ ಬಂಡುಕೋರ ಮೇಧಾವಿಗಳು

ಆಧುನಿಕತೆಯ ಆಕರ್ಷಣೆಗೆ ಬಿದ್ದ ಮರುಳ ಮಾನವನಿಗೆ ಪಶ್ಚಾತ್ತಾಪದ ಕೊರಗಿಲ್ಲ
ಆಧುನಿಕ ಯೋಚನಾಲಹರಿಯಿಂದ ಕಾಲಬುಡಕ್ಕೆ ಏರಗಿದರೂ ಎಚ್ಚರಿಲ್ಲ
ಆಧುನಿಕನಾಗಲಿಲ್ಲ ; ಪುರಾತನನಾಗಲಿಲ್ಲ…ಪುಣ್ಯಪುರುಷನಂತೂ ಆಗಲಿಲ್ಲ
ಆಧುನಿಕತೆಯ ಅವಘಡಗಳಿಂದಾಗಿ ಅತಿವೃಷ್ಟಿ-ಅನಾವೃಷ್ಟಿಗಳೆಂಬ ಅವನತಿಯ ಸೂತಕಗಳ ಅರಿವಿಲ್ಲ

Hipparagi Siddaram
”””””””””””””””””””””””””””””””””””””””””””””””””””””””””””””””””””””””
http://www.facebook.com/groups/kannadavesatya/247432748675806/?notif_t=like

ಚಿತ್ರ ನೋಡಿ ಕವನ ಬರೆಯಿರಿ – 13

ಮೊಳಕಾಲು ಉದ್ದ ಕೆಸರಲ್ಲಿ ಕಾಲು…
ಮೈ ತುಂಬಾ ಬೆವರು.. ಕೈಯಲ್ಲಿ ನೇಗಿಲು
ಕಷ್ಟ-ನಷ್ಟಗಳ ಆಗರ ಈ ನಮ್ಮ ರೈತ

ಜೀವನದಲಿ ಅವ ಕಂಡಿದ್ದೇನು..?
ಬಿಸಿಲ ಕಾವು,ಧೂಳು ಮೈಯ್ಯ..
ಧೀರ್ಘ ಮಳೆ, ಬರಗಾಲದ ಹೊಳೆ

ದಿನದ ಹಸಿವು ಕಾಡದಿರದು
ಶ್ರಮದ ಹಿಂದೆ ಹಲವು ಭಾವ
ಬೇಕೆಂದಾಗ ಮಳೆ ಇಲ್ಲ,ಮಳೆ ಬಂದಾಗ ಕೈಲಿ ಕಾಸಿಲ್ಲ..
ಮೈಮರೆತರೆ ಇಡೀ ವರ್ಷ ಅರೆಹೊಟ್ಟೆ

ದೇಶಕ್ಕಾಗಿ ಅನ್ನ ನೀಡುವ ಉಳುವ ಯೋಗಿ
ಜೀವನ ಬಲ್ಲವನೇ ಬಲ್ಲ…..!!!
ಮನುಜ ನೀ ಅದನು ನೆನೆದರೆ ಅವನ ಬದುಕು ಸಾರ್ಥಕ…!

Bhagirathi Chandrashekar
==================================
ರೈತಣ್ಣಾ….!
ಭೂತಾಯಿಯ ಮಡಿಲ ಮಗುವಾಗಿಹೆ
ಭೂತಾಯಿಗೆ ಹಸಿರಹೊನ್ನ ಹೊದಿಕೆಯಿಂದ ಸಿಂಗರಿಸಿಹೆ

ರೈತಣ್ಣಾ….!
ನಾಡಿನ ನರ-ನಾಡಿಗಳು ಮಿಡಿಯುವವು ನಿನ್ನ ದುಡಿಮೆಯ ದಯಾ-ಭಿಕ್ಷೆಯಿಂದ
ನಾಡಿನ ಏಳು-ಬೀಳುಗಳ, ಉನ್ನತಿ-ಅವನತಿಗಳ ಹಂಗಿಲ್ಲ ನಿನ್ನ ಕರುಣೆಯಿಂದ

ರೈತಣ್ಣಾ…!
ಕಲಿಯುಗದ ಕಾಯಕ ಯೋಗಿ
ಕಲಿಸಿದೆ ಕೈಲಾಸದ ಸದ್ಗತಿಗೆ ಹಾದಿ

ರೈತಣ್ಣಾ…!
ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲಾ ಎಂಬುದು ನಿಜ!
ಒಕ್ಕಲೆಬ್ಬಿಸುವುದನರಿತು ನಡೆಯುಬೇಕಿದೆ ಜಗದ ಮನುಜ!

ರೈತಣ್ಣಾ…!
ಜಗದ ಹಸಿದ ಹೊಟ್ಟೆಗಳು ತಣ್ಣಗಾಗಿಸುವನು ನೀನೆ
ಜಗಕೆಲ್ಲಾ ನೀನೆ ಜಗದೇಕ ವೀರ, ಅನ್ನದಾತ ನೀನೆ !

ರೈತಣ್ಣಾ…!
ವಸಾಹತುಕರಣ, ಜಾಗತೀಕರಣದಂತಹ ಕರಣಗಳ ಉಸಾಬರೀಯಿಲ್ಲದ ವೀರ
ಭೂತಾಯಿಯ ನಂಬಿದ ಮನುಜ ನೀ ಚಿರಂಜೀವಿ…ಅಪರಂಪಾರ !

Hipparagi Siddaram
==================================
ಹೇಳುವದಕೆ ರೈತರೇ ದೇಶದ ಬೆನ್ನೆಲುಬು
ಅವ ದುಡಿದದ್ದು ಅವನಿಗೇ ಸಿಗದೇ ಕಾಣುತಿರುವದು ಅವನದ್ದೇ ಎಲುಬು
ಇದು ಇಂದಿನ ನಮ್ಮ ದೇಶದ ಪರಿಸ್ಥಿತಿ
ಮುಂದುವರಿದರೆ ಹೀಗೆ ನಾವು ಕಾಣುವೆವು ಅಧೋಗತಿ
ಮಳೆ ಯಿದ್ದರೆ ಬಿತ್ತನೆ ಬೀಜವಿಲ್ಲ
ಬೀಜವಿದ್ದರೆ ಮಳೆಯೇ ಇಲ್ಲ
ಅವ ಮಾಡುತಿಹನು ಅವನ ಕಾಯಕ
ಬಿಡದು ನಿರಾಸೆ ಅವ ಸಾಯೋತನಕ

Mamatha Keelar
==================================
ಅನ್ನದಾತ!!!
ಜಗದ ಶುಭ್ರ ಉಡುಪಿನವರಿಗೆಲ್ಲಾ ನೀಡುವೆ ತುತ್ತು ಅನ್ನವನು
ಶುಭ್ರತೆಗೆ ಇಲ್ಲ ನಿನ್ನ ಗಮನ ಹಸಿರು ಮಾತೆಯ ಸುತನಿವನು
ಶುಭ್ರರ ಹೊಟ್ಟೆ ತಣಿಸಲು ಹಗಲಿರುಳು ಕೃಷಿಯಜ್ಞ
ಜಗದ ಜಂಜಡಗಳ ಮರೆತು ನಡೆದಿದೆ ಕಾಯಕಪ್ರತಿಜ್ಞ

ನೆಲ-ಜಲ-ಸಸಿ-ಗೊಬ್ಬರ-ಪರಿಸರ ಸ್ನೇಹಿತ
ನಡೆದಿದೆ ಮೈಮುರಿಯೇ ದುಡಿತ ಅನವರತ
ಹಸಿರುಕ್ರಾಂತಿ- ರಾಸಾಯನಿಕ-ಸಾವಯವ ಇತ್ಯಾದಿ
ಸಾಂಪ್ರದಾಯಿಕ-ವೈಜ್ಞಾನಿಕ ಮುಂತಾಗಿ

ದೇಶದ ಬೆನ್ನಲುಬಾಗಿ, ನಾಡಿನ ನಾಡಿಯಾಗಿ
ಅನ್ನ ನೀಡುತಿಹನು ನೇಗಿಲ ಯೋಗಿ
ಅವನಿಂದಲೇ ನಾಡು ಸುಖಬೋಗಿ
ಕೃಷಿ-ಕಷ್ಟಗಳ ಸರಮಾಲೆ ಧರಿಸಿದರು

ಕೃಷಿಯೊಂದಿಗೆ ಅದೇ ಸಂತೃಪ್ತ ಕಾಣ್ಕೆ
ಭೂತಾಯಿಯ ಒಡನಾಟ-ಬಿಡಿಸದ ಬಂಧನ
ಹಸಿರನಾಡಿನ ಹರುಷಗಾರ
ಅವನು ಯಾವತ್ತಿಗೂ ಅಜರಾಮರ!

Hipparagi Siddaram
==================================
ಪ್ರಶೋತ್ತರ ಈ ಭೂಮಿ ಬದುಕು
++++++++++++++++
ಹೊಸ ಬಯಕೆಯ ಬದಲಾವಣೆ
ಬರೆಯಲು ಇಲ್ಲಿ ಎಲ್ಲವೂ ಕಲ್ಪನೆ
ಹೊಸ ರೀತಿಯ ಒಂದು ಸವಾಲು
ಯಾರಿಗಿದೆ ಅದ ಬಿಡಿಸುವ ದಿಲ್ಲು..

Prashanth P Khatavakar
==================================
ಮತ್ತೆ ಬರಲಿ ಆ ಕಾಲ

ಬಂಡೆದ್ದ ಪಟ್ಟಣದ ವಲಸೆ
ನಗರ ಧಾವಂತತೆಯತ್ತ
ಮೃಗಜಲದ ಕೃಷಿ ನೀತಿ
ಅಳಿದುಳಿದು ಸಾಯೋ ಬೇಸಾಯ
ಬತ್ತದೇ ಉಳಿಯುವ ಉತ್ಸಾಹದಲ್ಲಿ
ಮುರಿಯುತಿಹ ಬೆನ್ನೆಲೆಬು

ಬೆಲೆಕಟ್ಟಲಾಗದ ನಿನ್ನ
ಶ್ರಮ, ದಾನ
ನೇಗಿಲ ರೈತ
ನೀನಮ್ಮ ಅನ್ನದಾತ
ಎತ್ತರಕ್ಕೇರಲಿ,ನಿನ್ನ ಗರಿಮೆ ಹಿರಿಮೆ
ರಾಷ್ಟ್ರ ಪಿತನಾ ಕನಸು
ಮತ್ತೆ ನೆನಸಾಗಲಿ

ಮತ್ತೆ ಬರಲಿ ಅಂದಿನ
ಆ ನೆನಪು ಈ ಹರುಷ
ಹಸಿರುಸಿರು
ಉತ್ತಿ ಬಿತ್ತಿ ಬೆಳೆವಂತೆ
ಮನಸಿನಂಗಳವೆಲ್ಲಾ
ಕೆಸರಾಗಿ
ಕೆಸರು ಹಸಿರಾಗಿ
ಬೆಳೆಯೋ ಕಾಲ

Bellala Gopinath Rao
==================================
ನೆನಪುಗಳೇ ಹೀಗೆ
ಮೋಸ ಮರೆಯುವುದು ಹೇಗೆ
ಕೊಟ್ಟ ಕಾರಣ ಬಲು ಕಷ್ಟ
ಇತ್ತ ಆಭರಣವೂ ಮಾಯಾ

ಮಾವನ ಮನೆಯೊಳು ವಿಸ್ಮಯ
ಅಯ್ಯೋ ದೇವನೇ ಇದೇನಿದು
ಮನವ ಗೆದ್ದ ಮಡದಿಯ ಮಾತು
ಮಾವನ ಜೊತೆ ದುಡಿಮೆ ಮೋಸವಾಯಿತು

ಮನಸ್ಸು ನೀನು ನನ್ನೇ ಪ್ರೀತಿಸು
””””””””””””””””””””””””””””””””””””””””””””””””””””””””””””””””””””””””””””””””””””
http://www.facebook.com/groups/kannadavesatya/246222785463469/?notif_t=like

ಚಿತ್ರ ನೋಡಿ ಕವನ ಬರೆಯಿರಿ – 12

ಕಣ್ಣಲ್ಲಿ ಇಂಗಿದ ಕನಸು…
ಕಷ್ಟದಲಿ ಮುಳುಗಿ ಕಲ್ಲಾದ ಮನಸು…

ಆಟ-ಪಾಠದಿ ಖುಷಿಯಿಂದ ನಲಿಯುವ ವಯಸ್ಸು..
ಆದರೆ, ಬಡತನದ ಬೇಗೆಯಲ್ಲಿ ಸಿಲುಕಿದೆ ಈ ಕೂಸು..

ಹೊಟ್ಟೆಪಾಡಿಗಾಗಿ ದುಡಿಯಲು ಹೋಗಿಹರು ಅಪ್ಪ-ಅಮ್ಮ..
ಅವರ ಪಾಲಿನ ಕೂಳನು ಹೊತ್ತು ಸಾಗುತಿಹಳು ಈ ಕಂದಮ್ಮ..

ಯಾಕೋ ಕಾಣೇ ಇತ್ತಿಚಿಗೆ ಆ ದೇವರೂ ಕುರುಡನಾಗಿಹನು..
ಸಿರಿವಂತರ ಮನೆಯ ಕೋಣೆಯಲಿ ಬಂಧಿಯಾಗಿರುವನು..

ರಾಜಕೀಯ ಪುಡಾರಿಗಳ ಪೊಳ್ಳು ಭರವಸೆ ಇವರಿಗಿನ್ನೂ ನೀಡಿಲ್ಲ ಆಸರೆ..
ಸಾಲದೆಂಬಂತೆ ಅಭಿವೃದ್ಧಿಯ ನೆಪದಲ್ಲಿ ಇವರ ಗಾಯದ ಮೇಲೆ ಎಳೆಯುತ್ತಿದೆ ಬರೆ
Pradeep Hegde
”””””””””””””””””””””””””””””””””””””””””””””””””
ಹಸಿವೆಯ ತಣಿಸುವ ಅಪ್ಪ ಅಮ್ಮ..
ಅನ್ನಕೆ ದುಡಿಯಲು ಹೋಗಿಹರಮ್ಮ..
ಬುತ್ತಿಯ ಗಂಟನು ಹೊತ್ತು ಒಯ್ದು
ಅವರ ಹಸಿವನ್ನು ತಣಿಸುವೆನಮ್ಮ
Sunitha Manjunath
”””””””””””””””””””””””””””””””””””””””””””””””””
ಎತ್ತಲಾರದಷ್ಟು ಭಾರ ಆ ಬುತ್ತಿ ,
ತೋಳುಗಳಿಗೆ ನೋವಾದರೂ ಅದನ್ನು ಹೊತ್ತಿ ,
ಬರುತ್ತಿದ್ದಾಳೆ ಗುಡ್ಡ ಕಾಡುಗಳನ್ನು ಸುತ್ತಿ ,
ಚಿಂತಿಸುತ್ತಿಲ್ಲ ಸುಡುತ್ತಿದ್ದರು ಬಿಸಿಲಿಗೆ ನೆತ್ತಿ ,

ಅರಿವಿಲ್ಲದೆ -ತೂಗುತ್ತಿದ್ದರೂ ತಲೆಯ ಮೇಲೆ ಕತ್ತಿ ,
ಜೀವನ ಸಾಗಿಸುತ್ತಿದ್ದಾಳೆ ಮಾಡಿಕೊಂಡು ಕುಸ್ತಿ ,

ಇವರ ಪಾಲಿಗೆ ಕಾಣದ ದೇವರೇ ಆಸ್ತಿ ,
ಒಪ್ಪೊತ್ತು ಊಟ ಮಾಡಿದರೆ ಅದೇ ಇವರಿಗೆ ಜಾಸ್ತಿ ,
ಕನಸಾಗಿಯೇ ಉಳಿಯಿತು ಈಕೆಯ ಪಾಲಿಗೆ ಮೋಜು ಮಸ್ತಿ
Ajay Pyro
”””””””””””””””””””””””””””””””””””””””””””””””””
ಕಣ್ಣಲ್ಲಿಹುದು ಸಾವಿರಾರು ಕನಸುಗಳು
ಕನಸುಗಳು ಸಾಕಾರವಾಗುತ್ತಿಲ್ಲದಿಹುದು
ಎಲ್ಲವೂ ಹೊಟ್ಟೆಗಾಗಿಯೇ?
ಯೋಚಿಸುತಿಹುದು ಮನದಾಳದಲ್ಲಿ
ಹೊಟ್ಟೆಯ ಹಸಿವು ನೀಗಿಸಲು
ತೆಲೆಯೇ ಮೇಲಿಹುದು ಬುತ್ತಿ
ಮನದ ಹಸಿವು
ನೀಗಿಸುವವವರು ಎಲ್ಲಿಹರು
ಬುದ್ಧಿ ತುಂಬಿಕೊಳ್ಳುವ ವಯಸ್ಸಲ್ಲಿ
ಬುತ್ತಿ ಹೊತ್ತು ಸಾಗುತಿಹನು.
Rudresh Rajashekharaiah
”””””””””””””””””””””””””””””””””””””””””””””””””
ಹೊನ್ನಿನ ಪುತ್ತಳಿಯಂಥ ಹಸುಬಾಲೆ ಇವಳು
ಬದುಕಿನ ಬಂಡಿಯ ಸಾರಥ್ಯದಲಿ ಪುಟ್ಟಪುಟ್ಟ ಹೆಜ್ಜೆ ಇಡುತ
ತುತ್ತಿನ ಬುತ್ತಿಯ ಹೊತ್ತು ಹೊರಟಿಹಳು…

ಸುಂದರ ಶಿಲ್ಫವ ಕಡೆದ ಬ್ರಹ್ಮ…
ಸುಂದರ ಹಣೆಬರಹ ಬರೆವುದ ಮರೆತ
ಮಗು ನೀನಾಗು ಅವನಿಗೆ ಸವಾಲು…!

ನೀನೆಡೆವ ದಾರಿ ಬಲು ಕಠಿಣ ಮಗುವೆ
ಮರೆಯದಿರು ನೀ ಶಿಕ್ಷಣವ
ಗುರಿ ಮೇಲಿರಲಿ..ಸಾಧಿಸುವ ಛಲನಿನಗಿರಲಿ…

ಅಪ್ಪ, ಅಮ್ಮನ ಕಷ್ಟಕೆ ನೀ ಹೆಗಲು ಕೊಟ್ಟಿರುವೆ..
ಕಲಿ ನೀ ಬದುಕಿನ ಪಾಠ ವಿದ್ಯಾವಂತಳಾಗಿ
ಎಳೆದು ತೋರಿಸು ಈ ಜಗಕೆ ನಿನ್ನ ಗೆಲುವಿನ ತೇರು
Bhagirathi Chandrashekar
”””””””””””””””””””””””””””””””””””””””””””””””””
ಆಟವ ಬಿಟ್ಟು ಬಂದೆ
ಬುತ್ತಿ ಕೊಟ್ಟು ಬತ್ತಿನಿ ಎಂದೆ
ಆಟಕ್ಕೆ ಉಫಿ ಎಂದೆ
ಮೋಸ ಮಾಡಬೆಡಿ ಬಂದೆ ಬಂದೆ

ಅವ್ವ ಎಲ್ಲಿದ್ಯವ್ವ
ಬುತ್ತಿ ತಂದೀವ್ನಿ ಬಾರವ್ವ
ಅಪ್ಪೊ ಬಾರಪ್ಪೊ
ಉಂಡು ಗೈಮೆ ಮಾಡುವೆ ಬಾರಪ್ಪೊ
ಬಿರ್ರಿನ್ ಬರ್ರಪ್ಪೊ ಆಟಕ್ಕೆ ಒತ್ತಾಯಿತು ಬರ್ರಪ್ಪೊ

ಯಾಕೆ ಮಾಗಿ ಇಸ್ಕೂಲ್ಗೆ ಹೊಗ್ಲಿಲ್ಲ್ವೆ
ಇಲ್ಲ ಕಾಣಕ್ಕ ನಾ ವಲ್ಲೆ
ಒಕಲುತಾನ ಕಲಿಬೆಕಂತಲ್ಲೆ
ಅದ್ಕೆ ಕುಂಡ್ಸವರೆ ಮನ್ಯಲ್ಲೆ
Sanjeev Kumar
”””””””””””””””””””””””””””””””””””””””””””””””””
ದುಡಿಮೆಯ ತಪಸ್ಸು
ಒಂದು ಎರಡು
ಲೆಕ್ಕಾ ಓದಿಲ್ಲ
ಎಣಿಸುವ ಹೆಜ್ಜೆ
ಕಾಲಲ್ಲಿಲ್ಲ ಗೆಜ್ಜೆ

ವಯಸ್ಸಿಗೂ ಅರಿಯದ
ಮನಸ್ಸಿಗೂ ನಿಲುಕದ
ಬದುಕು ಬಲು ಭಾರ
ದಾರಿಯು ಇನ್ನೂ ದೂರ

ಹೊತ್ತ ಹೊರೆಯೊಳು
ಕಟ್ಟಿಟ್ಟ ನೂರು ಕನಸು
ಹಾಡುತ ಆಡುತ ಕುಣಿತವಿಲ್ಲ
ದುಡಿಮೆಯ ತಪಸ್ಸು ಬಾಳೆಲ್ಲಾ
|| ಪ್ರಶಾಂತ್ ಖಟಾವಕರ್ ||
Prashanth P Khatavakar
”””””””””””””””””””””””””””””””””””””””””””””””””
ಬಾಳುವೆ ನಾನೂ ಚಲದಿಂದ
ಬುಟ್ಟಿಯ ಹೊತ್ತು
ಮನದೊಳಗತ್ತು
ಬರುತಿಹೆ ಬಾರದ ಮನಸಿಂದ

ಮಣ್ಣಲಿ ನಡೆಯುತ
ಹೆಜ್ಜೆಯ ನಿಕ್ಕುತ
ನಡೆದಿಹೆ ತೋಟದ ಬಯಲತ್ತ

ತಂದೆಯು ಇಲ್ಲಾ
ತಾಯಿಯು ಇಲ್ಲಾ
ನೋಡುವರ್ಯಾರು ನನ್ನತ್ತ

ಮುಸುರೆಯ ತಿಕ್ಕುವ
ಕಸವನು ಗುಡಿಸುವ
ಜೀವನ ನೀಡಿದ ಭಗವಂತ

ಶಾಲೆಯ ಕಲಿಕೆ
ಗೆಳೆಯರ ಜೋಡಿಗೆ
ನನಗೂ ಓದಲು ಆಸೆಯಿದೆ

ಕಳಿಸುವರ್ಯಾರು
ಪಾಠದ ಮನೆಗೆ
ಗುಡಿಸಲ ಕಾಯುವ ಪಾಡುಯಿದೆ

ಇದ್ದರೆ ಇರಲಿ
ಶಕ್ತಿಯ ಮೀರಿ
ಗೆಲ್ಲುವೆ ಬಾಳನು ಬಲದಿಂದ

ಜೀವನವೆಂದು
ಸಾಗುವ ಬಂಡಿ
ಬಾಳುವೆ ನಾನೂ ಚಲದಿಂದ
::ವಸಂತ್ ಕೋಡಿಹಳ್ಳಿ::
ವಸಂತ್ ಆರ್
”””””””””””””””””””””””””””””””””””””””””””””””””
ಅಪ್ಪ-ಅಮ್ಮ ದುಡಿಯುತ್ತಿದ್ದಾರೆ ದಿನದ ರೂಪಾಯಿ
ನಾನು ಮಾಡುತ್ತೇನೆ ಕೈಲಾದ ಸಹಾಯ
ನಮಗೆ ಇಲ್ಲ ಭದ್ರ ಅಡಿಪಾಯ
ದೇವರಿದ್ದಾನೆ, ನಮಗಿಲ್ಲ ಅಪಾಯ
Shishir Hegde
”””””””””””””””””””””””””””””””””””””””””””””””””
ಪಾಪ ಇವಳು ಹಸು ಬಾಲೆ
ಚಪ್ಪಲ್ಲಿಗೂ ಗತಿ ಇಲ್ಲ ಬರಿ ಕಾಲೇ
ಹೊತ್ತಿಹಳು ಮಣ ಭಾರದ ಹೆಡಗೆ
ಹೋಗುತಿಹಳು ಹೊಲದ ಕಡೆಗೆ
ಮನಸಿನಲಿ ಬಣ್ಣ ಬಣ್ಣದ ಕನಸಿನ ಆಟ
ಆದರೂ ವಿದಿಯಿಲ್ಲದೆ ಕರ್ತವ್ಯದ ಕಡೆಗೆ ಓಟ
ಆ ದೇವರಿಗೇಕೆ ನನ್ನ ಮೇಲೆ ಕೋಪ
ಬಡತನವೇ ನನ್ನ ಬಾಳಿಗೆ ಹಿಡಿದ ಶಾಪ
Mamatha Keelar
”””””””””””””””””””””””””””””””””””””””””””””””””
ಅರಳುವ ಸುಮ ಬಾಲೆ
ಅರಿತಿಹಳು ಬದುಕುವ ಕಲೆ
ಭವಿಷ್ಯದ ನಾಡಿನ ನಾರಿಮಣಿ
ಹೊರಟಿಹಳು ಬಾವಿ ರಮಣಿ|

ಹೆತ್ತವರ ಬಡತನ
ಹೆತ್ತೊಡಲಿನ ಕಷ್ಟ-ಕಾರ್ಪಣ್ಯತನ
ಕಲಿಯಬೇಕು ಕಲೆಯೆಂಬ ಜೀವನ
ಹೊರಟಿಹುದು ಮುಗ್ದಮನ|

ಬಡತನವೆಂಬುದು ಶಾಪ
ಬದುಕಿನ ಬಗ್ಗೆ ಅವಳಿಗಿಲ್ಲ ತಾಪ
ಬೇರೆಯವರಿಂದ ಆಕೆಗಿಲ್ಲ ಕರುಣೆ-ಸಂತಾಪ
ಹೊರಟಿಹುದು ಪುಟಾಣಿ ಪಾಪ|

ಸರಕಾರದ ಕಾಯ್ದೆಗಳ ಹಂಗಿಲ್ಲ ಇವಳಿಗೆ
ಕನಸುಗಳ ಕನವರಿಕೆ ಬೇಕಿಲ್ಲ ಇವಳಿಗೆ
ಬಾಲ್ಯವೆಂಬ ಅಪರೂಪತೆ ಗೊತ್ತಿಲ್ಲ ಇವಳಿಗೆ
ಹೊರಟಿಹಳು ಎಲ್ಲಿಗೆಂದು ತಿಳಿದಿಲ್ಲ ಇವಳಿಗೆ|

ಬದುಕಬೇಕು-ಬಾಳಬೇಕು-ಬೆಳಗಿಸಬೇಕು
ತಲೆಮಾರುಗಳು ಸರಪಣಿ ಮುಂದುವರೆಯಬೇಕು
ದೇವರು-ದಿಂಡಿರು, ಸಮಾಜ-ಸಂಕುಲಗಳು ಬದುಕಿಗೆ ಬೇಕು
ಹೊರಟಿಹಳು ಭರವಸೆಯ ಬಾಲೆ!
Hipparagi Siddaram
”””””””””””””””””””””””””””””””””””””””””””””””””
http://www.facebook.com/groups/kannadavesatya/245739935511754/ 

 

 

ಚಿತ್ರ ನೋಡಿ ಕವನ ಬರೆಯಿರಿ – 11

ಭಾವನಾತ್ಮಕ ಚಿತ್ರ
ಬದುಕಿನ ಒಂದು ವಿಚಿತ್ರ
ಬರೆಯಲು ನೂರೆಂಟು ಪತ್ರ
ಇದ್ದರೂ ಪದಗಳು ನಮ್ಮ ಹತ್ರ

ಅರಿಯಲು ಸಾಧ್ಯವೇ
ಈ ಚಿತ್ರ ಚಿತ್ತಾರದ
ನೈಜ ಭಾವಾರ್ಥವ
ಕಲಾವಿದ ಕುಂಚದ ಸತ್ಯವ

ಕವಿ ಕಟ್ಟಬಹುದು ಕವನಗಳ
ಸೇರಿಸಿ ಸಾವಿರಾರು ಸಾಲುಗಳ
ಆದರಿಲ್ಲಿ ಹೇಳುವವರ್ಯಾರು
ದೃಶ್ಯದ ನಿಜ ಅವತಾರದ ಅರ್ಥವ
|| ಪ್ರಶಾಂತ್ ಖಟಾವಕರ್ ||
Prashanth P Khatavakar
”””””””””””””””””””””””””””””””””””””””””””””””””
ಅಳಬೇಡ ಮಗುವೇ ಅಳಬೇಡ..
ನಿನ್ನ ತಂದೆಯ ನೆನದು ನನ್ನ ಕೊಲಬೇಡ

ಆಗಸದಿ ತುಂಬಿದ ಕಾರ್ಮೋಡದಂತೆ
ದುಃಖದಿ ಕರಿದಾಗಿಹುದು ನಮ್ಮ ಬಾಳು

ತಲೆಮೇಲಿನ ಸೂರಿಲ್ಲದೇ..
ತಲುಪಬೇಕಾದ ಗುರಿಯಿಲ್ಲದೇ

ಮನಸೆಲ್ಲಾ ಚಿಂತೆಯ ಗೂಡಾಗಿದೆ
ಕಂಡ ಕನಸೆಲ್ಲಾ ಬರಿದಾಗಿದೆ

ಹೊಟ್ಟೆಯ ಕೂಳಿಗೂ ನಮಗೀಗ ಬರ
ತೊಟ್ಟು ವಿಷಕೂ ಹಣವಿರದ ಕೆಟ್ಟ ಹಣೆ ಬರಹ

ನನ್ನಿನಿಯ ಬಂದೇ ಬರುತ್ತಾನೆಂದು ನಾ ಕಾಯುತ್ತಿರುವೆ
ಅಲ್ಲಿವರೆಗೂ ಚೂರಾದ ನಿನ್ನ ತಂದೆಯ ಕನಸ ಕಾಣುತ್ತಿರುವೆ..
Pradeep Hegde
”””””””””””””””””””””””””””””””””””””””””””””””””
ಚಿಂತಿಸದಿರು..ತಂಗಿ ! ನಾನಿಲ್ಲವೆ ನಿನಗೆ…
ಹೇಗೆ ನಂಬಲಿ ನಾನು ಹೀಗಾಗಿದೆಯೆಂದು…!

ತುಂಬಿದ ಮನೆ-ಮನಗಳೀಗ ನಿಶಬ್ದದ ಗೂಡು
ಹಾದು ಹೋಗುವ ಗಾಳಿ..ಮೇಘಮಯ ಕ್ಷಣಗಳು

ಅಪ್ಪ ಹೊರಟರೆಂದು ಜೊತೆ ಸೇರಿದ ಅಮ್ಮ …
ಅನಿವಾರ್ಯ ಬದುಕು.. ಸಾಗೋಣ ಅವರ ಪ್ರೀತಿಯ ಸವಿನೆನಪ ಬುತ್ತಿಯೊಳು..
Bhagirathi Chandrashekar
”””””””””””””””””””””””””””””””””””””””””””””””””
ಮುದ್ದು ಮುಖದ ಅರಳಿದ ನಗುವಿನ ಸೊಬಗಿ ನನ್ನ ಗೆಳತಿ..
ನಗುವಿನ ಚಿಲುಮೆ……
ಒಲುಮೆಯ ಜಲಪಾತ.
ಮತ್ಸರ ಪಡುವಷ್ಟು ಪ್ರೀತಿಯ ಹರಿಸುವ ಮಹಾನದಿ…

ಆದರೆ …..
ಆ ಸುಂದರ ಕಣ್ಣುಗಳ ಹಿಂದೆ ನೋವು ಅಡಗಿದೆ…
ಆ ನಗುವಿನ ಹಿಂದೆ ಏಕಾಂಗಿ ಹೃದಯದ ಹಾಡಿದೆ..
ಆ ಪ್ರೀತಿಯ ಒರತೆಯ ಹಿಂದೆ ಭರಿಸಲಾರದಷ್ಟು ಪ್ರೀತಿಯ ಕೊರತೆ ಇದೆ….
ಅಂದಿನ ಮಾಸದ ಘಾಯದ ಗುರುತಿದೆ…

ಎಲ್ಲರ ನಡುವೆ ಇದ್ದಾಗ ..
ಅಳಿಸಲಾರದ ನಗೆಯ ಚೆಲುವೆ ,
ಯಾರು ಇಲ್ಲದಿರುವಾಗ…..
ಕಣ್ಣಿರ ಕಡಲಾಗುತ್ತಾಳೆ……
ಮೌನದ ಮಡುವಾಗುತ್ತಾಳೆ….

ನೋವಿಗೆ ಕಾರಣ ಯಾರೇ ಆದರೂ.
ಏನೇ ಆದರು….
ಕ್ಷಮಿಸೆಂದು ಕೇಳದಿದ್ದರೂ ಕ್ಷಮಿಸುತ್ತ…
ಮತ್ತೆ ನಗುತ್ತಲೇ ಮುನ್ನಡೆಯುತ್ತಿದ್ದಾಳೆ…
ಹೆಜ್ಜೆ ಹೆಜ್ಜೆಗೂ ನಗೆಯ ಮುತ್ತು ಸುರಿಸುತ್ತ…
ಬೆಳಕಿನ ಕಿರಣದ ಜಾಡು ಹಿಡಿದು…
ಇಂದಲ್ಲ ನಾಳೆ….
ನಾಳೆಯಲ್ಲದಿದ್ದರೆ ಮತ್ತೊಂದು ದಿನ…
ಎಂಬ ಆಸೆಯ ಮೂಟೆಯ ಹೊತ್ತು…
ತನ್ನ ನಂಬಿದವರಿಗಾಗೀ..ಧೃಡವಾಗಿ….ನಗೆಯ ಚಿಲುಮೆಯಾಗಿ
Sunitha Manjunath
”””””””””””””””””””””””””””””””””””””””””””””””””
ನಾನು ನೊಂದೆ ಎಂದು ಹಲುಬದಿರು ಗೆಳತಿ..
ಇನ್ನೂ ಇದೆ ನಮಗೆ ಜೀವನವೆಂಬ ಜೊತೆಗಾತಿ
ಜೀವನವಿರುವುದು ಕುಗ್ಗಲಿಕ್ಕಲ್ಲ ಹಿಗ್ಗಿ ಹಿರಿಯರಾಗಲಿಕ್ಕೆ
ಕಷ್ಟಗಳಿಗೆ ಹೆದರಿ ನೀ ಹೀಗೆ ಬಗ್ಗಿಸಿದರೆ ತಲೆ..
ಹೇಗೆ ಬಂದೀತು ಬದುಕ ಸಾಗಿಸಲು ಉತ್ಸಾಹದ ಜೀವಸೆಲೆ
—-ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ
Haniyuru Chandre Gowda Channapatna
”””””””””””””””””””””””””””””””””””””””””””””””””
ಆಳಬೇಡ ತಂಗಿ ಅಳಬೇಡ
ಆದುದರ ನೆನೆದು ಮರುಗಬೇಡ
ಎಲ್ಲರಲ್ಲೂ ಇರುತ್ತದೆ ದುಃಖದ ಕಾರ್ಮೋಡ
ಭೂ-ಆಗಸದ ನಡುವೆ ಇರುವಂತೆ ಮೋಡ

ಮೀನಿಗೆ ನೀರು, ನೀರಿಗೆ ಮೀನು
ಇದ್ದಂತೆ,ನಿನಗೆ ನಾನು ನನಗೆ ನೀನು
ಬದುಕಿ ತೋರಿಸೋಣ
ಕಮ್ಮಿಯಿಲ್ಲನಾವು ಯಾರಿಗೇನು…
Shishir Hegde
”””””””””””””””””””””””””””””””””””””””””””””””””
ನಾ ಕಾಯುತಿರುವೆ ಚಾತಕ ಪಕ್ಷಿಯಂತೆ
ನನ್ನ ಪತಿ ಯುದ್ದ ಮುಗಿಸಿ ಬರುವ ದಾರಿಯನು
ನನ ಕಿವಿ ಕಾತರಿಸಿದೆ ವಿಜಯಘೋಶವ ಕೇಳಲು
ನನ್ನ ಕಣ್ಣು ಕಾತರಿಸಿದೆ ಅವನ ನೋಡಲು

ನನಗೆ ನಂಬಿಕೆಯುಂಟು ಅವನ ಶೌರ್ಯದಲಿ
ಆದರೂ ಮನ ಬೇಯುವದು ಆತಂಕದಲಿ
ಕ್ಷಣ ಕ್ಷಣವೂ ಆಗುತಿದೆ ಯುಗದಂತೆ
ಚಡಪಡಿಕೆ ಹೆಚ್ಚುತಿದೆ ನಿಯಂತ್ರಣಕೆ ಸಿಗದಂತೆ

ನಮಗಾರಿಲ್ಲ ಇಲ್ಲಿ ಮಗಳೆ ಸಾಂತ್ವಾನ ಹೇಳಲು
ಭಯ ಹುಟ್ಟಿಸಿವೆ ಈ ಗುಡ್ಡ ಮೋಡಗಳು
ಏನು ಮಾಡಲು ತೋಚದಂತಿದೆ
ಈ ಒಂಟಿ ಕಟ್ಟಡದಂತೆ ನನ ಮನವು ನಿಂತಿದೆ
Mamatha Keelar
”””””””””””””””””””””””””””””””””””””””””””””””””’
ಮನೆಯಂತೆಯೇ ನನ್ನ ಮನವೂ ಖಾಲಿಯಾಗಿಹುದು
ಅವನಿರದ ಮನೆಯು ಇಂದೇಕೋ ಬೇಡವಾಗಿಹುದು.

ಬರಡು ಭೂಮಿಯಲಿ ಕುಳಿತು ನಾ ಕಾಯತೊಡಗಿದ್ದೆ
ಆ ಕಾರ್ಮುಗಿಲಂತೆಯೆ ಕಣ್ಣೀರ ಹಿಡಿದಿಟ್ಟುಕೊಂಡಿದ್ದೆ

ನಾನರಿಯೆ ಅದ್ಯಾವ ಕಳ್ಳದಾರಿಯಲಿ ಹೊರಬಂತೆನ್ನ ಕಣ್ಣೀರು
ಒಂದೊಂದಾಗಿ ಸೇರಿ ಮಾಡಿತೇ ಈ ಬರಡು ಭೂಮಿಯನೇ ಹಸಿರು

ಸಂತೈಸಲು ಬಾರದಿರಿ ನನ್ನ, ಅವ ಬಾರದೆ ನಾನೆಲ್ಲಿಗೂ ಬರಲಾರೆ
ಕಾಯುವೆನಿಲ್ಲೇ, ಅವನಿಗಲ್ಲದೆ ಮತ್ತಾರಿಗೂ ನನ್ನೀ ಮುಖವ ತೋರಲಾರೆ

—ಕೆ.ಗುರುಪ್ರಸಾದ್
Guruprasad Acharya
”””””””””””””””””””””””””””””””””””””””””””””””””
ಬರುವುದೆಲ್ಲವ ಬರಲಿ ಹೆದರಿಕೆಯೇಕೆ?
ಜೀವನವೆಂಬುದು ಬೆಂಗಾಡಿನಂಗಾಗಿದ್ದರೂ ಹೆದರಿಕೆಯೇಕೆ?
ಬೆಂಗಾಡಿನಲ್ಲಿ ನೆನಪೆಂಬ ಮಧುರ ಕಾಣಿಕೆಗಳ ಉಸಾಬರಿಯೇಕೆ?
ನೆನಪು…ಮರೆತುಹೋಗಲಿ…ಮರುಕಳಿಸದಿರಲಿ…ಎಂದರೆ ಸಾದ್ಯವೇ?
ನನಂತೆ ಅವಳಿಗಾಗದಿರಲೆಂದು ಬಯಸುವುದು ತಪ್ಪೇ?
ಸೂತ್ರದಾರನಿಲ್ಲದ ನೌಕೆಯಂತಾಗಿರುವ ಜೀವನಕ್ಕೆ ಸೂತ್ರ ಅವಶ್ಯಕವೇ?
ಕಾರ್ಮೋಡ ಬರಲಿ…ಬಾನು ಗುಡುಗಲಿ…ಭುವಿ ನಡುಗಲಿ ಅಂಜಿಕೆಯೇಕೆ?
ಅವರವರ ಕರ್ಮ ಅವರೇ ಅನುಭವಿಸುವಂತೆ…ಅವಳೂ ಅನುಭವಿಸಲಿ ಬೇಧವೇಕೆ?
ಪ್ರಶ್ನೆಗಳ ಸುರಿಮಳೆಯಾದಂತೆ…
ಆಲೋಚನೆಗಳು ಕಾಡುವಂತೆ…
ನೆನಪುಗಳು ಬತ್ತಿ ಹೋಗಬಾರದೆ…
ಕಾರ್ಮೋಡಗಳೇ ಬೇಗ ಮಳೆ ಸುರಿಸಿ…
ಅಳಿಸಿ ಹೋಗಲಿ ನೆನಪುಗಳು…
ಉದಯಿಸಲಿ ನವೋನ್ಮಾಧ….
ಬುದ್ದೀ ಬರಲಿ ನನ್ನಂತಹ ಜಂಭದ ಕೋಳಿಗಳಿಗೆ….
Hipparagi Siddaram
”””””””””””””””””””””””””””””””””””””””””””””””””
ತಂಪೆಲರರುಹಿಗೆ ಮಾರ್ದವ ನನ್ನೆದೆ
ನಿನ್ನಯ ಇನಿದನಿ ಮಾರ್ದನಿಗೆ
ಕಳೆಯಿತು ತಂಪಿನ ತಿಂಗಳು ತಿಂಗಳು
ನೀನಿಲ್ಲದೆ ಹಾಗೇ

ಮೂಡಿತು ಮಲ್ಲಿಗೆ ಮೊಗ್ಗರಳಿ ಮೆಲ್ಲಗೆ
ಪಸರಿಸಿ ಮಧುರ ಸುಧೆಯ ಕಂಪು
ತೇಲಿ ಕೋಗಿಲೆಯ ದನಿಯಲಾಂತು
ಮೀಟಿ ಎದೆಯಲೇಕೋ ತಂತು
ಮಧುರ ನೋವ ಕಂಪನಾ
ಮತ್ತೆ ಮತ್ತೆ ಮೀಟಿ ತಂತು
ಅಧರ ಸುಧೆಯ ನೆನಪನಾ
Bellala Gopinath Rao
”””””””””””””””””””””””””””””””””””””””””””””””””
ತನ್ನತ್ತ ಬರುವುದೆಲ್ಲಾ ಚಿಂತೆ
ಒಬ್ಬಳ ಪಾಲಿನ ಮನಸ್ಸು ಜೀವನ
ನನ್ನಕ್ಕ ನೀಡುವ ಪ್ರೀತಿ ಅಕ್ಕರೆ
ಸುತ್ತೂರು ಸುತ್ತಿದರೂ ಸಿಗದದು

ಮತ್ತೊಮ್ಮೆ ಮುತ್ತಿನ ಮಾತು
ಕೈಯಾಡಿಸಿ ತಲೆ ಮೇಲೆ ಭರವಸೆ
ನುಡಿವಳು ಮುದ್ದಾದ ಪದಗಳ
ನಾನು ನಿನ್ನೊಡನೆ ಇದ್ದಾಗ ಚಿಂತಿಸದಿರು
ಮನಸ್ಸು ನೀನು ನನ್ನೇ ಪ್ರೀತಿಸು
””””””””””””””””””””””””””””””””””””””””””””””””” 

http://www.facebook.com/photo.php?fbid=1896475187984&set=o.195906690495079&type=1&theater

ಚಿತ್ರ ನೋಡಿ ಕವನ ಬರೆಯಿರಿ – 10

ಕೇಳಿದೆ ನನ್ನವನ
ಪ್ರೇಮಿಗಳ ದಿನ ಇಂದು
ಕೊಡುವೆ ನನಗೇನು ಎಂದು….
ನಿನ್ನ ಪ್ರೀತಿ ಇದ್ದರೆ ದಿನವೂ
ಪ್ರೇಮದ ಹಬ್ಬ…
ನನ್ನೇ ನಾ ನಿನಗೆ ಕೊಟ್ಟ ಮೇಲೆ
ಇನ್ನೇನ ನೀಡಿದರೇನು ನೀಡದಿದ್ದರೇನು ನೀನೇ ಹೇಳೆಂದ
Sunitha Manjunath
”””””””””””””””””””””””””””””””””””””””””””””””””
 ಪ್ರೇಮಿಗಳ ದಿನ ಇಂದು ಎಂದೆಂದೂ

ಮೀಸಲಿಡಬೇಕಿಲ್ಲ ಕೇವಲ ಫೆ.೧೪ರಂದು
ಇದ್ದರೆ ಸಾಕು ಪ್ರೀತಿಯೊಂದು
ಆಚರಿಸಬೇಕಿಲ್ಲ ತೋರ್ಪಡೆಗೆಂದು
Shishir Hegde
”””””””””””””””””””””””””””””””””””””””””””””””””
ಪ್ರೀತ್ಸೋರ್ಗಾಗೆ ಪ್ರೇಮಿಗಳ ದಿನ ಇರ್ಲಿ…
ಅಂತಾರಪ್ಪ ನಮ್ಮ ಯುವಕ ಯುವತಿಯರು.

ಇಷ್ಟದಿನ ಹೇಳಲಾಗದ ಮಾತಗಳನ್ನ..
ಚಡಪಡಿಸುವ ಪ್ರೇಮದ ತಮುಲವನ್ನ
ವ್ಯಕ್ತ ಪಡಿಸೋಕಾಗಿ ವರ್ಷಕ್ಕೊಮ್ಮೆ ಬರುವ
ಈ ದಿನಕ್ಕಾಗಿ ಕಾಯ್ತಾರಂತೆ…

ಆದ್ರೆ ಇದೆಲ್ಲಾ ನಮ್ಮ ಪದ್ದತಿಯಲ್ಲ..
ಪ್ರೇಮ ನಿವೇದನೆಗೆ ಇದೊಂದೇ ದಿನವೇ..??
ತಿಳಿದೋರು ಬೇಡವೆಂದು ಎಚ್ಚರಿಸುತ್ತಾರೆ.

ಹೇಗೋ.. ಏನೋ ಸಂಭ್ರಮಿಸಿ ಸಮ್ಮಾನದಿ
ಪ್ರೀತಿ ಯಾರಲ್ಲಿಲ್ಲ..?
ಅದಕ್ಕೆ ವಯಸಿನ ಮಿತಿಯೂ ಇಲ್ಲ..
ದಿನಗಳ ಗಡಿಯೂ ಇಲ್ಲ..
Bhagirathi Chandrashekar
”””””””””””””””””””””””””””””””””””””””””””””””””
ನಿಜವಾದ ಪ್ರೇಮಿಗಳಿಗೆ ವರ್ಷವೆಲ್ಲಾ ವ್ಯಾಲಂಟೆನ್ಸ್ ಡೇ..
ಆದ್ರೆ ಅಪ್ಪನ ದುಡ್ಡಲ್ಲಿ ಮಜ ಮಾಡುವವರಿಗೆ ಇದು ಜಾಲಿ ಡೇ..

ಪಬ್ಬು ಕ್ಲಬ್ಬು ಅಂತ ಬೆತ್ತಲೆ ಕುಣಿಯುವುದು ನಮ್ ಸಂಸ್ಕೃತಿನಾ.?
ಹೆಂಡ ಕುಡಿದು ಮತ್ತಿನಲ್ಲಿ ಮೈಮರೆಯುವುದು ಒಂದು ಪ್ರೀತಿನಾ.?

ಕರ್ಚಿಗೆ ಕಾಸು ಓಡ್ಸೋಕೆ ಬೈಕು ಇದ್ದಾಗ ಹುಡುಗರಿಗೆ ಬೇಕು ಹುಡುಗಿ,
ತನ್ನ ಶೋಕಿ, ಸಿನೆಮಾದ ಹುಚ್ಚು ಬಿಟ್ಟಿ ಕಾಫಿಗಾಗಿ ಒಪ್ಪುತ್ತಾಳೆ ಆ ಬೆಡಗಿ.

ಇದೆಲ್ಲ ಕೇವಲ ವಿದೇಶಿಗರಿಗೆ ಮಾತ್ರ ಇದು ನಮಗೆ ಬೇಕಾಗಿಲ್ಲ ಮಾನವ
ಭಾರತೀಯನಾಗಿ ದೇಶಿ ಸಂಸ್ಕೃತಿಯ ಮರೆತು ನೀನಾಗಬೇಡ ದಾನವ……….

(ಕ್ಷಮಿಸಿ ಎಲ್ಲರಿಗೂ ಇದು ಅನ್ವಯಿಸುವುದಿಲ್ಲ!!)
Pradeep Hegde
”””””””””””””””””””””””””””””””””””””””””””””””””
ಪ್ರಶ್ನೀಸುತ್ತಿರಿ ಓಕೆ-ಯಾಕೆ ಎಂದು
ಅದು ಜಗದಗಲ-ಮುಗಿಲಗಲ ವ್ಯಾಪಿಸಿರುವಾಗ
ನಿಯಂತ್ರಿಸುತ್ತೇವೆಂಬ ಹುಂಬತನದ ಹಂಗೇಕೆ?
ಸೃಷ್ಟಿಯ ಆರಂಭದಿಂದಲೂ ನಡೆದಿರುವ ಕ್ರಿಯೆ…
ಒಳ್ಳೆಯದು ಉಳಿದಿದೆ ; ಕೆಟ್ಟದ್ದು ಕಳಚಿಕೊಂಡಿದೆ !
ಸೃಷ್ಟಿಯಲ್ಲಿರುವ ಜೀವಿಗಳೆಲ್ಲವೂ ಅಗೋಚರ ಶಕ್ತಿಯ ಫಲಾಫಲಗಳು
ದೊಣ್ಣೆನಾಯಕನ ಅಪ್ಪಣೆ ಹಂಗೇಕೆ ಬೇಕು ಭುವಿಯಲಿ ಬದುಕಲು…ಆಚರಿಸಲು…
ಸಹಚರರಿಗೆ ತೊಂದರೆಯಾಗದಂತೆ ನಿಗಾವಹಿಸುವುದು ಮಾನವ ಸಹಜಧರ್ಮ
ಪ್ರೀತಿ-ಪ್ರೇಮ ಎಂಬುದು ರಸಿಕ ಜೀವನದ ಸ್ವರ-ವ್ಯಂಜನಗಳು…
ಮಿತಿಯಲ್ಲಿ ಆಚರಿಸಿ…ಮಿತಿಮೀರದಿರಿ…
ಮಿತಿಮೀರಿದರೆ ಆಗುವುದು ನಾಡರಕ್ಷಕರಿಂದ ತೊಂದರೆ…
ಆಚರಿಸಿ ಆದರೆ ದೇಶ-ಭಾಷೆ ಸಂಸ್ಕೃತಿಗೆ ಅವಮಾನಿಸದಿರಿ!
ಅಳವಡಿಸಿಕೊಳ್ಳಿ ನಮಗೆ ಸರಿಹೊಂದುವಂತಿದ್ದರೆ !
ಅವಮಾನಿಸಬೇಡಿ ನಮ್ಮ ಸ್ವಂತಿಕೆಯನ್ನ
ಮನೋಸಹಜಗುಣವನ್ನು ವ್ಕಕ್ತಪಡಿಸಲು ನಯನಾಜೂಕಿನ ಮಾರ್ಗಗಳುಂಟು !
ಗೊತ್ತಿದ್ದೂ ಪ್ರಶ್ನೀಸುತ್ತಿರಿ ಓಕೆ-ಯಾಕೆ ಎಂದು !
Hipparagi Siddaram
”””””””””””””””””””””””””””””””””””””””””””””””””
ರಾತ್ರಿಯೆಲ್ಲಾ ಆಲೋಚಿಸಿದ್ದು
ಕೇಳಬೇಕು ಅವಳಲ್ಲಿ
ವ್ಯಾಲೆಂಟೇನ್ಸ ಡೇ…ಗೆ
ಏನು ಕಾಣಿಕೆ ನೀಡಲಿ ಎಂದು !

ಎಷ್ಟನೇ ವರ್ಷವೆಂದು ಜ್ಞಾಪಕವಿಲ್ಲ
ಧೈರ್ಯದಿಂ ಮುಂದುವರೆದ ಮುರಳಿಗೆ ಮುದಿತನ
Hipparagi Siddaram
”””””””””””””””””””””””””””””””””””””””””””””””””
ಪ್ರೀತಿ ಪ್ರೇಮ ಒಂದು ಸುಂದರ ಅನುಭೂತಿ
ಇದಕೆ ಇಲ್ಲ ಯಾವದೇ ವಯಸಿನ ಇತಿಮಿತಿ
ಮುಗಿಸದಿರಿ ಆಚರಿಸಿ ಹಬ್ಬದಂತೆ ಒಂದೇ ದಿನ
ಬದುಕಿನುದ್ದಕ್ಕೂ ಇರಲಿ ನೆರಳಂತೆ ,ಅನುದಿನ
Mamatha Keelar
”””””””””””””””””””””””””””””””””””””””””””””””””’
ಗುಲಾಬಿಯ ಮಾತುಗಳು..

ಇಂದೇಕೋ ಮಾಲಿ ಬಲು ಬೇಗನೆ ಬಂದ
ಮಾಲೀಕನೇ ಕಳುಹಿಸಿದನಂತೆ.
ಕಿತ್ತು ತನ್ನಿ ನನ್ನ ಮತ್ತು ನನ್ನ ಬಳಗವ ಎಂದನಂತೆ.
ಹೆತ್ತೊಡಲಿಂದ ಬೇರ್ಪಡಿಸುವುದು ಯಾಕೆ?
ನಾ ಕೇಳಿದ ಪ್ರಶ್ನೆಗೆ ಮಾಲಿ ನಕ್ಕು ನುಡಿದ
“ಇಂದು ಪ್ರೇಮಿಗಳ ದಿನ ತಾನೆ”
“ನಿನಗೆ ಬಹು ಬೇಡಿಕೆ ಮಾರುಕಟ್ಟೆಯಲಿ”
ನಾ ಮನದೊಳಗೇ ಅತ್ತೆ..
ಪ್ರೇಮಿಗಳ ದಿನದಲ್ಲಿ ನನಗೇಕೆ ಈ ಶಿಕ್ಷೆ?
ನನ್ನ ಮೈ ಬಣ್ಣ ಅವರ ಭಾವನೆಯ ಬಿಂಬಿಸುವುದಂತೆ.
ಅವರೊಳಗೆ ನನ್ನ ವಿನಿಮಯ ಪ್ರೇಮದ ಸಂಕೇತವಂತೆ.
ಯಾಕೆ ಅವರಿಗೇನು ಮಾತು ಬಾರದೆ..?
ನಾನೇಕೆ ಬಲಿಯಾಗಬೇಕು ಇವರ ಪ್ರೇಮಕ್ಕೆ..
ಕಾಲ ಕಸವಾಗುವುದಷ್ಟೇ..ಯುವತಿಯ ಮುಡಿಯಲ್ಲಿ ನೆಲೆಯಿಲ್ಲ,
ಹಿಂದಿನ ಕಾಲದಂತಲ್ಲ ಯುವತಿಯರಿಗಿಂದು ನನ್ನ ಮುಡಿವ ಮನಸಿಲ್ಲ.
ಪ್ರಿಯಕರನ ತೋಳ್ತೆಕ್ಕೆಯ ಸೇರಿದೊಡನೆ ಕಸದ ತೊಟ್ತಿಗೆ ನನ್ನ ಎಸೆವರಲ್ಲ.
ಭಗವಂತನ ಪಾದದಲಿ ನೆಲೆಯ ಕಾಣುವ ನನ್ನ ಬಯಕೆಯ
ಅರ್ಥವಿರದ ಆಚರಣೆಯ ನೆಪದಲ್ಲಿ ನುಚ್ಚು ನೂರುಗೊಳಿಸಿದರಲ್ಲ.

—ಕೆ.ಗುರುಪ್ರಸಾದ್
Guruprasad Acharya
”””””””””””””””””””””””””””””””””””””””””””””””””
“ನಮ್ಮ ಮನೆಯ ಅಂಗಳದಲ್ಲಿನ ಗುಲಾಬಿ ಹೂ ಗಿಡ
ಸುಮ್ಮನಾಯಿತು ಒಂದೇ ಹೂ ಬಿಟ್ಟು…..
ನಮ್ಮ ಮನೆಯ ಅಂಗಳದಲ್ಲಿನ ಗುಲಾಬಿ ಹೂ ಗಿಡ ಸುಮ್ಮನಾಯಿತು ಒಂದೇ ಹೂ ಬಿಟ್ಟು…
ಬಹುಶಃ ಅದಕೂ ತಿಳಿದಿರಬಹುದು ಕುಟುಂಬ ಯೊಜನೆಯ ಗುಟ್ಟು!!!
Haniyuru Chandre Gowda Channapatna
”””””””””””””””””””””””””””””””””””””””””””””””””
ಪ್ರೀತಿ ಇತ್ತು ಹಿಂದೆ
ಮನದಾಳದಲ್ಲಿ
ಇಂದು ಇದೆ
ಬಹಿರಂಗವಾಗಿ
ಯಾಕೆ ಹೀಗೆ
ಎಂಬದರಿವಿಲ್ಲ
ಸಂಸ್ಕೃತಿಯ
ಅಳಿವಿನ ಅರಿವಿಲ್ಲ
ಸಹಜವಾದ ಪ್ರೀತಿ
ಮಾಯವಾಗಿಹುದಿಲ್ಲಿ
ಕ್ಷಣಕ್ಕೊಂದು ಬಣ್ಣ
ಬದಲಾಯಿಸುವ
ನಮ್ಮಗಳ ಪ್ರೀತಿಗೆ
ಬೇಕಿತ್ತು ಸಂಭ್ರಮಪಡುವ ದಿನ
ಸಿಕ್ಕಿದೆ ಆ ದಿನ
ನಿಜವಾದ ಪ್ರೀತಿ
ಮಾಯಾವಾಗುತಿಹುದಿಲ್ಲಿ
ಅಂತರಾಳದಿಂದ ಬರುವ
ಪ್ರೀತಿಗಿರುವ ಬೆಲೆ
ಒಂದು ದಿನದ
ಪ್ರೀತಿಯಲಿಲ್ಲದಿಹುದು…
ಮನದಾಳದಿಂದ ಮೂಡಬೇಕಿದೆ
ಪ್ರೀತಿಯ ಸೆಲೆ ನಮ್ಮಲ್ಲಿ
ಅದು ಯಾವಾಗ
ಕಾದು ನೋಡೋಣ
Rudresh Rajashekharaiah
”””””””””””””””””””””””””””””””””””””””””””””””””
http://www.facebook.com/photo.php?fbid=1889941464645&set=o.195906690495079&type=3&theater

ಚಿತ್ರ ನೋಡಿ ಕವನ ಬರೆಯಿರಿ – 9

ಗುಡ್ಡದ ಮೇಲೊಂದು
ಭೂತವು ಇದೆಯೆಂದು
ಕಂಡಿದ್ದೆ ಕನಸೊಂದು
ಹೆದರಿದ್ದೆ ನಾ ಅಂದು….

ಕನಸನ್ನು ಮತ್ತೊಮ್ಮೆ ನೆನೆದು
ಭಯದಲ್ಲಿ ಮನದಲ್ಲೇ ನೊಂದು
ಕೇಳಿದೆ ಗೆಳಯರ ನಿಜ ಏನೆಂದು
ಯಾರ ಬಳಿಯೂ ಉತ್ತರ ಸಿಗದು…

ಹೆದರದ ಗೆಳಯರೆಲ್ಲ ಕೂಡಿ
ಹಲವಾರು ಚಿಂತೆಯ ಮಾಡಿ
ಒಮ್ಮೆ ಆ ಗುಡ್ಡವನ್ನು ನೋಡಿ
ಬಂದೆವು ಅಲ್ಲಿಂದ ಓಡೋಡಿ…

ಗುಡ್ಡದ ಮೇಲೊಂದು ಬೆಳ್ಳನೆ ಆಕಾರ
ಅಲ್ಲಿತ್ತು ಮಾತಾಡೋ ಅಸ್ಥಿಪಂಜರ
ನೋಟದಲ್ಲಿ ಅದೊಂದು ವಿಚಿತ್ರ ಅವತಾರ
ಹೇಗೆ ಹೇಳೋದು ಅದರ ವಿಕಾರ ವಿಚಾರ…..

ಕುಣಿಯುತ್ತೆ ಅದು ತಯ್ಯಾ ತಕ್ಕ
ಬಂದು ನಿಲ್ಲುತ್ತೆ ನಮ್ಮಾ ಪಕ್ಕ
ಅದಕಿಲ್ಲಿ ಸಿಗುತ್ತೆ ಭಾರೀ ಸುಖ
ನಮಗಂತೂ ಇಲ್ಲಿ ಅಯ್ಯೋ ದುಃಖ….

ಕರಿಯುತ್ತೆ ನಮ್ಮ ಹೆಸರ
ತರಿಸುತ್ತೆ ನಮಗಿಲ್ಲಿ ಬೆವರ
ತಿರುಗಿದರಿಲ್ಲಿ ಬಲು ಘೋರ
ಇರುತ್ತೆ ನಮ್ಮ ಬೆನ್ನ ಹತ್ತಿರ…
|| ಪ್ರಶಾಂತ್ ಖಟಾವಕರ್ ||
Prashanth P Khatavakar
“””””””””””””””””””””””””””””””””””””””””””””””””””””””””””””‘
ಸ್ವಾರ್ಥ ಸಾಧನೆಯ ಸ್ವರೂಪ
ಈ ದೃಶ್ಯವು ಅತೀ ಅಪರೂಪ
ಯಾವ ಲಾಭಕ್ಕಾಗಿ ವೀರ ಪ್ರತಾಪ
ಅವನು ಮಾಡಿದ್ದೆಲ್ಲವೂ ಘೋರ ಪಾಪ

ದುಷ್ಟ ಶಕ್ತಿಯ ಧಾಳಿಯ ಪ್ರಕೋಪ
ಇದರಿಂದಲೇ ಪ್ರಕೃತಿ ವಿಕೋಪ
ಮೌನಗೀತೆಯ ಸಣ್ಣ ಸಂತಾಪ
ಕನಸಲ್ಲಿ ಬರಲು, ಮೈಯಲ್ಲಾ ತಾಪ
|| ಪ್ರಶಾಂತ್ ಖಟಾವಕರ್ ||
Prashanth P Khatavakar
“””””””””””””””””””””””””””””””””””””””””””””””””””””””””””””‘
ಕ್ರೂರಿ, ಸರ್ವಾಧಿಕಾರಿ,
ಜನಾಂಗೀಯ ಹಿಂಸಾಚಾರಿ
ಅವನೇ ಈ ಇದಿ ಅಮೀನ್..

ಅಪ್ಪನಿಂದ ತೊರೆಯಲ್ಪಟ್ಟನಿವನು..
ಕಕಾವ ಜನಾಂಗೀಯನು
ಹುಟ್ಟು ಸಾಮಾನ್ಯದ್ದಾದರೂ
ಸರ್ವಾಧಿಕಾರಿಯಾಗಿ ಮೆರೆದವನು.

ವಿದ್ಯೆಗೆ ವಿದಾಯ ಹೇಳಿ
ಸೇರಿದ್ದು ಇಸ್ಲಾಂ ಮತಕ್ಕೆ..
ಸೈನ್ಯ ವೃತ್ತಿಜೀವನದಲಿ
ಮೇಲೆ ಮೇಲೆ ಏರಿದ..

ತನದೆ ಸೈನ್ಯ ಕಟ್ಟಿ ದಬ್ಬಾಳಿಕೆಯಲಿ
ಅನಧಿಕೃತ ಅರಸನಾದ..
ಅವನ ಈ ಆಡಳಿತದಲ್ಲಿ
ಬಲಿಯಾದವರೇಷ್ಟೋ ಕೋಟಿ..!

ಆರು ಹೆಂಡಿರ ಸರಿ ಸುಮಾರು
ನಲವತ್ತು ಮಕ್ಕಳ ತಂದೆ..
ಕೊನೆಗೂ ಗಡಿಪಾರಾದ..
ಆದರೇನು ಅವನೆಂದೂ ತನ್ನಾಡಳಿತದ ಬಗ್ಗೆ ಮರುಕ ಪಡಲೇ ಇಲ್ಲ..ಕ್ರೂರಿ!
Bhagirathi Chandrashekar
”””””””””””””””””””””””””””””””””””””””””””””””””
ಹೆಸರು ಇದಿ ಅಮೀನ ದಾದಾ ಮಿಲಿಟರಿ ಮನುಷ್ಯನವ
ಬರೆದ ಉಗಾಂಡದಲಿ ಹಿಟ್ಲರನಂತೆ ಇತಿಹಾಸವ
ತಾನೇ ಸರ್ವಾಧಿಕಾರಿ ಧೋರಣೆ ಇವನಿಗೆ
ಪರರ ಅಭಿಪ್ರಾಯಕೆ ಬೆಲೆ ಇಲ್ಲ ಅಲ್ಲಿಗೆ
ಸರ್ವರೂ ತಲೆ ತೂಗಬೇಕು ತನ್ನ ಮಾತಿಗೆ ಅಂದುಕೊಂಡ
ತಪ್ಪಿದರೆ ಬೇರೆ ಆಗುತ್ತಿತ್ತು ಅವರ ರುಂಡ-ಮುಂಡ
ಇವನೊಬ್ಬ ಮಾನವ ರೂಪದ ರಕ್ತ ಪಿಪಾಸಿ
ಕೊನೆಗಳಿಗೆಯಲ್ಲಿ ಆಗಿಹೋದ ಬಿಕನಾಸಿ
ಮೋಸ ಕ್ರೂರತೆಗೆ ಇವನೊಂದು ಮಾದರಿಯಾದ
ಅಂತು ಹೇಗೋ ಜೀವ ಉಳಿಸಿಕೊಳಲು ಗಡಿಪಾರಾದ
Mamatha Keelar
”””””””””””””””””””””””””””””””””””””””””””””””””’

http://www.facebook.com/photo.php?fbid=1883649827358&set=o.195906690495079&type=3&theater

ಚಿತ್ರ ನೋಡಿ ಕವನ ಬರೆಯಿರಿ – 8

ಮೂಡನಂಬಿಕೆಯ ಬೆನ್ನೇರಿ ಹೋದೆಯಾ ಮೂಡ
ಮುಗ್ಧ ಮಗುವನ್ನು ಹೂಳುವ ನಿನ್ನ ಕ್ರುತ್ಯ ಹೇಯ
ಜಗತ್ತು ಮುನ್ನುಗುತ್ತಿದೆ, ಕಾಲಮಾನ ಬದಲಾಗುತಿದೆ
ನೀ ಬದಲಾಗಲಿಲ್ಲ ಅದುವೇ ಬೇಸರ 😦

ಯಾರದೋ ಮಾತು ಕೇಳಿ ನೀ ದುಷ್ಟನಾದೆಯ
ಹೇ ಮರುಳ ನಿನಗೆ ಕ್ಶಮೆ ಇಲ್ಲ ಕಣಯ್ಯ
ಮಗುವನ್ನು ಮಣ್ಣುಮಾಡುವ ನಿನಗೆ
ಪಾಪಿಗಳ ಲೋಕದಲ್ಲೂ ಜಾಗ ಇಲ್ಲ
Ravi Sakleshpur
”””””””””””””””””””””””””””””””””””””””””””””””””’
ಜಗತ್ತನ್ನು ಅರಿಯುವ ಮುನ್ನವೆ
ಮಣ್ಣಿಗೆ ಸೇರಿದವೇ!
ಮಕ್ಕಳನ್ನು ಹಿಸುಕಿಹಾಕಿದೆಯಾ
ನಿನಗೆ ಮನುಷ್ಯತ್ವ ಇಲ್ಲವೇನಯ್ಯಾ

ಕೇವಲ ನೀನು ಬದುಕಿದರೆ ಸಾಕೇ??
ಮುಗ್ಧರನ್ನು ಬಲಿಕೊಟ್ಟೆಯಾ ನಿನ್ನ ಸ್ವಾರ್ಥಕ್ಕೆ??
ನಿನ್ನ ಪ್ರಾಣವನ್ನು ಬಲಿಕೊಡಲಿಲ್ಲ ಏಕೆ?
ಮಕ್ಕಳು ದೇವರ ಸಮಾನ.. ಜೋಕೆ!!
Shishir Hegde
”””””””””””””””””””””””””””””””””””””””””””””””””’
ತಿಂದರೆ ಹಿಡಿ ಅನ್ನ..
ಸತ್ತರೆ ಹಿಡಿ ಮಣ್ಣು..
ನಡುವಿರುವ
ನಾಲ್ಕು ದಿನಕೆ..
ಈ ಪರಿಯ ಧನ ದಾಹವೇಕೇ
ಚಿಗುರ ತಿನ್ನುವೆ ರಕ್ಕಸತನವೇಕೇ
Sunitha Manjunath
”””””””””””””””””””””””””””””””””””””””””””””””””
ಹೆತ್ತವರು ಬೇಕೆಂದಾಗ ಮಗುವ ಹಡೆಯುವುದ್ಯಾಕೋ.?
ಹಣದಾಸೆಗೆ ಆ ಮಗುವ ಬಲಿ ಕೊಡುವುದ್ಯಾಕೋ.?
ಇವರ ತೀಟೆ ತೀರಿಸಲು ಮಕ್ಕಳ ಹೆಸರ್ಯಾಕೋ.?
ಮನುಷ್ಯತ್ವ ಇಲ್ಲದೇ ಈ ಥರ ಅವರ ಕೊಲ್ಲುವುದ್ಯಾಕೋ.?
ಮೂಡನಂಬಿಕೆಯ ಕಾರ್ಮೋಡದೊಳಗೆ ಕರಿದಾಗಿದೆ ಈ ಜನತೆ,
ಮಾನವಿಯತೆ ಮೆರೆಯಬೇಕು ಮೋಡವ ಭೇಧಿಸುವ ಆ ಸೂರ್ಯರಶ್ಮಿಯಂತೆ
Pradeep Hegde
”””””””””””””””””””””””””””””””””””””””””””””””””’
ಹೂವಾಗಿ ಅರಳುವ ಮುನ್ನವೇ..
ಮಣ್ಣುಗೂಡಿವೆ ಕಂದಮ್ಮಗಳು.
ಯಾವ ಪಾತಕಿಯ ಧನದಾಹವೋ..
ಬಲಿ ಕೊಟ್ಟಿತೀ ಮುಗ್ದ ಶಿಶುಗಳ.
ಓ..ಜಗವೇ.ನಿನ್ನೊಡಲೆಂತೆಂಥಹ..
ಪಾಪಿ ಪಾತಕಿಗಳು..!
ಇವರಿಗೇಕಿಲ್ಲ ತಕ್ಕ ಶಿಕ್ಷೆ…!
Bhagirathi Chandrashekar
”””””””””””””””””””””””””””””””””””””””””””””””””
ಒಡಲಲ್ಲಿ ಹೆತ್ತ ಕೂಸನ್ನು
ಒಲವಿಂದ ಹಾಲುಣಿಸಿ, ಬೆಳೆಸಿ
ಬದುಕನರಿಯುವ ಮುನ್ನವೇ
ಭುವಿಯೊಳಗೆ ಹುದುಗಿಸುವ
ಕಟು ಕೃತ್ಯ
ಯಾವ ಪಾಪಕ್ಕಾಗಿ ತಿಳಿಯದು..!
Meghana Bhat
”””””””””””””””””””””””””””””””””””””””””””””””””
ತಾಯಿಯ ರೋದನ

ಯಾರಂದವರು ಇವಳು(ಭೂತಾಯಿ)
ಸಹನಾಮೂರ್ತಿ ಎಂದು?
ಕರುಣಾಮಯಿ ಎಂದು?
ಮಮತೆಯ ತೊಟ್ಟಿಲೆಂದು?
ನವಮಾಸ ಹೊತ್ತು ಹೆತ್ತು
ಇವಳ ಮಡಿಲಲಿ ನನ್ನ ಕಂದಮ್ಮಗಳ
ಬಿಟ್ಟಿದ್ದೇ ತಪ್ಪಾಯಿತೇನೋ…
ಅವುಗಳ ಬೆಚ್ಚಗಿನ ಸ್ಪರ್ಶ
ಇವಳ ಅಂತರಂಗದಲಿ
ಮಮಕಾರವನೆಬ್ಬಿಸಿದವೇನೋ..
ತಾ ಹೆರದ ಮಕ್ಕಳ ತುಂಟಾಟ
ಇವಳೊಳಗಿನ ಹೊಟ್ಟೆಕಿಚ್ಚನು
ಹೆಚ್ಚಿಸಿದವೇನೋ..
ಅದಕಾಗಿ ಸಣ್ಣಗೆ ನಡುಗಿ
ಈ ಕಂದಮ್ಮಗಳ ಬರಸೆಳೆದಳೇನೋ..
ನನ್ನ ಗರ್ಭದೊಳಗಿಂದ ಬಂದ
ಮುತ್ತು ರತ್ನದಂತಾ ಕೂಸುಗಳ
ತನ್ನ ಗರ್ಭದೊಳಗಿರಿಸಿಕೊಂಡಳೇನೋ..
Guruprasad Acharya
”””””””””””””””””””””””””””””””””””””””””””””””””
ಭೂತಾಯಿಯ ಒಡಲ ಬಗೆದು ತೆಗೆದರು ಅದಿರು
ತಡೆವವರಾರು ಇಲ್ಲವಾಯ್ತು ಇವರ ಕಾರುಬಾರು
ತುಂಬಿಕೊಂಡರು ತಮ್ಮ ಜೇಬನ್ನು ಎಣೆಸೆಣಿಸಿ ಹಣ
ಪಾಪ ಬಡ ಜನರು ಹುಗಿದರು ತಮ್ಮ ಮಕ್ಕಳ ಹೆಣ
ತೆಗೆದು ಕೊಳ್ಳಲಿಲ್ಲ ಯಾರು ಇದಕೆ ಸರಿಯಾದ ಕ್ರಮ
ನಡೆದೇ ಹೋಯಿತು ಹಸುಕಂದಗಳ ಮಾರಣ ಹೋಮ
ಮರುಗಿದರು ಜನ ಮಾಡಿ ಧನವಂತರ ಸಂಗ
ತಡೆವವರಿಲ್ಲವಾಯ್ತು ಮರಣ ಮೃದಂಗ
ಎಲ್ಲಮುಗಿದಮೇಲೆ ಎಚ್ಹ್ಹೆತ್ತರೆನಂತೆ
ಕೊಳ್ಳೆ ಹೊಡೆದನಂಥರ ಕೋಟೆ ಬಾಗಿಲ ಮುಚ್ಚಿದಂತೆ
Mamatha Keelar
”””””””””””””””””””””””””””””””””””””””””””””””””’
ಕೆಂಪು ಕುಡಿಗಳು ಧರೆಗೆ

ಸಮಾನತೆಯ ಯುಗದಲ್ಲೂ
ಆಯ್ಕೆಗಿಲ್ಲದ ಸ್ವಾತಂತ್ರ್ಯ

ಮೂಕ ಮೊಗ್ಗುಗಳ ಮಾರಣ ಹೋಮಕ್ಕೆ
ಹಸಿದ ಹೊಟ್ಟೆಗಳ ಪರದಾಟದ
ತಾಯ ಉದರಕ್ಕೆ ಕತ್ತರಿ
ಕೊಳೆತ ತರಕಾರಿಯ ಬಿಕರಿಗೂ
ಬರದ ಅನಾಥ ಸರಕು

ಸಾವಿರ ಸಂಖ್ಯೆಯಲ್ಲಿ
ಕಸದ ತೊಟ್ಟಿಗೆ ರವಾನೆ
ಚೀರಿ ಬಗೆದು ತಿನ್ನಲು
ನಾಯಿ ಕಾಗೆಗಳ ಕಸಿದಾಟ
ಇನ್ನೂ ಬಲಿಯದ ಅಮಾಯಕತೆ
ಹಾಡ ಹಗಲೇ ಬಿಕರಿಗೆ

ಸ್ವಾರ್ಥದ ಅಮಿಷಕ್ಕೆ
ಬೀಜಕ್ಕಿಲ್ಲ ಕುಡಿಯೊಡೆವ ದೆಸೆ
ಹಲವೆಡೆ ಅತಿವೃಷ್ಟಿ
ಕೆಲವೆಡೆ ಅನಾವೃಷ್ಟಿ
ಪ್ರಕೃತಿಯ ಜತೆಯಲ್ಲೇ
ಹೊಸಜೀವಿಯ ಮರುಸೃಷ್ಟಿ

ಕುಡುಗೋಲ ತುಂಬಾ
ಹುಸಿನೆತ್ತರ ಅಭಿಷೇಕ
ಕತ್ತಲ ಬಸಿರನ್ನೇ ಚಿವುಟಿ
ಬಿಸುಡಿದ ಸೃಷ್ಟಿ

ಸೂಜಿಯಲ್ಲೇ ಸೆಳೆದೆಳೆದು
ಜೀವರಸದ ಲೂಟಿ
ಕಂದ ಪೂರ್ವ ಸಂತತಿಯ
ಹಾಡ ಹಗಲೇ ನಿರ್ನಾಮ
ಮಿಟ್ಟೆ*ಯಾಗುವ ಮೊದಲೇ
ಕೆಂಪು ಕುಡಿಗಳು ಧರೆಗೆ
Bellala Gopinath Rao
”””””””””””””””””””””””””””””””””””””””””””””””””’

http://www.facebook.com/groups/kannadavesatya/240149889404092/?notif_t=group_activity

ಚಿತ್ರ ನೋಡಿ ಕವನ ಬರೆಯಿರಿ – 7

ಎಲ್ಲಿರುವೆ ಬಾ ಬೇಗ ಓ ನನ್ನ ಮುದ್ದು ಅಮ್ಮ…
ಹೊಟ್ಟೆಯಲ್ಲಿ ಹೆದರಿಸುತ್ತಿದೆ ಹಸಿವೆಂಬ ಗುಮ್ಮ
Pradeep Hegde
”””””””””””””””””””””””””””””””””””””””””””””””””’

ಎಲ್ಲಿ ಹೋದೆ ನೀ ಬೇಗ ಬಾರಮ್ಮ
ಹಸಿವಾಗುತ್ತಿದೆ ತಿಂಡಿ ನೀಡಮ್ಮ
ಹಾವು ,ಗಿಡುಗ ಬಂದಾವೆಂಬ ಬೀತಿ
ತಪ್ಪಿಸಿಕೊಳ್ಳೋದ್ ಹೇಗೆ ಅನ್ನೋಪಜೀತಿ
ರೆಕ್ಕೆ ಪುಕ್ಕ ನಮಗಿನ್ನೂ ಬಲಿತಿಲ್ಲ
ಹಾರೋಕೆ ನಾವಿನ್ನೂ ಕಲಿತಿಲ್ಲ
ಬಾಯಿ ತೆರೆದು ಕಾಯುತಿರುವೆವು
ಹಸಿವಿಂದ ಕೂಗುತಿರುವೆವು
ಅಮ್ಮಾ ಅಮ್ಮಾ ನೀ ಬೇಗ ಬಾರಮ್ಮಾ
Mamatha Keelar
”””””””””””””””””””””””””””””””””””””””””””””””””’

ಹೊಟ್ಟೆ ಹಸಿವಿಗಲ್ಲಮ್ಮ ಈ ಚಿಲಿಪಿಲಿ…
ನಿನ್ನ ಸನಿಹಕ್ಕಾಗಿ ಈ ಕೂಗೋ ಚಳುವಳಿ…
ನೀಡೆಮಗೆ ನಿನ್ನ ಸಾಮೀಪ್ಯದ ಬಳುವಳಿ
Sunitha Manjunath
”””””””””””””””””””””””””””””””””””””””””””””””””
ಅಬ್ಬಾ! ಏನಿದು ಅಕ್ಷಯ ಹಸಿವು,
ಅಮ್ಮನ ಕಾಯುತ ಏರಿದೆ ಕಾವು,
ಬೇಗನೇ ತಾರೇ,ಹಣ್ಣಿನ ತುಣುಕು,
ದಾಹವು ತೀರೇ,ನಲಿವೆವು ಬೆರೆತು.
Nandish Bankenahalli
”””””””””””””””””””””””””””””””””””””””””””””””””
ಹಸಿರಿನ ಒಡಲಲಿ ಕಾದಿವೆ ಜೀವ,
ಅಮ್ಮ ಬಾರೆ,ಉಣಿಸಲು ಬೇಗ,
ಹೂಮರಿಗಳ ಹಸಿವಿನ ಚೀರಾಟವು ಈಗ,
ಕಾನನದಿ ಪಸರಿಸೇ,
ಹಸುರಿನ ಎದೆಯಲ್ಲಿ ಉದ್ವೇಗ.
Nandish Bankenahalli
”””””””””””””””””””””””””””””””””””””””””””””””””
ಹಸಿದ ಹೊಟ್ಟೆಗೆ ಈ ಕ್ಷಣದಲಿ ಬೇಕೆನಿಸಿದೆ ತಿನಿಸು
ತೆರೆದು ಬಾಯಿಯನು ಕಾಣುತಿಹೆವು ಆಹಾರದ ಕನಸು
ಬಾ ತಾಯೆ, ನೀ ಬಂದು ನಮಗೇನನ್ನಾದರೂ ಉಣಿಸು
ನಮ್ಮುದರದೊಳಗಿನ ಹಸಿವೆಯುರಿಯ ನೀನೀಗ ತಣಿಸು
Guruprasad Acharya
”””””””””””””””””””””””””””””””””””””””””””””””””
ಅಮ್ಮ ಎಷ್ಟು ಸುಂದರವೀ ಜಗವೂ..!
ಓ ಅಗಾದ ಗಗನ..!
ನಮಗೂ ನಿನ್ನಂತೆ ಮೇಲೆ ಮೇಲೆ ಹಾರುವಾಸೆ.
ರೆಕ್ಕೆ ಬಲಿಯದಿದ್ದರೂ…ಭಯವಿಲ್ಲ ನಮಗೆ..
ಎಷ್ಟು ದಿನ ನಿನ್ನ ತೋಳಲ್ಲೆ ಅಡಗಿರುವುದು
ನೀ ಬೇಗ ಬಂದು ಹಸಿವನ್ನು ತಣಿಸು
ಹಾರಲಪ್ಪಣೆ ಕೊಡು ಹರುಷದಿಂದ
Bhagirathi Chandrashekar
”””””””””””””””””””””””””””””””””””””””””””””””””
ಹಸಿವು ಆಗುತಿದೆ ಅಮ್ಮಾ
ಎಲ್ಲಿ ಹೋದೆ? ಕಾಣುತಿಲ್ಲ ಮುಗಿಲಲಿ ನೀನು
ಹಸಿವು ಬೆಂಕಿಯಂತೆ ಸುಡುತಿಹುದು
ಹಸಿವನು ನೀಗಿಸು ಅಮೃತವ ಉಣಿಸು
Nityanand Bhat
”””””””””””””””””””””””””””””””””””””””””””””””””

http://www.facebook.com/groups/kannadavesatya/238739372878477/?notif_t=like

ಚಿತ್ರ ನೋಡಿ ಕವನ ಬರೆಯಿರಿ – 6

ಮರದೊಳಗಿನ ಪ್ರತಿಮೆ ಬಲು ಸುಂದರ..
ಅದನ್ನು ಕೆತ್ತಿದ ಶಿಲ್ಪಿಯ ಕಲ್ಪನೆ ಅತೀ ಮಧುರ..
ಆದರೆ, ಆ ಮರಕೆ ತನ್ನ ಆಯುಧದಿ ಚುಚ್ಚುವಾಗ,
ಮೂಕರೋಧನೆ ಆತನಿಗೆ ಕಾಣದೇ ಹೋಯಿತಲ್ಲಾ.
ಶಿಲ್ಪಿಯ ಕಲ್ಪನೆ ಪೂರ್ತಿಯಾಗಲು ಮರಗಳೇಕೆ ಸಾಯಬೇಕು.?
ಕಸದಿಂದ ರಸ ಎಂಬಂತೆ ಹಳೆಯ ಸಾಮಾಗ್ರಿಯ ಬಳಸಿ,
ತನ್ನ ಪ್ರತಿಭೆಯ ಶಿಲ್ಪಿ ತೊರಿಸಬಹುದಲ್ಲವೆ..?
Pradeep Hegde
==================
ಮನುಜಾ, ನಿನಗೆ ಮನಸಿಲ್ಲವೇ
ಮನಸ್ಸಿದ್ದರೆ ಹೀಗೇಕೆ ಮಾಡುವೆ
ನಾನು ನೀಡುವೆ ನಿನಗೆ ಜೀವವಾಯು
ನೀನು ಏಕೆ ತೆಗೆಯುವೆ ನನ್ನ ಪ್ರಾಣವಾಯು
ನನ್ನ ಕಡಿದು ನೀನು ಸಾಧಿಸುವುದಾದರೂ ಏನು
ನನ್ನ ಉಳಿಸಿ ಬೆಳೆಸಬಾರದೆ ನೀನು ……….ಯೋಚಿಸು ಒಮ್ಮೆ ಕಡಿಯುವ ಮೊದಲು ಮರವನ್ನು
ಶ್ರೀ ಹರಿ
==================
ಭುವಿಯೇ ನಿನ್ನೊಡಲಿನಿಂದ
ಹುಟ್ಟಿ ಬಂದ ನನಗೆ
ಕಾಡುತ್ತಿಹುದು ಮಾನವರ
ಧಾರುಣವಾದ ಕಗ್ಗೊಲೆಯ ಭೀತಿ
ಮನುಜನ ಸ್ವಾರ್ಥದ ಛಾಯೆಯ ಪರಿ
ನನ್ನ ಅಸ್ತಿತ್ವವನ್ನಲುಗಾಡಿಸುತಿಹುದು
ನನಗಾಗಿ ಏನನ್ನು ಕೇಳಲಿಲ್ಲ
ನನ್ನಲ್ಲಿಹ ಎಲ್ಲವೂ ಅವರಿಗಾಗಿ
ನನ್ನ ಅಳಿವು-ಉಳಿವು ಅವರಿಗೆ ಬೇಕಿಲ್ಲ
ಅವರಿಗರಿವಿಲ್ಲ ನಾನಿಲ್ಲದೇ ಅವರಿಲ್ಲ….!!!
Rudresh Rajashekharaiah
==================
ನನ್ನೊಡಲಲ್ಲಿ(ಪ್ರಕೃತಿ) ನೀನೋ (ಮಾನವ)…
ನಿನ್ನೊಡಲಲ್ಲಿ (ಮಾನವ) ನಾನೋ(ಪ್ರಕೃತಿ) ….
ಗೆದ್ದರೆ ನಮ್ಮಿಬ್ಬರ ಒಲವು….
ಭುವಿಯಾಗುವುದು ಸ್ವರ್ಗಕ್ಕಿಂತಾ ಒನಪು..
Sunitha Manjunath
==================
ಭೂರಮೆಯ ಮಡಿಲಲ್ಲಿ..
ಅರಳಿರುವ ಈ ಕಲಾಕೃತಿ.
ಶಿಲ್ಪಿ ಕೆತ್ತಿದನಲ್ಲಿ..
ತನ್ನ ಸುಂದರ ಕಲಾಕೃತಿ.

ಎಷ್ಟೊಂದು ನೋವು,
ಕಾವು ಅವಳೆದೆಲ್ಲಿರಲು..
ಸಂಭ್ರಮದ ಗೆಲುವು,
ಇವನ ಮುಖಾರವಿಂದದಲೂ.

ಹೇಗೆ ಹೇಳಲಿ ನಾನು ಪ್ರಕೃತಿಯ ದುರ್ಬಳಕೆಯ…
ಪಾಲುದರಳಲ್ಲವೇ ನಾನೀ ಸ್ವಾರ್ಥಿಗಳ ನಡುವೆ
ಅವಳ ಅವಶೇಷದೀ ಹಾಳೆಗಳಲ್ಲಿ…
ಬಿಂಬಿಸುತ್ತಿರುವೆ ಅವಳದೇ ನೋವನ್ನು…!!
Bhagirathi Chandrashekar
==================
ಮನದ ವೃಕ್ಷ ನುಡಿದ ಕಿವಿಮಾತು

ಓ ಮಾನವ
ನೀನೆಷ್ಟು ಸುಂದರ

ನನಗೂ ಜೀವವಿದೆ
ಸಂಶೋಧನೆ ಮಾಡಿದೆ
ಅದರ ಕಲ್ಪನೆಯಲ್ಲೇ
ಸುಂದರ ಮೊಗವ ನೀ ಕಂಡೆ

ಆ ಮೊಗದಲ್ಲೂ ಸಹ
ನೋವನ್ನು ಚಿತ್ರಿಸಿದೆ
ಸತ್ಯವನ್ನು ನೀ ಭಾವಿಸದೆ
ಮನದ ಮಾತಿಗೆ ನುಡಿಯಾದೆ…

ಓ ಮಾನವ
ನೀನೆಷ್ಟು ಸುಂದರ

ನನ್ನ ಜನನದ ಕಾರಣವ
ನೀನು ತಿಳಿದಿರುವೆ
ಸಾಲು ಸಾಲು ವೃಕ್ಷಗಳ
ಜನನಕ್ಕೆ ನೀನಾದೆ ಕಾರಣ
ನನ್ನಿಂದ ನಿನ್ನ ಬಾಳಿನಲ್ಲಿ
ಸೊಗಸಾದ ತಳಿರು ತೋರಣ

ನನ್ನ ಜೀವನಕ್ಕೆ ಅರ್ಥ ಕೊಟ್ಟ
ನಿನ್ನ ಬಾಳಿನ ನೋವು ನಲಿವುಗಳಿಗೆ
ಇಂದು ನನ್ನ ಇಡೀ ಜೀವವನ್ನೇ
ನಿನಗೆ ಅರ್ಪಿಸಲು ನಾ ಸಿದ್ದವಿರುವೆ

ಹೇಗೆ ಬೇಕಾದರೂ ಬಳಸಿಕೋ
ಆದರೆ ನನ್ನ ಪುನರ್ಜನ್ಮಕ್ಕೆ
ದಾರಿಯನ್ನು ನೀ ಹುಡಿಕಿಕೋ
ಮಾತು ತಪ್ಪಿದರೆ ….
ನಷ್ಟ ನಿನಗೆ ನೆನಪಿರಲಿ.. 🙂
|| ಪ್ರಶಾಂತ್ ಖಟಾವಕರ್ ||
 Prashanth P Khatavakar
==================
ನಾನು ಈ ವನದ ವನದೇವತೆ
ಹೊರ ಇಣುಕಿ ಹಾಡುತಿಹೆ ಶೋಕಗೀತೆ
ಕಡಿದು ನಾಶ ಮಾಡುತಿಹೆ ಮನುಜ ನಮ್ಮ ಸಂತತಿ
ಅದರಿಂದ ತಂದುಕೊಳ್ಳುತಿಹೆ ನಿನ್ನದೇ ಅಧೋಗತಿ
ನಮ್ಮ ಜೀವದಾ ನಾಶ ,ಈ ಪ್ರಪಂಚದ ವಿನಾಶ
ಯಾಕೆ ಅರಿಯದಾದೆ ನೀ ಈ ಸತ್ಯ
ಕಾಡಿಲ್ಲದೆ ಸಿಗುವದು ಸುಖ ಅನ್ನುವದು ಮಿಥ್ಯ
ಓ ಮನುಜ ಇನ್ನಾದರೂ ಕಲಿ ಬುದ್ದಿಯನ್ನ
ಹಾಳು ಗೆಡವದಿರು ಈ ಲೋಕವನ್ನ .
Mamatha Keelar
==================
ಕೇಳುತ್ತಿಲ್ಲವೇ? ವೃಕ್ಷಗಳ ಅರಣ್ಯರೋಧನ?
ಗರಗಸದ ಗರಗರದಿ,
ಸರಪಳಿಯ ಜಣಜಣದಿ,
ಕೇಳದಿರಬಹುದು ಆ ಶೋಕಗಾನ?

ಯಂತ್ರಗಳ ತಂದು ಲಾರಿಗೇರಿಸುವಾಗ,
ಬಳಿ ನಿಂತು ಆಲಿಸಿ,
ಯಂತ್ರಗಳ ಆರ್ಭಟದಿ ಕೇಳದಿರಬಹುದು ನಿಟ್ಟುಸಿರಿನ ತನನ.

ಮತ್ತೆ ಕೇಳಿಸದಿರಲು,
ಒಂದರಿಂದೇ ಒಂದರಂತೇ ಹೊರಟ ಲಾರಿಗಳ ಬಳಿ ನಿಂತು ಆಲಿಸಿ,
ಕೇಳಬಹುದು ಬಿಗಿದು ಕಟ್ಟಿದ ವೃಕ್ಷಗಳ ಗುಟುಕು ಜೀವದ ಆಕ್ರಂಧನ.

ಮತ್ತೆ ಕೇಳಿಸದಿರಲು,
ಬನ್ನಿ ಶಾಮಿಲ್ಲಿಗೆ.
ಕೇಳಬಹುದು ಉದರ ಸೀಳುವಾಗಿನ ಏದುಸಿರಿನ ಶೋಕಗಾನ.

ಮತ್ತೆ ಕೇಳಿಸದಿರಲು,
ಎದೆಯ ಮೇಲಿಡಿ ಕೈಯನ್ನ.
ನೀವು ಕಳೆದುಕೊಂಡಿರಬಹುದು ಹೃದಯವನ್ನ.

-ನಂದೀಶ್ ಬಂಕೇನಹಳ್ಳಿ
Nandish Bankenahalli
==================

http://www.facebook.com/groups/kannadavesatya/237957359623345/

ಚಿತ್ರ ನೋಡಿ ಕವನ ಬರೆಯಿರಿ – 5

*”ಕನ್ನಡವೇ ಸತ್ಯ” ಫೇಸ್ ಬುಕ್ ಗುಂಪಿನಲ್ಲಿನ ಕವನಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ

ಬಿಸಿಲ್ಗುದುರೆಯ ಬೆನ್ನೇರಿ
ಹೊರಟಿರುವ ಹೆಣ್ಣೇ
ಬದುಕು ಮರಿಚಿಕೆಯಾಗುವ
ಮುನ್ನ ತೆರೆಯೆ ನಿನ್ನೊಳಗಿನ ಕಣ್ಣ
Sunitha Manjunath
***********************
ನೀಲಿ ಧೂಮವೇ….
ನಿನ್ನ ಜನನ

ಅಂದು…
ನನ್ನನ್ನಾಕರ್ಷಿಸಿದೆ ನೀನು…
ಮರುಳಾಗುವಂತೆ ಮಾಡಿದೆ ನೀನು…
ಚುಂಭನಕ್ಕೆ ಪ್ರೇರೆಪಿಸಿದೆ ನೀನು…
ಸುಖಿಸುವುದು…ಸಂಭ್ರಮಗಳನ್ನು ನೀಡಿದೆ ನೀನು…
ಕ್ಷಣಕಾಲ ಮರೆಯಿಸಿದೆ ಜಂಜಡಗಳನ್ನು…ನೀನು…
ಆನಂದಿಸಿದೆ…ತೇಲಾಡಿಸಿದೆ ನೀನು…
ನಿರ್ಲಕ್ಷ್ಯ, ನಿರ್ಲಜ್ಜ ಗುಣಗಳನ್ನು ಪರಿಚಿಯಿದೆ ನೀನು…
ನಾ ಕಾಣದ ಜಗದೊಳಗಿನ ಸಂಗತಿಗಳ ಸಲುಗೆ ನೀಡಿದೆ ನೀನು…

ಇಂದು…
ಆಕರ್ಷಣೆಯಿಲ್ಲ ನನಗೆ…
ಮರುಳನಂತಿದ್ದವನು ಮೇದಾವಿತನ ಬಂದಿದೆ ನನಗೆ…
ಚುಂಭನ, ಪ್ರೇರೆಪಗಳನ್ನು ಜ್ಞಾಪಕವಿಲ್ಲ ನನಗೆ…
ಸುಖ-ಸಂಭ್ರಮಗಳೆಂಬ ಡೋಂಗಿಗಳ ಹಂಗಿಲ್ಲ ನನಗೆ…
ಕ್ಷಣಿಕತನ, ರೋಮಾಂಚನಗಳಿಲ್ಲ ನನಗೆ…
ನಿರ್ಲಕ್ಷ್ಯ, ನಿರ್ಲಜ್ಜತನಗಳ ಗೊಡೆವೆಗಳ ನೆನಪಿಲ್ಲ ನನಗೆ…
ಜಗದಗಲ…ಮಿಗೆಯಗಲ..ಅರಿವಾಗಿದೆ ನನಗೆ..
ಆದರೂ ಮರೆಯೋಲ್ಲ ಹೃದಯದಲ್ಲಿ ನೀ ನೀಡಿದ ರಂದ್ರಗಳ ನೋವು ನನಗೆ…
Hipparagi Siddaram
***********************
ಇನಿಯ ನಾನ್ಹೇಳಲಿಲ್ಲವೇ ನಿನಗೆ…
ನಮ್ಮನ್ನಾರೂ ಬೇರ್ಪಡಿಸಲಾರರೆಂದು.
ನಮಗಿನ್ನಿಲ್ಲ ಯಾರ ಭಯ…
ಇಲ್ಲಿ ನಾವೇ ನಾವು.. ನಮ್ಮದೇ ಲೋಕ.
Bhagirathi Chandrashekar
***********************
ಕಟ್ಟಿದ್ದೆ ಕನಸಲ್ಲಿ ನನ್ನ ವಿಶ್ವ
ವಾಸ್ತವವರಿಯದೆ ಏರಿದೆ ಬಾಳೆಂಬ ಅಶ್ವ
ಅರಿಯಲಿಲ್ಲ ಹಯವದನನ ಸರ್ವಸ್ವ
ಕೊನೆಯಾಯಿತೆ ದುರಂತದಲಿ ನನ್ನ ಜೀವಾಶ್ವ
ಶ್ರೀ ಹರಿ
***********************
ಕಲ್ಪನೆಗಳೇ ನೀವೇಕೆ ಕಾಡುತ್ತೀರಿ…
ಕಾಡುವುದು ನಿಮ್ಮ ಹುಟ್ಟುಗುಣವೇ…

ಗಂಧದಕಡ್ಡಿಯು ತನ್ನ ತಾ ಸುಟ್ಟುಕೊಂಡು ಆಕೃತಿಗಳ ಸೃಷ್ಟಿಸಿತು…
ಸಕಲ ಸದ್ಭಕ್ತ ಗಣಂಗಳಿಗೆ ಭಕ್ತಿಯುಕ್ಕಿಸಿತು…
ಭಗ್ನಪ್ರೇಮಿ ಭಾವಿಸಿತು ಹೃದಯೇಶ್ವರಿ ರೇಖಾಂತರ…
ಜಿಪುಣಂಗೆ ಗೋಚರಿಸಿತು ಸಕಲೈಶ್ವರ್ಯದ ಮಾರ್ಗ…
ಕಾಯಕಯೋಗಿಗೆ ಕಂಡಿತು ಕೈಲಾಸದ ಮಹಾಯಾಗ…

ಕಲ್ಪನೆಗಳೆ ನೀವೇಕೆ ನನಗೂ ಮಾರ್ಗವೊಂದನ್ನು ತೋರಿಸಬಾರದು?
ಕಲ್ಲಾದ ಮನದಲ್ಲಿ ಕಲ್ಪನೆಗಳಿಗೆ ಜಾಗವೆಲ್ಲಿದೆ?
ಭರಡು ನೆಲದಲ್ಲಿ ಸಸಿ ಬೆಳೆಯಬಲ್ಲುದೇ?
ಸಾಕು! ನಿಮ್ಮ ಹಂಗು ನನಗೆ ಬೇಕಿಲ್ಲ…
ಹೊರಡುವೆನು ನಾನು
ನನ್ನ ಹೊರಡುವಿಕೆಯನ್ನೂ ಸಹ ಕಲ್ಪನೆಯೆಂದು ಬಾವಿಸದಿರಿ
Hipparagi Siddaram
***********************
ಧೂಪದಾರತಿಯ ಧನ್ಯತೆಯಲ್ಲಿ
ಅನಂತ ಬೇಡಿಕೆಯ ವಿನಂತಿಗಳು
ಫಲಶ್ರುತಿಯ ಅಪೇಕ್ಷತೆಯಲ್ಲಿ
ಗೊಂದಲದ ಗೂಡಾದ ಚಿತ್ತ – ವಿಚಿತ್ರ
ಚಿತ್ತಾರದ ಸುಳಿ ಸುರಳಿಗಳು…
A.g. Sheshadri
***********************
‎”ಸಿಗರೇಟು” ಎನುವವಳು ಅದೆಷ್ಟು ಕೆಟ್ಟವಳಾದರೇನು
ಅವಳುದರದಿಂದಲೇ ಹೊರ ಬಂದವನು ನಾನು
ಯಾರದರೂ ಬಂದು ಅವಳ ಚುಂಬಿಸಿದರೆ ಸುಮ್ಮನಿರುವೆನೇ
ಅವರ ತನುವಿನೊಳ ಹೊಕ್ಕು ಮೆಲ್ಲನೆ ಪ್ರಾಣವನೆ ಕಿತ್ತೊಗೆಯುವೆನು.
Guruprasad Acharya
***********************
ನೋಡಿ ನಾವು ದೂಮದ ಜೋಡಿ, ನಮಗಿಲ್ಲ ಯಾವದೇ ಬೇಡಿ
ಸಿಗರೆಟ್ ಹತ್ತಿಸಿದದ್ರುಬರ್ತಿವಿ,ಸತ್ತಾಗ ಸ್ಮಶಾನಕ್ಕು ಬರ್ತಿವಿ
ಹೋಮ ಮಾಡಿದ್ರೂ ಬರ್ತೀವಿ,ದೂಪ ಹಚ್ಚಿದ್ರೂ ಬರ್ತಿವಿ
ಫೆಕ್ಟ್ರಿಲೂ ಇರ್ತಿವಿ, ಅಡಿಗೆ ಮನೆಗೂ ಬರ್ತಿವಿ
ನಮ್ಮನ್ನು ಕರೆಯುವ ಸಂದರ್ಭ ಮಾತ್ರ ನಿಮಗೆ ಬಿಡ್ತಿವಿ
Mamatha Keelar
***********************
ಒಮ್ಮೆ ನನ್ನ ಕರಾಮತ್ತನ್ನು ನೋಡಿ,
ಮಧ್ಯದಲ್ಲೇ ಹೀಗೇಕೆ ಓಡುವೆ ನೀ ಮಾನವ.?
ನೀ ನನ್ನ ತೊರೆದು ದೂರವಾದರೂ,
ನಾನಿನ್ನ ಬೆಂಬಿಡದೇ ಕಾಡುವೆನು ನಿನ್ನ,
ನನ್ನ ಸುಡುವಾಗ ಇದ್ದ ಸುಖ ಸಂತೋಷ,
ನಾನಿನ್ನ ಸುಡುವಾಗ ಕಾಣುತಿಲ್ಲವೇಕೆ ಚಿನ್ನ.?
Pradeep Hegde
***********************
ಧೂಮ್ರದೊಳು ಆಕೃತಿಯೋ..
ಆಕೃತಿಯೊಳು ಧೂಮ್ರವೋ..
ಒಂದು ತಿಳಿಯದೇ, ಮಂಕಾದೆ ನಾ..
Pradeep Hegde
***********************

http://www.facebook.com/groups/kannadavesatya/235610633191351/?notif_t=like

ಚಿತ್ರ ನೋಡಿ ಕವನ ಬರೆಯಿರಿ – 4

* ಕನ್ನಡವೇ ಸತ್ಯ ಫೇಸ್ ಬುಕ್ ಗುಂಪಿನಲ್ಲಿ ಪ್ರಕಟವಾದ ಕವನಗಳು

ನಿಮ್ಮಿಬ್ಬರಿಗೂ ಬಂದಿದೆ ಮುನಿಸು
ಮಾಡದ ತಪ್ಪಿಗೆ ನಾ ಬಲಿಯಾದ ಕೂಸು
ಮರೆತಿರಿ ಏಕೆ ಸುಂದರ ಜೀವನದ ಕನಸು
ಮತ್ತೊಮ್ಮೆ ಮಾಡಬಾರದೆ ಒಂದಾಗುವ ಮನಸು
Hemanth Kumar
**********************
ಅಳುವ ಮಗುವಿನ ಕಣ್ಣು ಕೇಳುತಿದೆ ಪ್ರಶ್ನೆಯನು…
ಯಾವ ದಿಕ್ಕಿಗೆ ಹೋಗಲಿ ನಾನು ಎಂದು.
ಇತ್ತ ಮುತ್ತಿಟ್ಟು ರಮಿಸಿ ಕಥೆ ಹೇಳುವ ಅಮ್ಮ..
ಅತ್ತ ಸಕ್ಕರೆಯಂತ ಸಿಹಿ ಗೆಳೆಯ ಪಪ್ಪ.
ಅಜ್ಜಿ ಇವರಿಬ್ಬರಲ್ಲೇಕೆ ಮುನಿಸು.. ನೀನೇ ಹೇಳು…!
Bhagirathi Chandrashekar
**********************
ಅಂದು ,
ನೀವಿಬ್ಬರೂ ಇರುವ ಚಿತ್ರ ಪಟದಲ್ಲಿ
ನಾನೇಕೆ ಇಲ್ಲಾ ..? ಎನ್ನುತಿದ್ದೆ
ನೀವು ನಗುತಿದ್ದಿರಿ ….

ಇಂದು ,
ಇಬ್ಬರಿಲ್ಲದ ಒಬ್ಬರ ಜೊತೆಗೆ
ನೀನು ಬಾ …ಎನ್ನುವಿರಿ
ನಾನು ಅಳುತಿದ್ದೇನೆ …
A.g. Sheshadri
**********************
ಏನು ಪಾಪ ಮಾಡಿರುವೆ ನಾನು
ಅತ್ತ ಅಪ್ಪನಅಪ್ಪುಗೆಯು ಇಲ್ಲ
ಇತ್ತ ಅಮ್ಮನ ಅನುಬಂಧವು ಇಲ್ಲ

ಇಬ್ಬರಲ್ಲಿ ನಾ ಯಾರನ್ನು ಒಪ್ಪಲಿ
ಇಬ್ಬರಲ್ಲಿ ನಾ ಯಾರನ್ನು ಅಪ್ಪಲಿ
ಇಬ್ಬರೂ ಬೇಕೆನಿಸುತ್ತಿರುವಾಗ

ಹೇಳು ಏನು ಪಾಪ ಮಾಡಿರುವೆ ನಾನು
ಅಮ್ಮನ ಅಕ್ಕರೆಯ ಸವಿಯ ಮರೆಯಲೆಂತು
ಅಪ್ಪನ ಅಕ್ಕರೆಯ ಅಲೆಯ ತೊರೆಯಲೆಂತು

ಎಷ್ಟೋ ರಾತ್ರಿಗಳು ಅಪ್ಪನೊಡನೆಯೇ ಕಳೆದಿದ್ದೇನೆ
ಎಷ್ಟೋ ಹಗಲುಗಳು ಅಪ್ಪನೊಡನೆಯೇ ಬೆಳೆದಿದೇನೆ
ಅಂದೆಂದು ಅನಿಸುತ್ತಿರಲಿಲ್ಲ….. ನಾ ಒಂಟಿ ಎಂದು
ಆಗೆಲ್ಲ ಅನಿಸಿರಲಿಲ್ಲ ನಾ ಒಬ್ಬಂಟಿಯಾಗುವೆ ಎಂದು…..

ಈ ಕವನವನ್ನು ಮತ್ತಷ್ಟು ಅಚ್ಚುಕಟ್ಟಾಗಿ ನಿರೂಪಿಸಲು ಸಹಕರಿಸಿದ ಏ ಜಿ ಶೇಷಾದ್ರಿ ( Yeji Sheshadri) ಸರ್ ಅವರಿಗೆ ನನ್ನ ಹೃದಯಪೂರ್ವಕ ವಂದನೆಗಳು
ಸತೀಶ್ ಬಿ ಕನ್ನಡಿಗ
**********************
ಊಟವ ತಿನಿಸಿ ಲಾಲಿ ಹಾಡುವ ಅಮ್ಮನು ಬೇಕು
ಅಂಗಡಿಸುತ್ತಿ ಆಟಿಕೆ ತರುವ ಅಪ್ಪನೂ ಬೇಕು
ಪೇರೆಂಟ್ಸ್ ಡೇಯಲಿ ಇಬ್ಬರೂ ಶಾಲೆಗೆ ಜೊತೆ ಬರಬೇಕು
ಹೇಗಾದರೂ ಸರಿ ನಾ ಇವರನು ಜೊತೆ ಸೇರಿಸಲೇ ಬೇಕು
ಜೀವನದರ್ಥವು ಇವರಿಗೆ ತಿಳಿದರೆ ಸಾಕು
Mamatha Keelar
**********************
ಸೂರ್ಯ ಚಂದ್ರರೂ ಮುನಿಸಿಕೊಂಡರೇ ಭೂಮಿಗೆ ಇಲ್ಲ ಕಾಂತಿ,
ತಂದೆ ತಾಯಿಯ ಜಗಳದಲ್ಲಿ ಕೂಸು ಅಳುತ್ತಿದೆ,ಏಕೆ ಈ ಪರಿ ಬ್ರಾಂತಿ?
Nandish Bankenahalli
**********************
ತುಂಬಿ ಬಂದ ಕಂಗಳಲಿ,,
ಭಾರವಾದ ಮನಸಿನಲಿ,,
ಹೆತ್ತವರು ದೂರಾಗುವುದ ನೋಡುತಾ,,
ತಾನ್ಯಾರ ಸೊತ್ತು ಆಗಬಹುದೆಂದು,
ನ್ಯಾಯ ಕೊಡಿಸುವ ದಳ್ಳಾಲಿಯ ನೋಡುತಾ,
ತನ್ನ ಭವಿಶ್ಯದ ಬಗ್ಗೆ ಯೋಚನೆ ಮಾಡುತಾ,,
ಅಳಲಾಗದೇ ಕಣ್ಣಲ್ಲೇ ಪ್ರತಿಕ್ರಿಯಿಸುತಾ,
ಕೇವಲ ಮನದಲ್ಲೇ ನೋವನುಣ್ಣುತಾ,
ತಾ ಮಾಡಿದ ತಪ್ಪೇನು ಅಂತ ಚಿಂತಿಸುತಿರುವ
ಮುಗ್ಧ ಬಾಲೆಯ ನೋಡಿ ನನ್ನೀ ಮನ ಕಲಕುತಿದೆ
Pradeep Hegde
**********************

http://www.facebook.com/groups/kannadavesatya/234864709932610/?notif_t=group_activity

ಚಿತ್ರ ನೋಡಿ ಕವನ ಬರೆಯಿರಿ – 3

ನಿಮ್ಮ ಮತ ನನಗೆ ಮಾತ್ರ ಹಿತ
ನಾನು ಭ್ರಷ್ಟ, ಅದಕ್ಕೆ ನಿಮಗೆ ಕಷ್ಟ
ಮೊದಲು ನನಗೆ ಸೀಟು, ಆಮೇಲೆ ಇದ್ದೆ ಇದೆ ನಿಮಗೆ ಏಟು
ನಿಮ್ಮ ಪೂಜಾರಿ, ಮರಿ ಬ್ಯಾಡ್ರಿ ಗೆದ್ದಮೇಲೆ ನಾ ಅಪ್ಪಟ ಪುಡಾರಿ
ನೀವೇ ನನ್ನ ತಾಯಿ ತಂದೆ. ಸಾಯೋ ತನಕ ಅಲಿಯುತ್ತಿರಿ ನನ್ನ ಬೆನ್ನ ಹಿಂದೆ….
 Hemanth Kumar
******************************* 
ಕೇಳೋಕ್ ಬನ್ನಿ ಜನರ ಓಟು
ಕೊಡ್ರಿ ಅದಕೆ ಬಾಟಲಿ ನೋಟು.
ಗೆದ್ಮ್ಯಾಲ್ ಜನಕೆ ಗತಿ, ಅವ್ರ್ ಬೂಟು
ಪೊಲಿಟಿಕ್ಸ್ ಇಷ್ಟೇನೆ..
 Bhimasen Purohit
*******************************
ನೋಟಿಗಾಗಿ ವೋಟು ಎನ್ನುವ ಸವಕಲು ಸಿನಿಕ ಸಂದೇಶ ಬಿಡಿ
ವೋಟಿಗಾಗಿ ನಾವು ನಮ್ಮ ಹಕ್ಕು ಚಲಾಯಿಸೋಣವೆಂಬ ಆಯುಧ ಹಿಡಿ
ನೊಂದ ಮನಗಳಲಿ ಅಭಿವೃದ್ಧಿಯ ಮಂತ್ರ ಪಠಿಸೋಣ
ನೂರಾರು ಕನಸುಗಳ ಸಾಕಾರಕ್ಕಾಗಿ ಅನವರತ ದುಡಿಯೋಣ
ಹಳಬರು ಹಳಸುವಂತೆ ಮಾಡಿದ್ದು ಹಳೆಯ ಕಾಲಕೆ
ಹೊಸಬರು ಮಾಡೋಣ ಹೊಸ ವಾಖ್ಯಾನ ರಾಜಕಾರಣಕೆ
ಹೊಸ ಮನ್ವಂತರದ ಹೊಂಗನಿಸಿನ ಹೊಸಬರೆಂದು
ಹೊಸಭಾಷ್ಯ ಬರೆಯೋಣ ಪ್ರಜಾಪ್ರಭುತ್ವಕ್ಕಿಂದು
ಪ್ರಜಾಪ್ರಭುತ್ವದ ಅಕ್ಷಯಪಾತ್ರೆಯಲ್ಲಿ ಸಿಗುವ ಅಧ್ಭುತ ಅವಕಾಶ
ಪ್ರಜೆಗಳಿಗಾಗಿ ಪ್ರತಿಕ್ಷಣವೂ ದುಡಿಯಲು ಇದೊಂದೇ ಸದಾವಕಾಶ
ಪ್ರಜಾಪ್ರಭುತ್ವದ ಮೆಟ್ಟಿಲೆರುತ್ತಾ ವಿಶ್ವಮಾನ್ಯರಾಗೋಣ
ಪ್ರಜಾಪ್ರಭುತ್ವದಿಂದಲೇ ಜಗದೇಳಿಗೆಯಾಗುವುದೆಂದು ಸಾರೋಣ
ಮೇಲು-ಕೀಳು, ಧರ್ಮ-ಭಾಷೆ, ವರ್ಣ-ಸಂಕರಗಳನು ಮೆಟ್ಟಿ ನಿಲ್ಲೋಣ
ಮೃದು ಮನಸಿನ-ದೃಢ ಶರೀರದ ಆರೋಗ್ಯವಂತ ಸಮುದಾಯ ಕಟ್ಟೋಣ
ಮನೆ-ಮನಗಳಲ್ಲಿ ಪ್ರಜಾಪ್ರಭುತ್ವದ ಸಮಭಾವದ ಜ್ಯೊತಿಯ ಬೆಳಗಲಿ
ಮಾನ್ಯ-ಮನುಜರಾಗುತಲಿ ಮಹಾಮಾರ್ಗವೆಂಬ ಪ್ರಜಾಪ್ರಭುತ್ವ ಉಳಿಯಲಿ
Hipparagi Siddaram
*******************************
ನಿಮ್ಮ ವೋಟು ನಮ್ಮ ನೋಟು
ನಿಮ್ಮ ಮತ ನಮಗೆ ಹಿತ
ನೀವು ಕಳೆದುಕೊಳ್ಳಿ ಜೂಜಾಡಿ ಹಣ
ನಾ ತುಂಬಿಕೊಳ್ಳುವೆ ಸೈಟು ಮಾರಿ ಹಣ
ಮುಕ್ಯವಲ್ಲ ದೇಶದ ಪ್ರಗತಿ
ಇದುವೇ ರಾಜಕಾರಣಿಗಳ ನೀತಿ
 Mamatha Keelar
*******************************
 ನಮ್ಮ ಪಕ್ಷ ಅಹಿತ ಪಕ್ಷ…ನಾವು ಭೂಗಳ್ಳರು.
ಭ್ರಸ್ಟ ರಾಜಕೀಯವೇ ನಮ್ಮ ವಂಶ ವೃತ್ತಿಯು.
ವೋಟಿಗೊಂದು ನೋಟು,ಬಟ್ಟೆ, ಸಾರಾಯಿಯು.
ಕೊಡುವುದನ್ನ ಬಳಸಿಕೊಳ್ಳಿ ಅದಕು,ಇದಕು,ಎದಕು..
Bhagirathi Chandrashekar

ಚಿತ್ರ ನೋಡಿ ಕವನ ಬರೆಯಿರಿ – 2

ಓ! ನೆನಪುಗಳೇ ಏಕೆ ಕಾಡುತ್ತೀರಿ
ನೀವೇಕೆ ಕಾಲನ ಗೋರಿಯ ಮೇಲೆ ಕಲ್ಲಾಗಿ ಕುಳಿತ್ತೀದ್ದೀರಿ
ಆ ಕಾಲನಿಗೆ ಕೃಪೆಯೆಂಬುದಿಲ್ಲ ಎಲ್ಲವೂ ಕಸ !
ಮಧುರ ನೆನಪುಗಳ ಬೇಟೆಗೆಂದು ಎದ್ದರೆ ಅದು ನೆನಪಾಗಿಬಿಡುತ್ತದೆ
ಅಂದಿನ ಮಧುರ ಕ್ಷಣಗಳು ಇಂದೇಕೆ ಕಲ್ಲಿನಂತೆ ನಿರ್ಜೀವಗೊಂಡವು
ಮಧುರವೆಂಬುದು ಮಾಧುರ್ಯಕಳಕೊಂಡು ಕಾರ್ಮೋಡಗಳ ಕತ್ತಲಾವರಿಸಿಕೊಂಡಿತೆ?
ನೆನಪುಗಳ ಅಪ್ಪಿಕೊಳ್ಳಲೆತ್ನಿಸಿದಷ್ಟು ಕಪ್ಪನೆಯ ಕಲ್ಲಾಯಿತೆ?
ಅಪ್ಪಿಕೊಳ್ಳಲು ಅದಕ್ಕೆಲ್ಲಿದೆ ಬೆಚ್ಚನೆಯ ಭಾವನೆಗಳ ಬಿಸಿಯಪ್ಪುಗೆ
ಭಾವನೆಗಳ ಭಾವಾಪೂರವೇ ಬತ್ತಿಹೋಗಿ ಬರಿದಾದ ಬೆಂಗಾಡು
ಅಂದಿನ ಹಸಿರ ಹೊನ್ನೆಯ ಉಸಿರಿನ ಭಾವಕೋಶ
ಇಂದಿನ ಕಪ್ಪುಕಲ್ಲಾಗಿಹ ಅದಕ್ಕೆನು ಗೊತ್ತು ನವೀರಭಾವಲೋಕ
ಬೆಂಗಾಡಿನ ಬಯಲಿನಲಿ ಬಯಕೆಯ ಕನಸುಗಳ ಗರಿಗೆದರಿಸಲು ಬರುವೆ ಎಂದು ?
ಓ! ಮರಳುವೆಯಾ ಮತ್ತೆ ನನ್ನ ಭಾವಬಿತ್ತಿಯ ಕೋಶದಲ್ಲಿ ಹಸಿರು ಉಕ್ಕಿಸಲು…
 Hipparagi Siddaram
************************************
ಹುಟ್ಟುವುದೆಲ್ಲೋ ಬೆಳೆಯುವುದೆಲ್ಲೋ…
ಬಾಳನೌಕೆಯನೇರಿ ಸೇರುವ ದಡವೆಲ್ಲೋ…

ಬದುಕಿನ ಪಯಣದ ದಾರಿ ಕಂಡಿಲ್ಲ ನಾವು…
ಬಾಳನೌಕೆಯನೇರಿ ಹೊರಟವರು ನಾವು…

ಜೀವನದ ರಸಘಳಿಗೆ ಸವಿದವರು ನಾವು…
ಬದುಕಿನ ಬೇಸರದ ಕಹಿಉಂಡವರು ನಾವು…
———-ಪಕ್ಕಾ ಲೋಕಲ್ ಸ್ವಲ್ಪ ಪಾಗಲ್
************************************
ಚಿಗುರುವ ಮುನ್ನವೇ ಚಿವುಟಿದೆ ನೀನು
ಇನ್ನೂ ಕಾರಣಗಳ ಹುಡುಕುತಿರುವೆಯೇನು
ಘೋರಿಯ ಮುಂದೆ ಅತ್ತರೆ ಸಿಗಲಾರೆ ಇನ್ನೂ ನಾನು ..

ಕರಿ ಮೋಡದ ಅಂಚಲ್ಲಿ
ಕಣ್ಣೀರ ಮಳೆಯಲ್ಲಿ
ನಾ ಬಿಟ್ಟು ಹೋದ ನೆನಪಲ್ಲಿ
ಮುಖ ಮುಚ್ಚಿ ಅತ್ತರೇನು ಸಖಿ……
ಬರುಡಾದ ಸಾಗರಕೆ ಈ ನಿನ್ನ ಕಣ್ಣೀರು ಸಾಲದು ಗೆಳತಿ….
Hemanth Kumar
************************************
ಸುತ್ತಲು ಕಾರ್ಮುಗಿಲು ,ಈ ಸ್ಮಶಾನ ಮೌನದಲಿ
ಎಲ್ಲೆಂದು ಹುಡುಕಲಿ ನಾ ನಿನ್ನ ,
ವಿರಹದಿ ರೋದಿಸುಥಿಹೆ ನಾ ಇಲ್ಲಿ
ನೀ ಎದ್ದು ಬರಲಾರೆಯ ಗೋರಿಯಿಂದ ಗೆಳೆಯಾ..

ಯಾರಿದ್ದರೇನು ನನ್ನ ಪಾಲಿಗೆ
ಅದು ನೀನಗಲಾರದು ಚಿನ್ನ
ನಾ ಬರುವುದು ಹೇಗೆ ನಿನ್ನಲ್ಲಿಗೆ
ನೀ ಬಂದು ನನ್ನ ಒಯ್ಯಲಾರೆಯ ಗೆಳೆಯಾ ..
Mamatha Keelar
************************************
“ಕರಿಮೋಡವೇ.., ಕಾರಿರುಳ ಕಳುಹಿಸದಿರು,
ಕಣ್ಣೊಳಗೆ ಕತ್ತಲು ಬೇಕಿದೆ,
ಬದುಕೊಳಗೆ ಬಣ್ಣ ಇಲ್ಲವಾಗಿದೆ,
ಕರಿಮೋಡದೊಳಗಿನ ಕಣ್ಣೀರು ಮಾತ್ರ ಸುರಿಸು.”
Mohan Thimmaiah
************************************
ನೀ ನನ್ನ ಬಿಟ್ಟು ಆಗಲಿದರು ಬೇಜಾರಿಲ್ಲ
ಬಣ್ಣ ಬಣ್ಣದ ಲೋಕವಿಲ್ಲದಿದ್ದರು ಪರ್ವಾಗಿಲ್ಲ
ಸುನಾಮಿ ಬಂದ್ರೂ ಜಗ್ಗೋದಿಲ್ಲಾ..
ಅಧ್ರೆ ನೀನು ಗೋರಿಲಿ ಇಧ್ರು ಬಿಡೋದಿಲ್ಲ
Sri Nivas
************************************
ಈ ಹಾಳು ಜನರ ಹಾಳು ಕೆಲಸದಿಂದ ನನ್ನ ಮನ
ಹಾಳಾಗಿ ಹೋದಾಗ ನನ್ನೀ ಹಾಳಾದ ಮುಖವನ್ನು
ಹಳೆಯದಾದ ಈ ಘೋರಿಯ ಗೋಡೆಯಿಂದ ಮರೆಮಾಚಿ
ನನ್ನಿಂದ ನನ್ನವರು ಹಾಳಾಗೋದನ್ನು ತಪ್ಪಿಸುವ ಪ್ರಯತ್ನದಲ್ಲಿದ್ದಾಗ,
ಹಾಳಾದ ಕಾರ್ಮುಗಿಲು ಕವಿದು, ನನ್ನ ಮನವನ್ನು ಇನ್ನಷ್ಟು ಕಪ್ಪಗಾಗಿಸಿದೆ..
Pradeep Hegde
************************************
ತಾನೂ ನಕ್ಕು ಇನ್ನೊಬ್ಬರನ್ನೂ ನಗಿಸಿ
ಸದಾ ಕಾಲ ಹಸನ್ಮುಖಿಯಾಗಿದ್ದ ಹುಡುಗಿ
ಇಂದೇಕೆ ಮೌನಿಯಾದಳು ????
ಮುಖದ ತುಂಬಾ ತುಂಬಿದ ದುಗುಡ,
ದುಃಖ,ದುಮ್ಮಾನಗಳಿಗೆ ಕಾರಣವಿಲ್ಲವೇ????
ಸಂತಇಸುವವರಿಲ್ಲ ,ಸಹಕರಿಸುವವರಿಲ್ಲ
ಒಬ್ಬಂಟಿ ಯಾದಾಳೆ ಹುಡುಗಿ ????
Soudha Kareem
************************************
ಕಾರ್ಮುಗಿಲೇ ನೀ ಸ್ಪೋಟಿಸಿ
ನನ್ನ ಕೊಚ್ಚಿಕೊಂಡೊಯ್ಯಬಾರದೇ..
ಕಡಲಿನ ಅಬ್ಬರದ ಅಲೆಗಳೇ…
ನನ್ನ ನಿನ್ನೆಡೆಗೆ ಬರಸೆಳೆದುಕೊಳ್ಳಬಾರದೇ…

ಕಾಮುಕನೋರ್ವನ ಹಸಿವಿಗಾಹಾರವಾಗಿ ಹೋದೆನೇ..
ಅದೆಷ್ಟು ಪ್ರತಿಭಟಿಸಿದರೂ ಶೀಲವನುಳಿಸಿಕೊಳ್ಳಲಾರದೇ ಹೋದೆನೇ..

ಇನ್ನೇಕೆ ಈ ಜೀವನವು..

ಸಮಾಧಿಯೇ, ನಿನ್ನ ಮನೆಯ ಬಾಗಿಲನು
ಬಡಬಡನೆ ಬಡಿಯುತಿಹುದು ನಿನಗಿನ್ನೂ ಕೇಳದೇ..
ಒಡಲಲಿ ಉಸಿರಿರುವುದ ಕಂಡು ಕದವ ತೆರೆಯದಿರಬೇಡ..
ಆತ್ಮವೇ ಇಲ್ಲ, ಶೀಲವಿರದ ನನ್ನೀ ತನುವಿಗೆ
ನಿನ್ನೊಡಲೆ ಬೇಕೆಂದೆನಿಸುತಿದೆ, ನೊಂದ ನನ್ನ ಮನಸಿಗೆ..
 Guruprasad Acharya
************************************
ಅಂದು…!!
ಆ ದಿನ ಈಗಲೂ ನೆನಪಿದೆ..,
ಕುಸುಮಗಳಂತೆ ಚಾಚಿಕೊಂಡಿದ್ದ ಕನಸ್ಸುಗಳು.,
ನನಸಿನ ನೆವದಲ್ಲಿ ಮೈದಳೆದಿತ್ತು..
ನಮ್ಮ ಪ್ರೀತಿ.,
ಹೂವ ತೇರಿನ ಪಯಣದಲ್ಲಿ ನಿರತವಾಗಿತ್ತು..
ಎಲ್ಲವೂ ಅಂದುಕೊಂಡಂತೆ ಆಗಿತ್ತು..,
ಆದರೆ ಆ ಬರಸಿಡಿಲಿಗೆ ಸಿಲುಕಿ.,
ನೀ ನನ್ನ ಬಿಟ್ಟು ಹೋದೆ.,
ನನ್ನ ಪ್ರಾಣವೇ ನಿನ್ನೊಳಿತ್ತು..,
ನೀನಿಲ್ಲದಿರುವ ನಾನು.,
ಬದುಕಿದ್ದು ಸತ್ತಂತೆ..
ಅಹುದು., ಬದುಕಿದ್ದು ಸತ್ತಂತೆ..!!!
Pramod Pammi
************************************
“ಘೋರ ವಿಸ್ಮಯ”
++++++++++
ಏನಿದು ಈ ಚಿತ್ರ
ಬಲು ಘೋರ ವಿಚಿತ್ರ
ವಿಷಯವೆಲ್ಲಾ ಚಿತ್ರವೇ
ಹೇಳುವ ಇದೊಂದು ಸಚಿತ್ರ
ಕವನ ಇದಕ್ಕಿಲ್ಲಿ ನೆಪ ಮಾತ್ರ

ವಿಸ್ಮಯ ಅರ್ಥಗಳ ಹುಡುಕಾಟ
ಅಲ್ಯಾರದೋ ವಿಧಿಯೊಡನೆ ಕಾದಾಟ
ನೆನೆದರೆ ನೆನಪುಗಳ ಸಿಹಿಯು ಸಂಕಟ
ಕ್ಷಣ ಕ್ಷಣಗಳ ಎಣಿಸುತ ಅಲ್ಲಿ ಗೋಳಾಟ
ಕವನವ ಬರೆಯಲು ಇಲ್ಲಿ ಎಲ್ಲವೂ ಮಕ್ಕಳಾಟ
Prashanth P Khatavakar
************************************
ಬೆತ್ತಲೆಯ ಜಗತ್ತಿನಲ್ಲಿ
ಬತ್ತಲಾಗದ
ಆಸೆ ಕಂಗಳ ಹೊತ್ತು
ನೋವುಗಳಲ್ಲಿಯೂ
ಕನಸುಗಳ ಬಿತ್ತಿ
ಅನಂತದೆಡೆಗೆ
ಒಂಟಿ ಪಯಣ
ಈ ಜೀವನ.
ಕನ್ನಡ ಶ್ರೀಗಂಧ
************************************
ದಿಕ್ಕಿಲ್ಲ ದೆಸೆಯಿಲ್ಲ…
ಬಂಧು ಬಳಗವು ಎನಗಿಲ್ಲ.
ನೆಲವೇ ಹಾಸಿಗೆ.. ಆಗಸವೇ ಹೊದಿಕೆ.
ಹೇಗೆ ಬದುಕಲಿ ನಾನು ಈ ಕ್ರೂರಿಗಳ ನಡುವೆ.
Bhagirathi Chandrashekar
************************************
ನಿನ್ನ ಮರೆಯಲೆಂದು ನಲ್ಲ
ನೆನಪುಗಳೆಲ್ಲಾ ಹೂತಿಟ್ಟು
ಕಲ್ಲು ನೆಟ್ಟು ಕಣ್ಣ ಬಿಡುವುದರಲ್ಲಿ
ನಾ ……ಅರೆ…ಬೆತ್ತಲಾಗಿ
ನಿನಗೇ ..ಜೋತು ಬಿದ್ದಿದ್ದೇನೆ !!
Yeji Sheshadri
************************************
ನಲ್ಲ ನಿನಗಾಗಿ ಕಾದಿಹೆನಲ್ಲ
ಕನಸಿನ ಸೌದ ನಿರ್ಮಿಸಿದ್ದೆನಲ್ಲ
ನೀನಿಲ್ಲದ ಬಾಳು ಅದು ಬಾಳಲ್ಲ
ನಾನು ಬರುತ್ತಿರುವೆ ನಿನ್ನೊಂದಿಗೆ………… ನಲ್ಲ
ಶ್ರೀ ಹರಿ
************************************

ಚಿತ್ರ ನೋಡಿ ಕವನ ಬರೆಯಿರಿ – 1

“ಕನ್ನಡವೇ ಸತ್ಯ” ಫೇಸ್ ಬುಕ್ ಗುಂಪಿನಲ್ಲಿ ಪ್ರಕಟವಾದ ಸದಸ್ಯರ ಕವನಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ

ನಮಗಿರೆಂಬೆಯೇ ಹಾಸಿಗೆಯಾಗಿಹುದು
ನಮ್ಮತ್ತ ಸುಳಿಯದಿಹುದು ಚಿಂತೆಯೆಂಬ ಭಾವ
ನಿದ್ದೆಯೆಂಬ ಭಾವ ಆವರಿಸಿಹುದು ನಮ್ಮನ್ನು
ನಮಗಳ ಶಾಖವೇ ಹೊದಿಕೆಯಾಗಿಹುದು
ನಾವೇ ಸುಖಿಗಳಾಗಿಹು…
ನಮ್ಮ ಸುಖ ನಿಮಗಿಲ್ಲದಿಹುದು…!!!!
-Rudresh Rajashekharaiah
********
ನಾವೆಲ್ಲಾ ಒಂದೇ ಬಳಗ
ಮಾಡೆವು ನಾವೆಂದು ಕಾಳಗ
ಒಗ್ಗಟ್ಟೇ ನಮ್ಮ ಬಲ
ಎದುರಿಸುವೆವು ಈ ಚಳಿಗಾಲ …
-Mamatha Keelar
********
ಮುಖ ಯಾಕೆ ತಿರುಗಿಸಿಕೊಂಡು ಮಲಗಿದ್ದೀರಾ ಸುಂದರಿಯರೇ…?
ನಿಮ್ಮ ಸೌಂದರ್ಯಕ್ಕೆ ಮರುಳಾಗಿ ಯಾರಾದರೂ ಕೊಂಡೊಯ್ದರೇ?? ಅನ್ನೊ ನಾಚಿಕೆಯೆ..?
-Pradeep Hegde
********
ನೂರಾದರೇನು ನಮ್ಮ ಬಣ್ಣ
ನಾವೆಂದು ಒಂದೇ ಅಣ್ಣ…
ನಮ್ಮಂತೆ ನೀವಿರಲೆಂಬ
ನಮ್ಮ ಬಯಕೆಗೆ ನೀರೆರೆಯಿರಣ್ಣ..:)))
-Sunitha Manjunath
********
ಒಬ್ಬರನ್ನೊಬ್ಬರ ತಬ್ಬಿಕೊಳ್ಳಲಾಗದ ವ್ಯಥೆಯ ಮರೆತು
ಸಹೋದರತೆಯ ಮೆರೆದಿರಾ, ತಾಗಿಕೊಂಡು ಕುಳಿತು
ನೋಡಿ ಕಲಿಯೋ ಮನುಜ ಇವುಗಳೊಳಗಿನ ಅನ್ಯೋನ್ಯತೆಯ
ಕತ್ತರಿಸಿ ಹಾಕಿರೋ ನಿಮ್ಮ ನಿಮ್ಮೊಳಗಿನ ವೈಷಮ್ಯತೆಯ
-Guruprasad Acharya
********
“”ನಾವು ಬಣ್ಣದ ಹಕ್ಕಿ,
ಹೆದರಿಸಬೇಡಿ ನಮ್ಮನ್ನು ಕುಕ್ಕಿ,
ನಮ್ಮಿಂದ ಒಳ್ಳೇದನ್ನು ಹೆಕ್ಕಿ,
ತಿಂದು ತೇಗಬೇಡಿ ನಮ್ಮ ಮುಕ್ಕಿ.””
-Mohan Thimmaiah
********
“ಗೂಡಿಲ್ಲದ ಕಾಯಗಳು”
ಅಲ್ಲಿತ್ತು ನಮ್ಮೂರು
ಸುತ್ತಲೂ ಹಚ್ಚ ಹಸಿರು
ಬಂಧು ಬಳಗ ಸಾವಿರಾರು
ನಮಗೆಂದೇ ಪಕ್ಷಿಧಾಮ
ಹಸಿರ ನಡುವಲ್ಲಿ ನಮ್ಮ ಪ್ರೇಮ
ಬಂದು ಇಲ್ಲೀಗ.. ಬದಲಾವಣೆ ಎಂದು
ಮಾಡಿರುವರು ಎಲ್ಲ ಹಸಿರ ನಿರ್ನಾಮ
ಮುದ್ದಿನ ಗೂಡುಗಳೆಲ್ಲಾ ಎಲ್ಲೋ ಮಾಯ
ಈಗ ಅಲೆಮಾರಿ ಜೀವನ ನಮ್ಮ ಕಾರ್ಯ
ಮನಸ್ಸಿನ ಒಳಗೀಗ ಆಗಿದೆ ಆರದ ಗಾಯ .. 🙂
-Prashanth P Khatavakar
********
ನಾನೂ ಬರೆದೆನೊಂದು:
ನಾನೂ ಬರೆದೆಯೊಂದ ಕವಿತೆ
ಪದಗಳ ಹುಡುಕಿ ಕವಿತೆಯಂದ್ರೇ ವ್ಹಾ… ಕವಿತೆ
ಅದ ಕೇಳಿ ತಲೆದೂಗಿ
ಮಲಗಿದವು ಮೈಮರೆತು ಹಾಯಾಗಿ
-Anupama Pavana
********
ಓ ಮರಿಹಕ್ಕಿಗಳೇ ಭಾಗ್ಯವೆಂದರೇ ನಿಮ್ಮದೆ.
ಮರದಿಂದ ಮರಕ್ಕೆ ಹಾರಿ ಬಗೆಬಗೆಯ ಹೂ ಮಕರಂಧವ ಹೀರಿ, ಅಡೆತಡೆಯಿಲ್ಲದೆ ಏರಿಳಿಯುವ ಭಾಗ್ಯವೆಂದರೆ ನಿಮ್ಮದೆ.
ದೇಶಕಾಲದ ಪರಿವೇ ಇಲ್ಲದೇ, ಗಡಿ,ಗಡಿಯಾರದ ಕಡಿವಾಣವೂ ಇಲ್ಲದೇ. ಜಾತಿ ಧರ್ಮದ ಗೊಡವೇಯೇ ಇಲ್ಲದ ಭಾಗ್ಯವೆಂದರೇ ನಿಮ್ಮದೆ.
-Nandish Bankenahalli
********
ನಮಗಿಲ್ಲಾ ಭವ್ಯ ಭಂಗಲೆ-ಮಹಲುಗಳ ಹಂಗು
ನಮಗಿಲ್ಲಾ ಕನಸುಗಳೆಂಬ ಭವ್ಯ-ಬೃಂಗಗಳ ಗುಂಗು |
ನಮಗಿಲ್ಲಾ ಊರು-ಕೇರಿ ಉದ್ದರಿಸುವ ಉದ್ದುದ್ದ ಭಾಷಣದ ಪುಂಗಿ
ನಮಗಿಲ್ಲಾ ದುರಾಶೆ-ದುಂದುವೆಚ್ಚದ ಅಂದಾಭಿಮಾನದ ನಡೆಯ ಡೋಂಗಿ |
ನಮಗಿಲ್ಲಾ ಜಗದಂಕೆಯನ್ನು ಸಾಧಿಸಬೇಕೆಂಬ ಇನ್ನಿಲ್ಲದ ಆಕಾಂಕ್ಷೆ
ನಮಗಿಲ್ಲಾ ಜಗದೇಳಿಗೆ ನಮ್ಮಿಂದಲೇ ಆಗಲೆಂಬ ಮಹತ್ವಾಕಾಂಕ್ಷೆ |
ನಮಗಿಲ್ಲಾ ಹಿರಿ-ಕಿರಿದೆಂಬ ಬೇಧ-ಭಾವಂಗಳು
ನಮಗಿಲ್ಲಾ ಬಣ್ಣದ ಬಾನಾಡಿಗಳೆಂಬ ಕನವರಿಕೆಯ ಭಂಗಿಗಳು |
ನಮಗೆಲ್ಲಾ ಅಗೋಚರ ಶಕ್ತಿಯ ಸೃಷ್ಟಿಯೇ ವಾತಾಯನ
ನಮಗೆಲ್ಲಾ ನಮ್ಮೆಲ್ಲರ ಸಮೂಹವೇ ಬೆಚ್ಚಗಿನ ರಕ್ಷಾಯನ |
-Hipparagi Siddaram
********
ಬಾಯಾರಿಸಿ ದಣಿವಾರಿಸಿಕೊ ನಿಲ್ಲದಿರಲಿ ಪಯಣ
ರೆಕ್ಕೆ ಬಿಚ್ಚಿ ಎದೆ ಸೆಟೆಸಿಕೋ ಮುಂದುವರಿಯಲಿ ಯಾನ
-Bellala Gopinath Rao
********
ಅಮ್ಮನಿಲ್ಲದ ಗುಬ್ಬಿಯಿಂಡು
ನೋವಿನ ಅನ್ನವುಂಡು
ವಾತ್ಸಲ್ಯದ ಹಪಹಪಿಕೆಗೆ
ಪ್ರೀತಿಯ ಗುಟುಕಿಗೆ
ಕಾದು ಕುಳಿತಿರೆ
ಅಮ್ಮನಿಲ್ಲ
ತುತ್ತಿನ ಸವಿಯುಣಿಸಲು
ಎರವಲಾಗಿ ಕೊಡುವಿರ
ಯಾರಾದರು ಮಾತೃ ಪ್ರೇಮವ!
-ಕನ್ನಡ ಶ್ರೀಗಂಧ
********
ಓ ಮನುಜರೇ….!
ನಮಗಿಲ್ಲ ನಿಮ್ಮಂತೆ ಮಹಲಿನ ಬಯಕೆ..
ಬಂಗಲೆಯಲೂ ಏಕಾಂಗಿಗಳು.. ನಿಮ್ಮಂತೆ ನಾವಲ್ಲ.
ಕೂಡಿ ಬಾಳುವುದಾ..ಹಂಚಿ ತಿನ್ನುವುದಾ..
ನೋಡಿ ಕಲಿಯಿರೋ ನಮ್ಮಿಂದ…:)
-Bhagirathi Chandrashekar
********
ಒಂದೇ ಗೂಡಲ್ಲಿ
ನಾವು ಒಂದುಗೂಡಿಹೆವು
ಒಂದೇ ಬಳ್ಳಿಯ ಹೂಗಳಂತೆ
ಒಂದೇ ಬಳ್ಳಿಯಲಿ
ಕುಳಿತಿಹೆವು ನಾವು
ಒಂದೇ ತಾಯಿಯ ಮಕ್ಕಳಂತೆ …..
-ಸತೀಶ್ ಬಿ ಕನ್ನಡಿಗ