Author Archive: Manjuanth Reddy

ಹೊಸ ವೆಬ್ ವಿಳಾಸದೊಂದಿಗೆ ಕನ್ನಡವೇ ಸತ್ಯ ಬ್ಲಾಗ್

ಸ್ನೇಹಿತರೇ ಇನ್ನುಮುಂದೆ ಕನ್ನಡವೇ ಸತ್ಯ ಬ್ಲಾಗ್ ಹೊಸ ವೆಬ್ ವಿಳಾಸದೊಂದಿಗೆ ಹೊಸ ರೂಪದಲ್ಲಿ (www.newsmirchi.in) ಬರುತ್ತಿದೆ… ದಯವಿಟ್ಟು ಕೆಳಗಿನ ತಾಣಕ್ಕೆ ಭೇಟಿ ನೀಡಿ

Advertisements

ಮೋದಿಯನ್ನು ಸಮರ್ಥ ಆಡಳಿತಗಾರ ಅನ್ನೋದು ಯಾಕೆ ಗೊತ್ತ?

ಅಹ್ಮದಾಬಾದಿನ ಆಟೋ ಚಾಲಕ ಕಿಶನ್ ಸಿಂಗ್ ಮಾತಿನ ಭರದಲ್ಲಿದ್ದ. ’ಈ ಬಾರಿ ಎಲೆಕ್ಷನ್ನಿನಲ್ಲಿ ಮೋದಿಯ ಜಯಭೇರಿ ಖಾತ್ರಿ’ ಎನ್ನುತ್ತಿದ್ದ. ನಾವು ಸುತ್ತಿಬಳಸಿ ಯಾವ ಪ್ರಶ್ನೆಗಳನ್ನು ಕೇಳಿದರೂ ’ಮೋದಿಗೆ ಜೈ’ ಎನ್ನುವುದನ್ನು ಅವನು ಬಿಡಲೇ ಇಲ್ಲ. ’ಆತ ಬಂದುದರಿಂದ ನಮ್ಮೆಲ್ಲರ ಬದುಕಿನ ಮಟ್ಟ ಏರಿದೆ ಸಾರ್’ ಎನ್ನುವಾಗ ಅವನಲ್ಲಿ ಚಿಗುರೊಡೆದ ಆತ್ಮವಿಶ್ವಾಸ ಕಣ್ಣಿಗೆ ರಾಚುತ್ತಿತ್ತು.

ಸೋಮನಾಥ ಮಂದಿರದಿಂದ ಮುವ್ವತ್ತು ಮೈಲು ದೂರದಲ್ಲಿ ಗಾಡಿ ನಿಲ್ಲಿಸಿ ಹಸಿರುಹಸಿರಾಗಿದ್ದ ತೋಟಕ್ಕೆ ನುಗ್ಗಿದೆವು. ಮೈ ಬಗ್ಗಿಸಿ ಬಿರು ಬಿಸಿಲಲ್ಲಿ ದುಡಿಯುತ್ತಿದ್ದ ರೈತನೊಬ್ಬನೊಂದಿಗೆ ನಮ್ಮ ಮಾತುಕತೆ ಶುರುವಾಯ್ತು. ಈ ಬಾರಿಯಾದರೂ ಅಧಿಕಾರ ಚುಕ್ಕಾಣಿ ಬೇರೆಯವರ ಕೈಗೆ ಕೊಡುತ್ತೀರಾ ಎಂದು ಕೇಳೀದ್ದಕ್ಕೆ ಆತನ ಕಣ್ಣು ನಿಗಿನಿಗಿ ಕೆಂಡ. ದಿನಕ್ಕೆ ಎಂಟು ಗಂಟೆ ಮೂರು ಫೇಸ್‌ನ ವಿದ್ಯುತ್ತು, ಉಳಿದ ಹದಿನಾರು ಗಂಟೆ ಸಿಂಗಲ್ ಫೇಸ್‌ನಷ್ಟಾದರೂ ಕರೆಂಟು. ನೀರಿಗೆ ಕೊರತೆಯಿಲ್ಲ, ಶಾಲೆ ಆಸ್ಪತ್ರೆಗಳಿಗೆ ಸಮಸ್ಯೆಯಿಲ್ಲ. ನಮಗೆ ಅಧಿಕಾರ ಬದಲಿಸಬೇಕಿಲ್ಲ ಎಂದುಬಿಟ್ಟ.
ನಲ್ಲಿಯಲ್ಲಿ ನೀರು ಹಿಡಿಯುತ್ತಿದ್ದ ಹೆಂಗಸು, ’ಮೋದಿಯನ್ನು ದೇಶಕ್ಕೆ ಕೊಡುತ್ತೀರಾ?’ ಅನ್ನೋ ಪ್ರಶ್ನೆಗೆ ’ಆಮೇಲೆ ಗುಜರಾತಿಗೆ ಯಾರು?’ ಎನ್ನುವ ಮತ್ತೊಂದು ಪ್ರಶ್ನೆಯ ಮೂಲಕ ಉತ್ತರಿಸಿದಳು. ಅಲ್ಲಿಗೆ ಗುಜರಾತಿನ ಜನರ ಅಂತರಂಗದ ಸಾಕಷ್ಟು ಅನಾವರಣಗೊಂಡಿತ್ತು. ಸುಮಾರು ೩ ಸಾವಿರ ಕಿಲೋಮೀಟರುಗಳ ನಮ್ಮ ಯಾತ್ರೆಯಲ್ಲಿ ಕಹಿ ಅನುಭವವಾದ ಪ್ರಸಂಗಗಳು ಬಲು ಕಡಿಮೆ. ಕಛ್‌ನ ’ಬಚಾವ್’ ಗ್ರಾಮದಲ್ಲಿ ಕಟ್ಟೆಯೊಂದರ ಮೇಲೆ ಕುಳಿತು ಚುನಾವಣೆಯ ಬಗ್ಗೆ ಮಾತನಾಡುತ್ತಾ ಕುಳಿತಿದ್ದಾಗ ಊರಿನವನೊಬ್ಬ ಮೋದಿಗೆ ವಿರುದ್ಧವಾಗಿ ಒಂದಷ್ಟು ಮಾತಾಡತೊಡಗಿದ. ನಮಗೂ ಖುಷಿಯಾಯ್ತು. ಒಬ್ಬನಾದರೂ ಸಿಕ್ಕನಲ್ಲಪ್ಪ ಅಂತ. ಅಷ್ಟರಲ್ಲಿಯೇ ನಾಲ್ಕಾರು ಜನ ಅವನ ಸುತ್ತ ಕುಳಿತರು. ಬಿಸಿಬಿಸಿ Continue reading →

ಧರ್ಮ ಸ೦ಸ್ಥಾಪನಾರ್ಥಾಯ

ಅಶ್ವಥ್ಥನಗರದ ಮಕ್ಕಳು ಬೆಳೆದಿದ್ದೇ ಹಾಗೆ! ಗಾ೦ಧೀಜಿ ಯಾರು ಎ೦ದು ಕೇಳಿದರೆ ಆ ಮಕ್ಕಳು ಹೇಳುತ್ತಿದ್ದ  ಹೆಸರು ಸುಪ್ರಸನ್ನರಾಯರದು! ಊರಿನ ಪ್ರತಿಯೊಬ್ಬ ಮಗುವೂ ಅವರನ್ನು ಕರೆಯುತ್ತಿದ್ದುದು “ ಗಾ೦ಧಿ ತಾತ“ ನೆ೦ದೇ! ಸ್ವಾತ೦ತ್ರ್ಯ ಚಳುವಳಿಯಲ್ಲಿ ಗಾ೦ಧಿಯವರ ಒಡನಾಡಿಗಳಾಗಿದ್ದಕ್ಕೆ ಮಾತ್ರವಲ್ಲ ಅವರಿಗೆ “ನಮ್ಮೂರ ಗಾ೦ಧಿ“ ಎ೦ಬ ಹೆಸರು ಬ೦ದಿದ್ದು, ಗಾ೦ಧೀವಾದವನ್ನು ಅಕ್ಷರಶ ಅನುಸರಿಸಿ, ಅವುಗಳನ್ನೇ ತಮ್ಮ ಜೀವನ ಯಾತ್ರೆಯ ಉದ್ದಕ್ಕೂ ಊರುಗೋಲಾಗಿ ಬಳಸಿಕೊ೦ಡು, ಅದರಲ್ಲಿಯೇ, ತಮ್ಮೂರಿಗೂ ರಾಷ್ಟ್ರಮಟ್ಟದಲ್ಲಿ ಒ೦ದು ಹೆಸರು ತ೦ದುಕೊಟ್ಟಿದ್ದಕ್ಕೆ! ಮುಖ್ಯಮ೦ತ್ರಿ ಪ್ರಧಾನಮ೦ತ್ರಿಗಳನ್ನು ಹಿಡಿದು,ತಮ್ಮ ಕೆಲಸ ಮಾಡಿಸಿಕೊಳ್ಳುವಷ್ಟರ ಮಟ್ಟಿನ ಶಿಫಾರಸು ಇರದಿದ್ದರೂ, ತಮ್ಮೊ೦ದಿಗೇ ಊರಿನ ಜನರನ್ನು ಅದರಲ್ಲಿಯೂ ಯುವಕರನ್ನು ಕರೆದುಕೊ೦ಡು, ಅಹಿ೦ಸಾತ್ಮಕ ಚಳುವಳಿಗಳ ಮೂಲಕವೇ ತಮ್ಮೂರಿಗೆ ಆಗಬೇಕಾದ ಅಷ್ಟೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊ೦ಡಿದ್ದರು, “ಆ೦ದೋಲನ“ ಪತ್ರಿಕೆಯ ಸ೦ಪಾದಕರೂ ಆಗಿದ್ದ ಅವರು ತಮ್ಮ ಪತ್ರಿಕೆಯನ್ನು ಬಳಸುತ್ತಿದ್ದುದು, ಗಾ೦ಧೀವಾದಗಳ ಪ್ರಚಾರಕ್ಕಾಗಿ ! ತನ್ಮೂಲಕ ಸಮಕಾಲೀನ ರಾಜಕೀಯ ನಾಯಕರುಗಳ ಭ್ರಷ್ಟಾಚಾರ, ಅನೀತಿ, ಕುಟಿಲೋಪಾಯಗಳನ್ನು ಜನರಿಗೆ ತಿಳಿಸಿಕೊಡುತ್ತಿದ್ದರು. ಇಡೀ ಊರಿಗೇ ರಾಯರ ವ್ಯಕ್ತಿತ್ವವೊ೦ದು ಕಲಶಪ್ರಾಯವಾಗಿತ್ತು!ಸ೦ಪೂರ್ಣ ಕೃಷಿಕರು, ಕೂಲಿ ಕಾರ್ಮಿಕರಿ೦ದ ತು೦ಬಿದ್ದ, ಅಶ್ವಥನಗರಕ್ಕೆ ಅ೦ಗನವಾಡಿಯಿ೦ದ ಹಿಡಿದು,ಸರ್ಕಾರೀ ಆಸ್ಪತ್ರೆ,ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳು, ರ೦ಗಮ೦ದಿರ, ಊರನ್ನು ಒ೦ದು ಸುತ್ತು ಹಾದುಹೋಗುವ ಡಾ೦ಬರು ರಸ್ತೆ, ಈ ಎಲ್ಲವುಗಳ ನಿರ್ಮಾಣದ ಹಿ೦ದೆಯೂ ರಾಯರ ಛಲವಿತ್ತು, ಊರ ಯುವಕರ ಬಲವಿತ್ತು… ತಮ್ಮ ವಾರ್ಷಿಕ ಕೃಷಿಯ ಆದಾಯದ ಅರ್ಧಪಾಲನ್ನು ಊರ ಹಿತಕ್ಕಾಗಿಯೇ ಬಳಸುತ್ತಿದ್ದ ರಾಯರ ವ್ಯಕ್ತಿತ್ವಕ್ಕೆ ಮ೦ಕು ಬಡಿದಿದ್ದು   ಅವರ ಶಿಷ್ಯನೇ ಆಗಿದ್ದ ರೇವೂಗೌಡ ರಾಜಕೀಯ ರ೦ಗಕ್ಕೆ ಧುಮುಕಿದ ಮೇಲೆ!

 ೨

ಇವತ್ತೇನೋ ರೇವೂಗೌಡ ರಾಜಕೀಯದಲ್ಲಿ ದೊಡ್ಡ ಮನುಷ್ಯನಾಗಿರಬಹುದು! ಅವನೂ ರಾಯರ ಶಿಷ್ಯನೇ! ಒಬ್ಬನೇ ಗುರುವಿನ ಎರಡು ಅಸಮಾನ ಮನಸ್ಸುಗಳನ್ನು ಹೊ೦ದಿದ ಇಬ್ಬರು ವ್ಯಕ್ತಿಗಳಾಗಿದ್ದರು ರೇವೂ ಮತ್ತು ರಾಯರ ಮಗ ನ೦ದನ್! ಒಬ್ಬನೋ ಊರಿನಲ್ಲಿ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ, ಎ೦ಥ ನೀಚ ಕುಟಿಲೋಪಾಯಗಳನ್ನೂ ಹೆಣೆಯಬಲ್ಲ ವಿಕೃತನಾದರೆ ಮತ್ತೊಬ್ಬ ಎ೦ದಿಗೂ ಅಪ್ಪ ಹಾಕಿದ ಗೆರೆಯನ್ನು ದಾಟದವ. ಇಡೀ ಊರಿಗೇ ಊರೇ ಅವನ ಎದುರಾಗಿದ್ದರೂ, ತಾಳ್ಮೆಯಿ೦ದ  ತನ್ನ ಗಾ೦ಧೀ ನೀತಿಯಿ೦ದಲೇ ಎ೦ತಹವನ್ನೂ ಸ೦ಭಾಳಿಸುತ್ತೇನೆ೦ಬ ಛಲ ಹೊ೦ದಿದವನು ನ೦ದೂ! ರೇವೂ ಗೌಡನಿಗೆ ತನ್ನದೇ ಊರಿನಲ್ಲಿ ತನ್ನ ಎದುರಾಗಿ ಮತ್ತೊ೦ದು ಶಕ್ತಿಯ ಕೇ೦ದ್ರ ಉಧ್ಬವಿಸುವುದು Continue reading →

ಹದಿನಾಲ್ಕರ ಬಾಲೆಗೆ ಹೆದರಿದ ತಾಲಿಬಾನಿ ಹೇಡಿಗಳು!

’ನನ್ನ ಪಾಕಿಸ್ತಾನದ ಕನಸು ಇಂತಹದುಲ್ಲ. ಅಲ್ಲಿ ಶಾಂತಿ ಇರಬೇಕು. ನೆರೆಯವರೊಂದಿಗೆ ಸೌಹಾರ್ದ ಗೆಳೆತನವಿರಬೇಕು. ನನ್ನ ಪಾಕಿಸ್ತಾನದಲ್ಲಿ ಹಗರಣಗಳಿರಬಾರದು. ಶತ್ರುಗಳಿಲ್ಲದ ರಾಷ್ಟ್ರವಾಗಿರಬೇಕು ಅದು.’ ಹಾಗಂತ ಪಟಪಟನೆ ಮಾತನಾಡುತ್ತ ಇಂತಹದೊಂದು ರಾಷ್ಟ್ರದ ನಿರ್ಮಾಣಕ್ಕೆ ಅಗತ್ಯಬಿದ್ದಲ್ಲಿ ಓದು ಮುಗಿಸಿ ರಾಜಕಾರಣಕ್ಕೂ ಧುಮುಕುವೆನೆಂದು ಪತ್ರಕರ್ತರ ಮುಂದೆ ಹೇಳಿದ್ದು ಬೆನಜಿರ್ ಭುಟ್ಟೋ ಅಲ್ಲ. ಹದಿಮೂರರ ಬಾಲೆ ಮಲಾನಾ ಯೂಸುಫ್ ಜಾಯ್. ಹೌದು. ಮೊನ್ನೆ ದುಷ್ಟ ತಾಲಿಬಾನಿಗಳು ಗುಂಡು ಹಾರಿಸಿ ಕೊಲ್ಲುವ ಯತ್ನ ನಡೆಸಿದ್ದು ಈ ಹುಡುಗಿಯ ಮೇಲೆಯೇ. ಈಗ ಅವಳಿಗೆ ಹದಿನಾಲ್ಕು ವರ್ಷ ಮಾತ್ರ. ತಾಲಿಬಾನ್ ಎನ್ನುವ ಪದ ಕ್ರೌರ್ಯಕ್ಕೆ ಪರ್ಯಾಯವಾಗಿ ನಿಂತಿರುವುದು ಇಂದೇನಲ್ಲ. ಆಪ್ಘಾನಿಸ್ತಾನದ ಪುಷ್ತೂನ್ ಬುಡಕಟ್ಟಿನ ಜನರ ಮಹತ್ವಾಕಾಂಕ್ಷೆಯ ಭಾಗವಾಗಿ ಹುಟ್ಟಿದ ದಿನದಿಂದ ಅದು ಹಾಗೆಯೇ. ಅಫ್ಘಾನಿಸ್ತಾನ ಗಾಂಧಾರ ದೇಶವಾಗಿದ್ದ ಕಾಲದಿಂದಲೂ ಭಿನ್ನಭಿನ್ನ ಬುಡಕಟ್ಟುಗಳ ಭೂಪ್ರದೇಶ. ಅದರಲ್ಲಿ ಸೂರ್ಯಚಂದ್ರರನ್ನು ಆರಾಧಿಸುವ ಪ್ರಕೃತಿ ಪೂಜಕರಿಂದ ಹಿಡಿದು ಸಗುಣ ಸಾಕಾರ ಮೂರ್ತಿಪೂಜಕರೂ ಇದ್ದರು. ನಡುವಲ್ಲಿ ಒಂದಷ್ಟು ಕಾಲ ಬುದ್ಧನ ಅನುಯಾಯಿಗಳ ಶಾಂತಿಯ ಪ್ರಭೆಯಿಂದಲೂ ಬೆಳಗಿತು ಆಫ್ಘಾನಿಸ್ತಾನ. ಆನಂತರದ ದಿನಗಳಲ್ಲಿ ದಾಳಿಗೆ ಒಳಗಾಗಿ ಕ್ರಮೇಣ ಇಸ್ಲಾಮ್ ವ್ಯಾಪ್ತಗೊಂಡಿತು. ಹಾಗಂತ ಇಸ್ಲಾಮ್ ಕೂಡ ಏಕಪ್ರಕಾರವಾಗಿರಲಿಲ್ಲ. ಆಯಾ ಬುಡಕಟ್ಟುಗಳು ತಮ್ಮದೇ ಆದ ಆಚರಣೆಗಳೊಂದಿಗೆ ಬದುಕಿದ್ದವು. ಸೂಫಿಸಂತರುಗಳು ಹೊಸ ಪರಂಪರೆಯನ್ನು ಹುಟ್ಟುಹಾಕಿದ್ದರು. ತಮ್ಮ ರೀತಿಯೇ ಸರಿ ಎನ್ನುವ ಕಾದಾಟಗಳು ಆಗೀಗ ನಡೆಯುತ್ತಲೇ ಇದ್ದವು. ಮೇಲುಗೈ ಸಾಧಿಸಿ ಇಡಿಯ ಪ್ರಾಂತವನ್ನು ಆಳಬೇಕೆಂಬ ತಹತಹವೂ ಸಹಜವಾಗೇ ಇತ್ತು. ಈ ಹಂತದಲ್ಲಿ ಪುಷ್ತೂನ್ ಬುಡಕಟ್ಟಿನ ಜನ ವಹಾಬಿಗಳ, ದಿಯೋಬಂದಿಗಳ ಸಿದ್ಧಾಂತದ ಆಧಾರದ ಮೇಲೆ ಕಟ್ಟಿದ ಕಟ್ಟರ್ ಇಸ್ಲಾಮೀಪಂಥ ’ತಾಲಿಬಾನ್’. ಮುಲ್ಲಾ ಮುಹಮ್ಮದ್ ಓಮರ್‌ನ ನೇತೃತ್ವ ಅದಕ್ಕೆ ದೊರೆಯಿತು. ಸೌದಿಯ ಹಣ, ಪಾಕಿಸ್ತಾನದ ಜನ ಎರಡೂ ವಿಪುಲವಾಗಿ ಹರಿಯಿತು. ೧೯೯೬ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನ್ ಚುಕ್ಕಾಣಿಯನ್ನೆ ಹಿಡಿದುಬಿಟ್ಟಿತು.

ಅಲ್ಲಿಂದಾಚೆಗೆ ಅಫ್ಘಾನಿಸ್ತಾನದ್ದು ಕಣ್ಣೀರಿನ ಕತೆ. ತಾಲಿಬಾನಿಗೆ ಆಧುನಿಕತೆ ಹಿಡಿಸದು. ಹೀಗಾಗಿ ಷರೀಯತ್ ಕಾನೂನುಗಳನ್ನು ಒತ್ತಡದಿಂದ ಹೇರಿತು. ಭಾರತದಲ್ಲಿ ಜನ್ಮ ತಳೆದ ದಿಯೋಬಂದಿಗಳ ಷರೀಯತ್ ವಿವರಣೆಗಳ ಆಧಾರದ ಮೇಲೆ ರಾಷ್ಟ್ರ ನಡೆಯಬೇಕಾಯ್ತು. ಹೀಗಾಗಿ ಹಂದಿ ಮತ್ತು ಅದರ ಎಲ್ಲ ಉತ್ಪನ್ನಗಳಿಗೆ ಮೊದಲ ನಿಷೇಧ ಬಿತ್ತು. ಮನುಷ್ಯನ ಕೂದಲಿನಿಂದ ಮಾಡಿದ ವಸ್ತುಗಳನ್ನು ಬಳಸುವಂತಿರಲಿಲ್ಲ. ಹೋಟೆಲ್‌ಗಳನ್ನು ಮುಚ್ಚಲಾಯ್ತು. ಸಿನಿಮಾಗಳು ಸ್ತಬ್ಧಗೊಂಡವು. ಸಂಗೀತದ ಕಂಠ ಒತ್ತಲಾಯ್ತು. ಟೀವಿ-ಟೇಪ್‌ರೆಕಾರ್ಡರುಗಳಿರಲಿ, ಕಂಪ್ಯೂಟರ್ ಅನ್ನೂ ಬಳಸುವಂತಿರಲಿಲ್ಲ. ಉಗುರು ಬಣ್ಣ ಹಚ್ಚುವಂತಿರಲಿಲ್ಲ, ಪಟಾಕಿ ಸಿಡಿಸುವಂತಿರಲಿಲ್ಲ. ನಿಷೇಧದ ಪಟ್ಟಿ ದೊಡ್ಡದಿತ್ತು. ಹೆಣ್ಣುಮಕ್ಕಳು ಒಬ್ಬೊಬ್ಬರೇ ರಸ್ತೆಯಲ್ಲಿ ತಿರುಗಾಡುವಂತಿರಲಿಲ್ಲ. ಹಾಗೆ ತಿರುಗಾಡುವಾಗ ಸಂಬಂಧಿಕರನ್ನು ಬಿಟ್ಟು ಬೇರೆ ಗಂಡಸಿರುವುದು ಪತ್ತೆಯಾದರೆ ಅವಳ ಕೈಕಾಲುಗಳನ್ನು ಬಂಧಿಸಿ ಛಡಿ ಏಟಿನ ಶಿಕ್ಷೆ ನೋಡಲಾಗುತ್ತಿತ್ತು. ರಸ್ತೆಯಲ್ಲಿ ಕಾರುಗಳನ್ನು ಅಡ್ಡಗಟ್ಟಿ ಸ್ಟೀರಿಯೋ ಸಿಕ್ಕರೆ ಅಂಥವನನ್ನು ಸೈಕಲ್ ಚೈನಿನಿಂದ ಬಡಿಯಲಾಗುತ್ತಿತ್ತು. ಓಹ್! ನಾವು ಕೈಮುಟ್ಟಿದ್ದನ್ನು, ಮೈಮುಟ್ಟಿದ್ದನ್ನೆಲ್ಲ ತಾಲಿಬಾನ್ ಎಂದು ಬುದ್ಧಿಜೀವಿಗಳು ಕರೆದುಬಿಡುತ್ತಾರಲ್ಲ, ಅಂಥವರು ಬಿಬಿಸಿ ಪ್ರಕಟಪಡಿಸಿರುವ Continue reading →

ಫೇಸ್ ಬುಕ್ಕಾ? ಫೇಕ್ ಬುಕ್ಕಾ?? – ಭಾಗ-೩

“ಇಷ್ಟೇ ಅಂಕಲ್” ಅಂದ್ಲು ರಾಜಲಕ್ಷ್ಮಿ. “ಮತ್ತೆ ಈಗ ನಿಮ್ಮ ಪ್ರಾಬ್ಲಂ ಏನು? ನೀವು ಯಾಕೆ ಜಗಳ ಆಡ್ತಿದ್ರಿ?” ಅಂತ ರಾಮರಾಯರು ಕೇಳಿದ್ರು. “ಅವನು ನನಗೆ ಮೋಸ ಮಾಡ್ದ, ಯಾಕೆ ಅಂತ ಆ ಗೂಬೆನ್ನ ಕೇಳಿ” ಅಂತ ಪುನಃ ಅಳಕ್ಕೆ ಶುರು ಮಾಡಿದ್ಲು. “ಸರಿ, ಅಳ್ಬೇಡ, ನೋಡು ನೀನು ಭಾಗ-2  ಸುಳ್ಳು ಹೆಸರಿಂದ, ಅವನಿಗೆ ಬರೀ ಸುಳ್ಳು ಹೇಳಿ ಮೋಸ ಮಾಡ್ದೆ. ಅವನೂ ಹಾಗೇ ಮಾಡ್ದ, ಸರಿ ಹೋಯಿತು, ಇಬ್ಬರೂ ನಿಮ್ಮ ನಿಮ್ಮ ಸುಳ್ಳಿನ ಬಲೆಯಿಂದ ಸಿಕ್ಕಾಕೊಂಡು ನೀನು ಮೋಸ ಮಾಡ್ದೆ, ನೀನು ಮೋಸ ಮಾಡ್ದೆ ಅಂತ ಕೂಗಾಡಿ, ಜಗಳ ಮಾಡಿಕೊಂಡರೆ ನಿಮ್ಮ ಪ್ರಾಬ್ಲಂ ಸಾಲ್ವ್ ಆಗತ್ತಾ?, ಆಗಲ್ಲಾ ಅಲ್ವಾ, ಅದಕ್ಕೆ ನೀವು ಒಂದು ಕೆಲ್ಸ ಮಾಡಿ ಇನ್ಮೇಲೆ ಜಗಳ ಗಿಗಳ ಎಲ್ಲಾ ಬಿಟ್ಟಾಕಿ ಇಬ್ಬರೂ ಫ್ರೆಂಡ್ಸ್ ಆಗ್ರಿ ಆಯ್ತಾ?” ಅಂತ ಕೇಳಿದ್ರು. ಇಬ್ಬರೂ ಒಬ್ಬರ ಮುಖವನ್ನು ಒಬ್ಬರು ನೋಡ್ಕೊಂಡು ಮೆಲ್ಲಗೆ ನಕ್ಕು ಹ್ಯಾಂಡ್ ಶೇಕ್ ಮಾಡಿಕೊಂಡರು. “ನೋಡಿ ಈಗ ನೀವು ಜಾಣ ಮಕ್ಕಳು” ಅಂದ್ರು ರಾಮರಾಯರು.

 “ಲೇ, ಸಾವಿತ್ರಿ ಮಕ್ಕಳು ಇಲ್ಲೇ ಊಟ ಮಾಡ್ಲಿ, ಅವರಿಗೆ ಊಟಕ್ಕೆ ಅರೇಂಜ್ ಮಾಡು” ಅಂತ ಹೇಳಿ, ಏನೋ ಜ್ನಾಪಿಸಿಕೊಂಡವರಂತೆ ನಂಗೆ ನಿಮ್ಮ ಕಥೆಯಲ್ಲಿ ಕೆಲವು ಅರ್ಥ ಆಗಿಲ್ಲ. ಅದೆಲ್ಲಾ ನೀವು ಕ್ಲಿಯರ್ ಮಾಡಿದ್ರೆ ಮಾತ್ರ ಊಟ, ಇಲ್ಲದಿದ್ರೆ ಇಲ್ಲಾ, ಸರೀನಾ” ಅಂದ್ರು. “ಏನೋ ಬೇಕೋ ಕೇಳಿ ಕ್ಲಿಯರ್ ಮಾಡ್ತೀವಿ, ಆದ್ರೆ ಊಟ ಬೇಡ ಅಂಕಲ್” ಅಂದ್ಲು ರಾಜಲಕ್ಷಿ. ಸಾವಿತ್ರಿ “ನೋಡಮ್ಮಾ ನಿಮ್ಮನ್ನು ನೋಡಿದ್ರೆ ನನ್ನ ಮೊಮ್ಮಕ್ಕಳನ್ನ ನೋಡಿದ ಹಾಗೆ ಆಗತ್ತೆ, ಇಲ್ಲೇ ಊಟ ಮಾಡಿ, ನಾವಿರೋದೇ ಇಬ್ರು ಇಲ್ಲಿ, ನೀವು ನಮ್ಮ ಮನೆಗೆ ಹೊಸ್ದಾಗಿ ಬಂದಿದ್ದೀರಿ, ನಮ್ಮ ಮುಂದೆ ನಿಮ್ಮ ಕಥೆಯನ್ನೆಲ್ಲಾ ಹೇಳಿದ್ರಿ, ನಮಗೂ ಸಂತೋಷ ಆಯ್ತು. ಊಟ ಮಾಡಿದ್ರೆ ಇನ್ನೂ ಸಂತೋಷ ಆಗತ್ತೆ” ಅಂದ್ರು. “ಸರಿ ಆಂಟಿ, ಕತ್ತಲಾಗ್ತಾ
Continue reading →

ಹಂಗಿನ ದೀಪವ ಹುಡುಕುತಾ

ಕತ್ತಲೆಯಲ್ಲಿ ಮಂಕು ಬೆಳಕು
ನೋವಿನಲ್ಲೂ ಸಣ್ಣ ನಗು
ಅನ್ನದಲ್ಲಿ ಸಣ್ಣ ಕಲ್ಲು

ಸಾರಿಗೆ ಒಂದಂಶ ಉಪ್ಪು ಜಾಸ್ತಿ
ಎಲ್ಲವೂ ಸಾಮಾನ್ಯ..
ತೆಗೆಯಲೇಬೇಕು,
ಸಾವರಿಸಿಕೊಂಡು ಸೇವಿಸಲೇಬೇಕು
ದೀಪ ಯಾವುದಾದರೇನು?
ಎಣ್ಣೆ ಯಾವ ಬೀಜದಾದರೇನು?
ಬೆಳಕು ಸಾಕಲ್ಲವೇ?
ಸಣ್ಣ ಬೆಳಕು ಸಾಕಲ್ಲವೇ!
ನಿಮಗೆ ನಮ್ಮ ಕೈ
ನಮ್ಮ ಕೈ ನಿಮಗೆ
ಪಿಡಿದು ಸಾಗಲು…
ಸಾಗುವ
ದೂರ ಬಹುದೂರ…
ಇನ್ನೊಂದು ದೀಪವ ಹುಡುಕುತಾ…

-ಫಕೀರ

Shridhar Banvasi

ಕನಿಕರ

ಪ್ರತಿ ಮನೆಯಲೂ
ಬೆಳಕಿಗಾಗಿ ಹಚ್ಚಿಟ್ಟ
ಸಾಲು ಸಾಲು

ಹಣತೆಗಳ ಮಿಣುಕು
ಬೆಳಕ ಕಂಡು,
ಕನಿಕರಗೊಂಡು,
ತನ್ನ ಬೆಳಕಿಂದ
ಜಗವ ಬೆಳಗಲು
ಬಂದೇಬಿಟ್ಟನೇ ನೇಸರ..


—ಕೆ.ಗುರುಪ್ರಸಾದ್

ಛತ್ರಪತಿ ಶಿವಾಜಿಯ ತಂದೆಯ ಸಮಾಧಿಗೆ ಸ್ಥಳ ಒದಗಿಸಿದವರು ಕೆಳದಿಯರಸರು

ಶಿವಾಜಿಯ ತಂದೆ ಶಹಾಜಿ ಭೋಸ್ಲೆ ಕರ್ನಾಟಕದ ಹೋದಿಗ್ಗೆರೆ (ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ) ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಕುದುರೆಯಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ೧೬೬೫ರಲ್ಲಿ ಮೃತನಾದಾಗ ಆತನ ದೇಹವನ್ನು ಹೋದಿಗ್ಗೆರೆಯಲ್ಲೇ ಸಮಾಧಿ ಮಾಡಲಾಯಿತು. ಆಗ ಹೋದಿಗ್ಗೆರೆ ಕೆಳದಿಯ ರಾಜ್ಯದ ಸೀಮೆಯಲ್ಲೇ ಬರುತ್ತಿದ್ದು, ಶಹಾಜಿಯನ್ನು ಆ ಗ್ರಾಮದಲ್ಲೇ ಸಮಾಧಿ ಮಾಡಲು ಅವಕಾಶ ಕೊಟ್ಟದ್ದು ಕೆಳದಿಯ ಅರಸರೇ. ಸಮಾಧಿ ಮಾಡಲು ಅವಕಾಶ ಕೊಡಬೇಕೇ, ಬೇಡವೇ ಎಂಬ ಬಗ್ಗೆ ದೀರ್ಘವಾದ ಮಂತ್ರಾಲೋಚನೆ ನಡೆದು, ಕೊನೆಗೆ ಶಹಾಜಿ ಮರಣ ಹೊಂದಿದ ಸ್ಥಳದಲ್ಲೇ ಸಮಾಧಿಯನ್ನು ಗೌರವೋಚಿತವಾಗಿ ನಿರ್ಮಿಸಲಾಯಿತೆಂದು ಹೇಳಲಾಗಿದೆ. ಈ ಸಮಾಧಿಯನ್ನು ಕರ್ನಾಟಕ ಸರ್ಕಾರವು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಶಿವಾಜಿಯ ಅನುಯಾಯಿಗಳೆಂದು ಹೇಳಿಕೊಂಡು ಮರಾಠಿ ಭಾಷೆಯನ್ನು ಮುಂದಿಟ್ಟುಕೊಂಡು ಬೆಳಗಾವಿಯಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವವರು ಈ ವಿಷಯವನ್ನು ಗಮನಿಸಬೇಕು. ಸ್ವಭಾಷಾಪ್ರೇಮ ಒಳ್ಳೆಯದು. ಆದರೆ ಅದು ಪರಭಾಷಾ ದ್ವೇಷವಾಗಿ ಬೆಳೆಯಬಾರದು, ಬೆಳೆಸಬಾರದು. ಒಂದು ಭಾಷೆ ಬೆಳೆಯುವುದು, ಅಳಿಯುವುದು ಅದನ್ನು ಬಳಸುವ ರೀತಿಯಿಂದ. ಅನ್ಯ ಭಾಷಿಗರೊಡನೆ ಹೋರಾಡುವುದರಿಂದ, ಕಚ್ಚಾಡುವುದರಿಂದ ಅಲ್ಲ.

-ಕ.ವೆಂ.ನಾಗರಾಜ್.
**********

ಫೇಸ್ ಬುಕ್ಕಾ? ಫೇಕ್ ಬುಕ್ಕಾ?? – ಭಾಗ-೨

ಸಾವಿತ್ರಮ್ಮನವರು ಕೊಟ್ಟ ಕಾಫಿಯನ್ನು ಹೀರಿ “ತುಂಬಾ ಚೆನ್ನಾಗಿದೆ ಆಂಟಿ ಕಾಫಿ, ನಿಜಕ್ಕೂ ಸೂಪರ್, ಇಂಥ ಕಾಫಿಯನ್ನು ನಾನು ನನ್ನ ಜನ್ಮದಲ್ಲೇ ಕುಡಿದಿಲ್ಲ, ಇಂಥ ಕಾಫಿ, ಕಾಫಿ ಡೇ ನಲ್ಲೂ ಸಿಗಲ್ಲ ಅಲ್ವೇನೋ ದರ್ಶನ್” ಅಂದ್ಲು. ದರ್ಶನ್ ಹೌದೆಂದು ತಲೆ ಆಡಿಸಿದ. ಸಾವಿತ್ರಮ್ಮನವರ ಮುಖ ಊರಗಲವಾಯಿತು. ರಾಮರಾಯರು “ನಾನು ಹೇಳ್ಳಿಲ್ವಾ, ನನ್ನ ಹೆಂಡ್ತಿನೂ ಸೂಪರ್, ಅವಳು ಮಾಡುವ ಕಾಫಿನೂ ಸೂಪರ್” ಅಂದ್ರು, ಸಾವಿತ್ರಮ್ಮನವರ ಮುಖ ಕೆಂಪಗಾಯಿತು ನಾಚಿಕೆಯಿಂದ. ರಾಮರಾಯರು “ಈಗ ಹೇಳಿ ನಿಮ್ಮ ಕಥೆ? ಅದೇನೋ ಕೇಳೋಣ” ಅಂದ್ರು. ಭಾಗ-1
“ಸರಿ, ಅಂಕಲ್, ಹೇಳ್ತೀನಿ. ಇವನ ಹೆಸ್ರು ನಾಗರಾಜ, ನನ್ನ ಹೆಸ್ರು ರಾಜಲಕ್ಷಿ, ನಾವು ಫೇಸ್ ಬುಕ್ ಪ್ರೆಂಡ್ಸ್. ಫೇಸ್ ಬುಕ್ ನಲ್ಲಿ ನಾನು ರಮ್ಯಾ ಅಂತ ಹೆಸ್ರು ಚೇಂಜ್ ಮಾಡ್ಕೊಂಡಿದ್ದೀನಿ. ಇವನಿದ್ದಾನಲ್ಲಾ ಇವನು ಫೇಸ್ ಬುಕ್ ನಲ್ಲಿ ಸ್ಟೈಲಾಗಿ ದರ್ಶನ್ ಅಂತ ಹೇಳ್ಕೊಂಡಿದ್ದ. ನಾನು ಇವನ ಫೋಟೋ ನೋಡಿ, ಒಳ್ಳೆ ಮಾಡಲ್ ಥರ ಇದ್ದಾನಲ್ಲಾ ಅಂತ ಮೋಸ ಹೋಗಿ ಇವನಿಗೆ ಫ್ರೆಂಡ್ ಆದೆ. ನೋಡಿ ಹೇಗಿದ್ದಾನೆ ರಿಯಲ್ ಆಗಿ ಒಳ್ಳೆ ರೌಡಿ ಥರಾ, ಸ್ಟುಪಿಡ್ ಅಂದ್ಲು”, ಮಧ್ಯದಲ್ಲಿ ಬಾಯಿ ಹಾಕಿ ನಿನ್ನ ಮುಖ ಕನ್ನಡಿಯಲ್ಲಿ ನೋಡ್ಕೋ, ಕೆಟ್ಟ ಕೋತಿ ಥರ Continue reading →

ಫೇಸ್ ಬುಕ್ಕಾ? ಫೇಕ್ ಬುಕ್ಕಾ?? – ಭಾಗ-೧

ರಾಮರಾಯರದು ಘನತೆಯುಳ್ಳ ವ್ಯಕ್ತಿತ್ವ, ಜನಾನುರಾಗಿ, ಕಷ್ಟ ಎಂದು ಬಂದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಮನಸ್ಸು. ಬಹಳಷ್ಟು ಅನುಕೂಲವಾಗಿದ್ದಾರೆ. ಸ್ನೇಹಿತ, ಬಂಧು ಬಳಗದ ಮಧ್ಯೆ ರಾಮರಾಯರಿಗೆ ವಿಶಿಷ್ಟ ಸ್ಥಾನ ಮಾನ. ಇವರ ಹೆಂಡತಿ ಸಾವಿತ್ರಮ್ಮ. ಗಂಡನಿಗೆ ತಕ್ಕದಾದ ಹೆಂಡತಿ. ಇವರದು ಅನ್ನೋನ್ಯ ದಾಂಪತ್ಯ. ಮುಂದಿನ ತಿಂಗಳು ಇವರ ವಿವಾಹವಾಗಿ ೫೦ ವರ್ಷವಾಗುತ್ತದೆ. ರಾಮರಾಯರು ಮತ್ತು ಸಾವಿತ್ರಮ್ಮ ಜಯನಗರದ ೩ನೇ ಬಡಾವಣೆಯಲ್ಲಿ ವಾಸವಾಗಿದ್ದಾರೆ.  ಮಗ ಅಮೇರಿಕಾದಲ್ಲಿ, ಮಗಳು ಇಂಗ್ಲೇಂಡಿನಲ್ಲಿ ನೆಲೆಸಿದ್ದಾರೆ. ಇಬ್ಬರಿಗೂ ಮದುವೆ ಆಗಿದೆ. ಮಕ್ಕಳೂ ಇದ್ದಾರೆ. ವರ್ಷಕೊಮ್ಮೆ ಇಲ್ಲಿಗೆ ಬಂದು ಒಂದು ತಿಂಗಳಿದ್ದು ಪುನಃ ಹೊರಟುಬಿಡುತ್ತಾರೆ.ಮೊದಲು ರಾಮರಾಯರು ಇಲ್ಲೇ ಜಯನಗರದ ೪ನೇ ಬಡಾವಣೆಯಲ್ಲಿ ಒಂದು ಹೋಟೆಲ್ ನಡೆಸುತ್ತಿದ್ದರು. ಮೂರು ತಿಂಗಳ ಹಿಂದೆ, ಹೋಟೇಲನ್ನು ಮಾರಿಬಿಟ್ಟಿದ್ದಾರೆ. ಈಗ ಇರುವ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಮಗ, ಸೊಸೆ, ಮೊಮ್ಮಕ್ಕಳದು ಒಂದೇ ಹಠ ಇಲ್ಲೇ ಅಮೇರಿಕಾಕ್ಕೇ ಬಂದು ಬಿಡಿ ಎಂದು. ರಾಮರಾಯರಿಗೆ ಹೋಗಲು ಇಷ್ಟವಿಲ್ಲ. ತಮ್ಮ ಕೊನೆಯ ಜೀವನ ಇಲ್ಲೇ ಕಳೆಯಲು ಇಚ್ಚಿಸಿದ್ದಾರೆ. ಆದರೆ ಮಗ, ಸೊಸೆಯ ಬಲವಂತ ದಿನವೂ ಹೆಚ್ಚಾಗುತ್ತಿದೆ, ಹಾಗಾಗಿ ಇದ್ದ ಹೋಟೆಲ್ ಅನ್ನು ಮಾರಾಟ ಮಾಡಿ ಅಮೇರಿಕಾಕ್ಕೆ ಹೋಗಲು ಕೊನೆಗೂ ನಿಶ್ಚಯಿಸಿದ್ದಾರೆ. ತಮ್ಮ ಕೊನೆ ಕಾಲದಲ್ಲಿ ಮಗನ ಜೊತೆ ಇದ್ದು ಮೊಮ್ಮಕ್ಕಳೊಂದಿಗೆ

ನೆನಪುಗಳ ಸಂತೆ

ಮನದ ಮೈದಾನದಲ್ಲಿದೆ ನೆನಪುಗಳ ಸಂತೆ…
ಅದರಲೆಲ್ಲೋ ಕಳೆದು ಹೋಗಿರುವೆ ನಾನು…,
ಎಂಬುದೇ ನನಗೊಂದು ದೊಡ್ಡ ಚಿಂತೆ…
ಹುಡುಕಿ ಕೊಡು ಬಾರೋ ಗೆಳೆಯಾ…
ನನ್ನ ಮೇಲೆ ಉಪಕಾರವ ಮಾಡಿದಂತೆ…!

****************************

ಪ್ರೀತಿ ಚಿಗುರಿದರೆ ಸಿಹಿ ಜೇನಿನಂತೆ…
ಆ ಮೇಲೆ ಎಲ್ಲವೂ ಪ್ರೆಮಮಯವಂತೆ…
ಮಾತನಾಡಿದರೆ ನಗುವಿನ ಸಹಿಯಂತೆ…
ಎದುರಾದಾಗ ಸಂತಸದ ಹೊನಲಂತೆ…
ದೂರಾದರೆ ಕಣ್ಣೀರ ಪಾಲಂತೆ…!

****************************

ನನ್ನಲಿ ಕನಸು ಎಂಬ ಅಲೆಯೊಂದು
ಮುಗಿಲೆತ್ತರಕೆ ಏರಿ ಮುಂಬರುತ್ತಿದೆ ಹಾಗೆ…!
ಇದು ಕನಸೋ ಇಲ್ಲಾ ನನಸೋ ನಾ ತಿಳಿಯಲಿ ಹೇಗೆ…?
ಇದರ ಎದುರು ನಿಂದು ಸತ್ಯವ ಇಣುಕಿ ನೋಡಲಿ ಹೇಗೆ…?

****************************

ಕಂಗಳು ಕದಲದಂತಿದೆ…
ತುಟಿಯು ನುಡಿಯದಂತಿದೆ…
ಈ ಹೃದಯವು ಮಾತ್ರ
ನೋವಿನಲ್ಲಿ ಚಡಪಡಿಸುತ್ತಿದೆ…
ಮತ್ತೆ ನಿನ್ನ ನೋಡಲು…
ನಿನ್ನ ಮಾತು ಕೇಳಲು…!!

ನಾನು ಮತ್ತು ನನ್ನವಳ ನಡುವೆ…

ಏನೇ ಹೇಳು ನೀನು.. ಏನೋ ಆಗಿದ್ದೆ ನಾನು!
ನಿನ್ನಿ೦ದಾಗಿ ಹೀಗಾಗಿರುವೆ ನಾನು…
ಒಪ್ಪತಕ್ಕ ಮಾತಲ್ಲವೇನೇ?

ಇಲ್ಲಾರೀ..ತವರೂರ ಬಿಟ್ಟು ಹೊರಟಾಗ
ನನ್ನ ಭಾವವಾಗಿದ್ದವರು ನೀವು
ಹೊಸಮನೆ-ಹೊಸತನ.. ಎಲ್ಲೆಲ್ಲೂ ಭಯ೦ಕರ ಮೌನ!
ನನ್ನೊಳಗಿನ ಮೌನಕ್ಕೆ ಮಾತಾದವರು ನೀವು..
ಬೇಸರದ ಛಾಯೆಯ ನೀಗಿಸಿದವರು ನೀವು..
ಆಗಾಗ ತಲೆಯನ್ನಪ್ಪುವ ಹಿತವಾದ ಕರಸ್ಪರ್ಶ
ಅರೆಕ್ಷಣ ಎಲ್ಲವನ್ನೂ ಮರೆಸುವ ಕಣ್ಣೋಟ
ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕಿತ್ತು ರೀ?ಹೂ೦ ಹೂ೦.. ಇಲ್ಲಾ ಕಣೇ.. ದಿನ ಜ೦ಜಡಗಳ ನಡುವಿನ ನೆಮ್ಮದಿ ನೀನು!
ಎ೦ದಿನ೦ತೆ ಬದುಕ ಕಳೆಯದ೦ತೆ ತಡೆದವಳು ನೀನು!
ಹೊಸ ಗುರಿ.. ಹೊಸ ಆಕಾ೦ಕ್ಷೆ ಬಿತ್ತಿದವಳು ನೀನು?
ನನ್ನೆರಡು ಮುದ್ದಾದ ಕ೦ದಮ್ಮಗಳ ಮಹಾತಾಯಿ ನೀನು.

ನನ್ನಲ್ಲಿ ಹೊಸತನ್ನು ಬಿತ್ತಲು ಬಿಟ್ಟವರು ನೀವು..
ನನ್ನ ಭಾವದ ಭಾವವಾದವರು ನೀವು!
ಹಸಿದೊಡಲ ದಾಹಕ್ಕೆ ತಣ್ಣೀರ ಧಾರೆಯಾದವರು ನೀವಲ್ಲವೇ!

ರಾಘವೇಂದ್ರ ನಾವಡ

ನಿನಗಾಗಿ ಕಾಯುತಾ

ಹಿಂದೂ ಧರ್ಮ

ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ[೧]. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, “ಶಾಶ್ವತ ಧರ್ಮ” ಎಂಬ ಅರ್ಥಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ.[೨] ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ “ಪ್ರಕಾರಗಳು”, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ಯೋಗಿಕ ಸಂಪ್ರದಾಯಗಳು ಮತ್ತು ಕರ್ಮದ ಕಲ್ಪನೆಯನ್ನು ಆಧರಿಸಿದ “ದೈನಿಕ ಸದಾಚಾರ”ದ ವಿಶಾಲವಾದ ವೈವಿಧ್ಯ ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನೂ ಹಿಂದೂ ಧರ್ಮವು ಒಳಗೊಳ್ಳುತ್ತದೆ.

ಅದರ ಮೂಲಗಳಲ್ಲಿ ಕಬ್ಬಿಣ ಯುಗದ ಭಾರತದ ಐತಿಹಾಸಿಕ ವೈದಿಕ ಧರ್ಮವಿದೆ, ಮತ್ತು ಹಲವುವೇಳೆ ಹಿಂದೂ ಧರ್ಮವು “ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಧರ್ಮ”[೩] ಅಥವಾ “ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಪ್ರಮುಖ ಸಂಪ್ರದಾಯ” ಎಂದು ಹೇಳಲಾಗುತ್ತದೆ.[೪][೫][೬][೭]. ಹಿಂದೂ ಧರ್ಮವು ವಿವಿಧ ಸಂಪ್ರದಾಯಗಳಿಂದ ರಚಿತವಾಗಿದೆ ಮತ್ತು ಒಬ್ಬ ಏಕಾಂಗಿ ಸಂಸ್ಥಾಪಕನನ್ನು ಹೊಂದಿಲ್ಲ.[೮] ಹಿಂದೂ ಧರ್ಮವು ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳ ನಂತರ ವಿಶ್ವದ ಮೂರನೇ ಅತಿ ದೊಡ್ಡ ಧರ್ಮವಾಗಿದೆ ಮತ್ತು ಭಾರತದಲ್ಲಿ ಸುಮಾರು ೮೩ ಕೋಟಿ ಅನುಯಾಯಿಗಳು ಹಾಗೂ ಒಟ್ಟಾರೆ ಸುಮಾರು ೧೦೦ ಕೋಟಿ ಅನುಯಾಯಿಗಳನ್ನು ಹೊಂದಿದೆ.[೯] ದೊಡ್ಡ ಪ್ರಮಾಣದ ಹಿಂದೂ ಜನಸಂಖ್ಯೆಯಿರುವ ಇತರ ರಾಷ್ಟ್ರಗಳನ್ನು ದಕ್ಷಿಣ ಏಷ್ಯಾದಾದ್ಯಂತ ಕಾಣಬಹುದು. ಭಾರತ, ನೇಪಾಳ ಹಾಗೂ ಶ್ರೀಲಂಕಾದ ಕೆಲವು ಭಾಗಗಳಲ್ಲಿ ಈ ಧರ್ಮದ ಬಹುಪಾಲು ಅನುಯಾಯಿಗಳು ನೆಲೆಸಿದ್ದಾರೆ. ಅದಲ್ಲದೇ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಇಂದು ಹಿಂದೂ ಧರ್ಮದ ಅನುಯಾಯಿಗಳನ್ನು ಕಾಣಬಹುದು.

ಹಿಂದೂ ಧರ್ಮಗ್ರಂಥಗಳ ಅಗಾಧ ಮಂಡಲವನ್ನು ಶ್ರುತಿ (ಕೇಳಿದ್ದು) ಮತ್ತು ಸ್ಮೃತಿ (ಸ್ಮರಣೆಯಲ್ಲಿಟ್ಟಿದ್ದು) ಗ್ರಂಥಗಳು ಎಂದು ವಿಭಜಿಸಲಾಗುತ್ತದೆ. ಈ ಧರ್ಮಗ್ರಂಥಗಳು ಧರ್ಮಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ಪುರಾಣಗಳನ್ನು ಚರ್ಚಿಸುತ್ತವೆ ಮತ್ತು ಧರ್ಮದ ಆಚರಣೆಯ ಬಗ್ಗೆ ಮಾಹಿತಿ ಒದಗಿಸುತ್ತವೆ. ಈ ಗ್ರಂಥಗಳ ಪೈಕಿ, ವೇದಗಳು ಮತ್ತು ಉಪನಿಷತ್ತುಗಳು Continue reading →

ನಾ ಕಂಡ ೫೬ ನೇ ಕನ್ನಡ ರಾಜ್ಯೋತ್ಸವ

ಕನಸು ಕಂಡೆನೆಂಬ ಭಾವ
ಸುಡುಬಿಸಿಯ ಮರುಳುಗಾಡಲ್ಲಿ
ನೀರು ಉಕ್ಕಿ ಉಕ್ಕಿ ಬಂದಂತೆ
ಕಂಗಳಲ್ಲಿ ಮಿಂಚು ಮೂಡಿದಂತೆ
೫೬ ಸಾಹಿತಿಗಳ ಸಂಗಮ
೫೬ ಪುಸ್ತಕಗಳ ಲೋಕಾರ್ಪಣೆ ಕ್ಷಣ
ಚರಿತ್ರೆ ದಾಖಮಾಡಿತು ಸ್ವಪ್ನ ಬುಕ್ ಹೌಸ್
ಯಾವ ಕಡೆ ನೋಡಿದರೂ
ದೊಡ್ಡ-ದೊಡ್ಡ ಸಾಹಿಗಳ ಗುಂಪು
ನೀವೆ ನಮ್ಮ ಆತ್ಮ ಶಕ್ತಿ
ನೀವೆ ನಮ್ಮ ಜೀವ ಮುಕ್ತಿ
ನೀವಿದ್ದರೆ ಸಂತಸ, ನೀವಿದ್ದರೆ ಸೊಗಸು
ಏನಿದ್ದರೇನು, ಮುಕ್ತಿ ಬೇಡ, ಸಿರಿಯು ಬೇಡ
ನೀವೆ ಸಾಕೆಂಬ ಭಾವ ಮನಕೆ
ನಿಮ್ಮೆಲ್ಲರ ಮುಗುಳು ನಗೆಯೆ
ಕಿರೀಟ ನಮ್ಮ ಕನ್ನಡ ಭಾಷೆಗೆ
ದೊರದಲ್ಲೆ ನಿಮ್ಮ ಕಂಡು, ಓಡಿ ನಿಮ್ಮ ಬಳಿ ಬಂದು
ಅಭಿನಂದನೆ ಹೇಳಿನಿಂದ
ನನ್ನೆದೆಯ ಮನಕೆ ಖುಷಿಯನಿತ್ತಿರಿ…

-ಸುಜಾತ ವಿಶ್ವನಾಥ್.

OH MY GOD… ನನ್ನೊಳಗಿನ ಆಸ್ತಿಕನಿಗೆ ಒಂದಷ್ಟು ಗೊಂದಲಗಳು.. ಭಾಗ-2

ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ

ಹಿಂದಿನ ಬಾರಿ ಹೇಳಿದಂತೆ ಕಾಂಜೀಯ ದೇವರ ಮೇಲಿನ ಕೇಸ್ ಅನ್ನು ಜಡ್ಜ್ ಒಪ್ಪಿಕೊಳ್ಳುತ್ತಾರೆ. ಆದರೆ ಭಾರತದಂತಹ ಆಸ್ತಿಕರ ನಾಡಿನಲ್ಲಿ ದೇವರ ಮೇಲೆ ಕೇಸ್ ಹಾಕಿದರೆ ಬದುಕಿಯಾನೆ…? ಅವನ ಮೇಲೆ ರಾಜಕೀಯ ಪ್ರೇರಿತ ಆಕ್ರಮಣವಾಗುತ್ತೆ. ಹಾಗೂ ಹೀಗೂ ತಲೆ ತಪ್ಪಿಸಿ ಓಡುತ್ತಿರುವಾಗ ಆತನ ರಕ್ಷೆಗಾಗಿ ಬರುವವನೇ ಆಧುನಿಕ ಧಿರಿಸಿನ ಭಗವಂತ. ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮ… ಹಾ ಭಗವಂತನೇ ಈತನ ಸಹಾಯಕ್ಕಾಗಿ ಬರುತ್ತಾನೆ.

ಇತ್ತ “Act of God ” ನಿಂದಾಗಿ ಕಷ್ಟಕ್ಕೊಳಗಾದವರೆಲ್ಲಾ ಕಾಂಜೀಯ ಸಹಾಯದಿಂದ ಮಸೀದಿ , ಚರ್ಚುಗಳಿಗೆ ನೋಟೀಸು ಕಳುಹಿಸುತ್ತಾರೆ. ಒಂದು ಹೊತ್ತಿನಲ್ಲಿ ಮೀಡಿಯಾಗಳಿಗೆ ಸುದ್ದಿಯ ವಿಷಯ ಆಗೋದಿಲ್ಲ ಅಂದಿದ್ದ ಕಾಂಜೀ “ಶ್ರೀ ಕೃಷ್ಣನ” ಮಾತು ಕೇಳಿ ಟೀವಿ ಚಾನಲ್ ಒಂದಕ್ಕೆ ಸಂದರ್ಶನ ಕೊಡುತ್ತಾನೆ. ಅಲ್ಲಿ ಆತ ಕೇಳಿದ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರಿಸಿ ಜನರ ಬೆಂಬಲ ಗಳಿಸುತ್ತಾನೆ. ಅಲ್ಲಿನ ಕೆಲವೊಂದು ಗೊಂದಲಗಳು ಹೀಗಿವೆ. ಒಂದು ಪ್ರಶ್ನೆಗೆ ಉತ್ತರಿಸುತ್ತಾ ಕಾಂಜೀ ಹೇಳುತ್ತಾನೆ, ಜನ ನನಗೆ ಸಣ್ಣದಿನಿಂದಲೂ ದೇವರು ನಮ್ಮ ತಂದೆಯ ಹಾಗೆ ಅಂತ ಹೇಳಿಕೊಟ್ಟಿದ್ದಾರೆ. ಹಾಗಾಗಿ ನಾನು ನನ್ನ ತಂದೆಯನ್ನು ನನ್ನ ಹಕ್ಕಿನ ಕುರಿತಾಗಿ ಕೇಳುತ್ತಿದ್ದೇನೆ ಅಂತ ಹೇಳುತ್ತಾನೆ… ವಿಚಿತ್ರ ನೋಡಿ ತನ್ನ ಸುಳ್ಳಿನ ಮೂಲಕ ಉತ್ತಮ ವ್ಯಾಪಾರ ಆಗುತ್ತಿದ್ದಾಗ ಭಗವಂತನಿಲ್ಲ ಅನ್ನುತ್ತಿದ್ದಾಗ ಬಾಲ್ಯದಲ್ಲಿ ದೇವರ ಬಗೆಗೆ ಹೇಳಿಕೊಟ್ಟಿದ್ದು ನೆನಪಾಗುತ್ತಿರಲಿಲ್ಲ, ಹಠಾತ್ ಅಂಗಡಿ ಬಿದ್ದು ನಷ್ಟವಾಗಿದೆ ಅಂದಾಗ ಮಾತ್ರ , ದೇವರು ಅಂದರೆ ನನ್ನ ತಂದೆ ಅನ್ನೋ ಬಾಲ್ಯದ Continue reading →

Oh My God… ನನ್ನೊಳಗಿನ ಆಸ್ತಿಕನಿಗೆ ಒಂದಷ್ಟು ಗೊಂದಲಗಳು

OH MY GOD ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಸಿನಿಮಾವಿದು. ಬಹುತೇಕ ಎಲ್ಲರೂ ನೋಡಿದ್ದಾರೇನೋ… ಬಿಡುಗಡೆಗೆ ಮುನ್ನವೇ ಒಂದಷ್ಟು ಕುತೂಹಲವನ್ನು ಸೃಷ್ಟಿ ಮಾಡಿತ್ತು. ಸಿನಿಮಾ ನೋಡಿ ಬಂದ ಗೆಳೆಯರು ತುಂಬಾನೇ ಚೆನ್ನಾಗಿದೆ ಅಂತ ಅಂದಾಗ ನನ್ನೊಳಗಿನ ಕಾತರ ಅತಿಯಾಗತೊಡಗಿತ್ತು. ಹಾಗೂ ಹೀಗೂ ಸಮಯ ಹೊಂದಿಸಿ ನೋಡೆ ಬಿಟ್ಟೆ… ಹಾ ಚೆನ್ನಾಗೇ ಇದೆ , ಆದರೂ ನಾಸ್ತಿಕರಿಗೂ ಆಸ್ತಿಕರಿಗೂ ಒಂದಷ್ಟು ಗೊಂದಲಗಳನ್ನು ತಂದಿಟ್ಟಿದೆಯೇನೋ ಅನ್ನಿಸಿತು …ಆದರೆ ಪ್ರತಿಯೊಬ್ಬನಲ್ಲೂ ದೇವರ ಬಗೆಗೆ ಸಕಾರಾತ್ಮಕವಾಗಿಯೋ ಅಥವಾ ನಕಾರಾತ್ಮಕವಾಗಿಯೋ ಯೋಚಿಸುವಂತೆ ಮಾಡುವುದಂತೂ ಸತ್ಯ. ಅದರ ಜೊತೆಗೆ ಮಠ ಮಂದಿರಗಳ ಬಗ್ಗೆ, ಸ್ವಾಮೀಜಿಗಳ ಬಗ್ಗೆ ತಾತ್ಸಾರದ ಭಾವನೆ ಮೂಡಿಸುವುದೇನೋ…

ಕಾಂಜೀ ಲಾಲ್ ಜೀ ಮೆಹ್ತಾ ಅನ್ನೋ ಗುಜರಾತಿ ವ್ಯಾಪಾರಿ, ದೇವರ ವಿಗ್ರಹಗಳನ್ನು ಮಾರೋ ವರ್ತಕ ಈ ಚಿತ್ರದ ಮುಖ್ಯ ಕಥಾ ಪಾತ್ರ. ಸಿನಿಮಾ ಆರಂಭಗೊಳ್ಳೋದು ಅವನಲ್ಲಿನ ಒಂದೊಂದೇ ಕೆಟ್ಟ ಗುಣಗಳ ಅನಾವರಣದ ಮೂಲಕ. ಹಣ ಸಂಪಾದನೆಗಾಗಿ ಆತ ಯಾವ ಮಾರ್ಗವನ್ನು ಬಳಸಲು ಹಿಂದೆ ಮುಂದೆ ನೋಡೋಲ್ಲ. ಖಾಲಿ ಬಾಟಲಿಗೆ ಟ್ಯಾಪ್ ನೀರು ತುಂಬಿಸಿ ಗಂಗಾಜಲ ಅಂತ ಮಾರೋದು, ಜನರ ಭಾವನೆಯನ್ನು ತನ್ನ ವ್ಯಾಪಾರವಾಗಿಸೋದು ಅವನಿಗೆ ಕರಗತ. ಪಕ್ಕಾ ನಾಸ್ತಿಕ. ದೇವರ ವಿಗ್ರಹಗಳೆಲ್ಲವೂ ಆತನಿಗೆ ಆದಾಯ ತಂದು ಕೊಡೋ ವಸ್ತುಗಳಷ್ಟೇ… ಆತ ಹೇಳೋದು ಅದನ್ನೆ ಎಲ್ಲಿಯವರೆಗೆ ದೇವರ ಮೇಲಿನ ನಂಬಿಕೆಗಳು ಜನರಲ್ಲಿರುತ್ತೋ ಅಲ್ಲಿವರೆಗೆ ನನ್ನ ವ್ಯಾಪಾರಕ್ಕೆ ಕುಂದು ಕೊರತೆನೇ ಇಲ್ಲ ಅಂತ. ಯಾವುದೋ ಉಚಿತ ಯಾತ್ರೆಯಲ್ಲಿ ಹೋಗಿ ದೇವರ ವಿಗ್ರಹಗಳನ್ನು ಕೊಂಡು ತರುತ್ತಾನೆ, ಗಂಗಾಜಲ ಎಂದು ವೈನ್ ಅನ್ನು ಎಲ್ಲರಿಗೂ ಕುಡಿಸುತ್ತಾನೆ ಮತ್ತು ಮೂರ್ತಿಗಳ ಬಗೆಗೆ ಸುಂದರ ಕಥೆ ಕಟ್ಟಿ ಭಕ್ತರಿಗೆ ಮೋಸ ಮಾಡಿ ಮಾರಾಟ ಮಾಡುವಂತಾದ್ದು ಆತನ ಲಾಭದಾಯಕ ವ್ಯಾಪಾರದ ಒಳಗುಟ್ಟು. ಆತನ ನಾಸ್ತಿಕತೆ ಎಲ್ಲಿಯವರೆಗೆ ಅಂದರೆ ತನ್ನ ಮಗನನ್ನು ಮೊಸರು ಕುಡಿಕೆಯಲ್ಲಿ ಭಾಗವಹಿಸೋದನ್ನು ತಪ್ಪಿಸುವುದಕ್ಕಾಗಿ ಸ್ವಾಮೀಜಿಯೊಬ್ಬರ ಹೆಸರು ಹೇಳಿ, ಭಗವಂತ ಇವತ್ತು ಬೆಣ್ಣೆ ತಿನ್ನುತ್ತಾನೆ….. ಎಲ್ಲರೂ ನಿಮ್ಮ ಮನೆಯ ಮೂರ್ತಿಗೆ ಇಲ್ಲವೆ ಹತ್ತಿರದ ಮೂರ್ತಿಗೆ ನೀವೆ ನಿಮ್ಮ ಕೈಯಾರೆ ತಿನ್ನಿಸಿ ಈ ಚಮತ್ಕಾರ ನಡೆಯೋದು ಬರಿಯ ಒಂದು ಘಂಟೆಯವರೆಗೆ ಮಾತ್ರ … ಅಂತ ಅಪಪ್ರಚಾರ ಮಾಡುತ್ತಾನೆ.( ವಿಚಿತ್ರ ಅಂದರೆ ಅವನ ಮಾತು ಕೇಳುತ್ತಿದ್ದಂತೆ ಜನ ಚೆಲ್ಲಾಪಿಲ್ಲಿ… ಯಾರೋ ಒಬ್ಬ ಅಪರಿಚಿತ ಸಂಘಟಕರ ಕಣ್ಣು ತಪ್ಪಿಸಿ ಸ್ಟೇಜ್ ಗೆ ಗೊತ್ತಾಗದಂತೆ ಹೋಗಿ ಈ ರೀತಿ ಅನೌನ್ಸ್ ಮಾಡೋದಿಕ್ಕೆ ಆಗೋದು ಮತ್ತು ಅದನ್ನು ತಟಕ್ಕನೆ ನಂಬಿ ಓಡೋ ಜನರು ಸಿನಿಮಾದಲ್ಲಿ ಮಾತ್ರ ಸಿಗೋಕೆ ಸಾಧ್ಯ…)ಆತನ ಈ ರೀತಿಯ ನಡೆಯಿಂದ ಅದೇನಾಗುತ್ತೋ ಹಠಾತ್ತಾಗಿ ಅಕಾಶದಲ್ಲಿ ಕಾರ್ಮೋಡಗಳುಒಟ್ಟಾಗಿ ಜೋರಾದ ಮಳೆ ಬಂದು ಈತನ ಅಂಗಡಿ ಬಿದ್ದು ಹೋಗುತ್ತೆ. ವಿಶೇಷ ಅಂದ್ರೆ ಇವನ ಅಂಗಡಿಗಿಂತಲೂ ದುರ್ಬಲ ಅಂಗಡಿಗಳಿದ್ದರೂ ಇವನ ಅಂಗಡಿ ಒಂದು ಮಾತ್ರ ಬಿದ್ದು ಬಿಡುತ್ತೆ. ಈತನಿಗೆ ಬುದ್ಧಿ ಕಲಿಸಲು Continue reading →

ನಿವೇದಿತಾ

ಸ್ವಾಮಿ ವಿವೇಕಾನಂದರ ಪದತಳದಲ್ಲಿ ಅರಳಿದ ಕುಸುಮ ಭಗಿನಿ ನಿವೇದಿತಾ :

ನಮಸ್ತೆ,

ಇಂದು ನಮ್ಮ ಸೋದರಿ ನಿವೇದಿತಾ ಅವರ ಜನ್ಮದಿನ. ನಿವೇದಿತಾ ಅವರ ಜೀವನವನ್ನು ನಮ್ಮ ದೇಶಕ್ಕಾಗಿ ತ್ಯಾಗ ಮಾಡಿದವರು. ಉದಾರ ಮನಸ್ಸು ಅವರದ್ದು. ಸ್ವಾಮಿ ವಿವೇಕಾನಂದರ ಭವ್ಯ ಭಾರತದ ಕನಸ್ಸನ್ನು ನನಸಾಗಿಸಲು ಸಾಕಷ್ಟು ಪ್ರಯತ್ನಿಸಿದರು. ಆ ಕಾಲದಲ್ಲಿ ಮಹಿಳೆಯರಿಗೆಶಾಲೆಗಳು ಇರಲಿಲ್ಲ. ಜ್ಞಾನವೂ ಕಡಿಮೆಯಿತ್ತು. ಆದರೆ, ಈ ಕಾಲದಲ್ಲಿ ನೋಡಿ, ಎಷ್ಟೋ ಮಹಿಳೆಯರು ವಿದ್ಯಾವಂತರಾಗಿ ಜೀವನ ನಡೆಸುತ್ತಿರುವರು.ಇದೆಲ್ಲಾ ನಿವೇದಿತಾ ಅವರ ಪರಿಶ್ರಮದಿಂದ ! ನಿವೇದಿತಾ ಅವರು ಮನೆ ಮನೆಗಳಿಗೆ ಹೋಗಿ ಮನವೊಲಿಸಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಜಾಗೃತಿ ಮೂಡಿಸಿ ಅನೇಕ ಶಾಲೆಗಳನ್ನು ಕಟ್ಟಿಸಿದರು. ಅಲ್ಲದೇ, ಪ್ಲೇಗ್ ರೋಗ ಬಂದಿದ್ದಾಗ ಜನರ ಸೇವೆ ಮಾಡಿದರು. ಅವರು ಅಸಾಮಾನ್ಯ ಮಹಿಳೆ. ಅವರ ದೇಶವನ್ನು ಬಿಟ್ಟು ಬಂದಾಗಲೂ ಅವರ ಮನಸ್ಸಿನಲ್ಲಿ ಅವರ ದೇಶದ ಜನರು ಅವರನ್ನು ದೂರವಿಡುತ್ತಾರೆಂದು ಹಿಂಸೆ, ನೋವಾಗುತ್ತಿತ್ತು. ಆದರೂ, ಭಾರತ ದೇಶಕ್ಕೆ ಅದೆಲ್ಲ ತ್ಯಾಗ ಮಾಡಿದ್ದು ಅವರ ಪ್ರೀತಿ, ಗೌರವ ದೊಡ್ಡದು ಅಲ್ಲವೇ ? ಅವರು ನಮ್ಮವರೇ ಎಂದು ಅವರ ಜನ್ಮದಿನವನ್ನು ನೆನೆಸಿಕೊಂಡು ಆಚರಿಸೋಣ.

ಅವರ ಜೀವನವನ್ನು ತಿಳಿಸುತ್ತಿದ್ದೇನೆ….
೧೮೬೭ರ ಅಕ್ಟೋಬರ್ ೨೮ರಂದು ಮಾರ್ಗರೆಟ್ ಎಲಿಜಬೆತ್ ನೊಬೆಲ್(ನಿವೇದಿತಾ) ಐರ್ಲೆ೦ಡಿನಲ್ಲಿ ಹುಟ್ಟಿದಳು.ತಾಯಿ ಮೇರಿ ಇಸಬೆಲ್, ತಂದೆ ಸಾಮ್ಯುಅಲ್. ಐರ್ಲೆ೦ಡಿನಲ್ಲಿ ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ನಡೆದಿದ್ದಾಗ ಅವಳ ಅಜ್ಜ ಹ್ಯಾಮಿಲ್ಟನ್ ಭಾಗವಹಿಸಿ, ಮನೆಮಾತಾಗಿದ್ದರು. ತಮ್ಮ ಅಜ್ಜನಿಂದ ಅಪಾರವಾದ ಧೈರ್ಯ ಮತ್ತು ದೇಶಭಕ್ತಿ, ಧರ್ಮಗುರುವಾದ ತಂದೆಯಿಂದ “ಮಾನವ ಸೇವೆಯೇ ಭಗವಂತನ ಸೇವೆ” ಎಂಬ ಆದರ್ಶಗಳನ್ನು ಬಾಲ್ಯದಿಂದಲೇ ಅವಳು ರೂಢಿಸಿಕೊಂಡಿದ್ದಳು. ಅಷ್ಟೇ ಅಲ್ಲ, ದಾಷ್ಟ್ರಭಕ್ತಿ, ದೈವಭಕ್ತಿ ಜೊತೆಯಾಗಿ ಅವಳ ಹೃದಯದಲ್ಲಿ ಬೆಳೆದವು. ದುಃಖದಲ್ಲಿರುವವರನ್ನು ಅನುಕಂಪದಿಂದ ಕಾಣುವ ಗುಣ ಬೆಳೆದವು. ಶಾಲೆಯಲ್ಲೂ ಎಲ್ಲರಿಗೂ ಅಚ್ಚುಮೆಚ್ಚು ಆಗಿದ್ದಳು. ರಗ್ಬಿ ಎನ್ನುವ ಸ್ಥಳದಲ್ಲಿ ಹೆಣ್ಣುಮಕ್ಕಳ ಉಚಿತ ಅನಾಥಾಲಯದಲ್ಲಿ ಒಂದು ವರ್ಷ ಕೆಲಸ ಮಾಡಿದಳು. ನಂತರ, ರೆಕ್ಸ್ ಹಾಮ್ ಎನ್ನುವ ಗಣಿಕೇಂದ್ರದಲ್ಲಿದ್ದ ಸೆಕೆಂಡರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡಿದಳು. ಸಮಾಜ ಸೇವಕಿಯಾಗಿಯೂ ಕೆಲಸ ಪ್ರಾರಂಭಿಸಿದಳು.೧೮೯೨ರಲ್ಲಿ ತನ್ನದೇ ಸ್ವಂತ ಶಾಲೆಯನ್ನು ಪ್ರಾರಂಭಿಸಿದಳು. ಈ ಶಾಲೆ ಬಹುಬೇಗ ಜನಪ್ರಿಯವಾಯಿತು. ಅವಳು ಮದುವೆಯಾಗಬೇಕು ಎನ್ನುವ ಹಂತದಲ್ಲಿ ಮದುವೆ ಮುರಿದುಬಿತ್ತು. ೧೮೯೫, ಮಾರ್ಗರೆಟ್ ಸ್ವಾಮಿ ವಿವೇಕಾನಂದರನ್ನು ಕಂಡ ವರ್ಷ. ಅದು ಅವಳ ಜೀವನದ ದಿಕ್ಕನ್ನೇ ಬದಲಾಯಿಸಿದ ಮಹತ್ವದ ವರ್ಷ. ಈ ಭೇಟಿಯ ನಂತರ ಅವಳು ಸ್ವಾಮೀಜಿಯ ಮಾತು-ಬರಹಗಳನ್ನು ಮತ್ತೆ-ಮತ್ತೆ ಓದಿದಳು. ಭಾರತೀಯ ತತ್ವಶಾಸ್ತ್ರ, ಉಪನಿಷತ್ತು, ಭಗವದ್ಗೀತೆಯನ್ನು ಅಧ್ಯಯನ ಮಾಡಿ ಚರ್ಚೆ ಮಾಡಿದಳು. ಕ್ರಮೇಣ ಅವಳ ಸಂಶಯಗಳೆಲ್ಲ ದೂರವಾದವು. ವಿವೇಕಾನಂದರು ಭಾರತದ ಬಡಮಕ್ಕಳ, ಸ್ತ್ರೀಯರ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಕುರಿತು ಮಾತನಾಡುತ್ತಿರುವಾಗ ಮಾರ್ಗರೆಟ್ ” ನಾನು ಸಿದ್ಧಳಾಗಿದ್ದೇನೆ, ಆ ಕೆಲಸ ಮಾಡುತ್ತೇನೆ” ಎಂದಳು. ಭಾರತಕ್ಕೆ ಬಂದಮೇಲೆ ಕಲ್ಕತ್ತೆಯ ಬೇಲೂರು ಮಠದ ಅತಿಥಿಗೃಹದಲ್ಲಿದ್ದರು. ಅವಳ ಶಿಕ್ಷಣ ಪ್ರಾರಂಭವಾಯಿತು. ಪಾಶ್ಚಾತ್ಯ ಮಹಿಳೆಯರಿಗೆ ಬೋಧನೆ ಮಾಡುತ್ತಿದ್ದಳು. ಇಲ್ಲಿಯ ಜನರ ಕೆಲವು ಭಾವನೆಗಳು, ಆಚರಣೆಗಳು ಅವಳಿಗೆ ಒರಟಾಗಿ, ವಿಚಿತ್ರವಾಗಿ ಕಾಣುತ್ತಿದ್ದವು. ಆದರೂ ಅವರು ಗೌರವದಿಂದ, ತಾಳ್ಮೆಯಿಂದ ಸಹಿಸಿಕೊಂಡರು. ಈ ದೇಶದಲ್ಲಿಯೇ ಹುಟ್ಟಿಬೆಳೆದವಳಂತೆ ಭಾರತೀಯರೊಡನೆ ಹೊಂದಿಕೊಳ್ಳತೊಡಗಿದಳು. ೧೮೯೮ ರ ಮಾರ್ಚ್ ೧೭ರಂದು ಶ್ರೀಮಾತೆ ಶಾರದಾದೇವಿಯವರನ್ನು ಭೇಟಿಯಾದರು. ಬೇಲೂರು ನಿವೇಶನದ ಬಳಿ ಇದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವಳಿಗೆ ‘ನಿವೇದಿತಾ !’ ಎಂಬ ನೂತನ ಹೆಸರಿಟ್ಟರು. ೧೮೯೮ ರ ನವೆಂಬರ್ ೧೩ರಂದು ನಿವೇದಿತಾಳ ಶಾಲೆ ಪ್ರಾರಂಭವಾಯಿತು. ಆಗಿನ ಕಾಲದಲ್ಲಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ನಿವೇದಿತಾ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಪರಿಶ್ರಮ ಪಟ್ಟರು. ಸ್ವಾಮೀಜಿ ಶಾಲೆಯನ್ನು ನಡೆಸಲು ನಿವೇದಿತಾಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಮಹಿಳೆಯರ ಉನ್ನತಿಗಾಗಿ ಶ್ರಮಿಸುವವರು ಹೇಗಿರಬೇಕು ಎಂದು ಅವಳಿಗೆ ವಿವರಿಸುತ್ತಿದ್ದರು. ಈ ಉದ್ದೇಶಕ್ಕಾಗಿ ಅವಳು ತನ್ನನ್ನೇ ಸರ್ಮಪಿಸಿಕೊಂಡಳು. ಕ್ರಮೇಣ ನಿವೇದಿತಾ ಬೇರೆ ದೇಶದವಳು ಎನ್ನುವುದನ್ನು ಕಲ್ಕತ್ತೆಯ ಜನರು ಮರೆಯುತ್ತ ಬಂದರು. ಬ್ರಹ್ಮ ಸಮಾಜದಲ್ಲಿ ಉಪನ್ಯಾಸ ಕೊಡಲು ಆರಂಭಿಸಿದ್ದು ಅವಳಿಟ್ಟ ಮೊದಲ ಹೆಜ್ಜೆ. ಕಲ್ಕತ್ತೆಗೆ ಪ್ಲೇಗ್ ಕಾಯಿಲೆ ಕಾಲಿಟ್ಟಿತು. ಅವಳು ಹಿಂಜರಿಯದೆ ಗಲ್ಲಿಗಳನ್ನು ರಸ್ತೆಗಳನ್ನು ಶುಚಿ ಮಾಡಿದಳು. ಒಂದು ತಿಂಗಳು ಎದೆಬಿಡದೆ ರೋಗಿಗಳ ಸೇವೆ ಮಾಡಿದಳು. ಕ್ರಮೇಣ ಪ್ಲೇಗ್ ಕಡಿಮೆಯಾಯಿತು. Continue reading →

ತಪ್ಪು ಹುಡುಕುವುದು ಸುಲಭ

ಒಬ್ಬ ಚಿತ್ರಕಾರ, ಆಗಷ್ಟೇ ಚಿತ್ತಾರಗಳ ಬರೆಯೋದಕ್ಕೆ ಶುರು ಮಾಡಿದ್ದ, ಚೆಂದದ ಚಿತ್ರ ಬರಿತಾ ಇದ್ದ, ಅವನಿಗೆ ತನ್ನ ಚಿತ್ರದ ಬಗ್ಗೆ ತನ್ನ ಕಲೆಯ ಸಾರ್ಥಕ್ಯದ ಬಗ್ಗೆ ತಿಳಿದುಕೊಳ್ಳ ಬೇಕು ಅನಿಸಿತು. ಸರಿ ಒಂದು ಸುಂದರ ಚಿತ್ರ ಬರೆದ, ಅಲ್ಲೇ ತನ್ನ ಕುಂಚ ಮತ್ತು ಬಣ್ಣಗಳ ಇಟ್ಟು “ಇದು ನನ್ನ ಮೊದಲ ಚಿತ್ರ, ಏನಾದ್ರೂ ತಪ್ಪು ಇದ್ರೆ ದಯವಿಟ್ಟು ‘ಗುರುತು ‘ಮಾಡಿ “ಅಂತ ಒಂದು ಫಲಕ ಹಾಕಿದ, ಸಂಜೆ ಆಯ್ತು, ಚಿತ್ರಕಾರ ಬಂದ, ಬಂದು ತನ್ನ ಚಿತ್ರ ನೋಡಿದ ಎಲ್ಲಿದೆ ಚಿತ್ರ!!! ??? ಚಿತ್ರದ ತುಂಬಾ ಬರಿ ಗುರುತುಗಳೇ ತುಂಬಿದ್ದವು, ಚಿತ್ರಕಾರ ಬಹಳ ನೊಂದುಕೊಂಡ, ತನಗೆ ಚಿತ್ರ ಬರೆವ ಯೋಗ್ಯತೆ ಇಲ್ಲವೇ ಇಲ್ಲ ಅಂತ ತೀರ್ಮಾನಿಸಿದ, ತನ್ನ ಗುರುವಿನ ಬಳಿ ಹೋಗಿ ಇದೇ ಮಾತು ಹೇಳಿದ, ತಾನು ಚಿತ್ರ ಬರೆವುದ ನಿಲ್ಲಿಸುವುದಾಗಿ ಹೇಳಿದ, ಗುರು ನಸುನಕ್ಕ “ಇದೇ ಚಿತ್ರ ಮತ್ತೊಮ್ಮೆ ಬರೆ” ಅಂದ. ಕಲಾವಿದ ಅದೇ ಚಿತ್ರ ಬರೆದ, ಗುರು ಹೇಳಿದ “ಈಗ ಇದೇ ಚಿತ್ರ ನೀನು ಮೊದಲು ಇಟ್ಟ ಜಾಗದಲ್ಲೇ ಇಡು ಆದ್ರೆ ಸೂಚನಾ ಫಲಕ ನಾನು ಹೇಳಿದ ಹಾಗೆ ಇಡು” ಅಂದ. ಚಿತ್ರಕಾರ ಹಾಗೆ ಮಾಡಿದ. ಗುರು ಹೇಳಿದ ಫಲಕ ಕೂಡ ಇಟ್ಟ, ಕುಂಚ ಹಾಗು ಬಣ್ಣ ಕೂಡ ಪಕ್ಕದಲ್ಲೇ ಇಟ್ಟ. ಸಂಜೆ ಆಯಿತು, ನಡುಗುವ ಹೃದಯದಿಂದ ಚಿತ್ರಕಾರ ತನ್ನ ಚಿತ್ರ ನೋಡಲು ಹೋದ. ತನ್ನ ಕಣ್ಣ ತಾನೇ ನಂಬಲಾಗಲಿಲ್ಲ, ಒಂದೇ ಒಂದು ಚುಕ್ಕಿ ಕೂಡ ಬಿದ್ದಿರಲಿಲ್ಲ ಚಿತ್ರದಲ್ಲಿ……..!!!!!!!!!!

ಅಂತಹದ್ದೇನು ಬರೆಸಿದ್ದ ಗುರು ಅಂದಿರಾ…”ಇದು ನನ್ನ ಮೊದಲ ಚಿತ್ರ….ಏನಾದ್ರೂ ತಪ್ಪು ಇದ್ರೆ ದಯವಿಟ್ಟು ‘ಸರಿ’ ಮಾಡಿ “ಅಂತ ಬರೆಸಿದ್ದ.
ಯಾವುದರಲ್ಲೇ ಆಗಲಿ ತಪ್ಪು ಹುಡುಕುವುದು ಸುಲಭ ಆದ್ರೆ ತಪ್ಪು ತಿದ್ದುವುದು ಕಷ್ಟ ಅಲ್ವೇ ಅದಕ್ಕೆ ಯಾರು ಕೈ ಕೂಡ ಹಾಕೋದಿಲ್ಲ……:))))
-ಸುನಿತಾ ಮಂಜುನಾಥ್

ಲಜ್ಜೆ

ಚಂದಿರನ ಕಂಡೊಡನೆ
ಉಕ್ಕಿ ಮೇಲೇರುವ ಈ
ಸಮುದ್ರಕ್ಕೆ ಲಜ್ಜೆಯೇ ಇಲ್ಲವೆ

ತಾರೆಗಳ ಕಂಡೊಡನೆ
ನಗುತ ಮುಗಿಲಲಿ
ತೇಲುವ ಚಂದಿರಗೆ
ಲಜ್ಜೆಯೇ ಇಲ್ಲವೆಸೂರ್ಯ ದರ್ಶನ ಕಾದು
ಮೈ ಮರೆತು ನಗುಬೀರೊ
ಹೂಗಳಿಗೆ ಲಜ್ಜೆಯೇ ಇಲ್ಲವೆ

ಕರೆಯದಿದ್ದರೂ ಬಂದು
ಹೂಗಳ ಮೈಸವರಿ
ಗಂಧವ ಹೊತ್ತೊಯ್ಯೋ
ಗಾಳಿಗೆ ಲಜ್ಜೆಯೇ ಇಲ್ಲವೆ

-ಮಮತಾ ಕೀಲಾರ್