Category Archives: ಚಕ್ರವರ್ತಿ ಸೂಲಿಬೆಲೆ

ಹದಿನಾಲ್ಕರ ಬಾಲೆಗೆ ಹೆದರಿದ ತಾಲಿಬಾನಿ ಹೇಡಿಗಳು!

’ನನ್ನ ಪಾಕಿಸ್ತಾನದ ಕನಸು ಇಂತಹದುಲ್ಲ. ಅಲ್ಲಿ ಶಾಂತಿ ಇರಬೇಕು. ನೆರೆಯವರೊಂದಿಗೆ ಸೌಹಾರ್ದ ಗೆಳೆತನವಿರಬೇಕು. ನನ್ನ ಪಾಕಿಸ್ತಾನದಲ್ಲಿ ಹಗರಣಗಳಿರಬಾರದು. ಶತ್ರುಗಳಿಲ್ಲದ ರಾಷ್ಟ್ರವಾಗಿರಬೇಕು ಅದು.’ ಹಾಗಂತ ಪಟಪಟನೆ ಮಾತನಾಡುತ್ತ ಇಂತಹದೊಂದು ರಾಷ್ಟ್ರದ ನಿರ್ಮಾಣಕ್ಕೆ ಅಗತ್ಯಬಿದ್ದಲ್ಲಿ ಓದು ಮುಗಿಸಿ ರಾಜಕಾರಣಕ್ಕೂ ಧುಮುಕುವೆನೆಂದು ಪತ್ರಕರ್ತರ ಮುಂದೆ ಹೇಳಿದ್ದು ಬೆನಜಿರ್ ಭುಟ್ಟೋ ಅಲ್ಲ. ಹದಿಮೂರರ ಬಾಲೆ ಮಲಾನಾ ಯೂಸುಫ್ ಜಾಯ್. ಹೌದು. ಮೊನ್ನೆ ದುಷ್ಟ ತಾಲಿಬಾನಿಗಳು ಗುಂಡು ಹಾರಿಸಿ ಕೊಲ್ಲುವ ಯತ್ನ ನಡೆಸಿದ್ದು ಈ ಹುಡುಗಿಯ ಮೇಲೆಯೇ. ಈಗ ಅವಳಿಗೆ ಹದಿನಾಲ್ಕು ವರ್ಷ ಮಾತ್ರ. ತಾಲಿಬಾನ್ ಎನ್ನುವ ಪದ ಕ್ರೌರ್ಯಕ್ಕೆ ಪರ್ಯಾಯವಾಗಿ ನಿಂತಿರುವುದು ಇಂದೇನಲ್ಲ. ಆಪ್ಘಾನಿಸ್ತಾನದ ಪುಷ್ತೂನ್ ಬುಡಕಟ್ಟಿನ ಜನರ ಮಹತ್ವಾಕಾಂಕ್ಷೆಯ ಭಾಗವಾಗಿ ಹುಟ್ಟಿದ ದಿನದಿಂದ ಅದು ಹಾಗೆಯೇ. ಅಫ್ಘಾನಿಸ್ತಾನ ಗಾಂಧಾರ ದೇಶವಾಗಿದ್ದ ಕಾಲದಿಂದಲೂ ಭಿನ್ನಭಿನ್ನ ಬುಡಕಟ್ಟುಗಳ ಭೂಪ್ರದೇಶ. ಅದರಲ್ಲಿ ಸೂರ್ಯಚಂದ್ರರನ್ನು ಆರಾಧಿಸುವ ಪ್ರಕೃತಿ ಪೂಜಕರಿಂದ ಹಿಡಿದು ಸಗುಣ ಸಾಕಾರ ಮೂರ್ತಿಪೂಜಕರೂ ಇದ್ದರು. ನಡುವಲ್ಲಿ ಒಂದಷ್ಟು ಕಾಲ ಬುದ್ಧನ ಅನುಯಾಯಿಗಳ ಶಾಂತಿಯ ಪ್ರಭೆಯಿಂದಲೂ ಬೆಳಗಿತು ಆಫ್ಘಾನಿಸ್ತಾನ. ಆನಂತರದ ದಿನಗಳಲ್ಲಿ ದಾಳಿಗೆ ಒಳಗಾಗಿ ಕ್ರಮೇಣ ಇಸ್ಲಾಮ್ ವ್ಯಾಪ್ತಗೊಂಡಿತು. ಹಾಗಂತ ಇಸ್ಲಾಮ್ ಕೂಡ ಏಕಪ್ರಕಾರವಾಗಿರಲಿಲ್ಲ. ಆಯಾ ಬುಡಕಟ್ಟುಗಳು ತಮ್ಮದೇ ಆದ ಆಚರಣೆಗಳೊಂದಿಗೆ ಬದುಕಿದ್ದವು. ಸೂಫಿಸಂತರುಗಳು ಹೊಸ ಪರಂಪರೆಯನ್ನು ಹುಟ್ಟುಹಾಕಿದ್ದರು. ತಮ್ಮ ರೀತಿಯೇ ಸರಿ ಎನ್ನುವ ಕಾದಾಟಗಳು ಆಗೀಗ ನಡೆಯುತ್ತಲೇ ಇದ್ದವು. ಮೇಲುಗೈ ಸಾಧಿಸಿ ಇಡಿಯ ಪ್ರಾಂತವನ್ನು ಆಳಬೇಕೆಂಬ ತಹತಹವೂ ಸಹಜವಾಗೇ ಇತ್ತು. ಈ ಹಂತದಲ್ಲಿ ಪುಷ್ತೂನ್ ಬುಡಕಟ್ಟಿನ ಜನ ವಹಾಬಿಗಳ, ದಿಯೋಬಂದಿಗಳ ಸಿದ್ಧಾಂತದ ಆಧಾರದ ಮೇಲೆ ಕಟ್ಟಿದ ಕಟ್ಟರ್ ಇಸ್ಲಾಮೀಪಂಥ ’ತಾಲಿಬಾನ್’. ಮುಲ್ಲಾ ಮುಹಮ್ಮದ್ ಓಮರ್‌ನ ನೇತೃತ್ವ ಅದಕ್ಕೆ ದೊರೆಯಿತು. ಸೌದಿಯ ಹಣ, ಪಾಕಿಸ್ತಾನದ ಜನ ಎರಡೂ ವಿಪುಲವಾಗಿ ಹರಿಯಿತು. ೧೯೯೬ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನ್ ಚುಕ್ಕಾಣಿಯನ್ನೆ ಹಿಡಿದುಬಿಟ್ಟಿತು.

ಅಲ್ಲಿಂದಾಚೆಗೆ ಅಫ್ಘಾನಿಸ್ತಾನದ್ದು ಕಣ್ಣೀರಿನ ಕತೆ. ತಾಲಿಬಾನಿಗೆ ಆಧುನಿಕತೆ ಹಿಡಿಸದು. ಹೀಗಾಗಿ ಷರೀಯತ್ ಕಾನೂನುಗಳನ್ನು ಒತ್ತಡದಿಂದ ಹೇರಿತು. ಭಾರತದಲ್ಲಿ ಜನ್ಮ ತಳೆದ ದಿಯೋಬಂದಿಗಳ ಷರೀಯತ್ ವಿವರಣೆಗಳ ಆಧಾರದ ಮೇಲೆ ರಾಷ್ಟ್ರ ನಡೆಯಬೇಕಾಯ್ತು. ಹೀಗಾಗಿ ಹಂದಿ ಮತ್ತು ಅದರ ಎಲ್ಲ ಉತ್ಪನ್ನಗಳಿಗೆ ಮೊದಲ ನಿಷೇಧ ಬಿತ್ತು. ಮನುಷ್ಯನ ಕೂದಲಿನಿಂದ ಮಾಡಿದ ವಸ್ತುಗಳನ್ನು ಬಳಸುವಂತಿರಲಿಲ್ಲ. ಹೋಟೆಲ್‌ಗಳನ್ನು ಮುಚ್ಚಲಾಯ್ತು. ಸಿನಿಮಾಗಳು ಸ್ತಬ್ಧಗೊಂಡವು. ಸಂಗೀತದ ಕಂಠ ಒತ್ತಲಾಯ್ತು. ಟೀವಿ-ಟೇಪ್‌ರೆಕಾರ್ಡರುಗಳಿರಲಿ, ಕಂಪ್ಯೂಟರ್ ಅನ್ನೂ ಬಳಸುವಂತಿರಲಿಲ್ಲ. ಉಗುರು ಬಣ್ಣ ಹಚ್ಚುವಂತಿರಲಿಲ್ಲ, ಪಟಾಕಿ ಸಿಡಿಸುವಂತಿರಲಿಲ್ಲ. ನಿಷೇಧದ ಪಟ್ಟಿ ದೊಡ್ಡದಿತ್ತು. ಹೆಣ್ಣುಮಕ್ಕಳು ಒಬ್ಬೊಬ್ಬರೇ ರಸ್ತೆಯಲ್ಲಿ ತಿರುಗಾಡುವಂತಿರಲಿಲ್ಲ. ಹಾಗೆ ತಿರುಗಾಡುವಾಗ ಸಂಬಂಧಿಕರನ್ನು ಬಿಟ್ಟು ಬೇರೆ ಗಂಡಸಿರುವುದು ಪತ್ತೆಯಾದರೆ ಅವಳ ಕೈಕಾಲುಗಳನ್ನು ಬಂಧಿಸಿ ಛಡಿ ಏಟಿನ ಶಿಕ್ಷೆ ನೋಡಲಾಗುತ್ತಿತ್ತು. ರಸ್ತೆಯಲ್ಲಿ ಕಾರುಗಳನ್ನು ಅಡ್ಡಗಟ್ಟಿ ಸ್ಟೀರಿಯೋ ಸಿಕ್ಕರೆ ಅಂಥವನನ್ನು ಸೈಕಲ್ ಚೈನಿನಿಂದ ಬಡಿಯಲಾಗುತ್ತಿತ್ತು. ಓಹ್! ನಾವು ಕೈಮುಟ್ಟಿದ್ದನ್ನು, ಮೈಮುಟ್ಟಿದ್ದನ್ನೆಲ್ಲ ತಾಲಿಬಾನ್ ಎಂದು ಬುದ್ಧಿಜೀವಿಗಳು ಕರೆದುಬಿಡುತ್ತಾರಲ್ಲ, ಅಂಥವರು ಬಿಬಿಸಿ ಪ್ರಕಟಪಡಿಸಿರುವ Continue reading →