ಬೆಳದಿಂಗಳು

ನೀರವ ರಾತ್ರಿಯಲಿ ನಿಶಬ್ಧದ ಶಬ್ಧದಲಿ
ನಾನಿರಲು ಏಕಾಂಗಿಯಾಗಿ.. ಮನವೇ..
ನೀ ಓದುವೆ ನನ್ನಿನಿಯನ ಸನಿಹಕೆ..

ಅವನತರಂಗದ ಭಾವನೆ ಹುಡುಕುತಾ..
ಹೊರಟಿಹ ನಿನಗೆ ಸೋಲೇ ನಿಶ್ಚಿತ.

ಮನಸ್ಸೇ ಹೀಗೇಕೆ ನಿನ್ನ ಆರ್ಭಟ
ತಂಪಾದ ಈ ರಾತ್ರಿಯಲಿ, ಬೆಳದಿಂಗಳ ತಂಪಿನಲಿ..

ನೀ ನಿದ್ದರೆ ಸನಿಹ… ನಲ್ಲ..
ನನಗಿರಲ್ಲಿಲ್ಲ ಈ ಆತಂಕ..

ಅದೆಷ್ಟೋ ಬೆಳದಿಂಗಳ ರಾತ್ರಿಯಲ್ಲೇ,,,
ಕೈ ತುತ್ತು ತಿಂದೆವು..ಹರಟಿದೆವು..
ನಿನ್ನೆದೆಯಲ್ಲಿ ಮುಖವಿಟ್ಟು ನಾ ನಕ್ಕಿದ್ದೆ..

ನನ್ನೆಲ್ಲಾ ಕನಸನ್ನು ನಿನಗಿತ್ತೆ..
ನೀ ಹೋದೆ ನನ್ನೆಲ್ಲಾ ಕನಸನ್ನು ಹೊತ್ತು.
ಬೆಳದಿಂಗಳ ರಾತ್ರಿಯಲಿ ಏಕಾಂಗಿಯಾಗಿ ಬಿಟ್ಟು..

ನಾ ಕಾಯುತಿರುವೆ…
ಕಗ್ಗತ್ತಲಾಗಿರುವ ಮನಕೆ ನೀ ಬೆಳದಿಂಗಳ ತರುವೆಯೆಂದು..

ಆದರೆ… ನಿನ್ನ ಹೂ ಹಾರದ ಬಾವಚಿತ್ರ ಕರೆಯುತಿಹುದು..
ಹಣತೆಯ ದೀಪ ಹಚ್ಚಲು…
ಮತ್ತೆಂದು ಬರದು ಸುಂದರ ಬೆಳದಿಂಗಳು…
::ಅನಿತಾ ಗೌಡ::
Anitha Ritvikgowda

ನಿಮ್ಮ ಅನಿಸಿಕೆ