ತಪ್ಪು ಹುಡುಕುವುದು ಸುಲಭ

ಒಬ್ಬ ಚಿತ್ರಕಾರ, ಆಗಷ್ಟೇ ಚಿತ್ತಾರಗಳ ಬರೆಯೋದಕ್ಕೆ ಶುರು ಮಾಡಿದ್ದ, ಚೆಂದದ ಚಿತ್ರ ಬರಿತಾ ಇದ್ದ, ಅವನಿಗೆ ತನ್ನ ಚಿತ್ರದ ಬಗ್ಗೆ ತನ್ನ ಕಲೆಯ ಸಾರ್ಥಕ್ಯದ ಬಗ್ಗೆ ತಿಳಿದುಕೊಳ್ಳ ಬೇಕು ಅನಿಸಿತು. ಸರಿ ಒಂದು ಸುಂದರ ಚಿತ್ರ ಬರೆದ, ಅಲ್ಲೇ ತನ್ನ ಕುಂಚ ಮತ್ತು ಬಣ್ಣಗಳ ಇಟ್ಟು “ಇದು ನನ್ನ ಮೊದಲ ಚಿತ್ರ, ಏನಾದ್ರೂ ತಪ್ಪು ಇದ್ರೆ ದಯವಿಟ್ಟು ‘ಗುರುತು ‘ಮಾಡಿ “ಅಂತ ಒಂದು ಫಲಕ ಹಾಕಿದ, ಸಂಜೆ ಆಯ್ತು, ಚಿತ್ರಕಾರ ಬಂದ, ಬಂದು ತನ್ನ ಚಿತ್ರ ನೋಡಿದ ಎಲ್ಲಿದೆ ಚಿತ್ರ!!! ??? ಚಿತ್ರದ ತುಂಬಾ ಬರಿ ಗುರುತುಗಳೇ ತುಂಬಿದ್ದವು, ಚಿತ್ರಕಾರ ಬಹಳ ನೊಂದುಕೊಂಡ, ತನಗೆ ಚಿತ್ರ ಬರೆವ ಯೋಗ್ಯತೆ ಇಲ್ಲವೇ ಇಲ್ಲ ಅಂತ ತೀರ್ಮಾನಿಸಿದ, ತನ್ನ ಗುರುವಿನ ಬಳಿ ಹೋಗಿ ಇದೇ ಮಾತು ಹೇಳಿದ, ತಾನು ಚಿತ್ರ ಬರೆವುದ ನಿಲ್ಲಿಸುವುದಾಗಿ ಹೇಳಿದ, ಗುರು ನಸುನಕ್ಕ “ಇದೇ ಚಿತ್ರ ಮತ್ತೊಮ್ಮೆ ಬರೆ” ಅಂದ. ಕಲಾವಿದ ಅದೇ ಚಿತ್ರ ಬರೆದ, ಗುರು ಹೇಳಿದ “ಈಗ ಇದೇ ಚಿತ್ರ ನೀನು ಮೊದಲು ಇಟ್ಟ ಜಾಗದಲ್ಲೇ ಇಡು ಆದ್ರೆ ಸೂಚನಾ ಫಲಕ ನಾನು ಹೇಳಿದ ಹಾಗೆ ಇಡು” ಅಂದ. ಚಿತ್ರಕಾರ ಹಾಗೆ ಮಾಡಿದ. ಗುರು ಹೇಳಿದ ಫಲಕ ಕೂಡ ಇಟ್ಟ, ಕುಂಚ ಹಾಗು ಬಣ್ಣ ಕೂಡ ಪಕ್ಕದಲ್ಲೇ ಇಟ್ಟ. ಸಂಜೆ ಆಯಿತು, ನಡುಗುವ ಹೃದಯದಿಂದ ಚಿತ್ರಕಾರ ತನ್ನ ಚಿತ್ರ ನೋಡಲು ಹೋದ. ತನ್ನ ಕಣ್ಣ ತಾನೇ ನಂಬಲಾಗಲಿಲ್ಲ, ಒಂದೇ ಒಂದು ಚುಕ್ಕಿ ಕೂಡ ಬಿದ್ದಿರಲಿಲ್ಲ ಚಿತ್ರದಲ್ಲಿ……..!!!!!!!!!!

ಅಂತಹದ್ದೇನು ಬರೆಸಿದ್ದ ಗುರು ಅಂದಿರಾ…”ಇದು ನನ್ನ ಮೊದಲ ಚಿತ್ರ….ಏನಾದ್ರೂ ತಪ್ಪು ಇದ್ರೆ ದಯವಿಟ್ಟು ‘ಸರಿ’ ಮಾಡಿ “ಅಂತ ಬರೆಸಿದ್ದ.
ಯಾವುದರಲ್ಲೇ ಆಗಲಿ ತಪ್ಪು ಹುಡುಕುವುದು ಸುಲಭ ಆದ್ರೆ ತಪ್ಪು ತಿದ್ದುವುದು ಕಷ್ಟ ಅಲ್ವೇ ಅದಕ್ಕೆ ಯಾರು ಕೈ ಕೂಡ ಹಾಕೋದಿಲ್ಲ……:))))
-ಸುನಿತಾ ಮಂಜುನಾಥ್

ಒಂದು ಪ್ರತಿಕ್ರಿಯೆ

  1. thumba chennagide kathe…
    nanna jeevanadallu ide ghatane nadedithu.
    naanu kalaavida aguva ase ithu adare niraase ayithu.

ನಿಮ್ಮ ಅನಿಸಿಕೆ