Tag Archives: Sanjeev Kumar

ಮದುವೆ , ಪ್ರೀತಿ

ಚೆಲುವಿನ ಹೂವ ರಾಶಿ
ಮಡದಿಯನ್ನಲು ಇಲಿಲ್ಲದ ಕುಶಿ
ನನ್ನವಳ ಸೊಬಗು
ಆರಳಿದ ಮಲ್ಲಿಗೆಯ ನಗು
ತುಂಟತನದ ಸೋಗು

ಅವಳ ಇಟ್ಟ
ಅಕ್ಕರೆ ಪ್ರೀತಿಗೆ
ತುಂಬಿತೆನ್ನ ತಂಬಿಗೆ
ಮನದಾಳದ ಅವಿತ್ತಿದ್ದ
ಪ್ರೀತಿ ಎಲ್ಲ ಸೂರೆ

ಕ್ಷಣ ಕ್ಷಣಕ್ಕೂ
ಮಿತಿಮೀರಿದ ಪ್ರೀತಿ
ಕಾಣದಿರೆ ಅರೆಕ್ಷಣ
ಮನದಲ್ಲಿ ಇಲಿಲ್ಲದ ಬ್ರಾಂತಿ
ಇ ತಾಪದಲಿ ಕಳೆದೆ ಹೋಯಿತು
ಕೈಯಲ್ಲಿ ಇದ್ದ ಅ ಕ್ಷಣ

ಬಿಂಕ ಕೋಪ ಮುನಿಸು
ಎಲ್ಲವು ಸಹಜ ಮಿತಿಯಲಿದ್ದರೆ
ಅನಿಸುತ್ತದೆ ಪ್ರೀತಿ ಇದದ್ದೆ
ಕನಸೇ ಮಿತಿಮೀರಿದರೆ

ಪ್ರೀತಿಯನ್ನು ಬೆಣ್ಣೆಯಂತೆ
ಹಿತವಾಗಿ ಹಿಡಿಯಲು
ತಿಂದಷ್ಟು ರುಚಿ ಹೆಚ್ಚು
ಸ್ವಂತದೆಂದು ಹಿಡಿದರೆ
ಶಕ್ತಿ ಮೀರಿ ಕಳೆದಷ್ಟು
ಮನಕ್ಕೆ ಹುಚ್ಚು

~ ಸಂಜು ~

ಉಪಾಯ


ಅವನಿಗೆ ನಾ ಮಾಡಿದ ಆಡುಗೆ ಹಿಡಿಸಲಿಲ್ಲ
ಅವನಿಗೆ ನಾ ಮಾಡಿದ ಪಲ್ಯೆ ಹಿಡಿಸಲಿಲ್ಲ
ಅವನಿಗೆ ನಾ ಮಾಡಿದ ತಿಂಡಿ ಹಿಡಿಸಲಿಲ್ಲ
ಅವನಿಗೆ ನಾ ಮಾಡಿದ ಕಾಫಿ ಹಿಡಿಸಲಿಲ್ಲ
ಅವನಿಗೆ ನಾ ತೊಳೆದು ಕೊಟ್ಟ ಕಾಲ್ ಚೀಲ ಹಿಡಿಸಲಿಲ್ಲ
ಅವನಿಗೆ ನಾ ಇಸ್ತ್ರೀ ಮಾಡಿಟ್ಟ ಬಟ್ಟೆ ಹಿಡಿಸಲಿಲ್ಲ
ಸಿಟ್ಟಿಗೆದ್ದು ಒಂದು ದಿನ ಕೇಳಿದರೆ ಕಾರಣ
ಅವನು ಹೇಳಿದ ಉತ್ತರ ಇವು ಯಾವು
ನನ್ನ ಅಮ್ಮ ಮಾಡಿದ ಹಾಗೆ ಇಲ್ಲ
ಒಮ್ಮೆ ಪ್ರೀತಿಯಿಂದ ಅವನ ನೊಡೀ ನಕ್ಕೆ ಒಂದು ಸಲ
ಹೊಳೆಯಿತು ಮಿಂಚು ತಲೆಯಲಿ ಪಳ ಪಳ

ಅಯ್ಯೊ ದೇವರೇ ಇದು ನನಗೆ ಹೊಳೆಯಲೆ ಇಲ್ಲ
ಅತ್ತಿರ ಹೊದವಳೆ ಬಿಗಿಯಾಗಿ ಚಟೀರನೆ ಕೊಟ್ಟೆ ಕಪಾಳಕ್ಕೆ
ಮತ್ತೆ ಕೇಳಿದೆ ಇದು ನಿಮ್ಮ ಅಮ್ಮ ಕೊಟ್ಟ ಹಾಗೆ ಇತ್ತ ಅಂತ

Sanjeev Kumar

ಚಿತ್ರ ನೋಡಿ ಕವನ ಬರೆಯಿರಿ – 12

ಕಣ್ಣಲ್ಲಿ ಇಂಗಿದ ಕನಸು…
ಕಷ್ಟದಲಿ ಮುಳುಗಿ ಕಲ್ಲಾದ ಮನಸು…

ಆಟ-ಪಾಠದಿ ಖುಷಿಯಿಂದ ನಲಿಯುವ ವಯಸ್ಸು..
ಆದರೆ, ಬಡತನದ ಬೇಗೆಯಲ್ಲಿ ಸಿಲುಕಿದೆ ಈ ಕೂಸು..

ಹೊಟ್ಟೆಪಾಡಿಗಾಗಿ ದುಡಿಯಲು ಹೋಗಿಹರು ಅಪ್ಪ-ಅಮ್ಮ..
ಅವರ ಪಾಲಿನ ಕೂಳನು ಹೊತ್ತು ಸಾಗುತಿಹಳು ಈ ಕಂದಮ್ಮ..

ಯಾಕೋ ಕಾಣೇ ಇತ್ತಿಚಿಗೆ ಆ ದೇವರೂ ಕುರುಡನಾಗಿಹನು..
ಸಿರಿವಂತರ ಮನೆಯ ಕೋಣೆಯಲಿ ಬಂಧಿಯಾಗಿರುವನು..

ರಾಜಕೀಯ ಪುಡಾರಿಗಳ ಪೊಳ್ಳು ಭರವಸೆ ಇವರಿಗಿನ್ನೂ ನೀಡಿಲ್ಲ ಆಸರೆ..
ಸಾಲದೆಂಬಂತೆ ಅಭಿವೃದ್ಧಿಯ ನೆಪದಲ್ಲಿ ಇವರ ಗಾಯದ ಮೇಲೆ ಎಳೆಯುತ್ತಿದೆ ಬರೆ
Pradeep Hegde
”””””””””””””””””””””””””””””””””””””””””””””””””
ಹಸಿವೆಯ ತಣಿಸುವ ಅಪ್ಪ ಅಮ್ಮ..
ಅನ್ನಕೆ ದುಡಿಯಲು ಹೋಗಿಹರಮ್ಮ..
ಬುತ್ತಿಯ ಗಂಟನು ಹೊತ್ತು ಒಯ್ದು
ಅವರ ಹಸಿವನ್ನು ತಣಿಸುವೆನಮ್ಮ
Sunitha Manjunath
”””””””””””””””””””””””””””””””””””””””””””””””””
ಎತ್ತಲಾರದಷ್ಟು ಭಾರ ಆ ಬುತ್ತಿ ,
ತೋಳುಗಳಿಗೆ ನೋವಾದರೂ ಅದನ್ನು ಹೊತ್ತಿ ,
ಬರುತ್ತಿದ್ದಾಳೆ ಗುಡ್ಡ ಕಾಡುಗಳನ್ನು ಸುತ್ತಿ ,
ಚಿಂತಿಸುತ್ತಿಲ್ಲ ಸುಡುತ್ತಿದ್ದರು ಬಿಸಿಲಿಗೆ ನೆತ್ತಿ ,

ಅರಿವಿಲ್ಲದೆ -ತೂಗುತ್ತಿದ್ದರೂ ತಲೆಯ ಮೇಲೆ ಕತ್ತಿ ,
ಜೀವನ ಸಾಗಿಸುತ್ತಿದ್ದಾಳೆ ಮಾಡಿಕೊಂಡು ಕುಸ್ತಿ ,

ಇವರ ಪಾಲಿಗೆ ಕಾಣದ ದೇವರೇ ಆಸ್ತಿ ,
ಒಪ್ಪೊತ್ತು ಊಟ ಮಾಡಿದರೆ ಅದೇ ಇವರಿಗೆ ಜಾಸ್ತಿ ,
ಕನಸಾಗಿಯೇ ಉಳಿಯಿತು ಈಕೆಯ ಪಾಲಿಗೆ ಮೋಜು ಮಸ್ತಿ
Ajay Pyro
”””””””””””””””””””””””””””””””””””””””””””””””””
ಕಣ್ಣಲ್ಲಿಹುದು ಸಾವಿರಾರು ಕನಸುಗಳು
ಕನಸುಗಳು ಸಾಕಾರವಾಗುತ್ತಿಲ್ಲದಿಹುದು
ಎಲ್ಲವೂ ಹೊಟ್ಟೆಗಾಗಿಯೇ?
ಯೋಚಿಸುತಿಹುದು ಮನದಾಳದಲ್ಲಿ
ಹೊಟ್ಟೆಯ ಹಸಿವು ನೀಗಿಸಲು
ತೆಲೆಯೇ ಮೇಲಿಹುದು ಬುತ್ತಿ
ಮನದ ಹಸಿವು
ನೀಗಿಸುವವವರು ಎಲ್ಲಿಹರು
ಬುದ್ಧಿ ತುಂಬಿಕೊಳ್ಳುವ ವಯಸ್ಸಲ್ಲಿ
ಬುತ್ತಿ ಹೊತ್ತು ಸಾಗುತಿಹನು.
Rudresh Rajashekharaiah
”””””””””””””””””””””””””””””””””””””””””””””””””
ಹೊನ್ನಿನ ಪುತ್ತಳಿಯಂಥ ಹಸುಬಾಲೆ ಇವಳು
ಬದುಕಿನ ಬಂಡಿಯ ಸಾರಥ್ಯದಲಿ ಪುಟ್ಟಪುಟ್ಟ ಹೆಜ್ಜೆ ಇಡುತ
ತುತ್ತಿನ ಬುತ್ತಿಯ ಹೊತ್ತು ಹೊರಟಿಹಳು…

ಸುಂದರ ಶಿಲ್ಫವ ಕಡೆದ ಬ್ರಹ್ಮ…
ಸುಂದರ ಹಣೆಬರಹ ಬರೆವುದ ಮರೆತ
ಮಗು ನೀನಾಗು ಅವನಿಗೆ ಸವಾಲು…!

ನೀನೆಡೆವ ದಾರಿ ಬಲು ಕಠಿಣ ಮಗುವೆ
ಮರೆಯದಿರು ನೀ ಶಿಕ್ಷಣವ
ಗುರಿ ಮೇಲಿರಲಿ..ಸಾಧಿಸುವ ಛಲನಿನಗಿರಲಿ…

ಅಪ್ಪ, ಅಮ್ಮನ ಕಷ್ಟಕೆ ನೀ ಹೆಗಲು ಕೊಟ್ಟಿರುವೆ..
ಕಲಿ ನೀ ಬದುಕಿನ ಪಾಠ ವಿದ್ಯಾವಂತಳಾಗಿ
ಎಳೆದು ತೋರಿಸು ಈ ಜಗಕೆ ನಿನ್ನ ಗೆಲುವಿನ ತೇರು
Bhagirathi Chandrashekar
”””””””””””””””””””””””””””””””””””””””””””””””””
ಆಟವ ಬಿಟ್ಟು ಬಂದೆ
ಬುತ್ತಿ ಕೊಟ್ಟು ಬತ್ತಿನಿ ಎಂದೆ
ಆಟಕ್ಕೆ ಉಫಿ ಎಂದೆ
ಮೋಸ ಮಾಡಬೆಡಿ ಬಂದೆ ಬಂದೆ

ಅವ್ವ ಎಲ್ಲಿದ್ಯವ್ವ
ಬುತ್ತಿ ತಂದೀವ್ನಿ ಬಾರವ್ವ
ಅಪ್ಪೊ ಬಾರಪ್ಪೊ
ಉಂಡು ಗೈಮೆ ಮಾಡುವೆ ಬಾರಪ್ಪೊ
ಬಿರ್ರಿನ್ ಬರ್ರಪ್ಪೊ ಆಟಕ್ಕೆ ಒತ್ತಾಯಿತು ಬರ್ರಪ್ಪೊ

ಯಾಕೆ ಮಾಗಿ ಇಸ್ಕೂಲ್ಗೆ ಹೊಗ್ಲಿಲ್ಲ್ವೆ
ಇಲ್ಲ ಕಾಣಕ್ಕ ನಾ ವಲ್ಲೆ
ಒಕಲುತಾನ ಕಲಿಬೆಕಂತಲ್ಲೆ
ಅದ್ಕೆ ಕುಂಡ್ಸವರೆ ಮನ್ಯಲ್ಲೆ
Sanjeev Kumar
”””””””””””””””””””””””””””””””””””””””””””””””””
ದುಡಿಮೆಯ ತಪಸ್ಸು
ಒಂದು ಎರಡು
ಲೆಕ್ಕಾ ಓದಿಲ್ಲ
ಎಣಿಸುವ ಹೆಜ್ಜೆ
ಕಾಲಲ್ಲಿಲ್ಲ ಗೆಜ್ಜೆ

ವಯಸ್ಸಿಗೂ ಅರಿಯದ
ಮನಸ್ಸಿಗೂ ನಿಲುಕದ
ಬದುಕು ಬಲು ಭಾರ
ದಾರಿಯು ಇನ್ನೂ ದೂರ

ಹೊತ್ತ ಹೊರೆಯೊಳು
ಕಟ್ಟಿಟ್ಟ ನೂರು ಕನಸು
ಹಾಡುತ ಆಡುತ ಕುಣಿತವಿಲ್ಲ
ದುಡಿಮೆಯ ತಪಸ್ಸು ಬಾಳೆಲ್ಲಾ
|| ಪ್ರಶಾಂತ್ ಖಟಾವಕರ್ ||
Prashanth P Khatavakar
”””””””””””””””””””””””””””””””””””””””””””””””””
ಬಾಳುವೆ ನಾನೂ ಚಲದಿಂದ
ಬುಟ್ಟಿಯ ಹೊತ್ತು
ಮನದೊಳಗತ್ತು
ಬರುತಿಹೆ ಬಾರದ ಮನಸಿಂದ

ಮಣ್ಣಲಿ ನಡೆಯುತ
ಹೆಜ್ಜೆಯ ನಿಕ್ಕುತ
ನಡೆದಿಹೆ ತೋಟದ ಬಯಲತ್ತ

ತಂದೆಯು ಇಲ್ಲಾ
ತಾಯಿಯು ಇಲ್ಲಾ
ನೋಡುವರ್ಯಾರು ನನ್ನತ್ತ

ಮುಸುರೆಯ ತಿಕ್ಕುವ
ಕಸವನು ಗುಡಿಸುವ
ಜೀವನ ನೀಡಿದ ಭಗವಂತ

ಶಾಲೆಯ ಕಲಿಕೆ
ಗೆಳೆಯರ ಜೋಡಿಗೆ
ನನಗೂ ಓದಲು ಆಸೆಯಿದೆ

ಕಳಿಸುವರ್ಯಾರು
ಪಾಠದ ಮನೆಗೆ
ಗುಡಿಸಲ ಕಾಯುವ ಪಾಡುಯಿದೆ

ಇದ್ದರೆ ಇರಲಿ
ಶಕ್ತಿಯ ಮೀರಿ
ಗೆಲ್ಲುವೆ ಬಾಳನು ಬಲದಿಂದ

ಜೀವನವೆಂದು
ಸಾಗುವ ಬಂಡಿ
ಬಾಳುವೆ ನಾನೂ ಚಲದಿಂದ
::ವಸಂತ್ ಕೋಡಿಹಳ್ಳಿ::
ವಸಂತ್ ಆರ್
”””””””””””””””””””””””””””””””””””””””””””””””””
ಅಪ್ಪ-ಅಮ್ಮ ದುಡಿಯುತ್ತಿದ್ದಾರೆ ದಿನದ ರೂಪಾಯಿ
ನಾನು ಮಾಡುತ್ತೇನೆ ಕೈಲಾದ ಸಹಾಯ
ನಮಗೆ ಇಲ್ಲ ಭದ್ರ ಅಡಿಪಾಯ
ದೇವರಿದ್ದಾನೆ, ನಮಗಿಲ್ಲ ಅಪಾಯ
Shishir Hegde
”””””””””””””””””””””””””””””””””””””””””””””””””
ಪಾಪ ಇವಳು ಹಸು ಬಾಲೆ
ಚಪ್ಪಲ್ಲಿಗೂ ಗತಿ ಇಲ್ಲ ಬರಿ ಕಾಲೇ
ಹೊತ್ತಿಹಳು ಮಣ ಭಾರದ ಹೆಡಗೆ
ಹೋಗುತಿಹಳು ಹೊಲದ ಕಡೆಗೆ
ಮನಸಿನಲಿ ಬಣ್ಣ ಬಣ್ಣದ ಕನಸಿನ ಆಟ
ಆದರೂ ವಿದಿಯಿಲ್ಲದೆ ಕರ್ತವ್ಯದ ಕಡೆಗೆ ಓಟ
ಆ ದೇವರಿಗೇಕೆ ನನ್ನ ಮೇಲೆ ಕೋಪ
ಬಡತನವೇ ನನ್ನ ಬಾಳಿಗೆ ಹಿಡಿದ ಶಾಪ
Mamatha Keelar
”””””””””””””””””””””””””””””””””””””””””””””””””
ಅರಳುವ ಸುಮ ಬಾಲೆ
ಅರಿತಿಹಳು ಬದುಕುವ ಕಲೆ
ಭವಿಷ್ಯದ ನಾಡಿನ ನಾರಿಮಣಿ
ಹೊರಟಿಹಳು ಬಾವಿ ರಮಣಿ|

ಹೆತ್ತವರ ಬಡತನ
ಹೆತ್ತೊಡಲಿನ ಕಷ್ಟ-ಕಾರ್ಪಣ್ಯತನ
ಕಲಿಯಬೇಕು ಕಲೆಯೆಂಬ ಜೀವನ
ಹೊರಟಿಹುದು ಮುಗ್ದಮನ|

ಬಡತನವೆಂಬುದು ಶಾಪ
ಬದುಕಿನ ಬಗ್ಗೆ ಅವಳಿಗಿಲ್ಲ ತಾಪ
ಬೇರೆಯವರಿಂದ ಆಕೆಗಿಲ್ಲ ಕರುಣೆ-ಸಂತಾಪ
ಹೊರಟಿಹುದು ಪುಟಾಣಿ ಪಾಪ|

ಸರಕಾರದ ಕಾಯ್ದೆಗಳ ಹಂಗಿಲ್ಲ ಇವಳಿಗೆ
ಕನಸುಗಳ ಕನವರಿಕೆ ಬೇಕಿಲ್ಲ ಇವಳಿಗೆ
ಬಾಲ್ಯವೆಂಬ ಅಪರೂಪತೆ ಗೊತ್ತಿಲ್ಲ ಇವಳಿಗೆ
ಹೊರಟಿಹಳು ಎಲ್ಲಿಗೆಂದು ತಿಳಿದಿಲ್ಲ ಇವಳಿಗೆ|

ಬದುಕಬೇಕು-ಬಾಳಬೇಕು-ಬೆಳಗಿಸಬೇಕು
ತಲೆಮಾರುಗಳು ಸರಪಣಿ ಮುಂದುವರೆಯಬೇಕು
ದೇವರು-ದಿಂಡಿರು, ಸಮಾಜ-ಸಂಕುಲಗಳು ಬದುಕಿಗೆ ಬೇಕು
ಹೊರಟಿಹಳು ಭರವಸೆಯ ಬಾಲೆ!
Hipparagi Siddaram
”””””””””””””””””””””””””””””””””””””””””””””””””
http://www.facebook.com/groups/kannadavesatya/245739935511754/