Category Archives: ನಗೆ ಹನಿಗಳು

ತಾಳಿ ಕಟ್ಟಲು ಮಾತ್ರ ಬೇಕು, ಹೊಡೆಯಲು ಬೇಡವೇ? ಬೀಚಿ ಹಾಸ್ಯ -2

ಹೆಂಡಂದಿರನ್ನು ಏಕೆ ಹೊಡೆಯುತ್ತೇವೆ… ಯಾರಾದರೂ ತಪ್ಪು ಮಾಡಿದರೇ ಹೊಡೆಯುತ್ತಾರೆ, ನಿಷ್ಕಾರಣವಾಗಿ ಕೈ ಹಿಡಿದವಳ ಮೇಲೆ ಯಾರೂ ಕೈ ಮಾಡುವುದಿಲ್ಲ. ಅಹುದು, ಎಲ್ಲರೂ ಸಕಾರಣವಾಗಿಯೇ ಹೊಡೆಯುವುದು.

ಎಲೆಯಲ್ಲಿ ಎಡಗಡೆ ಹಾಕಬೇಕಿದ್ದ ಉಪ್ಪನ್ನು ಬಲಗಡೆ ಹಾಕುವುದು ಏನು ಸಾಮಾನ್ಯ ಅಪರಾಧವೇ? ಸಾರನ್ನು ಬಡಿಸುವಾಗಿ ಅದು ಹರಿದು ಪಲ್ಲೆಯಲ್ಲಿ ಸೇರಿದರೆ ಕ್ಷಮಿಸಲು ಸಾಧ್ಯವೇ? ಕಾಫಿ ತಡವಾದಾಗ ಹೊಡೆಯದೆ ಇರಲು ಬರುತ್ತದೆಯೇ? ಮೊದಲು ಮೊಸರು ನೀಡಿ ಆ ಮೇಲೆ ಹಾಲು ನೀಡುವ ಬದಲು ಮೊದಲೇ ಹಾಲು ನೀಡಿಬಿಟ್ಟರೆ ಕೆನ್ನೆಗೆ ತೀಡಿ ಕೊಡದಿದ್ದರೆ ಹೇಗೆ? ಅಜಾಗರೂಕತೆಯಿಂದ ದೀಪದ ಗ್ಲಾಸನ್ನಾಗಲಿ, ತೊಳೆಯುವಾಗ ಗಾಜಿನ ಸಾಮಾನುಗಳನ್ನಾಗಲಿ ಒಡೆದಾಗಲೂ ಅವರಿಗೆ ಏಟುಗಳು ಬೀಳಬೇಡವೇ? ಸತಿದೇವನು ಹೊಡೆದದ್ದನ್ನು ಅವರಿವರ ಮುಂದೆ ತಾಯಿ, ಅಕ್ಕ-ತಂಗಿಯರ ಮುಂದೆಯೇ ಆಗಲಿ ಹೇಳಿಕೊಂಡರೆ ಪುನಃ ಹೊಡೆಯಬೇಕೋ ಬೇಡವೋ? ಹೊಡೆಯುವಾಗಿ ಕೂಗಿ ಚೀರಿ ಅತ್ತು ಗಲಾಟೆ ಮಾಡಿದರೆ ಏಕೆ ಹೆಚ್ಚು ಹೊಡೆಯಬಾರದು? ಹೊಡೆದಾಗಲೂ ಅಳದೆ ಸುಮ್ಮನಿದ್ದರೆ ಕೊನೆಗೆ ಅಳುವವರೆಗಾದರೂ ಹೊಡೆಯದಿದ್ದರೆ ಹೇಗೆ? ಹೇಳಲು ಬಾರದೆ ಹೊಟ್ಟೆನೋವಿನಿಂದಲೋ ಕಿವಿ ಶೂಲೆಯಿಂದಲೋ ಕಿರಿಚಿಕೊಳ್ಳುವ ಮೂರು ತಿಂಗಳ ಮಗುವನ್ನು ಸಮಾಧಾನಮಾಡಲು ಬಾರದ ಹೆಂಡತಿಯನ್ನು ಎಷ್ಟು ಬಾರಿ ಹೊಡೆದರೂ ಕಡಿಮೆಯೇ. ಕೈಯಲ್ಲಿ ಕಾಸು ಇಲ್ಲದಾಗ ಮನೆಯಲ್ಲಿ ಅಕ್ಕಿ ಇಲ್ಲ ಎಂಬ ಹೆಂಡತಿಯನ್ನು ಹೊಡೆಯದೆ ಗತ್ಯಂತರವಿದೆಯೇ? ಬಜಾರದಲ್ಲಿ ಬೆಲ್ಲ ದೊರೆಯದಿದ್ದರೆ, ಆಫೀಸಿನಲ್ಲಿ ಆಟ ಸಾಗದಿದ್ದರೆ, ಮಲಗಿದಾಗ ತಿಗಣಿ ಕಡೆದರೆ, ಮಗನು ಶಾಲೆಯಲ್ಲಿ ನಪಾಸಾದರೆ, ಮಳೆಯಾಗಿ ರಸ್ತೆಯಲ್ಲಿ ಕೆಸರಾದರೆ, ಸಾಲ ಕೊಟ್ಟವವರು ಕಾಟ ಕೊಟ್ಟರೆ, ತನ್ನ ಲೇಖನವನ್ನು ಸಂಪಾದಕರು ಸ್ವೀಕರಿಸಿ ಹಣ ಕಳಿಸದಿದ್ದರೆ, ಗಂಡನೆಂಬ ಸಾಧು ಪ್ರಾಣಿಯು ತನ್ನ ಹೆಂಡತಿಯನ್ನಲ್ಲದೆ ಬೇರಾರನ್ನು ಹೊಡೆಯಲು ಸಾಧ್ಯ? ಯಾರೂ ನಿಷ್ಕಾರಣವಾಗಿ ಹೊಡೆಯುವುದಿಲ್ಲ. ತಾನು ಅವಳ ಗಂಡನೆಂಬುದೇ ಮೊದಲ ಕಾರಣ! ಹೊಡೆಯುವ ಗಂಡನನ್ನು ಅನ್ಯಾಯವಾಗಿ ದೂರುವ ಹೆಂಡಂದಿರು ಒಂದು ವೇಳೆ ತಾವೇ ಗಂಡಂದಿರಾಗಿದ್ದರೆ ಬಿಡುತ್ತಿದ್ದರೇ?

ಗಂಡ ಹೆಂಡತಿಯನ್ನು ಸ್ವಂತ ಬುದ್ದಿಯಿಂದ ಹೊಡೆಯುವಷ್ಟು ಜಾಣರಲ್ಲವಂತೆ, ಹೆಂಡತಿಯ ತಾಯಿಯ ಮೇಲಿನ ಮಾತೃಭಕ್ತಿಯಿಂದಲೋ, ಶ್ರೀರಾಮನಂತೆ ಪಿತೃಪರಿಪಾಲನೆಗಾಗಿಯೋ ಹೊಡೆಯುತ್ತಾರೆ. ಇಬ್ಬರು ಹೆಂಡತಿಯರಿದ್ದರಂತೂ ಅವಳ ಚಾಡಿ ಕೇಳಿ ಇವಳನ್ನು, ಇವಳ ಚಾಡಿ ಕೇಳಿ ಅವಳನ್ನು, ಎರಡೂ ಇಲ್ಲದಿದ್ದರೆ ಮಕ್ಕಳ ಚಾಡಿ ಕೇಳಿ ಇಬ್ಬರು ಹೆಂಡಿರನ್ನೂ ಹೆಚ್ಚು ಕಮ್ಮಿ ಅನ್ನದೇ ನಿಷ್ಪಕ್ಷಪಾತವಾಗಿ ಹೊಡೆಯುತ್ತಾನೆ. ಇಲ್ಲವೆಂದರೆ ಸುತ್ತಮುತ್ತಲಿನ ಜನರಾದರೂ ಚಾಡಿ ಹೇಳಿ ಹೊಡೆಸುತ್ತಾರೆ.
-ಸಂಗ್ರಹ : ಮಂಜುನಾಥರೆಡ್ಡಿ

Advertisements

ಗುರುತ್ತ್ವಾಕರ್ಷಣೆಯ ತತ್ತ್ವ

ಗುರುತ್ತ್ವಾಕರ್ಷಣೆಯ ತತ್ತ್ವ ನ್ಯೂಟನ್‌ಗಿಂತ ಮೊದಲೇ ಭಾರತೀಯರಿಗೆ ಗೊತ್ತಿತ್ತು. ಅದು ಯಾವ ರೀತಿ ಎಂದರೆ “ನ್ಯೂಟನ್‌ನ ತಲೆಯ ಮೇಲೆ ಸೇಬಿನಹಣ್ಣು ಬಿದ್ದದ್ದರಿಂದ ಗುರುತ್ತ್ವಾಕರ್ಷಣ ತತ್ತ್ವದ ಜ್ಞಾನೋದಯವಾಯಿತೆಂಬುದು ಎಲ್ಲರಿಗೂ ತಿಳಿದ ವಿಷಯ. ನ್ಯೂಟನ್‌ಗೂ ಮುಂಚೆಯೇ ಭಾರತದ ಜ್ಞಾನಿಗಳಿಗೂ ಈ ಬಗ್ಗೆ ಜ್ಞಾನೋದಯವಾಗಿತ್ತು. ಭಾರತದ ಪಶ್ಟಿಮ ತೀರಗಳಲ್ಲಿ (ಕೇರಳ, ಗೋವಾ) ಸೇಬಿನ ಮರಗಳಿಲ್ಲ. ಜ್ಞಾನಿಗಳಿದ್ದರು. ಅವರಲ್ಲೊಬ್ಬನ (ಈ ಜ್ಞಾನಿಗೆ ಸ್ವಾಮೀ ಗುರುತ್ವಾನಂದ ಎಂದು ವಿಜ್ಞಾನಿ ಜಯಂತ್ ನಾರ್ಳಿಕರ್ ನಾಮಕರಣ ಮಾಡಿದ್ದಾರೆ.) ತಲೆಯ ಮೇಲೆ ಸೇಬಿನ ಬದಲು (ಅಲ್ಲಿ ಯಥೇಚ್ಛವಾಗಿ ಸಿಗುವ) ತೆಂಗಿನಕಾಯಿ ಬಿದ್ದಿತು. ಜ್ಞಾನೋದಯವೇನೋ ಆಯಿತು. ಆದರೆ ಅದನ್ನು ಇತರರಿಗೆ ತಿಳಿಸಿಕೊಡಲು ಆತ ಉಳಿಯಲಿಲ್ಲ……”
– ವಿಶ್ವಕನ್ನಡ

ಬೀಚಿ ಹಾಸ್ಯ 1

ಊರಲ್ಲಿ ಒಂದು ಬಾರಿ ಚುನಾವಣೆ ರೋಗ ಹಬ್ಬಿತು. ಎಲ್ಲಿ ನೋಡಿದರೂ ಜನಸಂದಣಿ, ರಸ್ತೆ ತುಂಬಾ ಗಾಡಿಗಳು, ಆರಡಿ ಎತ್ತರ ಮೂರಡಿ ಅಗಲದ ಅಕ್ಷರಗಳುಳ್ಳ ಹಾಸಿಗೆಯಂತಹ ಕಾಗದಗಳು ಗೋಡೆ ಗೋಡೆಗೂ ನಿಂತಿವೆ. ಎದುರಿನಲ್ಲಿ ಈ ವಾಕ್ಯವನ್ನು ಓದಿ ಕಕ್ಕಾಬಿಕ್ಕಿಯಾಗಿ ಹಾಗೇ ನಿಂತೆ.
“ಕೋತಿ ಮಾರ್ಕುಳ್ಳ ಅಸದುಲ್ಲಾರಿಗೇ ನಿಮ್ಮ ಘನವಾದ ಮಗಳನ್ನು ಕೊಡಿರಿ”
ಏನಿದು ಅಸದುಲ್ಲರ ತಲೆ! ಕೈ ತಿಕ್ಕುತ್ತಾ ಮುಂದೆ ನಿಂತ… ಅಸದುಲ್ಲಾರ ಏಜೆಂಟ್ ಹೇಳಿದ.. “ಅಚ್ಚಿನಲ್ಲಿ ಕೊಂಚ ತಪ್ಪಿದೆ ಸ್ವಾಮಿ. ಕೋಳಿ ಮಾರ್ಕುಳ್ಳ ಅಸದುಲ್ಲಾರಿಗೇ ನಿಮ್ಮ ಘನವಾದ ಮತಗಳನ್ನು ಕೊಡಿರಿ ಎಂದಿರಬೇಕಿತ್ತು” ಎಂದು ಹೇಳಿದ.
ಸದ್ಯ ಮಗಳು ಉಳಿದಳು ಎಂದು ಮನೆಗೆ ನಡೆದೆ

-ಮಂಜುನಾಥರೆಡ್ಡಿ 

ಅಮ್ಮಾ… ಅಣ್ಣ ಬಂದ

ಮದುವೆಯಾಗಿ ಮನೆಗೆ ಬಂದ ಸೊಸೆಗೆ-

ಅತ್ತೆ- ನೋಡಮ್ಮ ನೀನೆನು ಯೋಚನೆ ಮಾಡಬೇಡ, ನನ್ನನ್ನ ಅಮ್ಮ ಅಂತ ತಿಳ್ಕೊ, ಇವತ್ತಿಂದ ನಿನ್ನ ಮಾವನೇ ನಿನ್ನ ಅಪ್ಪ.

ಸೊಸೆ- ಆಯ್ತು

ಅತ್ತೆ- ನಿನ್ನ ಮೈದುನನ್ನ ತಮ್ಮ ಅನ್ಕೊ. ಇದು ನಿನ್ನ ಅಮ್ಮನ ಮನೆ ತರಹನೇ. ಫ್ರೀಯಾಗಿರು ಸಂಕೋಚ ಪಡಬೇಡ.ಸೊಸೆ- ಹಾಗೆ ಆಗ್ಲಿ.

(ಸಂಜೆ ಗಂಡ ಆಫೀಸಿಂದ ಮನೆಗೆ ಬಂದ)

ಸೊಸೆ- ಅಮ್ಮಾ… ಅಣ್ಣ ಬಂದ!!
-ಚಂದ್ರು

ಮಕ್ಕಳ ಪ್ರಾರ್ಥನೆಗಳು,ಮತ್ತು ಆಸೆಗಳು

ಮಕ್ಕಳ ಪ್ರಾರ್ಥನೆಗಳು,ಮತ್ತು ಆಸೆಗಳು

ಜೋರಾಗಿ
ಮಳೆ ಬರಲಿ
ನಮ್ಮ ಸ್ಕೊಲು ಮುಳಗಲಿ

ಮುಳುಗುವಾಗ
ಟಿಚರ್ ಗಳು ಒಳಗಿರಲಿ.

ಇ೦ದು ಬೆಳಗ್ಗೆ ಯಾರಾದರು ಮ೦ತ್ರಿಗಳು ಸಾಯಲಿ
ನಮಗೆ ರಜಾ ಸಿಗಲಿ

ಇವತ್ತು ಪೀ.ಟಿ ಪಿರಿಯಡ್ ಇದೆಯಲ್ಲಾ
ಪೀ.ಟಿ. ಟೀಚರ್ ಗೆ ಹೊಟ್ಟೆನೊವು ಬರಬಹುದಲ್ಲಾ


ಶನಿವಾರ, ಬಾನುವಾರ
ಮಾತ್ರ ಸಾಕು, ಬೇರೆ ದಿನಗಳು ಬೇಡವೆ ಬೇಡ

ಎಲ್ಲಾ ಕ೦ಡು ಹಿಡಿದ ಪುಣ್ಯಾತ್ಮರು
ಹೋ೦ವರ್ಕ್ ಮಾಡುವ ಮಿಶಿನ್ ಕ೦ಡು ಹಿಡಿಯಲಿಲ್ಲವಲ್ಲ

ಅಮ್ಮಾ ಏಕೊ ಜ್ವರ ಬ೦ದ ಹಾಗಿದೆ
ನ೦ಗೊತ್ತು ಕಣೊ ನೀನು ಹೋ೦ವರ್ಕ್ ಮಾಡಿಲ್ಲ

ಈ ಗಣಿತದ ಮೇಡಮ್ಗೆ ಇನ್ನೊ ಮದುವೆ ಆಗಿಲ್ಲ
ಆದರೆ ಸಾಕು
ನಮಗೆ ಒ೦ದು ವಾರ ಗಣಿತ ಇಲ್ಲಾ.

ಐ.ಪಿ.ಎಲ್ ಮ್ಯಾಚು ಬರುವಾಗಲೆ
ಇಡುತ್ತಾರಾಲ್ಲ ಟೆಸ್ಟುಗಳು, ಈ ಮೇಷ್ಟುಗಳು
ಇವರಿಗೇನು ಮಕ್ಕಳಿಲ್ಲವಾ ?

ಈ ಸಲ ಮಾತ್ರ ಪಾಸು ಮಾಡಿಬಿಡಪ್ಪಾ ದೇವರೆ
ಮು೦ದಿನ ಸಲ ಬೇಕಾದ್ರೆ ನಿನ್ನಿಷ್ಟ,,
….
ನಾನು ಡೆಸ್ಕಿನ ಮೇಲೆ ಬರೆದ ಹುಡುಗಿ ಹೆಸರು
ಯಾರಿಗೊ ಕಾಣದೇ ಇರಲಿ ದೇವರೆ,
ಆ ಹುಡುಗಿಯನ್ನು ಬಿಟ್ಟು.

ಇನ್ನೊ ಸೇರಿಸಬಹುದು…

…ತು೦ಟು ಕೃಷ್ಣ….

ಕಿರಿಕ್ ಕಿಸ್ನಮೂರ್ತಿ

ಸಿ.ಸಿ.ಸಿ. ಲಿ೦ಗೈಕ್ಯಾನ೦ದ ಸ್ವಾಮಿಗಳ ಆಸ್ರಮ..
..
..
ಕಿರಿಕ್ ಕಿಸ್ನಮೂರ್ತಿ, ಒಬ್ಬ ಗ೦ಡಸು , ಹೆ೦ಗಸಿನೊ೦ದಿಗೆ ಒಳಬ೦ದು
ಕಿ,ಕಿ: “ಅಡ್ಡಬಿದ್ದೆ ಬುದ್ದಿ ……………..”
ಲಿ.ಸ್ವಾಮಿಗಳು: “ಏನಯ್ಯಾ ಕಿಸ್ನಮೂರ್ತಿ .. ಯಾರಿವ್ರು ”
ಕಿ.ಕಿ.: ” ಬುದ್ದಿ ಇವಮ್ಮ ತ೦ಬಿಟ್ಟಹಳ್ಳಿ ಮಿಡ್ ವೈಪು, ಈವಪ್ಪ ಬ್ಯಾ೦ಕಗೆ ಕೆಲ್ಸ ಮಾಡ್ತಾ ಅವ್ರೆ”
ಲಿ.ಸ್ವಾಮಿಗಳು: “ಒಳ್ಳೆದಾಗಲಿ”, ಗ೦ಡಸು ಕಾಲಿಗೆ ನಮಸ್ಕರಿಸುತ್ತಾನೆ, ಹೆ೦ಗಸು ನಿ೦ತಲ್ಲೆ ನಮಸ್ಕರಿಸುತ್ತಾಳೆ, ಬಸುರಿ
ಕಿ.ಕಿ.: “ಬುದ್ದಿ ಇವ್ರಬ್ಬರಿಗೆ ಮದ್ವೆ ಮಾಡಿಸ್ಬೇಕು ಆಸ್ರಮದಲ್ಲಿ ”
ಲಿ.ಸ್ವಾಮಿಗಳು: “ಏನಯ್ಯ ಮಾತಾಡ್ತಾ ಇದ್ಯಾ .. ತಲೆ ಕೆಟ್ಟ್ ಐತಾ…ಈವಮ್ಮ ಬಸುರಿ…. ಮದ್ವೆ ಮಾಡಿಸ್ಬೇಕಾ..?”
ಕಿ.ಕಿ.: “ಔದ್ರಾ,,ಇವ್ರಬ್ರಗಿನ್ನೂ ಮದ್ವೆ ಆಗಿಲ್ಲಾ”
ಲಿ.ಸ್ವಾಮಿಗಳು: “ಅಕ್ರಮ,ಅಕ್ರಮ”
ಕಿ.ಕಿ.: “ಅಕ್ರಮನ ಸಕ್ರಮ ಮಾಡವ್ರೆ ಬುದ್ದಿ ಸರ್ಕಾರದೊರು”
ಲಿ.ಸ್ವಾಮಿಗಳು: “ಏನಯ್ಯಾ ನಿನ್ ಹೇಳೊದು ಮದ್ವೆಗೆ ಮು೦ಚೆ ಬಸ್ರಗೊದು ಸಕ್ರಮವೆ”
ಕಿ.ಕಿ.: “ಔದ್ರಾ ಲಿವಿ೦ಗ್ ಟು ಗೆದರ್ ಅ೦ತಾ.. ಗ೦ಡು, ಎಣ್ಣು ಒಟ್ಟಿಗೆ ಇರ್ಬೌದು.. ಬೆಕಾದ್ರೆ ಮದ್ವೆ ಆಗ್ಬೊದು .. ಇಲ್ಲಾ ಅ೦ದ್ರೆ. ಇಲ್ಲಾ”
ಲಿ.ಸ್ವಾಮಿಗಳು: “ಶಿವ,ಶಿವಾ, ಏನ್ ಕಾಲ ಬ೦ದೈತೆ, ಅಲ್ಲಲೆ, ಆಸ್ರಮದಾಗೆ Continue reading →

ಇಂದು ಗಂಡಹೆಂಡತಿಯಂತೆ ಇರೋಣವೇ

ಅದೊಂದು ಟ್ರೈನ್, ಮೊದಲ ದರ್ಜೆಯ ಬೋಗಿ, ಅಲ್ಲಿ ಅವನು ಅವಳು ಇಬ್ಬರೇ, ಅವನು decent ಆಗಿ ಕಾಣುತ್ತ ಇದ್ದ
ಅವಳೂ ಒಳ್ಳೆ ಹೆಣ್ಣು ಮಗಳೇ,  ವಿದ್ಯಾವಂತರು, ರಾತ್ರಿಯ ಪಯಣ, ಅವಳೂ ತಾನು ತಂದಿದ್ದ ತಿಂಡಿ ತಿಂದು ಒಂದು ಪುಸ್ತಕ ಹಿಡಿದು ಕೊತಳು, ಅವನು ಅಲ್ಲೇ ತಿಂಡಿ ತಿಂದು berth ಮೇಲೆ ಹತ್ತಿದ ಮಲಗಲು, ಅವಳೆಡೆಗೆ ನೋಡಿದ, ಸೀರಿಯಸ್ ಆಗಿ ಓದ್ತಾ ಇದ್ಲು, ಸರಿ ಆ ಕಡೆ ತಿರುಗಿ ಮಲಗ ಹೊರಟ, ಚಳಿ ಗಾಳಿ, ಹೊದಿಕೆ ತೆಗೆದುಕೊಳ್ಳಲು ಮರೆತಿದ್ದ.

ಅವಳನ್ನ ಕೇಳಿದ ‘ಮೇಡಂ ಅಲ್ಲಿ ನನ್ನ ಹೊದಿಕೆ ಇದೆ ಸ್ವಲ್ಪ ಕೊಡ್ತೀರ…”
ಅವಳೊಮ್ಮೆ ಅವನ ಮುಖ ನೋಡಿದಳು “ಇವತ್ತು ಒಂದು ತಾತ್ರಿ ನಾವಿಬ್ಬರು ಗಂಡಹೆಂಡತಿಯಂತೆ ಇರೋಣವೇ” ಅಂದ್ಲು….
ಅವನಿಗೆ ಅಚ್ಚರಿ, ಸ್ವಲ್ಪ ಬೆಚ್ಚಿದ ಕೂಡ, ತಲೆ ಆಡಿಸಿದ ಅವನಿಗೆ ಅವಳು ಹೇಳಿದ್ಲು
“ಇಳಿದು ಬಂದು ಹೊದಿಕೆ ತಗೊಂಡು ಹೋಗು”.
-ಸುನಿತಾ ಮಂಜುನಾಥ್

ಹಾಲು ಕಾಯಿಸುವಾಗ

ಹಾಲು ಕಾಯಿಸುವಾಗ,
ಕಾಯುವ ಹಾಲನ್ನೆ ನೋಡುವಾಗ
ನಿನ್ನ ನೆನೆಪು ಬ೦ದು, ಮೈ ಮರೆತಾಗ
ಎರಡು ಹನಿ ಕಣ್ಣೀರು ಕಾಯುವ ಹಾಲಿಗೆ
ಬಿದ್ದು, ಹಾಲು ಒಡೆದು ಹೋಯಿತಲ್ಲಾ
ತಪ್ಪು ನಿನ್ನ ನೆನೆಪಿನದೆ ?
ನನ್ನ ಕಣ್ಣೀರಿನದೆ?
ನನ್ನ ಮೈಮರೆವೆ ?
ಹಾಲು ಒಡೆದರೇನು ನಿನ್ನ ನೆನಪಲ್ಲೇ
ಒಡೆದ ಹಾಲು ಕುಡಿದು ಬಿಟ್ಟೆ
ಸಿಹಿಯಾಗಿತ್ತು:)
…ತು೦ಟು ಕೃಷ್ಣ …. 

ಉಪಾಯ


ಅವನಿಗೆ ನಾ ಮಾಡಿದ ಆಡುಗೆ ಹಿಡಿಸಲಿಲ್ಲ
ಅವನಿಗೆ ನಾ ಮಾಡಿದ ಪಲ್ಯೆ ಹಿಡಿಸಲಿಲ್ಲ
ಅವನಿಗೆ ನಾ ಮಾಡಿದ ತಿಂಡಿ ಹಿಡಿಸಲಿಲ್ಲ
ಅವನಿಗೆ ನಾ ಮಾಡಿದ ಕಾಫಿ ಹಿಡಿಸಲಿಲ್ಲ
ಅವನಿಗೆ ನಾ ತೊಳೆದು ಕೊಟ್ಟ ಕಾಲ್ ಚೀಲ ಹಿಡಿಸಲಿಲ್ಲ
ಅವನಿಗೆ ನಾ ಇಸ್ತ್ರೀ ಮಾಡಿಟ್ಟ ಬಟ್ಟೆ ಹಿಡಿಸಲಿಲ್ಲ
ಸಿಟ್ಟಿಗೆದ್ದು ಒಂದು ದಿನ ಕೇಳಿದರೆ ಕಾರಣ
ಅವನು ಹೇಳಿದ ಉತ್ತರ ಇವು ಯಾವು
ನನ್ನ ಅಮ್ಮ ಮಾಡಿದ ಹಾಗೆ ಇಲ್ಲ
ಒಮ್ಮೆ ಪ್ರೀತಿಯಿಂದ ಅವನ ನೊಡೀ ನಕ್ಕೆ ಒಂದು ಸಲ
ಹೊಳೆಯಿತು ಮಿಂಚು ತಲೆಯಲಿ ಪಳ ಪಳ

ಅಯ್ಯೊ ದೇವರೇ ಇದು ನನಗೆ ಹೊಳೆಯಲೆ ಇಲ್ಲ
ಅತ್ತಿರ ಹೊದವಳೆ ಬಿಗಿಯಾಗಿ ಚಟೀರನೆ ಕೊಟ್ಟೆ ಕಪಾಳಕ್ಕೆ
ಮತ್ತೆ ಕೇಳಿದೆ ಇದು ನಿಮ್ಮ ಅಮ್ಮ ಕೊಟ್ಟ ಹಾಗೆ ಇತ್ತ ಅಂತ

Sanjeev Kumar

ಸುಖಾಸನ ಸವಾಸನ

ಯಾಕ್ಲ ಕಿಸ್ನ ಮೂರ್ತಿ ಅ೦ಗೆ ಓಡಿಯೆ ?
ಹೊ ಕಲ,ಬಿಡದಿ ಆಸ್ರಮದಿ೦ದ ಓಡಿ ಬತ್ತಾ ಇದಿನಿ.
ನಿತ್ಯಾನ೦ದನ ಆಸ್ರಮವೆ?
ಹೊ ಕಲ
ಅಲ್ ಯಾಕಲ ಒಗಿದ್ದೆ.
ಸ್ವಾಮಿಗೊಳು ಅದ್ಯಾರೊ ಆರ್ತಿರಾವ್ ಅನ್ನೊ ಯಮ್ಮನ್ನ ಉಡಿಕ್ಕೊ೦ಬಾರ್ಲ ಅ೦ದಿದ್ರು.
ಅವಮ್ಮನ ಮೊನ್ನೆ ಟಿ.ವಿ.ನಾಗೆ ನೊಡ್ದೆ ಕಲ. ಅದನ್ನೆಳ್ವ ಅ೦ತ ಒಗಿದ್ದೆ.
ಯಾಕಲೇ ನಿತ್ಯಾನ೦ದನ ಆಸ್ರಮದಲ್ಲಿ ಟಿ.ವಿ ನೊಡಲ್ವೆ?
ಊಹು. ನಿತ್ಯಾನ೦ದ ಸ್ವಾಮಿಗೊಳು ಬರೆ ಸೀ.ಡಿ ನೊಡೊದು.
.
.
.
.
.
ಸರಿ ಕನ್ಲಾ ನಿತ್ಯಾನ೦ದಗೆ ಹೇಳ್ದಾ.
ಇಲ್ಲಾ ಕಲ ಒಳೀಕ್ಕೊಗೊಷ್ಟರಲ್ಲೆ.ಯರ್ಯಾರು ಬ೦ದು ಗಲಾಟೆ ಮಾಡ್ತಾ ಇದ್ರು
ಎಲ್ಲಾರು ಒಬ್ಬೂಬ್ಬರಿಗೊ ಇಕ್ಕತಾ ಇದ್ರು. ಅದ್ಕೆ ಓಡಿಬತ್ತಾಇದಿನಿ.
.
.

ನೀನು ನಿತ್ಯಾನ೦ದನ ಸಿಸ್ಯ ಅಲ್ಲೇನಲೆ ? ಎನ್ ಏಳ್ಕೊಟ್ಟ ನಿಮ್ಮ ಸ್ವಾಮಿ.
ಎಲ್ಡು ಆಸನ ಎಳ್ಕೊಟ್ಟವ್ನೆ ಕಲ.
ಯಾವ್ದೊ?
ಸುಖಾಸನ.
ಸವಾಸನ.
ಮನೆಗೊಗಿ ಸವಾಸನ ಹಾಕ್ಕೊಗ್ಲಾ…..

ಕೋಮಲ್ ಸಾರ್ ಕ್ಷಮೆ ಕೋರುತ್ತಾ. ಅವ್ರ ಶೈಲಿಯಲ್ಲಿ ಬರ್ದಿದ್ದಕ್ಕೆ.

…ತು೦ಟು ಕೃಷ್ನ……..

ಸಾಧು ಭಿಕ್ಷುಕ

ಒಬ್ಬ ಸಾಧು ಭಿಕ್ಷುಕ…
ಮಸೀದೆಯ ಮುಂದೆ ಭಿಕ್ಷೆಗೆ ನಿಂತ
ನಮಾಜಿಗೆ ಬಂದ ಎಲ್ಲರು ನಮ್ಮಜು ಮುಗಿಸಿ ಹೊರಟರು, ಎಲ್ಲೋ ಅಲ್ಲೊಂದು ಇಲ್ಲೊಂದು ಕಾಸು
ಅವನ ಜೋಳಿಗೆ ಖಾಲಿಯೇ ಇತ್ತು…

ಚರ್ಚಿನ ಮುಂದೆ ನಿಂತ…ಜಪ ಮುಗಿಸಿ ಹೊರಟವರು ಹಾಗೆಯೇ ಹೋದರು, ಎಲ್ಲೋ ಅಲ್ಲೊಂದು ಇಲ್ಲೊಂದು ಕಾಸು
ಅವನ ಜೋಳಿಗೆ ಖಾಲಿಯೇ ಇತ್ತು…

ದೇವಸ್ತಾನದ ಮುಂದೆ ನಿಂತ, ಪೂಜೆ ಮುಗಿಸಿ ಹೊರಟ ಜನ, ಎಲ್ಲೋ ಅಲ್ಲೊಂದು ಇಲ್ಲೊಂದು ಕಾಸು…
ಅವನ ಜೋಳಿಗೆ ಖಾಲಿಯೇ ಇತ್ತು….

ಬೇಸತ್ತ ಸಾಧು ಒಂದು ಬಾರಿನ ಮುಂದೆ ನಿಂತ, ಹೊರ ಬಂದವರೆಲ್ಲ ದಾನ ಶೂರರು…!!!!!!
ಜೋಳಿಗೆ ತುಂಬಿ ಹೋಯ್ತು…

ಸಾಧು ಹೇಳಿದ…”ಹೇ ದೇವ ಎಲ್ಲೋ ಇದ್ದು ಇನ್ನೆಲ್ಲಿಯದೋ ವಿಳಾಸ ಯಾಕೆ ನೀಡುವೆ …..ಸರಿಯಾದ ಅಡ್ರೆಸ್ಸ್ ಕೊಡಬಾರದ “ಎಂದ…

Sunitha manjunath

ಯಳವತ್ತಿ ಟ್ವೀಟ್

ಇಂದು ಬೆಂಗಳೂರಿನಲ್ಲಿ ಕೊಂಚ ಭೂಕಂಪನ ಆಗಿದೆಯಂತೆ.. ಖಂಡಿತಾ ಇದಕ್ಕೆ ನಮ್ಮ ಕೆಲವು ಎಮ್ಮೆಲ್ಯೆ ಹಾಗೂ ಸಚಿವರುಗಳೇ ಕಾರಣ.. ಅವರೆಲ್ಲರೂ ಸದಾನಂದಗೌಡರ ಆದೇಶದ ಮೇರೆಗೆ ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿದ್ದಾರಂತೆ.. ಇವತ್ತು ಎಲ್ಲಾ ಪಾಪಿಗಳು ಬೆಂಗಳೂರಿನಲ್ಲಿ ಅಧಿವೇಶನ ಮಾಡಿದ್ದರೆ, ಕೊಂಚ ಭೂಕಂಪನವನ್ನಾದರೂ ತಪ್ಪಿಸಬಹುದಿತ್ತು.. ಹಿರಿಯರೇ ಹೇಳಿದ್ದಾರಲ್ಲಾ.. ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು.. ಅಂತಾ..

ಶಿವಶಂಕರ ಯಳವತ್ತಿ

ಎಲ್ಲೋ ಒಂದು ಕಡೆ ಬರೆದಿಟ್ಟುಕೊಂಡಿದ್ದು..

ಆಶಾವಾದ ಬೆಳೆಸಿಕೊಳ್ಳಲು 12 ಮಾರ್ಗಗಳು.. (ಬ್ರಾಕೆಟ್ ನಲ್ಲಿರುವುದು ತಮಾಷೆಗಾಗಿ)

1) ಉತ್ಸಾಹದಿಂದ ಎದ್ದೇಳಿ (ಗರ್ಲ್ ಫ್ರೆಂಡ್ ಗೆ ಫೋನ್ ಮಾಡಿ ಎಬ್ಬಿಸಲು ಹೇಳಿ)

2) ನಾಳಿನ ಬಗ್ಗೆ ನಂಬಿಕೆ ಇರಲಿ (ನಾಳೆ ಒಂದೇ ದಿನ ಯಾಕೆ? ನಾಡಿದ್ದರ ಬಗ್ಗೆಯೂ ಇರಲಿ)

3) ಉತ್ತಮ ಆಹಾರ ಸೇವಿಸಿ (ಮದುವೆ ಮಾಡಿಕೊಂಡು ಬಿಡಿ, ಒಳ್ಳೆಯ ಅಡುಗೆಯಾಕೆ ಸಿಗುತ್ತಾಳೆ)

4) ಒಳ್ಳೆಯ ನಿದ್ರೆ (ಮದುವೆಯಾದವರಿಗೆ ಅನ್ವಯಿಸುವುದಿಲ್ಲ)

5) ಒಳ್ಳೆಯ ಹವ್ಯಾಸಗಳು ( ಅಭ್ಯಾಸಗಳೂ ಒಳ್ಳೆಯದಿರಲಿ)

6) ಕೊಟ್ಟು ಪಡೆಯುವ ಮನುಷ್ಯ ಗುಣ (ಕಾಸು ಕೊಟ್ಟಿದ್ದನ್ನು ವಸೂಲಿ ಮಾಡೋ ತಾಖತ್ತು ಇರಲಿ)

7) ವಿಶಾಲವಾದ ಆಲೋಚನೆ ( ನಾಳೆ ಹೋಗೋ ಬಸವನಗುಡಿಯನ್ನೇ ಅಮೇರಿಕಾ ಅನ್ಕೊಳ್ಳೀ) 

8) ಶಿಸ್ತುಬದ್ಧ ಜೀವನ (ಸಾಧ್ಯವಾದಷ್ಟು)

9) ಆಲೋಚನೆಯಲ್ಲಿ ಹೊಸತನ ( ಕಾಲೇಜ್ ಹುಡುಗರ ಜೊತೆ ಇದ್ರೆ ಖಂಡಿತಾ ಬರುತ್ತೆ)

10) ಆದರ್ಶ ವ್ಯಕ್ತಿಗಳಿರಲಿ (ಫಾರ್ಮಾಲಿಟಿಗಾದರೂ ಇರಲಿ)

11) ಸದಾ ಆಶಾವಾದಿಗಳಾಗಿ (ಆಶಾ ಯಾರೇ ಆಗಿರಲಿ, ಅವಳ ಕಡೆಗೇ ವಾದ ಮಾಡಿ)

12) ಸಹಾಯ ಮನೋಭಾವ (ನಂಗೆ ಖರ್ಚಿಗೆ ಒಂದಿಷ್ಟು ಕಾಸು ಬೇಕಾಗಿತ್ತು.. ಕೊಡ್ತೀರಾ?)

-ಯಳವತ್ತಿ

ಇಷ್ಟೆ!!!

ಅವನು ಹೇಳಿದ್ದು ಇಷ್ಟೆ
ಐ ಲವ್ ಯು ಮಾಯ ವ್ಹಾ ವ್ಹಾ
ಅವನು ಹೇಳಿದ್ದು ಇಷ್ಟೆ
ಐ ಲವ್ ಯು ಮಾಯ ವ್ಹಾ ವ್ಹಾ
ಆಗಿದ್ದು ಇಷ್ಟೆ
ಮುಖದ ಮೇಲೆ ಗಾಯ.

ನಿಮ್ಮ ಹರೀಶ್ ನಾಗರಾಜ್

ಯಮನ ಜೊತೆ

ಅವನು: ನಿನ್ನೆ ರಾತ್ರಿ ಕನಸಿನಲ್ಲಿ ನೀನು ಸತ್ತುಹೋಗಿದ್ದೆ
ನಾನು: ಹೌದಾ!!?? ಸತ್ತೇ ಇಲ್ವಲ್ಲ ಈ ಬಡ್ಡಿಮಗ ಅಂತ ಬೇಜಾರೆನೋ ತಮಗೆ
ಅವನು: ಇಲ್ಲ ಕಣೋ ನಿಜವಾಗಲೂ ಆ ಥರ ಕನಸು ಬಿದ್ದಿತ್ತು
ನಾನು: ನೀನು “ಜೋಗಿ” ಸ್ಟೈಲಲ್ಲಿ ನನ್ ಹೆಣದ ಮುಂದೆ ಡ್ಯಾನ್ಸ್ ಮಾಡ್ತಿದ್ಯಾ? ಅಲ್ಲ ಕಣೋ ನಾನೇನೋ ಸಾವು ಅನ್ನೋ ವಿಷಯದ ಬಗ್ಗೆ ಒಂದು ಕವನ ಗೀಚಿದ್ರೆ ನೀನು ನನ್ನ ಸಾವಿಗೆ ಸ್ಕೆಚ್ ಹಾಕ್ತಿಯಲ್ಲೋ ಸುಂದರಾಂಗ.

ಹೀಗೇ ಸಾಗಿತ್ತು ನನ್ನ ಹಾಗೂ ನನ್ನ ಕಸಿನ್ ನರಸಿಂಹನ್ ಚಾಟಿಂಗು ಕೆಲವು ದಿನಗಳ ಹಿಂದೆ. ಅವ್ನು ಅಲ್ಲೆಲ್ಲೋ ದೂರದಲ್ಲಿ ಡೆನ್ಮಾರ್ಕಿನ ಕೋಪನ್ ಹೇಗನ್ನಲ್ಲಿ ಕುಳಿತು ನನ್ ಜೊತೆ ಹರಟುತ್ತಿದ್ದ. ಸಾವಿನ ಕುರಿತು ನಮ್ಮ ಚರ್ಚೆ ಹೀಗೆ ಹಾಸ್ಯಮಯವಾಗಿ ಸಾಗಿತ್ತು. ಅಷ್ಟರಲ್ಲಿ ಅವನು ಬೇರಾವುದೋ ಕೆಲಸದಲ್ಲಿ ಬ್ಯುಸಿ ಆದ. ಅಲ್ಲಿಗೆ ನಮ್ಮ ಚಾಟ್-ಚಟಕ್ಕೆ ಬ್ರೇಕ್ ಬಿತ್ತು.

ಈ ಎಪಿಸೋಡ್ ಇಲ್ಲಿಗೆ ಮುಗಿದಿದ್ದರೆ ಚೆನ್ನಾಗಿತ್ತು. ಆದರೆ ಸಾವು ಅನ್ನುವ ಸಬ್ಜೆಕ್ಟು ಅಷ್ಟು ಸುಲಭವಾಗಿ ಮರೆಯಾಗುವ ವಿಷಯ ಅಲ್ಲ. ಬಿಟ್ಟೆನೆಂದರೂ ಬಿಡದೇ ಕಾಡುವ ಮಾಯೆ ಈ ಸಾವು. ನಾವು ಸಾಮಾನ್ಯವಾಗಿ ಎಲ್ಲರ ಮನೇಲೂ ದಿನ ನೋಡ್ತಾನೆ ಇರ್ತೀವಿ, ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಅಥವಾ ಅಪ್ಪ/ಅಮ್ಮ ಮಗನಿಗೆ ಹೀಗೆ ತುಂಬಾ ಹತ್ತಿರದವರೇ ಎಲ್ಲಾದರು ಹೋಗಿ ಸಾಯಿ ಅಂತಾನೋ ಸತ್ತಾದರೂ ಹೋಗು ಅಂತಾನೋ ಬೈತಿರ್ತಾರೆ. ನಿಜವಾಗಿಯು ಹಾಗೇನಾದ್ರೂ ಸತ್ತರೆ ಅವರಿಗಾಗುವ ನೋವು ಅಷ್ಟಿಷ್ಟಲ್ಲ. ತೀರಾ ಹತ್ತಿರದವರು ಸತ್ತಾಗ ಅದರ ನೋವು ಮರೆಯೋಕೆ ವರ್ಷಗಳೇ ಹಿಡಿಯುತ್ತವೆ.ಇದೇ ಥರ ಅವತ್ತೆಲ್ಲಾ ನನ್ನ ಮನಸ್ಸಿನ ತುಂಬಾ ಮನುಷ್ಯ ಎಂಬ ಪ್ರಾಣಿಯ ಪ್ರಾಣದ ಬಗ್ಗೆ ತರಹೇವಾರಿ ಯೋಚನೆಗಳು ಕಾಡಿದವು.

ಅರೆ ಇದೇನಿದು ಯಾರೋ ನನ್ನ ಕಡೆಗೆ ಬರ್ತಾ ಇದ್ದಾರಲ್ಲ….ಯಾಕೋ ಎಲ್ಲಾ ಮಸುಕು ಮಸುಕಾಗಿ ಕಾಣಿಸ್ತಾ ಇದೆ. ಅಯ್ಯೋ ದೇವರೇ ಏನಪ್ಪಾ ಇದು ಯಮರಾಜ ಬಂದೇ ಬಿಟ್ಟ ಅವನ ಅದೇ ಹಳೇ ಮಾಡಲ್ ಗಾಡಿ (ಕೋಣ) ಮೇಲೆ ಕೂತ್ಕೊಂಡು.

ಯಮರಾಜ: ಎಲೈ ಯುವಕ ನಡೆ ನಡೆ ಹೊರಡೋಣ…ನರಕಕ್ಕೆ
ನಾನು: ಅಲ್ಲಾ ಗುರುವೇ ನನಗೆ ಇವಾಗಿನ್ನು ಮೂವತ್ತು ವರ್ಷ ತುಂಬಿದೆ…. ಇನ್ನು ಆಯಸ್ಸು ಬಾಕಿ ಇದೆ. ಎಲ್ಲೋ ನಿಂಗೆ ಅಡ್ರಸ್ ತಪ್ಪಿ ಹೋಗಿದೆ. ಅದರಲ್ಲಿ ನಿಂದೇನೂ ತಪ್ಪಿಲ್ಲ ಬಿಡು ಬೆಂಗಳೂರು ತುಂಬಾ ಬೆಳೆದುಬಿಡ್ತು…ಕನಫ್ಯೂಸ್ ಆಗೋದು ಕಾಮನ್ನು.
ಯಮರಾಜ: ನಿನ್ನ ಹೆಸರು ವಿಜಯ್ ಅಲ್ಲವೇ, ನಾನು ಸರಿಯಾದ ವಿಳಾಸಕ್ಕೆ ಬಂದಿದ್ದೇನೆ. ನನ್ನನ್ನು “ದಾರಿ ತಪ್ಪಿದ ಮಗ” ಎಂದು ತಿಳಿದೆಯಾ ಮೂಢ!!
ನಾನು : ಇಲ್ಲಾ ಬಾಸು ಇದೇ ಬೀದೀಲಿ ಕೊನೆ ಮನೇಲಿ ಒಬ್ರು ವಿಜಿ ಅಂತ ಇದ್ದಾರೆ..ಲೇಡಿಸು….ನೋಡಕ್ಕೂ ಚೆನ್ನಾಗಿದ್ದಾರೆ ಬಾಸು, ನೀನು ಅವರನ್ನ ಹುಡುಕ್ತಾ ಇರ್ಬೇಕು.
ಯಮರಾಜ : ನೋಡು ನೀನು ನನ್ನ ಬಳಿ ಆಟ ಕಟ್ಟಬೇಡ ನಾನು ಬಂದಿರುವುದು ನಿನಗಾಗಿ, ಆ ಮಹಿಳೆಗಾಗಿ ಅಲ್ಲ.
ನಾನು : ಅಲ್ಲಾ ಗುರು ಒಸೀ ಯೋಚನೆ ಮಾಡು, ಆ ಇಂದ್ರ ಬಡ್ಡೀಮಗ ಸ್ವರ್ಗದಲ್ಲಿ ರಂಭೆ, ಊರ್ವಶಿ, ಮೇನಕೆ ಅಂತ ಸಿಕ್ ಸಿಕ್ಕಿದ ಸುಂದರಿಯರ್ನ ಸುತ್ತಾ ಮುತ್ತಾ ಸಾಕ್ಕಂಡಿರುವಾಗ ನೀನು ಒಂದೂ ಹುಡುಗಿ ಇಲ್ದೆ ಹೆಂಗಿದ್ಯಾ ಸ್ವಾಮೀ. ಈಗಲೂ ನಿನಗೇನು ಕಮ್ಮಿ ಹೇಳು…ಒಳ್ಳೆ ಕಟ್ಟುಮಸ್ತಾಗಿ ಪೈಲ್ವಾನ್ ಇದ್ದಂಗೆ ಇದ್ದೀಯ..
ಯಮರಾಜ: ಸಾಕು ಮಾಡು ನಿನ್ನ ಹೊಗಳಿಕೆಯ ಮಾತನ್ನು, ನಿನ್ನ ಹೊಗಳಿಕೆಯ ಮಾತಿಗೆ ನಾನು ಮರುಳಾಗಲಾರೆ
ನಾನು: ಬಾಸೂ ನಾನು ಹೇಳ್ತಾ ಇರೋದು ನಿಜ ಬಾಸು….ನೀನು ಒಳ್ಳೆ ಹೀರೋ ಥರ ಇದ್ದೀಯಾ ಬಾಸು…ನಿಂಗೆ ಒಂದು ಒಳ್ಳೆ ಐಡಿಯಾ ಕೊಡ್ತೀನಿ. ನನ್ ಬದ್ಲು ಆ ವಿಜೀನ ಕರ್ಕೊಂಡು ಹೋಗು ನಾನು ಇನ್ನೊಂದಷ್ಟು ವರ್ಷ ಆದಮೇಲೆ ನಿನ್ ಹತ್ರ ಬರ್ತೀನಿ.
ಯಮರಾಜ : ನೀನು ನನಗೆ ಓಲೈಸಿ ನಿನ್ನ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಡ..
ನಾನು : ಏನ್ ಗುರು ನೀನೂ ನನ್ನ ಅಪಾರ್ಥ ಮಾಡ್ಕೊಂಡು ಬಿಟ್ಟೆ ನನ್ನ. ನಂ ಆಫೀಸಲ್ಲೂ ಅಷ್ಟೇ ನಂ ಬಾಸೂ ನಿನ್ ಹಂಗೆ ನನ್ನ ಶ್ಯಾನೆ ತಪ್ಪು ತಿಳ್ಕಂಡವ್ರೆ …. ನಂಗೆ ನನ್ ಜೀವದ್ ಮೇಲೆ ಆಸೆ ಅಲ್ಲ ಅದು ನಿನ್ ಮೇಲಿರೋ ಅಭಿಮಾನ ಗುರೂ…..ನಂ ರಾಜ್ಕುಮಾರ್ ಅಣ್ಣನ್ನ ಬಿಟ್ರೆ ನಾನ್ ನಿನ್ನೆ ಲೈಕ್ ಮಾಡೋದು ಗುರು ದೇವರಾಣೆಗೂ.
ಯಮರಾಜ : ನಿನ್ನ ಹೊಗಳಿಕೆಯ ಗಾಳಕ್ಕೆ ನಾನು ಸಿಲುಕುವವನಲ್ಲ, ನಿನ್ನ ಜಾಣ್ಮೆಯನ್ನು ನನ್ನ ಮುಂದೆ ಪ್ರದರ್ಶಿಸಬೇಡ…

ನಾನು : (ಏನಪ್ಪಾ ಮಾಡೋದು ಈ ಪಾರ್ಟಿ ಯಾವುದಕ್ಕೂ ಜಗ್ತಾ ಇಲ್ಲ) ಅಲ್ಲಯ್ಯಾ ಯಮಧರ್ಮರಾಯ ನೀನೇನಾದ್ರೂ ನನಗೆ ಜೀವದಾನ ಮಾಡಿದರೆ ನಿನಗೆ ಭಾರೀ ಭರ್ಜರೀ ಉಡುಗೊರೆ ಕೊಡುತ್ತೇನೆ. ಸದ್ಯದಲ್ಲೇ ನಮ್ಮ ಕೇಂದ್ರ ಸರ್ಕಾರ ಸ್ವಿಸ್ ಬ್ಯಾಂಕಿನಲ್ಲಿ ನಮ್ಮ ಭಾರತೀಯರು ತೊಡಗಿಸಿರೋ (ಅಡಗಿಸಿರೋ) ಕಪ್ಪುಹಣ ವಾಪಸ್ ತರ್ತಾರೆ. ಹಾಗೆ ಅವರು ತಂದು ಕೊಡೋ ದುಡ್ಡನ್ನು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಹಂಚ್ತಾರೆ……ಆಗ ನಂಗೂ ಒಂದಷ್ಟು ಲಕ್ಷಾನೋ – ಕೋಟಿನೋ ಬರುತ್ತೆ ಅದೆಲ್ಲಾ ನಿಂಗೆ ಕೊಟ್ಬಿಡ್ತೀನಿ ಈಗ ಸದ್ಯಕ್ಕೆ ನನಗೆ ಪ್ರಾಣಭಿಕ್ಷೆ ಕೊಡು ಗುರುವೇ…..

ಯಮರಾಜ : ಅಯ್ಯೋ ….. ಗುರುವೇ ನಿಂಗೆ ಕೈಮುಗೀತೀನಿ ದಯವಿಟ್ಟು ನನ್ ಜೊತೆ ಬಾ ಈಗ…. ನಿಮ್ಮ ಸರ್ಕಾರದವ್ರು ಕಪ್ಪುಹಣ ವಾಪಸ್ ತರೋ ಹೊತ್ತಿಗೆ ನಾನು ಬದುಕಿರ್ತೀನೋ ಇಲ್ವೋ ನಂಗೇ ಗೊತ್ತಿಲ್ಲಾ….ಸುಮ್ನೆ ನಡೀ…….

ಯಮರಾಜ ಜೋರಾಗಿ ನನ್ ಕಡೆ ಹಗ್ಗ (ಯಮಪಾಶ) ಎಸೆದ …….

>>>>>>>>>>>>>>>>>>>>>>>>>>>>>>>>>>>>>>>>…………..

ನಾನು ಕಣ್ಬಿಟ್ಟೆ ……. ಆಗ್ಲೇ ಬೆಳಿಗ್ಗೆ ಒಂಭತ್ತು ಘಂಟೆ…… ಆಫೀಸಿಗೆ ಟೈಮಾಯ್ತು…… ಬಾಸ್ ಹತ್ರ ಇವತ್ತೂ ಬೈಸ್ಕೊಬೇಕು ಛೇ !!!
– ವಿಜಯ್ ಹೆರಗು

http://vijayheragu.blogspot.in/2012/02/blog-post_28.html

ತಪ್ಪಾ…ಪ್ರೀತ್ಸೋದ್ ತಪ್ಪಾ.

ನಗೆ-ಹಾಸ್ಯ
ನಾನು ನನ್ನ ಪದವಿ ನಂತರ ಬಿಎಡ್ ಪದವಿ ಮುಗಿಸಿ ಒಂದು ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಕೆಲಸನಿರ್ವಹಿಸುತ್ತದ್ದೆ. ಆ ಶಾಲೆಯ ಪಕ್ಕದಲ್ಲೇ ಪ್ರಾಥಮಿಕ ಶಾಲೆಯು ಇತ್ತು. ಶಾಲೆಯ ಊಟದ ಸಮಯದಲ್ಲಿ ಪಕ್ಕದ ಶಾಲೆ ಮಕ್ಕಳು ಏನಾದರೂ ನನಗೆ ಸಿಕ್ಕಾಗ ಅವರಿಗೆ ಆಗಾಗ ತಮಾಷೆ ಮಾಡಿ ನಗಿಸುತ್ತಿದ್ದೆ..ಕೆಲ ಹಾಸ್ಯ. ಕವಿತೆ…ಇತ್ಯಾದಿ ಹೇಳಿ ನಗಿಸುತ್ತಿದ್ದೆ…ಜೊತೆಗೆ ಸಿನೆಮಾ ಹಾಡುಗಳನ್ನು ನನ್ನದೇ ಧಾಟಿಯಲ್ಲಿ ಬರೆದು ಮಕ್ಕಳನ್ನು ರಂಜಿಸೊ ಕೆಲಸ ನನ್ನದಾಗಿತ್ತು…ಹೀಗಿರುವಾಗ.. ಆ ಸಮಯದಲ್ಲಿ ಪ್ರೀತ್ಸೋದು ತಪ್ಪಾ…ಸಿನೆಮಾದ ಹಾಡು ಮನೆಮಾತಾಗಿತ್ತು… ನನ್ನ ತಾಯಿ ಅಡುಗೆ ಮಾಡಲು ಮನಯಲ್ಲಿ ಕುಳಿತು ಒಮ್ಮೆ ಸೊಪ್ಪನ್ನು ಕ್ಲೀನ್ ಮಾಡ್ತಾ ಇದ್ರು… ಆಗ ನಾನು ಹಾಡಲು ಶುರು ಮಾಡಿದೆ..

ಆ ಹಾಡು ಹೀಗಿದೆ…

‘ತಪ್ಪಾ…ಪ್ರೀತ್ಸೋದ್ ತಪ್ಪಾ..?’

ಅದನ್ನು ನನ್ನದೇ ರೀತೀಲಿ ಬರೆದು, ಆ ಮಕ್ಕಳಿಗೆ ಕೇಳಿಸಿ ನಗಿಸಿದ್ದೆ…ಅದರದೊಂದು ಸ್ಯಾಂಪಲ್ ಹೀಗಿತ್ತು….

” ತಪ್ಪಾ, ಪ್ರೀತ್ಸೋದ್ ತಪ್ಪಾ
ಎರಡು ಕಂತೆ ಕೀರೆಸೊಪ್ಪ
ತಗೊಂಡು, ಬೋಸಿ ತುಂಬಾ
ಮೊಸಪ್ಪನ್ನು ಮಾಡಿ
ತಪ್ಪಾ, ತಿನ್ನೋದ್ ತಪ್ಪಾ?

ಕೀರೆಸೊಪ್ಪಾ..ಕಿರುಕೀರೆ ಸೊಪ್ಪಾ
ದಂಟಿನ್ ಸೊಪ್ಪಾ…
ಕೊತ್ತಂಬ್ರಿ ಸೊಪ್ಪಾ
ತಪ್ಪಾ, ತಿನ್ನೋದ್ ತಪ್ಪಾ?”ಅಂದೆ. ಅಷ್ಟರಲ್ಲಿ, ಸೊಪ್ಪು ಸೋಸುತ್ತಿದ್ದ ನನ್ ತಾಯಿ, ” ಅಯ್ಯೋ,ಬೆಪ್ಪಾ!” ಅಂದು ನನ್ನ ತಲೆ ಮೇಲೆ ಒಂದು ಏಟು ಕೊಟ್ಟರು!!

–ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ.

ರಕುತದಿ ಇಟ್ಟ ರಂಗೋಲಿ

::ನಗೆಹನಿ::
ಓ… ನನ್ನರಸಿಯೇ…
ನಿನ್ನ ಹೃದಯದಂಗಳದಿ
ನನ್ನ ರಕುತದಿ ರಂಗೋಲಿ
ಚುಕ್ಕಿಯಿಲ್ಲದೆ ಅವತಾರ
ಪ್ರೇಮದಲ್ಲೆಲ್ಲವೂ ಚಕ್ಕುಲಿ

ನೀನದನೊಮ್ಮೆ ಸವಿ
ಪ್ರೀತಿಯ ಹೊಸ ಕಾಣಿಕೆ
ಉಪ್ಪೋ ಖಾರವೋ
ಸಪ್ಪೆಯೋ ತಿಳಿಸು

ಸಿಹಿಯಾಗಿಲ್ಲವೆಂದು ಹೇಳದಿರು
ರಕುತದಿ ಇಟ್ಟ ರಂಗೋಲಿ
ಪರೀಕ್ಷಿಸಿ ನೋಡು ಸಿಹಿ ನೆತ್ತರು
ಸಾಕ್ಷಿ ಕೊಟ್ಟರು ನಮ್ಮ ವೈದ್ಯರು..
|| ಪ್ರಶಾಂತ್ ಖಟಾವಕರ್ ||
Prashanth P Khatavakar

ಪತ್ರ ಸಿಗದಿದ್ರೂ

ರ್ದಾರ್ : ಮದುವೆಗೆ ಬಾ ಅಂತ ಪತ್ರ ಬರೆದಿದ್ರೂ ಯಾಕೆ ಬರಲಿಲ್ಲ…?
ಗುಂಡ : ನಿನ್ನ ಪತ್ರ ನನಗೆ ಸಿಗಲೇ ಇಲ್ಲ ಕಣೋ…
ಸರ್ದಾರ್ : ಅಯ್ಯೋ ಪೆದ್ದ.. ಪತ್ರ ಸಿಗದಿದ್ರು ಬಾ ಅಂತ ಬರೆದಿದ್ನಲ್ಲೋ ಮಾರಾಯ…!!!

ಚೀ.. ಸಗಣಿ..

ಒಂದು ದಿನ ಸರ್ದಾರ್ ಆಫೀಸ್‌ಗೆ ತುಸುಬೇಗನೆ ಹೊರಟಿದ್ದ. ಆತುರದಲ್ಲಿ ಹೋಗುತ್ತಿದ್ದ ಸರ್ದಾರ್ ಗೆ ಮಾರ್ಗ ಮಧ್ಯೆ ಹಸಿರು ಬಣ್ಣದ ಏನೋ ಒಂದನ್ನು ಕಂಡು ಕೈಗೆತ್ತಿಕೊಂಡು ಬಾಯಿಗಿಟ್ಟು ರುಚಿಸಿ ಏನಿರಬಹುದು ಎಂದು ಯೋಚಿಸಿದ.
ಇದ್ದಕ್ಕಿದ್ದ ಹಾಗೆ ಏನೋ ಆದವನಂತೆ ಅದನ್ನು ಎಸೆದು…

” ಚೀ.. ಸೆಗಣಿ… ಸದ್ಯ ತುಳಿಯಲಿಲ್ಲ…”

ಕಥೆ ಪುಸ್ತಕ

ರ್ದಾರ್ : ಈ ಕಥೆ ಪುಸ್ತಕ ಓದುವುದಕ್ಕೆ ತುಂಬಾ ಬೇಜಾರಾಗ್ತಾಇದೆ ಸ್ವಾಮಿ.. ಮುನ್ನುಡಿಯಲ್ಲಿಯೇ ತುಂಬಾ ಪಾತ್ರಗಳು ಇರುವುದರಿಂದ ಸ್ವಲ್ಪ ನನಗೆ ತಲೆ ಕೆರೆದುಕೊಳ್ಳುವಹಾಗಿದೆ.

ಗ್ರಂಥಪಾಲಕ : “ಬಾರೋ.. ಬಾ… ರಿಜಿಸ್ಟರ್ ಬುಕ್ ತೆಗೆದುಕೊಂಡು ಹೋಗಿರುವ ಕಮಂಗಿ ನೀನೇನಾ…?!!!