ಸರಿಯೇ ಓ ಪ್ರಭುವೇ!

ಕನಸೆಂಬ ಶಿಖರವನ್ನು ಕಣ್ಣೆದುರು ತಂದೆ.
ಮನದೊಳಗೆ ಆಸೆಯಾಗಿ ಅವರಿಸಿಕೊಂಡೆ.
ಶಿಖರವನ್ನು ಏರುವ ಚೈತನ್ಯವೇ ಆದೆ.
ಶಿಖರದ ತುದಿ ಮುಟ್ಟಲು ಜೀವವ ಕಸಿದುಕೊಂಡೆ.
ಸರಿಯೇನು ಸರಿಯೇನು ಸರಿಯೇನು ವಿಧಿಯೇ.
ಕೊಟ್ಟು ಕಸಿದುಕೊಳ್ಳುವ ಪರಿ ಸರಿಯೇ ಓ ಪ್ರಭುವೇ!
Nandish Bankenahalli

Advertisements

ಪದಗಳೇಕೋ ಮುನಿಸಿಕೊಂಡಿವೆ

ಪದಗಳೇಕೋ ಮುನಿಸಿಕೊಂಡಿವೆ
ಹೊರಬರದೇ ಒಳಗೆಲ್ಲೋ ಅವಿತುಕೊಂಡಿವೆ
ಕಲ್ಪನೆಯ ಕಡಲಲ್ಲಿ
ಕವಿತೆಗಳೆನುವ ಅಲೆಗಳು
ನಿರಂತರವಾಗಿ ಕಾಗದದ
ದಡಕೆ ಬರಬಹುದೆಂದುಕೊಂಡಿದ್ದೆ,
ಕಣ್ ತೆರೆದು ನೋಡಿದರೆ
ನನ್ನೊಳಗಿದ್ದುದು ಪದಗಳ ಸಣ್ಣಕೊಳ
ಕವಿತೆಯ ದಾಹದಲಿ ಬಂದವರಿಗೆ
ಗುಟುಕು ನೀರನ್ನಷ್ಟೇ ಕೊಟ್ಟಿರುವೆ.
ತೇವವಿರದೆ ಬಿರುಕು ಬಿಟ್ಟ
ನೆಲವನೀಗ ಕಂಡೊಡನೆ
ಸುಮ್ಮನೆ ಕೈಯ ಕಟ್ಟಿ ಕುಳಿತಿರುವೆ,
ನನ್ನಳುವಿನಿಂದಲೇ ಬರಡು
ಭೂಮಿಯ ಹಸನಾಗಿಸಬೇಕೆಂದಿರುವೆ.
Guruprasad Acharya

ಮರ್ಮ

ಹಚ್ಚಿದ ಕೂಡಲೇ ಬೆಂಕಿಯನ್ನು ಹತ್ತುವುದಿಲ್ಲ ಕಾವು
ಅಯ್ಯೋ ಬೇಡ ಎಂದರೆ ಹಿಂತಿರುಗುವುದಿಲ್ಲ ಸಾವು

ಸಾವು ಎಂಬುದು ಮರ್ಮ ಗುಟ್ಟು
ಆ ಗುಟ್ಟು ಆದರೆ ರಟ್ಟು
ನೀರು ಬರುವುದು ಕಣ್ಬಿಟ್ಟು
ಪ್ರೀತಿಪಾತ್ರರ ಹೃದಯ ಸುಟ್ಟು
Deepak Sharma

ನೀನೇ….. ನೀನೇ

ಮುಂಜಾನೆಯ ಮಸುಕಲ್ಲಿ
ಮಂಜಾದ ಇಬ್ಬನಿಯಲ್ಲಿ
ಒಂದೊಂದೇ ಹೆಜ್ಜೆ ಇಟ್ಟವಳು
ನೀನೇ….. ನೀನೇ ……
ನವಿರಾದ ಮೊಗದಲ್ಲಿ ಕೋಮಲತೆಯ
ಅಡಗಿಸಿಕೊಂಡು ನನಗಾಗಿ ಮುಗುಳ್ನಗೆಯನ್ನು
ತುಂಬಿಕೊಂಡು ನಿಂತು ಕಾಯುತಿರುವಳು
ನೀನೇ….. ನೀನೇ ………..!!
ಮಧು ಸೂಧನ್ ಕೆ.ಸಿ
Madhu Sudhan K C

ವ್ಯತ್ಯಾಸ

ಅವಳೊಂದಿಗೆ ಕಳೆದ
ಮಧುರ ಕ್ಷಣಗಳನ್ನೆಲ್ಲಾ
ನಾ ಅಳಿಸಿ ಹಾಕುತ್ತಿದ್ದೆ;
ಮತ್ತೆ ಮತ್ತೆ ಬಿಡದೆ
ನೆನಪಾಗಿ ಬಂದು
ಅವಳು ನನ್ನ ಅಳಿಸುತ್ತಿದ್ದಳು.
ನಾ ಮಾಡುತಿದ್ದ ಕೆಲಸದಿಂದ
ನನ್ನ ಮನದ ಹಾಳೆ
ಹರಿದು ಹೋಯಿತು
ಅವಳು ಮಾಡಿದ ಕೆಲಸದಿಂದ
ನನ್ನ ಕಣ್ಣಿಂದ ಕಣ್ಣೀರು
ಹರಿದು ಹೋಯಿತು.
Guruprasad Acharya

ಕನ್ನಡಾಭಿಮಾನ

ಸೂರ್ಯನ ಕಾಂತಿಗೆ ಭುವಿಯು ತಾ ಬೆಳಕಾದಂತೇ,
ತಾಯಿಯ ಮಾತಿಗೆ ಮಗುವು ತಾ ನಗುವಂತೆ.
ಕಾರ್ಮೋಡವ ಕಂಡು
ನವಿಲು ತಾ ಕುಣಿವಂತೆ.
ಕನ್ನಡ ಎಂದೊಡೆ ಮೈಮನ ನಲಿವುದು.
ಕರ್ನಾಟಕವೆಂದೊಡೆ
ಗತವೈಭವ ಕಾಣ್ವುದು.
ಕನ್ನಡಿಗನೆನಲ್ಲೂ
ಮನವದು ಬೀಗುತ್ತಾ ನಲಿವುದು.
ಕಣ ಕಣ ಕನ್ನಡ
ಎನ್ನುತ್ತಾ ಮಿಡಿವುದು.
ಹೃದಯದ ಬಡಿತವೂ
ಕನ್ನಡ ಎನುವುದು.
ಕನ್ನಡ ಎಂದಿಗೂ
ಉಸಿರಲ್ಲಿ
ಉಸಿರಾಗಿರುವುದು.
ಕೂಲಿಯೇ ಇರಲಿ,
ಮಾಲಿಯೇ ಇರಲಿ
ಕನ್ನಡಭಿಮಾನವು
ಪಸರಿಸುತ್ತಿರುವುದು
 Nandish Bankenahalli

ಎಷ್ಟೊಂದು ಹಿತ – ಸುಖವಿತ್ತು ತಂದೆ

ಎಷ್ಟೊಂದು ಹಿತ – ಸುಖವಿತ್ತು ತಂದೆ
ನಿಮ್ಮ ದುಡಿಮೆ ನಮ್ಮ ಹಿರಿಮೆಯ ಹಿಂದೆ
ಬೆಲೆ ಅರಿಯದೆ ಬಾಲಕ ಸಿಡುಕುತಿದ್ದೆ
ಕಷ್ಟಕ್ಕೆ ಕಿವಿಗೊಡದೆ ನಿತ್ಯವೂ ಕಾಡುತಿದ್ದೆ
ಶೆಟ್ಟರ ಅಂಗಡಿ ಹಲಗೆ ಬಳಪ ತೆತ್ತವನು ನೀನು
ಶಾಲೆಯ ಅಂಗಳ ಅ ಆ ಇ ಈ ಕಲಿತವನು ನಾನು

ಹಗಲಲ್ಲಿ ಕಂಡ ಲಗೋರಿ ಬಯಲಲ್ಲಿ
ಇರಳು ಕೂರಲು ಹಲವಾರು ಭಯ
ಪುಕ್ಕಲನಿಗೆ ಪಹರೆ ಕೋಲು ನಿನ್ನದು
ಅನುಮಾನದ “ಅಪ್ಪ ಅಪ್ಪಾ ” ನನ್ನದು
ಹೇಡಿ ಸಂತಾನವೆಂದು ನೀನು ಬಿಡಲಿಲ್ಲ
ಬಲಿಷ್ಟ ಬಾಹುವಿಗಾಗಿ ಬೆನ್ನು ಸವೆಸಿದೆಯೆಲ್ಲ

ಅದೆಷ್ಟು ದೀಪಾವಳಿ ಗೋಳು ಹೊಯ್ದುಕೊಂಡಿಲ್ಲಾ
ಮೂರೇ ಸರ ಕುದುರೆ ಪ್ರತಾಪವಿಲ್ಲದ ಮತಾಪು
ಸುರ್ರ್ ಬತ್ತಿ ಉರಿಯದೇ ಕಳೆದ ವರ್ಷದ್ದು ಸಾಬೀತು
ವಾರಕ್ಕೆ ಬರ್ತಿಯಾಗುವಷ್ಟು ಚಿನ್ಕುರಳಿ ಪಟ್ ಪಟಾಕಿ
ಅಮ್ಮನೆದುರು ಬೈದು ನಿಮ್ಮೆದುರು ಅಳುವಾಗ
ಅಂಧರ ಕಥೆ ಹೇಳಿ ಪಟಾಕಿ ಸದ್ದಡಗಿಸಿದಿರಲ್ಲ

ಅಂಕ ತಿದ್ದಿದ – ಪದ್ದಿಗೆ ಪ್ರೇಮ ಪತ್ರ ಬರೆದ
ಬೆರಳುಗಳಿಗೊಮ್ಮೆಯೂ ಹೊಡೆಯಲಿಲ್ಲ
ಬೇಸರದ ಮುಖ ಹೊತ್ತು ಬದುಕು ತೋರಿಸಿದಿರಿ
ಕಿಸೆಗೆ ಕೈ ಹಾಕಿದ ಮಗ ಚಟಕ್ಕೆ ಬಲಿಯಾದನೆಂದು
ಹಾದಿಬದಿಯವರ ಮುಂದೆ ರಂಪ ಮಾಡಲಿಲ್ಲ
ನೌಕರಿಯ ನೀಡಿಸಿ ದುಡಿಮೆಯ ಧನ್ಯತೆ ತಿಳಿಸಿದಿರಿ

ನಿಮ್ಮೊಲುಮೆಯ ಮೂವತ್ತು ಸಂವತ್ಸರ ಅರ್ಪಿಸಿ
ನನ್ನೊಲುಮೆಯ ತೋರಲು ಹತ್ತು ಮಾತ್ರ ಬಿಟ್ಟಿರಿ
ಒಬ್ಬಟ್ಟು ಗೋಡಂಬಿ ಗಸಗಸೆ ಘಮವ ನಮಗಿತ್ತು
ಗೋದಿ ನುಚ್ಚೆ ಅಚ್ಚುಮೆಚ್ಚಾಗಿ ಕಾಲ ದೂಡಿ ಬಿಟ್ಟಿರಿ
ಸಂಸ್ಕಾರದ ಖರ್ಚೂ ತಲೆಯಮೇಲೇರಲು ಬಿಡಲಿಲ್ಲ
ದೇಹವರಿಯುವವರಿಗೆ ದಾನ ನೀಡಿ ಹೊರಟೇ ಬಿಟ್ಟಿರಲ್ಲ

ಬೆಳೆದು ನಿಂತ ಮಗ ಸುಡುಗಣ್ಣು ಬಿಟ್ಟು ಕೇಳುತಿದ್ದಾನೆ
ನನಗೆ ನೀವೇನು ಕೊಟ್ಟಿರಿ ? ನನಗೆ ನೀವು ನೆನಪಾದಿರಿ
ಕಣ್ಣ ತುಂಬಾ ನಿಮ್ಮ ಋಣದ ರುಚಿಯ ನೀರು ಹರಡಿದೆ
ಭಾವ ಮಬ್ಬಾಗಿ ಭರವಸೆ ಕಪ್ಪಾಗಿ ಗಲ್ಲ ಉಪ್ಪುಪ್ಪಾಗಿದೆ
ಎಷ್ಟೊಂದು ಹಿತ – ಸುಖವಿತ್ತು ತಂದೆ..ನಾ ಅರಿಯದಾದೆ
ನಿಮ್ಮ ದುಡಿಮೆ ನಮ್ಮ ಹಿರಿಮೆಯ ಹಿಂದೆ..ನೀ ದೈವವಾದೆ
A.g. Sheshadri

ಚಿತ್ರ ನೋಡಿ ಕವನ ಬರೆಯಿರಿ – 6

ಮರದೊಳಗಿನ ಪ್ರತಿಮೆ ಬಲು ಸುಂದರ..
ಅದನ್ನು ಕೆತ್ತಿದ ಶಿಲ್ಪಿಯ ಕಲ್ಪನೆ ಅತೀ ಮಧುರ..
ಆದರೆ, ಆ ಮರಕೆ ತನ್ನ ಆಯುಧದಿ ಚುಚ್ಚುವಾಗ,
ಮೂಕರೋಧನೆ ಆತನಿಗೆ ಕಾಣದೇ ಹೋಯಿತಲ್ಲಾ.
ಶಿಲ್ಪಿಯ ಕಲ್ಪನೆ ಪೂರ್ತಿಯಾಗಲು ಮರಗಳೇಕೆ ಸಾಯಬೇಕು.?
ಕಸದಿಂದ ರಸ ಎಂಬಂತೆ ಹಳೆಯ ಸಾಮಾಗ್ರಿಯ ಬಳಸಿ,
ತನ್ನ ಪ್ರತಿಭೆಯ ಶಿಲ್ಪಿ ತೊರಿಸಬಹುದಲ್ಲವೆ..?
Pradeep Hegde
==================
ಮನುಜಾ, ನಿನಗೆ ಮನಸಿಲ್ಲವೇ
ಮನಸ್ಸಿದ್ದರೆ ಹೀಗೇಕೆ ಮಾಡುವೆ
ನಾನು ನೀಡುವೆ ನಿನಗೆ ಜೀವವಾಯು
ನೀನು ಏಕೆ ತೆಗೆಯುವೆ ನನ್ನ ಪ್ರಾಣವಾಯು
ನನ್ನ ಕಡಿದು ನೀನು ಸಾಧಿಸುವುದಾದರೂ ಏನು
ನನ್ನ ಉಳಿಸಿ ಬೆಳೆಸಬಾರದೆ ನೀನು ……….ಯೋಚಿಸು ಒಮ್ಮೆ ಕಡಿಯುವ ಮೊದಲು ಮರವನ್ನು
ಶ್ರೀ ಹರಿ
==================
ಭುವಿಯೇ ನಿನ್ನೊಡಲಿನಿಂದ
ಹುಟ್ಟಿ ಬಂದ ನನಗೆ
ಕಾಡುತ್ತಿಹುದು ಮಾನವರ
ಧಾರುಣವಾದ ಕಗ್ಗೊಲೆಯ ಭೀತಿ
ಮನುಜನ ಸ್ವಾರ್ಥದ ಛಾಯೆಯ ಪರಿ
ನನ್ನ ಅಸ್ತಿತ್ವವನ್ನಲುಗಾಡಿಸುತಿಹುದು
ನನಗಾಗಿ ಏನನ್ನು ಕೇಳಲಿಲ್ಲ
ನನ್ನಲ್ಲಿಹ ಎಲ್ಲವೂ ಅವರಿಗಾಗಿ
ನನ್ನ ಅಳಿವು-ಉಳಿವು ಅವರಿಗೆ ಬೇಕಿಲ್ಲ
ಅವರಿಗರಿವಿಲ್ಲ ನಾನಿಲ್ಲದೇ ಅವರಿಲ್ಲ….!!!
Rudresh Rajashekharaiah
==================
ನನ್ನೊಡಲಲ್ಲಿ(ಪ್ರಕೃತಿ) ನೀನೋ (ಮಾನವ)…
ನಿನ್ನೊಡಲಲ್ಲಿ (ಮಾನವ) ನಾನೋ(ಪ್ರಕೃತಿ) ….
ಗೆದ್ದರೆ ನಮ್ಮಿಬ್ಬರ ಒಲವು….
ಭುವಿಯಾಗುವುದು ಸ್ವರ್ಗಕ್ಕಿಂತಾ ಒನಪು..
Sunitha Manjunath
==================
ಭೂರಮೆಯ ಮಡಿಲಲ್ಲಿ..
ಅರಳಿರುವ ಈ ಕಲಾಕೃತಿ.
ಶಿಲ್ಪಿ ಕೆತ್ತಿದನಲ್ಲಿ..
ತನ್ನ ಸುಂದರ ಕಲಾಕೃತಿ.

ಎಷ್ಟೊಂದು ನೋವು,
ಕಾವು ಅವಳೆದೆಲ್ಲಿರಲು..
ಸಂಭ್ರಮದ ಗೆಲುವು,
ಇವನ ಮುಖಾರವಿಂದದಲೂ.

ಹೇಗೆ ಹೇಳಲಿ ನಾನು ಪ್ರಕೃತಿಯ ದುರ್ಬಳಕೆಯ…
ಪಾಲುದರಳಲ್ಲವೇ ನಾನೀ ಸ್ವಾರ್ಥಿಗಳ ನಡುವೆ
ಅವಳ ಅವಶೇಷದೀ ಹಾಳೆಗಳಲ್ಲಿ…
ಬಿಂಬಿಸುತ್ತಿರುವೆ ಅವಳದೇ ನೋವನ್ನು…!!
Bhagirathi Chandrashekar
==================
ಮನದ ವೃಕ್ಷ ನುಡಿದ ಕಿವಿಮಾತು

ಓ ಮಾನವ
ನೀನೆಷ್ಟು ಸುಂದರ

ನನಗೂ ಜೀವವಿದೆ
ಸಂಶೋಧನೆ ಮಾಡಿದೆ
ಅದರ ಕಲ್ಪನೆಯಲ್ಲೇ
ಸುಂದರ ಮೊಗವ ನೀ ಕಂಡೆ

ಆ ಮೊಗದಲ್ಲೂ ಸಹ
ನೋವನ್ನು ಚಿತ್ರಿಸಿದೆ
ಸತ್ಯವನ್ನು ನೀ ಭಾವಿಸದೆ
ಮನದ ಮಾತಿಗೆ ನುಡಿಯಾದೆ…

ಓ ಮಾನವ
ನೀನೆಷ್ಟು ಸುಂದರ

ನನ್ನ ಜನನದ ಕಾರಣವ
ನೀನು ತಿಳಿದಿರುವೆ
ಸಾಲು ಸಾಲು ವೃಕ್ಷಗಳ
ಜನನಕ್ಕೆ ನೀನಾದೆ ಕಾರಣ
ನನ್ನಿಂದ ನಿನ್ನ ಬಾಳಿನಲ್ಲಿ
ಸೊಗಸಾದ ತಳಿರು ತೋರಣ

ನನ್ನ ಜೀವನಕ್ಕೆ ಅರ್ಥ ಕೊಟ್ಟ
ನಿನ್ನ ಬಾಳಿನ ನೋವು ನಲಿವುಗಳಿಗೆ
ಇಂದು ನನ್ನ ಇಡೀ ಜೀವವನ್ನೇ
ನಿನಗೆ ಅರ್ಪಿಸಲು ನಾ ಸಿದ್ದವಿರುವೆ

ಹೇಗೆ ಬೇಕಾದರೂ ಬಳಸಿಕೋ
ಆದರೆ ನನ್ನ ಪುನರ್ಜನ್ಮಕ್ಕೆ
ದಾರಿಯನ್ನು ನೀ ಹುಡಿಕಿಕೋ
ಮಾತು ತಪ್ಪಿದರೆ ….
ನಷ್ಟ ನಿನಗೆ ನೆನಪಿರಲಿ.. 🙂
|| ಪ್ರಶಾಂತ್ ಖಟಾವಕರ್ ||
 Prashanth P Khatavakar
==================
ನಾನು ಈ ವನದ ವನದೇವತೆ
ಹೊರ ಇಣುಕಿ ಹಾಡುತಿಹೆ ಶೋಕಗೀತೆ
ಕಡಿದು ನಾಶ ಮಾಡುತಿಹೆ ಮನುಜ ನಮ್ಮ ಸಂತತಿ
ಅದರಿಂದ ತಂದುಕೊಳ್ಳುತಿಹೆ ನಿನ್ನದೇ ಅಧೋಗತಿ
ನಮ್ಮ ಜೀವದಾ ನಾಶ ,ಈ ಪ್ರಪಂಚದ ವಿನಾಶ
ಯಾಕೆ ಅರಿಯದಾದೆ ನೀ ಈ ಸತ್ಯ
ಕಾಡಿಲ್ಲದೆ ಸಿಗುವದು ಸುಖ ಅನ್ನುವದು ಮಿಥ್ಯ
ಓ ಮನುಜ ಇನ್ನಾದರೂ ಕಲಿ ಬುದ್ದಿಯನ್ನ
ಹಾಳು ಗೆಡವದಿರು ಈ ಲೋಕವನ್ನ .
Mamatha Keelar
==================
ಕೇಳುತ್ತಿಲ್ಲವೇ? ವೃಕ್ಷಗಳ ಅರಣ್ಯರೋಧನ?
ಗರಗಸದ ಗರಗರದಿ,
ಸರಪಳಿಯ ಜಣಜಣದಿ,
ಕೇಳದಿರಬಹುದು ಆ ಶೋಕಗಾನ?

ಯಂತ್ರಗಳ ತಂದು ಲಾರಿಗೇರಿಸುವಾಗ,
ಬಳಿ ನಿಂತು ಆಲಿಸಿ,
ಯಂತ್ರಗಳ ಆರ್ಭಟದಿ ಕೇಳದಿರಬಹುದು ನಿಟ್ಟುಸಿರಿನ ತನನ.

ಮತ್ತೆ ಕೇಳಿಸದಿರಲು,
ಒಂದರಿಂದೇ ಒಂದರಂತೇ ಹೊರಟ ಲಾರಿಗಳ ಬಳಿ ನಿಂತು ಆಲಿಸಿ,
ಕೇಳಬಹುದು ಬಿಗಿದು ಕಟ್ಟಿದ ವೃಕ್ಷಗಳ ಗುಟುಕು ಜೀವದ ಆಕ್ರಂಧನ.

ಮತ್ತೆ ಕೇಳಿಸದಿರಲು,
ಬನ್ನಿ ಶಾಮಿಲ್ಲಿಗೆ.
ಕೇಳಬಹುದು ಉದರ ಸೀಳುವಾಗಿನ ಏದುಸಿರಿನ ಶೋಕಗಾನ.

ಮತ್ತೆ ಕೇಳಿಸದಿರಲು,
ಎದೆಯ ಮೇಲಿಡಿ ಕೈಯನ್ನ.
ನೀವು ಕಳೆದುಕೊಂಡಿರಬಹುದು ಹೃದಯವನ್ನ.

-ನಂದೀಶ್ ಬಂಕೇನಹಳ್ಳಿ
Nandish Bankenahalli
==================

http://www.facebook.com/groups/kannadavesatya/237957359623345/

ಚಿತ್ರ ನೋಡಿ ಕವನ ಬರೆಯಿರಿ – 5

*”ಕನ್ನಡವೇ ಸತ್ಯ” ಫೇಸ್ ಬುಕ್ ಗುಂಪಿನಲ್ಲಿನ ಕವನಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ

ಬಿಸಿಲ್ಗುದುರೆಯ ಬೆನ್ನೇರಿ
ಹೊರಟಿರುವ ಹೆಣ್ಣೇ
ಬದುಕು ಮರಿಚಿಕೆಯಾಗುವ
ಮುನ್ನ ತೆರೆಯೆ ನಿನ್ನೊಳಗಿನ ಕಣ್ಣ
Sunitha Manjunath
***********************
ನೀಲಿ ಧೂಮವೇ….
ನಿನ್ನ ಜನನ

ಅಂದು…
ನನ್ನನ್ನಾಕರ್ಷಿಸಿದೆ ನೀನು…
ಮರುಳಾಗುವಂತೆ ಮಾಡಿದೆ ನೀನು…
ಚುಂಭನಕ್ಕೆ ಪ್ರೇರೆಪಿಸಿದೆ ನೀನು…
ಸುಖಿಸುವುದು…ಸಂಭ್ರಮಗಳನ್ನು ನೀಡಿದೆ ನೀನು…
ಕ್ಷಣಕಾಲ ಮರೆಯಿಸಿದೆ ಜಂಜಡಗಳನ್ನು…ನೀನು…
ಆನಂದಿಸಿದೆ…ತೇಲಾಡಿಸಿದೆ ನೀನು…
ನಿರ್ಲಕ್ಷ್ಯ, ನಿರ್ಲಜ್ಜ ಗುಣಗಳನ್ನು ಪರಿಚಿಯಿದೆ ನೀನು…
ನಾ ಕಾಣದ ಜಗದೊಳಗಿನ ಸಂಗತಿಗಳ ಸಲುಗೆ ನೀಡಿದೆ ನೀನು…

ಇಂದು…
ಆಕರ್ಷಣೆಯಿಲ್ಲ ನನಗೆ…
ಮರುಳನಂತಿದ್ದವನು ಮೇದಾವಿತನ ಬಂದಿದೆ ನನಗೆ…
ಚುಂಭನ, ಪ್ರೇರೆಪಗಳನ್ನು ಜ್ಞಾಪಕವಿಲ್ಲ ನನಗೆ…
ಸುಖ-ಸಂಭ್ರಮಗಳೆಂಬ ಡೋಂಗಿಗಳ ಹಂಗಿಲ್ಲ ನನಗೆ…
ಕ್ಷಣಿಕತನ, ರೋಮಾಂಚನಗಳಿಲ್ಲ ನನಗೆ…
ನಿರ್ಲಕ್ಷ್ಯ, ನಿರ್ಲಜ್ಜತನಗಳ ಗೊಡೆವೆಗಳ ನೆನಪಿಲ್ಲ ನನಗೆ…
ಜಗದಗಲ…ಮಿಗೆಯಗಲ..ಅರಿವಾಗಿದೆ ನನಗೆ..
ಆದರೂ ಮರೆಯೋಲ್ಲ ಹೃದಯದಲ್ಲಿ ನೀ ನೀಡಿದ ರಂದ್ರಗಳ ನೋವು ನನಗೆ…
Hipparagi Siddaram
***********************
ಇನಿಯ ನಾನ್ಹೇಳಲಿಲ್ಲವೇ ನಿನಗೆ…
ನಮ್ಮನ್ನಾರೂ ಬೇರ್ಪಡಿಸಲಾರರೆಂದು.
ನಮಗಿನ್ನಿಲ್ಲ ಯಾರ ಭಯ…
ಇಲ್ಲಿ ನಾವೇ ನಾವು.. ನಮ್ಮದೇ ಲೋಕ.
Bhagirathi Chandrashekar
***********************
ಕಟ್ಟಿದ್ದೆ ಕನಸಲ್ಲಿ ನನ್ನ ವಿಶ್ವ
ವಾಸ್ತವವರಿಯದೆ ಏರಿದೆ ಬಾಳೆಂಬ ಅಶ್ವ
ಅರಿಯಲಿಲ್ಲ ಹಯವದನನ ಸರ್ವಸ್ವ
ಕೊನೆಯಾಯಿತೆ ದುರಂತದಲಿ ನನ್ನ ಜೀವಾಶ್ವ
ಶ್ರೀ ಹರಿ
***********************
ಕಲ್ಪನೆಗಳೇ ನೀವೇಕೆ ಕಾಡುತ್ತೀರಿ…
ಕಾಡುವುದು ನಿಮ್ಮ ಹುಟ್ಟುಗುಣವೇ…

ಗಂಧದಕಡ್ಡಿಯು ತನ್ನ ತಾ ಸುಟ್ಟುಕೊಂಡು ಆಕೃತಿಗಳ ಸೃಷ್ಟಿಸಿತು…
ಸಕಲ ಸದ್ಭಕ್ತ ಗಣಂಗಳಿಗೆ ಭಕ್ತಿಯುಕ್ಕಿಸಿತು…
ಭಗ್ನಪ್ರೇಮಿ ಭಾವಿಸಿತು ಹೃದಯೇಶ್ವರಿ ರೇಖಾಂತರ…
ಜಿಪುಣಂಗೆ ಗೋಚರಿಸಿತು ಸಕಲೈಶ್ವರ್ಯದ ಮಾರ್ಗ…
ಕಾಯಕಯೋಗಿಗೆ ಕಂಡಿತು ಕೈಲಾಸದ ಮಹಾಯಾಗ…

ಕಲ್ಪನೆಗಳೆ ನೀವೇಕೆ ನನಗೂ ಮಾರ್ಗವೊಂದನ್ನು ತೋರಿಸಬಾರದು?
ಕಲ್ಲಾದ ಮನದಲ್ಲಿ ಕಲ್ಪನೆಗಳಿಗೆ ಜಾಗವೆಲ್ಲಿದೆ?
ಭರಡು ನೆಲದಲ್ಲಿ ಸಸಿ ಬೆಳೆಯಬಲ್ಲುದೇ?
ಸಾಕು! ನಿಮ್ಮ ಹಂಗು ನನಗೆ ಬೇಕಿಲ್ಲ…
ಹೊರಡುವೆನು ನಾನು
ನನ್ನ ಹೊರಡುವಿಕೆಯನ್ನೂ ಸಹ ಕಲ್ಪನೆಯೆಂದು ಬಾವಿಸದಿರಿ
Hipparagi Siddaram
***********************
ಧೂಪದಾರತಿಯ ಧನ್ಯತೆಯಲ್ಲಿ
ಅನಂತ ಬೇಡಿಕೆಯ ವಿನಂತಿಗಳು
ಫಲಶ್ರುತಿಯ ಅಪೇಕ್ಷತೆಯಲ್ಲಿ
ಗೊಂದಲದ ಗೂಡಾದ ಚಿತ್ತ – ವಿಚಿತ್ರ
ಚಿತ್ತಾರದ ಸುಳಿ ಸುರಳಿಗಳು…
A.g. Sheshadri
***********************
‎”ಸಿಗರೇಟು” ಎನುವವಳು ಅದೆಷ್ಟು ಕೆಟ್ಟವಳಾದರೇನು
ಅವಳುದರದಿಂದಲೇ ಹೊರ ಬಂದವನು ನಾನು
ಯಾರದರೂ ಬಂದು ಅವಳ ಚುಂಬಿಸಿದರೆ ಸುಮ್ಮನಿರುವೆನೇ
ಅವರ ತನುವಿನೊಳ ಹೊಕ್ಕು ಮೆಲ್ಲನೆ ಪ್ರಾಣವನೆ ಕಿತ್ತೊಗೆಯುವೆನು.
Guruprasad Acharya
***********************
ನೋಡಿ ನಾವು ದೂಮದ ಜೋಡಿ, ನಮಗಿಲ್ಲ ಯಾವದೇ ಬೇಡಿ
ಸಿಗರೆಟ್ ಹತ್ತಿಸಿದದ್ರುಬರ್ತಿವಿ,ಸತ್ತಾಗ ಸ್ಮಶಾನಕ್ಕು ಬರ್ತಿವಿ
ಹೋಮ ಮಾಡಿದ್ರೂ ಬರ್ತೀವಿ,ದೂಪ ಹಚ್ಚಿದ್ರೂ ಬರ್ತಿವಿ
ಫೆಕ್ಟ್ರಿಲೂ ಇರ್ತಿವಿ, ಅಡಿಗೆ ಮನೆಗೂ ಬರ್ತಿವಿ
ನಮ್ಮನ್ನು ಕರೆಯುವ ಸಂದರ್ಭ ಮಾತ್ರ ನಿಮಗೆ ಬಿಡ್ತಿವಿ
Mamatha Keelar
***********************
ಒಮ್ಮೆ ನನ್ನ ಕರಾಮತ್ತನ್ನು ನೋಡಿ,
ಮಧ್ಯದಲ್ಲೇ ಹೀಗೇಕೆ ಓಡುವೆ ನೀ ಮಾನವ.?
ನೀ ನನ್ನ ತೊರೆದು ದೂರವಾದರೂ,
ನಾನಿನ್ನ ಬೆಂಬಿಡದೇ ಕಾಡುವೆನು ನಿನ್ನ,
ನನ್ನ ಸುಡುವಾಗ ಇದ್ದ ಸುಖ ಸಂತೋಷ,
ನಾನಿನ್ನ ಸುಡುವಾಗ ಕಾಣುತಿಲ್ಲವೇಕೆ ಚಿನ್ನ.?
Pradeep Hegde
***********************
ಧೂಮ್ರದೊಳು ಆಕೃತಿಯೋ..
ಆಕೃತಿಯೊಳು ಧೂಮ್ರವೋ..
ಒಂದು ತಿಳಿಯದೇ, ಮಂಕಾದೆ ನಾ..
Pradeep Hegde
***********************

http://www.facebook.com/groups/kannadavesatya/235610633191351/?notif_t=like

ಚಿತ್ರ ನೋಡಿ ಕವನ ಬರೆಯಿರಿ – 4

* ಕನ್ನಡವೇ ಸತ್ಯ ಫೇಸ್ ಬುಕ್ ಗುಂಪಿನಲ್ಲಿ ಪ್ರಕಟವಾದ ಕವನಗಳು

ನಿಮ್ಮಿಬ್ಬರಿಗೂ ಬಂದಿದೆ ಮುನಿಸು
ಮಾಡದ ತಪ್ಪಿಗೆ ನಾ ಬಲಿಯಾದ ಕೂಸು
ಮರೆತಿರಿ ಏಕೆ ಸುಂದರ ಜೀವನದ ಕನಸು
ಮತ್ತೊಮ್ಮೆ ಮಾಡಬಾರದೆ ಒಂದಾಗುವ ಮನಸು
Hemanth Kumar
**********************
ಅಳುವ ಮಗುವಿನ ಕಣ್ಣು ಕೇಳುತಿದೆ ಪ್ರಶ್ನೆಯನು…
ಯಾವ ದಿಕ್ಕಿಗೆ ಹೋಗಲಿ ನಾನು ಎಂದು.
ಇತ್ತ ಮುತ್ತಿಟ್ಟು ರಮಿಸಿ ಕಥೆ ಹೇಳುವ ಅಮ್ಮ..
ಅತ್ತ ಸಕ್ಕರೆಯಂತ ಸಿಹಿ ಗೆಳೆಯ ಪಪ್ಪ.
ಅಜ್ಜಿ ಇವರಿಬ್ಬರಲ್ಲೇಕೆ ಮುನಿಸು.. ನೀನೇ ಹೇಳು…!
Bhagirathi Chandrashekar
**********************
ಅಂದು ,
ನೀವಿಬ್ಬರೂ ಇರುವ ಚಿತ್ರ ಪಟದಲ್ಲಿ
ನಾನೇಕೆ ಇಲ್ಲಾ ..? ಎನ್ನುತಿದ್ದೆ
ನೀವು ನಗುತಿದ್ದಿರಿ ….

ಇಂದು ,
ಇಬ್ಬರಿಲ್ಲದ ಒಬ್ಬರ ಜೊತೆಗೆ
ನೀನು ಬಾ …ಎನ್ನುವಿರಿ
ನಾನು ಅಳುತಿದ್ದೇನೆ …
A.g. Sheshadri
**********************
ಏನು ಪಾಪ ಮಾಡಿರುವೆ ನಾನು
ಅತ್ತ ಅಪ್ಪನಅಪ್ಪುಗೆಯು ಇಲ್ಲ
ಇತ್ತ ಅಮ್ಮನ ಅನುಬಂಧವು ಇಲ್ಲ

ಇಬ್ಬರಲ್ಲಿ ನಾ ಯಾರನ್ನು ಒಪ್ಪಲಿ
ಇಬ್ಬರಲ್ಲಿ ನಾ ಯಾರನ್ನು ಅಪ್ಪಲಿ
ಇಬ್ಬರೂ ಬೇಕೆನಿಸುತ್ತಿರುವಾಗ

ಹೇಳು ಏನು ಪಾಪ ಮಾಡಿರುವೆ ನಾನು
ಅಮ್ಮನ ಅಕ್ಕರೆಯ ಸವಿಯ ಮರೆಯಲೆಂತು
ಅಪ್ಪನ ಅಕ್ಕರೆಯ ಅಲೆಯ ತೊರೆಯಲೆಂತು

ಎಷ್ಟೋ ರಾತ್ರಿಗಳು ಅಪ್ಪನೊಡನೆಯೇ ಕಳೆದಿದ್ದೇನೆ
ಎಷ್ಟೋ ಹಗಲುಗಳು ಅಪ್ಪನೊಡನೆಯೇ ಬೆಳೆದಿದೇನೆ
ಅಂದೆಂದು ಅನಿಸುತ್ತಿರಲಿಲ್ಲ….. ನಾ ಒಂಟಿ ಎಂದು
ಆಗೆಲ್ಲ ಅನಿಸಿರಲಿಲ್ಲ ನಾ ಒಬ್ಬಂಟಿಯಾಗುವೆ ಎಂದು…..

ಈ ಕವನವನ್ನು ಮತ್ತಷ್ಟು ಅಚ್ಚುಕಟ್ಟಾಗಿ ನಿರೂಪಿಸಲು ಸಹಕರಿಸಿದ ಏ ಜಿ ಶೇಷಾದ್ರಿ ( Yeji Sheshadri) ಸರ್ ಅವರಿಗೆ ನನ್ನ ಹೃದಯಪೂರ್ವಕ ವಂದನೆಗಳು
ಸತೀಶ್ ಬಿ ಕನ್ನಡಿಗ
**********************
ಊಟವ ತಿನಿಸಿ ಲಾಲಿ ಹಾಡುವ ಅಮ್ಮನು ಬೇಕು
ಅಂಗಡಿಸುತ್ತಿ ಆಟಿಕೆ ತರುವ ಅಪ್ಪನೂ ಬೇಕು
ಪೇರೆಂಟ್ಸ್ ಡೇಯಲಿ ಇಬ್ಬರೂ ಶಾಲೆಗೆ ಜೊತೆ ಬರಬೇಕು
ಹೇಗಾದರೂ ಸರಿ ನಾ ಇವರನು ಜೊತೆ ಸೇರಿಸಲೇ ಬೇಕು
ಜೀವನದರ್ಥವು ಇವರಿಗೆ ತಿಳಿದರೆ ಸಾಕು
Mamatha Keelar
**********************
ಸೂರ್ಯ ಚಂದ್ರರೂ ಮುನಿಸಿಕೊಂಡರೇ ಭೂಮಿಗೆ ಇಲ್ಲ ಕಾಂತಿ,
ತಂದೆ ತಾಯಿಯ ಜಗಳದಲ್ಲಿ ಕೂಸು ಅಳುತ್ತಿದೆ,ಏಕೆ ಈ ಪರಿ ಬ್ರಾಂತಿ?
Nandish Bankenahalli
**********************
ತುಂಬಿ ಬಂದ ಕಂಗಳಲಿ,,
ಭಾರವಾದ ಮನಸಿನಲಿ,,
ಹೆತ್ತವರು ದೂರಾಗುವುದ ನೋಡುತಾ,,
ತಾನ್ಯಾರ ಸೊತ್ತು ಆಗಬಹುದೆಂದು,
ನ್ಯಾಯ ಕೊಡಿಸುವ ದಳ್ಳಾಲಿಯ ನೋಡುತಾ,
ತನ್ನ ಭವಿಶ್ಯದ ಬಗ್ಗೆ ಯೋಚನೆ ಮಾಡುತಾ,,
ಅಳಲಾಗದೇ ಕಣ್ಣಲ್ಲೇ ಪ್ರತಿಕ್ರಿಯಿಸುತಾ,
ಕೇವಲ ಮನದಲ್ಲೇ ನೋವನುಣ್ಣುತಾ,
ತಾ ಮಾಡಿದ ತಪ್ಪೇನು ಅಂತ ಚಿಂತಿಸುತಿರುವ
ಮುಗ್ಧ ಬಾಲೆಯ ನೋಡಿ ನನ್ನೀ ಮನ ಕಲಕುತಿದೆ
Pradeep Hegde
**********************

http://www.facebook.com/groups/kannadavesatya/234864709932610/?notif_t=group_activity

ರೆಕ್ಕೆ ಇದ್ದರೆ ಸಾಕೆ – ಚಿನ್ನಾರಿ ಮುತ್ತ

ರೆಕ್ಕೆ ಇದ್ದರೆ ಸಾಕೇ?
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ ||ರೆಕ್ಕೆ ಇದ್ದರೆ ಸಾಕೇ?||

ಕಾಲೊಂದಿದ್ದರೆ ಸಾಕೇ?
ಚಿಗರಿಗೆ ಬೇಕು ಕಾನು
ಗಾಳಿಯ ಮೇಲೆ ತಾನು
ಜಿಗಿದು ಓಡೋಕೆ ||ರೆಕ್ಕೆ ಇದ್ದರೆ ಸಾಕೇ?||

ಹೂವೊಂದಿದ್ದರೆ ಸಾಕೇ?
ಬ್ಯಾಡವೇ ಗಾಳಿ
ನೀವೇ ಹೇಳಿ
ಕಂಪು ಬೀರೋಕೆ ||ರೆಕ್ಕೆ ಇದ್ದರೆ ಸಾಕೇ?||

ಮುಖವೊಂದಿದ್ದರೆ ಸಾಕೇ?
ದುಂಬಿಯ ತಾವ
ಬ್ಯಾಡವೇ ಹೂವ
ಜೇನ ಹೀರೋಕೆ ||ರೆಕ್ಕೆ ಇದ್ದರೆ ಸಾಕೇ?||

ನೀರೊಂದಿದ್ದರೆ ಸಾಕೇ?
ಬ್ಯಾಡವೇ ಹಳ್ಳ
ಬಲ್ಲವ ಬಲ್ಲ
ತೊರೆಯು ಹರಿಯೋಕೆ

ಮೋಡ ಇದ್ದರೆ ಸಾಕೇ?
ಬ್ಯಾಡವೇ ಭೂಮಿ
ಹೇಳಿ ಸ್ವಾಮಿ
ಮಳೆಯು ಸುರಿಯೋಕೆ ||ರೆಕ್ಕೆ ಇದ್ದರೆ ಸಾಕೇ?||

ಕಣ್ಣೊಂದಿದ್ದರೆ ಸಾಕೇ?
ಬ್ಯಾಡವೇ ಮಂದಿ
ಕಣ್ಣಿನ ಮುಂದೆ
ನಿಮಗೆ ಕಾಣೋಕೆ

ಕೊರಳೊಂದಿದ್ದರೆ ಸಾಕೇ?
ಬ್ಯಾಡವೇ ಹಾಡು
ಎಲ್ಲರ ಜೋಡಿ
ಕೂಡಿ ಹಾಡೋಕೆ

ರೆಕ್ಕೆ ಇದ್ದರೆ ಸಾಕೇ?
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ

ನಾನು ನನ್ನ ಗೋಳು

ರಾತ್ರಿ ನಿದ್ದೆಯಲ್ಲಿ ಸೊಳ್ಳೆ ತಿಗಣೆಯೊಂದಿಗೆ ಹೊಡೇದಾಡಿ,
ಬೆಳಿಗ್ಗೆಯೆದ್ದು ಅರೆತೆರೆದ ನಿದ್ದೆಗಣ್ಣಲ್ಲಿ ಭಾತ್ರೂಮನ್ನು ಹುಡುಕಾಡಿ,
ಅಂತು ಇಂತು ಎಲ್ಲರೊಂದಿಗೆ ಅತ್ತಿತ್ತ ಕಿತ್ತಾಡಿ ಚೀರಾಡಿ,
ಒಂದು ಬಕೇಟ್ ನೀರಲ್ಲಿ ಸ್ನಾನಾದಿ ನಿತ್ಯಕರ್ಮವ ಮುಗಿಸುವೆ ನಾನು..(೧)

ಹಿಂದಿನರಾತ್ರಿ ಮಿಕ್ಕಿದ ಹಳಸಿದನ್ನವ ಬಿಸಿ ಮಾಡಿದ ಚಿತ್ರಾನ್ನ,
ಕಾವೇರಿಯೋ ನಂದಿನಿಯೋ ಎಂದು ತಿಳಿಯದ ಕ್ಷೀರವೇ ಪರಮಾನ್ನ
ಕಣ್ಣು ಮೂಗು ಮುಚ್ಚಿಕೊಂಡು ಅದನ್ನೇ ಕಷ್ಟಪಟ್ಟು ತಿಂದು,
ಸಮಯ ಒಂಬತ್ತಕ್ಕೆಲ್ಲಾ ಎದುರುಸಿರು ಬಿಡುತ್ತಾ ಆಫೀಸಿಗೆ ಓಡುವೆ ನಾನು…(೨)

ಬೆವರೆಂಬ ದುರ್ಗಂಧದ ಕಾರ್ಖಾನೆ ನಮ್ಮ ಈ ಆಫೀಸ್ ಬಸ್ಸು,
ಒಂದುದಿನವೂ ಮುಖವರಳಿಸದ ಜ್ಯು.ದೂರ್ವಾಸ ನಮ್ಮ ಬಾಸು,
ಹೇಗಾದ್ರೂ ಮಾಡಿ ಹೆಚ್ಚಿಸಬೆಕೆಂದುಕೊಂಡರೆ ನನ್ನ ತಿಂಗಳಿನ ಕಾಸು,
ರಕ್ಕಸನಂತೆ ಕೂಗಾಡುವುದ ಕೇಳಲಾಗದೇ ನನ್ನ ಜಾಗದಲ್ಲೇ ಕುಳಿತಿರುವೆ ನಾನು..(೩)

ಅಯ್ಯೋ ಶಿವನೇ ಅಂತಾ ಕಬ್ಬನ್ ಪಾರ್ಕ್ ಗೆ ಹೋಗುತ್ತಿದ್ದೆ,
ಅಲ್ಲೂ ನೆಮ್ಮದಿಯಿಲ್ಲ ಕಾರಣ, ಅಲ್ಲಿರುವ ಮೂತಿಗಳೆಲ್ಲಾ ದಿನಾ ನೋಡಿದ್ದೇ,
ಆದದ್ದಾಗಲೆಂದು ಒಂದು ಚೆಲುವೆಗೆ ನಾ ಹೇಳಿದೆ “ನಿನ್ನೇ ಪ್ರೀತಿಸುವೆ” ಅಂತಾ,
ಮೂಗು ಮುರಿದು ಅವಳಂದಳು “ಅವನೇ ನನ್ ಗಂಡ” ಅದೂ ಸ್ವಂತ..!!!!!!(೪)
Pradeep Hegde

ಗಾಣದೊಳಗೆ ಕಾಳುಗಳನರೆದು
ಜ್ನಾನವನಿಟ್ಟು ಎಣ್ಣೆಯ ತೆಗೆದು
ಹತ್ತಿಯ ಸುತ್ತಿ ದಾರವನು ಮಾಡಿ
ಆ ದಾರದೊಳು ಬತ್ತಿಯ ಹೊಸೆದು
ಭಕ್ತಿಯಿಂದಲಿ ಹಣತೆಯನು ಹೊತ್ತಿಸುವರು
ಶಕ್ತಿ ನೀಡೆಂದು ಅನವರತ ಬೇಡುವರು
ಸತೀಶ್ ಬಿ ಕನ್ನಡಿಗ

ನೆನಪು

ನೆನಪುಗಳ ಸುರಳಿಯದು
ಬಿಚ್ಚಿದಷ್ಟೂ ಗೋಜಲು,
ಅನುಭವಕ್ಕೊಂದಷ್ಟು ಫಸಲು,
ಭಾವುಕತೆಗೊಂದಷ್ಟು ನೆರಳು,
ಒಂದೆರೆಡು ಕಣ್ಣ ಹನಿಗಳು,
ತುಟಿಯ ಮೇಲೊಂದಿಷ್ಟು
ನಗು ಹೊರಹೊಮ್ಮಲು…
Prasad V Murthy

ಆಸೆ – ಯೋಚನೆ

ಬೆಳದಿಂಗಳ ರಾತ್ರಿಯ ಹುಣ್ಣಿಮೆ ಚಂದಿರ,
ಸುತ್ತಲೂ ಆಳೆತ್ತರಕ್ಕೆ ಬೆಳೆದಿರುವ ಗೋದಿ ಗದ್ದೆ,

ಸಣ್ಣ ಕಾಲು ಹಾದಿಯಲ್ಲಿ ತಣ್ಣನೆಯ ಚಳಿಯ ನಡುವೆ,
ನಾನು ಹಾಗು ನನ್ನ ಮನಸು ಒಬ್ಬಂಟಿಯಾಗಿ ಹೋಗುತ್ತಿದ್ದೇವೆ.

ನನ್ನಲ್ಲಿ ಬಿಡುವಿಲ್ಲದ ನೂರಾರು ಯೋಚನೆಗಳು
ಮನದಲ್ಲಿ ಪೂರೈಸಲಾಗದ ಹಲವಾರು ಆಸೆಗಳು….

ನನಗೂ ಒಬ್ಬ ಚೆಲುವೆಯಲ್ಲಿ “ಪ್ಯಾರ್ ಗೆ” ಆಗಲಿ ಆಸೆ,
ಆದರೆ ಮುಂದಿನ ಜೀವನ ನೆಡೆಸೋದು ಹೇಗೆ ಅನ್ನೋ ಯೋಚನೆ..

ನಾನೂ ಹೊಂಡಾಸಿಟಿ ಕಾರಲ್ಲಿ ಓಡಾಡಬೇಕೆಂಬ ಆಸೆ,
ಅದನ್ನು ಕರಿದಿಸಲು ಹಣಗಳಿಕೆ ಎಲ್ಲಿಂದ ಅನ್ನೋ ಯೋಚನೆ..

ಲಲಿತ್ ಮಹಲ್ ಥರ ಒಂದು ಮನೆ ಕಟ್ಟಿಸಬೇಕೆಂಬ ಆಸೆ,
ನನ್ನ ಹತ್ರ ಸಾಧ್ಯಾನಾ? ಅನ್ನೋ ಯೋಚನೆ..

ಅಪ್ಪ-ಅಮ್ಮಂಗೆ ಏನೂ ಕೊರತೆಯಿಲ್ಲದ ಹಾಗೆ ನೋಡ್ಕೋಬೇಕು ಅನ್ನೋ ಆಸೆ,
ನನಗೆ ಬರುವ ಸಂಬಳದಲ್ಲಿ ಅದು ಆಗುತ್ತಾ ಅನ್ನೋ ಯೋಚನೆ..

ಜೀವನದಲ್ಲಿ ಕಷ್ಟ ಅನ್ನೋದು ಬರಲೇ ಬಾರದೆಂಬ ಆಸೆ,
ಕಷ್ಟಪಡದೇ ಸುಖ ಸಿಗಲಾರದೇನೋ ಅನ್ನುವ ಯೋಚನೆ..

ಪ್ರತಿದಿನವೂ ನನ್ನೀ ಮನದಲ್ಲಿ ಆಗುವುದು ಈ ಇರಿಸುಮುರಿಸು,
ಅದಕೆ ನಾ ಚಿಂತಿಸದೇ ಕಾಣುತಿರುವೆ ನನಸಾಗದ ಕನಸು
Pradeep Hegde

ಜಗಕೆ ಬೆಳಕು

ಮುಡಣದ ದಿಬ್ಬವನು
ನೋಡದೆಯೆ ಎಡವಿ ಬಿದ್ದ
ಕೆಂಪಾದ ಸೂರ್ಯನ
ದೇಹದೊಳಗಿಂದ
ಹರಿದು ಬಂದ
ಬಿಳಿಯ ರಕ್ತ ಕಣಗಳು
ಆಗಸದ ನೆಲದ
ಮೇಲೆಲ್ಲಾ ಬಿದ್ದು
ಜಗಕೆ ಬೆಳಕಾಯಿತೇ…

Guruprasad Acharya

ಪದಗಳೇಕೋ ಮುನಿಸಿಕೊಂಡಿವೆ

ಪದಗಳೇಕೋ ಮುನಿಸಿಕೊಂಡಿವೆ
ಹೊರಬರದೇ ಒಳಗೆಲ್ಲೋ ಅವಿತುಕೊಂಡಿವೆ
ಕಲ್ಪನೆಯ ಕಡಲಲ್ಲಿ
ಕವಿತೆಗಳೆನುವ ಅಲೆಗಳು
ನಿರಂತರವಾಗಿ ಕಾಗದದ
ದಡಕೆ ಬರಬಹುದೆಂದುಕೊಂಡಿದ್ದೆ,
ಕಣ್ ತೆರೆದು ನೋಡಿದರೆ
ನನ್ನೊಳಗಿದ್ದುದು ಪದಗಳ ಸಣ್ಣಕೊಳ
ಕವಿತೆಯ ದಾಹದಲಿ ಬಂದವರಿಗೆ
ಗುಟುಕು ನೀರನ್ನಷ್ಟೇ ಕೊಟ್ಟಿರುವೆ.
ತೇವವಿರದೆ ಬಿರುಕು ಬಿಟ್ಟ
ನೆಲವನೀಗ ಕಂಡೊಡನೆ
ಸುಮ್ಮನೆ ಕೈಯ ಕಟ್ಟಿ ಕುಳಿತಿರುವೆ,
ನನ್ನಳುವಿನಿಂದಲೇ ಬರಡು
ಭೂಮಿಯ ಹಸನಾಗಿಸಬೇಕೆಂದಿರುವೆ.

Guruprasad Acharya

ನಿಮ್ಮ ದುಡಿಮೆ ನಮ್ಮ ಹಿರಿಮೆಯ ಹಿಂದೆ

ಎಷ್ಟೊಂದು ಹಿತ – ಸುಖವಿತ್ತು ತಂದೆ
ನಿಮ್ಮ ದುಡಿಮೆ ನಮ್ಮ ಹಿರಿಮೆಯ ಹಿಂದೆ
ಬೆಲೆ ಅರಿಯದೆ ಬಾಲಕ ಸಿಡುಕುತಿದ್ದೆ
ಕಷ್ಟಕ್ಕೆ ಕಿವಿಗೊಡದೆ ನಿತ್ಯವೂ ಕಾಡುತಿದ್ದೆ
ಶೆಟ್ಟರ ಅಂಗಡಿ ಹಲಗೆ ಬಳಪ ತೆತ್ತವನು ನೀನು
ಶಾಲೆಯ ಅಂಗಳ ಅ ಆ ಇ ಈ ಕಲಿತವನು ನಾನು

ಹಗಲಲ್ಲಿ ಕಂಡ ಲಗೋರಿ ಬಯಲಲ್ಲಿ
ಇರಳು ಕೂರಲು ಹಲವಾರು ಭಯ
ಪುಕ್ಕಲನಿಗೆ ಪಹರೆ ಕೋಲು ನಿನ್ನದು
ಅನುಮಾನದ “ಅಪ್ಪ ಅಪ್ಪಾ ” ನನ್ನದು
ಹೇಡಿ ಸಂತಾನವೆಂದು ನೀನು ಬಿಡಲಿಲ್ಲ
ಬಲಿಷ್ಟ ಬಾಹುವಿಗಾಗಿ ಬೆನ್ನು ಸವೆಸಿದೆಯೆಲ್ಲ

ಅದೆಷ್ಟು ದೀಪಾವಳಿ ಗೋಳು ಹೊಯ್ದುಕೊಂಡಿಲ್ಲಾ
ಮೂರೇ ಸರ ಕುದುರೆ ಪ್ರತಾಪವಿಲ್ಲದ ಮತಾಪು
ಸುರ್ರ್ ಬತ್ತಿ ಉರಿಯದೇ ಕಳೆದ ವರ್ಷದ್ದು ಸಾಬೀತು
ವಾರಕ್ಕೆ ಬರ್ತಿಯಾಗುವಷ್ಟು ಚಿನ್ಕುರಳಿ ಪಟ್ ಪಟಾಕಿ
ಅಮ್ಮನೆದುರು ಬೈದು ನಿಮ್ಮೆದುರು ಅಳುವಾಗ
ಅಂಧರ ಕಥೆ ಹೇಳಿ ಪಟಾಕಿ ಸದ್ದಡಗಿಸಿದಿರಲ್ಲ

ಅಂಕ ತಿದ್ದಿದ – ಪದ್ದಿಗೆ ಪ್ರೇಮ ಪತ್ರ ಬರೆದ
ಬೆರಳುಗಳಿಗೊಮ್ಮೆಯೂ ಹೊಡೆಯಲಿಲ್ಲ
ಬೇಸರದ ಮುಖ ಹೊತ್ತು ಬದುಕು ತೋರಿಸಿದಿರಿ
ಕಿಸೆಗೆ ಕೈ ಹಾಕಿದ ಮಗ ಚಟಕ್ಕೆ ಬಲಿಯಾದನೆಂದು
ಹಾದಿಬದಿಯವರ ಮುಂದೆ ರಂಪ ಮಾಡಲಿಲ್ಲ
ನೌಕರಿಯ ನೀಡಿಸಿ ದುಡಿಮೆಯ ಧನ್ಯತೆ ತಿಳಿಸಿದಿರಿ

ನಿಮ್ಮೊಲುಮೆಯ ಮೂವತ್ತು ಸಂವತ್ಸರ ಅರ್ಪಿಸಿ
ನನ್ನೊಲುಮೆಯ ತೋರಲು ಹತ್ತು ಮಾತ್ರ ಬಿಟ್ಟಿರಿ
ಒಬ್ಬಟ್ಟು ಗೋಡಂಬಿ ಗಸಗಸೆ ಘಮವ ನಮಗಿತ್ತು
ಗೋದಿ ನುಚ್ಚೆ ಅಚ್ಚುಮೆಚ್ಚಾಗಿ ಕಾಲ ದೂಡಿ ಬಿಟ್ಟಿರಿ
ಸಂಸ್ಕಾರದ ಖರ್ಚೂ ತಲೆಯಮೇಲೇರಲು ಬಿಡಲಿಲ್ಲ
ದೇಹವರಿಯುವವರಿಗೆ ದಾನ ನೀಡಿ ಹೊರಟೇ ಬಿಟ್ಟಿರಲ್ಲ

ಬೆಳೆದು ನಿಂತ ಮಗ ಸುಡುಗಣ್ಣು ಬಿಟ್ಟು ಕೇಳುತಿದ್ದಾನೆ
ನನಗೆ ನೀವೇನು ಕೊಟ್ಟಿರಿ ? ನನಗೆ ನೀವು ನೆನಪಾದಿರಿ
ಕಣ್ಣ ತುಂಬಾ ನಿಮ್ಮ ಋಣದ ರುಚಿಯ ನೀರು ಹರಡಿದೆ
ಭಾವ ಮಬ್ಬಾಗಿ ಭರವಸೆ ಕಪ್ಪಾಗಿ ಗಲ್ಲ ಉಪ್ಪುಪ್ಪಾಗಿದೆ
ಎಷ್ಟೊಂದು ಹಿತ – ಸುಖವಿತ್ತು ತಂದೆ..ನಾ ಅರಿಯದಾದೆ
ನಿಮ್ಮ ದುಡಿಮೆ ನಮ್ಮ ಹಿರಿಮೆಯ ಹಿಂದೆ..ನೀ ದೈವವಾದೆ
Yeji Sheshadri

ಚಿತ್ರ ನೋಡಿ ಕವನ ಬರೆಯಿರಿ – 3

ನಿಮ್ಮ ಮತ ನನಗೆ ಮಾತ್ರ ಹಿತ
ನಾನು ಭ್ರಷ್ಟ, ಅದಕ್ಕೆ ನಿಮಗೆ ಕಷ್ಟ
ಮೊದಲು ನನಗೆ ಸೀಟು, ಆಮೇಲೆ ಇದ್ದೆ ಇದೆ ನಿಮಗೆ ಏಟು
ನಿಮ್ಮ ಪೂಜಾರಿ, ಮರಿ ಬ್ಯಾಡ್ರಿ ಗೆದ್ದಮೇಲೆ ನಾ ಅಪ್ಪಟ ಪುಡಾರಿ
ನೀವೇ ನನ್ನ ತಾಯಿ ತಂದೆ. ಸಾಯೋ ತನಕ ಅಲಿಯುತ್ತಿರಿ ನನ್ನ ಬೆನ್ನ ಹಿಂದೆ….
 Hemanth Kumar
******************************* 
ಕೇಳೋಕ್ ಬನ್ನಿ ಜನರ ಓಟು
ಕೊಡ್ರಿ ಅದಕೆ ಬಾಟಲಿ ನೋಟು.
ಗೆದ್ಮ್ಯಾಲ್ ಜನಕೆ ಗತಿ, ಅವ್ರ್ ಬೂಟು
ಪೊಲಿಟಿಕ್ಸ್ ಇಷ್ಟೇನೆ..
 Bhimasen Purohit
*******************************
ನೋಟಿಗಾಗಿ ವೋಟು ಎನ್ನುವ ಸವಕಲು ಸಿನಿಕ ಸಂದೇಶ ಬಿಡಿ
ವೋಟಿಗಾಗಿ ನಾವು ನಮ್ಮ ಹಕ್ಕು ಚಲಾಯಿಸೋಣವೆಂಬ ಆಯುಧ ಹಿಡಿ
ನೊಂದ ಮನಗಳಲಿ ಅಭಿವೃದ್ಧಿಯ ಮಂತ್ರ ಪಠಿಸೋಣ
ನೂರಾರು ಕನಸುಗಳ ಸಾಕಾರಕ್ಕಾಗಿ ಅನವರತ ದುಡಿಯೋಣ
ಹಳಬರು ಹಳಸುವಂತೆ ಮಾಡಿದ್ದು ಹಳೆಯ ಕಾಲಕೆ
ಹೊಸಬರು ಮಾಡೋಣ ಹೊಸ ವಾಖ್ಯಾನ ರಾಜಕಾರಣಕೆ
ಹೊಸ ಮನ್ವಂತರದ ಹೊಂಗನಿಸಿನ ಹೊಸಬರೆಂದು
ಹೊಸಭಾಷ್ಯ ಬರೆಯೋಣ ಪ್ರಜಾಪ್ರಭುತ್ವಕ್ಕಿಂದು
ಪ್ರಜಾಪ್ರಭುತ್ವದ ಅಕ್ಷಯಪಾತ್ರೆಯಲ್ಲಿ ಸಿಗುವ ಅಧ್ಭುತ ಅವಕಾಶ
ಪ್ರಜೆಗಳಿಗಾಗಿ ಪ್ರತಿಕ್ಷಣವೂ ದುಡಿಯಲು ಇದೊಂದೇ ಸದಾವಕಾಶ
ಪ್ರಜಾಪ್ರಭುತ್ವದ ಮೆಟ್ಟಿಲೆರುತ್ತಾ ವಿಶ್ವಮಾನ್ಯರಾಗೋಣ
ಪ್ರಜಾಪ್ರಭುತ್ವದಿಂದಲೇ ಜಗದೇಳಿಗೆಯಾಗುವುದೆಂದು ಸಾರೋಣ
ಮೇಲು-ಕೀಳು, ಧರ್ಮ-ಭಾಷೆ, ವರ್ಣ-ಸಂಕರಗಳನು ಮೆಟ್ಟಿ ನಿಲ್ಲೋಣ
ಮೃದು ಮನಸಿನ-ದೃಢ ಶರೀರದ ಆರೋಗ್ಯವಂತ ಸಮುದಾಯ ಕಟ್ಟೋಣ
ಮನೆ-ಮನಗಳಲ್ಲಿ ಪ್ರಜಾಪ್ರಭುತ್ವದ ಸಮಭಾವದ ಜ್ಯೊತಿಯ ಬೆಳಗಲಿ
ಮಾನ್ಯ-ಮನುಜರಾಗುತಲಿ ಮಹಾಮಾರ್ಗವೆಂಬ ಪ್ರಜಾಪ್ರಭುತ್ವ ಉಳಿಯಲಿ
Hipparagi Siddaram
*******************************
ನಿಮ್ಮ ವೋಟು ನಮ್ಮ ನೋಟು
ನಿಮ್ಮ ಮತ ನಮಗೆ ಹಿತ
ನೀವು ಕಳೆದುಕೊಳ್ಳಿ ಜೂಜಾಡಿ ಹಣ
ನಾ ತುಂಬಿಕೊಳ್ಳುವೆ ಸೈಟು ಮಾರಿ ಹಣ
ಮುಕ್ಯವಲ್ಲ ದೇಶದ ಪ್ರಗತಿ
ಇದುವೇ ರಾಜಕಾರಣಿಗಳ ನೀತಿ
 Mamatha Keelar
*******************************
 ನಮ್ಮ ಪಕ್ಷ ಅಹಿತ ಪಕ್ಷ…ನಾವು ಭೂಗಳ್ಳರು.
ಭ್ರಸ್ಟ ರಾಜಕೀಯವೇ ನಮ್ಮ ವಂಶ ವೃತ್ತಿಯು.
ವೋಟಿಗೊಂದು ನೋಟು,ಬಟ್ಟೆ, ಸಾರಾಯಿಯು.
ಕೊಡುವುದನ್ನ ಬಳಸಿಕೊಳ್ಳಿ ಅದಕು,ಇದಕು,ಎದಕು..
Bhagirathi Chandrashekar

ಚಿತ್ರ ನೋಡಿ ಕವನ ಬರೆಯಿರಿ – 2

ಓ! ನೆನಪುಗಳೇ ಏಕೆ ಕಾಡುತ್ತೀರಿ
ನೀವೇಕೆ ಕಾಲನ ಗೋರಿಯ ಮೇಲೆ ಕಲ್ಲಾಗಿ ಕುಳಿತ್ತೀದ್ದೀರಿ
ಆ ಕಾಲನಿಗೆ ಕೃಪೆಯೆಂಬುದಿಲ್ಲ ಎಲ್ಲವೂ ಕಸ !
ಮಧುರ ನೆನಪುಗಳ ಬೇಟೆಗೆಂದು ಎದ್ದರೆ ಅದು ನೆನಪಾಗಿಬಿಡುತ್ತದೆ
ಅಂದಿನ ಮಧುರ ಕ್ಷಣಗಳು ಇಂದೇಕೆ ಕಲ್ಲಿನಂತೆ ನಿರ್ಜೀವಗೊಂಡವು
ಮಧುರವೆಂಬುದು ಮಾಧುರ್ಯಕಳಕೊಂಡು ಕಾರ್ಮೋಡಗಳ ಕತ್ತಲಾವರಿಸಿಕೊಂಡಿತೆ?
ನೆನಪುಗಳ ಅಪ್ಪಿಕೊಳ್ಳಲೆತ್ನಿಸಿದಷ್ಟು ಕಪ್ಪನೆಯ ಕಲ್ಲಾಯಿತೆ?
ಅಪ್ಪಿಕೊಳ್ಳಲು ಅದಕ್ಕೆಲ್ಲಿದೆ ಬೆಚ್ಚನೆಯ ಭಾವನೆಗಳ ಬಿಸಿಯಪ್ಪುಗೆ
ಭಾವನೆಗಳ ಭಾವಾಪೂರವೇ ಬತ್ತಿಹೋಗಿ ಬರಿದಾದ ಬೆಂಗಾಡು
ಅಂದಿನ ಹಸಿರ ಹೊನ್ನೆಯ ಉಸಿರಿನ ಭಾವಕೋಶ
ಇಂದಿನ ಕಪ್ಪುಕಲ್ಲಾಗಿಹ ಅದಕ್ಕೆನು ಗೊತ್ತು ನವೀರಭಾವಲೋಕ
ಬೆಂಗಾಡಿನ ಬಯಲಿನಲಿ ಬಯಕೆಯ ಕನಸುಗಳ ಗರಿಗೆದರಿಸಲು ಬರುವೆ ಎಂದು ?
ಓ! ಮರಳುವೆಯಾ ಮತ್ತೆ ನನ್ನ ಭಾವಬಿತ್ತಿಯ ಕೋಶದಲ್ಲಿ ಹಸಿರು ಉಕ್ಕಿಸಲು…
 Hipparagi Siddaram
************************************
ಹುಟ್ಟುವುದೆಲ್ಲೋ ಬೆಳೆಯುವುದೆಲ್ಲೋ…
ಬಾಳನೌಕೆಯನೇರಿ ಸೇರುವ ದಡವೆಲ್ಲೋ…

ಬದುಕಿನ ಪಯಣದ ದಾರಿ ಕಂಡಿಲ್ಲ ನಾವು…
ಬಾಳನೌಕೆಯನೇರಿ ಹೊರಟವರು ನಾವು…

ಜೀವನದ ರಸಘಳಿಗೆ ಸವಿದವರು ನಾವು…
ಬದುಕಿನ ಬೇಸರದ ಕಹಿಉಂಡವರು ನಾವು…
———-ಪಕ್ಕಾ ಲೋಕಲ್ ಸ್ವಲ್ಪ ಪಾಗಲ್
************************************
ಚಿಗುರುವ ಮುನ್ನವೇ ಚಿವುಟಿದೆ ನೀನು
ಇನ್ನೂ ಕಾರಣಗಳ ಹುಡುಕುತಿರುವೆಯೇನು
ಘೋರಿಯ ಮುಂದೆ ಅತ್ತರೆ ಸಿಗಲಾರೆ ಇನ್ನೂ ನಾನು ..

ಕರಿ ಮೋಡದ ಅಂಚಲ್ಲಿ
ಕಣ್ಣೀರ ಮಳೆಯಲ್ಲಿ
ನಾ ಬಿಟ್ಟು ಹೋದ ನೆನಪಲ್ಲಿ
ಮುಖ ಮುಚ್ಚಿ ಅತ್ತರೇನು ಸಖಿ……
ಬರುಡಾದ ಸಾಗರಕೆ ಈ ನಿನ್ನ ಕಣ್ಣೀರು ಸಾಲದು ಗೆಳತಿ….
Hemanth Kumar
************************************
ಸುತ್ತಲು ಕಾರ್ಮುಗಿಲು ,ಈ ಸ್ಮಶಾನ ಮೌನದಲಿ
ಎಲ್ಲೆಂದು ಹುಡುಕಲಿ ನಾ ನಿನ್ನ ,
ವಿರಹದಿ ರೋದಿಸುಥಿಹೆ ನಾ ಇಲ್ಲಿ
ನೀ ಎದ್ದು ಬರಲಾರೆಯ ಗೋರಿಯಿಂದ ಗೆಳೆಯಾ..

ಯಾರಿದ್ದರೇನು ನನ್ನ ಪಾಲಿಗೆ
ಅದು ನೀನಗಲಾರದು ಚಿನ್ನ
ನಾ ಬರುವುದು ಹೇಗೆ ನಿನ್ನಲ್ಲಿಗೆ
ನೀ ಬಂದು ನನ್ನ ಒಯ್ಯಲಾರೆಯ ಗೆಳೆಯಾ ..
Mamatha Keelar
************************************
“ಕರಿಮೋಡವೇ.., ಕಾರಿರುಳ ಕಳುಹಿಸದಿರು,
ಕಣ್ಣೊಳಗೆ ಕತ್ತಲು ಬೇಕಿದೆ,
ಬದುಕೊಳಗೆ ಬಣ್ಣ ಇಲ್ಲವಾಗಿದೆ,
ಕರಿಮೋಡದೊಳಗಿನ ಕಣ್ಣೀರು ಮಾತ್ರ ಸುರಿಸು.”
Mohan Thimmaiah
************************************
ನೀ ನನ್ನ ಬಿಟ್ಟು ಆಗಲಿದರು ಬೇಜಾರಿಲ್ಲ
ಬಣ್ಣ ಬಣ್ಣದ ಲೋಕವಿಲ್ಲದಿದ್ದರು ಪರ್ವಾಗಿಲ್ಲ
ಸುನಾಮಿ ಬಂದ್ರೂ ಜಗ್ಗೋದಿಲ್ಲಾ..
ಅಧ್ರೆ ನೀನು ಗೋರಿಲಿ ಇಧ್ರು ಬಿಡೋದಿಲ್ಲ
Sri Nivas
************************************
ಈ ಹಾಳು ಜನರ ಹಾಳು ಕೆಲಸದಿಂದ ನನ್ನ ಮನ
ಹಾಳಾಗಿ ಹೋದಾಗ ನನ್ನೀ ಹಾಳಾದ ಮುಖವನ್ನು
ಹಳೆಯದಾದ ಈ ಘೋರಿಯ ಗೋಡೆಯಿಂದ ಮರೆಮಾಚಿ
ನನ್ನಿಂದ ನನ್ನವರು ಹಾಳಾಗೋದನ್ನು ತಪ್ಪಿಸುವ ಪ್ರಯತ್ನದಲ್ಲಿದ್ದಾಗ,
ಹಾಳಾದ ಕಾರ್ಮುಗಿಲು ಕವಿದು, ನನ್ನ ಮನವನ್ನು ಇನ್ನಷ್ಟು ಕಪ್ಪಗಾಗಿಸಿದೆ..
Pradeep Hegde
************************************
ತಾನೂ ನಕ್ಕು ಇನ್ನೊಬ್ಬರನ್ನೂ ನಗಿಸಿ
ಸದಾ ಕಾಲ ಹಸನ್ಮುಖಿಯಾಗಿದ್ದ ಹುಡುಗಿ
ಇಂದೇಕೆ ಮೌನಿಯಾದಳು ????
ಮುಖದ ತುಂಬಾ ತುಂಬಿದ ದುಗುಡ,
ದುಃಖ,ದುಮ್ಮಾನಗಳಿಗೆ ಕಾರಣವಿಲ್ಲವೇ????
ಸಂತಇಸುವವರಿಲ್ಲ ,ಸಹಕರಿಸುವವರಿಲ್ಲ
ಒಬ್ಬಂಟಿ ಯಾದಾಳೆ ಹುಡುಗಿ ????
Soudha Kareem
************************************
ಕಾರ್ಮುಗಿಲೇ ನೀ ಸ್ಪೋಟಿಸಿ
ನನ್ನ ಕೊಚ್ಚಿಕೊಂಡೊಯ್ಯಬಾರದೇ..
ಕಡಲಿನ ಅಬ್ಬರದ ಅಲೆಗಳೇ…
ನನ್ನ ನಿನ್ನೆಡೆಗೆ ಬರಸೆಳೆದುಕೊಳ್ಳಬಾರದೇ…

ಕಾಮುಕನೋರ್ವನ ಹಸಿವಿಗಾಹಾರವಾಗಿ ಹೋದೆನೇ..
ಅದೆಷ್ಟು ಪ್ರತಿಭಟಿಸಿದರೂ ಶೀಲವನುಳಿಸಿಕೊಳ್ಳಲಾರದೇ ಹೋದೆನೇ..

ಇನ್ನೇಕೆ ಈ ಜೀವನವು..

ಸಮಾಧಿಯೇ, ನಿನ್ನ ಮನೆಯ ಬಾಗಿಲನು
ಬಡಬಡನೆ ಬಡಿಯುತಿಹುದು ನಿನಗಿನ್ನೂ ಕೇಳದೇ..
ಒಡಲಲಿ ಉಸಿರಿರುವುದ ಕಂಡು ಕದವ ತೆರೆಯದಿರಬೇಡ..
ಆತ್ಮವೇ ಇಲ್ಲ, ಶೀಲವಿರದ ನನ್ನೀ ತನುವಿಗೆ
ನಿನ್ನೊಡಲೆ ಬೇಕೆಂದೆನಿಸುತಿದೆ, ನೊಂದ ನನ್ನ ಮನಸಿಗೆ..
 Guruprasad Acharya
************************************
ಅಂದು…!!
ಆ ದಿನ ಈಗಲೂ ನೆನಪಿದೆ..,
ಕುಸುಮಗಳಂತೆ ಚಾಚಿಕೊಂಡಿದ್ದ ಕನಸ್ಸುಗಳು.,
ನನಸಿನ ನೆವದಲ್ಲಿ ಮೈದಳೆದಿತ್ತು..
ನಮ್ಮ ಪ್ರೀತಿ.,
ಹೂವ ತೇರಿನ ಪಯಣದಲ್ಲಿ ನಿರತವಾಗಿತ್ತು..
ಎಲ್ಲವೂ ಅಂದುಕೊಂಡಂತೆ ಆಗಿತ್ತು..,
ಆದರೆ ಆ ಬರಸಿಡಿಲಿಗೆ ಸಿಲುಕಿ.,
ನೀ ನನ್ನ ಬಿಟ್ಟು ಹೋದೆ.,
ನನ್ನ ಪ್ರಾಣವೇ ನಿನ್ನೊಳಿತ್ತು..,
ನೀನಿಲ್ಲದಿರುವ ನಾನು.,
ಬದುಕಿದ್ದು ಸತ್ತಂತೆ..
ಅಹುದು., ಬದುಕಿದ್ದು ಸತ್ತಂತೆ..!!!
Pramod Pammi
************************************
“ಘೋರ ವಿಸ್ಮಯ”
++++++++++
ಏನಿದು ಈ ಚಿತ್ರ
ಬಲು ಘೋರ ವಿಚಿತ್ರ
ವಿಷಯವೆಲ್ಲಾ ಚಿತ್ರವೇ
ಹೇಳುವ ಇದೊಂದು ಸಚಿತ್ರ
ಕವನ ಇದಕ್ಕಿಲ್ಲಿ ನೆಪ ಮಾತ್ರ

ವಿಸ್ಮಯ ಅರ್ಥಗಳ ಹುಡುಕಾಟ
ಅಲ್ಯಾರದೋ ವಿಧಿಯೊಡನೆ ಕಾದಾಟ
ನೆನೆದರೆ ನೆನಪುಗಳ ಸಿಹಿಯು ಸಂಕಟ
ಕ್ಷಣ ಕ್ಷಣಗಳ ಎಣಿಸುತ ಅಲ್ಲಿ ಗೋಳಾಟ
ಕವನವ ಬರೆಯಲು ಇಲ್ಲಿ ಎಲ್ಲವೂ ಮಕ್ಕಳಾಟ
Prashanth P Khatavakar
************************************
ಬೆತ್ತಲೆಯ ಜಗತ್ತಿನಲ್ಲಿ
ಬತ್ತಲಾಗದ
ಆಸೆ ಕಂಗಳ ಹೊತ್ತು
ನೋವುಗಳಲ್ಲಿಯೂ
ಕನಸುಗಳ ಬಿತ್ತಿ
ಅನಂತದೆಡೆಗೆ
ಒಂಟಿ ಪಯಣ
ಈ ಜೀವನ.
ಕನ್ನಡ ಶ್ರೀಗಂಧ
************************************
ದಿಕ್ಕಿಲ್ಲ ದೆಸೆಯಿಲ್ಲ…
ಬಂಧು ಬಳಗವು ಎನಗಿಲ್ಲ.
ನೆಲವೇ ಹಾಸಿಗೆ.. ಆಗಸವೇ ಹೊದಿಕೆ.
ಹೇಗೆ ಬದುಕಲಿ ನಾನು ಈ ಕ್ರೂರಿಗಳ ನಡುವೆ.
Bhagirathi Chandrashekar
************************************
ನಿನ್ನ ಮರೆಯಲೆಂದು ನಲ್ಲ
ನೆನಪುಗಳೆಲ್ಲಾ ಹೂತಿಟ್ಟು
ಕಲ್ಲು ನೆಟ್ಟು ಕಣ್ಣ ಬಿಡುವುದರಲ್ಲಿ
ನಾ ……ಅರೆ…ಬೆತ್ತಲಾಗಿ
ನಿನಗೇ ..ಜೋತು ಬಿದ್ದಿದ್ದೇನೆ !!
Yeji Sheshadri
************************************
ನಲ್ಲ ನಿನಗಾಗಿ ಕಾದಿಹೆನಲ್ಲ
ಕನಸಿನ ಸೌದ ನಿರ್ಮಿಸಿದ್ದೆನಲ್ಲ
ನೀನಿಲ್ಲದ ಬಾಳು ಅದು ಬಾಳಲ್ಲ
ನಾನು ಬರುತ್ತಿರುವೆ ನಿನ್ನೊಂದಿಗೆ………… ನಲ್ಲ
ಶ್ರೀ ಹರಿ
************************************