Tag Archives: ಪ್ರಶಾಂತ್ ಪಿ ಖಟಾವಕರ್

ದೆವ್ವದ ಮನೆಯಲ್ಲಿ ದುಡ್ಡು

ಅಲ್ಲೊಂದು ಮನೆ… ಸುತ್ತಲೂ ಗಾಡವಾದ ಕತ್ತಲು .. ಯಾವುದೋ ನಾಯಿ ಕೂಗುತ್ತಲೇ ಇದೆ.. ಆದರೆ ಅದೇನೋ ಆ ದಿನ ಹುಚ್ಚು ಧೈರ್ಯ ಮಾಡಿ , ಆ ಮನೆಯ ಕಿಟಕಿಯಲ್ಲಿ ಕಾಣುತ್ತಿದ್ದ ಬೆಳಕಿನತ್ತ ಗಮನ ಹೆಚ್ಚುತ್ತಾ ಇದೆ.. ಕುತೂಹಲಕ್ಕೊಮೆ ಅಲ್ಲೇನಿದೆ ಎಂದು ನೋಡಬೇಕೆಂಬ ಬಯಕೆ.. ಆದರೆ ಊರ ಜನರು ಹೇಳುವ ಕಥೆ ಅದು ದೆವ್ವದ ಮನೆ… ಅಲ್ಲಿ ಯಾರೂ ಹೋಗುವಂತಿಲ್ಲ.. ನನಗೇನೋ ಅದೆಲ್ಲಿಂದ ಆಸಕ್ತಿ ಹೆಚ್ಚಿತ್ತೋ ಏನೋ ನನಗರಿವಿಲ್ಲದಂತೆಯೇ ನನ್ನ ಹೆಜ್ಜೆ ಆ ಮನೆಯ ದಿಕ್ಕಿನತ್ತ , ಕಿಟಕಿಯ ಬಳಿಗೆ ಸಾಗುತ್ತಿತ್ತು .. ಮೆಲ್ಲನೆ ಹೆಜ್ಜೆ ಇಟ್ಟಂತೆಲ್ಲಾ ಗೆಜ್ಜೆ ಸದ್ದು .. ಆದರೆ ಅದು ನನ್ನದಲ್ಲವಲ್ಲ … ನಾನು ಗೆಜ್ಜೆ ಕಟ್ಟಿಲ್ಲ.. ಅದ್ಯಾರು ಎಂಬ ಭಯವು ಆಗಷ್ಟೇ ಮತ್ತಷ್ಟು ಹೆಚ್ಚಿತ್ತು .. ಮನಸ್ಸು ಮಾತ್ರ ಕಿಟಕಿಯ ಬೆಳಕಿನೆಡೆಗೆ ನನ್ನನ್ನು ನೂಕಿದಂತೆ ಅನ್ನಿಸಿದಾಗ , ಮತ್ತಷ್ಟು ಹೃದಯ ಬಡಿದ ಜೋರಾಯಿತಾದರೂ , ನನ್ನ ಕಾಲುಗಳು ಮಾತನ್ನೇ ಕೇಳುತ್ತಿಲ್ಲ .. ಹೆಜ್ಜೆ ಮೇಲೊಂದು ಹೆಜ್ಜೆ ಇಡುತ್ತಾ ಆ ಕಿಟಕಿಯ ಬಳಿ ಹೋದೆ.. ಅಲ್ಲಿ ನನಗೊಂದು ಆಶ್ಚರ್ಯ .. ಆ ಬೆಳಕಿಗೆ ಕಾರಣ Continue reading →

ರಾತ್ರಿ ಹೊತ್ತಲ್ಲಿ ಒಂಟಿ ರಸ್ತೇಲಿ

ರಾತ್ರಿ ಹೊತ್ತಲ್ಲಿ
ಒಂಟಿ ರಸ್ತೇಲಿ
ಗೆಜ್ಜೆ ಸದ್ದಿಗೆ
ತುಂಬಾ ಖುಷಿಯಾಯಿತು

ಸುತ್ತಮುತ್ತ ನೋಡಿದೆ
ಯಾರು ಸಿಗಲಿಲ್ಲ
ಸ್ವಲ್ಪ ಭಯವಾಯಿತು

ಎಲ್ಲಿಂದ ಬಂತೂ ಆ ಸದ್ದು
ಹುಡುಕುತ್ತ ಹೊರಟೆ ನಾನಂದು
ದೂರ ದೂರ ಊರ ದಾಟಿ
ಯಾರು ಇಲ್ಲ ನಾನಲ್ಲಿ ಒಂಟಿ

ಸದ್ದಿಲ್ಲದ ಸ್ಮಶಾನ ಮೌನ
ಹೆಜ್ಜೆ ಹೆಜ್ಜೆಗೂ ಗೆಜ್ಜೆ ಸದ್ದು
ಝಲ್ ಝಲ್ ಬಲು ಜೋರು
ಭಯದಲ್ಲಿ ಕೂಗಿದೆ ಯಾರು ಯಾರು
ಉತ್ತರವೇ ಬರಲಿಲ್ಲ

ಯಾರವಳು ಯಾರವಳು
ಹೆಜ್ಜೆ ಹೆಜ್ಜೆಗೂ ಗೆಜ್ಜೆ ಸದ್ದಿನ ಚೆಲುವೆ
ಅವಳನಿನ್ನೂ ಹುಡುಕುತ್ತಲೇ ಇರುವೆ
ಸದ್ದಿನ ದಿಕ್ಕಿನೆಡೆಗೆ ನೋಡುತ್ತಾ ನಡೆಯುತ್ತಾ …… !!

|| ಪ್ರಶಾಂತ್ ಖಟಾವಕರ್ ||

ಅರಿತವರ್ಯಾರು

ಅರಿತವರ್ಯಾರು
ನಿನ್ನ ಲೀಲೆಗಳ
ವಿಧವಿಧದ ಬೇಡಿಕೆಗಳ
ಓ ಎನ್ನ ಗೆಳತಿಯೇ
ನಿನ್ನ ಪ್ರೀತಿಸುವುದು
ಬಲು ದುಬಾರಿ ಕಣೇ .. 🙂 🙂

ಅರಿಯುವೆ ನೀ ಅದೆಂದು
ಜೀವನ ಲೆಕ್ಕಾಚಾರಗಳ
ತಿಳಿಯುವೆ ಬೇಕು ಬೇಡಗಳ
ಓ ಎನ್ನ ಪ್ರೇಯಸಿಯೇ
ನಿನ್ನ ಜೊತೆಯಲ್ಲಿದ್ದರೆ
ನಾ ಮೌನಿ , ನೀ ಜಾಣೇ .. 🙂 🙂

ಇದುವೇ ಏನೋ ಪ್ರೀತಿ ಎಂದರೆ
ಕೊಟ್ಟರೂ ನೀನೆಷ್ಟೇ ತೊಂದರೆ
ನಾ ನಿನ್ನ ಬಿಡಲಾರೆ
ನಾ ನಿನ್ನ ಮರೆಯಲಾರೆ
ಬದುಕಿನ ಬೆಳ್ಳಿ ಪರದೆಯ ಮೇಲೆ
ನೀನೇ ನನ್ನ ಮನಮೆಚ್ಚಿದ ತಾರೆ
ಎದೆಯಂಗಳದಿ ನರ್ತಿಸುವ ಅಪ್ಸರೆ
ಸ್ವಲ್ಪ ಖರ್ಚು ಕಡಿಮೆ ಮಾಡಿ
ಜೀವನ ನೌಕೆಯ ನಡೆಸು ಬಾರೇ
– ಪ್ರಶಾಂತ್ ಖಟಾವಕರ್
 

ಭಗವಂತ ಬರೆದ ಹಣೆ ಬರಹ

“ಭಗವಂತ ಬರೆದ ಹಣೆ ಬರಹ”
ನಾ ಬರೆದ ಕಥೆಯ ತಲೆ ಬರಹ
ಕಥೆಯಲ್ಲಿದೆ ಪ್ರೇಮಿಗಳ ವಿರಹ
ಹಳೆಯ ಕಥೆಯು ಹೊಸ ತರಹ

ಸೇರುವರು ಹೇಗೆ ಅವರು ಸನಿಹ
ತಿಳಿದಿಲ್ಲ ಯಾರಿಗೂ ನನ್ನ ವಿನಹ
ಊರಾಚೆ ಕಾರ್ಮಿಕರ ಸಮೂಹ
ಆಗಿತ್ತಲ್ಲೊಂದು ರಹಸ್ಯ ವಿವಾಹ

ನಿಧಿ ಇದೆ ಎಂಬ ಊಹಾ ಪೂಹ
ಹಿಡಿದಿತ್ತು ಹಣದ ಹುಚ್ಚು ಮೋಹ
ನಡೆಯುತ್ತಿತ್ತು ನಿಲ್ಲದ ರಕ್ತದ ದಾಹ
ನೆಲ ಅಗೆದಾಗ ಸಿಕ್ಕಿತ್ತು ಹೂತಿಟ್ಟ ದೇಹ
|| ಪ್ರಶಾಂತ್ ಖಟಾವಕರ್ ||

ಸುರಕ್ಷತೆ vs ಆಕರ್ಷಣೆ

ಆಹಾ 
ಬೆಂಗಳೂರು ನಗರ
ಅತೀ
ಸೊಗಸು ಸುಂದರ

ನೋಡಲು
ಸ್ಕೂಟಿಯ ಮೇಲೆ ಬ್ಯೂಟಿಗಳು
ಸುರಕ್ಷತೆ
ಮುಖ ಮುಚ್ಚಿದ ಹೆಲ್ಮೆಟ್`ಗಳು

ಓಹೋ
ದಾವಣಗೆರೆ ನಗರ
ಇಲ್ಲಿ
ಸುಂದರಿಯರು ಅಪಾರ

ಹೆಲ್ಮೆಟ್
ಇಲ್ಲದೇ ಇರುವ ತಲೆಗಳು
ಆಕರ್ಷಣೆ
ಹೊರ ರಾಜ್ಯದ ಹೆಣ್ಣುಗಳು

|| ಪ್ರಶಾಂತ್ ಖಟಾವಕರ್ ||

ಭೂತಕ್ಕೆ ಅಂತ್ಯವೇ

ಯಾರು ಇಲ್ಲ
ಏನು ಇಲ್ಲ
ಕಾರಣ ಮೊದಲೇ ಇಲ್ಲ
ಇರುವುದೆಲ್ಲಾ ಇಲ್ಲವೇ ಇಲ್ಲ

ಏಕೋ ಗೊತ್ತಿಲ್ಲ
ವಿಚಾರ ನಿಜವಲ್ಲ
ವಿಷಯವಂತೂ ತಿಳಿದೇ ಇಲ್ಲ
ನಾನು ನೀನು ಹುಚ್ಚು ಬಿಟ್ಟಿಲ್ಲ

ಆ ಗುಡ್ಡದ ಮಾತು ಸುಳ್ಳಲ್ಲ
ಭೂತದ ಕಥೆಯು ಭಯವಿಲ್ಲ
ಈ ಭೂತವು ಶಾಶ್ವತವಲ್ಲ
ಆದರೂ ಭೂತಕ್ಕೆ ಅಂತ್ಯವೇ ಇಲ್ಲ

|| ಪ್ರಶಾಂತ್ ಖಟಾವಕರ್ ||

ಈ ಮಾವು ಜೊತೆ ನಾವು ನೀವು

ಮನಸ್ಸಿಗೆ ಮಜವೂ ಈ ಮಾವು
ಕುಡಿಯಲು ಮಾಜ್ಜಾ ಈ ಮಾವು

ಬಸುರಿಯ ಬಯಕೆ ಈ ಮಾವು
ಇಷ್ಟಪಟ್ಟು ತಿನ್ನುವ ಹುಳಿ ಮಾವು

ವಸಂತ ಕಾಲಕ್ಕೆ ಚಿಗುರುವ ಮಾವು
ಊಟಕ್ಕೆ ರುಚಿ ಉಪ್ಪಿನಕಾಯಿ ಮಾವು

ತಿನ್ನಲು ತೋತಾಪುರಿ ಭರ್ಜರಿ ಮಾವು
ಹಣ್ಣಿನ ಅಂಗಡಿಯ ವಿಶೇಷ ಈ ಮಾವು

ಹೆಣ್ಣಿನ ಚೆಂದವನ್ನು ಕವಿ ಎನ್ನುವ ಮಾವು
ಹಣ್ಣಿನ ರುಚಿ , ಹೆಣ್ಣಿನ ಪ್ರೀತಿ ಹೋಲಿಕೆ ಮಾವು

ಮುಗ್ದ ಮಗುವಿನ ಬಣ್ಣದ ಚಿತ್ರಕಲೆಯಲ್ಲಿ ಮಾವು
ವಯಸ್ಸಿನ ಮಿತಿಯಿಲ್ಲ ಸವಿಯಲು ಎಲ್ಲಾ ಈ ಮಾವು

ಕೋಗಿಲೆ ಸದ್ದನು ನೀಡುವ ಸೊಬಗಿನ ಮರವು ಮಾವು
ಮಾವು ಬೇವು ನೋವು ನಲಿವು ಜೀವನದ ಒಂದು ಭಾಗವು

ಸುಖ ದುಃಖ ಸರಿ ಸಮ ಅಳತೆಯ ಲೆಕ್ಕಾಚಾರ ಜೀವನವು
ಬರುವುದೆಲ್ಲಾ ಸುಖ ಶಾಂತಿ ಕೂಡಿ ಬಾಳಿದರೆ ನಾವು ನೀವು

|| ಪ್ರಶಾಂತ್ ಖಟಾವಕರ್ ||

ತಾಯಿ ಮಗು


ನಾನೇನ ಬರೆಯಲಿ ಈ ಚಿತ್ರಕೆ
ಚಿತ್ರವೇ ಎಲ್ಲಾ ಕಥೆ ಹೇಳುತಿದೆ

ಅಲ್ಲೊಂದು ಜೀವ
ಪ್ರೀತಿಯ ದೈವ
ನೂರಾರು ಭಾವ
ಸಹಿಸಲು ನೋವ

ನಾನೇನ ಬರೆಯಲಿ ಈ ಚಿತ್ರಕೆ
ಚಿತ್ರವೇ ಎಲ್ಲಾ ಕಥೆ ಹೇಳುತಿದೆ

ಮುತ್ತೊಂದ ಕೊಟ್ಟು
ತುತ್ತೊಂದ ಇಟ್ಟು
ಅಗಸದೆಡೆಗೆ ಬೆಟ್ಟು
ಅದುವೇ ನಗುವಿನ ಹುಟ್ಟು

ನಾನೇನ ಬರೆಯಲಿ ಈ ಚಿತ್ರಕೆ
ಚಿತ್ರವೇ ಎಲ್ಲಾ ಕಥೆ ಹೇಳುತಿದೆ

ಮಾತಿನ ಮೋಡಿ
ಚಂದಮಾಮನ ನೋಡಿ
ಲಾಯಿಯ ಹಾಡಿ
ಸಾಗಿಸುತ ಜೀವನ ಗಾಡಿ

ನಾನೇನ ಬರೆಯಲಿ ಈ ಚಿತ್ರಕೆ
ಚಿತ್ರವೇ ಎಲ್ಲಾ ಕಥೆ ಹೇಳುತಿದೆ

|| ಪ್ರಶಾಂತ್ ಖಟಾವಕರ್ ||

ಲವ್ ಯು ಚಿನ್ನು ಡಿಯರ್

ತಂಪಾದ ವಾತಾವರಣ
ಎಂದೂ ಇಲ್ಲದ ಮೌನ
ನನ್ನಾಕೆಯೂ ತುಸು ನಕ್ಕಳು
ಕಾರಣ ಏನೆಂದು ಇನ್ನೂ ತಿಳಿದಿಲ್ಲ

ನಾನು ಸಹ ಆ ದಿನ ಕಚೇರಿಯ ಕೆಲಸ ಮುಗಿಸಿ , ಹೆಂಡತಿ ಹೇಳಿದಂತೆ ಮನೆಗೆ ಬೇಕಾದ ಸಾಮಗ್ರಿಗಳ ಉದ್ದನೆಯ ಪಟ್ಟಿಯೊಂದನ್ನು ಕೈಯಲ್ಲಿ ಹಿಡಿದು ಅಂಗಡಿ ಸಾಲುಗಳ ಮಾರುಕಟ್ಟೆಯತ್ತ ನನ್ನ ಹಳೆಯ ಸ್ಕೂಟರಿನಲ್ಲಿ ಹೊರಟೆ .. ಆದರೆ ನನ್ನ ಮನಸ್ಸು ನನ್ನ ಹಿಡಿತದಲ್ಲಿ ಇರಲೇ ಇಲ್ಲ.. ಮತ್ತದೇ ಚಿಂತೆ ನನ್ನಾಕೆ ಆ ದಿನ ಮಂದಹಾಸ ಬೀರಲು ಕಾರಣವೇನು.. ?

ಈ ಆಲೋಚನೆಯಲ್ಲಿ ಪಟರ್ ಪಟರ್ ಎಂದು ಸದ್ದು ಮಾಡುತ್ತಾ ನನ್ನ ಭಾರವನ್ನು ಹೊತ್ತು ಸಾಗುತ್ತಿದ್ದ ಸ್ಕೂಟರ್ ಸ್ವಲ್ಪ ದೂರದಲ್ಲಿ ಇನ್ನೇನು ಅಂಗಡಿಗಳ ಸಾಲುಗಳು ಕಣ್ಣೆದುರಿಗೆ ಕಾಣುತ್ತವೆ ಎನ್ನುವಷ್ಟರಲ್ಲಿ ನಿಂತೇ ಹೋಯಿತು.. ಆಗಲೇ ಅರಿವಾಗಿದ್ದು ನಾನೇನೋ ಮರೆತಿರುವೆ ಎಂದು .. ಅದು ಪೆಟ್ರೋಲ್ ಹಾಕಿಸುವುದು … ಸರಿ ಇನ್ನೇನು ಮಾಡಲು ಸಾಧ್ಯ ಈಗ ಸ್ಕೂಟರ್ ಅನ್ನು ಪಕ್ಕದಲ್ಲೇ ಒಂದು ಮರದ ಕೆಳಗೆ ನೆರಳಿನಲ್ಲಿ ನಿಲ್ಲಿಸಿ ಮತ್ತು ನಾನು ಸಹ ಸ್ವಲ್ಪ ಹೊತ್ತು ಆ ಮರದ ನೆರಳಿನಲ್ಲಿ ಹಾಯಾಗಿ ಕಾಲ ಕಳೆದೆ .. ಆಗ ಮತ್ತೆ ಆ ತಂಪು ಪ್ರಕೃತಿಯಲ್ಲಿ ಹಳೆಯ ನೆನಪುಗಳು ನನ್ನ ಹೆಂಡತಿ ಆ ದಿನ ನಗಲು ಕಾರಣ ಏನು ?

ಈ ಒಂದು ಯೋಚನೆಯಲ್ಲಿಯೇ ಮತ್ತೆ ಒಂದು ನೆನಪಾಯಿತು .. ಕಚೇರಿ ಕೆಲಸ ಮುಗಿಸಿ ಈ ಅಂಗಡಿ ಸಾಲುಗಳ ಕಡೆ ಬರುವಾಗ ನಾನು ಕೈಯಲ್ಲಿಯೇ ಹಿಡಿದಿದ್ದ , ಎಲ್ಲಾ ಸಾಮಾಗ್ರಿಗಳ ಹೆಸರು ಮತ್ತು ಎಷ್ಟೆಷ್ಟು ಬೇಕು ಎಂದು ಹೆಂಡತಿ ಹೇಳಿ ನನ್ನ ಕೈಯಲ್ಲೇ ಬರೆಸಿದ್ದ ಉದ್ದನೆಯ ಪಟ್ಟಿಯೊಂದು ಕಾಣೆಯಾಗಿತ್ತು .. ಅದು ನಾನು ಸ್ವಲ್ಪ ಮೈ ಮರೆತು ಸ್ಕೂಟರ್ ಓಡಿಸಿದ ಕ್ಷಣದಲ್ಲಿ ಎಲ್ಲೋ ರಸ್ತೆಯ ಬದಿಯಲ್ಲಿ ಬಿದ್ದು ಹೋಗಿರಬಹುದು ಎನ್ನುವ ಅನುಮಾನ ..ಆದರೆ ಯಾವ ಸ್ಥಳದಲ್ಲಿ ಎನ್ನುವುದು ಸರಿಯಾಗಿ ತಿಳಿಯುತ್ತಿಲ್ಲ… ಈಗ ಮತ್ತೊಂದು ಚಿಂತೆ ಹೆಂಡತಿಗೆ Continue reading →

ಅಜ್ಜಿ ಕಥೆಗಳು

ಹತ್ತೂರ ಮಹಾರಾಜನ ಮಗಳು
ಮುದ್ದಾದ ರಾಣಿ
ಪಂಜರದ ಅರಗಿಣಿ
ಕಂಡಿಲ್ಲ ಹೊರ ಲೋಕ
ಅರಮನೆಯ ಬಾಳು ನರಕ
ಅಪ್ಪ ಅಮ್ಮನ ಅತೀಯಾದ ಪ್ರೀತಿ
ರಾಣಿಗದು ಬಹು ದುಃಖದ ಪರಿಸ್ಥಿತಿ

ಊರ ಬಾಗಿಲ ಬಳಿಯಲ್ಲಿ ಹೊಲ
ಹಗಲಿರುಳು ದುಡಿಯುವ ರೈತ
ಅವನ ಮಗ ಮುದ್ದಾದ ಯುವಕ
ಅರಮನೆಯ ಸೈನ್ಯದ ನಾಯಕ
ಸುಮಧುರ ಕಂಠದ ಗಾಯಕ

ಸುಮ್ಮನೆ ಒಂದು ಮುಂಜಾನೆ
ಹಾಡಿದ ಪ್ರೇಮದ ನೆನಪುಗಳ
ಮಲಗಿದ್ದ ರಾಣಿ ಎದ್ದು ಓಡೋಡಿ ಬಂದಳು
ಮನದಲ್ಲಿ ಹತ್ತಾರು ಕನಸುಗಳ ಕಂಡಳು
ಹಾಗೆಯೇ ಅಲ್ಲಿಂದ ಭಯದಲ್ಲೇ ಬಂತು
ಪ್ರೀತಿಯ ಹೊಸ ಹಾಡು ಜೊತೆ ಜೊತೆ
ಇಲ್ಲಿದೆ ಒಂದು ಸುಂದರ ಪ್ರೇಮ ಕಥೆ

ಕವನವಲ್ಲವಿದು ಅಜ್ಜಿಯ ಕಥೆಗಳು
ನಾನೀಗ ಹೇಳುವೆ ನಿಮಗಿಲ್ಲಿ ನನ್ನಜ್ಜಿಯ ನೆನಪುಗಳು .. 🙂 🙂
..ಪ್ರಶಾಂತ್ ಖಟಾವಕರ್.. 

ಗುಂಡಿನಾಟ

ಮುಂಜಾನೆಯಲ್ಲೊಂದು ಗುಂಡಿನಾಟ
ಅಣ್ಣನ ಜೊತೆಯಲ್ಲಿ ಆಡಲು ಕೂಗುತ..!!

ಮುಂಜಾನೆಯ ಮಂಜಿನ ಹನಿ
ಜುಮು ಜುಮು ಚಳಿ ಚಳಿ ಗಾಳಿ
ಬಾ ಇಲ್ಲಿ ಓಡೋಡಿ ಹೋಗೋಣ
ಮೈದಾನ ಸೇರಿ ಆಟವ ಆಡೋಣ

ಮುಂಜಾನೆಯಲ್ಲೊಂದು ಗುಂಡಿನಾಟ
ಅಣ್ಣನ ಜೊತೆಯಲ್ಲಿ ಆಡಲು ಕೂಗುತ..!!

ಕಬ್ಬಿಣದ ಗುಂಡನ್ನು ಎತ್ತೆಸೆಯುತ
ಬಿದ್ದ ಜಾಗದ ದೂರದಳತೆ ಹಾಕುತ
ಗುರುತು ಇಡಬೇಕು ನನ್ನಳತೆಯನ್ನು
ನಾನೆಸೆದ ಕಬ್ಬಿಣದ ಗುಂಡಿನ ದೂರ

ಮುಂಜಾನೆಯಲ್ಲೊಂದು ಗುಂಡಿನಾಟ
ಅಣ್ಣನ ಜೊತೆಯಲ್ಲಿ ಆಡಲು ಕೂಗುತ..!!

ನೀನೆಸೆಯುವ ಮುನ್ನವೇ ಮರೆಯದಂತೆ
ಮತ್ತೊಮ್ಮೆ ಲೆಕ್ಕ ಹಾಕು ಗುಂಡಿನ ಭಾರ
ಹೆಚ್ಚು ಕಡಿಮೆ ಇದ್ದರೆ ಆಗುವ ಲೆಕ್ಕಾಚಾರ
ತಪ್ಪಿದರದು ಪಂದ್ಯವಲ್ಲ ಈ ಗುಂಡಿನಾಟ

ಮುಂಜಾನೆಯಲ್ಲೊಂದು ಗುಂಡಿನಾಟ
ಅಣ್ಣನ ಜೊತೆಯಲ್ಲಿ ಆಡಲು ಕೂಗುತ..!!

|| ಪ್ರಶಾಂತ್ ಖಟಾವಕರ್ ||
 

ಓಡುವಾ ಗಂಗೆಯನ್ನು

ಓಡುವಾ ಗಂಗೆಯನ್ನು
ನಾ ಕೂಗಿ ಕರೆದು ನಿಲ್ಲಿಸಿದೆ
*
ಓಡುವಾ ಗಂಗೆಯನ್ನು
ನಾ ಕೂಗಿ ಕರೆದು ನಿಲ್ಲಿಸಿದೆ
*
*
ನಿಂತ ಅವಳು ಬಳಿ ಬಂದು
ಕಿವಿಯಲ್ಲಿ ಗುಟ್ಟೊಂದ ನುಡಿದಳು
*
ಜೀವನ ನಿಂತ ನೀರಾಗದೆಯೇ ಹರಿಯುತ್ತಬೇಕೆಂದು
ಹೀಗೆ ಸುಮ್ಮನೆ ಗುಟ್ಟೊಂದ ಹೇಳಿ ಹರಿದು ಹೋದಳು .. 🙂

|| ಪ್ರಶಾಂತ್ ಖಟಾವಕರ್ ||

ಖಳ ನಾಯಕ ಆಗುವ ಆಸೆ

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ….!!

ಹತ್ತು ಜನರು ನನ್ನ ಹಿಂದೆ ಬರಬೇಕು..
ನಾನು ಮಾತ್ರ ಸದಾ ಮುಂದಿರಬೇಕು..
ನಾನೇ ನಾಯಕನೆಂದು ಎಲ್ಲರು ಹೇಳಬೇಕು..
ಒಪ್ಪದವರ ಹಿಡಿದು ಹೊಡೆದೆ ಒಪ್ಪಿಸಬೇಕು..

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ….!!

ಕಂಡ ಕಂಡ ಜನರನ್ನು ಲೂಟಿ ಮಾಡಬೇಕು..
ಕೋಟಿ ಕೋಟಿ ಹಣವನ್ನು ಕೂಡಿ ಹಾಕಬೇಕು..
ಕೊಡದವರ ಕುತ್ತಿಗೆ ಹಿಡಿದು ಕಿತ್ತುಕೊಳ್ಳಬೇಕು..
ಕೊಟ್ಟವರ ಗುರುತು ಸಿಗದಂತೆ ಇರಬೇಕು…

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ….!!
ಹುಡುಗಿಯರು ನನ್ನ ಸುತ್ತ ಸುತ್ತಬೇಕು..
ಕೇಳಿದಾಗಲೆಲ್ಲಾ ಮುತ್ತು ಕೊಡಬೇಕು..
ಕಳ್ಳನಾದರೂ ಕೃಷ್ಣನೆಂದು ಹೊಗಳಬೇಕು..
ನನ್ನ ಪ್ರೀತಿಯ ಎಲ್ಲ ಹುಡುಗಿಯರು ಮೆಚ್ಚಬೇಕು..

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ….!!

ನನ್ನ ಕಂಡರೆ ಎಲ್ಲರೂ ಭಯಭೀತರಾಗಬೇಕು..
ಸಾಕ್ಷಿ ಹೇಳಲು ನಡುಗಿ ಹೆದರುವಂತಾಗಬೇಕು..
ಎಲ್ಲರೂ ನನ್ನನ್ನು ಅಣ್ಣಾ ಅಣ್ಣಾ ಎಂದು ಕರೆಯಬೇಕು..
ಭಯದಲ್ಲಿ ಎಲ್ಲರೂ ತಲೆಬಾಗಿ ನಡೆಯಬೇಕು..

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ….!!

ಪೊಲೀಸರು ಹುಡುಕಲು ಹೆಚ್ಚು ಕಷ್ಟವಾಗಿರಬೇಕು..
ಅಂತಹಾ ಕೋಟೆಯಲ್ಲಿ ನಾನು ರಾಜನಾಗಿರಬೇಕು..
ನೀಲಿ ಬಣ್ಣದ ಸೈನ್ಯಕ್ಕೆ ನಾನೇ ನಾಯಕನಾಗಿರಬೇಕು..
ಎಲ್ಲರಿಗೂ ಅದೊಂದು ವಿಶೇಷ ಅವತಾರವಾಗಿ ಕಾಣಬೇಕು..

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ….!!

ಮುಗಿಯದ ಆಸೆಗಳ ಪಟ್ಟಿಯು ಉದ್ದವಾಗಿರಬೇಕು..
ಆ ಬ್ರಹ್ಮ ಕೂಡ ಬರೆದ ಬರಹ ನನಗೆ ಹಿತವಾಗಿರಬೇಕು..
ವಿಷ್ಣುವಿನ ವಿರಾಟ ರೂಪದ ಶಕ್ತಿಯು ನನ್ನ ಪಾಲಾಗಬೇಕು…
ಮಾಹಾ ಶಕ್ತಿ ಶಿವನ ಮೂರನೇ ಕಣ್ಣು ನನ್ನ ಹಣೆಯಲ್ಲಿರಬೇಕು…

ಹುಚ್ಚು ಆಸೆಗಳ ಬಿಡಿಸಿ ಹೇಳುವ ಆಸೆ
ಒಮ್ಮೆಯಾದರೂ ಖಳ ನಾಯಕ ಆಗುವ ಆಸೆ….!!

|| ಪ್ರಶಾಂತ್ ಖಟಾವಕರ್ ||

Prashanth P Khatavakar

ಜೀವನ ನಾಟಕರಂಗ

ಜೀವನ ನಾಟಕರಂಗ , ನಾನೊಬ್ಬ ಪಾತ್ರಧಾರಿ
ಆ ದಿನಗಳ ನೆನಪು , ಬಾಳೊಂದು ಚದುರಂಗದಾಟ

ಮುಖಕ್ಕೆ ಬಣ್ಣ ಹಚ್ಚದೆಯೇ ಮೊದಲ ಪಾತ್ರ
ನಾನಲ್ಲಿ ಶ್ರೀ ಗಣೇಶ ಮುಖವಾಡ ಧರಿಸಿ
ಕೈಯಲ್ಲಿ ಹಿಡಿದು ಕೋವಿ ವೀರ ಪ್ರತಾಪ
ನಾನಲ್ಲಿ ವೀರ ಸೈನಿಕ ಮತ್ತೊಂದು ಪಾತ್ರ

ಗಡ್ಡೆ ಗೆಣಸು ತಿನ್ನುತ ಮರೆದೆಲೆಗಳೇ ಉಡುಪು
ಕಾಡು ಮನುಷ್ಯ ಜೀವಕ್ಕೆ ಜೀವ ಬಲಿ ನಾಟಕವಿಲ್ಲಿ
ನೇಗಿಲ ಹೊತ್ತು ಹೊಲದಲ್ಲಿ ಬದುಕು ಸಣ್ಣ ರೈತ
ಅಸ್ತಿ ಜಗಳ ಸತ್ತವನಿಗೆ ಮರುಜನ್ಮ ಶ್ರೀಮಂತ ದ್ವಿಪಾತ್ರ

ಕರೋಡ್`ಪತಿ ಕಥೆಯಲ್ಲಿ ಮುಖ್ಯಪಾತ್ರ ನಾನೇ ನಾಯಕ
ಎಲ್ಲವೂ ನಾಟಕ ಕೆಲವು ಅತಿಥಿ ಪಾತ್ರ ಹಲವು ಹಾಸ್ಯ ಪಾತ್ರ
ಇತಿಹಾಸದಲ್ಲಿ ರಾಜರು ಹೋರಾಟಗಾರರು ಮಹಾಪುರುಷರು
ಚಂದ್ರಶೇಖರ ಅಜಾದ್ ದೇಶಪ್ರೇಮ ಸ್ಕೌಟ್ ಕಾರ್ಯಕ್ರಮದಲ್ಲಿ

ಹಿಂದೂ ಮುಸ್ಲಿಂ ಭಾಯ್ ಭಾಯ್ ನಾನಲ್ಲಿ ಅಕ್ಬರ್ ಖಾನ್
ಗೆಳಯನ ತೊಂದರೆ ನಾನೇ ತಕ್ಷಣಕ್ಕೆ ಪೀಟರ್ ಫ್ರಂ ಪ್ಯಾರಿಸ್
ರಾಜ ಮಹಾರಾಜ ಎಂದ ಕ್ಷಣದಲ್ಲೇ ಗಂಭೀರತೆ ಸ್ವಭಾವ
ಹೈದರ್ ಅಲಿ , ಮದಕರಿನಾಯಕ , ನಾನೇ ಭೀಮ , ರಾವಣ

ಶ್ರೀ ಕೃಷ್ಣದೇವರಾಯ , ಸಂಗೊಳ್ಳಿ ರಾಯಣ್ಣ ,
ಎರಡು ನಿಮಿಷದ ಅರ್ಜುನ , ಇನ್ನೂ ಉಂಟು
ಜೀವನ ನಾಟಕರಂಗದಲ್ಲಿ ಪರಿಪರಿಯ ಪಾತ್ರಗಳು
ಎಲ್ಲವು ಕೇವಲ ಆ ದಿನಗಳ ನೆನಪಿನ ಕ್ಷಣಗಳು

ಅಂದಿತ್ತು ಸುಂದರ ಕನಸುಗಳಿಗೆ ಪ್ರೋತ್ಸಾಹ
ಇಂದೆಲ್ಲಾ ಆ ಕನಸುಗಳು ಸ್ವಾರ್ಥಕ್ಕೆ ಬಲಿಯಾಗಿ
ಜೀವನ ಬದಲಾಗಿ ಬರೆಯಲು ಬಗೆಬಗೆಯ ಕಲ್ಪನೆ
ಎಲ್ಲದಕ್ಕೂ ಕಾರಣ ಬಾಳೊಂದು ಚದುರಂಗದಾಟ

ಜೀವನ ನಾಟಕರಂಗ , ನಾನೊಬ್ಬ ಪಾತ್ರಧಾರಿ
ಆ ದಿನಗಳ ನೆನಪು , ಬಾಳೊಂದು ಚದುರಂಗದಾಟ

|| ಪ್ರಶಾಂತ್ ಖಟಾವಕರ್ ||

Prashanth P Khatavakar

ನಾನೊಬ್ಬ ರೈತ

ಕುಬೇರನಾಗುವ ಕನಸು ಕಾಣುವ ಸಾಮಾನ್ಯನು.. ನಾನೊಬ್ಬ ರೈತ !!

ಮಿಂಚೊಂದು ಹಾರುತಲತ್ತಿತ್ತ ಸುತ್ತ ಮುತ್ತ
ಎತ್ತ ನೋಡಿದರತ್ತ ಆಗಸದೊಳು ಬೆಳಗುತ್ತ
ಎನ್ನ ಮನಸಿನಾಳದೊಳು ಅದೇನೋ ಚಿಂತಿಸುತ
ಎಚ್ಚರಿಸುತಿಹುದು ಕಟ್ಟಲೆತ್ತುಗಳ ನೇಗಿಲ ಹಿಡಿಯುತ

ಕುಬೇರನಾಗುವ ಕನಸು ಕಾಣುವ ಸಾಮಾನ್ಯನು.. ನಾನೊಬ್ಬ ರೈತ !!

ಕಗ್ಗತ್ತಲು ಕಳೆದು ಮೂಡುತಿಹನೇಸರನಾಗಸದೊಳು
ಕಪ್ಪು ಬಿಳುಪಿನಾಟದಿಂದೆನ್ನಮನಸ್ಸಿನಾಲೋಚನೆಗಳು
ಕನಸಿನಾಳದಿಂದಾಚೆಗೆಳೆದು ತಂದು ಬಣ್ಣದ ಬದುಕಿನೊಳು
ಕಷ್ಟ ಸುಖದಿಂದ ಕ್ಷಣ ಕ್ಷಣ ಕರಗಿ ಕೊರಗುವ ನಾ ಜೀತದಾಳು

ಕುಬೇರನಾಗುವ ಕನಸು ಕಾಣುವ ಸಾಮಾನ್ಯನು.. ನಾನೊಬ್ಬ ರೈತ !!

ಹಾಡುತ ನಲಿಯುತ ಹಗಲಲ್ಲಿ ಹೊಲದೊಳು ದುಡಿಯುತ
ಹಾರುತ ಮುಳುಗೇಳುತ ತೇಲುತ ಕೆರೆಯಲ್ಲೀಜಾಡುತ
ಹಾದಿ ಬೀದಿಯೊಳಗಾಡುತ ಹೋಗುವೆನೆನ್ನ ಹಟ್ಟಿಯತ್ತ
ಹಾಲನ್ನು ಕರೆದು ಊರಲ್ಲಿ ಮಾರಿ ಬಂದ ಹಣವನೆಣಿಸುತ

ಕುಬೇರನಾಗುವ ಕನಸು ಕಾಣುವ ಸಾಮಾನ್ಯನು.. ನಾನೊಬ್ಬ ರೈತ !!

|| ಪ್ರಶಾಂತ್ ಖಟಾವಕರ್ ||
 

Prashanth P Khatavakar

ಚಿತ್ರ ನೋಡಿ ಕವನ ಬರೆಯಿರಿ – 17

ಹೆತ್ತವಳ ಮುಖ ನೋಡದೆ
ಮರುಗಿದೆ ಪುಟ್ಟ ಜೀವ
ಬಡತನದ ಭಾದೆ ತಾಳಲಾರದೆ
ಸುತ್ತುಹೊರಿದಿದೆ ಹಸಿವಿನ ಭಾವ
ಕರುಣೆ ಇಲ್ಲದ ಜಗತ್ತು
ತುತ್ತಿಲ್ಲದೆ ಒದಗಿದೆ ಆಪತ್ತು
ನಾಯಿಗೆ ಹಾಕಿದ ಅನ್ನವ
ನಾ ಉಣ್ಣತಿರಲು,
ಓಡಿಸಿದರು ಹಲವರು….
ಓ ದೇವರೆ ಕರುಣಿಸು ಹಸಿವಿಲ್ಲದ ಹೊಟ್ಟೆಯ……
ಕನಿಕರ ಬಾರದ ನೀ ಆದೆ ರಾಕ್ಶಸನ ತರ
ನಿನ್ನ ಜನುಮಕ್ಕೆ ನನ್ನ ಮನಸ್ಸಿನಿಂದ ಧಿಕ್ಕಾರ
Ravi Sakleshpur
+++++++++++++++++++++++++++++++++++++++

ಕಸಿದು ತಿನ್ನುವ ತಾಕತ್ತು ನನಗಿಲ್ಲ
ಆದರೂ ಹೊಟ್ಟೆ ಹಸಿದಿದೆಯಲ್ಲ
ಉಳ್ಳವರು ತಿಂದುಳಿದುದನು ಚೆಲ್ಲಿದರೇ ಹೊರತು
ನನ್ನೊಳಗಿನ ಹಸಿವಿನ ಕುರಿತು ವಿಚಾರಿಸಲಿಲ್ಲ
ನನ್ನ ಬಳಿ ಕರೆದು ತಿನ್ನಲೇನೂ ಕೊಡಲಿಲ್ಲ
ಆದರೂ ಅವರ ಬಗೆಗೆ ಮುನಿಸಿಕೊಳ್ಳುವುದಿಲ್ಲ
ಚೆಲ್ಲಿರುವ ಆಹಾರವಾದರೇನಂತೆ ನನ್ನ ಹಸಿವ ನೀಗಿಸುವುದಲ್ಲ
ಮಿಗಿಲಾಗಿ ಈ ತುತ್ತು ಭೂತಾಯಿಯ ಬಟ್ಟಲಿನಲ್ಲಿಹುದಲ್ಲ

—ಕೆ.ಗುರುಪ್ರಸಾದ್
Guruprasad Acharya
+++++++++++++++++++++++++++++++++++++++

ಬಹುಮಹಡಿ ಕಟ್ಟಡದ ಹವಾನಿಯಂತ್ರಿತ ಕೊಠಡಿಯಲ್ಲಿ ಮೃಷ್ಟಾನ ಬೋಜನವ ತಿಂದು ತೇಗುವವರು,
ಜನ್ಮದಿನದ ಷೋಕಿಗೆ ಕೋಟಿಕೋಟಿ ಚೆಲ್ಲಾಡುವವರು,
ಉಳ್ಳವರು,ಹೊಟ್ಟೆ ತುಂಬಿದವರು,ತೇಗಿ ತೂಕಡಿಸುವವರು ಒಮ್ಮೆ ಇತ್ತ ನೋಡಲಿ,
ಸಹಾಯಹಸ್ತ ಚಾಚಲಿ,ಹಸಿವ ಒಡಲ ತಣಿಸಲಿ
Nandish Bankenahalli
+++++++++++++++++++++++++++++++++++++++

ಹೊಟ್ಟೆ ತುಂಬಾ ಹಸಿಯುತ್ತಿದೆಯಲ್ಲ
ವ್ಹಾ ಇಷ್ಟಾದರೂ ಸಿಕ್ಕಿತಲ್ಲ
ಯಾರೋ ಹೊಟ್ಟೆ ತುಂಬಿದವರು ಚಲ್ಲಿದರೆನಂತೆ
ನನಗೆ ಇದು ಮೃಷ್ಟಾನ್ನ ಭೋಜನದಂತೆ
ಸರಿಯಾಗಿ ತಿಂದು ಎಷ್ಟು ದಿನವಾಯ್ತೋ
ಎಷ್ಟು ಜನಗಳ ಬೇಡಿಯಾಯ್ತೋ
ಯಾರು ಕೊಡಲಿಲ್ಲ ಒಂದು ತುತ್ತು ಅನ್ನ
ಕೇಳಿಸಿಕೊಳ್ಳಲಿಲ್ಲ ಒಬ್ಬನೂ ನನ್ನ ಹಸಿವಿನ ಆಕ್ರಂದನ
ಇಂದೇ ನನಗೆ ಶುಭದಿನ
ಹಾರೈಸುವೆ ಅನ್ನ ಚಲ್ಲಿದವನ
Mamatha Keelar
+++++++++++++++++++++++++++++++++++++++

ಬರೆದವರು ಯಾರು… ??
*****************************

ಚಿತ್ರ ನೋಡಿ ನೋಡಿ ಕವಿತೆ
ಬರೆಯಲು ಮಾಡಿದರೆ ಚಿಂತೆ
ಪದೇ ಪದೇ ಅದೇ ನೆನಪಾಗುತ್ತೆ
ಹಳೆಯ ಕನ್ನಡ ಚಲನಚಿತ್ರಗಳ ಕಥೆ

ಅದೊಂದು ಚಿತ್ರ ವಿಚಿತ್ರ ಜಿಮ್ಮಿಗಲ್ಲು
ಹಾಡಿದವರು ಡಾ.ವಿಷ್ಣುವರ್ಧನ್ ನೆನಪುಗಳು
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ಚಿತ್ರಗೀತೆಯ ನೆನಪಿನ ಚಿತ್ರಣ ಕಲ್ಪನೆಯ ಕವನ

ಅನ್ನವೆಂದೊಡನೆ ಅಮ್ಮನ ನೆನಪು ಸಹಜ
ಅದಕ್ಕಿಲ್ಲಿ ಹುಲಿಯ ನೆನಪಾಗುದು ಸಹ ನಿಜ
ಕಲಿಯುಗ ಭೀಮ ಚಿತ್ರದ ಟೈಗರ್ ಪ್ರಭಾಕರ್
ಚಿತ್ರದ ಹಾಡಿನ ನೆನಪು ಸಹ ಈ ಚಿತ್ರಕ್ಕೆ ಸೂಪರ್

ತುತ್ತು ಅನ್ನಕ್ಕಾಗಿ ಕಷ್ಟ ಪಟ್ಟ ಚಿನ್ನಾರಿ ಮುತ್ತ
ಪೇಟೆ ಸೇರಿ ಎಲ್ಲಾ ಮರೆತ ಮನದಲ್ಲಿ ಚಿಂತಿಸುತ
ಎಷ್ಟೊಂದ್ ಜನ, ಇಲ್ಲಿ ಯಾರು ನನ್ನೊರು ಅನ್ನುತ
ಪಾದುಕೆಗಳ ಕದಿಯುತ ಓಡುತ, ಪದಕ ಗೆಲ್ಲುತ

ಸಕಲ ಸ್ನೇಹಿತರಿಗೆ ದಾರಿದೀಪ , ಆದನು ಅಪರೂಪ
ತುತ್ತು ಅನ್ನಕ್ಕಾಗಿ ತಾತನ ಮಕ್ಕಳೆಲ್ಲರೂ ಅಲ್ಲಿ ಕಳ್ಳರು
ಆದರವರು ಓಡಿ ಓಡಿ ಕೊನೆಯಲ್ಲಿ ಎಲ್ಲರ ಮನ ಗೆದ್ದರು
ಈ ಚಿತ್ರಕ್ಕೆ ಚಲನಚಿತ್ರಗಳ ನೆನಪಿನ ಮುಗಿಯದ ಕವನ .. 🙂

ಬರೆದವರು ಯಾರು… ??
|| ಪ್ರಶಾಂತ್ ಖಟಾವಕರ್ ||
Prashanth P Khatavakar
+++++++++++++++++++++++++++++++++++++++

ನೀನು ಎಸೆಯುವ ತುತ್ತು……..
ನನ್ನ ಹೊಟ್ಟೆಗೆ ಮುತ್ತು….
ಸಿಗದೇ ಹೋದರೆ ತುತ್ತು ಈ ಹೊತ್ತು…
ನನ್ನ ಜೀವಕ್ಕೆ ಕುತ್ತು…
ತಿಳಿಯದೆ ಹೋದರೆ ಅನ್ನದ ಬೆಲೆ…
ಮಾನವತೆಗೆ ಆಪತ್ತು………
ನಿನಗೆ ಇದು ಬರಿ ಅನ್ನ
ನನಗೆ ಇದು ಕೈಗೆಟುಕದ ಚಿನ್ನ….
Sunitha Manjunath
+++++++++++++++++++++++++++++++++++++++

ಅವ್ವ-ಅಪ್ಪ ಎನ್ನಲು ಯಾರಿಲ್ಲ
ಬಂಧು-ಬಳಗ ಅನ್ನಲು ಕಸುವಿಲ್ಲ
ತುತ್ತು ಕೂಳಿಗೆ ಬರವಿಲ್ಲ
ನನಗಂತೂ ತಿನ್ನಲು ಬಾಯಿಲ್ಲ
ತಿಪ್ಪೆಗೆಸೆಯಲು ಲಾಯಕ್ಕು ನಾನು ತಿನ್ನುತ್ತಿರೋ ಈ ಅನ್ನ
ಆದರೂ ನಾನೆಸೆಯಲಾರೆ ,
ನನ್ನ ಹೆತ್ತವರು ನನ್ನೆಸೆದಂತೆ…ಇದನ್ನು.!!!

ಮಾನಮುಚ್ಚಲು ಚೆಡ್ಡಿಯಿಲ್ಲ-
ಸ್ನಾನ-ಶುಚಿ-ರುಚಿ ಎಂಬುದು ನನಗರಿವಿಲ್ಲ
ಯಾಕೆ ಬೇಕು?
ಅದು ನನಗೆ ನನ್ನವರೆನ್ನೋರು
ಇಲ್ಲದ ಮ್ಯಾಲೆ!!
ಆ ಚಿಂತೆ ನನಗಿಲ್ಲ…ಯಾಕೆಂದರೆ
ಈ ಸಮಾಜದವರಿದ್ದಾರಲ್ಲ??..
ಅವರಿದ್ದ ಮ್ಯಾಲೆ
ಇನ್ಯಾವುದೂ ಬೇಕಿಲ್ಲ….

ಕಾಗೆ ಒಂದಗುಳ ಕಂಡರೆ ಕರೆವುದು
ತನ್ನ ಕುಲಬಾಂಧವರನು ಹಂಚುಣ್ಣಲು..
ನಾಯಿಯಂತಹುದು ಪೋಷಿಸುವುದು
ತನ್ನ ಮರಿಮೊಮ್ಮಕ್ಕಳನು..
ನನ್ನ ಹೆತ್ತವರಿಗಿರಲಿಲ್ಲವೇಕಯ್ಯ??
ಇಷ್ಟಾದರೂ ಮಮತೆ??
ಇರಲಿ ಬಿಡು …
ಇದ್ದಾಗ
ಅವರಿಗವರದೇ ಚಿಂತೆ
ಬೇಕಿಲ್ಲವಾಗುವುದು ಮಕ್ಕಳ ಪಾಲನೆ ಎಂಬ ಕಂತೆ
ಛೆ! ಇದೊಂಥರಾ ಒಂದು ಚಿಂತೆಯಿಲ್ಲದ ಸಂತೆ…

–ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ.
Haniyuru ChandreGowda Channapatna
+++++++++++++++++++++++++++++++++++++++

http://www.facebook.com/photo.php?fbid=1932509488819&set=o.195906690495079&type=1&theater

ಕನಸಿನ ಮಾತು ( ಮಹಾನ್ ವಿಜ್ಞಾನಿ )

ಮನದ ಮಾತಿದು
ಮರಗಿಡಗಳ ಸದ್ದು
ಮಾತಾಡಿದೆ ನೊಂದು
ಮಲಗಿರುವಾಗ ಬಂದು

ಈ ಜನರು
ಪ್ರೀತಿಯಲ್ಲಿ ಕಿತ್ತರು
ನಮ್ಮ ಹೂವು ಹಣ್ಣು
ಹಲವು ಬಗೆಯ ಕಾರ್ಯಕ್ಕೆ
ಬಯಸಿ ಬಳಸಿ , ಬೆಳಸದೇ..
ಮರೆತರು ನಮ್ಮನ್ನು

ಪ್ರಕೃತಿಯ ಸೌಂದರ್ಯ ಹಸಿರೆಂದು
ಹಾಡಿದರು ಹೊಗಳಿದರು ಕಲ್ಪವೃಕ್ಷವೆಂದು
ಕಾಡಿನೊಳು ನಮ್ಮನ್ನು ಕೊಂದು
ಮಾಡಿದರು ಹಣದ ರಾಶಿಯ ಕದ್ದು ಕದ್ದು
ನುಡಿದಿದೆ ಈ ಜೀವ , ಜೀವಕ್ಕಾಗಿ ಇಂದು ..

ಈ ಲೋಕದ
ಮಹಾನ್ ವಿಜ್ಞಾನಿ
ಶ್ರೀ ಜಗದೀಶ್ ಚಂದ್ರ ಬೋಸರು
ಮಾಡಿದ ಸಾಧನೆಯನ್ನು … !!

ಈ ಜಗದೊಡೆಯ
ಮಹಾದೇವ ಶಿವ
ಶ್ರೀ ಹರಿ , ಜಗದೀಶ , ಬ್ರಹ್ಮ ದೇವರು
ಮಾಡಿದ ಸೃಷ್ಟಿ ನಿಯಮವನ್ನು… !!

ಮರೆತರು ಮನುಷ್ಯರು
ಮನುಷ್ಯರೇ ಮಾಡಿದ
ನೀತಿ ನಿಯಮ , ಸಾಧನೆ
ಅದೇಕೋ.. ಈಗಿಲ್ಲಿ ಸ್ವಾರ್ಥ ಬದುಕಿನ ಚಿಂತನೆ.. 🙂

|| ಪ್ರಶಾಂತ್ ಖಟಾವಕರ್ ||

Prashanth P Khatavakar

ವಿಷಯ ನಮ್ದು ಕವನ ನಿಮ್ದು – ಪ್ರಶಾಂತ್ ಖಟವಾಖರ್ (ಪುಟ1)

ಚಿತ್ರ ನೋಡಿ ಕವನ ಬರೆಯಿರಿ – 14

ನನ್ನ ಮನೆಯಲ್ಲೀಗ
ಬಂದು ಬಿಟ್ಟಿದೆ
ಕಣ್ಣೀರಿನ ಪ್ರವಾಹ
ಕಾರಣ…
ನೆಚ್ಚಿನ ಧಾರಾವಾಹಿಯಲಿ
ಸಾವಿಗೀಡಾದ ನಾಯಕಿಯ
ಬಗ್ಗೆ ನನ್ನವಳಿಗಿರೋ ವ್ಯಾಮೋಹ

Guruprasad Acharya
==================================
ಮನೆಯೊಳು ನುಗ್ಗಿ ನೀರು
ಮನದೊಳು ಚಿಂತೆ ನೂರು
ಹವಾಮಾನ ಸುದ್ದಿ ಜೋರು
ವಾತಾವರಣ ಏರು ಪೆರು .. !!

ಪರಿಹಾರ ಕೊಡುವುದು ಯಾರು
ಅರ್ಧ ಪಾಲು ಬಯಸುವವರು
ಹಿಂದಕ್ಕೊಮ್ಮೆ ಮುಂದಕ್ಕೊಮ್ಮೆ
ತೂಗುಯ್ಯಾಲೆ ಈ ಜೀವನ

Prashanth P Khatavakar
==================================
ಆಕಾಶವು ಬೀಳಲಿ ಮೇಲೆ…
ಭೂಮಿಯೆ ಬಾಯ್ ಬಿಡಲೇ ಇಲ್ಲೇ.
ನಾವೆಂದು ಏಳೆವು ಇಲ್ಲಿಂದ..!

ನದಿ-ಹೊಳೆಯೇ ಹರಿಯಲಿ ಇಲ್ಲಿ..
ಬೆಂಕಿಯೆ ಹತ್ತುರಿಯಲಿ ಇಂದಿಲ್ಲಿ.
ನಮಗೇನು ಕಾಣಿಸದು…!

ಎಂಥ ಸೆಳೆತ ಈ ಟಿ.ವಿ.ಯದು
ನಮಗೋ.. ನಿಮಗೋ.. ಅವರಿಗೋ.!
ಇದು ವಿಡಂಬನೆಯೋ..ವಿಪರ್ಯಾಸವೋ ಆ ದೇವನೆ ಬಲ್ಲ

Bhagirathi Chandrashekar
==================================
ಎಲ್ಲರ ಮನೆಯಲ್ಲೂ T.V.ಯೊಂದು ಕುಳಿತಿದೆ ಠೀವಿಯಲಿ
ಹಿಂದೆ ಸಿರಿವಂತರ ಕಿರೀಟಕ್ಕೆ ಗರಿಯಾಗಿತ್ತು..
ಈಗ ಎಲ್ಲರ ಮನೆಯ ಊಟದ ಉಪ್ಪಿನಕಾಯಿಯಾಗಿದೆ.

ಕೆಲವರ ಮಾಹಿತಿ ಸಂಗ್ರಹಣೆಯ ಕೇಂದ್ರಬಿಂದುವಾದರೆ..
ಮತ್ತೆ ಕೆಲವರಿಗೆ ಒಡನಾಡಿ..ಸಂಗಾತಿ.
ಮನೆ ಹತ್ತಿ ಉರಿದರೂ..ಕಳ್ಳಕೊಳ್ಳೆಹೊಡೆದರೂ
ಮೂರ್ಖಪೆಟ್ಟಿಗೆಯ ಮುಂದೆ ಕುಳಿತವರೆಷ್ಟೋ ಮೂರ್ಖಮಂದಿ

ಪ್ರಪಂಚದೆಲ್ಲಾ ಆಗು-ಹೋಗುಗಳ ಕ್ಷಣಮಾತ್ರದಿ ಭಿತ್ತರಿಸುವ
ಈ ಮಾಂತ್ರಿಕ ತಾಂತ್ರಿಕತೆಯ ಉತ್ತುಂಗವಲ್ಲವೇ..?
ಇನ್ನೊಬ್ಬರ ಭಾವನೆಗಳ ಬಂಡವಾಳಮಾಡಿಕೊಂಡವರ
ಪಾತ್ರದಲೇ ತಮ್ಮನ್ನಿರಿಸಿ ಅತ್ತಾಗ ಅತ್ತು, ನಕ್ಕಾಗ ನಕ್ಕು ಲೀನವಾದವರೆಷ್ಟೋ..?

ಇತಿ-ಮಿತಿಗಳ ಮತಿ ಮುಷ್ಠಿಯೊಳಿದ್ದರೆ
ಹವ್ಯಾಸ ಚಟವಾಗದಿದ್ದರೆ..ಅಮೃತ-ಅಮೃತವೇ..ವಿಷ-ವಿಷವೇ..
ಮಿತಿ ಮೀರಿದರೆ..ಅಮೃತವೂ-ವಿಷವೇ…!

Bhagirathi Chandrashekar
==================================
ನೀರನ್ನ ತಲ್ಲಿದರಾಯ್ತು ಹೊರಗೆ ನಂತರ
ಟಿವಿಯಂತೂ ಬೇಕೇಬೇಕು ನಿರಂತರ
ನೀರಿಗೇನು ಎಲ್ಲೂ ಹೋಗಲ್ಲ
ದಾರವಾಹಿಯಾದರೆ ಮತ್ತೆ ಸಿಗೊಲ್ಲ
ಮೊಣಕಾಲವರೆಗೆ ನೀರಾದರೇನಂತೆ
ನೋಡಿಕೊಳ್ಳಬೇಕು ಟಿವಿಗೆ ನೀರು ತಾಕದಂತೆ

Mamatha Keelar
==================================
ಹೆಂಡತಿ ಮಕ್ಕಳು ಕಣ್ ಬಿಟ್ಟು ,

ನೋಡುತಿರುವರು ಮೂರ್ಖರ ಪೆತ್ತಿಗೆಯನು ದಿಕ್ಕೆಟ್ಟು ,

ಹಿಡಿದು ಕೊಂದು ಕೈಯಲಿ ಒಂದು ಬೋರ್ಡ್ “ಡಿಸ್ಟರ್ಬ್ ಮಾಡ್ಬೇಡಿ ದಯವಿಟ್ಟು ”…

ಸಹಿಸಲಾರದೆ ಯಜಮಾನನು ಕಂಗೆಟ್ಟು ,

ಅತ್ತ ಕಡೆ ನಿಂತ್ ಕೊಂಡಿದ್ದಾರೆ ತಲೆ ಕೆಟ್ಟು ,

ಇತ್ತ ಕಡೆ ಮನೆ ಮಂದಿಯೆಲ್ಲ ನೋಡುತ ಧಾರಾವಾಹಿಯ ಒಂದು ಸಂನಿವೆಶವನು ಮೂಗಿನ ಮೇಲೆ ಬೆರಳಿಟ್ಟು ,

ಚಪ್ಪಿರುಸುತಿರುವರು – ಇರಬಾರದಿತ್ತೆ ತಿನ್ನೋಕೆ ಚಕ್ಲಿ ನಿಪ್ಪಟ್ಟು …

ಮೆಲ್ಲನೆ ಅಲ್ಲಿದ್ದ ಮಗನು ಕೇಳಿದ “ಅಮ್ಮ ಬೇಕೆನಗೆ ಉಪ್ಪಿಟ್ಟು ”,

ಪಕ್ಕದಲ್ಲೇ ಇದ್ದ ಮಗಳು ಕೇಳಿದಳು “ಅಮ್ಮ ನನಗೆ ತಂಬಿಟ್ಟು ”,

ಅದೆಲ್ಲಿತ್ತೋ ಕೋಪ – ಒಳಗೆ ಬಂದ ಯಜಮಾನನು TV ಯನ್ನು off ಮಾಡಿ ಸುಮ್ಮನಿರಿಸಿದನು ಎಲ್ಲರನು ನಾಲ್ಕು ನಾಲ್ಕು ಕೊಟ್ಟು ,

ಅಯ್ಯೋ ಕರ್ಮ – ಧಾರಾವಾಹಿಯ ಕೊನೆಯ ಸನ್ನಿವೇಶವು ಮಿಸ್ ಆಇಥಲ್ಲ ಅಂತ ಬೈ ಕೊಂಡ್ರು ತಲೆ ಮೇಲೆ ಕೈ ಇಟ್ಟು. . .

Ajay Pyro
==================================
ನೀರಿಗಾಗಿ ಪರದಾಡಿದ ಜೀವಕೋಟಿಗಾಗಿ
ಪುರಾಣದ ಭಗೀರಥ ಗಂಗಾ_ಜಲದಿಂದ ಪಾವನಗೊಳಿಸಿದ…
ಪುರಾತನರು ಕೆರೆ-ಕಟ್ಟೆ-ಭಾವಿ-ಕಾಲುವೆಗಳಿಂದ ಜಲಧಾರೆ ಹರಿಸಿದರು…
ಆಧುನಿಕರು ಭೂತಾಯಿ ಮಡಿಲಿಗೆ ರಂದ್ರ ಕೊರೆದು ಜಲಧಾರೆ ಹರಿಸಿದರು…

ಆಧುನಿಕರ ಆಟಾಟೋಪಗಳಿಗೆ ಬೆಚ್ಚಿದ ಭೂತಾಯಿ ಋತುಮಾನಗಳ ಗೊಂದಲಕ್ಕೀಡಾದಳು!
ಆಧುನಿಕರ ಸಣ್ಣತನದಿಂದ ಭೂತಾಯ ಮಡಿಲು ಬರಿದಾಯಿತು
ಆಧುನಿಕರ ಮುಂದಾಲೋಚನೆಯಿಲ್ಲದ ಯುಕ್ತಿಗೆ ಕಡಲು ಕೊರೆಯಿತು ; ಮೀತಿಮೀರಿತು
ಆಧುನಿಕರು ಎಚ್ಚರಗೊಂಡಿಲ್ಲ ಕಾಲಬಳಿಯೇ ಜಲಧಾರೆ ಉಕ್ಕಿದರೂ ; ಜೀವ ಮುಕ್ಕುತ್ತಿದ್ದರೂ

ಆಧುನಿಕ ಸೋಗಿನಲ್ಲಿ ಮೈಮರೆತಿದೆ ಮನುಜ ಕುಲಗಳು
ಆಧುನಿಕ ಮೋಜುಗಳಾಗುತ್ತಿವೆ ಸಂಜೆಯ ಸಾವಿನ ಮೇಜವಾನಿಗಳು
ಆಧುನಿಕ ಸವಲತ್ತುಗಳು ವಿಷದ ನಂಜಿನ ತಯಾರಿಕೆಗಳು
ಆಧುನಿಕ ಅಧ್ವಾನಗಳ ಮಧ್ಯೆ ಲಾಭಬಡುಕ ಬಂಡುಕೋರ ಮೇಧಾವಿಗಳು

ಆಧುನಿಕತೆಯ ಆಕರ್ಷಣೆಗೆ ಬಿದ್ದ ಮರುಳ ಮಾನವನಿಗೆ ಪಶ್ಚಾತ್ತಾಪದ ಕೊರಗಿಲ್ಲ
ಆಧುನಿಕ ಯೋಚನಾಲಹರಿಯಿಂದ ಕಾಲಬುಡಕ್ಕೆ ಏರಗಿದರೂ ಎಚ್ಚರಿಲ್ಲ
ಆಧುನಿಕನಾಗಲಿಲ್ಲ ; ಪುರಾತನನಾಗಲಿಲ್ಲ…ಪುಣ್ಯಪುರುಷನಂತೂ ಆಗಲಿಲ್ಲ
ಆಧುನಿಕತೆಯ ಅವಘಡಗಳಿಂದಾಗಿ ಅತಿವೃಷ್ಟಿ-ಅನಾವೃಷ್ಟಿಗಳೆಂಬ ಅವನತಿಯ ಸೂತಕಗಳ ಅರಿವಿಲ್ಲ

Hipparagi Siddaram
”””””””””””””””””””””””””””””””””””””””””””””””””””””””””””””””””””””””
http://www.facebook.com/groups/kannadavesatya/247432748675806/?notif_t=like

ಚಿತ್ರ ನೋಡಿ ಕವನ ಬರೆಯಿರಿ – 13

ಮೊಳಕಾಲು ಉದ್ದ ಕೆಸರಲ್ಲಿ ಕಾಲು…
ಮೈ ತುಂಬಾ ಬೆವರು.. ಕೈಯಲ್ಲಿ ನೇಗಿಲು
ಕಷ್ಟ-ನಷ್ಟಗಳ ಆಗರ ಈ ನಮ್ಮ ರೈತ

ಜೀವನದಲಿ ಅವ ಕಂಡಿದ್ದೇನು..?
ಬಿಸಿಲ ಕಾವು,ಧೂಳು ಮೈಯ್ಯ..
ಧೀರ್ಘ ಮಳೆ, ಬರಗಾಲದ ಹೊಳೆ

ದಿನದ ಹಸಿವು ಕಾಡದಿರದು
ಶ್ರಮದ ಹಿಂದೆ ಹಲವು ಭಾವ
ಬೇಕೆಂದಾಗ ಮಳೆ ಇಲ್ಲ,ಮಳೆ ಬಂದಾಗ ಕೈಲಿ ಕಾಸಿಲ್ಲ..
ಮೈಮರೆತರೆ ಇಡೀ ವರ್ಷ ಅರೆಹೊಟ್ಟೆ

ದೇಶಕ್ಕಾಗಿ ಅನ್ನ ನೀಡುವ ಉಳುವ ಯೋಗಿ
ಜೀವನ ಬಲ್ಲವನೇ ಬಲ್ಲ…..!!!
ಮನುಜ ನೀ ಅದನು ನೆನೆದರೆ ಅವನ ಬದುಕು ಸಾರ್ಥಕ…!

Bhagirathi Chandrashekar
==================================
ರೈತಣ್ಣಾ….!
ಭೂತಾಯಿಯ ಮಡಿಲ ಮಗುವಾಗಿಹೆ
ಭೂತಾಯಿಗೆ ಹಸಿರಹೊನ್ನ ಹೊದಿಕೆಯಿಂದ ಸಿಂಗರಿಸಿಹೆ

ರೈತಣ್ಣಾ….!
ನಾಡಿನ ನರ-ನಾಡಿಗಳು ಮಿಡಿಯುವವು ನಿನ್ನ ದುಡಿಮೆಯ ದಯಾ-ಭಿಕ್ಷೆಯಿಂದ
ನಾಡಿನ ಏಳು-ಬೀಳುಗಳ, ಉನ್ನತಿ-ಅವನತಿಗಳ ಹಂಗಿಲ್ಲ ನಿನ್ನ ಕರುಣೆಯಿಂದ

ರೈತಣ್ಣಾ…!
ಕಲಿಯುಗದ ಕಾಯಕ ಯೋಗಿ
ಕಲಿಸಿದೆ ಕೈಲಾಸದ ಸದ್ಗತಿಗೆ ಹಾದಿ

ರೈತಣ್ಣಾ…!
ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲಾ ಎಂಬುದು ನಿಜ!
ಒಕ್ಕಲೆಬ್ಬಿಸುವುದನರಿತು ನಡೆಯುಬೇಕಿದೆ ಜಗದ ಮನುಜ!

ರೈತಣ್ಣಾ…!
ಜಗದ ಹಸಿದ ಹೊಟ್ಟೆಗಳು ತಣ್ಣಗಾಗಿಸುವನು ನೀನೆ
ಜಗಕೆಲ್ಲಾ ನೀನೆ ಜಗದೇಕ ವೀರ, ಅನ್ನದಾತ ನೀನೆ !

ರೈತಣ್ಣಾ…!
ವಸಾಹತುಕರಣ, ಜಾಗತೀಕರಣದಂತಹ ಕರಣಗಳ ಉಸಾಬರೀಯಿಲ್ಲದ ವೀರ
ಭೂತಾಯಿಯ ನಂಬಿದ ಮನುಜ ನೀ ಚಿರಂಜೀವಿ…ಅಪರಂಪಾರ !

Hipparagi Siddaram
==================================
ಹೇಳುವದಕೆ ರೈತರೇ ದೇಶದ ಬೆನ್ನೆಲುಬು
ಅವ ದುಡಿದದ್ದು ಅವನಿಗೇ ಸಿಗದೇ ಕಾಣುತಿರುವದು ಅವನದ್ದೇ ಎಲುಬು
ಇದು ಇಂದಿನ ನಮ್ಮ ದೇಶದ ಪರಿಸ್ಥಿತಿ
ಮುಂದುವರಿದರೆ ಹೀಗೆ ನಾವು ಕಾಣುವೆವು ಅಧೋಗತಿ
ಮಳೆ ಯಿದ್ದರೆ ಬಿತ್ತನೆ ಬೀಜವಿಲ್ಲ
ಬೀಜವಿದ್ದರೆ ಮಳೆಯೇ ಇಲ್ಲ
ಅವ ಮಾಡುತಿಹನು ಅವನ ಕಾಯಕ
ಬಿಡದು ನಿರಾಸೆ ಅವ ಸಾಯೋತನಕ

Mamatha Keelar
==================================
ಅನ್ನದಾತ!!!
ಜಗದ ಶುಭ್ರ ಉಡುಪಿನವರಿಗೆಲ್ಲಾ ನೀಡುವೆ ತುತ್ತು ಅನ್ನವನು
ಶುಭ್ರತೆಗೆ ಇಲ್ಲ ನಿನ್ನ ಗಮನ ಹಸಿರು ಮಾತೆಯ ಸುತನಿವನು
ಶುಭ್ರರ ಹೊಟ್ಟೆ ತಣಿಸಲು ಹಗಲಿರುಳು ಕೃಷಿಯಜ್ಞ
ಜಗದ ಜಂಜಡಗಳ ಮರೆತು ನಡೆದಿದೆ ಕಾಯಕಪ್ರತಿಜ್ಞ

ನೆಲ-ಜಲ-ಸಸಿ-ಗೊಬ್ಬರ-ಪರಿಸರ ಸ್ನೇಹಿತ
ನಡೆದಿದೆ ಮೈಮುರಿಯೇ ದುಡಿತ ಅನವರತ
ಹಸಿರುಕ್ರಾಂತಿ- ರಾಸಾಯನಿಕ-ಸಾವಯವ ಇತ್ಯಾದಿ
ಸಾಂಪ್ರದಾಯಿಕ-ವೈಜ್ಞಾನಿಕ ಮುಂತಾಗಿ

ದೇಶದ ಬೆನ್ನಲುಬಾಗಿ, ನಾಡಿನ ನಾಡಿಯಾಗಿ
ಅನ್ನ ನೀಡುತಿಹನು ನೇಗಿಲ ಯೋಗಿ
ಅವನಿಂದಲೇ ನಾಡು ಸುಖಬೋಗಿ
ಕೃಷಿ-ಕಷ್ಟಗಳ ಸರಮಾಲೆ ಧರಿಸಿದರು

ಕೃಷಿಯೊಂದಿಗೆ ಅದೇ ಸಂತೃಪ್ತ ಕಾಣ್ಕೆ
ಭೂತಾಯಿಯ ಒಡನಾಟ-ಬಿಡಿಸದ ಬಂಧನ
ಹಸಿರನಾಡಿನ ಹರುಷಗಾರ
ಅವನು ಯಾವತ್ತಿಗೂ ಅಜರಾಮರ!

Hipparagi Siddaram
==================================
ಪ್ರಶೋತ್ತರ ಈ ಭೂಮಿ ಬದುಕು
++++++++++++++++
ಹೊಸ ಬಯಕೆಯ ಬದಲಾವಣೆ
ಬರೆಯಲು ಇಲ್ಲಿ ಎಲ್ಲವೂ ಕಲ್ಪನೆ
ಹೊಸ ರೀತಿಯ ಒಂದು ಸವಾಲು
ಯಾರಿಗಿದೆ ಅದ ಬಿಡಿಸುವ ದಿಲ್ಲು..

Prashanth P Khatavakar
==================================
ಮತ್ತೆ ಬರಲಿ ಆ ಕಾಲ

ಬಂಡೆದ್ದ ಪಟ್ಟಣದ ವಲಸೆ
ನಗರ ಧಾವಂತತೆಯತ್ತ
ಮೃಗಜಲದ ಕೃಷಿ ನೀತಿ
ಅಳಿದುಳಿದು ಸಾಯೋ ಬೇಸಾಯ
ಬತ್ತದೇ ಉಳಿಯುವ ಉತ್ಸಾಹದಲ್ಲಿ
ಮುರಿಯುತಿಹ ಬೆನ್ನೆಲೆಬು

ಬೆಲೆಕಟ್ಟಲಾಗದ ನಿನ್ನ
ಶ್ರಮ, ದಾನ
ನೇಗಿಲ ರೈತ
ನೀನಮ್ಮ ಅನ್ನದಾತ
ಎತ್ತರಕ್ಕೇರಲಿ,ನಿನ್ನ ಗರಿಮೆ ಹಿರಿಮೆ
ರಾಷ್ಟ್ರ ಪಿತನಾ ಕನಸು
ಮತ್ತೆ ನೆನಸಾಗಲಿ

ಮತ್ತೆ ಬರಲಿ ಅಂದಿನ
ಆ ನೆನಪು ಈ ಹರುಷ
ಹಸಿರುಸಿರು
ಉತ್ತಿ ಬಿತ್ತಿ ಬೆಳೆವಂತೆ
ಮನಸಿನಂಗಳವೆಲ್ಲಾ
ಕೆಸರಾಗಿ
ಕೆಸರು ಹಸಿರಾಗಿ
ಬೆಳೆಯೋ ಕಾಲ

Bellala Gopinath Rao
==================================
ನೆನಪುಗಳೇ ಹೀಗೆ
ಮೋಸ ಮರೆಯುವುದು ಹೇಗೆ
ಕೊಟ್ಟ ಕಾರಣ ಬಲು ಕಷ್ಟ
ಇತ್ತ ಆಭರಣವೂ ಮಾಯಾ

ಮಾವನ ಮನೆಯೊಳು ವಿಸ್ಮಯ
ಅಯ್ಯೋ ದೇವನೇ ಇದೇನಿದು
ಮನವ ಗೆದ್ದ ಮಡದಿಯ ಮಾತು
ಮಾವನ ಜೊತೆ ದುಡಿಮೆ ಮೋಸವಾಯಿತು

ಮನಸ್ಸು ನೀನು ನನ್ನೇ ಪ್ರೀತಿಸು
””””””””””””””””””””””””””””””””””””””””””””””””””””””””””””””””””””””””””””””””””””
http://www.facebook.com/groups/kannadavesatya/246222785463469/?notif_t=like