ಸನಿಹವಾದೆ ಸಾವಿನತ್ತ

ನೀ ಯಾಕಾದರೂ ನನ್ನ ಪ್ರೀತಿಸಿದೆ ಎಂಬ ಪ್ರಶ್ನೆಗೆ ಉತ್ತರವ ಹುಡುಕುತ,
ನಾ ನಡೆದೇ ಕಾಡಿನತ್ತ ,
ನೀ ನನ್ ಬಿಟ್ ಹೋಗಲು ಕಾರಣವ ಚಿಂತಿಸುತ,
ಸನಿಹವಾದೆ ಸಾವಿನತ್ತ. . .

ನಿನ್ನೆಲ್ಲ ಆಸೆಗಳನು ಈಡೆರಿಸಿದ್ದಕ್ಕ ?
ಬೇರ್ಯಾರಿಗೂ ನೀಡದ ಪ್ರೇಮವನ್ನು ನಿನಗೆ ಮಾತ್ರ ನೀಡಿದ್ದಕ್ಕ ?
ಎದೆಯ ಗುಡಿಯಲಿ ದೇವತೆಯಾ ಸ್ತಾನ ನೀಡಿದ್ದಕ್ಕ ?
ನನ್ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದಕ್ಕ ?
ಕೊನೆಯುಸಿರು ಇರೋವರೆಗೂ ನಿನ್ನ ಕಾಯುವೆ , ಪೂಜಿಸುವೆ , ಪ್ರೆಮಿಸುವೆ ಎಂದು ಭಾಷೆ ನೀಡಿದ್ದಕ್ಕ ?

ನೀ ಒಲ್ಲದ ಕಾರಣವ ಹೇಳಿ ದೂರಾಗಿದ್ದು ನನ್ನಿಂದ
ಬಯಸಿದ್ದಾದರು ಏನು ನಾ ನಿನ್ನಿಂದ ???

ಈಗಲೂ ಕಾಡುತಿದೆ ನಿನ್ ಅಂದ,
ನೀಡಿದೆ ಹೃದಯವ ಒಲವಿಂದ,
ಮೊಹಿಸಿದೆ ನಿನ್ನ ಚೆಲುವಿಂದ ,
ಹೀಗೆ ಬಿಟ್ತೋದರೆ ನನ್ನ ಏನು ಚಂದ ?

ರಕ್ತ ಎಪ್ಪು ಗಟ್ತಿದೆ ಹೃದಯದಿ ನೋವಿಂದ,
ಕಣ್ಣೀರು ಬಾರದೆ ಕಣ್ಣಿಂದ ,
ದೂರಗುತ್ತಿದ್ದೇನೆ ಈ ಪ್ರಪಂಚದಿಂದ ,
ಮಿಕ್ಕೆಲ್ಲ ಹುಡುಗಿಯರು ಕಲಿಯಲಿ ಪಾಠ ನನ್ನಿಂದ,
ಹುಡುಗರೇ ಎಚ್ಚರ ವಾಗಿರಿ ನನಗಾದ ಮೋಸದಿಂದ . . . .

ನೀತಿ ಪಾಠ ಏನೆಂದರೆ ಈ ಕವನದಿಂದ,
ಎಷ್ಟೇ ಮೋಸ ಹೋದರೂನು – ಶುರು ಮಾಡಿ ಪ್ರೀತಿಯನು ಮೊದಲಿನಿಂದ ,
ಬಯಸದಿರಿ ಏನನ್ನು ನಿಮ್ಮಾಕೆಯಿಂದ ,
ಇಂದು , ಮುಂದು , ಎಂದೆಂದೂ ಪ್ರೀತಿಸ್ತಾನೆ ಇರಿ ಎದೆಯಲ್ಲಿರೋ ಪುಟ್ಟ ಹೃದಯದಿಂದ . . . .
Ajay Pyro

ನಿಮ್ಮ ಅನಿಸಿಕೆ