ನಿಮಗೆ ತಿಳಿದಿರಲಿ : ” ಮೈದಾ ” !!

ಗೋದಿಯ ಉಮಿ, ದೂಳು, ನಾರು, ಭಕ್ಷ್ಯಯೋಗ್ಯ ಸಕಲ ವಸ್ತುಗಳನ್ನೂ ಪ್ರತ್ಯೇಕಿಸಿ ತೆಗೆದು ಬಾಕಿ ಉಳಿಯುವ ತರಿಗಳನ್ನೂ ಹುಡಿಯನ್ನೂ ಬೇರ್ಪಡಿಸಲಾಗುತ್ತದೆ. ಇವೆರಡನ್ನೂ ರಾಸಾಯನಿಕ _ ಬೆನ್ಸೋಯಿಕ್ ಪೆರೋಕ್ಸೈಡ್ _ ಉಪಯೋಗಿಸಿ ಬ್ಲೀಚ್ ಮಾಡಲಾಗುತ್ತದೆ. ತರಿಯು ರವಾಸಜ್ಜಿಗೆ ಎಂಬ ಹೆಸರಿನಲ್ಲಿ ಮಾರ್ಕೆಟಿಗೆ ತಲಪುತ್ತದೆ. ಹುಡಿಯನ್ನು ಮತ್ತೊಮ್ಮೆ ALLOXEN ಎಂಬ ಭಯಂಕರ ರಾಸಾಯನಿಕ ಸೇರಿಸಿ ಮೆತ್ತಗೆ ನಯಾ ಪೌಡರ್ ಮಾಡಿ ಪುನಃ ಪ್ರಿಸರ್ವೇಟಿವ್ ಬೆರಕೆ ಮಾಡಲಾಗುತ್ತದೆ . ಇದುವೇ ಮಾನವ ಕುಲಕ್ಕೆ ವಿನಾಶಕಾರೀ ರೋಗಗಳನ್ನು ತಂದೊಡ್ಡುತ್ತಾ ಇರುವ ” ಮೈದಾ ” ಎಂಬ ರಾಕ್ಷಸ..! ಬಿಳುಚಿದ ಆಹಾರ ವಸ್ತುಗಳಲ್ಲಿ ಭಾರತೀಯರಿಗೆ ಬಂದ ಪ್ರಿಯತೆಯೂ ಪರದೇಶಿಗಳ (ಪರ್ದೇಶಿ) ವ್ಯಾಪಾರ ಬುದ್ದಿಯೂ ಎರಡೂ ಸೇರಿದಾಗ ” ಮೈದಾ ” ಎಂಬ ಅತ್ಯಂತ ಅಪಾಯಕಾರೀ ವಸ್ತು ಉಂಟಾಯಿತು ಮಾತ್ರವಲ್ಲ ಅದನ್ನು ಭಾರತೀಯರಿಗೆ ತಿನಿಸುವಿಕೆಯಲ್ಲೂ ಅವರು ಯಶಸ್ವಿಯಾದರು. ಹಿಂದೆ ವಿದೇಶಗಳಿಂದ ಆಮದು ಆಗುತ್ತಿದ್ದ ಆ ವಿಷದ ಹೊಡಿ ಮೈದಾ ಈಗ ಇಲ್ಲೇ ತಯಾರಾಗುತ್ತ ಇವೆ. ಬೇಕರಿ ತಿಂಡಿಗಳ ಮೂಲ ವಸ್ತು ಇದೇ ಮೈದಾ ..!! ರಬ್ಬರ್ ದೋಸೆ ” ಪೊರೋಟ್ಟಾ” ಇದುವೇ.

ಸಂಶೋಧನಾ ವರದಿಯೊಂದರ ನಿಗಮನ ಪರಿಣಾಮ ಇಂತಿದೆ :- ಪೊರೋಟ್ಟಾ ವನ್ನು ಕರಗಿಸುವ ಶಕ್ತಿ ಶರೀರದಲ್ಲಿ ಇಲ್ಲ. ಬಸವಳಿದು ಬಿದ್ದು ಮರಣ ಹೊಂದುವ ಮಂದಿಗಳಲ್ಲಿ ಹೆಚ್ಚಿನ ಶತಮಾನ ಪೊರೋಟ್ಟಾ ಸ್ನೇಹಿಗಳಂತೆ..!!

ಮೈದಾ” ಬಗ್ಗೆ ಮತ್ತಷ್ಟು ಆತಂಕಕಾರೀ ಸತ್ಯ ;
ಮೈದಾ ತಯಾರಿಯಲ್ಲಿ ಉಪಯೋಗಿಸುವ ALLOXEN ಎಂದರೇನು? ಬಯೋಕೆಮೆಸ್ಟ್ರೀ ಲ್ಯಾಬುಗಳಲ್ಲಿ – ಇನ್ಸುಲಿನ್ – ಪರೀಕ್ಷೆಮಾಡಲು ಬಿಳಿಇಲಿ, ಗಿನಿಹಂದಿ ಇವುಗಳಿಗೆ ALLOXEN ಇಂಜೆಕ್ಟ್ ಮಾಡಲಾಗುತ್ತದೆ. ಆಗ ಆ ಬಡಪಾಯೀ ಮೃಗಗಳು ಮಧುಮೇಹ -DIABETES – ರೋಗಕ್ಕೆ ತುತ್ತಾಗುತ್ತವೆ. ಈ ಕಾರಣದಿಂದ ಮೈದಾ ಶರೀರದೊಳಕ್ಕೆ ಸೇರಿದಾಗ ಡಯಾಬಿಟಿಸ್ ಉಂಟಾಗುವ ಸಾದ್ಯತೆ ತುಂಬಾ ಹೆಚ್ಚು. ಡಯಾಬಿಟಿಸ್ ಜನ್ಯ ರೋಗಗಳು B P, ಕಿಡ್ನಿ ಸಮಸ್ಯೆ, ಲಿವರ್ ಸಮಸ್ಯೆ, ಹೃದಯ ಸಮಸ್ಯೆ, ಗಾಂಗ್ರಿನ್, ನರಸಮಸ್ಯೆ, ನೇತ್ರ ಸಮಸ್ಯೆ..ಸಾಲದೇ ? ಇನ್ನೇನು ಬಾಕಿ..ಇದ್ದರೆ ಅವಕ್ಕೂ..! ಈಗ ಸಕಲ ರೋಗಗಳನ್ನು ಪ್ರಯೋಗ ಪರೀಕ್ಷೆ ಇನ್ನೇನು ಬೇಕಾದರೂ ಮಾಡಿಕೊಳ್ಳಲು ಇಲಿ ಹಂದಿ ತಯ್ಯಾರ್. ಮನುಷ್ಯನ ನವೀನ ರೋಗಗಳ ಮೂಲ ಹೀಗೆಲ್ಲಾ ಎಲ್ಲಿಂದೆಲ್ಲ ಉತ್ಪತ್ತಿಗೆ ಕಾರಣ ನೋಡಿ. ಇನ್ಸುಲಿನ್ ಇಂಜೆಕ್ಷನ್ ನಿಂದ ಸುರುವಾಗಿ ಮಾತ್ರೆ, ಗುಳಿಗೆ, ಪಿಲ್ಸು, E C G , ಡಯಾಲಿಸಿಸ್ಸು, ಸ್ಕಾನಿಂಗು , X ರೆ, ಒಪರೇಷನ್ನು ಎಲ್ಲದಕ್ಕೂ ಮಸ್ತ್ ಮಸ್ತ್ ಗಿರಾಕಿಗಳು ತಯಾರ್. ಕೃತಕ ಆಹಾರ ನಮಗೆ ಮೀಸಲು. ಶ್ರೀಮಂತ ರಾಷ್ಟ್ರಗಳೆನಿಸಿಕೊಂಡ ಪರ್ದೆಷಿಗಳು ಈ ಆಹಾರ ವಸ್ತುಗಳನ್ನು ಬಳಸುವುದೇ ಇಲ್ಲ ಎಂಬುದು ಸತ್ಯ ಸಂಗತಿ. ನಮ್ಮಲ್ಲಿ ಯಾವ ಕಾನೂನಿನಿಂದಲೂ ನುಣುಚಿಕೊಂಡು ಬೆಕ್ಕಾಬಿಟ್ಟಿ ವ್ಯಾಪಾರವಾಗುವ ಮೆಡಿಸಿನ್ ಗಳು ಹಲವು ರಾಷ್ಟ್ರಗಳಲ್ಲಿ ನಿರೋಧಿಸಿರುತ್ತಾರೆ…!
ನಮ್ಮ ಅರೋಗ್ಯ ನಮ್ಮ ಕೈಯಲ್ಲೇ
ಇದೆ ಸ್ವಾಮೀ.

ಮಾಹಿತಿ ಒದಗಿಸಿದವರು : ಶ್ರೀ ಗೋವಿಂದ ಬಳ್ಳಮೂಲೇ.

ನಿವೃತ್ತ ಅಧ್ಯಾಪಕರು, ಕಾಸರಗೋಡು, ಕರ್ನಾಟಕ ಕೇರಳ ಗಡಿ.

ಕುಮಾರ್  ರಾವ್

Advertisements

2 responses

  1. please provide any scintific evidence to your mida’s effects on humans. else its just an time pass article it wont help the people .

  2. The scientific evidence against “Alloxen” is spelt out in this link…http://www.naturalnews.com/008191.html. A simple Google search would have sufficed.

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: