ಚಿತ್ರ ನೋಡಿ ಕವನ ಬರೆಯಿರಿ – 11

ಭಾವನಾತ್ಮಕ ಚಿತ್ರ
ಬದುಕಿನ ಒಂದು ವಿಚಿತ್ರ
ಬರೆಯಲು ನೂರೆಂಟು ಪತ್ರ
ಇದ್ದರೂ ಪದಗಳು ನಮ್ಮ ಹತ್ರ

ಅರಿಯಲು ಸಾಧ್ಯವೇ
ಈ ಚಿತ್ರ ಚಿತ್ತಾರದ
ನೈಜ ಭಾವಾರ್ಥವ
ಕಲಾವಿದ ಕುಂಚದ ಸತ್ಯವ

ಕವಿ ಕಟ್ಟಬಹುದು ಕವನಗಳ
ಸೇರಿಸಿ ಸಾವಿರಾರು ಸಾಲುಗಳ
ಆದರಿಲ್ಲಿ ಹೇಳುವವರ್ಯಾರು
ದೃಶ್ಯದ ನಿಜ ಅವತಾರದ ಅರ್ಥವ
|| ಪ್ರಶಾಂತ್ ಖಟಾವಕರ್ ||
Prashanth P Khatavakar
”””””””””””””””””””””””””””””””””””””””””””””””””
ಅಳಬೇಡ ಮಗುವೇ ಅಳಬೇಡ..
ನಿನ್ನ ತಂದೆಯ ನೆನದು ನನ್ನ ಕೊಲಬೇಡ

ಆಗಸದಿ ತುಂಬಿದ ಕಾರ್ಮೋಡದಂತೆ
ದುಃಖದಿ ಕರಿದಾಗಿಹುದು ನಮ್ಮ ಬಾಳು

ತಲೆಮೇಲಿನ ಸೂರಿಲ್ಲದೇ..
ತಲುಪಬೇಕಾದ ಗುರಿಯಿಲ್ಲದೇ

ಮನಸೆಲ್ಲಾ ಚಿಂತೆಯ ಗೂಡಾಗಿದೆ
ಕಂಡ ಕನಸೆಲ್ಲಾ ಬರಿದಾಗಿದೆ

ಹೊಟ್ಟೆಯ ಕೂಳಿಗೂ ನಮಗೀಗ ಬರ
ತೊಟ್ಟು ವಿಷಕೂ ಹಣವಿರದ ಕೆಟ್ಟ ಹಣೆ ಬರಹ

ನನ್ನಿನಿಯ ಬಂದೇ ಬರುತ್ತಾನೆಂದು ನಾ ಕಾಯುತ್ತಿರುವೆ
ಅಲ್ಲಿವರೆಗೂ ಚೂರಾದ ನಿನ್ನ ತಂದೆಯ ಕನಸ ಕಾಣುತ್ತಿರುವೆ..
Pradeep Hegde
”””””””””””””””””””””””””””””””””””””””””””””””””
ಚಿಂತಿಸದಿರು..ತಂಗಿ ! ನಾನಿಲ್ಲವೆ ನಿನಗೆ…
ಹೇಗೆ ನಂಬಲಿ ನಾನು ಹೀಗಾಗಿದೆಯೆಂದು…!

ತುಂಬಿದ ಮನೆ-ಮನಗಳೀಗ ನಿಶಬ್ದದ ಗೂಡು
ಹಾದು ಹೋಗುವ ಗಾಳಿ..ಮೇಘಮಯ ಕ್ಷಣಗಳು

ಅಪ್ಪ ಹೊರಟರೆಂದು ಜೊತೆ ಸೇರಿದ ಅಮ್ಮ …
ಅನಿವಾರ್ಯ ಬದುಕು.. ಸಾಗೋಣ ಅವರ ಪ್ರೀತಿಯ ಸವಿನೆನಪ ಬುತ್ತಿಯೊಳು..
Bhagirathi Chandrashekar
”””””””””””””””””””””””””””””””””””””””””””””””””
ಮುದ್ದು ಮುಖದ ಅರಳಿದ ನಗುವಿನ ಸೊಬಗಿ ನನ್ನ ಗೆಳತಿ..
ನಗುವಿನ ಚಿಲುಮೆ……
ಒಲುಮೆಯ ಜಲಪಾತ.
ಮತ್ಸರ ಪಡುವಷ್ಟು ಪ್ರೀತಿಯ ಹರಿಸುವ ಮಹಾನದಿ…

ಆದರೆ …..
ಆ ಸುಂದರ ಕಣ್ಣುಗಳ ಹಿಂದೆ ನೋವು ಅಡಗಿದೆ…
ಆ ನಗುವಿನ ಹಿಂದೆ ಏಕಾಂಗಿ ಹೃದಯದ ಹಾಡಿದೆ..
ಆ ಪ್ರೀತಿಯ ಒರತೆಯ ಹಿಂದೆ ಭರಿಸಲಾರದಷ್ಟು ಪ್ರೀತಿಯ ಕೊರತೆ ಇದೆ….
ಅಂದಿನ ಮಾಸದ ಘಾಯದ ಗುರುತಿದೆ…

ಎಲ್ಲರ ನಡುವೆ ಇದ್ದಾಗ ..
ಅಳಿಸಲಾರದ ನಗೆಯ ಚೆಲುವೆ ,
ಯಾರು ಇಲ್ಲದಿರುವಾಗ…..
ಕಣ್ಣಿರ ಕಡಲಾಗುತ್ತಾಳೆ……
ಮೌನದ ಮಡುವಾಗುತ್ತಾಳೆ….

ನೋವಿಗೆ ಕಾರಣ ಯಾರೇ ಆದರೂ.
ಏನೇ ಆದರು….
ಕ್ಷಮಿಸೆಂದು ಕೇಳದಿದ್ದರೂ ಕ್ಷಮಿಸುತ್ತ…
ಮತ್ತೆ ನಗುತ್ತಲೇ ಮುನ್ನಡೆಯುತ್ತಿದ್ದಾಳೆ…
ಹೆಜ್ಜೆ ಹೆಜ್ಜೆಗೂ ನಗೆಯ ಮುತ್ತು ಸುರಿಸುತ್ತ…
ಬೆಳಕಿನ ಕಿರಣದ ಜಾಡು ಹಿಡಿದು…
ಇಂದಲ್ಲ ನಾಳೆ….
ನಾಳೆಯಲ್ಲದಿದ್ದರೆ ಮತ್ತೊಂದು ದಿನ…
ಎಂಬ ಆಸೆಯ ಮೂಟೆಯ ಹೊತ್ತು…
ತನ್ನ ನಂಬಿದವರಿಗಾಗೀ..ಧೃಡವಾಗಿ….ನಗೆಯ ಚಿಲುಮೆಯಾಗಿ
Sunitha Manjunath
”””””””””””””””””””””””””””””””””””””””””””””””””
ನಾನು ನೊಂದೆ ಎಂದು ಹಲುಬದಿರು ಗೆಳತಿ..
ಇನ್ನೂ ಇದೆ ನಮಗೆ ಜೀವನವೆಂಬ ಜೊತೆಗಾತಿ
ಜೀವನವಿರುವುದು ಕುಗ್ಗಲಿಕ್ಕಲ್ಲ ಹಿಗ್ಗಿ ಹಿರಿಯರಾಗಲಿಕ್ಕೆ
ಕಷ್ಟಗಳಿಗೆ ಹೆದರಿ ನೀ ಹೀಗೆ ಬಗ್ಗಿಸಿದರೆ ತಲೆ..
ಹೇಗೆ ಬಂದೀತು ಬದುಕ ಸಾಗಿಸಲು ಉತ್ಸಾಹದ ಜೀವಸೆಲೆ
—-ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ
Haniyuru Chandre Gowda Channapatna
”””””””””””””””””””””””””””””””””””””””””””””””””
ಆಳಬೇಡ ತಂಗಿ ಅಳಬೇಡ
ಆದುದರ ನೆನೆದು ಮರುಗಬೇಡ
ಎಲ್ಲರಲ್ಲೂ ಇರುತ್ತದೆ ದುಃಖದ ಕಾರ್ಮೋಡ
ಭೂ-ಆಗಸದ ನಡುವೆ ಇರುವಂತೆ ಮೋಡ

ಮೀನಿಗೆ ನೀರು, ನೀರಿಗೆ ಮೀನು
ಇದ್ದಂತೆ,ನಿನಗೆ ನಾನು ನನಗೆ ನೀನು
ಬದುಕಿ ತೋರಿಸೋಣ
ಕಮ್ಮಿಯಿಲ್ಲನಾವು ಯಾರಿಗೇನು…
Shishir Hegde
”””””””””””””””””””””””””””””””””””””””””””””””””
ನಾ ಕಾಯುತಿರುವೆ ಚಾತಕ ಪಕ್ಷಿಯಂತೆ
ನನ್ನ ಪತಿ ಯುದ್ದ ಮುಗಿಸಿ ಬರುವ ದಾರಿಯನು
ನನ ಕಿವಿ ಕಾತರಿಸಿದೆ ವಿಜಯಘೋಶವ ಕೇಳಲು
ನನ್ನ ಕಣ್ಣು ಕಾತರಿಸಿದೆ ಅವನ ನೋಡಲು

ನನಗೆ ನಂಬಿಕೆಯುಂಟು ಅವನ ಶೌರ್ಯದಲಿ
ಆದರೂ ಮನ ಬೇಯುವದು ಆತಂಕದಲಿ
ಕ್ಷಣ ಕ್ಷಣವೂ ಆಗುತಿದೆ ಯುಗದಂತೆ
ಚಡಪಡಿಕೆ ಹೆಚ್ಚುತಿದೆ ನಿಯಂತ್ರಣಕೆ ಸಿಗದಂತೆ

ನಮಗಾರಿಲ್ಲ ಇಲ್ಲಿ ಮಗಳೆ ಸಾಂತ್ವಾನ ಹೇಳಲು
ಭಯ ಹುಟ್ಟಿಸಿವೆ ಈ ಗುಡ್ಡ ಮೋಡಗಳು
ಏನು ಮಾಡಲು ತೋಚದಂತಿದೆ
ಈ ಒಂಟಿ ಕಟ್ಟಡದಂತೆ ನನ ಮನವು ನಿಂತಿದೆ
Mamatha Keelar
”””””””””””””””””””””””””””””””””””””””””””””””””’
ಮನೆಯಂತೆಯೇ ನನ್ನ ಮನವೂ ಖಾಲಿಯಾಗಿಹುದು
ಅವನಿರದ ಮನೆಯು ಇಂದೇಕೋ ಬೇಡವಾಗಿಹುದು.

ಬರಡು ಭೂಮಿಯಲಿ ಕುಳಿತು ನಾ ಕಾಯತೊಡಗಿದ್ದೆ
ಆ ಕಾರ್ಮುಗಿಲಂತೆಯೆ ಕಣ್ಣೀರ ಹಿಡಿದಿಟ್ಟುಕೊಂಡಿದ್ದೆ

ನಾನರಿಯೆ ಅದ್ಯಾವ ಕಳ್ಳದಾರಿಯಲಿ ಹೊರಬಂತೆನ್ನ ಕಣ್ಣೀರು
ಒಂದೊಂದಾಗಿ ಸೇರಿ ಮಾಡಿತೇ ಈ ಬರಡು ಭೂಮಿಯನೇ ಹಸಿರು

ಸಂತೈಸಲು ಬಾರದಿರಿ ನನ್ನ, ಅವ ಬಾರದೆ ನಾನೆಲ್ಲಿಗೂ ಬರಲಾರೆ
ಕಾಯುವೆನಿಲ್ಲೇ, ಅವನಿಗಲ್ಲದೆ ಮತ್ತಾರಿಗೂ ನನ್ನೀ ಮುಖವ ತೋರಲಾರೆ

—ಕೆ.ಗುರುಪ್ರಸಾದ್
Guruprasad Acharya
”””””””””””””””””””””””””””””””””””””””””””””””””
ಬರುವುದೆಲ್ಲವ ಬರಲಿ ಹೆದರಿಕೆಯೇಕೆ?
ಜೀವನವೆಂಬುದು ಬೆಂಗಾಡಿನಂಗಾಗಿದ್ದರೂ ಹೆದರಿಕೆಯೇಕೆ?
ಬೆಂಗಾಡಿನಲ್ಲಿ ನೆನಪೆಂಬ ಮಧುರ ಕಾಣಿಕೆಗಳ ಉಸಾಬರಿಯೇಕೆ?
ನೆನಪು…ಮರೆತುಹೋಗಲಿ…ಮರುಕಳಿಸದಿರಲಿ…ಎಂದರೆ ಸಾದ್ಯವೇ?
ನನಂತೆ ಅವಳಿಗಾಗದಿರಲೆಂದು ಬಯಸುವುದು ತಪ್ಪೇ?
ಸೂತ್ರದಾರನಿಲ್ಲದ ನೌಕೆಯಂತಾಗಿರುವ ಜೀವನಕ್ಕೆ ಸೂತ್ರ ಅವಶ್ಯಕವೇ?
ಕಾರ್ಮೋಡ ಬರಲಿ…ಬಾನು ಗುಡುಗಲಿ…ಭುವಿ ನಡುಗಲಿ ಅಂಜಿಕೆಯೇಕೆ?
ಅವರವರ ಕರ್ಮ ಅವರೇ ಅನುಭವಿಸುವಂತೆ…ಅವಳೂ ಅನುಭವಿಸಲಿ ಬೇಧವೇಕೆ?
ಪ್ರಶ್ನೆಗಳ ಸುರಿಮಳೆಯಾದಂತೆ…
ಆಲೋಚನೆಗಳು ಕಾಡುವಂತೆ…
ನೆನಪುಗಳು ಬತ್ತಿ ಹೋಗಬಾರದೆ…
ಕಾರ್ಮೋಡಗಳೇ ಬೇಗ ಮಳೆ ಸುರಿಸಿ…
ಅಳಿಸಿ ಹೋಗಲಿ ನೆನಪುಗಳು…
ಉದಯಿಸಲಿ ನವೋನ್ಮಾಧ….
ಬುದ್ದೀ ಬರಲಿ ನನ್ನಂತಹ ಜಂಭದ ಕೋಳಿಗಳಿಗೆ….
Hipparagi Siddaram
”””””””””””””””””””””””””””””””””””””””””””””””””
ತಂಪೆಲರರುಹಿಗೆ ಮಾರ್ದವ ನನ್ನೆದೆ
ನಿನ್ನಯ ಇನಿದನಿ ಮಾರ್ದನಿಗೆ
ಕಳೆಯಿತು ತಂಪಿನ ತಿಂಗಳು ತಿಂಗಳು
ನೀನಿಲ್ಲದೆ ಹಾಗೇ

ಮೂಡಿತು ಮಲ್ಲಿಗೆ ಮೊಗ್ಗರಳಿ ಮೆಲ್ಲಗೆ
ಪಸರಿಸಿ ಮಧುರ ಸುಧೆಯ ಕಂಪು
ತೇಲಿ ಕೋಗಿಲೆಯ ದನಿಯಲಾಂತು
ಮೀಟಿ ಎದೆಯಲೇಕೋ ತಂತು
ಮಧುರ ನೋವ ಕಂಪನಾ
ಮತ್ತೆ ಮತ್ತೆ ಮೀಟಿ ತಂತು
ಅಧರ ಸುಧೆಯ ನೆನಪನಾ
Bellala Gopinath Rao
”””””””””””””””””””””””””””””””””””””””””””””””””
ತನ್ನತ್ತ ಬರುವುದೆಲ್ಲಾ ಚಿಂತೆ
ಒಬ್ಬಳ ಪಾಲಿನ ಮನಸ್ಸು ಜೀವನ
ನನ್ನಕ್ಕ ನೀಡುವ ಪ್ರೀತಿ ಅಕ್ಕರೆ
ಸುತ್ತೂರು ಸುತ್ತಿದರೂ ಸಿಗದದು

ಮತ್ತೊಮ್ಮೆ ಮುತ್ತಿನ ಮಾತು
ಕೈಯಾಡಿಸಿ ತಲೆ ಮೇಲೆ ಭರವಸೆ
ನುಡಿವಳು ಮುದ್ದಾದ ಪದಗಳ
ನಾನು ನಿನ್ನೊಡನೆ ಇದ್ದಾಗ ಚಿಂತಿಸದಿರು
ಮನಸ್ಸು ನೀನು ನನ್ನೇ ಪ್ರೀತಿಸು
””””””””””””””””””””””””””””””””””””””””””””””””” 

http://www.facebook.com/photo.php?fbid=1896475187984&set=o.195906690495079&type=1&theater

ನಿಮ್ಮ ಅನಿಸಿಕೆ