Category Archives: ಸಾಹಿತ್ಯ

ಅಕ್ಕಿ ಆರಿಸುವಾಗ ~ ಮೈಸೂರು ಮಲ್ಲಿಗೆ

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು ॥ಪ॥
ತಗ್ಗಿರುವ ಕೊರಳಿನ ಸುತ್ತ
ಕರಿಮಣಿ ಒಂದೇ ಸಿಂಗಾರ
ಕಾಣದ ಹೆರಳು ಬೆರಳಿನ ಬಾರಕ್ಕೆ
ತುಂಬಿರುವ ಕನ್ನೆಯಲಿ ಹದಿನಾರು ವರುಷದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ ಹುಚ್ಚು ಹೊಳೆ ॥1॥
ಮುಂಗಾರಿನಿರುಳು ಬಂಗಾರವಿಲ್ಲದ ಬೆರಳು॥ಪ॥
ಕಲ್ಲ ಹರಳನ್ನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನುವ ಬಳೆಯ ಸದ್ದು
ಅತ್ತ ಯಾರೋ ಹೋದ ಇತ್ತ ಯಾರೋ ಬಂದ ಕಡೆಗೆಲ್ಲ
ಕಣ್ಣು ಬಿದ್ದು ಬಂಗಾರ ವಿಲ್ಲದ ಬೆರಳು ॥2॥
ಮನೆಗೆಲಸ ಬೆಟ್ಟದಷ್ಟಿರಲು
ಸುಮ್ಮನೆ ತಂದೆ ಇಹಳು ಬೆಸರಿಯಕಿರಿ
ಮುತ್ತು ನುಚ್ಚಿನಲಿ ಮುಚ್ಚಿಡಲು ಹುಡುಕತ್ತಿವೆ ಆ ಹತ್ತೂ ಬೆರಳು ॥3॥
-ಸಾಹಿತ್ಯ ~ ಕೆ ಎಸ್ ನರಸಿಂಹಸ್ವಾಮಿ
-ಸಂಗ್ರಹ: ಜೀತೇಂದ್ರ ಪಾಟೀಲ್

ರಣಧೀರ – ನಾವಿಂದು ಹಾಡೋ ಹಾಡಿಗೆ

ನಾವಿಂದು ಹಾಡೋ ಹಾಡಿಗೆ ಕೊನೆ ಇಲ್ಲ
ಕೊನೆ ಇಲ್ಲ ಈ ಸ್ನೇಹಕೆ ಹಾಡಿ ಎಲ್ಲ
ಹಾಡಿ ಎಲ್ಲ ಎಲ್ಲ ಮನಸಿಟ್ಟು ಕೇಳಿರಿ
ಕೇಳಿರಿ ಈ ಗುಟ್ಟು ಕೊನೆಯಿಂದ ಹಾಡಿರಿ
ಹಾಡಿರಿ ಹಾಡಲ್ಲಿ ಒಂದು ಲವ್ ಸ್ಟೋರಿ

ಸ್ಟೋರಿಗೆ ಈಗ ನಾಯಕಿ ಯಾರೊ ಮರಿ
ಯಾರೊ ಮರಿ ಇಗೊ ಈ ಹೆಣ್ಣೆ ನಾಯಕಿ
ನಾಯಕಿಯೆ ನಿನಗೆ ಯಾರಮ್ಮ ನಾಯಕ Continue reading →

ಕುಲದಲ್ಲಿ ಕೀಳ್ಯಾವುದೋ – ವೀಡಿಯೋ

ಸತ್ಯ ಹರಿಶ್ಚಂದ್ರ (1965) – ಕುಲದಲ್ಲಿ ಕೀಳ್ಯಾವುದೋ
ಚಿತ್ರಗೀತೆ | ಸತ್ಯ ಹರಿಶ್ಚಂದ್ರ | ಹುಣಸೂರು ಕೃಷ್ಣಮೂರ್ತಿ | ೧೯೬೫
ಸಂಗೀತ: ಘಂಟಸಾಲ
ಗಾಯನ: ಘಂಟಸಾಲ

ಕುಲದಲ್ಲಿ

ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ
ಹಹಹಹಾ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹೇ.. ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ತಿಲಕ ಇಟ್ಟರೆ ಸ್ವರಗವು ಸಿಗದು
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ತಿಲಕ ಇಟ್ಟರೆ ಸ್ವರಗವು ಸಿಗದು
ವಿಭೂತಿ ಬಳಿದರೆ ಕೈಲಾಸ ಬರದು
ವಿಭೂತಿ ಬಳಿದರೆ ಕೈಲಾಸ ಬರದು
ಇಟ್ಟ ಗಂಧಾ ಬೂದಿ ನಾಮ
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಇಟ್ಟ ಗಂಧಾ ಬೂದಿ ನಾಮ
ಕತ್ತ ಕತ್ತಲು ನಿರನಾಮಾ..

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹ್ಯ..
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ಸೈವರಿಗೆಲ್ಲಾ ಸಿವದೊಡ್ಡೋನು
ಹೆ ಹೆ ಹೆಹೆ ಹೆ ಹೆ ಹೆಹೆ
ವೈಷ್ಣವರಿಗೆ ಹರಿ ಸರ್ವೋತ್ತಮನು
ಹೊ ಹೊ ಹೊಹೊ ಹೊ ಹೊ ಹೊಹೊ
ಸೈವರಿಗೆಲ್ಲಾ ಸಿವದೊಡ್ಡೋನು
ವೈಷ್ಣವರಿಗೆ ಹರಿ ಸರ್ವೋತ್ತಮನು
ಉತ್ತಮ ಮಧ್ಯಮ ಅಧಮರೆಲ್ಲರು
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಉತ್ತಮ ಮಧ್ಯಮ ಅಧಮರೆಲ್ಲರು
ಸತ್ತಮೇಲೆ ಸಮರಾಗ್ತಾರು..

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹಹ್ಯಾ..
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು
ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು
ಏಯ್..
ಮಸಣದಲ್ಲಿ ಈ ವೀರಬಾಹುವ
ಮಸಣದಲ್ಲಿ ಈ ವೀರಬಾಹುವ
ಕೈಯ ಮೇಲ್ಗಡೆ ಬೂದಿಯಾಗ್ತರು

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹಹಹಹಹಹಾ
ಹೊಯ್
ಕೀಳ್ಯಾವ್ದು ಮೇಲ್ಯಾವುದೋ..
ಹೊಯ್
ಕೀಳ್ಯಾವ್ದು ಮೇಲ್ಯಾವುದೋ..
ಸಂಗ್ರಹ: ಕುಮಾರ್ ರಾವ್

ಹಳ್ಳಿಯಾದರೇನು ಶಿವ


ಮೇಯರ್ ಮುತ್ತಣ್ಣ (1969) – ಹಳ್ಳಿಯಾದರೇನು ಶಿವ

ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಪಿ.ಬಿ.ಶ್ರೀನಿವಾಸ್

ಉ..ಉ..ಉ..ಆ..ಹಾ..ಆ
ಹಳ್ಳಿಯಾದರೇನು ಶಿವ ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ ಎಲ್ಲಾ ನಿನ್ನಂತೆ ಶಿವ
ಜಗವೆಲ್ಲಾ ನಿನ್ನದೇ ಶಿವ

ಎಲ್ಲಾ ಸಂಪತ್ತನಿತ್ತೆ ಎಲ್ಲರಿಗೆಂದೇ ಕೊಟ್ಟೆ
ಎಲ್ಲಾ ಸಂಪತ್ತನಿತ್ತೆ ಎಲ್ಲರಿಗೆಂದೇ ಕೊಟ್ಟೆ
ಹಂಚಿಕೊಂಡು ಬಾಳಲರಿಯದ Continue reading →

ನೆನೆದವರ ಮನದಲ್ಲಿ


ರಚನೆ : ಕೆ.ಎಸ್. ನಿಸಾರ್ ಅಹಮದ್
ಕವನ ಸಂಕಲನ: ನೆನೆದವರ ಮನದಲ್ಲಿ

ಕುರಿಗಳು ಸಾರ್ ಕುರಿಗಳು;
ಸಾಗಿದ್ದೇ
ಗುರಿಗಳು.
ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ
ಇದರ ಬಾಲ ಅದು ಮತ್ತೆ ಅದರ ಬಾಲ Continue reading →

ಸಹೋದರರ ಸವಾಲ್ – ಹೇ ನನಗಾಗಿಯೇ ನಿನ್ನಂದವು

ಸಹೋದರರ ಸವಾಲ್ (1977) – ಹೇ ನನಗಾಗಿಯೇ ನಿನ್ನಂದವು

ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಸತ್ಯಂ
ಗಾಯನ: ಎಸ್. ಪಿ. ಬಾಲಸುಭ್ರಂಣ್ಯಂ

ಹೇ ನನಗಾಗಿಯೇ ನಿನ್ನಂದವು,
ನಿನಗಾಗಿಯೇ ಈ ಜನ್ಮವು,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,
ಎಲ್ಲೇ ನೀ ಇರು

ಏನು ಕಣ್ಣ್‌ಗಳು ಏನು ತುಟಿಗಳು, ಬಳುಕಿ ಆಡುವ ನಡುವು
ಬಿರುಸು ನುಡಿಯೊಳು, ಸೊಗಸು ನಡೆಯೊಳು, ಆಸೆ ಮನದೊಳು
ನೋಟದೆ ಬೇಟೆಯನಾಡಲು ನೀನು, ಸೋತೆ ಕ್ಷಣದೊಳು

ಹೇ ನನಗಾಗಿಯೇ ನಿನ್ನಂದವು,
ನಿನಗಾಗಿಯೇ ಈ ಜನ್ಮವು,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,
ಎಲ್ಲೇ ನೀ ಇರು

ಕಣ್ಣು ಕಣ್ಣಲಿ ತುಟಿಯು ತುಟಿಯಲಿ ಸೇರಿ ನಲಿಯಲಿ
ತನುವು ಅರಳಲಿ ಮನವು ಕುಣಿಯಲಿ ಹೃದಯ ಹಾಡಲಿ
ಪ್ರೇಮದ ಗಾನದಿ ಹೃದಯಗಳೆರಡು ಬೆರೆತು ಹೋಗಲಿ

ಹೇ ನನಗಾಗಿಯೇ ನಿನ್ನಂದವು,
ನಿನಗಾಗಿಯೇ ಈ ಜನ್ಮವು,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,
ಎಲ್ಲೇ ನೀ ಇರು

ಕುಮಾರ್ ರಾವ್ 

ತರವಲ್ಲ ತಂಗಿ ನಿನ್ನ ತಂಬೂರೀ

ಗಾಯನ: ಸಿ.ಅಶ್ವಥ್
ಸಂಗೀತ: ಸಿ.ಅಶ್ವಥ್

ರೆರೆರೆರೆರೇ………
ರೆರೆರಾರಾರಾ……..
ರೆರೆ ರೆರೆ ರೇ……………

ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..
ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..
ಸರಸ ಸಂಗೀತದ ಕುರುಹುಗಳರಿಯದೆ
ಬರಿದೆ ಬಾರಿಸದಿರೂ ತಂಬೂರೀ..
ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..

ಮದ್ದಾಲಿ ದನಿಯೊಳು ತಂಬೂರೀ ಅದಾ
ತಿದ್ದಿ ನುಡಿಸಾಬೇಕು ತಂಬೂರೀ..
ಮದ್ದಾಲಿ ದನಿಯೊಳು ತಂಬೂರೀ ಅದಾ
ತಿದ್ದಿ ನುಡಿಸಾಬೇಕು ತಂಬೂರೀ..
ಸಿದ್ಧಸಾಧಕರಾ ವಿದ್ಯೆಗೆ ಒದಗುವಾ
ಸಿದ್ಧಸಾಧಕರಾ ವಿದ್ಯೆಗೆ ಒದಗುವಾ
ಬುದ್ಧಿವಂತಗೆ ದತ್ತಾ ತಂಬೂರೀ..
ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..

ಹಸನಾದ ಮ್ಯಾಳಕೆ ತಂಬೂರೀ ಇದು
ಕುಶಲರಿಗೊಪ್ಪುವಾ ತಂಬೂರೀ..
ಹಸನಾದ ಮ್ಯಾಳಕೆ ತಂಬೂರೀ ಇದು
ಕುಶಲರಿಗೊಪ್ಪುವಾ ತಂಬೂರೀ..
ಶಿಶುನಾಳದೀಶನಾ ಓದು ಪುರಾಣದಿ
ರೆರೆರೇ……………..
ಏ………………….
ಶಿಶುನಾಳದೀಶನಾ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರೀ..

ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..
ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..
ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..

Bims Gokul

ಯುದ್ಧಕಾಂಡ (1990) – ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ


ಸಂಗೀತ: ಹಂಸಲೇಖ
ರಾಗ: ಗೌರಿಮನೋಹರಿ (ಕಾರ್ನಾಟಿಕ್)

ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ
ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ

ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಜೀವನಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು
ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ
ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು

ಮೋಡ ಕವಿದಾ ಚಂದ್ರ ಹೊರಗೆ ಬರದೆ ಇರಲು
ಬಾಳಲಿ ಶೂನ್ಯವೆ ತುಂಬಿರಲು
ಭೂಮಿಯೆ ಸಿಡಿಯುತ ಬಿರಿದಿರಲು
ಧೈರ್ಯ ಒಂದೆ ದೀಪಾಅ
ಶೌರ್ಯ ಅದರ ರೂಪಾಅ
ಸತ್ಯ ನಮಗೆ ದಾರಿಇಇ
ಸುಳ್ಳೆ ನಮಗೆ ವೈರಿ
ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು

ಬೆಳ್ಳಿ ರಥದಾ ಸೂರ್ಯ ದಿನವು ನಗುತ ಬರುವಾ
ಆದರು ಅವನಿಗು ಮೇಘಗಳ ಪರದೆಯ ಜೊತೆಯಲಿ ಇದೆ ಜಗಳ
ಬದುಕೆ ಯುದ್ಧಕಾಂಡ
ಹ್ರುದಯ ಯಗ್ನ್ಯ ಕುಂಡ
ಸಿಡಿಯೆ ಅಗ್ನಿಜ್ವಾಲೇ ತೊಡಿಸೆ ವಿಜಯಮಾಲೆ
ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು

ಜೀವನಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು
ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ
ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ

ಕುಮಾರ್ ರಾವ್ 

ತಿರುಗು ಬಾಣ (೧೯೮೨)….ಇದೇ ನಾಡು ಇದೇ ಭಾಷೆ

ಚಿತ್ರ : ತಿರುಗುಬಾಣ

ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ಸತ್ಯಂ
ಗಾಯನ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಮತ್ತು ಕೋರಸ್

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ ಕವಿವಾಣಿಯ ನಾಡು
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಚಾಮುಂಡಿ ರಕ್ಷೆಯು ನಮಗೆ ಗೊಮ್ಮಟೇಶ ಕಾವಲು ಇಲ್ಲಿ
ಶೃoಗೇರಿ ಶಾರದೆ ಲೀಲೆ ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಹ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಎಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
-ಸಂಗ್ರಹ: Kumar Rao

ಕುಡಕರ್ ಮಾತ್ವ – ರತ್ನನ್ ಪದಗಳು

ಕುಡಕರ್ ಮಾತ್ವ ತಿಳಿಕೊಳ್ದೇನೆ
ನೂಕ್ಬಾರ್ದ್ ಔರ್‍ನ ಕೆಳಗೆ;
ಯಾವ್ ಚಿಪ್ನಾಗ್ ಮುತ್ತ್ ಐತೊ-
ಒಡದ್ ನೋಡ್ಬೇಕ್ ಒಳಗೆ!

ಕೊಚ್ಚೆ ನೀರೀನ್ ಸೋದೀಸ್ತ್ ಅಂದ್ರೆ
ಸಿಕ್ಕೋಕಿಲ್ವ ಗಂಗೆ?
ಸಾಜಾ ಯೇಳೋನ್ ಯಾರಾದ್ರೇನು?
ಸತ್ಯ ಕಣ್ ಕಂಡೌಂಗೆ!

ಆರ್‍ತ್ ಇಲ್ಲಾಂತ್ ನೆಗಬೇಡಾಣ್ಣ
ನಾಕುಡದಾಡೋ ಮಟ್ಟು!
ಕುಡಕನ್ ಪದಗೊಳ್ ಒಕ್ಕ್ ನೋಡಿದ್ರೆ
ಮಸ್ತಾಗ್ ಅವೆ ಗುಟ್ಟು!

’ರವ್ವಿ ಕಾಣದ್ ಕವಿ ಕಂಡ’
ಅಂದ್ರೆ ಕವಿಗೊಳ್ ತತ್ವ-
’ಕವ್ವಿ ಕಾಣದ್ ಕುಡಕ ಕಂಡ’
ಅನ್ನೊದ್ ಕುಡಕರ್ ಮಾತ್ವ!
          – ಜಿ.ಪಿ.ರಾಜರತ್ನಂ

ಈ ಬೀದಿಯಲ್ಲಿ ನಾ ಓಡಾಡಿದ್ದೆ

ಈ ಬೀದಿಯಲ್ಲಿ ನಾ ಓಡಾಡಿದ್ದೆ
ಬೇಕಾದಷ್ಟು ಸಲ
ಈ ನಗರದ ಎಲ್ಲಾ ಬೀದಿಗಳಂತೆ
ಧೂಳು, ಹೊಗೆ, ಗದ್ದಲ

ನಲ್ಲೆ, ನಿನ್ನ ಮನೆ
ಇಲ್ಲೇ ಇರುವುದು ತಿಳಿದೊಡನೆ
ಎಂಥಾ ಚೆಲುವು ಬಂತು ಬೀದಿಗೆ!
ಎಂಥಾ ಪರಿಮಳ!

ಧೂಳು ಈಗ ಧೂಳಲ್ಲ, ನನಗದೇ
ಪುಷ್ಪ ಪರಾಗ ರೇಣು
ಕಿವಿ ಗಡಚಿಕ್ಕುವ ಹಾರನ್ನುಗಳೇ
ಈಗ ಇಂಪಾದ ವೇಣು

ಬಸ್ಸು ಲಾರಿಯ ಹೊಗೆ
ಆಗರು ಧೂಪ ನನಗೆ
ನೀನಿರುವೆಡೆಯೇ ನನಗೆ ನಂದನ
ನೀನೇ ಕಾಮಧೇನು

ನೀನ್ನ ಮನೆಯೆ ದೇವಾಲಯ, ದೇವಿ
ನಾನು ನಿನ್ನ ಭಕ್ತ
ಯಾರೇ ನಕ್ಕರೂ ಕೇರು ಮಾಡದೆ
ನಿಂತಿರುವೆನು ಅನುರಕ್ತ

ನಿನ್ನ ಮನೆಯ ಮುಂದೆ
ನೆಟ್ಟ ಗರುಡಗಂಬದಂತೆ
ನಲ್ಲೆ, ನಿನ್ನ ದರ್ಶನಕ್ಕಾಗಿ
ನಾ ಹಂಬಲಿಸುತ್ತ

ಕರುಣಿಸಿ ನಿನ್ನ ಭಕ್ತನ ಮೇಲೆ
ಬಾರೇ ನೀ ಹೊರಗೆ
ಕಿಟಕಿಯನ್ನು ತೆರೆದಾದರೂ ಒಮ್ಮೆ
ನೋಡೇ ಈ ಕಡೆಗೆ

ಪ್ರೀತಿಯ ಒಂದು ನಗೆ
ಸಿಕ್ಕರೆ,ಅದೇ ಸಾಕು ನನಗೆ
ಬದುಕಿ ಉಳಿಯುವೆನು ಭರವಸೆಯಲ್ಲಿ
ನಾನು ನಾಳೆವರೆಗೆ.

– ಬಿ ಆರ್ ಲಕ್ಷ್ಮಣರಾವ್.

ರಾಯರು ಬಂದರು ಮಾವನ ಮನೆಗೆ

ಸಾಹಿತ್ಯ : ಕೆ.ಎಸ್. ನರಸಿಂಹಸ್ವಾಮಿ
ಸಂಗೀತ : ಸಿ. ಅಶ್ವಥ್
ಗಾಯನ : ರತ್ನಮಾಲಾ ಪ್ರಕಾಶ್
ಹಾಗಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿದ್ರ ಬಂದಿತ್ತು
ತುಂಬಿದ ಚಂದಿರ ಬಂದಿತ್ತು

ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು
ಬಾಗಿಲ ಬಳಿ ಕಾಲಿಗೆ ಬಿಸಿನೀರಿನ ತಂಬಿಗೆ ಬಂದಿತ್ತು ಒಳಗಡೆ ದೀಪದ ಬೆಳಕಿತ್ತು

ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು
ಬೆಳ್ಳಿಯ ಬಟ್ಟಲ ಗಸಗಸೆಪಾಯಸ ರಾಯರ ಕರೆದಿತ್ತು ಭೂಮಿಗೆ ಸ್ವರ್ಗವೆ ಇಳಿದಿತ್ತು

ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನ ಹಾಸಿತ್ತು
ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು ಪದುಮಳು ಹಾಕಿದ ಹೂವಿತ್ತು

ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತಾ
ಬಿಸಿಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ ಮಡದಿಯ ಸದ್ದೇ ಇರಲಿಲ್ಲ

ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ
ಮೆಲುದನಿಯಲಿ ನಾದಿನ ಇಂತೆಂದಳು ಪದುಮಳು ಒಳಗಿಲ್ಲ ಪದುಮಳ ಬಳೆಗಳ ದನಿಯಿಲ್ಲ

ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ
ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗಲಿ ಯಾರಿಗೆ ಎನ್ನಲು ಹರುಷದಲಿ

ಪದುಮಳು ಬಂದಳು..ಪದುಮಳು ಬಂದಳು..
ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ…..
ರಾಯರ ಕೋಣೆಯಲಿ……ರಾಯರ ಕೋಣೆಯಲಿ……

ಸಾಲುಗಳು ತಪ್ಪಿಹೋಗಿವೆ

ಈ ಸಾಲುಗಳಲ್ಲಿ ಕೆಲವು ಸಾಲುಗಳು ತಪ್ಪಿಹೋಗಿವೆ –

ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ
ಮೆಲುದನಿಯಲಿ ನಾದಿನ ಇಂತೆಂದಳು ಪದುಮಳು ಒಳಗಿಲ್ಲ ಪದುಮಳ ಬಳೆಗಳ ದನಿಯಿಲ್ಲ

ಅವು ಹೀಗಿರಬೇಕು
ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ
ಮೆಲುದನಿಯಲಿ ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ, ನಕ್ಕರು ರಾಯರು ನಗಲಿಲ್ಲ

ಏರುತ ಇಳಿಯುತ ಬಂದರು ರಾಯರು ದೂದ ಊರಿಂದ
ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ, ಪದುಮಳ ಬಳೆಗಳ ದನಿಯಿಲ್ಲ

ಸಂಗ್ರಹ- Kumar Rao

ಗಮಗಮಾ ಗಮಾಡಿಸತಾವ ಮಲ್ಲಿಗಿ

ರಚನೆ : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
ಗಾಯನ : ಸಂಗೀತ ಕಟ್ಟಿ.
ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ಕಿಸಿ
ಗಮಗಮಾ ಗಮಾಡಿಸತಾವ ಮಲ್ಲಿಗಿ| ನೀವು ಹೊರಟಿದ್ದೀಗ ಎಲ್ಲಿಗೆ?
ಗಮಗಮಾ……….. || ಪಲ್ಲವಿ||

ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರತಾವ ಹುಡುಕಿ||
ನೀವು ಹೊರಟಿದ್ದೀಗ ಎಲ್ಲೆಗೆ?

ಚಿಕ್ಕಿ ತೋರಸ್ತಾನ ಚಾಚಿ ಬೆರಳ
ಚಂದ್ರಾಮ ಕನ್ನಡಿ ಹರಳ
ಮನಸೋತು ಆಯಿತು ಮರುಳ||
ನೀವು ಹೊರಟಿದ್ದೀಗ ಎಲ್ಲೆಗೆ?

ಗಾಳಿತಬ್ಬತಾವ ಹೂಗಂಪು
ಚಂದ್ರನ ತೆಕ್ಕಿಗಿದೆ ತಂಪು
ನಿಮ ಕಂಡರ ಕವದಾವ ಜೊಂಪು||
ನೀವು ಹೊರಟಿದ್ದೀಗ ಎಲ್ಲಿಗೆ?

ನೆರಳಲ್ಲಾಡತಾವ ಮರದ ಬುಡಕs
ಕೆರಿ ತೆರಿ ನೂಗತಾವ ದಡsಕ
ಹೀಂಗೆ ಬಿಟ್ಟು ಇಲ್ಲಿ ನನ್ನ ನಡsಕ||
ನೀವು ಹೊರಟಿದ್ದೀಗ ಎಲ್ಲಿಗೆ?

ನಮ್ಮ ನಿಮ್ಮ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ|| ನೀವು ಹೊರಟಿದ್ದೀಗ ಎಲ್ಲಿಗೆ?

ನಾವು ಬಂದೆವದಿಲ್ಲಿದಿಲ್ಲಿಗೆ
ಬಾಯಿ ಬಿಟ್ಟವಲ್ಲ ಮಲ್ಲಿಗೆ
ನೀರೊಡೆಡಿತಲ್ಲ ಕಲ್ಲಿಗೆ
ನೀವು ಹೊರಟಿದ್ದೀಗ ಎಲ್ಲಿಗೆ?||

ಬಂತ್ಯಾಕ ನಿಮಗೆ ಇಂದ ಮುನಿಸು
ಬೀಳಲಿಲ್ಲ ನಮಗೆ ಇದರ ಕನಸು
ರಾಯ ತಿಳಿಯಲಿಲ್ಲ ನಿಮ್ಮ ಮನಸು
ನೀವು ಹೊರಟಿದ್ದೀಗ ಎಲ್ಲಿಗೆ?||
ಸಂಗ್ರಹ-Kumar Rao 

ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ

ರಚನೆ: ಕೆ.ಎಸ್. ನರಸಿಂಹಸ್ವಾಮಿ
ಗಾಯನ : ದಿ. ಜಿ.ವಿ ಅತ್ರಿ 
ಸಂಗೀತ : ಸಿ.ಅಶ್ವಥ್
ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ 

ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ
ರತ್ನದಂತಹ ಹುಡುಗಿ ಊರಿಗೆಲ್ಲಾ
ಬಲುಜಾಣೆ ಗಂಭೀರೆ ಹೆಸರು ಸೀತಾದೇವಿ
ಹನ್ನೆರಡು ತುಂಬಿಹುದು ಮದುವೆಯಿಲ್ಲಾ

ತಾಯಿಯಿಲ್ಲದ ಹೆಣ್ಣು ಮಿಂಚ ಬೀರುವ ಕಣ್ಣು
ಒಮ್ಮೊಮ್ಮೆ ಕಣ್ಣೀರ ಸರಸಿಯಹುದು
ತಾಯಿಯಂದದಿ ಬಂದು ತಂಪನೆರೆಯುವುದೆಂದು
ಇಂತ ಬಾಳಿಗೆ ಒಲವೆ ನಿನ್ನ ಕನಸು

ಹತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ
ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ
ಅವಳ ಗಂಡನ ಹೆಸರ ಕೇಳಬೇಕು

ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು
ಹೆಣ್ಣ ನೋಡಲು ಬಂದ ಅವರ ಮನೆಗೆ
ವೈದಿಕರ ಮನೆಗಳಲಿ ಊಟ ಹೊತ್ತಾಗುವುದು
ಒಲ್ಲೆನೆಂದಳು ಸೀತೆ ಕೋಣೆಯೊಳಗೆ

ಮಗಳ ಮಾತನು ಕೇಳಿ ನಕ್ಕು ಬಿಟ್ಟರು ತಂದೆ
ಒಳಗೆ ನಂದಾದೀಪ ನಂದಿ ಹೋಗ್ಲಿ
ಫಲವ ನುಡಿದುದು ಹಲ್ಲಿ ಹೇಳಲೇನಿದೆ ಮುಂದೆ
ತೆರಳಿದನು ಜೋಯಿಸನು ತಣ್ಣಗಾಗಿ

ಬೆಳಗಾಗ ಕೆರೆಯ ಬಳಿ ನನ್ನ ತಂಗಿಯ ಕಂಡು
ಕನ್ನೆ ತೋರಿದಳಂತೆ ಕಾರಣವನು
ಹೊನ್ನೂರ ಕೇರಿಯಲಿ ಬಂದಿದ್ದ ಹೊಸ ಗಂಡು
ತನ್ನ ಕೂದಲಿಗಿಂತ ಕಪ್ಪು ಎಂದು

ನಮ್ಮೂರಿನಕ್ಕರೆಯ ಸಕ್ಕರೆಯ ಬೊಂಬೆಯನು
ನೋಡಬೇಕೆ ಇಂತ ಕಪ್ಪು ಗಂಡು
ಶಾನುಭೋಗರ ಮನೆಯ ತೋರಣವೆ ಹೇಳುವುದು
ಬಂದ ದಾರಿಗೆ ಸುಂಕವಿಲ್ಲವೆಂದು

ಶಾನುಭೋಗರ ಮಗಳು ರತ್ನದಂತಹ ಹುಡುಗಿ
ಗಂಡು ಸಿಕ್ಕುವುದೊಂದು ಕಷ್ಟವಲ್ಲ
ಸರಿಯಾದ ಗಂಡೊದಗಿ ಹೆಣ್ಣು ಸುಖವಾಗಿರಲಿ
ತಡವಾದರೇನಂತೆ ನಷ್ಟವಿಲ್ಲ

Kumar Rao

ಎಲ್ಲಾದರು ಇರು ಎಂತಾದರು ಇರು

ರಚನೆ: ಕುವೆಂಪು
ಭಾವಗೀತೆ ಸಂಕಲನ: ಕನ್ನಡವೇ ಸತ್ಯ
ಗಾಯನ: ಡಾ.ರಾಜ್‍ಕುಮಾರ್
ಸಂಗೀತ: ಸಿ.ಅಶ್ವಥ್

ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ

ನೀ ಮುಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಪಂಪನೋದುವ ನಿನ್ನಾ ನಾಲಗೆ ಕನ್ನಡವೇ ಸತ್ಯ
ಕುಮಾರವ್ಯಾಸನನಾಲಿಪ ಕಿವಿಯದು ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು

ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಪಿಂಪಿನ ಬನವಾಸಿಗೆ ಕರಗುವ ಮನ
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ
ಜೊಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಒಂಪುಳಿಹೋಗುವ ಮನ
ಕನ್ನದವೇ ಸತ್ಯ ಕನ್ನದವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು

ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಕಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸರೋಮಾಂಚನಗೊಳುವಾತನಾ ಮನ
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಅನ್ಯವೆನಲದೇ ಮಿತ್ಯ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡವೇ ಸತ್ಯ ಕನ್ನಡವೇ ನಿತ್ಯ

-ಸಂಗ್ರಹ – ಕುಮಾರ್ ರಾವ್

ಹಿಂದಿನ ಸಾಲಿನ ಹುಡುಗರು

ಹಿಂದಿನ ಸಾಲಿನ ಹುಡುಗರು
ರಚನೆ: ಕೆ.ಎಸ್. ನರಸಿಂಹಸ್ವಾಮಿ

‘ಹಿಂದಿನ ಸಾಲಿನ ಹುಡುಗರು’ ಎಂದರೆ
ನಮಗೇನೇನೂ ಭಯವಿಲ್ಲ!
ನಮ್ಮಿಂದಾಗದು ಶಾಲೆಗೆ ತೊಂದರೆ;
ನಮಗೆಂದೆಂದೂ ಜಯವಿಲ್ಲ!

ನೀರಿನ ಜೋರಿಗೆ ತೇಲದು ಬಂಡೆ;
ಅಂತೆಯೆ ನಾವೀ ತರಗತಿಗೆ!
ಪರೀಕ್ಷೆ ಎಂದರೆ ಹೂವಿನ ಚೆಂಡೆ? –
ಚಿಂತಿಸಬಾರದು ದುರ್ಗತಿಗೆ.

ವರುಷ ವರುಷವೂ ನಾವಿದ್ದಲ್ಲಿಯೆ
ಹೊಸ ವಿದ್ಯಾರ್ಥಿಗಳಾಗುವೆವು;
ಪುಟಗಳ ತೆರೆಯದೆ ತಟತಟ ಓದದೆ
ಬಿಸಿಲಿಗೆ ಗಾಳಿಗೆ ಮಾಗುವೆವು!

ಜೊತೆಯಲಿ ಕೂರುವ ತಮ್ಮತಂಗಿಯರ
ಓದುಬರಾವನು ನೋಯಿಸೆವು;
ನಮ್ಮಂತಾಗದೆ ಅವರೀ ಶಾಲೆಯ
ಬಾವುಟವೇರಿಸಲೆನ್ನುವೆವು.

ಸಂಬಳ ಸಾಲದ ಉಪಾಧ್ಯಾಯರಿಗೆ
ಬೆಂಬಲವಾಗಿಯೆ ನಿಲ್ಲುವೆವು;
ಪಾಠಪ್ರವಚನ ರುಚಿಸದೆ ಹೋದರೆ
ಪಾಕಂಪೋಪ್ಪನು ಮೆಲ್ಲುವೆವು.

ತರಗತಿಗೆನೋ ನಾವೇ ಹಿಂದು;
ಹಿಂದುಳಿದವರೇ ನಾವಿಲ್ಲಿ!
ಆಟದ ಬಯಲಲಿ ನೋಡಲಿ ಬಂದು
ಆಂಜನೇಯರೇ ನಾವಲ್ಲಿ!

ಪಂಪ ಕುಮಾರವ್ಯಾಸರ ದಾಸರ
ಹರಿ ಹರ ಶರಣರ ಕುಲ ನಾವು!
ಕನ್ನಡದಲ್ಲೇ ತೇರ್ಗಡೆಯಾಗದ
ಪಂಡಿತಪುತ್ರರ ಪಡೆ ನಾವು!

ಗೆದ್ದವರೆಲ್ಲಾ ನಮ್ಮವರೇ ಸರಿ;
ಗೆಲ್ಲುವಾತುರವೆ ನಮಗಿಲ್ಲ.
ಸೋತವರಿಗೆ ನಾವಿಲ್ಲವೆ ಮಾದರಿ? –
ಕೆರೆಗೆ ಬೀಳುವುದು ತರವಲ್ಲ.

ಗೆದ್ದವರೇರುವ ಭಾಗ್ಯದ ದಾರಿಗೆ
ಕದಲದ ದೀಪಗಳಾಗುವೆವು;
ಹಲವರು ಸೋಲದೆ ಕೆಲವರ ಗೆಲವಿಗೆ
ಬೆಲೆಯಿರದೆಂದೇ ನಂಬಿಹೆವು.

ಊರಿಗೆ ಊರೇ ಹಸೆಯಲಿ ನಿಂತರೆ
ಆರತಿ ಬೆಳಗಲು ಜನವೆಲ್ಲಿ?
ಎಲ್ಲಾ ಹಾಡುವ ಬಾಯೇ ಆದರೆ
ಚಪ್ಪಾಳೆಗೆ ಜನವಿನ್ನೆಲ್ಲಿ?

ಲೋಕದ ಶಾಲೆಯ ಭಾಗ್ಯದ ಸೆರೆಯಲಿ
ಅನಂತಸುಖವನು ಕಂಡಿಹೆವು.
ಇದೇ ಸತ್ಯವೆಮಗಿದರಾಸರೆಯಲಿ
ಜಯಾಪಜಯಗಳ ದಾಟುವೆವು.

ಪುಸ್ತಕ ಓದದೆ ಪ್ರೀತಿಯನರಿತೆವು;
ಗೆಲ್ಲದೆ ಹೆಮ್ಮೆಯ ಗಳಿಸಿದೆವು;
ನಾವೀ ಶಾಲೆಯನೆಂದೂ ಬಿಡೆವು;
ನೆಮ್ಮದಿಯಾಗಿಯೆ ಉಳಿಯುವೆವು!

ಸಂಗ್ರಹ: ಕುಮಾರ್ ರಾವ್

ಎಲ್ಲೋ ಹುಡುಕಿದೆ ಇಲ್ಲದ ದೇವರ

ರಚನೆ: ಜಿ.ಎಸ್. ಶಿವರುದ್ರಪ್ಪ
ಗಾಯಕಿ: ಬಿ,ಆರ್. ಛಾಯಾ 

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಂಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲ್ಲಿ
-ಸಂಗ್ರಹ: ಕುಮಾರ್ ರಾವ್
 

ಹೂವು ಹೊರಳುವವು ಸೂರ್ಯನ ಕಡೆಗೆ

ರಚನೆ: ಚನ್ನವೀರ ಕಣವಿ
ರಾಗ: ಭೀಮ್ ಪಲಾಸ್ / ಅಭೇರಿ
ಗಾಯನ : ಶ್ರೀಮತಿ ರತ್ನಮಾಲ ಪ್ರಕಾಶ್.

ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ

ಇರುಳಿನ ಒಡಲಿಗೆ
ದೂರದ ಕಡಲಿಗೆ
ಮುಳುಗಿದಂತೆ ದಿನ ಬೆಳಗಿದಂತೆ
ಹೊರ ಬರುವನು ಕೂಸಿನ ಹಾಗೆ

ಜಗದ ಮೂಸೆಯಲಿ ಕರಗಿಸಿ ಬಿಡುವನು
ಎಲ್ಲ ಬಗೆಯ ಸರಕು
ಅದಕೆ ಅದರ ಗುಣ ದೋಷಗಳಂಟಿಸಿ
ಬಿಡಿಸಿ ಬಿಟ್ಟ ತೊಡಕು

ಗಿಡದಿಂದುರುವ ಎಲೆಗಳಿಗೂ ಮುದ
ಚಿಗುರುವಾಗಲು ಒಂದೆ ಹದ
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ ಕುಳಿತಿಹನು ಕಲಾವಿದ?

ಬಿಸಿಲ ಧಗೆಯ ಬಸಿರಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ
ಸಹಿಸಿಕೊಂಡ ಸಂಕಟವನು ಸೋಸಲು
ಬಂದೆ ಬರುವುದಾಗಳಿಗೆ

ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ
-ಸಂಗ್ರಹ: ಕುಮಾರ್ ರಾವ್
 

ಮೋಹನ ಮುರಳಿ – ವೀಡಿಯೋ

ಸಾಹಿತ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಮೋಹನ ಮುರಳಿ

ರಚನೆ: ಎಂ. ಗೋಪಾಲಕೃಷ್ಣ ಅಡಿಗ
ಗಾಯನ : ಶ್ರೀಮತಿ ರತ್ನಮಾಲ ಪ್ರಕಾಶ್ 

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಿಂಚಿನ ಕಣ್ಣನು

ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ
ಕರಣಗಳದೀ ರಿಂಗಣ

ಸಪ್ತ ಸಾಗರದಾಚೆ ಎಲ್ಲೊ
ಸುಪ್ತ ಸಾಗರ ಕಾದಿದೆ
ಮೊಳೆಯದೆಲೆಗಳ ಮೂಖ ಮರ್ಮರ
ಇಂದು ಇಲ್ಲಿಗು ಹಾಯಿತೆ

ವಿವಶವಾಯಿತು ಪ್ರಾಣ ಹಾಃ
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದದುರೆಡೆಗೆ ತುಡಿವುದೆ ಜೀವನ

ಯಾವ ಮೋಹನ ಮುರಳಿ ಕರೆಯಿತು
ಇದ್ದಕ್ಕಿದ್ದಲೆ ನಿನ್ನನು
ಯಾವ ಬೃಂದಾವನವು ಚಾಚಿತು
ತನ್ನ ಮಿಂಚಿನ ಕಯ್ಯನು

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ 

ಒಂದೆಡೆ ಲೌಕಿಕ ಸುಖದಲ್ಲಿ ತೃಪ್ತಿ ಪಡದ ಮನಸ್ಸು ಅಲೌಕಿಕದ ಸೆಳೆತವನ್ನುಪಡೆಯುವ ಬಗೆಯನ್ನು ಈ ಕವಿತೆ ಚಿತ್ರಿಸುತ್ತದೆ. ಅಂತೆಯೇ ಇನ್ನೊಂದೆಡೆ, ಇರುವುದೆಲ್ಲವ ಬಿಟ್ಟು ಇರದುದುರೆಡೆಗೆ ತುಡಿವುದೆ ಜೀವನ ಎಂಬ ಪ್ರಶ್ನೆಯ ಮೂಲಕ ಇಲ್ಲಿಯ ಬಂಧನದ ಪ್ರಿಯ ಅನುಭಾವವನ್ನು ಕೂಡ ಕವಿತೆ ಮನೋಜ್ಞವಾಗಿ ಕಟ್ಟಿ ಕೊಡುತ್ತದೆ
-ಸಂಗ್ರಹ: ಕುಮಾರ್ ರಾವ್