ಚಿತ್ರ ನೋಡಿ ಕವನ ಬರೆಯಿರಿ – 14

ನನ್ನ ಮನೆಯಲ್ಲೀಗ
ಬಂದು ಬಿಟ್ಟಿದೆ
ಕಣ್ಣೀರಿನ ಪ್ರವಾಹ
ಕಾರಣ…
ನೆಚ್ಚಿನ ಧಾರಾವಾಹಿಯಲಿ
ಸಾವಿಗೀಡಾದ ನಾಯಕಿಯ
ಬಗ್ಗೆ ನನ್ನವಳಿಗಿರೋ ವ್ಯಾಮೋಹ

Guruprasad Acharya
==================================
ಮನೆಯೊಳು ನುಗ್ಗಿ ನೀರು
ಮನದೊಳು ಚಿಂತೆ ನೂರು
ಹವಾಮಾನ ಸುದ್ದಿ ಜೋರು
ವಾತಾವರಣ ಏರು ಪೆರು .. !!

ಪರಿಹಾರ ಕೊಡುವುದು ಯಾರು
ಅರ್ಧ ಪಾಲು ಬಯಸುವವರು
ಹಿಂದಕ್ಕೊಮ್ಮೆ ಮುಂದಕ್ಕೊಮ್ಮೆ
ತೂಗುಯ್ಯಾಲೆ ಈ ಜೀವನ

Prashanth P Khatavakar
==================================
ಆಕಾಶವು ಬೀಳಲಿ ಮೇಲೆ…
ಭೂಮಿಯೆ ಬಾಯ್ ಬಿಡಲೇ ಇಲ್ಲೇ.
ನಾವೆಂದು ಏಳೆವು ಇಲ್ಲಿಂದ..!

ನದಿ-ಹೊಳೆಯೇ ಹರಿಯಲಿ ಇಲ್ಲಿ..
ಬೆಂಕಿಯೆ ಹತ್ತುರಿಯಲಿ ಇಂದಿಲ್ಲಿ.
ನಮಗೇನು ಕಾಣಿಸದು…!

ಎಂಥ ಸೆಳೆತ ಈ ಟಿ.ವಿ.ಯದು
ನಮಗೋ.. ನಿಮಗೋ.. ಅವರಿಗೋ.!
ಇದು ವಿಡಂಬನೆಯೋ..ವಿಪರ್ಯಾಸವೋ ಆ ದೇವನೆ ಬಲ್ಲ

Bhagirathi Chandrashekar
==================================
ಎಲ್ಲರ ಮನೆಯಲ್ಲೂ T.V.ಯೊಂದು ಕುಳಿತಿದೆ ಠೀವಿಯಲಿ
ಹಿಂದೆ ಸಿರಿವಂತರ ಕಿರೀಟಕ್ಕೆ ಗರಿಯಾಗಿತ್ತು..
ಈಗ ಎಲ್ಲರ ಮನೆಯ ಊಟದ ಉಪ್ಪಿನಕಾಯಿಯಾಗಿದೆ.

ಕೆಲವರ ಮಾಹಿತಿ ಸಂಗ್ರಹಣೆಯ ಕೇಂದ್ರಬಿಂದುವಾದರೆ..
ಮತ್ತೆ ಕೆಲವರಿಗೆ ಒಡನಾಡಿ..ಸಂಗಾತಿ.
ಮನೆ ಹತ್ತಿ ಉರಿದರೂ..ಕಳ್ಳಕೊಳ್ಳೆಹೊಡೆದರೂ
ಮೂರ್ಖಪೆಟ್ಟಿಗೆಯ ಮುಂದೆ ಕುಳಿತವರೆಷ್ಟೋ ಮೂರ್ಖಮಂದಿ

ಪ್ರಪಂಚದೆಲ್ಲಾ ಆಗು-ಹೋಗುಗಳ ಕ್ಷಣಮಾತ್ರದಿ ಭಿತ್ತರಿಸುವ
ಈ ಮಾಂತ್ರಿಕ ತಾಂತ್ರಿಕತೆಯ ಉತ್ತುಂಗವಲ್ಲವೇ..?
ಇನ್ನೊಬ್ಬರ ಭಾವನೆಗಳ ಬಂಡವಾಳಮಾಡಿಕೊಂಡವರ
ಪಾತ್ರದಲೇ ತಮ್ಮನ್ನಿರಿಸಿ ಅತ್ತಾಗ ಅತ್ತು, ನಕ್ಕಾಗ ನಕ್ಕು ಲೀನವಾದವರೆಷ್ಟೋ..?

ಇತಿ-ಮಿತಿಗಳ ಮತಿ ಮುಷ್ಠಿಯೊಳಿದ್ದರೆ
ಹವ್ಯಾಸ ಚಟವಾಗದಿದ್ದರೆ..ಅಮೃತ-ಅಮೃತವೇ..ವಿಷ-ವಿಷವೇ..
ಮಿತಿ ಮೀರಿದರೆ..ಅಮೃತವೂ-ವಿಷವೇ…!

Bhagirathi Chandrashekar
==================================
ನೀರನ್ನ ತಲ್ಲಿದರಾಯ್ತು ಹೊರಗೆ ನಂತರ
ಟಿವಿಯಂತೂ ಬೇಕೇಬೇಕು ನಿರಂತರ
ನೀರಿಗೇನು ಎಲ್ಲೂ ಹೋಗಲ್ಲ
ದಾರವಾಹಿಯಾದರೆ ಮತ್ತೆ ಸಿಗೊಲ್ಲ
ಮೊಣಕಾಲವರೆಗೆ ನೀರಾದರೇನಂತೆ
ನೋಡಿಕೊಳ್ಳಬೇಕು ಟಿವಿಗೆ ನೀರು ತಾಕದಂತೆ

Mamatha Keelar
==================================
ಹೆಂಡತಿ ಮಕ್ಕಳು ಕಣ್ ಬಿಟ್ಟು ,

ನೋಡುತಿರುವರು ಮೂರ್ಖರ ಪೆತ್ತಿಗೆಯನು ದಿಕ್ಕೆಟ್ಟು ,

ಹಿಡಿದು ಕೊಂದು ಕೈಯಲಿ ಒಂದು ಬೋರ್ಡ್ “ಡಿಸ್ಟರ್ಬ್ ಮಾಡ್ಬೇಡಿ ದಯವಿಟ್ಟು ”…

ಸಹಿಸಲಾರದೆ ಯಜಮಾನನು ಕಂಗೆಟ್ಟು ,

ಅತ್ತ ಕಡೆ ನಿಂತ್ ಕೊಂಡಿದ್ದಾರೆ ತಲೆ ಕೆಟ್ಟು ,

ಇತ್ತ ಕಡೆ ಮನೆ ಮಂದಿಯೆಲ್ಲ ನೋಡುತ ಧಾರಾವಾಹಿಯ ಒಂದು ಸಂನಿವೆಶವನು ಮೂಗಿನ ಮೇಲೆ ಬೆರಳಿಟ್ಟು ,

ಚಪ್ಪಿರುಸುತಿರುವರು – ಇರಬಾರದಿತ್ತೆ ತಿನ್ನೋಕೆ ಚಕ್ಲಿ ನಿಪ್ಪಟ್ಟು …

ಮೆಲ್ಲನೆ ಅಲ್ಲಿದ್ದ ಮಗನು ಕೇಳಿದ “ಅಮ್ಮ ಬೇಕೆನಗೆ ಉಪ್ಪಿಟ್ಟು ”,

ಪಕ್ಕದಲ್ಲೇ ಇದ್ದ ಮಗಳು ಕೇಳಿದಳು “ಅಮ್ಮ ನನಗೆ ತಂಬಿಟ್ಟು ”,

ಅದೆಲ್ಲಿತ್ತೋ ಕೋಪ – ಒಳಗೆ ಬಂದ ಯಜಮಾನನು TV ಯನ್ನು off ಮಾಡಿ ಸುಮ್ಮನಿರಿಸಿದನು ಎಲ್ಲರನು ನಾಲ್ಕು ನಾಲ್ಕು ಕೊಟ್ಟು ,

ಅಯ್ಯೋ ಕರ್ಮ – ಧಾರಾವಾಹಿಯ ಕೊನೆಯ ಸನ್ನಿವೇಶವು ಮಿಸ್ ಆಇಥಲ್ಲ ಅಂತ ಬೈ ಕೊಂಡ್ರು ತಲೆ ಮೇಲೆ ಕೈ ಇಟ್ಟು. . .

Ajay Pyro
==================================
ನೀರಿಗಾಗಿ ಪರದಾಡಿದ ಜೀವಕೋಟಿಗಾಗಿ
ಪುರಾಣದ ಭಗೀರಥ ಗಂಗಾ_ಜಲದಿಂದ ಪಾವನಗೊಳಿಸಿದ…
ಪುರಾತನರು ಕೆರೆ-ಕಟ್ಟೆ-ಭಾವಿ-ಕಾಲುವೆಗಳಿಂದ ಜಲಧಾರೆ ಹರಿಸಿದರು…
ಆಧುನಿಕರು ಭೂತಾಯಿ ಮಡಿಲಿಗೆ ರಂದ್ರ ಕೊರೆದು ಜಲಧಾರೆ ಹರಿಸಿದರು…

ಆಧುನಿಕರ ಆಟಾಟೋಪಗಳಿಗೆ ಬೆಚ್ಚಿದ ಭೂತಾಯಿ ಋತುಮಾನಗಳ ಗೊಂದಲಕ್ಕೀಡಾದಳು!
ಆಧುನಿಕರ ಸಣ್ಣತನದಿಂದ ಭೂತಾಯ ಮಡಿಲು ಬರಿದಾಯಿತು
ಆಧುನಿಕರ ಮುಂದಾಲೋಚನೆಯಿಲ್ಲದ ಯುಕ್ತಿಗೆ ಕಡಲು ಕೊರೆಯಿತು ; ಮೀತಿಮೀರಿತು
ಆಧುನಿಕರು ಎಚ್ಚರಗೊಂಡಿಲ್ಲ ಕಾಲಬಳಿಯೇ ಜಲಧಾರೆ ಉಕ್ಕಿದರೂ ; ಜೀವ ಮುಕ್ಕುತ್ತಿದ್ದರೂ

ಆಧುನಿಕ ಸೋಗಿನಲ್ಲಿ ಮೈಮರೆತಿದೆ ಮನುಜ ಕುಲಗಳು
ಆಧುನಿಕ ಮೋಜುಗಳಾಗುತ್ತಿವೆ ಸಂಜೆಯ ಸಾವಿನ ಮೇಜವಾನಿಗಳು
ಆಧುನಿಕ ಸವಲತ್ತುಗಳು ವಿಷದ ನಂಜಿನ ತಯಾರಿಕೆಗಳು
ಆಧುನಿಕ ಅಧ್ವಾನಗಳ ಮಧ್ಯೆ ಲಾಭಬಡುಕ ಬಂಡುಕೋರ ಮೇಧಾವಿಗಳು

ಆಧುನಿಕತೆಯ ಆಕರ್ಷಣೆಗೆ ಬಿದ್ದ ಮರುಳ ಮಾನವನಿಗೆ ಪಶ್ಚಾತ್ತಾಪದ ಕೊರಗಿಲ್ಲ
ಆಧುನಿಕ ಯೋಚನಾಲಹರಿಯಿಂದ ಕಾಲಬುಡಕ್ಕೆ ಏರಗಿದರೂ ಎಚ್ಚರಿಲ್ಲ
ಆಧುನಿಕನಾಗಲಿಲ್ಲ ; ಪುರಾತನನಾಗಲಿಲ್ಲ…ಪುಣ್ಯಪುರುಷನಂತೂ ಆಗಲಿಲ್ಲ
ಆಧುನಿಕತೆಯ ಅವಘಡಗಳಿಂದಾಗಿ ಅತಿವೃಷ್ಟಿ-ಅನಾವೃಷ್ಟಿಗಳೆಂಬ ಅವನತಿಯ ಸೂತಕಗಳ ಅರಿವಿಲ್ಲ

Hipparagi Siddaram
”””””””””””””””””””””””””””””””””””””””””””””””””””””””””””””””””””””””
http://www.facebook.com/groups/kannadavesatya/247432748675806/?notif_t=like

ನಿಮ್ಮ ಅನಿಸಿಕೆ